ತಂತ್ರಜ್ಞಾನದ ಬೆಳವಣಿಗೆಯಿಂದ ಪರಸ್ಪರ ಸಂವಹನಕ್ಕೆ ತಡೆ: ಚೆಂಗಪ್ಪ ಎ.ಡಿ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:
ವಿದ್ಯಾರ್ಥಿ ಜೀವನದಲ್ಲಿ ವಿವಿಧ ಆಯಮಗಳನ್ನು ಅನ್ವೇಷಿಸಿ ವೈಯಕ್ತಿಕವಾಗಿ ಯಾವುದರಲ್ಲಿ ಉತ್ತಮರಾಗಿದ್ದೀರಿ ಎಂಬುದನ್ನು ಪ್ರತ್ಯೇಕವಾಗಿ ಗಮನಿಸಿಬೇಕು ಎಂದು ಆದ್ಯ ಕಮ್ಯುನಿಕೇಶನ್ನ ಸಂಸ್ಥಾಪಕ ಚೆಂಗಪ್ಪ ಎ. ಡಿ ತಿಳಿಸಿದರು

Call us

Click Here

ಆಳ್ವಾಸ್ ಕಾಲೇಜಿನ ಪದವಿ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಪಬ್ಲಿಕ್ ರಿಲೇಶನ್ ಎಂಬ ವಿ?ಯದ ಕುರಿತು ನಡೆದ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಸಂವಹನ ಎಂದು ನಿಂತ ನೀರಲ್ಲ ಅದು ಸಮುದ್ರದಂತೆ ವಿಶಾಲವಾದದ್ದು ಎಲ್ಲರ ಜೀವನದಲ್ಲಿ ಸಂವಹನ ಅತಿ ಅವಶ್ಯಕ. ಇಂದಿನ ಯುವ ಜನತೆ ಸಂಹವನಕ್ಕೆ ಮಹತ್ವ ನೀಡದ ಕಾರಣ ಅದರ ಮಹತ್ವವು ಕುಂಠಿತಗೊಳ್ಳುತ್ತಿದೆ. ತಂತ್ರಜ್ಞಾನದ ಬೆಳವಣಿಗೆಯಿಂದ ಜನರು ಪರಸ್ಪರ ಸಂವಹನವನ್ನು ಮರೆಯುತ್ತಿದ್ದಾರೆ. ವಿದ್ಯಾರ್ಥಿಗಳು ಭಾಷಾ ಸ್ಪಷ್ಟತೆಯ ಕಡೆ ಹೆಚ್ಚಿನ ಗಮನ ನೀಡಬೇಕು ಎಂದರು

ಕಾರ್ಯಕ್ರಮದಲ್ಲಿ ಪದವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ರೇಷ್ಮಾ ಉದಯ್ ಕುಮಾರ್, ಉಪನ್ಯಾಸಕಿ ರಕ್ಷಿತಾ ಕುಮಾರಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಖದಿಜಾ ನುಹ ಸ್ವಾಗತಿಸಿ, ವಿದ್ಯಾರ್ಥಿ ರಿತಿಕಾ ವಂದಿಸಿ, ವಿದ್ಯಾರ್ಥಿನಿ ಹನನ್ ಫಾತಿಮಾ ನಿರೂಪಿಸಿದರು

Leave a Reply