ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ರಾಜ್ಯದಲ್ಲಿ ಸೆಪ್ಟೆಂಬರ್ 22ರಿಂದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಯಲಿದ್ದು, ಪ್ರತಿ ಮನೆಯಿಂದ ಮಾಹಿತಿ ಪಡೆಯಲು ಶಿಕ್ಷಕರು ಮನೆ ಭೇಟಿ ಆರಂಭಿಸಲಿದ್ದಾರೆ. ಈ ವೇಳೆ ಅಗತ್ಯ ದಾಖಲೆಗಳನ್ನು ನೀಡಿ 60 ಪ್ರಶ್ನೆಗಳಿಗೆ ಉತ್ತರಿಸಬೇಕಿದೆ. ಸಮೀಕ್ಷೆಗಾಗಿ ಬರುವವರಿಗೆ ನೀಡಬೇಕಾದ ದಾಖಲೆಗಳು ಹಾಗೂ ಉತ್ತರಿಸಬೇಕಾದ ಪ್ರಶ್ನೆಗಳ ಮಾಹಿತಿ ಇಲ್ಲಿದೆ. ಸಮೀಕ್ಷೆಗೆ ಬೇಕಾಗುವ ದಾಖಲಾತಿಗಳು: ಜಾತಿಗಣತಿಯ 60 ಪ್ರಶ್ನೆಗಳು: ಸೆಪ್ಟೆಂಬರ್ 22ರ ಸೋಮವಾರದಿಂದ ಪ್ರಾರಂಭವಾಗುವ ಗಣತಿ ಕಾರ್ಯದ ಈ ಮೇಲಿನ 60 ಪ್ರಶ್ನೆಗಳಿಗೆ ಉತ್ತರ ನೀಡಲು ತಯಾರಿ ಮಾಡಿಕೊಳ್ಳಿ. ಮನೆಯಲ್ಲಿ ಇರುವವರಿಗೆ ಈ ಮಾಹಿತಿಯನ್ನು ತಿಳಿಸಿಡಿ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಒಂದು ಗ್ರಾಮದಲ್ಲಿ ಎಲ್ಲರೂ ಆರೋಗ್ಯವಂತರಾಗಿದ್ದರೆ ಆ ಗ್ರಾಮ ಐಶ್ವರ್ಯವಂತ ಮಾದರಿ ಗ್ರಾಮ ಎನ್ನಬಹುದು. ಇಂದು ಆರೋಗ್ಯವೇ ಭಾಗ್ಯ ಈ ನಿಟ್ಟಿನಲ್ಲಿ ಈ ಆಸ್ಪತ್ರೆಯಲ್ಲಿನ ಉಚಿತ ಸೇವೆ, ಜೊತೆಯಲ್ಲಿ ಆರೋಗ್ಯದ ಅರಿವನ್ನು ಎಲ್ಲರೂ ಪಡೆಯುವಂತಾಗಲಿ ಎಂದು ಕಾಲ್ತೋಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಿಕ್ಕಯ್ಯ ಶೆಟ್ಟಿ ಹೇಳಿದರು. ಅವರು ಆಯುಷ್ ಇಲಾಖೆ ಉಡುಪಿ, ಗ್ರಾಮ ಪಂಚಾಯತ್ ಕಾಲ್ತೋಡು, ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಕಾಲ್ತೋಡು, ಆಯುಷ್ಮಾನ್ ಆರೋಗ್ಯ ಮಂದಿರ ಕಾಲ್ತೋಡು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ 10ನೇ ಆಯುರ್ವೇದ ದಿನಾಚರಣೆಯ ಪ್ರಯುಕ್ತ ಪೂರ್ವಭಾವಿಯಾಗಿ ಹಮ್ಮಿಕೊಂಡಿರುವ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ ಮತ್ತು ಎನ್.ಸಿ.ಡಿ ಕ್ಯಾಂಪ್ನ್ನು ಉದ್ಘಾಟಿಸಿ ಮಾತನಾಡಿದರು. ಅಲ್ಲದೆ ಹಿಂದೆ ನಮ್ಮ ಹಿರಿಯರು ಆಯುರ್ವೇದ ರೀತಿಯ ಜೀವನಶೈಲಿ ಆಹಾರ ಪದ್ಧತಿ ಪಾಲಿಸುತ್ತಿದ್ದರು. ಪರಿಣಾಮ ಕಾಯಿಲೆಗಳಿಲ್ಲದೆ ಆರೋಗ್ಯವಂತರಾಗಿ ನೂರು ಕಾಲ ಬಾಳುತ್ತಿದ್ದರು ಆದರೆ ಹಿಂದಿನ ಜೀವನಶೈಲಿ ಬದಲಾಗಿದೆ. ಮನುಷ್ಯ ನಾನಾ ಕಾಯಿಲೆಗಳಿಂದ ಬಳಲುತ್ತಿದ್ದಾನೆ. ಆಯುರ್ವೇದದ ಮಹತ್ವವನ್ನ ತಿಳಿದು ಅನುಸರಿಸಿ ಆರೋಗ್ಯವಂತರಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಪ್ರಸ್ತುತ ದಿನಗಳಲ್ಲಿ ಜಲಾಚರ ಜೀವಿಗಳಿಗೂ ಅಲ್ಲದೆ ಮನುಕುಲದ ಮೇಲೆ ಪ್ಲಾಸ್ಟಿಕ್ ತ್ಯಾಜ್ಯ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ರೀತಿಯ ಬದುಕು ಜೀವ ಸಂಕುಲದ ಮೇಲೆ ಮಾರಕ ಖಾಯಿಲೆಗಳನ್ನು ಸೃಷ್ಠಿಸುತ್ತಿದೆ. ಇದರ ಬಗ್ಗೆ ಜಾಗೃತರಾಗುವುದು ಅತ್ಯವಶ್ಯಕ ಎಂದು ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು. ಅವರು ಶನಿವಾರ ಜಿಲ್ಲಾಡಳಿತದ ನಿರ್ದೇಶನದಂತೆ ಕೋಟ ಗ್ರಾಮಪಂಚಾಯತ್, ಪಂಚವರ್ಣ ಯುವಕ ಮಂಡಲ, ಪಂಚವರ್ಣ ಮಹಿಳಾ ಮಂಡಲ ಕೋಟ, ಗೀತಾನಂದ ಫೌಂಡೇಶನ್ ಮಣೂರು, ಆಶ್ರಿತಾ ಶಿಕ್ಷಣ ಸಮೂಹ ಸಂಸ್ಥೆಗಳು ಕೋಟ, ಹಂದಟ್ಟು ಮಹಿಳ ಬಳಗ ಕೋಟ, ಮಣೂರು ಫ್ರೆಂಡ್ಸ್, ಜೆಸಿಐ ಕೋಟ ಸಿನಿಯರ್ ಲಿಜನ್ ಜಂಟಿ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಬೀಚ್ ಕ್ಲಿನಿಂಗ್ ಕಾರ್ಯಕ್ರಮದ ಅಂಗವಾಗಿ ಕೋಟದ ಮಣೂರು ಪಡುಕರೆ ಬೀಚ್ನಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಮುದ್ರದ ತಟದಲ್ಲಿ ಬಾರಿ ಪ್ರಮಾಣದಲ್ಲಿ ತ್ಯಾಜ್ಯಗಳು ದಡವನ್ನು ಸೇರುತ್ತಿದೆ. ಇದಕ್ಕೆ ಕಾರಣ ಮನುಷ್ಯ ಅತಿಯಾಗಿ ಬಳಸುವ ಪ್ಲಾಸ್ಟಿಕ್ ಪರಿಸರಕ್ಕೆ ಕಂಟಕವಾಗಿ ಪರಿಣಮಿಸಿದೆ, ಈ ಹಿನ್ನಲ್ಲೆಯಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ತಾಂತ್ರಿಕ ಸಮಸ್ಯೆಯಿಂದಾಗಿ ಬೋಟ್ ದಡಕ್ಕೆ ಅಪ್ಪಳಿಸಿ ಜಖಂಗೊಂಡಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ಬ್ರಹ್ಮಾವರ ತಾಲೂಕಿನ ಹಂಗಾರಕಟ್ಟೆ ಬಳಿ ಸಂಭವಿಸಿದೆ. ಸೆಪ್ಟೆಂಬರ್ 17ರಂದು ಬೆಳಗ್ಗೆ ಕೋಡಿ ಬೆಂಗ್ರೆ ಮೀನುಗಾರಿಕಾ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಮಧ್ಯಾಹ್ನ ಹಂಗಾರಕಟ್ಟೆ ಬಂದರು ಬಳಿ ಮೀನುಗಾರಿಕೆ ನಡೆಸುತ್ತಿದ್ದಾಗ ಬೋಟ್ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ಇಂಜಿನ್ ಸ್ಥಗಿತಗೊಂಡಿದೆ. ಎಷ್ಟೇ ಪ್ರಯತ್ನಿಸಿದರೂ ಇಂಜಿನ್ ಪುನಃ ಆರಂಭಗೊಂಡಿಲ್ಲ. ಈ ನಡುವೆ, ಬಿರುಗಾಳಿ ಮತ್ತು ಅಲೆಗಳ ರಭಸಕ್ಕೆ ಬೋಟ್ ಸಮುದ್ರ ತೀರಕ್ಕೆ ಬಂದು ಕೋಡಿ ಕನ್ಯಾನ ಗ್ರಾಮದ ಕೋಡಿ ಬಳಿ ದಡಕ್ಕೆ ಅಪ್ಪಳಿಸಿತು. ಬೋಟ್ನಲ್ಲಿದ್ದ ಐವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಬೋಟ್ ಮತ್ತು ಅದರಲ್ಲಿದ್ದ ಇತರೆ ಸಾಮಾಗ್ರಿಗಳು ಹಾನಿಗೊಳಗಾಗಿದ್ದು, ಸುಮಾರು 10 ಲಕ್ಷ ರೂ.ಗೂ ಹೆಚ್ಚು ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ. ಕೋಡಿಬೆಂಗ್ರೆ ನಿವಾಸಿ ಮಹೇಶ್ ಎಂಬುವರಿಗೆ ಸೇರಿದ ‘ಮಹಾಕಾಳಿ’ ಎಂಬ ಹೆಸರಿನ ಬೋಟ್ ಇದಾಗಿದೆ. ಈ ಘಟನೆ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: “ಪರಿಶುದ್ಧ ಆಹಾರ ಸೇವನೆ ಬದುಕಿನ ಎಲ್ಲ ಹಂತಗಳಲ್ಲೂ ವ್ಯಕ್ತಿಗಳ ಮೊದಲ ಆದ್ಯತೆಯಾಗಿರುತ್ತದೆ. ಇಂಥ ಆಹಾರ ಪದಾರ್ಥಗಳನ್ನು ಶ್ರಮವಹಿಸಿ ಜನರಿಗೆ ತಲುಪಿಸುವ ಗುರುತರ ಜವಾಬ್ದಾರಿಯಿಂದ ಕೃಷಿಕಾಯಕದ ಬಗ್ಗೆ ಮತ್ತು ರೈತರು ಅನುಸರಿಸುವ ಸುರಕ್ಷಿತ ಆಧುನಿಕ ವಿಧಾನಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿಶೇಷ ಆಸಕ್ತಿ ಇರಬೇಕು” ಎಂದು ಪ್ರಗತಿ ಪರ ಕೃಷಿಕ ರಾಜೇಂದ್ರ ಬೆಚ್ಚಳ್ಳಿ ಹೇಳಿದರು. ಅವರು ಕುಂದಾಪುರದ ಆರ್. ಎನ್. ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾದ ಭೋಜು ಪೂಜಾರಿ ಚಾರಿಟೇಬಲ್ ಟ್ರಸ್ಟ್ ರಿ., ಬೆಚ್ಚಳ್ಳಿಯ ಸಹಭಾಗಿತ್ವದಲ್ಲಿ ಆಯೋಜಿಸಿದ ಕೃಷಿ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ನವೀನ ಕುಮಾರ ಶೆಟ್ಟಿ ಅವರು ಮಾತನಾಡಿ, ಕೃಷಿಯನ್ನು ವೃತ್ತಿಯನ್ನಾಗಿ ಮಾಡಿಕೊಳ್ಳಲು ಎಲ್ಲರಿಗೂ ಸಾಧ್ಯವಿಲ್ಲದಿದ್ದರೂ ಜೀವನದ ಪ್ರಮುಖ ಭಾಗವಾಗಿಸಿ ಕಾಳಜಿ ತೋರಿಸಲು ಸಾಧ್ಯವಿದೆ ಎಂದು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ತಿಳಿಸಿದರು. ಕಾಲೇಜಿನ ವಿದ್ಯಾರ್ಥಿನಿಯರು ಕೃಷಿಗೀತೆಯನ್ನು ಹಾಡಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಮಾದಕ ವಸ್ತುಗಳ ಸೇವನೆಯು ಯುವಜನರ ಭವಿಷ್ಯದ ಜೀವನವನ್ನು ಹಾಳುಮಾಡುತ್ತದೆ. ಮಾದಕ ವ್ಯಸನಕ್ಕೆ ಒಳಗಾದ ಯುವಕರು ಅದರಿಂದ ಹೊರಬಂದು ಕ್ರಮಬದ್ಧ ಶಿಸ್ತು ಜೀವನ ನಡೆಸಲು ಅನುವು ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಹೇಳಿದರು. ಅವರು ಅಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಎನ್.ಸಿ.ಓ.ಆರ್.ಡಿ (Narco Co-ordination Center) ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಯುವಜನರು ಮಾದಕ ವಸ್ತುಗಳಿಗೆ ದಾಸರಾಗಿ ಶಿಕ್ಷಣದಿಂದ ವಂಚಿತರಾಗುವುದರೊAದಿಗೆ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಹೀಗಾಗದಂತೆ ನೋಡಿಕೊಳ್ಳಬೇಕು. ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಲು ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು. ಜಿಲ್ಲೆಯ ಎಲ್ಲಾ ಮೆಡಿಕಲ್ ಸ್ಟೋರ್ಗಳಲ್ಲಿ ಸಿ.ಸಿ.ಟಿ.ವಿ ಆಳವಡಿಸಿರುವ ಬಗ್ಗೆ ನಿಯಮಿತವಾಗಿ ಪರಿಶೀಲಿಸಬೇಕು. ಅಂಚೆ ಇಲಾಖೆಯ ಅಧಿಕಾರಿಗಳು ಹೊರ ದೇಶಗಳಿಂದ ಬರುವ ಪಾರ್ಸೆಲ್ ಹಾಗೂ ಕೊರಿಯರ್ಗಳ ಮೇಲೆ ನಿಗಾ ಇರಿಸಿ ಸಂಶಯಾಸ್ಪದ ಅಂಚೆಪತ್ರಗಳು ಕಂಡುಬಂದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ವಿಭಾಗ) ಮತ್ತು ಸರಸ್ವತಿ ಪದವಿ ಪೂರ್ವ ಕಾಲೇಜು ಗಂಗೊಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪದವಿ ಪೂರ್ವ ವಿಭಾಗದ ಬಾಲಕ – ಬಾಲಕಿಯರ ಟೆನ್ನಿ ಕೋಯಿಟ್ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಪವನ್ ರಿಷಾ, ಅಪೂರ್ವ ತಮ್ಮ ಅಪೂರ್ವ ಸಾಧನೆ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ – ಬೋಧಕೇತರ ಸಿಬ್ಬಂದಿ ವರ್ಗ ಶುಭ ಹಾರೈಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಾಲೇಜಿನಿಂದ ಮನೆಗೆ ತೆರಳಬೇಕಿದ್ದ ವಿದ್ಯಾರ್ಥಿಯೋರ್ವ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಯ ಮೃತದೇಹ ಗಂಗೊಳ್ಳಿ ದಾಕುಹಿತ್ಲು ನದಿ ತೀರದಲ್ಲಿ ಪತ್ತೆಯಾಗಿದೆ. ಹೆಮ್ಮಾಡಿ ಸಂತೋಷನಗರ ನಿವಾಸಿ ಲವೇಶ್ ಪೂಜಾರಿ ಇವರ ಪುತ್ರ, ಪ್ರಥಮ ಪಿಯುಸಿಯ ನಮೇಶ್ (17) ಮೃತ ವಿದ್ಯಾರ್ಥಿ. ಗುರುವಾರ ಬೆಳಿಗ್ಗೆ ಕಾಲೇಜಿಗೆ ತೆರಳಿದ್ದು ನಮೇಶ್ ಸಂಜೆ ನಾಲ್ಕು ಗಂಟೆಯವರೆಗೂ ಕಾಲೇಜಿನಲ್ಲಿದ್ದು ಆನಂತರ ಮನೆಗೆಂದು ತೆರಳಿದ್ದಾನೆ. ಆದರೆ ಸಂಜೆಯಾದರೂ ಮನೆಗೆ ಬರದಿದ್ದಾಗ ಹುಡುಕಾಟ ನಡೆಸಿದ್ದಾರೆ. ಬೈಕ್ನಲ್ಲಿ ತೆರಳಿದ್ದ ನಮೇಶ್ ಕನ್ನಡಕುದ್ರು ನದಿ ತೀರದಲ್ಲಿ ಬೈಕ್ ಹಾಗೂ ತನ್ನ ಕಾಲೇಜು ಬ್ಯಾಗ್ ಬಿಟ್ಟು ನಾಪತ್ತೆಯಾಗಿದ್ದನು. ಗುರುವಾರ ಸಂಜೆ ಹಾಗೂ ಶುಕ್ರವಾರ ಕೂಡ ಹುಟುಕಾಟ ಮುಂದುವರೆಸಿದ್ದು, ಅಗ್ನಿಶಾಮಕದಳ, ಗಂಗೊಳ್ಳಿಯ ಈಜುಪಟು ದಿನೇಶ್ ಖಾರ್ವಿ ಹಾಗೂ ಸ್ಥಳೀಯರು ನದಿಯಲ್ಲಿ ಸಂಜೆಯ ತನಕವೂ ಹುಟುಕಾಟ ನಡೆಸಿದ್ದರು. ಶನಿವಾರ ಬೆಳಿಗ್ಗೆ ಗಂಗೊಳ್ಳಿಯ ದಾಕುಹಿತ್ಲು ನದಿತೀರದಲ್ಲಿ ಹುಡುಕಾಟ ನಡೆಸಿದಾಗ ವಿದ್ಯಾರ್ಥಿಯ ಶವ ಪತ್ತೆಯಾಗಿದೆ.ವಿದ್ಯಾರ್ಥಿಯ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ಠಾಣೆಯಲ್ಲಿ ದೂರು ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ವೈಜ್ಞಾನಿಕ ಅಧ್ಯಯನಗಳ ಮೂಲಕ ಹೋಮಿಯೋಪಥಿಗೆ ಇನ್ನೂ ಹೆಚ್ಚಿನ ಮಾನ್ಯತೆ ಸಿಗಬೇಕು ಎಂದು ದೆಹಲಿಯ ಕೇಂದ್ರೀಯ ಹೋಮಿಯೋಪತಿ ಸಂಶೋಧನಾ ಪರಿಷತ್ನ ವೈಜ್ಞಾನಿಕ ಸಲಹಾ ಮಂಡಳಿ ಅಧ್ಯಕ್ಷ ಡಾ. ಎ. ಎಸ್. ಕುಮಾರ್ ಮಿತ್ರಚಂದ್ರ ಧಾವಲೆ ಹೇಳಿದರು. ಅವರು ಆಳ್ವಾಸ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ವತಿಯಿಂದ ವಿದ್ಯಾಗಿರಿಯ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಕೃಷಿಸಿರಿ ವೇದಿಕೆಯಲ್ಲಿ ನಡೆಯುತ್ತಿರುವ 2 ದಿನಗಳ ಪ್ರೊವಿನಿಯೋ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಹೊಮಿಯೋಪತಿ ಪಠ್ಯಕ್ರಮದಲ್ಲಿ ಸಂಶೋಧನಾ ವಿಧಾನಶಾಸ್ತ್ರ ವಿಷಯವನ್ನು ಪರಿಚಯಿಸಿರುವುದು ಉತ್ತಮ ನಿರ್ಧಾರ. ಇದರಿಂದ ಹೋಮಿಯೋಪಥಿ ವಿದ್ಯಾರ್ಥಿಗಳಿಗೆ ಹೋಮಿಯೋಪಥಿಯನ್ನು ವೈಜ್ಞಾನಿಕ ರೀತಿಯಲ್ಲಿ ಅಧ್ಯಯನ ಮಾಡಲು, ಸಂಶೋಧನೆ ನಡೆಸಲು ಮತ್ತು ಲೇಖನಗಳನ್ನು ಪ್ರಕಟಿಸಲು ಸಹಾಯವಾಗುತ್ತದೆ. ಹೋಮಿಯೋಪಥಿಯಲ್ಲಿ ವೈಜ್ಞಾನಿಕವಾಗಿ ಸಾಬೀತಾದ ಅಧ್ಯಯನಗಳು ಮತ್ತು ಅವುಗಳ ಪ್ರಕಟಣೆಗಳಿಲ್ಲದೆ, ಅದಕ್ಕೆ ತಕ್ಕ ಮಾನ್ಯತೆ ಸಿಗುವುದಿಲ್ಲ. ಹೋಮಿಯೋಪಥಿಗೆ 250 ವರ್ಷಗಳ ಇತಿಹಾಸವಿದ್ದರೂ, ಅದನ್ನು ವಿಜ್ಞಾನವೆಂದು ಸ್ವೀಕರಿಸುವಲ್ಲಿ ಇನ್ನೂ ಅಡೆತಡೆಗಳಿವೆ. ವೈಜ್ಞಾನಿಕ ಅಧ್ಯಯನಗಳ ಚರ್ಚೆ ಇನ್ನಷ್ಟು ವಿಚಾರ ಸಂಕಿರಣಗಳಲ್ಲಿ ನಡೆಯಬೇಕು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಪದವೀಧರ ಕ್ಷೇತ್ರದಿಂದ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ್ ಸರ್ಜಿ ಅವರ ಶಾಸಕರ ಅನುದಾನದಿಂದ ಕೋಟತಟ್ಟು ಪಡುಕರೆ ಪ್ರಾಥಮಿಕ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಶುಕ್ರವಾರ ಹಸ್ತಾಂತರಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಜಾನಕಿ ಅವರು ಮಾತನಾಡಿ, ಪಂಚಾಯತ್ ವಾರ್ಡ್ ಸದಸ್ಯರಾದ ರವೀಂದ್ರ ತಿಂಗಳಾಯ ಅವರು ಬಹುಕಾಲದ ಬೇಡಿಕೆಯ ಕುಡಿಯುವ ನೀರಿನ ಘಟಕ ಮಂಜೂರು ಮಾಡಿಸಲು ಶ್ರಮಿಸಿದ್ದು ಅವರಿಗೆ ಹಾಗೂ ಅನುದಾನ ನೀಡಿದ ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ್ ಸರ್ಜಿ ಅವರಿಗೆ ಶಾಲೆಯ ಮತ್ತು ವಿದ್ಯಾರ್ಥಿಗಳ ಪರವಾಗಿ ಧನ್ಯವಾದ ತಿಳಿಸಿದರು. ಕೋಟತಟ್ಟು ಪಂಚಾಯತ್ ಸದಸ್ಯರಾದ ಅಶ್ವಿನಿ ದಿನೇಶ್, ರವೀಂದ್ರ ತಿಂಗಳಾಯ, ಸೀತಾ, ಮುಖ್ಯೋಪಾಧ್ಯಾಯರಾದ ಜಾನಕಿ, ಮಾಜಿ ಪಂಚಾಯತ್ ಅಧ್ಯಕ್ಷ ರಘು ತಿಂಗಳಾಯ, ಮಾಜಿ ಉಪಾಧ್ಯಕ್ಷ ಲೋಕೇಶ್ ಶೆಟ್ಟಿ, ಮಾಜಿ ಪಂಚಾಯತ್ ಸದಸ್ಯ ರಾಮ ಎಂ. ಬಂಗೇರ, ಶಿಕ್ಷಕಿ ಸಂಗೀತ ಎಸ್.ಕೆ, ಗಣೇಶ್ ಆಚಾರಿ, ಲಕ್ಷಣ ಸುವರ್ಣ, ಶೈಲಜಾ ಎಲ್.ಆರ್, ವೀಣಾ ಪ್ರಕಾಶ್, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
