Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಉಡುಪಿ: ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಗೆ ಸಹಾಯಧನ ಸೌಲಭ್ಯ
    ಉಡುಪಿ ಜಿಲ್ಲೆ

    ಉಡುಪಿ: ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಗೆ ಸಹಾಯಧನ ಸೌಲಭ್ಯ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಉಡುಪಿ:
    ಕೇಂದ್ರ ಸರ್ಕಾರದ ವತಿಯಿಂದ ಗರ್ಭಿಣಿ / ಬಾಣಂತಿ ಮಹಿಳೆಯರಿಗಾಗಿ ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯಡಿ ಮೊದಲ ಪ್ರಸವದ ಗರ್ಭಿಣಿ/ ಬಾಣಂತಿ ಮಹಿಳೆಯರಿಗೆ 5000 ರೂ.ಗಳ ಸಹಾಯಧನ ಲಭ್ಯವಿದ್ದು, ಮೊದಲ ಪ್ರಸವದ ಗರ್ಭಿಣಿಯು ಎಲ್.ಎಂ.ಪಿ ದಿನಾಂಕದಿಂದ 150 ದಿನಗಳ ಒಳಗೆ ಹತ್ತಿರದ ಅಂಗನವಾಡಿ ಕೇಂದ್ರದಲ್ಲಿ ಮೊದಲನೇ ಕಂತಿನ ಅರ್ಜಿಯನ್ನು ನೋಂದಾಯಿಸಬೇಕು ಹಾಗೂ ಎರಡನೇ ಕಂತಿನಲ್ಲಿ ಮಗುವಿನ ಜನನದ ನೋಂದಣಿ ಮತ್ತು 3 ನೇ ಚುಚ್ಚುಮದ್ದು ಪೂರ್ಣಗೊಂಡ ಬಳಿಕ ಅರ್ಜಿಯನ್ನು ನೋಂದಾಯಿಸಬಹುದಾಗಿದೆ.

    Click Here

    Call us

    Click Here

    ಮೊದಲನೆ ಕಂತಿನಲ್ಲಿ ರೂ.3000 ಹಾಗೂ ಎರಡನೇ ಕಂತಿನಲ್ಲಿ ರೂ. 2000 ನ್ನು (ಮಗುವಿನ ಜನನದ ನಂತರ 3 ನೇ ಚುಚ್ಚುಮದ್ದು ಪೂರ್ಣಗೊಂಡ ನಂತರ) ಫಲಾನುಭವಿಯ ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ (ಡಿ.ಬಿ.ಟಿ) ಮೂಲಕ ವರ್ಗಾಯಿಸಲಾಗುವುದು.

    2 ನೇ ಪ್ರಸವದ ಬಾಣಂತಿ ಮಹಿಳೆಯರಿಗೆ ಹೆಣ್ಣು ಮಗು ಜನಿಸಿದಲ್ಲಿ ರೂ. 6000 ಸಹಾಯಧನ ದೊರೆಯಲಿದ್ದು, ಜನನದ ನಂತರ ಒಂದನೇ ಕಂತಿನಲ್ಲಿ ನೇರ ನಗದು ವರ್ಗಾವಣೆ (ಡಿ.ಬಿ.ಟಿ) ಮೂಲಕ ಫಲಾನುಭವಿಯ ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗೆ ವರ್ಗಾಹಿಸಲಾಗುವುದು (ಮಗು ಜನಿಸಿದ 270 ದಿನಗಳೊಳಗೆ ನೋಂದಾವಣೆಯಾಗಬೇಕು).

    ನೋಂದಣಿಗೆ ನಿಗಧಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿ, ತಾಯಿ ಮತ್ತು ಶಿಶು ರಕ್ಷಣಾ ಕಾರ್ಡ್ ಪ್ರತಿ, ಫಲಾನುಭವಿಯ ಆಧಾರ್ ಕಾರ್ಡ್ ಪ್ರತಿ, ಪಡಿತರ ಚೀಟಿ/ ಜಾತಿ ಮತ್ತು ಆದಾಯ ಪ್ರಮಾಣ ಪತ್ರ / ನರೇಗಾ ಕಾರ್ಡ್/ ಇ-ಶ್ರಮ್ ಕಾರ್ಡ್/ಆಯುಷ್ಮಾನ್ ಕಾರ್ಡ್ (ಯಾವುದಾದರೂ ಒಂದು ನಕಲು ಪ್ರತಿ, ಪೋಷಣಾ ಟ್ರ್ಯಾಕರ್‌ನಲ್ಲಿ ಫೇಸ್ ಅಥೆಂಟಿಕೇಷನ್, ಫಲಾನುಭವಿಯ ಬ್ಯಾಂಕ್ ಖಾತೆ (ಎನ್.ಪಿ.ಸಿ.ಐ ಮ್ಯಾಪಿಂಗ್ ಕಡ್ಡಾಯ) ಪ್ರತಿ ಕಡ್ಡಾಯವಾಗಿದ್ದು, ಹೆಚ್ಚಿನ ವಿವರಗಳಿಗೆ ಸಮೀಪದ ಅಂಗನವಾಡಿ ಕೇಂದ್ರದ ಅಂಗನವಾಡಿ ಕಾರ್ಯಕರ್ತೆ, ಮಹಿಳಾ ಮೇಲ್ವಿಚಾರಕಿ ಅಥವಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಉಡುಪಿ: ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಬಳಕೆ ಸಂಬಂಧ ಕೃಷಿ ಇಲಾಖೆ ಶಿಫಾರಸ್ಸು

    09/06/2026

    ಡಿಪ್ಲೋಮಾ ಪ್ರವೇಶಾತಿಗೆ ಅರ್ಜಿ ಆಹ್ವಾನ

    08/06/2026

    ಉಡುಪಿ: ಕಲಾತಂಡ ಮತ್ತು ಕಲಾವಿದರಿಂದ ಅರ್ಜಿ ಆಹ್ವಾನ

    08/06/2026
    Leave A Reply Cancel Reply

    8 + twenty =

    Call us

    Click Here

    Call us

    Call us

    Call us
    Highest Viewed Recently
    • ಪ್ರಕೃತಿಗೆ ಮರಳಿ ನೀಡದೆ ಪ್ರತಿಕ್ಷಣ ಬಳಸುತ್ತಿದ್ದೇವೆ: ಆರ್.ಕೆ. ನಾಯರ್
    • ಕೋಟೇಶ್ವರ: ಕಂಟೇನ‌ರ್ ಲಾರಿ ಹಾಗೂ ಬೈಕ್‌ ನಡುವೆ ಭೀಕರ ಅಪಘಾತ – ಬೈಕ್‌ ಸವಾರ ಸಾವು
    • ಸಾಸ್ತಾನ: ಬಿಲ್ಲವ ಯುವ ವೇದಿಕೆ ಪಾಂಡೇಶ್ವರ ನೋಟ್ ಬುಕ್ ವಿತರಣೆ, ಪ್ರತಿಭಾ ಪುರಸ್ಕಾರ ಸಮಾರಂಭ
    • ಕುಂದಾಪುರ ಶಾಸಕರ ಅಧಿಕಾರ ವೀಕೆಂದ್ರಿಕರಣ ವಿರೋಧಿ ಮನಸ್ಥಿತಿ: ಕೆ. ವಿಕಾಸ್ ಹೆಗ್ಡೆ
    • ಬೆಳ್ವೆ: ಕುಂದಾಪುರ ಶಾಸಕ ಹಾಗೂ ಸಂಸದರಿಂದ ಮಲ್ಟಿ ಪರ್ಪಸ್ ಸೆಂಟರ್ ವೀಕ್ಷಣೆ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.