Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಬಸ್‌ ನಿಲ್ದಾಣದಿಂದ ಶಾಸ್ತ್ರಿ ಸರ್ಕಲ್ ಕಡೆಗೆ ಸರ್ವಿಸ್ ರಸ್ತೆ ಬದಿ ಅ. 3 ರಂದು ಸಂಜೆ ನಡೆದುಕೊಂಡು ಹೋಗುತ್ತಿದ್ದ ಜ್ಯೋತಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ಬೈಕ್‌ನಲ್ಲಿ ಬಂದು ಕಳ್ಳತನಗೈದು ಪರಾರಿಯಾಗಿದ್ದ ಇಬ್ಬರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಸೊರಬ ತಾಲೂಕಿನ ಆನವಟ್ಟಿ ಗ್ರಾಮದ ಸಂಜಯ ಎಲ್. (33) ಹಾಗೂ ದಾವಣಗೆರೆ ಜಿಲ್ಲೆಯ ವಿನೋಬಾ ನಗರ ನಿವಾಸಿ ವಸಂತ ಕುಮಾರ್ (30) ಬಂಧಿತರು.3 ಲಕ್ಷ ರೂ. ಮೌಲ್ಯದ ಸರ, ಕಾರು, ಬೈಕನ್ನು ವಶಕ್ಕೆ ಪಡೆದಿದ್ದಾರೆ. ಅ.03ರ ಸಂಜೆ 04:35ರ ವೇಳೆ ಕುಂದಾಪುರ  ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಿಲ್ದಾಣದಿಂದ ಶಾಸ್ತ್ರಿ ಪಾರ್ಕ್‌ ಕಡೆಗೆ ಸರ್ವಿಸ್‌ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಬಿ.ಎಸ್‌.ಎನ್‌.ಎಲ್‌ ಕಛೇರಿ ಬಳಿ ಹಿಂದಿನಿಂದ ಮೋಟಾರ್‌ ಸೈಕಲ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅವರ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಸುಲಿಗೆ ಮಾಡಿಕೊಂಡು ಹೋಗಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖಾಧಿಕಾರಿಯಾದ ಪ್ರಭಾರ ಪೊಲೀಸ್‌ ನಿರೀಕ್ಷಕ ಜಯರಾಮ ಡಿ. ಗೌಡ ಅವರು ತನಿಖೆಯನ್ನು ಕೈಗೊಂಡು, ವಿವಿಧ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಆಧುನಿಕ ತಂತ್ರಜ್ಞಾನದ ಈ ಯುಗದಲ್ಲಿ ಅದೆಷ್ಟೇ ಆವಿಷ್ಕಾರ, ಸಂಶೋಧನೆಗಳು ನಡೆದರೂ ರಕ್ತವನ್ನು ಮಾತ್ರ ಸಂಶೋಧಿಸಲು ಈವರೆಗೆ ಸಾಧ್ಯವಿಲ್ಲ. ರಕ್ತಕ್ಕೆ ರಕ್ತವೇ ಪರ್ಯಾಯ ಹೊರತು ಬೇರೊಂದಿಲ್ಲ ಎಂದು ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಎನ್. ಸದಾಶಿವ ನಾಯಕ್ ಹೇಳಿದರು. ಅವರು ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನ ಗಂಗೊಳ್ಳಿ ಇವರ ಆಶ್ರಯದಲ್ಲಿ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ರಕ್ತನಿಧಿ ಕೇಂದ್ರ ಕುಂದಾಪುರ ಇವರ ಸಹಯೋಗದೊಂದಿಗೆ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರ ಜನ್ಮ ದಿನೋತ್ಸವದ ಅಂಗವಾಗಿ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ವಿದ್ಯಾಧಿರಾಜ ಸಭಾಗೃಹದಲ್ಲಿ ಜರಗಿದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ಸ್ವಯಂಪ್ರೇರಿತ ರಕ್ತದಾನ ಮಾಡುವುದರಿಂದ ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಅಗತ್ಯವಿರುವ ರಕ್ತವನ್ನು ಪೂರೈಕೆ ಮಾಡಿ ರೋಗಿಯ ಪ್ರಾಣ ಉಳಿಸಲು ಸಹಕಾರಿಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಸ್ವಯಂಪ್ರೇರಿತ ರಕ್ತದಾನ ಮಾಡಿ ರೋಗಿಗಳ ಪ್ರಾಣ ಉಳಿಸುವ ಪುಣ್ಯದ ಕಾರ್ಯದಲ್ಲಿ ಕೈಜೋಡಿಸಬೇಕು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಮುಡಿಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ಮಂಗಳೂರು ವಿವಿ ಮಟ್ಟದ ಅಂತರ್ ಕಾಲೇಜು ಕುಸ್ತಿ ಸ್ಪರ್ಧೆಯ ಪುರುಷ ಹಾಗೂ ಮಹಿಳೆಯರ ಎರಡು ವಿಭಾಗದಲ್ಲಿ 11 ಚಿನ್ನ, 07 ಬೆಳ್ಳಿ ಹಾಗೂ 02 ಕಂಚಿನ ಪದಕದೊಂದಿಗೆ ಮೂಡುಬಿದಿರೆಯ ಆಳ್ವಾಸ್ ಕುಸ್ತಿಪಟುಗಳು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡರು. ಫಲಿತಾಂಶ:ಪುರುಷರ ವಿಭಾಗದಲ್ಲಿ:ದೇವರಾಜು – 61 ಕೆಜಿ ವಿಭಾಗದಲ್ಲಿ (ದ್ವಿತೀಯ), ನಿಖಿಲ್ – 65 ಕೆಜಿ ವಿಭಾಗದಲ್ಲಿ (ಪ್ರಥಮ), ರಾಕೇಶ್ – 70 ಕೆಜಿ ವಿಭಾಗದಲ್ಲಿ (ಪ್ರಥಮ), ಗುಡ್ಡಪ್ಪ – 74 ಕೆಜಿ ವಿಭಾಗದಲ್ಲಿ (ಪ್ರಥಮ), ಶಿವರಾಜು – 79 ಕೆಜಿ ವಿಭಾಗದಲ್ಲಿ (ಪ್ರಥಮ), ಕೃಷ್ಣ – 86 ಕೆಜಿ ವಿಭಾಗದಲ್ಲಿ (ದ್ವಿತೀಯ), ರೇವಣ್ ಕುಮಾರ್ – 86 ಕೆಜಿ ವಿಭಾಗದಲ್ಲಿ (ತೃತೀಯ), ಪ್ರಜ್ವಲ್ – 92 ಕೆಜಿ ವಿಭಾಗದಲ್ಲಿ (ಪ್ರಥಮ), ಕಾರ್ತಿಕ್ – 97 ಕೆಜಿ ವಿಭಾಗದಲ್ಲಿ (ಪ್ರಥಮ), ರಕ್ಷಿತ್ ರಾವ್ – 97+ ಕೆಜಿ ವಿಭಾಗದಲ್ಲಿ (ಪ್ರಥಮ) ಸ್ಥಾನ  ಪಡೆದರು.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಗವಾಯಿ ಮೇಲೆ ಶೂ ಎಸೆದ ಘಟನೆ ಖಂಡಿಸಿ ಭಾನುವಾರ ಸಂಜೆ ಸಹಬಾಳ್ವೆ ಸಂಘಟನೆ ಕುಂದಾಪುರ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ, ಕ್ಯಾಥೋಲಿಕ್ ಒಕ್ಕೂಟ, ಸೌಹಾರ್ದ ಕರ್ನಾಟಕ ಕುಂದಾಪುರ, ಸಿಐಟಿಯು ಕುಂದಾಪುರ ಸಹಯೋಗದಲ್ಲಿ ಬೃಹತ್ ಪಂಜಿನ ಮೆರವಣಿಗೆ ನಡೆಯಿತು. ಶೂ ಎಸೆದ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಆತನನ್ನು ಗಡೀಪಾರು ಮಾಡಬೇಕು. ದೇಶದ್ರೋಹದ ಷಡ್ಯಂತ್ರ ಪ್ರಕರಣ ದಾಖಲಿಸಬೇಕು. ಕೃತ್ಯದ ಹಿಂದಿರುವ ಷಡ್ಯಂತ್ರ ಬೇಧಿಸಬೇಕು ಎಂದು ಸಂಸ್ಥೆಗಳ ಮುಖಂಡರು ಆಗ್ರಹಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ದಾನಿಗಳ ಸಹಕಾರದೊಂದಿಗೆ ರೂಪಾಯಿ 60 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕೊರಗ ಕಾಲೋನಿಯ ಎಂಟು ಹೊಸ ಮನೆ ನಿರ್ಮಾಣಕ್ಕೆ ರೋಟರಿ ಕ್ಲಬ್ ಕೋಟ ಸಿಟಿ ವತಿಯಿಂದ ಸಹಾಯಧನ ಚೆಕ್ ವಿತರಣೆ ಕಾರ್ಯಕ್ರಮ ಕೊರಗರ ಕಾಲೋನಿಯಲ್ಲಿ ನಡೆಯಿತು. ರೋಟರಿ ಕ್ಲಬ್ ಕೋಟ ಸಿಟಿಯ ಅಧ್ಯಕ್ಷ ಪ್ರಕಾಶ್ ಹಂದಟ್ಟು ಅವರು ಮಾತನಾಡಿ, ಕೋಟತಟ್ಟು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಕೊರಗರ ಎಂಟು ಹೊಸ ಮನೆ ನಿರ್ಮಾಣ ಕಾರ್ಯ ಶ್ಲಾಘನೀಯ ನಮ್ಮ ರೋಟರಿ ಕ್ಲಬ್ ಕೋಟ ಸಿಟಿ ಸದಸ್ಯರ ಸಹಕಾರದೊಂದಿಗೆ ಇಂದು ಸಹಾಯ ಧನ ಚೆಕ್ ವಿತರಿಸುತ್ತಿರುವ ಬಗ್ಗೆ ಖುಷಿ ಇದೆ. ಇಲ್ಲಿಯ ಮೂಲ ನಿವಾಸಿಗಳಿಗೆ ಹೊಸ ಎಂಟು ಮನೆ ನಿರ್ಮಿಸಿ ಕೊಡುವ ಮೂಲಕ ಕೋಟತಟ್ಟು ಗ್ರಾಮ ಪಂಚಾಯತ್ ಇತರ ಗ್ರಾಮ ಪಂಚಾಯತ್‌ಗಳಿಗೆ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ಸತೀಶ್ ಕುಂದರ್ ಬಾರಿಕೆರೆ ಅವರು ಮಾತನಾಡಿ, ತಳಮಟ್ಟದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಗುಜರಾತ್‌ನ ಸೂರತ್‌ನಲ್ಲಿ ನಡೆದ 4ನೇ ರಾಷ್ಟ್ರೀಯ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ತಾಲೂಕಿನ ಗೋಳಿಬೇರು ಗ್ರಾಮದ ಗೋಕುಲ್ ಪೂಜಾರಿ ಅವರು 4*400 ಮೀಟರ್ ರಿಲೇಯಲ್ಲಿ ಚಿನ್ನ, ಶಾಟ್‌ಪುಟ್‌, 400 ಮೀಟರ್, 200 ಮೀಟರ್ ಓಟ ಮತ್ತು 4*100 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕ ವಿಜೇತರಾಗಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಬ್ರಹ್ಮಾವರ ರುಡ್‌ಸೆಟ್ ಆಸರೆ ಸಂಘಟನೆ ಇದರ 20ನೇ ವರ್ಷದ ಸವಿ ನೆನಪಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ರುಡ್‌ಸೆಟ್ ಕ್ರಾಸ್ ಬಳಿ ನೂತನವಾಗಿ ನಿರ್ಮಿಸಿರುವ ಬಸ್ಸು ತಂಗುದಾಣದ ಲೋಕಾರ್ಪಣೆಯನ್ನು ಮಾನ್ಯ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್‌ಪಾಲ್‌ ಎ. ಸುವರ್ಣ ಅವರು ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು. ಉಡುಪಿ ಕೆನರಾ ಬ್ಯಾಂಕಿನ ಮಹಾಪ್ರಬಂಧಕರಾಗಿರುವ ಗಂಗಾಧರ್ ಎಚ್ ಕೆ. ಅವರು ಬಸ್ಸು ತಂಗುದಾಣದ ಶಿಲಾಫಲಕ ಅನಾವರಣಗೊಳಿಸಿ, ನಂತರ ನಡೆದ ಸಭೆಯಲ್ಲಿ ಮಾತನಾಡಿ, ಕೆನರಾ ಬ್ಯಾಂಕಿನ ಮಹಾಪ್ರಬಂಧಕರಾಗಿರುವ ಗಂಗಾಧರ್ ಎಚ್.ಕೆ. ಆಸರೆ ಸಂಘಟನೆಯ ಈ ಸಮಾಜಮುಖಿ ಕಾರ್ಯ ಮಾದರಿಯಾಗಿದೆ. ಇದೇ ರೀತಿ ಅನೇಕ ಸಮಾಜ ಮುಖಿ ಕಾರ್ಯಗಳನ್ನು ಸಂಘಟನೆಯಿಂದ ನಡೆಸುವಂತಾಗಲಿ,ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳುವ ಸಮಾಜಮುಖಿ ಕಾರ್ಯಕ್ರಮಗಳಿಗೆ ಕೆನರಾ ಬ್ಯಾಂಕ್ ಸದಾ ನಿಮ್ಮ ಜೊತೆಗೆ ಇರುತ್ತದೆ ಎಂದು ಸಭೆಯನ್ನು ಉದ್ದೇಶಿಸಿ ಮಾತುಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರಿಣಿ ಅಜಯ್ ರಾವ್ ಅಧ್ಯಕ್ಷರು ಆಸರೆ ಸಂಘಟನೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಉಪ ಮಹಾ ಪ್ರಬಂಧಕರಾಗಿರುವ ಮಹಾಮಾಯ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಹುಬ್ಬಳ್ಳಿಯ ಸೇಂಟ್ ಪೌಲ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ರಾಜ್ಯ ಮಟ್ಟದ 17 ವಯೋಮಿತಿಯ ಬಾಲಕ ಬಾಲಕಿಯರ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಆಳ್ವಾಸ್ ಶಾಲೆಯ ಕ್ರೀಡಾಪಟುಗಳು ಐದು ಚಿನ್ನ ಹಾಗೂ ಒಂದು ಬೆಳ್ಳಿ ಪದಕದೊಂದಿಗೆ ಒಟ್ಟು ಆರು ಪದಕಗಳನ್ನು ಪಡೆದು ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಪ್ರಶಸ್ತಿಯನ್ನು ಪಡೆಯುವಲ್ಲಿ ಮಹತ್ವದ ಕೊಡುಗೆ ನೀಡಿದರು.ಫಲಿತಾಂಶ:58 ಕೆಜಿ ವಿಭಾಗದಲ್ಲಿ – ಸ್ಪೂರ್ತಿ (ದ್ವಿತೀಯ), 77 ಕೆಜಿ ವಿಭಾಗದಲ್ಲಿ – ಪಾವನಿ ಜೆ ಆರ್ (ಪ್ರಥಮ) 56 ಕೆಜಿ ವಿಭಾಗದಲ್ಲಿ – ಪೃಥ್ವಿಕ್ (ಪ್ರಥಮ), 60 ಕೆಜಿ ವಿಭಾಗದಲ್ಲಿ –  ಸುರೇಶ್ ವೈ ಎಮ್ (ಪ್ರಥಮ), 65 ಕೆಜಿ ವಿಭಾಗದಲ್ಲಿ – ಹಜರೇಸಾಬ್ – (ಪ್ರಥಮ), 71 ಕೆಜಿ ವಿಭಾಗದಲ್ಲಿ – ಪ್ರಫುಲ್ ರಾಜೇಶ್ (ಪ್ರಥಮ)  ಸ್ಥಾನ ಪಡೆದರು.   ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರಮಟ್ಟದ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಆಳ್ವಾಸ್‌ನ ಐವರು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.   ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ಎಚ್‌ಐವಿ ಏಡ್ಸ್ ಜಾಗೃತಿ ಅಭಿಯಾನದ ಅಂಗವಾಗಿ ಮೂಡ್ಲಕಟ್ಟೆ ನರ್ಸಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ಫ್ಲ್ಯಾಶ್ ಮಾಬ್ ಮತ್ತು ಬೀದಿ ನಾಟಕವನ್ನು ನಡೆಸಿದರು. ಉಡುಪಿ ಜಿಲ್ಲಾಡಳಿತ ಸ್ಥಳೀಯ ಆರೋಗ್ಯ ಇಲಾಖೆಗಳು, ಭಾರತೀಯ ರೆಡ್ ಕ್ರಾಸ್, ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್‌ ಮತ್ತು ಸನ್ ರೈಸ ರೋಟರಿ ಕ್ಲಬ್ ಕುಂದಾಪುರ ಜಂಟಿಯಾಗಿ ಆಯೋಜಿಸಿದ್ದ ಈ ಕಾರ್ಯಕ್ರಮವು ಐಸಿಟಿಸಿ ಜಾಗೃತಿಯನ್ನು ತೀವ್ರಗೊಳಿಸುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮದಲ್ಲಿ ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಚಂದ್ರ ಮರಕಾಲ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾಕ್ಟರ್ ಪ್ರೇಮಾನಂದ ತಾಲೂಕು ಆರೋಗ್ಯ ಅಧಿಕಾರಿ, ಜಯಕರ ಶೆಟ್ಟಿ ಅಧ್ಯಕ್ಷರು ರೆಡ್ ಕ್ರಾಸ್ ಸೊಸೈಟಿ ಕುಂದಾಪುರ, ಗುರುರಾಜ ರೋಟರಿ ಕ್ಲಬ್ ಸನ್‌ ರೈಸ್ ಕುಂದಾಪುರ, ಡಾಕ್ಟರ್ ಕರುಣ ಆರೋಗ್ಯ ಅಧಿಕಾರಿ ಎ ಆರ್ ಟಿ ಕುಂದಾಪುರ, ಪ್ರಾಂಶುಪಾಲರು ಜೆನಿಫರ್ ಫ್ರೀಡ ಮೆನೆಜೆಸ್ ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ಕುಂದಾಪುರ, ಶ್ರೀಕಾಂತ್ ರಾವ್ ಸಹಾಯ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ. ಗಂಗೊಳ್ಳಿ: ವಿದ್ಯಾರ್ಥಿಗಳು ಪಿಯುಸಿ ನಂತರದ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಯಾವುದೇ ಕೋರ್ಸ್‌ಗಳನ್ನು ಸೇರುವ ಮುನ್ನ ಅದರ ಸಾಧಕ ಬಾದಕಗಳನ್ನು ತಿಳಿದುಕೊಂಡು ಸ್ವಯಂ ಆಸಕ್ತಿಯಿಂದ ಸೇರಿದಾಗಲೇ ಯಶಸ್ಸು ಸಾಧ್ಯವಾಗುತ್ತದೆ  ಎಂದು ತ್ರಿಷಾ ವಿದ್ಯಾ ಕಾಲೇಜಿನ ಕನ್ನಡ ಉಪನ್ಯಾಸಕ ಧೀರಜ್ ಬೆಳ್ಳಾರೆ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ, ಎಸ್‌ವಿ ಕಾಮರ್ಸ್ ಕ್ಲಬ್ ಗಂಗೊಳ್ಳಿ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಶೈಕ್ಷಣಿಕ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಥಾಮಸ್ ಪಿ.ಎ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ನಿರ್ಮಲಾ ಪೂಜಾರಿ ಶುಭ ಹಾರೈಸಿದರು. ವಿದ್ಯಾರ್ಥಿ ಪ್ರತಿನಿಧಿ ಸನ್ವಿತಾ ಎಂ. ಖಾರ್ವಿ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಸುಗುಣ ಆರ್. ಕೆ.  ಉಪಸ್ಥಿತರಿದ್ದರು. ಎಸ್‌. ವಿ ಕಾಮರ್ಸ್ ಕ್ಲಬ್ ಸಂಯೋಜಕ ನರೇಂದ್ರ ಎಸ್. ಗಂಗೊಳ್ಳಿ  ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕಿ ಸುಪ್ರೀತಾ ಆಚಾರ್ಯ ಪ್ರಾರ್ಥಿಸಿದರು. ಪ್ರಥ್ವಿ ಸ್ವಾಗತಿಸಿ, ಶ್ರಾವ್ಯ…

Read More