Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಬಸ್ರೂರಿನಲ್ಲಿ ಮೈಲಾರ (ಖಂಡೋಬ) ದೇವರ ಎರಡು ವಿಗ್ರಹ ಪತ್ತೆಯಾಗಿದೆ. ಮೈಲಾರ ದೇವರ ಆರಾಧನೆ ಕರಾವಳಿ ಭಾಗದಲ್ಲಿ ವಿರಳವಾಗಿ ಕಂಡು ಬರುತ್ತದೆ. ಆದರೆ ಬಸ್ರೂರಿನಲ್ಲಿ ಮೈಲಾರ ದೇವರ ಆರಾಧನೆ ಹಿಂದೆ ನಡೆಯುತ್ತಿದ್ದ ಬಗ್ಗೆ ಈ ವಿಗ್ರಹದ ಮೂಲಕ ದಾಖಲೆ ದೊರೆತಂತಾಗಿದೆ. 1.ಮೈಲಾರ ದೇವರ ವಿಗ್ರಹಕುದುರೆ ಏರಿದಂತ ವೀರ ಯೋಧನಂತೆ ಕಂಡು ಬಂದಿದ್ದು, ಕೈಯಲ್ಲಿ ಕಡ್ಗದಂತೆ ಕಂಡು ಬಂದಿದೆ. ಎದೆಗೆ ವೀರ ಯೋಧ ತೊಡುವಂತೆ ರಕ್ಷಾ ಕವಚ ಕೂಡಾ ಕಾಣಲ್ಪಟ್ಟಿದೆ. ಅಲಂಕಾರಗೊಂಡ ಕುದುರೆ ಕಾಲು ಸ್ವಲ್ಪ ಮಡಿಚಿದ ರೀತಿಯಲ್ಲಿದೆ .ಕ್ರಿ.ಶ 15 ರಿಂದ 16ನೇ ಶತಮಾನಕ್ಕೆ ಹೋಲುವಂತಿದೆ. 2.ಮೈಲಾರ ದೇವರ ಶಿಲಾ ಫಲಕಶ್ರೀ ದೇವಾನಂದ ಶೆಟ್ಟಿ ಹಳ್ನಾಡು ಇವರ ಕೆರೆಯ ಹೂಳು ಎತ್ತುವಾಗ ವಿಗ್ರಹ ಸಿಕ್ಕಿರುವ ವಿಚಾರ ತಿಳಿಸಿರುತ್ತಾರೆ. ಇದು ಮೈಲಾರ ದೇವರ ಶಿಲಾ ಫಲಕವಾಗಿದೆ.ಇಲ್ಲಿ ಸ್ತ್ರೀ ಪುರಷ ಕುದುರೆ ಏರಿ ಖಡ್ಗ ಹಿಡಿದ ಶಿಲ್ಪವಿದೆ. ಈ ಶಿಲ್ಪ ಕ್ರಿ.ಶ 16ನೇ ಶತಮಾನಕ್ಕೆ ಹೋಲುವಂತಿದೆ. ಬಸ್ರೂರಿನಲ್ಲಿ ಸಿಕ್ಕಿರುವುದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಆನಗಳ್ಳಿ ಗ್ರಾಮ ಪಂಚಾಯತ್ನ 2ನೇ ಅವಧಿಗೆ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಎಚ್. ಕೆ. ಸವಿತಾ ಮತ್ತು ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಉದಯ ಪೂಜಾರಿ ಆಯ್ಕೆಯಾಗಿದ್ದಾರೆ. ಆನಗಳ್ಳಿ ಗ್ರಾಮ ಪಂಚಾಯತಿಯಲ್ಲಿ ಒಟ್ಟು 8 ಸ್ಥಾನಗಳ ಪೈಕಿ 3 ಕಾಂಗ್ರೆಸ್ ಬೆಂಬಲಿತ, 3 ಬಿಜೆಪಿ ಬೆಂಬಲಿತ, 2 ಪಕ್ಷೇತರ ಸದಸ್ಯರಿದ್ದು ಅಧ್ಯಕ್ಷ ಸ್ಥಾನ ಹಿಂ.ವ.ಅ(ಮ) ಹಾಗೂ ಉಪಾಧ್ಯಕ್ಷ ಸ್ಥಾನ ಸಾಮನ್ಯ ಸ್ಥಾನಕ್ಕೆ ಮೀಸಲಾಗಿತ್ತು. ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನದ ಕಾಂಗ್ರೆಸ್ ಆಭ್ಯರ್ಥಿಗೆ 4 ಮತ ಮತ್ತು ಬಿಜೆಪಿ ಬೆಂಬಲಿತ ಆಭ್ಯರ್ಥಿ 4 ಮತಗಳನ್ನು ಸಮಬಲವಾಗಿ ಪಡೆದುಕೊಂಡಿದ್ದರು. ಇಬ್ಬರು ಆಭ್ಯರ್ಥಿಗಳಿಗೂ ಸಮಬಲವಾಗಿ ಮತ ಚಲಾವಣೆಯಾದ್ದರಿಂದ ಚುನಾವಣಾಧಿಕಾರಿಗಳು ಚೀಟಿ ಎತ್ತುವ ಮೂಲಕ ಪ್ರಕ್ರಿಯೆ ಕೈಗೊಂಡಾಗ ಅಧ್ಯಕ್ಷ ಸ್ಥಾನ ಎನ್ನುವುದು ಕಾಂಗ್ರೆಸ್ ಬೆಂಬಲಿತ ಆಭ್ಯರ್ಥಿ ಎಚ್ ಕೆ ಸವಿತಾ ಇವರ ಪಾಲಾಯಿತು. ಉಪಾಧ್ಯಕ್ಷರಾಗಿ ಉದಯ ಪೂಜಾರಿ ಇವರು ಅವಿರೋಧವಾಗಿ ಆಯ್ಕೆಯಾದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಹೆಲ್ಪಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದಾನಿಗಳ ನೆರವಿನೊಂದಿಗೆ ಸಂಗ್ರಹಿಸಲಾದ ಒಟ್ಟು ರೂ.71,110 ಮೊತ್ತದ ಸಹಾಯಧನವನ್ನು ಇಬ್ಬರು ಮಕ್ಕಳ ಚಿಕಿತ್ಸೆಗಾಗಿ ನೀಡಲಾಯಿತು. ಅನಾರೋಗ್ಯದಿಂದ ಬಳಲುತ್ತಿದ್ದ ಕುಂದಾಪುರ ಖಾರ್ವಿಕೇರಿಯ ಪುಟಾಣಿಯಾದ ಆರೂಷಿ ಹಾಗೂ ಕೋಟೇಶ್ವರದ ಆರ್ಯನ್ ಪಾಪು ಚಿಕಿತ್ಸೆಗಾಗಿ ತಲಾ 35,555 ರೂ ಗಳಂತೆ ರೂಪಾಯಿ ಸಹಾಯಧನ ವನ್ನು ಹೆಲ್ಪಿಂಗ್ ಹ್ಯಾಂಡ್ಸ್ ಟೃಸ್ಟ್ ನ ಪಧಾಧಿಕಾರಿಗಳು ಹಾಗೂ ಕೋಟಿಲಿಂಗೇಶ್ವರ ದೇವಸ್ಥಾನ ಜೀರ್ಣೋದ್ದಾರ ಸಮಿತಿಯ ಸದಸ್ಯರ ಸಮಕ್ಷಮದಲ್ಲಿ, ದೇವರಿಗೆ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿ, ಬಳಿಕ ಪೋಷಕರ ಚೆಕ್ ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ದೇವಸ್ಥಾನ ಸಮಿತಿಯ ಶಾರದಾ ಹಳವಳ್ಳಿ, ಉಷಾ ಬಂಗೇರ ಮಾರ್ಕೊಡು ಹಾಗೂ ಹೆಲ್ಪಿಂಗ್ ಹ್ಯಾಂಡ್ಸ್ ಗೌರವಾಧ್ಯಕ್ಷರಾದ ರವೀಂದ್ರ ರಟ್ಟಾಡಿ, ಜ್ಞಾನಾನಂದ ಐರೋಡಿ, ಅಧ್ಯಕ್ಷರಾದ ಪ್ರದೀಪ್ ಕೋಟೇಶ್ವರ, ಕೋಷಾಧಿಕಾರಿಗಳಾದ ಸುನೀಲ್ಖಾರ್ವಿ ತಲ್ಲೂರು, ಕಮಿಟಿಯ ಸದಸ್ಯರಾದ ಮಣೀಶ್ ಶ್ರೀಯಾನ್, ರಾಘವೇಂದ್ರ ಕೋಡಿ, ಅವಿನಾಶ್ ಹೇರಿಕುದ್ರು,ಶರತ್ ಹೊದ್ರಾಳಿ, ನಾಗರಾಜ್ ಹೊದ್ರಾಳಿ,ರತನ್ ಹೇರಿಕುದ್ರು, ಸಚಿನ್ ಕೋಡಿ, ಕಿಶೋರ್ ಕೋಡಿ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸ್ವಯಂಸ್ಪೂರ್ತಿ ಫೌಂಡೇಶನ್ ಬೆಂಗಳೂರು ವತಿಯಿಂದ ಜಡ್ಕಲ್ ಶಾಲೆಗೆ ಸುಣ್ಣ ಬಣ್ಣ, ವಿದ್ಯಾರ್ಥಿಗಳಿಗೆ ಸಮವಸ್ತ್ರ, ಆಟದ ಸಾಮಗ್ರಿಗಳು, ಪುಸ್ತಕ, ಅಂಗನವಾಡಿ ಮಕ್ಕಳಿಗೆ ಪುಸ್ತಕ, ಲೇಖನಿಗಳನ್ನು ವಿತರಿಸಲಾಯಿತು. ಶಾಲೆಯ ಶಿಕ್ಷಕರ ಕೊರತೆ ನೀಗಿಸಲು ಖಾಸಗಿ ಶಿಕ್ಷಕರನ್ನು ನೇಮಕ ಮಾಡಿ ಅವರ ಒಂದು ವರ್ಷದಿಂದ ಸಂಬಳವನ್ನು ನೀಡುವ ಕಾರ್ಯವನ್ನೂ ಮಾಡಲಾಗುತ್ತಿದೆ. ಸ್ವಯಂಸೇವಕರ ಸಹಾಯದಿಂದ ಶಾಲೆಗೆ ಸುಣ್ಣ ಬಣ್ಣ ಬಳಿದು, ಚಿತ್ರ ಬಿಡಿಸಿ, ಬಣ್ಣದಿಂದ ಅಲಂಕಾರಗೊಳಿಸಿದ್ದಲ್ಲದೇ, ಸ್ವಾತ್ರಂತ್ರ್ಯೋತ್ಸವದಂದು ಮಕ್ಕಳಿಗೆ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ಮತ್ತು ಸಿಹಿತಿಂಡಿಗಳನ್ನು ವಿತರಿಸಲಾಯಿತು. ಈ ವೇಳೆ ಶಾಲಾ ಮುಖ್ಯೋಪಧ್ಯಾಯರು, ಎಸ್ಡಿಎಂಸಿ ಅಧ್ಯಕ್ಷರು, ಪಂಚಾಯತ್ ಅಧ್ಯಕ್ಷರು, ಸ್ವಯಂಸ್ಪೂರ್ತಿ ಫೌಂಡೇಶನ್ ಪ್ರತಿನಿಧಿಗಳು ವಿದ್ಯಾರ್ಥಿಗಳು, ಪೋಷಕರು ಮತ್ತು ಊರವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ದೇವರು ನಮಗೆ ನೀಡಿದ ವರ, ಚಿನ್ನ, ಬೆಳ್ಳಿ, ಕಾರು, ಬಂಗಲೆ ಅಲ್ಲ. ಮುಖ್ಯವಾಗಿ ನಮಗೆ ನೀಡಿದ ವರ, ಸಮಯ. ಈ ಸಮಯವನ್ನು ಸರಿಯಾಗಿ ಸದುಪಯೋಗ ಮಾಡಿಕೊಂಡರೆ ಜೀವನದಲ್ಲಿ ಬೇರೆ ಎಲ್ಲಾ ರೀತಿಯ ಸಂಪತ್ತನ್ನು ಗಳಿಸಬಹುದು. ವಿದ್ಯಾರ್ಥಿಗಳು ತಮ್ಮ ಪ್ರತಿಭೆ, ನಡೆ-ನುಡಿ, ಗುರಿ ಸಾಧನೆಯ ಹಾದಿ, ಎಲ್ಲ ವಿಷಯಗಳಲ್ಲೂ ಪರಿಪೂರ್ಣತೆ ಪಡೆಯಲು ಶಿಸ್ತು, ಶ್ರದ್ಧೆಯಿಂದ ಶ್ರಮಿಸಬೇಕು. ದೇವರ ಮೇಲೆ ವಿಶ್ವಾಸವಿಟ್ಟು, ಗುರು ಹಿರಿಯರಲ್ಲಿ ಗೌರವ ಇಟ್ಟು, ಮಾತಾ ಪಿತಾರ ಮಾರ್ಗದರ್ಶನದಲ್ಲಿ ಮುನ್ನಡೆದರೆ ಯಶಸ್ಸು ಖಂಡಿತ ಎಂದು ಉಡುಪಿ ಕುಂಜಿಬೆಟ್ಟು ಶಾರದಾ ವಸತಿ ಶಾಲೆಯ ನಿರ್ದೇಶಕರಾದ ವಿದ್ಯಾವಂತ ಆಚಾರ್ಯ ಹೇಳಿದರು. ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜಿ.ಎಸ್.ಬಿ. ದೇವಾಲಯಗಳ ಒಕ್ಕೂಟ ಮಂಗಳೂರು ಸಂಘಟನೆಯ ಕುಂದಾಪುರ ವಲಯದ ಸುಕೃತ ಸಮಾವೇಶ ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡುತ್ತಾ ನನ್ನಿಂದ ಸಾಧ್ಯವಿದೆ ಎಂಬ ಆತ್ಮ ವಿಶ್ವಾಸವಿರಿಸಿಕೊಂಡು ಯುವಕರು ಮುನ್ನಡೆದರೆ ಗುರಿ ಸಾಧನೆ ಮಾಡಲು ಸಾಧ್ಯ ಎಂದು ಹಲವು ನಿದರ್ಶನಗಳನ್ನು ನೀಡಿದ ಅವರು,…

Read More

ಸಮಕಾಲೀನ ಜಗತ್ತನ್ನು ದರ್ಶಿಸುವುದು ಸಾಹಿತ್ಯದ ತುರ್ತು – ರಾಜ್‌ ಆಚಾರ್ಯ ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜಾತಿ, ವರ್ಣ, ವರ್ಗಗಳ ಮೇಲಿನ ಸಂಘರ್ಷಕ್ಕೆ ಶತಮಾನಗಳ ಇತಿಹಾಸವಿದೆ. ಈ ಸಂಘರ್ಷದಲ್ಲಿ ನಮ್ಮೊಳಗಿನ ಜೀವದ್ರವ್ಯ ಆಕುಂಚನವಾಗದಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆ ಮತ್ತು ಅವಶ್ಯಕತೆ ಎಂದಿಗಿಂತಲೂ ಇಂದು ತುಸು ಹೆಚ್ಚೇ ಇದೆ ಎಂದು ಕವಿ, ಸಾಹಿತಿ ರಾಜ್‌ ಆಚಾರ್ಯ ಪುಣೆ ಹೇಳಿದರು. ಅವರು ರವಿವಾರ ಜನಪ್ರತಿನಿಧಿ ಕುಂದಾಪುರದಲ್ಲಿ ಜನಪ್ರತಿನಿಧಿ ಪ್ರಕಾಶನ ಪ್ರಕಟಿಸಿದ ಕವಿ, ಲೇಖಕ ಶ್ರೀರಾಜ್‌ ವಕ್ವಾಡಿಯವರ ಕಿರು ಕಾದಂಬರಿ ಅತ್ತ ನಕ್ಷತ್ರ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ವಸ್ತು, ವಿಷಯ, ವ್ಯಕ್ತಿ ಈ ಮೂರರ ನೆಲೆಯಲ್ಲಿ ತಾರ್ಕಿಕ ಅಂಶಗಳನ್ನು, ಸಾಂಕೇತಿಕವಾಗಿ ಭಾಷೆ ಸಂಜ್ಞೆಗಳನ್ನು ಪರಿಣಾಮಕಾರಿಯಾಗಿ ಸಾಹಿತ್ಯದಲ್ಲಿ ಬಳಸಿಕೊಳ್ಳುವುದು ಅಗತ್ಯ. ಸಾಹಿತ್ಯಮುಖಿಯ ವೈಯಕ್ತಿಕ ನೆಲೆಗಟ್ಟಿನಲ್ಲಿ ವ್ಯಕ್ತವಾಗುವ ನೀತಿಸತ್ಯಗಳು ಸಾಮಾಜಿಕ ನೆಲೆಯಲ್ಲಿ ಪರಿಗಣನೆಗೆ ಬಂದರೆ ಅದು ಸಾಹಿತಿಯೊಬ್ಬನ ಗೆಲುವು. ಸಮಕಾಲೀನ ಜಗತ್ತನ್ನು ತೆರೆದಿಡುವ ತುರ್ತು ಅಗತ್ಯ ಸಾಹಿತ್ಯಕ್ಕಿದೆ. ವ್ಯಕ್ತಿಕೇಂದ್ರೀಕೃತ ನೆಲೆಯಿಂದಲೇ ಸಮಕಾಲೀನ ಜಗತ್ತಿನ ದರ್ಶನ ಹೊರಗೆಡಹಲು ಸಾಧ್ಯ…

Read More

ಬೈಂದೂರು ಕ್ಷೇತ್ರದ ಕೃಷಿ, ಮೀನುಗಾರಿಕೆ, ನೀರಾವರಿ, ಹೆದ್ದಾರಿ, ಗೋಶಾಲೆ – ಶಾಸಕರಾದ ಗುರುರಾಜ ಗಂಟಿಹೊಳೆ ಏನಂತಾರೆ?

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನಿ., ಉಪ್ಪುಂದ ಇವರಿಗೆ ಸಂಸ್ಥೆಯು ಸಾಧಿಸಿದ ಸರ್ವತೋಮುಖ ಅಭಿವೃದ್ಧಿಗಾಗಿ 2022-23 ನೇ ಸಾಲಿನ “ವಿಶೇಷ ಪ್ರೋತ್ಸಾಹಕ ಸಂಘ ಪ್ರಶಸ್ತಿ” ಯನ್ನು ದ. ಕ ಜಿಲ್ಲಾ ಸಹಕಾರಿ ಬ್ಯಾಂಕ್ ಮಂಗಳೂರಿನಲ್ಲಿ ಇಂದು ನಡೆದ ಮಹಾಸಭೆ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಪ್ರಶಸ್ತಿ ಯನ್ನು ಸಂಘದ ಅಧ್ಯಕ್ಷರಾದ ಎಸ್ ಪ್ರಕಾಶ್ಚಂದ್ರ ಶೆಟ್ಟಿ ಹಾಗೂ ಸಿಇಒ ಶ್ರೀ ವಿಷ್ಣು ಆರ್ ಪೈ ಸ್ವೀಕರಿಸಿದರು. ಸಂಘದ ನಿರ್ದೇಶಕರಾದ ಮೋಹನ ಪೂಜಾರಿ, ಗುರುರಾಜ ಹೆಬ್ಬಾರ್, ಮಂಜು ದೇವಾಡಿಗ ಹಾಗೂ ದ. ಕ ಜಿಲ್ಲಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾದ ಎಂ ಎನ್ ರಾಜೇಂದ್ರ ಕುಮಾರ್, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಎಚ್ ಎನ್ ರಮೇಶ್ ಹಾಗೂ ಜಿಲ್ಲಾ ಸಹಕಾರಿ ಬ್ಯಾಂಕ್ ನ ನಿರ್ದೇಶಕರುಗಳು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬಿಜೂರು ಗ್ರಾಮ ಪಂಚಾಯತ್ ಎರಡನೆಯ ಅವಧಿಗೆ ಅಧ್ಯಕ್ಷರಾಗಿ ಚಣ್ಣಮ್ಮ, ಉಪಾಧ್ಯಕ್ಷರಾಗಿ ರಂಜಿತ್ ಆಯ್ಕೆಯಾಗಿದ್ದಾರೆ. ಒಟ್ಟು 18 ಮಂದಿ ಸದಸ್ಯ ಬಲವಿರುವ ಬಿಜೂರು ಪಂಚಾಯತಿಯಲ್ಲಿ ಎರಡನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಅ ಮೀಸಲಾತಿ ಬಂದಿತ್ತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಮಂಗಳೂರು ಇದರ 2022-23 ನೇ ಸಾಲಿನ ವಾರ್ಷಿಕ ಮಹಾ ಸಭೆಯಲ್ಲಿ ಮರವಂತೆ ಬಡಾಕೆರೆ ವ್ಯ. ಸೇ. ಸಹಕಾರಿ ಸಂಘ(ನಿ), ನಾವುಂದದ ಅತ್ಯುತ್ತಮ ಕಾರ್ಯ ವೈಖರಿ ಮತ್ತು ಸರ್ವಾಂಗೀಣ ಅಭಿವೃದ್ಧಿಯನ್ನು ಗುರುತಿಸಿ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸಂಘದ ಅಧ್ಯಕ್ಷರಾದ ಎಸ್. ರಾಜು ಪೂಜಾರಿ ಅವರಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ. ಎಂ. ಏನ್. ರಾಜೇಂದ್ರ ಕುಮಾರ್ ಅವರು ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಎಂ. ವಿನಾಯಕ ರಾವ್, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ ಅಳ್ವೆಗದ್ದೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಕೇಂದ್ರ ಬ್ಯಾಂಕಿನ ಎಲ್ಲಾ ನಿರ್ದೇಶಕರು, ಮ.ಬ.ವ್ಯ.ಸೇ.ಸಹಕಾರಿಯ ನಿರ್ದೇಶಕ ವಿನಾಯಕ ರಾವ್ ಉಪಸ್ಥಿತರಿದ್ದರು.

Read More