ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪ್ರ ಕನ್ನಡ ಭಾಷೆ ಅದ್ಬುತವಾದ ಭಾಷೆ. ನಮ್ಮ ಈ ಪ್ರೀತಿಯ ಭಾಷೆಗೆ ಕರುಳಿನ ಸಂಬಂಧ ಇದೆ. ಈ ಭಾಷೆಯೊಂದಿಗೆ ನಮ್ಮ ಸಂಸ್ಕೃತಿ ಉಳಿದುಕೊಂಡಿದೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಹೇಳಿದರು. ಅವರು ಕುಂದ ಕನ್ನಡ ಭಾಷಾಭಿವೃದ್ಧಿ ವೇದಿಕೆ ಭಂಡಾರ್ಕಾರ್ಸ್ ಕಾಲೇಜಿನ ಸಹಯೋಗದಲ್ಲಿ ಏರ್ಪಡಿಸಿದ ಕುಂದ ಕನ್ನಡ ಶಬ್ದಗಳನ್ನು ಬರೆಯುವ, ಗಾದೆಗಳನ್ನು ಹೇಳುವ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡುವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ವಿದ್ಯಾರ್ಥಿಗಳು ಕುಂದಾಪ್ರ ಕನ್ನಡ ಭಾಷೆಯ ವೈಶಿಷ್ಟ್ಯ ಅರಿತು ಅದನ್ನು ಬಳಸಬೇಕು. ಹೆಚ್ಚು ಬಳಸಿದಷ್ಟು ಅದು ಉಳಿದುಕೊಳ್ಳುತ್ತದೆ, ಬೆಳೆಯುತ್ತದೆ. ಉತ್ತಮವಾಗಿ ಗಾದೆಯನ್ನು ಹೇಳಿದ್ದೀರಿ. ಕುಂದ ಕನ್ನಡ ಶಬ್ದಗಳನ್ನು ಬರೆದಿದ್ದೀರಿ. ನಿಮ್ಮ ಆಸಕ್ತಿ ಇನ್ನಷ್ಟು ವ್ಯಕ್ತಿತ್ವ ಬೆಳವಣಿಗೆಗೆ ಸಹಕಾರಿಯಾಗಲಿ ಎಂದರು. ಫ್ರೆಂಡ್ಸ್ ಸ್ವಾವಲಂಬನ ಸಂಘಟನೆಯ ಸಂಚಾಲಕ ವೆಂಕಟೇಶ ಪೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾಷೆಯೊಂದಿಗೆ ಪರಿಸರ ಉಳಿಸುವ ಕಾರ್ಯ ನಾವು ಮಾಡಬೇಕು. ಪ್ಲಾಸ್ಟಿಕ್ ಬದಲು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಅನಧಿಕೃತವಾಗಿ ಕಾಡು ಪ್ರಾಣಿಗಳನ್ನು ಇರಿಸಲಾಗಿದೆ ಎಂಬ ಆರೋಪದಡಿ ಸಾಲಿಗ್ರಾಮದ ಸುಧೀಂದ್ರ ಐತಾಳ್ ಅವರ ಮನೆಗೆ ಜಿಲ್ಲಾಧಿಕಾರಿ ನಿರ್ದೇಶನದಂತೆ ವಿವಿಧ ಇಲಾಖೆ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ನೇತೃತ್ವದಲ್ಲಿ ಸೋಮವಾರ ಸ್ಥಳ ಪರಿಶೀಲನೆ ನಡೆಸಲಾಯಿತು. ಜಿಲ್ಲಾ ಪ್ರಾಣಿದಯಾ ಸಂಘ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಸಮ್ಮುಖದಲ್ಲಿ ಬ್ರಹ್ಮಾವರ ಪಶು ಪಾಲನಾ ಇಲಾಖಾಧಿಕಾರಿ ಡಾ. ಉದಯ್ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ಸ್ಥಳ ಮಹಜರು ನಡೆಯಿತು. ಈ ವೇಳೆ ಸ್ಥಳದಲ್ಲಿದ್ದ ಸಾಕು ಪ್ರಾಣಿಗಳ ಬಗ್ಗೆ ಮಾಹಿತಿ ಪಡಿದುಕೊಂಡರು. ತಾಲೂಕು ಪಶುಪಾಲನಾ ಇಲಾಖೆ, ವನ್ಯಜೀವಿ ವಿಭಾಗ ಬ್ರಹ್ಮಾವರ, ಸಾಲಿಗ್ರಾಮ ಪಟ್ಟಣಪಂಚಾಯತ್, ಪ್ರಾಣಿದಯಾ ಸಂಘ ಉಡುಪಿ, ಕೋಟ ಆರಕ್ಷಕ ಅಧಿಕಾರಿಗಳು ಉಪಸ್ಥಿತರಿದ್ದರು. ಪ್ರಾಣಿ ಪ್ರೇಮಿ ಐತಾಳ್ ಆಕ್ರೋಶ:ಪ್ರಾಣಿಪ್ರೇಮಿ ಸುಧೀಂದ್ರ ಐತಾಳ್ ಅವರು ಸ್ಥಳ ಮಹಜರು ನಡೆಸುತ್ತಿದ್ದ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿ, ನನ್ನ ಬಳಿ ಈವರೆಗೆ ಸುತ್ತಮುತ್ತಲಿನ ಗ್ರಾಮದ ಸಾರ್ವಜನಿಕರು ಗಾಯಗೊಂಡ ಪ್ರಾಣಿಗಳನ್ನು ತಂದು ಬಿಡುತ್ತಿದ್ದು ಸಮಯೋಚಿತವಾಗಿ ಅದಕ್ಕೆ ಚಿಕಿತ್ಸೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಇತ್ತೀಚಿಗೆ ವರ್ಡ್ಪ್ರೆಸ್ ಉಡುಪಿ ಸಮುದಾಯದ ವತಿಯಿಂದ ವರ್ಡ್ಪ್ರೆಸ್ ಕ್ಯಾಂಪಸ್ ಕನೆಕ್ಟ್ ಉಡುಪಿ ತರಬೇತಿ ಕಾರ್ಯಾಗಾರ ನಡೆಯಿತು. ಕಾರ್ಯಾಗಾರವನ್ನು ಶಶಿಕಾಂತ್ ಶೆಟ್ಟಿ, ಕೆ. ಕೀರ್ತಿ ಪ್ರಭು ಮತ್ತು ವಿ. ಗೌತಮ್ ನಾವಡ ಅವರ ನೇತೃತ್ವದಲ್ಲಿ ನಡೆಸಲಾಯಿತು. ಕಾರ್ಯಾಗಾರದಲ್ಲಿ ಕೋಟಿಸಾಫ್ಟ್ ಸೊಲ್ಯೂಷನ್ಸ್, ಕೋಟೇಶ್ವರದ ಓಂಕಾರ್ ಉಡುಪ ಮತ್ತು ಯುಕ್ತಾ ಡಿಜಿಟಲ್ಸ್, ತೀರ್ಥಹಳ್ಳಿಯ ಮಂಜುನಾಥ್ ಎಂ. ಮಾರ್ಗದರ್ಶಕರಾಗಿದ್ದರು. ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ಪ್ರಾಚಾರ್ಯ ಶ್ರೀನಾಥ ಪೈ, ಉಪಪ್ರಾಚಾರ್ಯ ವಿಖ್ಯಾತ್ ಪ್ರಭು (ಬಿಸಿಎ), ಉಪಪ್ರಾಚಾರ್ಯ ವಿಷ್ಣುವರ್ಧನ್ ಭಟ್ (ಬಿಬಿಎ/ಬಿಎ) ಮತ್ತು ತರಬೇತಿ ಮತ್ತು ನೇಮಕಾತಿ ಅಧಿಕಾರಿ ವಿನೇಶ್ ಪ್ರಭು (ಬಿಕಾಂ) ಹಾಜರಿದ್ದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು. ಸುಮಾರು 50 ಬಿಸಿಎ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ವಿದ್ಯಾರ್ಥಿಗಳು ತಮ್ಮ ಮೊದಲ ಒನ್-ಪೇಜ್ ವೆಬ್ಸೈಟ್ನ್ನು ತಾವು ನಿರ್ಮಿಸುವ ಅನುಭವವನ್ನು ಪಡೆದರು. ಈ ವೇಳೆ ವರ್ಡ್ಪ್ರೆಸ್ ಉಡುಪಿ ಸಮುದಾಯದ ಶಶಿಕಾಂತ್ ಶೆಟ್ಟಿ ಮಾತನಾಡಿ “ನಮ್ಮ ಉದ್ದೇಶ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ , ಸೋಮವಾರ ಧಾರ್ಮಿಕ ಕಾರ್ಯಕ್ರಮಳಿಗೆ ಚಾಲನೆ ನೀಡಲಾಯಿತು. ದೇವಸ್ಥಾನದ ಆಡಳಿತ ಮಂಡಳಿ ಗೌರವಾಧ್ಯಕ್ಷರಾದ ಎಸ್. ರಾಜು ಪೂಜಾರಿ ಅವರು ಚಾಲನೆ ನೀಡಿದರು. ಅಧ್ಯಕ್ಷರಾದ ನಾಗರಾಜ ಶೆಟ್ಟಿ, ಅರ್ಚಕರಾದ ಕೃಷ್ಣ ಮೂರ್ತಿ ನಾವಡ , ಸದಸ್ಯರುಗಳಾದ ಪ್ರಸನ್ನ, ಶಂಕರ, ರವೀಂದ್ರ ಶ್ಯಾನುಭೋಗ್, ಅಣ್ಣಪ್ಪ ಪೂಜಾರಿ, ಭಕ್ತಾಧಿಗಳು ಮೊದಲಾದವರು ಉಪಸ್ಥಿತರಿದ್ದರು. ಅರ್ಚಕರಾದ ಕೃಷ್ಣಮೂರ್ತಿ ನಾವಡ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳ ಆರಂಭಗೊಂಡವು. ದೇವಸ್ಥಾನದಲ್ಲಿ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 02ರವರೆಗೆ ಪ್ರತಿನಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಿಐಎಸ್ಸಿಇ ನಡೆಸುತ್ತಿರುವ ಗೇಮ್ಸ್ ಮತ್ತು ಸ್ಪೋರ್ಟ್ಸ್ 2025-26ರ ಸ್ಪರ್ಧೆಗಳ ಅಂಗವಾಗಿ ದಿನಾಂಕ ಹೆರಿಟೇಜ್ ಸ್ಕೂಲ್ ವೆಸ್ಟ್ ಬಂಗಾಲ ಇವರ ಪ್ರಾಯೋಜಕತ್ವದಲ್ಲಿ ಈಷ್ಟ್ ಕೊಲ್ಕತ್ತಾ ಟೌನ್ ಶಿಪ್ ಕೊಲ್ಕತ್ತಾ ವೆಸ್ಟ್ ಬಂಗಾಲದಲ್ಲಿ ನಡೆದ ರಾಷ್ಟ್ರಮಟ್ಟದ ಖೋ ಖೋ ಸ್ಪರ್ಧೆಯಲ್ಲಿ ಕರ್ನಾಟಕ ಗೋವಾ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಈ ತಂಡದಲ್ಲಿ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿಯರಾದ ಅನುಷ್ಕಾ ಉದಯ ಹುರುಳಿ ಮತ್ತು ಖುಷಿ ಬಿ.ಟಿ ಒಳಗೊಂಡಿದ್ದು, ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ. ಅನುಷ್ಕಾ ಉದಯ ಹುರುಳಿಯು ಸೌದತ್ತಿಯ ನಿವಾಸಿಗಳಾದ ಜ್ಯೋತಿ ಮತ್ತು ಉದಯ ಹುರುಳಿ ದಂಪತಿಗಳ ಸುಪುತ್ರಿಯಾಗಿದ್ದಾಳೆ. ಖುಷಿ ಬಿ.ಟಿ. ಯು ಬೆಳಗಾಂ ನಿವಾಸಿಗಳಾದ ಅಕ್ಕಮ್ಮ ಮತ್ತು ಬರಮಪ್ಪ ತೇಲಿ ದಂಪತಿಗಳ ಸುಪುತ್ರಿಯಾಗಿದ್ದಾಳೆ. ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಮತ್ತು ಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರ ವಿದ್ಯಾರ್ಥಿಗಳನ್ನು ಹಾಗೂ ತರಬೇತಿ ನೀಡಿ ಪ್ರೋತ್ಸಾಹಿಸಿದರು. ದೈಹಿಕ ಶಿಕ್ಷಣ ಶಿಕ್ಷಕರನ್ನೂ, ಅಭಿನಂದನೆ ಸಲ್ಲಿಸಿ ಮಾತನಾಡಿ, …
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ ತೆರವಾಗಿರುವ ಸಾಮಾನ್ಯ ಕರ್ತವ್ಯದ ವೈದ್ಯಾಧಿಕಾರಿ ಹುದ್ದೆಗೆ ಎಂ.ಬಿ.ಬಿ.ಎಸ್ ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ರೋಸ್ಟರ್ ಕಂಮೆರಿಟ್ ಆಧಾರದಲ್ಲಿ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆ ತೆರವಾಗಿರುವ ಸಂಸ್ಥೆಗಳು: ಕುಂದಾಪುರ ಸಾರ್ವಜನಿಕ ಆಸ್ಪತ್ರೆ-1, ಕಾರ್ಕಳ ಸಾರ್ವಜನಿಕ ಆಸ್ಪತ್ರೆ-2, ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರ-1, ಬೈಂದೂರು ಸಮುದಾಯ ಆರೋಗ್ಯ ಕೇಂದ್ರ-1, ದುರ್ಗಾ ಪ್ರಾಥಮಿಕ ಆರೋಗ್ಯ ಕೇಂದ್ರ-1, ಸಂಚಾರಿ ಗಿರಿಜನ ಆರೋಗ್ಯ ಘಟಕ-1 ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ದೂ.ಸಂ: 0820- 2525566/2536650 ಅನ್ನು ಸಂಪರ್ಕಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿಯ ಮಹಾಸತಿ ಪ್ರಾಥಮಿಕ ಮೀನುಗಾರರ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ 2024-25ನೇ ಸಾಲಿನ ಮಹಾಸಭೆ ಇಲ್ಲಿನ ಶ್ರೀ ವೀರೇಶ ಮಾಂಗಲ್ಯ ಮಂದಿರ ಸಭಾಂಗಣದಲ್ಲಿ ಇತ್ತೀಚಿಗೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷೆ ನೀಲಾವತಿ ಎಸ್. ಖಾರ್ವಿ ಮಾತನಾಡಿ, ವರದಿ ವರ್ಷದಲ್ಲಿ ಒಟ್ಟು 4619 ಎಲ್ಲಾ ವಿಧದ ಸದಸ್ಯರೊಂದಿಗೆ ರೂ. 22.98 ಲಕ್ಷ ಪಾಲು ಬಂಡವಾಳವನ್ನು ಹೊಂದಿದೆ. ವರ್ಷ ಅಂತ್ಯಕ್ಕೆ 20.43 ಕೋಟಿಗೂ ಮಿಕ್ಕಿ ಠೇವಣಿಯನ್ನು ಹೊಂದಿದ್ದು, 9.21 ಕೋಟಿ ರೂ.ಗಳನ್ನು ಇತರ ಸಂಘ/ಬ್ಯಾಂಕುಗಳಲ್ಲಿ ಹೂಡಿಕೆ ಮಾಡಲಾಗಿದೆ. ವರದಿ ವರ್ಷಾಂತ್ಯಕ್ಕೆ ಸಂಘವು 16.42 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು, ಶೇ.10 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು. 2024-25ನೇ ಸಾಲಿನ ಎಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಸಹಕಾರಿ ಸಂಘದ ಸದಸ್ಯರ ಒಟ್ಟು 26 ಜನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಸಂಘದ ಉಪಾಧ್ಯಕ್ಷೆ ಶೈಲಾ ಎಂ. ಖಾರ್ವಿ, ನಿರ್ದೇಶಕಿಯರಾದ ಸುಶೀಲಾ ಎ. ಖಾರ್ವಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು,ಸೆ.22: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಮಹಾನವರಾತ್ರಿ ಮಹೋತ್ಸವಕ್ಕೆ ಸೋಮವಾರ ಚಾಲನೆ ನೀಡಲಾಯಿತು. ದೇವಳದ ತಂತ್ರಿಗಳಾದ ನಿತ್ಯಾನಂದ ಅಡಿಗ ಅವರ ನೇತೃತ್ವದಲ್ಲಿ ಬೆಳಗ್ಗೆ ಗಣಪತಿ ಪೂಜೆಯೊಂದಿಗೆ ನವರಾತ್ರಿ ಪರ್ವಕ್ಕೆ ಚಾಲನೆ ನೀಡಿದ ಬಳಿಕ ಶ್ರೀದೇವಿಗೆ ವಿಶೇಷ ಪೂಜೆ, ಮಂಗಳಾರತಿ ನಡೆಯಿತು. ಬಳಿಕ ನವರಾತ್ರಿ ಮಹೋತ್ಸವದ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಈ ವೇಳೆ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಡುಪಿಯ ರಾಷ್ಟ್ರೋತ್ಥಾನ ಪಿಯು ಕಾಲೇಜಿನಲ್ಲಿ ಜಿಲ್ಲಾಮಟ್ಟದ ಚದುರಂಗ (ಚೆಸ್) ಸ್ಪರ್ಧೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪಿ.ಯು. ಕಾಲೇಜಿನ ವಿದ್ಯಾರ್ಥಿ ತೇಜಸ್ ಎಂ. ಶೆಣೈ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದು, ಮುಂಬರುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಅವರು ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿ ಆಡಲಿದ್ದಾರೆ. ವಿದ್ಯಾರ್ಥಿಯ ಸಾಧನೆಯನ್ನು ಆಡಳಿತ ಮಂಡಳಿ, ಬೋಧಕ – ಬೋಧಕೇತರ ವೃಂದದವರು ಅಭಿನಂದಿಸಿ, ಶುಭಹಾರೈಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಸಾಹಿತ್ಯ ಸಂಘದ ಆಶ್ರಯದಲ್ಲಿ “ವಿಶೇಷ ಉಪನ್ಯಾಸ ಮತ್ತು ಕವಿಯೊಂದಿಗೆ ಸಂವಾದ” ಕಾರ್ಯಕ್ರಮವು ಡಾ. ವಿ.ಎ. ಆಚಾರ್ಯ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ಕವಿ ಹಾಗೂ ವಿಮರ್ಶಕರಾದ ಕೆ.ಆರ್. ಪುರಂ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಟಿ. ಯಲ್ಲಪ್ಪ ಅವರು ಅತಿಥಿ ಉಪನ್ಯಾಸಕರಾಗಿ ಪಾಲ್ಗೊಂಡು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಅವರು ತಮ್ಮ ಬದುಕಿನ ಹಿನ್ನಲೆಯಲ್ಲಿ ಎದುರಿಸಿದ ಸಂಕಷ್ಟಗಳನ್ನು ಹಂಚಿಕೊಂಡರು. “ವಿದ್ಯಾಭ್ಯಾಸಕ್ಕೆ ಅನುಕೂಲವಿಲ್ಲದ ಮಲಹೋರುವ ಕುಟುಂಬದಲ್ಲಿ ಕಡುಬಡತನದಲ್ಲಿ ಜನಿಸಿದ್ದ ನಾನು, ಕನ್ನಡ ಸಾಹಿತ್ಯದ ಅಭ್ಯಾಸ ಮಾಡದೆ, ಭಾಷೆಯನ್ನು ಪ್ರೀತಿಸದೆ ಇದ್ದಿದ್ದರೆ ಇವತ್ತು ಸಹ ಅದೇ ಪರಿಸ್ಥಿತಿಯಲ್ಲಿ ಮುಂದುವರಿಯಬೇಕಾಗಿತ್ತು. ಆದರೆ ಬದುಕಿನ ಆಯ್ಕೆ ನನ್ನ ಕೈಯಲ್ಲಿತ್ತು. ಕಲಾ ವಿಭಾಗವನ್ನು ಆರಿಸಿಕೊಂಡು, ಬದುಕಿನ ಪಥ ಬದಲಿಸಿದೆ ಎಂದು ತಮ್ಮ ಬದುಕಿನ ಹೋರಾಟವನ್ನು ವಿವರಿಸಿದರು. ಡಾ. ಯಲ್ಲಪ್ಪ ಅವರು ವೈದ್ಯರಾಗಬೇಕೆಂಬ ಕನಸನ್ನು ಹೊತ್ತು ವಿಜ್ಞಾನ ವಿಭಾಗಕ್ಕೆ ಸೇರಿದ ನೆನಪು ಹಂಚಿಕೊಂಡರು. “ನನ್ನ ಸಹೋದರ ಸಾಲ…
