ಹಿರಿಯಡ್ಕ ಸಬ್ ಜೈಲಿನಲ್ಲಿ ವಿಚಾರಣಾಧೀನ ಕೈದಿ ಆತ್ಮಹತ್ಯೆ. ಕಾರಿನಲ್ಲಿ ಸಜೀವವಾಗಿ ವ್ಯಕ್ತಿಯನ್ನು ಸುಟ್ಟಿದ್ದ ಪ್ರಕರಣದ ಆರೋಪಿ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ:
ವಿಚಾರಾಣಾಧೀನ ಕೈದಿಯೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರಿಯಡಕ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಭಾನುವಾರ ಮುಂಜಾನೆ ನಡೆದಿದೆ.

Call us

Click Here

ಕಾರ್ಕಳ ತಾಲೂಕಿನ ಮಾಳ ಗ್ರಾಮದ ಪೇರಡ್ಕ ನಿವಾಸಿ ಸದಾನಂದ ಸೇರಿಗಾರ್ ಆತ್ಮಹತ್ಯೆ ಮಾಡಿಕೊಂಡ ಕೈದಿ. ಕೆಲ ತಿಂಗಳ ಹಿಂದೆ ಸದಾನಂದ ಸೇರಿಗಾರ್ ಇತರೆ ಮೂವರೊಂದಿಗೆ ಸೇರಿ ಕಾರ್ಕಳದ ಆನಂದ ದೇವಾಡಿಗ ಎಂಬಾತನಿಗೆ ಮದ್ಯದೊಂದಿಗೆ ನಿದ್ರೆಮಾತ್ರೆ ತಿನ್ನಿಸಿ ಬಳಿಕ ಬೈಂದೂರು ಹೇನ್ ಬೇರು ಬಳಿ ನಿರ್ಜನ ಪ್ರದೇಶದಲ್ಲಿ ಕರೆತಂದು ಕಾರು ಸಹಿತ ಸಜೀವವಾಗಿ ಸುಟ್ಟು ಹತ್ಯೆಗೈದಿದ್ದರು.

ಹಳೆಯ ಪ್ರಕರಣವೊಂದರಲ್ಲಿ ತಪ್ಪಿಸಿಕೊಳ್ಳುವ ಉದ್ದೇಶದಿಂದ ಸದಾನಂದ ಸೇರಿಗಾರ್ ಹಾಗೂ ಆತನ ಪ್ರೇಯಸಿ ಈ ಕೃತ್ಯ ಎಸಗಿದ್ದರು. ಆ ಬಳಿಕ ಪೊಲೀಸರಿಗೆ ಸಿಕ್ಕಿಬಿದ್ದ ಸದಾನಂದ ಸೇರಿಗಾರ್ ಹಾಗೂ ಆತನ ಗೆಳತಿ ಶಿಲ್ಪ ಸಾಲಿಯಾನ್, ಸತೀಶ್ ದೇವಾಡಿಗ, ನಿತೀಶ್ ದೇವಾಡಿಗ ಜೈಲು ಪಾಲಾಗಿದ್ದರು.

ಜೈಲು ಸೇರಿದ ಬಳಿಕ ಸದಾನಂದ ಸೇರಿಗಾರ್ ಬಹಳಷ್ಟು ಮಾನಸಿಕ ಖಿನ್ನತೆಗೆ ಒಳಗಾಗಿದ್ದನು. ಇದೇ ಕಾರಣದಿಂದ ಇಂದು ಮುಂಜಾನೆ 5 ಗಂಟೆಯ ಸುಮಾರಿಗೆ ಪಂಚೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನು ಗಮನಿಸಿದ ಇತರ ಕೈದಿಗಳು ಆತನನ್ನು ನೇಣಿನ ಕುಣಿಕೆಯಿಂದ ಬಿಡಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವ ದಾರಿ ಮಧ್ಯೆಯೇ ಸದಾನಂದ ಸೇರಿಗಾರ್ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದುಬಂದಿದೆ.

This image has an empty alt attribute; its file name is News-byndoor-car-fire-case3.jpg

ಮೃತದೇಹವನ್ನು ಅಜ್ಜರಕಾಡು ಶವಗಾರದಲ್ಲಿ ಇರಿಸಲಾಗಿದ್ದು, ಸ್ಥಳದಲ್ಲಿ ಹೆಚ್ಚುವರಿ ಎಸ್ಪಿ ಎಸ್.ಟಿ ಸಿದ್ದಲಿಂಗಪ್ಪ, ಉಡುಪಿ ಡಿವೈಎಸ್ಪಿ ಸುಧಾಕರ್ ನಾಯ್ಕ ಮತ್ತು ಸಿಬ್ಬಂದಿಗಳು ತನಿಕೆ ಕೈಗೊಂಡಿದ್ದಾರೆ.

Click here

Click here

Click here

Click Here

Call us

Call us

ಇದನ್ನೂ ಓದಿ:
► ಬೈಂದೂರು: ಕಾರಿಗೆ ಬೆಂಕಿ ಹಚ್ಚಿ ಮೇಸ್ತ್ರಿಯ ಕೊಲೆ? ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು – https://kundapraa.com/?p=60527.
► ಬೈಂದೂರು: ಸುಟ್ಟು ಕರಕಲಾದ ಸ್ಥಿತಿಯಲ್ಲಿ ವ್ಯಕ್ತಿ – ಕಾರು ಪತ್ತೆ – https://kundapraa.com/?p=60500 .
► ನಿದ್ರೆ ಮಾತ್ರೆ ತಿನ್ನಿಸಿ ಕಾರು ಸಹಿತ ಬೆಂಕಿ ಹಚ್ಚಿ ಕೊಲೆ, ನಾಲ್ವರು ವಶಕ್ಕೆ. ಒಂದೇ ದಿನದಲ್ಲಿ ಪ್ರಕರಣ ಭೇದಿಸಿದ ಪೊಲೀಸರು – https://kundapraa.com/?p=60568 .

► ಕೊಲೆ ಪ್ರಕರಣವನ್ನು ಶೀಘ್ರ ಭೇದಿಸಿದ ಬೈಂದೂರು ಪೊಲೀಸ್ ತಂಡಕ್ಕೆ ರೂ.50,000 ಬಹುಮಾನ – https://kundapraa.com/?p=60578 .

Leave a Reply