ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಿಕ್ಷಣದಿಂದ ವ್ಯಕ್ತಿತ್ವದಲ್ಲಿ ಪಡೆದ ಬದಲಾವಣೆಯನ್ನು ನಿತ್ಯ ಜೀವನದಲ್ಲಿ ಹೇಗೆ ಬಳಸಿಕೊಳ್ಳುತ್ತೀರಿ ಅನ್ನುವುದು ಮುಖ್ಯ. ಈ ನಿಟ್ಟಿನಲ್ಲಿ ಉನ್ನತ ವ್ಯಾಸಂಗ ಮುಗಿಸಿದ ವಿದ್ಯಾರ್ಥಿಗಳು ಭಾರತದಲ್ಲಿಯೇ ಉದ್ಯೋಗ ಪಡೆದು, ದೇಶದ ರಾಷ್ಟ್ರೀಯ ಆದಾಯವನ್ನು ಹೆಚ್ಚಿಸುವಂತಾಗಬೇಕು’ ಎಂದು ಉಡುಪಿಯ ಎಮ್.ಜಿ.ಎಮ್ ಕಾಲೇಜಿನ ಪ್ರಾಂಶುಪಾಲರಾದ ಲಕ್ಷ್ಮೀನಾರಾಯಣ ಕಾರಂತ ರವರು ತಿಳಿಸಿದರು. ಆರ್. ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಇನ್ನೋರ್ವ ಮುಖ್ಯ ಅತಿಥಿ ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಾರುತಿ ಇವರು ಪದವಿ ಪೂರ್ವ ವಿಭಾಗದ ಮೂರು ವಿಭಾಗಗಳಲ್ಲಿ ವಿದ್ಯಾರ್ಥಿಗಳು ಯಾವ ವಿಭಾಗವನ್ನು ಆಯ್ಕೆ ಮಾಡಿದರೂ ಶುದ್ಧ ಮನದ ಪರಿಶ್ರಮದಿಂದ ಅಭ್ಯಾಸ ಮಾಡಿದರೆ ಜೀವನದಲ್ಲಿ ಸಂತೃಪ್ತಿ ಪಡೆಯಲು ಸಾಧ್ಯ ಎಂದು ತಿಳಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಸಂಚಾಲಕರೂ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಶ್ರೀ ಸುಕುಮಾರ ಶೆಟ್ಟಿಯವರು ವಿದ್ಯಾರ್ಥಿಗಳ ಸಾಧನೆಯನ್ನು ಮೆಚ್ಚಿ ಶ್ಲಾಘಿಸಿದರು. ಕಾಲೇಜಿನ ಆಡಳಿತ ಮಂಡಳಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಳಮಟ್ಟದ ಸಂಘಟನೆ ಹೊಂದಿರುವ ಬಿಜೆಪಿ ಪಕ್ಷದಲ್ಲಿ ಎಲ್ಲರಿಗೂ ಸಮಾನ ಅವಕಾಶ ಇದೆ. ಪ್ರತಿ ಕಾರ್ಯಕರ್ತನಿಗೂ ಟಿಕೆಟ್ ಕೇಳುವ ಅವಕಾಶ ಇದೆ. ಆದರೆ ಪಕ್ಷದ ಟಿಕೆಟ್ ಯಾರಿಗೆ ನೀಡಬೇಕು ಎನ್ನುವ ತೀರ್ಮಾನವನ್ನು ಪಕ್ಷ ಹಾಗೂ ವರಿಷ್ಠರು ಮಾಡಲಿದ್ದಾರೆ. ತನಗೇ ಟಿಕೆಟ್ ಆಗಿದೆ ಎಂದು ತಿರುಗಾಡುವುದು, ಅನಧಿಕೃತ ಸಭೆ, ಹೇಳಿಕೆಗಳನ್ನು ನೀಡಿ ಗೊಂದಲ ನಿರ್ಮಾಣ ಮಾಡುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಎಚ್ಚರಿಕೆ ನೀಡಿದ್ದಾರೆ. ಮಂಗಳವಾರ ಸಂಜೆ ಹೆಮ್ಮಾಡಿಯ ಖಾಸಗಿ ಹೋಟೇಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪಕ್ಷದ ಸಂಘಟನೆಗಾಗಿ ಕೆಲಸ ಮಾಡುವ ಎಲ್ಲರನ್ನೂ ಪಕ್ಷ ಸ್ವಾಗತಿಸುತ್ತದೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪಕ್ಷದ ಸಂಘಟನೆ ಹಾಗೂ ಹಿಂದುತ್ವ ಪರವಾದ ಅಲೆ ಪ್ರಬಲವಾಗಿರುವ ಕಾರಣದಿಂದಾಗಿ ಜಾತಿ ಸಮೀಕರಣಗಿಂತ, ಪಕ್ಷದ ತತ್ವ, ಸಿದ್ದಾಂತ ಒಪ್ಪಿಕೊಳ್ಳುವ ಅಭ್ಯರ್ಥಿಗಳಿಗೆ ಅವಕಾಶ ದೊರಕುವ ಸಾಧ್ಯತೆಗಳನ್ನು ಅಲ್ಲಗಳಿಯುವಂತಿಲ್ಲ. ಹಾಗೆಯೇ 3 – 4 ಬಾರಿ ಶಾಸಕರಾದವರು, ಹೊಸಬರಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಆರ್.ಎನ್.ಎಸ್. ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ‘ಇಂಡಸ್ಟ್ರಿಯಲ್ ವಿಸಿಟ್’ ಅಂಗವಾಗಿ ಕೋಟಶ್ವರದ ಎಲ್.ಜಿ. ಇಂಡಸ್ಟ್ರೀಸ್ ಸನ್ ರೈಸ್ ಪಿ.ವಿ.ಸಿ. ಪೈಪ್ಸ್ ಕೈಗಾರಿಕಾ ಕೇಂದ್ರಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಎಲ್.ಜಿ.ಇಂಡಸ್ಟ್ರೀಸ್ ನ ಆಡಳಿತ ನಿರ್ದೇಶಕರಾದ ಹರ್ಷಾ ಆರ್. ಕಾಮತ್, ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥರಾದ ಸುಷ್ಮಾ ಶೆಣೈ, ಹಿಂದಿ ವಿಭಾಗದ ಮುಖ್ಯಸ್ಥೆ ಜಯಶೀಲಾ ಪೈ ಹಾಗೂ ಇತರ ಉಪನ್ಯಾಸಕರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಅಂತರ್ ಕಾಲೇಜು ಕುಸ್ತಿ ಪಂದ್ಯಾಟದಲ್ಲಿ ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ಆಳ್ವಾಸ್ ಕಾಲೇಜು ಮೂಡುಬಿದಿರೆ ಸಮಗ್ರ ಪ್ರಶಸ್ತಿಯೊಂದಿಗೆ ಪ್ರಥಮ ಸ್ಥಾನ ಪಡೆಯಿತು. ಪುರುಷರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಮಂಗಳೂರಿನ ಎಸ್.ಜಿ.ಸಿ ಕಾಲೇಜು, ತೃತೀಯ ಸ್ಥಾನವನ್ನು ವಿಶ್ವವಿದ್ಯಾಲಯ ಕಾಲೇಜು, ಮಂಗಳೂರು ಮತ್ತು ಚತುರ್ಥ ಸ್ಥಾನವನ್ನು ಮಂಗಳೂರಿನ ಕಾರ್ ಸ್ಟ್ರೀಟ್ ನ ಜಿ.ಎಫ್.ಜಿ.ಸಿ ಕಾಲೇಜು ಪಡೆಯಿತು. ಮಹಿಳೆಯರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ವಿಶ್ವವಿದ್ಯಾಲಯ ಕಾಲೇಜು ಮಂಗಳೂರು, ತೃತೀಯ ಸ್ಥಾನವನ್ನು ಮಂಗಳೂರು ವಿಶ್ವವಿದ್ಯಾಲಯ, ಕೊಣಾಜೆ, ಚತುರ್ಥ ಸ್ಥಾನವನ್ನು ಉಜಿರೆಯ ಎಸ್.ಡಿ.ಎಂ ಕಾಲೇಜು ಪಡೆಯಿತು. ಬಹುಮಾನ ವಿತರಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಪಿ. ನಾರಾಯಣ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಡುಪಿ ಜಿಲ್ಲಾ ಪೋಲಿಸ್ ಅಧಿಕಾರಿ ಆದರ್ಶ್ ಕುಮಾರ್ ಶೆಟ್ಟಿ, ಉದ್ಯಮಿ ಭರತ್ ಕುಮಾರ್ ಶೆಟ್ಟಿ, ನಟ ರಕ್ಷಿತ್ ಶೆಟ್ಟಿ, ವೀಕ್ಷಕರಾಗಿ ಆಗಮಿಸಿದ್ದ…
ಒಣ ಚರ್ಮದವರಿಗೆ ಚಳಿಗಾಲ ಶಾಪ. ಯಾಕಪ್ಪ ಚಳಿಗಾಲ ಬಂತು ಎಂದು ಗೋಳಾಡುವವರಿದ್ದಾರೆ. ಶೀತ ಹೆಚ್ಚಾದಂತೆ ಚರ್ಮ ಒಡೆದು ರಕ್ತ ಬರುವುದುಂಟು. ಕೇವಲ ಒಣ ಚರ್ಮ ಹೊಂದಿರುವವರಿಗೊಂದೇ ಅಲ್ಲ, ಆಯ್ಲಿ ಸ್ಕಿನ್ ಹೊಂದಿರುವವರೂ ಚಳಿಗಾಲದಲ್ಲಿ ಕಿರಿಕಿರಿ ಅನುಭವಿಸುತ್ತಾರೆ. ಚಳಿಗಾಲದಲ್ಲಿ ಚರ್ಮಕ್ಕೆ ವಿಶೇಷ ಆರೈಕೆ ಅಗತ್ಯ. ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಒಣ ಚರ್ಮದಿಂದ ಮುಕ್ತಿ ಹೊಂದಿ, ಚಳಿಗಾಲದಲ್ಲಿ ನೆಮ್ಮದಿಯಿಂದಿರಬಹುದು. (ಕುಂದಾಪ್ರ ಡಾಟ್ ಕಾಂ) ಚಳಿಗಾಲದಲ್ಲಿ ಬಾದಾಮಿ ಎಣ್ಣೆ ಬಳಕೆ ಉತ್ತಮ. ರಾತ್ರಿ ಎಣ್ಣೆ ಹಚ್ಚಿ ಮಲಗಿದರೆ, ಬೆಳಿಗ್ಗೆ ಚರ್ಮ ಒಣಗುವುದಿಲ್ಲ. ಕಾಂತಿಯುತವಾಗಿರುತ್ತದೆ. ಸೋಪ್ ಬದಲು ಸಾಸಿವೆ ಎಣ್ಣೆಯನ್ನು ಬಳಸುವುದು ಒಳ್ಳೆಯದು. ಸ್ನಾನದ ನಂತರ ಮೃದು ಬಟ್ಟೆಯಲ್ಲಿ ಮೈ ಒರೆಸಿಕೊಳ್ಳಿ. ನಂತರ ಎಣ್ಣೆ ಅಥವ ಲೋಷನ್ ಹಚ್ಚಿಕೊಳ್ಳಿ. ಶೀತ ಎಂಬ ಕಾರಣಕ್ಕೆ ಅತೀ ಬಿಸಿ ನೀರನ್ನು ಬಳಸಬೇಡಿ. ಅತೀ ತಣ್ಣನೆಯ ನೀರನ್ನೂ ಕೂಡ ಬಳಸಬಾರದು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ವಕೀಲರ ಸಂಘ ಬೈಂದೂರು ಇದರ ನೇತೃತ್ವದಲ್ಲಿ ಬೈಂದೂರು ನ್ಯಾಯಾಲಯದಲ್ಲಿ ವಕೀಲರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಬೈಂದೂರು ಸಂಚಾರಿ ಪೀಠದ ನ್ಯಾಯಾಧೀಶರಾದ ಧನೇಶ ಮುಗಳಿ ಇವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಸಮಾಜದಲ್ಲಿ ವಕೀಲರ ಪ್ರಾಮುಖ್ಯತೆ ಬಗ್ಗೆ ಮಾತನಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಸರಕಾರಿ ಉಪ ಅಭಿಯೋಜಕರಾದ ಇಂದಿರಾ ನಾಯಕ್ ಮತ್ತು ಹಿರಿಯ ವಕೀಲರಾದ ಜೇ.ಎನ್ ಸಭಾಸ್ಟಿನ್ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಬೈಂದೂರು ವಕೀಲರ ಸಂಘದ ಅಧ್ಯಕ್ಷರಾದ ಮೋಬಿ ಪಿ.ಸಿ ವಹಿಸಿದ್ದರು. ಕಾರ್ಯದರ್ಶಿ ಪ್ರಶಾಂತ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷರಾದ ಚಿಕ್ಕಯ್ಯ ಶೆಟ್ಟಿ ಧನ್ಯವಾದ ಸಮರ್ಪಣೆ ಮಾಡಿದರು. ಈ ಸಮಯದಲ್ಲಿ ಎಲ್ಲಾ ವಕೀಲ ಮಿತ್ರರು, ಹಾಗೂ ಸಾರ್ವಜನಿಕರು, ನ್ಯಾಯಾಲಯದ ಸಿಬ್ಬಂದಿ ವರ್ಗ ಮತ್ತು ಪೋಲಿಸ್ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಡಿ.21-27 ತನಕ ಆಳ್ವಾಸ್‌ನಲ್ಲಿ ಸ್ಕೌಟ್ಸ್ ಗೈಡ್ಸ್ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ – ಡಾ. ಎಂ. ಮೋಹನ್ ಆಳ್ವ
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ವಿಚಾರಾಣಾಧೀನ ಕೈದಿಯೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರಿಯಡಕ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಭಾನುವಾರ ಮುಂಜಾನೆ ನಡೆದಿದೆ. ಕಾರ್ಕಳ ತಾಲೂಕಿನ ಮಾಳ ಗ್ರಾಮದ ಪೇರಡ್ಕ ನಿವಾಸಿ ಸದಾನಂದ ಸೇರಿಗಾರ್ ಆತ್ಮಹತ್ಯೆ ಮಾಡಿಕೊಂಡ ಕೈದಿ. ಕೆಲ ತಿಂಗಳ ಹಿಂದೆ ಸದಾನಂದ ಸೇರಿಗಾರ್ ಇತರೆ ಮೂವರೊಂದಿಗೆ ಸೇರಿ ಕಾರ್ಕಳದ ಆನಂದ ದೇವಾಡಿಗ ಎಂಬಾತನಿಗೆ ಮದ್ಯದೊಂದಿಗೆ ನಿದ್ರೆಮಾತ್ರೆ ತಿನ್ನಿಸಿ ಬಳಿಕ ಬೈಂದೂರು ಹೇನ್ ಬೇರು ಬಳಿ ನಿರ್ಜನ ಪ್ರದೇಶದಲ್ಲಿ ಕರೆತಂದು ಕಾರು ಸಹಿತ ಸಜೀವವಾಗಿ ಸುಟ್ಟು ಹತ್ಯೆಗೈದಿದ್ದರು. ಹಳೆಯ ಪ್ರಕರಣವೊಂದರಲ್ಲಿ ತಪ್ಪಿಸಿಕೊಳ್ಳುವ ಉದ್ದೇಶದಿಂದ ಸದಾನಂದ ಸೇರಿಗಾರ್ ಹಾಗೂ ಆತನ ಪ್ರೇಯಸಿ ಈ ಕೃತ್ಯ ಎಸಗಿದ್ದರು. ಆ ಬಳಿಕ ಪೊಲೀಸರಿಗೆ ಸಿಕ್ಕಿಬಿದ್ದ ಸದಾನಂದ ಸೇರಿಗಾರ್ ಹಾಗೂ ಆತನ ಗೆಳತಿ ಶಿಲ್ಪ ಸಾಲಿಯಾನ್, ಸತೀಶ್ ದೇವಾಡಿಗ, ನಿತೀಶ್ ದೇವಾಡಿಗ ಜೈಲು ಪಾಲಾಗಿದ್ದರು. ಜೈಲು ಸೇರಿದ ಬಳಿಕ ಸದಾನಂದ ಸೇರಿಗಾರ್ ಬಹಳಷ್ಟು ಮಾನಸಿಕ ಖಿನ್ನತೆಗೆ ಒಳಗಾಗಿದ್ದನು. ಇದೇ ಕಾರಣದಿಂದ ಇಂದು ಮುಂಜಾನೆ 5 ಗಂಟೆಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬೆಂಗಳೂರು ಎಚ್.ಎ.ಎಲ್ ಸಮೀಪ ಕುಂದನಹಳ್ಳಿ ಗೇಟ್ ಬಳಿ ಬ್ರಹ್ಮಲಿಂಗೇಶ್ವರ ಬೇಕರಿ ನಡೆಸುತ್ತಿರುವ ಬೈಂದೂರು ಮದ್ದೋಡಿಯ ಯುವಕರಿಗೆ ಹಲ್ಲೆ ನಡೆಸಿ ಹಣ ಎಗರಿಸಿದ್ದ ಮೂವರು ಆರೋಪಿಗಳನ್ನು ಹೆಚ್.ಎ.ಎಲ್ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಡೆಲಿವರಿ ಬಾಯ್ ಆಗಿರುವ ಕಾರ್ತಿಕ್ (20), ಅಲ್ಯೂಮಿನಿಯಂ ಕೆಲಸಗಾರ ಸಲ್ಮಾನ್ (20), ಖಾಸಗಿ ಹೋಟೆಲ್ ಮ್ಯಾನೇಜರ್ ಕಾರ್ತಿಕ್ (23) ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ವೈಟ್ ಫಿಲ್ಡ್ ಡಿಸಿಪಿ ಗಿರೀಶ್ ಅವರು ಘಟನೆಯ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ಪೊಲೀಸರು ತಂಡ ರಚಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ ಎಂದರು. ಬೇಕರಿಯಲ್ಲಿ ವ್ಯವಹಾರ ನಡೆಸಿ ಹಣ ಕೇಳಿದಾಗ ಖ್ಯಾತೆ ತೆಗೆದ ರೌಡಿಗಳು ಅಂಗಡಿಯೊಳ್ಳಕ್ಕೆ ನುಗ್ಗಿ ಏಕಾಏಕಿ ಹಲ್ಲೆ ನಡೆಸಿದ್ದಾರೆ. ನಾಲ್ಕೈದು ಮಂದಿ ಅಂಗಡಿಯೊಳ್ಳಕ್ಕೆ ನುಗ್ಗಿ ಹಲ್ಲೆ ಇಬ್ಬರಿಗೂ ಹಲ್ಲೆ ನಡೆಸಿದ್ದು, ಪ್ರಶ್ನಿಸಲು ಬಂದವರಿಗೂ ಹಲ್ಲೆ ನಡೆಸಲಾಗಿದೆ. ಈ ದೃಶ್ಯ ಅಂಗಡಿಯ ಸಿಸಿ ಕ್ಯಾಮಾರಾದಲ್ಲಿ ಸೆರೆಯಾಗಿದೆ. ಘಟನೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ವಿದ್ಯಾರ್ಥಿ ಜೀವನದಲ್ಲಿ ವಿವಿಧ ಆಯಮಗಳನ್ನು ಅನ್ವೇಷಿಸಿ ವೈಯಕ್ತಿಕವಾಗಿ ಯಾವುದರಲ್ಲಿ ಉತ್ತಮರಾಗಿದ್ದೀರಿ ಎಂಬುದನ್ನು ಪ್ರತ್ಯೇಕವಾಗಿ ಗಮನಿಸಿಬೇಕು ಎಂದು ಆದ್ಯ ಕಮ್ಯುನಿಕೇಶನ್ನ ಸಂಸ್ಥಾಪಕ ಚೆಂಗಪ್ಪ ಎ. ಡಿ ತಿಳಿಸಿದರು ಆಳ್ವಾಸ್ ಕಾಲೇಜಿನ ಪದವಿ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಪಬ್ಲಿಕ್ ರಿಲೇಶನ್ ಎಂಬ ವಿ?ಯದ ಕುರಿತು ನಡೆದ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಸಂವಹನ ಎಂದು ನಿಂತ ನೀರಲ್ಲ ಅದು ಸಮುದ್ರದಂತೆ ವಿಶಾಲವಾದದ್ದು ಎಲ್ಲರ ಜೀವನದಲ್ಲಿ ಸಂವಹನ ಅತಿ ಅವಶ್ಯಕ. ಇಂದಿನ ಯುವ ಜನತೆ ಸಂಹವನಕ್ಕೆ ಮಹತ್ವ ನೀಡದ ಕಾರಣ ಅದರ ಮಹತ್ವವು ಕುಂಠಿತಗೊಳ್ಳುತ್ತಿದೆ. ತಂತ್ರಜ್ಞಾನದ ಬೆಳವಣಿಗೆಯಿಂದ ಜನರು ಪರಸ್ಪರ ಸಂವಹನವನ್ನು ಮರೆಯುತ್ತಿದ್ದಾರೆ. ವಿದ್ಯಾರ್ಥಿಗಳು ಭಾಷಾ ಸ್ಪಷ್ಟತೆಯ ಕಡೆ ಹೆಚ್ಚಿನ ಗಮನ ನೀಡಬೇಕು ಎಂದರು ಕಾರ್ಯಕ್ರಮದಲ್ಲಿ ಪದವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ರೇಷ್ಮಾ ಉದಯ್ ಕುಮಾರ್, ಉಪನ್ಯಾಸಕಿ ರಕ್ಷಿತಾ ಕುಮಾರಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಖದಿಜಾ ನುಹ ಸ್ವಾಗತಿಸಿ, ವಿದ್ಯಾರ್ಥಿ ರಿತಿಕಾ ವಂದಿಸಿ, ವಿದ್ಯಾರ್ಥಿನಿ ಹನನ್ ಫಾತಿಮಾ ನಿರೂಪಿಸಿದರು
