Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಸಮಾಜದಲ್ಲಿನ ಅಸ್ಪೃಶ್ಯತೆ ಪಿಡುಗಿಗೆ ತಮ್ಮದೇ ನಿಲುವಿನಲ್ಲಿ ಸಮಾಧಾನಕರ ಉಪಾಯಗಳನ್ನು ಕಂಡುಕೊಂಡು, ಜೀವನವನ್ನು ಸಮಾಜದಲ್ಲಿ ಸಮಾನತೆಗಾಗಿ ಮುಡಿ-ಪಾಗಿಟ್ಟವರು ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದು ಶಾಸಕ ಎ. ಕಿರಣ್ ಕುಮಾರ್‌ ಕೊಡ್ಗಿ ಹೇಳಿದರು. ಅವರು ಇಲ್ಲಿನ ತಾಲ್ಲೂಕು ಪಂಚಾಯಿತಿಯ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯುವ ಕಾರ್ಯಕ್ರಮದಲ್ಲಿ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಮಾನವರಲ್ಲಿ ಇರುವುದು ಒಂದೇ ಕುಲ, ಒಂದೇ ಜಾತಿ, ಒಂದೇ ದೇವರು ಎನ್ನುವ ಸಂದೇಶ ನೀಡಿದವರು. ವಿದ್ಯೆಯಿಂದ ಬಲಯುತರಾಗಬೇಕು, ಸಮಾನತೆ ನಮ್ಮ ಉಸಿರಾಗಿರಬೇಕು ಎಂದು ಹೇಳಿದ್ದ ಅವರು, ಕೇರಳದಿಂದ ಆರಂಭ ಮಾಡಿದ್ದ ಸಾಮಾಜಿಕ ಬದಲಾವಣೆ, ದೇಶಾದ್ಯಂತ ವಿಸ್ತರಿಸಿದ್ದರು. ವಿಶ್ವ ಮಾನವತ್ವದ ಗುರು, ಶಾಂತಿ ಪಥದ ನಡಿಗೆ ಹೇಳಿಕೊಟ್ಟಿದ್ದ ಅವರು ಬದುಕಿದ, ಪ್ರತಿಪಾದಿಸಿದ ದಾರಿಯಲ್ಲಿ ನಾವು ಸುಧಾರಣೆಗಳನ್ನು ನಡೆಯೋಣ ಎಂದರು. ಪುರಸಭೆ ಅಧ್ಯಕ್ಷ ಮೋಹನ್‌ದಾಸ್ ಶೆಣೈ, ಕಂದಾಯ ಉಪ ವಿಭಾಗಾಧಿಕಾರಿ ರಶ್ಮಿ ಎಸ್.ಆರ್, ತಹಶೀಲ್ದಾರ್…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎನ್ನುವ ಸಂದೇಶ ನೀಡಿ ಜಾತಿ ಮತ ಮೇಲು ಕೀಳುಗಳ ಭೇದ ಮರೆಸಿ, ದನಿಯಿಲ್ಲದವರ ದನಿಯಾಗಿ, ಶಕ್ತಿ ಇಲ್ಲದವರಿಗೆ ಆತ್ಮವಿಶ್ವಾಸದ ಶಕ್ತಿ ನೀಡಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರೇರೇಪಿಸಿದ ಬ್ರಹ್ಮಶ್ರೀ ನಾರಾಯಣಗುರುಗಳ ಆದರ್ಶ ಜೀವನ ಎಲ್ಲರಿಗೂ ಮಾದರಿ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಭಿಪ್ರಾಯಪಟ್ಟರು ಅವರು ಮಣಿಪುರ ನಾರಾಯಣ ಗುರು ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘ ಮಣಿಪುರ ಇವರ ಸಹಕಾರದೊಂದಿಗೆ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 171 ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಹಾತ್ಮಾಗಾಂಧಿ ಮತ್ತು ರವೀಂದ್ರ ನಾಥ್ ಟಾಗೋರರಂತಹ ವ್ಯಕ್ತಿಗಳು ಗುರುಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದು ಸಮಾನತೆಯ ಸಮಾಜ ರೂಪಿಸುವಲ್ಲಿ ಮಾರ್ಗದರ್ಶನ ಪಡೆದಿದ್ದು, ನಾವೂ ಕೂಡಾ ಅವರ ಆದರ್ಶ ಮತ್ತು ಸಿದ್ಧಾಂತಗಳನ್ನು ಪಾಲನೆ ಮಾಡುವ ಮೂಲಕ ಅವರ ಕನಸನ್ನು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಪ್ರಥಮ ಬಿ.ಎಸ್.ಸಿ. ವಿದ್ಯಾರ್ಥಿನಿ ಆರ್ಯಶ್ರೀ ಅವರು ಸೆಪ್ಟೆಂಬರ್ 3 ಮತ್ತು 4 ರಂದು ಗೋವಾದಲ್ಲಿ ಇಂಡಿಯಾಸ್ ಟರ್ನ್ಸ್ ಮತ್ತು ಟ್ವಿರ್ಲ್ಸ್ ಅವರು ನಡೆಸಿದ  ಸೀಸನ್ -1 ಅಖಿಲ ಭಾರತ ರಾಷ್ಟ್ರೀಯ ನೃತ್ಯ ಸ್ಪರ್ಧೆಯಲ್ಲಿ  ರಾಷ್ಟ್ರೀಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅವರಿಗೆ ಕಾಲೇಜಿನ ವಿಶ್ವಸ್ಥ ಮಂಡಳಿ, ಆಡಳಿತ ಮಂಡಳಿ, ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯು 2024-2025ನೇ ಸಾಲಿನಲ್ಲಿ 1.14 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 17 ಪಾಲು ಮುನಾಫೆ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ. ಸಹಕಾರಿಯು 3832 ಸದಸ್ಯರನ್ನು ಹೊಂದಿದ್ದು, ಸಹಕಾರಿಯ ದುಡಿಯುವ ಬಂಡವಾಳ 100.80 ಕೋಟಿ ರೂ. ಮತ್ತು 85.56 ಕೋಟಿ ರೂ. ಠೇವಣಿ ಹೊಂದಿದೆ. 24.54 ಕೋಟಿ. ರೂ.ಗಳನ್ನು ವಿವಿಧ ಬ್ಯಾಂಕುಗಳಲ್ಲಿ ಹೂಡಿಕೆ ಮಾಡಲಾಗಿದೆ. ಎಂದು ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ ಅಧ್ಯಕ್ಷ ಜಿ. ವೆಂಕಟೇಶ ಶೆಣೈ ಹೇಳಿದರು. ಅವರು ಗಂಗೊಳ್ಳಿಯ ಶ್ರೀ ವೀರ ವಿಠಲ ಸಭಾಗೃಹದಲ್ಲಿ ಭಾನುವಾರ ಜರಗಿದ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ 105ನೇ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತ್ವರಿತ ಹಾಗೂ ಉತ್ಕೃಷ್ಟ ದರ್ಜೆಯ ಗ್ರಾಹಕ ಸೇವೆಯನ್ನು ನೀಡಲು ಮತ್ತು ಸದಸ್ಯರಿಗೆ ನಗದು ರಹಿತ ವ್ಯವಹಾರ ನಡೆಸಲು ಸಹಕಾರಿಯು ಶ್ರಮಿಸುತ್ತಿದೆ. 2025-26ನೇ ಸಾಲಿನಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಆಡಳಿತ ಮಂಡಳಿ ಮಹತ್ವದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಸಾಸ್ತಾನದ ಗೋಳಿಗರಡಿ ಬ್ರಹ್ಮಬೈದರ್ಕಳ ದೈವಸ್ಥಾನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತೋತ್ಸವ ಅಂಗವಾಗಿ ಯುವ ಕಲಾವಿದೆ ಪ್ರಜ್ಞಾ ಜಿ. ಹಂದಟ್ಟು ಅವರ ಕೈಯಂಗಳದಿ ಮೂಡಿಬಂದ ಬೃಹತ್ ಬ್ರಹ್ಮಶ್ರೀ ನಾರಾಯಣ ಗುರುಗಳ ರಂಗೋಲಿ ಚಿತ್ರ ವಿಶೇಷವಾಗಿ ಗಮನ ಸೆಳೆಯಿತು. ಈ ಹಿಂದೆ ಕಟೀಲು ದುರ್ಗಾಪರಮೇಶ್ವರಿ, ಕೋಟ ಅಮೃತೇಶ್ವರಿ, ಚಿತ್ರನಟ ದೊಡ್ಡಣ್ಣ ಸೇರಿದಂತೆ ಅನೇಕ ಗಣ್ಯ ಚಿತ್ರ ಬಿಡಿಸಿ ಗಮನ ಸೆಳೆದಿದ್ದಾರೆ. ಈ ಕಲಾವಿದೆ ಗುರುವಿಲ್ಲದೆ ಚಿತ್ರ ಕಲಾವಿದೆಯಾಗಿದ್ದು ಯೂಟೂಬ್ ಮೂಲಕ ಕಲಿತು ಇಂದು ಚಿತ್ರಕಲಾವಿದೆಯಾಗಿ ಗುರುತಿಸಿಕೊಂಡಿದ್ದಾಳೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ವತಿಯಿಂದ ಕಾರ್ಕಳ ತಾಲೂಕಿನ ಕುಕ್ಕುಂದೂರು ವಲಯ ಮಟ್ಟದ ನೂತನ ಸಂಘವನ್ನು ಪೊಸನೊಟ್ಟು ಅಂಬೇಡ್ಕರ್ ಭವನದಲ್ಲಿ ಉದ್ಘಾಟಿಸಲಾಯಿತು. ನೂತನ ಸಂಘದ ಉದ್ಘಾಟನೆಯನ್ನು ಕುಕ್ಕುಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶಶಿಕಲಾ ಅವರು ದೀಪವನ್ನು ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ವೇದಿಕೆಯಲ್ಲಿ ಸಮುದಾಯದ ಹಿರಿಯರು ಸುಧಾಕರ ಹಾಗೂ ಗೋಪ ಅವರು ಡೋಲು ಬಾರಿಸುವ ಮೂಲಕ ಸಂಘಟನೆಗೆ ಚಾಲನೆ ನೀಡಿದರು. ಪ್ರಾಸ್ತಾವಿಕ ಸಂಘಟನೆಯ ಬಲವರ್ಧನೆ ಕುರಿತು ಹಾಗೂ ಸಂಘನೆ ಬೆಳೆದು ಬಂದ ಹಾದಿಯ ಕುರಿತು ಜಿಲ್ಲಾ ಸಮಿತಿ ಮಾಜಿ ಅಧ್ಯಕ್ಷರಾದ ಬೊಗ್ರ ಕೊರಗ ಕೊಕ್ಕರ್ಣೆ ಇವರು ಮಾಹಿತಿ ನೀಡಿದರು. ನಂತರ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಚುನಾವಣಾ ಅಧಿಕಾರಿಯಾಗಿ ಒಕ್ಕೂಟದ ನಿಕಟ ಪೂರ್ವ ಕೋಶಾಧಿಕಾರಿ ಸತೀಶ್ ಪೆರ್ಡೂರು ಹಾಗೂ ಗೆಳೆಯರ ಬಳಗ ತಂಡದ ಅಧ್ಯಕ್ಷರು ಚಂದ್ರ ಕಳ್ತೂರು ನೆರವೇರಿಸಿದರು. ಅಧ್ಯಕ್ಷರಾಗಿ ಶಶಿಕಲಾ ಪಡ್ಯ, ಉಪಾಧ್ಯಕ್ಷರು ಸುಧಾಕರ ಕುಕ್ಕುಂದೂರು, ಕಾರ್ಯದರ್ಶಿ ಗೀತಾ ಪೊಸನೊಟ್ಟು, ಕೋಶಾಧಿಕಾರಿ ವಸಂತ, ಜೊತೆ ಕಾರ್ಯದರ್ಶಿ ಲಿಖಿತ,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಸಹಕಾರ ಸಂಘವು 2024-25 ನೇ ಸಾಲಿನಲ್ಲಿ 3.55 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದ್ದು, ತನ್ನ ಸದಸ್ಯರಿಗೆ ಶೇ 17 ಲಾಭಾಂಶ (ಡಿವಿಡೆಂಟ್) ಘೋಷಿಸಿದೆ. ಆಳ್ವಾಸ್ ಕೃಷಿಸಿರಿ ಆವರಣದಲ್ಲಿನ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ವೇದಿಕೆಯಲ್ಲಿ ಸಂಘದ 2024-25 ನೇ ಸಾಲಿನ 9ನೇ ವಾರ್ಷಿಕ ಮಹಾಸಭೆಯಲ್ಲಿ ಪ್ರಕಟಿಸಲಾಯಿತು. ವಾರ್ಷಿಕ ವರದಿ ವಾಚಿಸಿದ ಸಂಘದ ಕಾರ್ಯ ನಿರ್ವಹಣಾಧಿಕಾರಿ ಅರ್ಪಿತಾ ಶೆಟ್ಟಿ, ಸಂಘವು ಈ ಸಾಲಿನಲ್ಲಿ 170 ಕೋಟಿ ರೂಪಾಯಿ ವ್ಯವಹಾರ ನಡೆಸಿದ್ದು, ಕಳೆದ ವಿತ್ತೀಯ ವರ್ಷಕ್ಕಿಂತ  ಈ ವರ್ಷ 19 ಲಕ್ಷದಷ್ಟು ಹೆಚ್ಚಿನ ಲಾಭ ಗಳಿಸಿದೆ. ಶೇ 99.62 ಸಾಲ ವಸೂಲಾತಿ ಮಾಡಿದೆ. 2016ರ ಜುಲೈ 10 ರಂದು ಸಂಘ ಆರಂಭಗೊಂಡಿದ್ದು, ಪ್ರಸ್ತುತ 5543 ಸದಸ್ಯರಿದ್ದಾರೆ ಎಂದು ಮಾಹಿತಿ ನೀಡಿದರು. ಆಳ್ವಾಸ್ ಸಹಕಾರಿ ಸಂಘದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ, ನಮ್ಮ ಆಳ್ವಾಸ್ ಸಹಕಾರಿ ಸಂಘ ಮುಂದಿನ ವರ್ಷ ತನ್ನ ದಶಮಾನೋತ್ಸವದ ಹಿರಿಮೆಯ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಉಡುಪಿ, ಬ್ರಹ್ಮಾವರ, ಕುಂದಾಪುರ ಹಾಗೂ ಕಾರ್ಕಳ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿಯಿರುವ 16 ಅಂಗನವಾಡಿ ಕಾರ್ಯಕರ್ತೆ ಹಾಗೂ 131 ಅಂಗನವಾಡಿ ಸಹಾಯಕಿಯರ ಗೌರವಸೇವೆಯ ಹುದ್ದೆಗಳ ನೇಮಕಾತಿಗಾಗಿ ಆಸಕ್ತ ಮಹಿಳಾ ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳಾ ಅಭ್ಯರ್ಥಿಗಳಿಂದ ವೆಬ್‌ಸೈಟ್ https://karnemakaone.kar.nic.in/abcd/ ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವಾಗ ಮೊದಲನೇ ಹಂತದಲ್ಲಿ ಆನ್‌ಲೈನ್‌ನಲ್ಲಿ ನೀಡಲಾದ ಅರ್ಜಿ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡಿ, ಎರಡನೇ ಹಂತದಲ್ಲಿ ಅರ್ಜಿದಾರರ ಸಹಿ ಹಾಗೂ ಭಾವಚಿತ್ರವನ್ನು ಅಪ್‌ಲೋಡ್ ಮಾಡಿ, ನಂತರ ಇ-ಸೈನ್ ಹಂತವನ್ನು ಕಡ್ಡಾಯವಾಗಿ ಪೂರ್ಣಗೊಳಿಸಿ, ಮೂರನೇ ಹಂತದಲ್ಲಿ ಅರ್ಜಿದಾರರು ತಮಗೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ಅಪ್‌ಲೋಡ್ ಮಾಡಿ, ನಾಲ್ಕನೇ ಹಂತದಲ್ಲಿ ಮೂರನೇ ಹಂತದಲ್ಲಿ ಎಲ್ಲಾ ದಾಖಲಾತಿಗಳನ್ನು ಅಪ್‌ಲೋಡ್ ಮಾಡಿದ ಬಳಿಕ ಅರ್ಜಿ ಮುದ್ರಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 10 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕುಂದಾಪುರ ಹಾಗೂ ನೇತಾಜಿ ಸರ್ಕಾರಿ  ಪ್ರೌಢಶಾಲೆ ಕಾಳಾವರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ  ಕುಂದಾಪುರ ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ 14ರ ವಯೋಮಿತಿಯ ವಿಭಾಗದಲ್ಲಿ ಎಸ್ ವಿ ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿಯ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ  ಆಯ್ಕೆಯಾಗಿರುತ್ತಾರೆ. ಅವರಿಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಯುವಕ ಹಾಗೂ ಯುವತಿಯರಿಗೆ ನವೋದ್ಯಮಗಳನ್ನು ಪ್ರಾರಂಭಿಸಲು ಉತ್ತೇಜನ ನೀಡುವ ಯೋಜನೆಯನ್ನು ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಸಹಯೋಗದೊಂದಿಗೆ Elevate (Minorities) -2025 ರಲ್ಲಿನ ಮಾರ್ಗಸೂಚಿಗಳೊಂದಿಗೆ ಜಾರಿಗೊಳಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ವೆಬ್‌ಸೈಟ್ https://eitbt.karnataka.gov.in/en ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟಂಬರ್ 15 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ: 080-2223100 ಅಥವಾ ಇ-ಮೇಲ್ elevate.ktech@ka.gov.in ಅನ್ನು ಸಂಪರ್ಕಿಸಬಹುದಾಗಿದೆ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿ ಪ್ರಕಟಣೆ ತಿಳಿಸಿದೆ.

Read More