Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಕುಂದಾಪುರ ಪುರಸಭೆ ವ್ಯಾಪ್ತಿಯ ನಗರದ ಎಲ್ಲಾ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ರಿಂಗ್ ರೋಡ್ ಅಭಿವೃದ್ಧಿ ಕಾರ್ಯದ ಪ್ರಗತಿಯನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಅವರು ವೀಕ್ಷಿಸಿ ಕಾಮಗಾರಿಯ ಕೆಲವು ನ್ಯೂನ್ಯತೆಗಳ ಬಗ್ಗೆ ಸರಿಪಡಿಸಿಕೊಂಡು ಸಾರ್ವಜನಿಕರಿಗೆ ಶೀಘ್ರದಲ್ಲಿ ಉತ್ತಮ ರಿಂಗ್ ರೋಡ್ ಕಲ್ಪಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಶಾಸಕರು ಸೂಚಿಸಿದರು. ಈ ಸಂದರ್ಭದಲ್ಲಿ ಕುಂದಾಪುರ ಪುರಸಭಾ ಅಧ್ಯಕ್ಷ ಮೋಹನ್ ದಾಸ್ ಶೆಣೈ, ಉಪಾಧ್ಯಕ್ಷೆ ವನಿತಾ ಬಿಲ್ಲವ, ಪುರಸಭಾ ಮುಖ್ಯಾಧಿಕಾರಿ ಆನಂದ ಜಿ, ಪುರಸಭಾ ಸದಸ್ಯರಾದ ಸಂತೋಷ್ ಶೆಟ್ಟಿ, ಚಂದ್ರಶೇಖರ್ ಖಾರ್ವಿ, ಪಿಡಬ್ಲ್ಯೂಡಿ ಅಧಿಕಾರಿ ರಾಮಣ್ಣಗೌಡ, ಮೆಸ್ಕಾಂ ಅಧಿಕಾರಿ ವಿಜಯ್ ಕುಮಾರ್ ಶೆಟ್ಟಿ, ರಾಘವೇಂದ್ರ ಇನ್ನಿತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಪಂಚವರ್ಣ ಸಂಘಟನೆ ನಡೆಸುವ ಪ್ರತಿ ಸಮಾಜಮುಖಿ ಕಾರ್ಯವು ಗ್ರಾಮದ ಪ್ರತಿಯೊಂದು ಸಂಘಟನೆಗೂ ಮಾದರಿಯಾಗಬೇಕು ಈ ಮೂಲಕ ಗ್ರಾಮ ಸುಭಿಕ್ಷೆಯಾಗಲಿದೆ ಎಂದು ಬ್ರಹ್ಮಾವರ ತಾಲೂಕು ದಂಡಾಧಿಕಾರಿ ಶ್ರೀಕಾಂತ್ ಎಸ್ ಹೆಗ್ಡೆ ಹೇಳಿದರು. ಅವರು ಮಣೂರು ಪಡುಕರೆ ಆನಂದ್ ಸಿ. ಕುಂದರ್ ಮನೆಯಂಗಳದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಪ್ರತಿವರ್ಷ ನಡೆಸಲ್ಪಡುವ ನವೆಂಬರ್ 16ರಂದು ಕೋಟದ ಗಾಂಧಿ ಮೈದಾನದಲ್ಲಿ ನಡೆಯಲಿರುವ ಕನ್ನಡ ರಾಜ್ಯೋತ್ಸವ ಸಂಭ್ರಮದ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಸದ್ಭಾವನಾ – 2025 ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿ, ರಾಜ್ಯೋತ್ಸವ ಕಾರ್ಯಕ್ರಮಗಳು ಕನ್ನಡ ನಾಡುನುಡಿಯ ಧ್ವನಿಯಾಗಲಿ ಎಂದು ಹಾರೈಸಿದರು. ಬಿಡುಗಡೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಪಂಚವರ್ಣ ಗೌರವ ಸಲಹೆಗಾರರಾದ ಆನಂದ್ ಸಿ. ಕುಂದರ್ ಮಾತನಾಡಿ, ಸ್ವಚ್ಛತಾ ಅಭಿಯಾನ ಪರಿಸರಸ್ನೇಹಿ ಕಾರ್ಯಕ್ರಮಗಳಿಂದ ಮನೆಮಾತಾದ ಪಂಚವರ್ಣ ಸಂಘಟನೆ ಸಮಾಜದ ಮುಖ್ಯವಾಹಿನಿಯಲ್ಲಿರುವ ಸಾಧಕರನ್ನು ಪ್ರಶಸ್ತಿ ನೀಡುತ್ತಾ ಬಂದಿರುವುದು ಶ್ಲಾಘನೀಯ ಕಾರ್ಯ. ಅದರಲ್ಲೂ ವಿಜಯಲಕ್ಷ್ಮಿ ಶಿಬರೂರು ಎಂಬ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಯಡಾಡಿ-ಮತ್ಯಾಡಿಯಲ್ಲಿನ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ವಿದ್ಯಾರಣ್ಯ ಕ್ಯಾಂಪಸ್ ನಲ್ಲಿ ಬುಧವಾರ ಹಾಸ್ಟೆಲ್ ಮಕ್ಕಳಿಗಾಗಿ ದೀಪಾವಳಿಯನ್ನು ಬಹಳ ಅದ್ಧೂರಿಯಾಗಿ ಹಾಗೂ ಶಾಸ್ತ್ರೋಕ್ತಬದ್ಧವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್‌ನ ಪರಮೇಶ್ವರ್ ಮಾತನಾಡಿ “ಅಕ್ಷರವೆನ್ನುವುದು ದೀಪವಿದ್ದಂತೆ. ಈ ಅಕ್ಷರವೆನ್ನುವ ಜ್ಞಾನದ ಬೆಳಕನ್ನು ಸುಜ್ಞಾನ ಕಾಲೇಜು ಮಕ್ಕಳ ಮನಸ್ಸಿನಲ್ಲಿ ಪಸರಿಸುತ್ತಿದೆ. ಸುಜ್ಞಾನ ಸಂಸ್ಥೆಯು ಉತ್ತಮ ಶಿಕ್ಷಣವನ್ನು ನೀಡುತ್ತಾ ಮಕ್ಕಳ ಮನಸ್ಸಿನಲ್ಲಿ ಸದ್ವಿಚಾರಗಳನ್ನು ಬಿತ್ತುತ್ತಿದೆ ಎಂದರು. ಅತಿಥಿಯಾಗಿದ್ದ ಉದ್ಯಮಿ ಕಿಶನ್ ಹೆಗ್ಡೆ ಕೊಳ್ಕೆಬೈಲು ಮಾತನಾಡಿ, “ವಿದ್ಯೆ ಕಲಿಸಿದ ಗುರು ಹಾಗೂ ಜನ್ಮ ನೀಡಿದವರನ್ನು ಎಂದಿಗೂ ಮರೆಯಬಾರದು. ಹಾಗೆಯೇ, ಕೀಳರಿಮೆಯನ್ನಾಗಲಿ ಇಲ್ಲವೆ ಅತಿಯಾದ ಆತ್ಮವಿಶ್ವಾಸವನ್ನಾಗಲಿ ಬೆಳೆಸಿಕೊಳ್ಳಬಾರದು. ಮಾನವೀಯ ಮೌಲ್ಯಗಳ ಪಾಲನೆಗೆ ಬದ್ಧವಾಗಿರುವುದು ಮುಖ್ಯ” ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಮಾತನಾಡಿ, “ಮಕ್ಕಳಿಗೆ ಸಹಾಯವಾಗಲೆಂದು ಇಂತಹ ಕಾರ್ಯಕ್ರಮಗಳನ್ನುಸಂಸ್ಥೆಯು ನಿರಂತರವಾಗಿ ಆಯೋಜಿಸುತ್ತಾ ಬಂದಿದೆ. ಈ ಕಾರ್ಯಕ್ರಮಗಳು ಮಕ್ಕಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಹಬ್ಬದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ದೀಪಾವಳಿ ಹಬ್ಬದ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲ ಮಹಿಳಾ ಮೋರ್ಚಾದ ವತಿಯಿಂದ ವಿಶೇಷ ಗೋ ಪೂಜೆ ಕಾರ್ಯಕ್ರಮವು ಕೋಟೇಶ್ವರದ ಹಾಲಾಡಿ ರಸ್ತೆಯಲ್ಲಿರುವ ರಾಘವೇಂದ್ರ ಭಟ್ಟರ ನಿವಾಸದಲ್ಲಿ ಸಕಲ ವಿಧಿ ವಿಧಾನಗಳ ಮೂಲಕ ಬುಧವಾರ ಆಯೋಜಿಸಲಾಗಿದೆ. ಗೋ ಪೂಜಾ ಕಾರ್ಯಕ್ರಮದಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಭಾಗಿಯಾಗಿ ಮಾತನಾಡಿ, ಕೃಷಿಕರ ಜೀವನಾಧಾರ ಗೋವು ಮತ್ತು ಗೋವಿನ ಉತ್ಪನ್ನಗಳು. ಜೀವಜಲ ನೀರು ನಮಗೆಷ್ಟು ಅಗತ್ಯವೇ ಅಂತೆಯೇ ಗೋವಿನ ಉತ್ಪನ್ನಗಳೂ ಕೂಡ ನಮ್ಮ ಜೀವನಕ್ಕೆ ಅಗತ್ಯವಾಗಿದೆ. ದಿನನಿತ್ಯ ನಮ್ಮ ಕಣ್ಣಿಗೆ ಕಾಣುವ ದೇವರೆಂದರೆ ಹಸು. ಹಸುವನ್ನು ಭೂಮಿ ತಾಯಿ, ಸಕಲ ದೇವರ ಆವಾಸ ಸ್ಥಾನ ಎಂಬ ನಂಬಿಕೆಯೂ ಇದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸೌರಭಿ ಪೈ ವಹಿಸಿದ್ದರು. ಸದ್ರಿ ಈ ಕಾರ್ಯಕ್ರಮದಲ್ಲಿ ಕುಂದಾಪುರ ಬಿಜೆಪಿ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ, ಕುಂದಾಪುರ ಮಂಡಲ ನಿಕಟ ಪೂರ್ವ ಅಧ್ಯಕ್ಷ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಬಾಂಡ್ಯ ಎಜುಕೇಶನ್ ಟ್ರಸ್ಟ್ ನ ಜಂಟಿ ಮ್ಯಾನೇಜಿಂಗ್ ಟ್ರಸ್ಟಿ ಅನುಪಮಾ ಎಸ್. ಶೆಟ್ಟಿ ಅವರು ದೀಪವನ್ನು ಬೆಳಗುವ ಮೂಲಕ ದೀಪಾವಳಿ ಹಬ್ಬವನ್ನು ವಿದ್ಯಾ ಸಂಸ್ಥೆಯ ಆವರಣದಲ್ಲಿ ಆಚರಿಸಿ ಮಾತನಾಡಿ, ಕತ್ತಲಿನಿಂದ ಬೆಳಕಿನೆಡೆಗೆ ಸಾಗುತ್ತಾ, ಅಂಧಕಾರದಿಂದ ಜ್ಞಾನದ ಕಡೆಗೆ ನಮ್ಮ ಜೀವನ ಕ್ರಮವನ್ನು ಹೊತ್ತು ನಡೆಯಬೇಕು. ದೀಪಾವಳಿ ಹಬ್ಬವು ನಮ್ಮ ದೇಶೀಯ ಸಂಸ್ಕೃತಿಯನ್ನು ಅರ್ಥಪೂರ್ಣವಾಗಿ ಬಿಂಬಿಸಿದ ಹಬ್ಬವಾಗಿದೆ. ಸುಸಂಸ್ಕೃತಿಯ ಜೀವನ ಕ್ರಮಕ್ಕಾಗಿ ನಾವೆಲ್ಲರೂ ಹಣತೆಯನ್ನು ಹಚ್ಚಿ ನಮ್ಮ ಒಳಗಿನ ಕತ್ತಲನ್ನು ದೂರ ಮಾಡೋಣ ಎಂದರು. ಗುರುಕುಲ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲರಾದ ಡಾ. ರೂಪಾಶಣೈ ಅವರು ದೀಪಾವಳಿ ಹಬ್ಬದ ವಿಶೇಷತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಶುಭ ಕೋರಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ವಿದ್ಯಾರ್ಥಿ ಪೃಥ್ವೀಶ್ ಎಸ್. ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ವೇಗವಾಗಿ ಹೋಗುತ್ತಿದ್ದ ಬೈಕ್‌ಗೆ ಅಡ್ಡ ಬಂದ ಚಿರತೆಯಿಂದಾಗಿ ನಿಯಂತ್ರಣ ತಪ್ಪಿದ ಬೈಕ್‌ ಸವಾರ ಗಂಭೀರ ಗಾಯಗೊಂಡರೆ, ಚಿರತೆ ಸ್ಥಳದಲ್ಲೇ ಮೃತಪಟ್ಟ ಘಟನೆ ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ನಂಚಾರಿನಲ್ಲಿ ಇತ್ತೀಚಿಗೆ ನಡೆದಿದೆ. ಗಾಯಗೊಂಡ ಬೈಕ್‌ ಸವಾರ ನಂಚಾರಿನ ಭಾಸ್ಕ‌ರ್ ಶೆಟ್ಟಿ ಎಂದು ಗುರುತಿಸಲಾಗಿದೆ. ಭಾಸ್ಕರ್ ಶೆಟ್ಟಿ ರಾತ್ರಿ ತನ್ನ ಬೈಕ್ ನಲ್ಲಿ ಮನೆಗ್ಡೆ ಬರುತ್ತಿದ್ದ ವೇಳೆ ಒಮ್ಮೆಲೇ ಚಿರತೆಯೊಂದು ಅಡ್ಡ ಬಂದ ಪರಿಣಾಮ ಸವಾರ ನಿಯಂತ್ರಣ ತಪ್ಪಿ ಚಿರತೆಗೆ ಡಿಕ್ಕಿ ಹೊಡೆದು ಬೈಕ್ ಪಲ್ಟಿಯಾಗಿದೆ. ಡಿಕ್ಕಿಯ ರಭಸಕ್ಕೆ ಚಿರತೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್‌ ಸವಾರ ಗಂಭೀರ ಗಾಯಗೊಂಡಿದ್ದು ಅವರನ್ನು ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿರುತ್ತಾರೆ. ಹೆಬ್ರಿ ಅರಣ್ಯ ಇಲಾಖೆಯವರು ಸ್ಥಳಕ್ಕಾಗಮಿಸಿ ಮೃತಪಟ್ಟ ಚಿರತೆಯನ್ನು ಪರಿಶೀಲಿಸಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಅಳಿವುದು ಕಾಯ, ಉಳಿಯುವುದು ಕೀರ್ತಿ. ಸಿಕ್ಕ ಕಿರು ಅವಧಿಯಲ್ಲಿಯೇ ಸಮಾಜಕ್ಕೆ ಅಗಾಧ ಕೊಡುಗೆ ನೀಡಿ ಇಹಲೋಕ ತ್ಯಜಿಸಿ ಅಮರನಾದ ಶ್ರೀನಿಧಿ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ಅಸಾಧಾರಣ ವ್ಯಕ್ತಿತ್ವ ತೋರಿದವರು. ಅವಸರವಸರವಾಗಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಾ ಅವಸರವಸರವಾಗಿಯೇ ಬದುಕಿನಿಂದ ನಿರ್ಗಮಿಸಿದ್ದು ಸಮಾಜಕ್ಕೆ ದೊಡ್ಡ ನಷ್ಟ ಎಂದು ಮಾಜಿ ಅಸಿಸ್ಟೆಂಟ್ ಗವರ್ನರ್‌ ರೊ. ಚಂದ್ರಶೇಖರ ಮೆಂಡನ್ ಪುಷ್ಪನಮನ ಸಲ್ಲಿಸಿ ಸಂಸ್ಮರಣಾ ನುಡಿಗಳನ್ನಾಡಿದರು. ಅವರು ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ, ರೋಟರಿ ಕ್ಲಬ್ ಕೋಟ ಸಿಟಿ, ಆನ್ಸ್ ಕ್ಲಬ್ ಕೋಟ ಸಿಟಿ ಹಾಗೂ ಮಹಂಕಾಳಿ ಫ್ರೆಂಡ್ಸ್ ಕೊರವಡಿ ಇವರ ಸಂಯುಕ್ತ ಆಶ್ರಯದಲ್ಲಿ ʼಸ್ಮೃತಿಗಳಲ್ಲಿ ಶ್ರೀನಿಧಿ’ ಶ್ರೀನಿಧಿ ಉಪಾಧ್ಯ ಸಂಸ್ಮರಣೆಯಲ್ಲಿ ರೋಟರಿ ಕ್ಲಬ್ ಮಾಜಿ ಸಹಾಯಕ ಗವರ್ನರ್ ಚಂದ್ರಶೇಖರ್ ಮೆಂಡನ್ ಮೃತರ ಸಮಾಜಿಕ ಕಾರ್ಯಗಳನ್ನು ಸ್ಮರಿಸಿದರು. ಭಗವಂತನ ಸೇವೆಗಾಗಿ ಮಂತ್ರಾಲಯ ಕ್ಷೇತ್ರ ಸಂದರ್ಶನ ಮಾಡಿ, ಸ್ನೇಹಿತ ಬಂಧು ಬಳಗದವನ್ನು ಮಾತನ್ನಾಡಿಸುತ್ತಿರುವಾಗಲೇ ಭಂಗವಂತನಲ್ಲಿ ಐಕ್ಯರಾದ ಶ್ರೀನಿಧಿ ದೇವನಿಗೆ ಪ್ರಿಯರಾದವರು.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಗ್ರಾಮೀಣ ಭಾಗದಲ್ಲಿ ಕಬಡ್ಡಿಯಲ್ಲಿ ಪಾಲ್ಗೊಂಡು ಅಷ್ಟಕ್ಕೇ ಸುಮ್ಮನಾಗಬೇಡಿ ಧೈರ್ಯ ಮತ್ತು ಛಲದಿಂದ ಮುನ್ನುಗ್ಗಿ. ರಾಜ್ಯ ರಾಷ್ಟ್ರ ಮಟ್ಟದಲ್ಲೂ ಹೆಸರು ಮಾಡಿ ಎಂದು ಕಬ್ಬಡಿ ಖ್ಯಾತಿಯ ಸಚಿನ್ ಸುವರ್ಣ ಅಭಿಪ್ರಾಯಿಸಿದರು. ಅವರು ಪದವಿ ಪೂರ್ವ ಶಿಕ್ಷಣ ಇಲಾಖೆ ಉಡುಪಿ ಹಾಗೂ ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಇವರ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಬಾಲಕ ಬಾಲಕಿಯರ ಕಬ್ಬಡಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಕ್ರೀಡಾ ಮೀಸಲಾತಿಯನ್ನು ಬಳಸಿಕೊಂಡು ಉದ್ಯೋಗ ಪಡೆಯುವಂತೆ ಪ್ರೇರೆಪಿಸಿದರು. ಪದವಿ ಪೂರ್ವ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಜೀವನ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನತಾ ವಿದ್ಯಾ ಸಂಸ್ಥೆ ಅನೇಕ ಕ್ರೀಡಾ ಪ್ರತಿಭೆಗಳಿಗೆ ಅವಕಾಶ ನೀಡಿದೆ. ಆ ಮೂಲಕ ಜನತಾ ಕಾಲೇಜು ರಾಜ್ಯ ರಾಷ್ಟ್ರ ಮಟ್ಟದಲ್ಲಿ ತನ್ನದೇ ಆದ ಹೆಜ್ಜೆ ಗುರುತು ಮೂಡಿಸಿದೆ ಎಂದರು. ಕಾರ್ಯಕ್ರಮದಲ್ಲಿ ಕ್ರೀಡಾಪಟು ಸಚಿನ್ ಸುವರ್ಣ ರನ್ನು ಸನ್ಮಾನಿಸಲಾಯಿತು. ಕ್ರೀಡಾ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550 ವರ್ಷಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾದ 550 ದಿನಗಳ ಶ್ರೀ ರಾಮನಾಮ ಜಪ ಅಭಿಯಾನದ ಅಂಗವಾಗಿ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಗಂಗಾರಾಮ: ಜಪ ಕೇಂದ್ರದಲ್ಲಿ ರಾಮನಾಮ ಜಪ ಅಭಿಯಾನ 550 ದಿನ ಪೂರ್ಣಗೊಂಡ ಹಿನ್ನಲೆಯಲ್ಲಿ ಶ್ರೀರಾಮ ನಗರೋತ್ಸವ ಸಮಾರಂಭ ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಶ್ರೀ ರಾಮ ನಾಮ ಮಹಾ ಜಪ ಅಭಿಯಾನ ನಡೆಯಿತು. ಮಧ್ಯಾಹ್ನ ಪೂಜೆ, ಸಮಾರಾಧನೆ, ಸಂಜೆ ಶ್ರೀರಾಮ ನಗರೋತ್ಸವ ನಡೆಯಿತು. ದೇವಸ್ಥಾನದಿಂದ ಹೊರಟ ದೇವರ ನಗರೋತ್ಸವ ಪುರಮೆರವಣಿಗೆ ಬಂದರು ಪೋರ್ಟ್ ಆಫೀಸಿನವರೆಗೆ ಸಾಗಿ ಮರಳಿ ಮುಖ್ಯರಸ್ತೆ ಮೂಲಕ ಎಸ್.ವಿ. ಜ್ಯೂನಿಯರ್ ಕಾಲೇಜಿವರೆಗೆ ತೆರಳಿ ದೇವಸ್ಥಾನದ ಬಳಿ ಸಮಾಪನಗೊಂಡಿತು. ರಾತ್ರಿ ದೇವರಿಗೆ ದೀಪಾರಾಧನೆ, ವಿಶೇಷ ಪೂಜೆ, 108 ರಾಮನಾಮ ಜಪ ಪಠಣ ನಡೆದು ಶ್ರೀ ರಾಮ ದೇವರಿಗೆ ಮಹಾಮಂಗಳಾರತಿ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ಎಸ್. ವೆಂಕಟರಮಣ ಆಚಾರ್ಯ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಕೇಂದ್ರ ಸರ್ಕಾರದ ವತಿಯಿಂದ ಗರ್ಭಿಣಿ / ಬಾಣಂತಿ ಮಹಿಳೆಯರಿಗಾಗಿ ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯಡಿ ಮೊದಲ ಪ್ರಸವದ ಗರ್ಭಿಣಿ/ ಬಾಣಂತಿ ಮಹಿಳೆಯರಿಗೆ 5000 ರೂ.ಗಳ ಸಹಾಯಧನ ಲಭ್ಯವಿದ್ದು, ಮೊದಲ ಪ್ರಸವದ ಗರ್ಭಿಣಿಯು ಎಲ್.ಎಂ.ಪಿ ದಿನಾಂಕದಿಂದ 150 ದಿನಗಳ ಒಳಗೆ ಹತ್ತಿರದ ಅಂಗನವಾಡಿ ಕೇಂದ್ರದಲ್ಲಿ ಮೊದಲನೇ ಕಂತಿನ ಅರ್ಜಿಯನ್ನು ನೋಂದಾಯಿಸಬೇಕು ಹಾಗೂ ಎರಡನೇ ಕಂತಿನಲ್ಲಿ ಮಗುವಿನ ಜನನದ ನೋಂದಣಿ ಮತ್ತು 3 ನೇ ಚುಚ್ಚುಮದ್ದು ಪೂರ್ಣಗೊಂಡ ಬಳಿಕ ಅರ್ಜಿಯನ್ನು ನೋಂದಾಯಿಸಬಹುದಾಗಿದೆ. ಮೊದಲನೆ ಕಂತಿನಲ್ಲಿ ರೂ.3000 ಹಾಗೂ ಎರಡನೇ ಕಂತಿನಲ್ಲಿ ರೂ. 2000 ನ್ನು (ಮಗುವಿನ ಜನನದ ನಂತರ 3 ನೇ ಚುಚ್ಚುಮದ್ದು ಪೂರ್ಣಗೊಂಡ ನಂತರ) ಫಲಾನುಭವಿಯ ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ (ಡಿ.ಬಿ.ಟಿ) ಮೂಲಕ ವರ್ಗಾಯಿಸಲಾಗುವುದು. 2 ನೇ ಪ್ರಸವದ ಬಾಣಂತಿ ಮಹಿಳೆಯರಿಗೆ ಹೆಣ್ಣು ಮಗು ಜನಿಸಿದಲ್ಲಿ ರೂ. 6000 ಸಹಾಯಧನ ದೊರೆಯಲಿದ್ದು, ಜನನದ ನಂತರ ಒಂದನೇ ಕಂತಿನಲ್ಲಿ ನೇರ ನಗದು ವರ್ಗಾವಣೆ…

Read More