Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮನೆಯ ಅಂಗಳದಲ್ಲಿ ಜೋಕಾಲಿ ಕಟ್ಟಿ ಆಟವಾಡುತ್ತಿದ್ದ ಬಾಲಕಿಗೆ, ಕಾರು ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಗಂಭೀರವಾಗಿ ಗಾಯಗೊಂಡು, ಮೃತಪಟ್ಟ ಘಟನೆಯೊಂದು ತಾಲೂಕಿನ ಬೀಜಾಡಿ ಗ್ರಾಮದಲ್ಲಿ ನಡೆದಿದೆ. ಪ್ರಾಧನ್ಯ (09) ಮೃತ ದುರ್ದೈವಿ. ಶಾಲೆಗೆ ರಜೆ ಇದ್ದುದರಿಂದ ಬಾಲಕಿ ಪ್ರಾದಾನ್ಯ ಮನೆಯ ಅಂಗಳದಲ್ಲಿ ಇತರ ಮಕ್ಕಳೊಂದಿಗೆ ಎದುರುಗಡೆ ಮರಕ್ಕೆ ಸೀರೆಯಿಂದ ಜೋಕಾಲಿ ಕಟ್ಟಿ ಕುಳಿತು ಆಟ ಆಡುತ್ತಿದ್ದ ಸಂದರ್ಭ, ಮನೆಯ ಸನಿಹದಲ್ಲಿ ನಿಲ್ಲಿಸಿದ್ದ ಕಾರನ್ನು ಸಂಬಂಧಿ ಸಂತೋಷ ಎಂಬಾತ ನಿರ್ಲಕ್ಷ್ಯತನದಿಂದ ಚಲಾಯಿಸಿದ್ದರಿಂದ ಜೋಕಾಲಿ ಆಡುತ್ತಿದ್ದ ಪ್ರಾದಾನ್ಯಳಿಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಆಕೆಯು ಕೆಳಗೆ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದಾಗ ಮೃತಪಟ್ಟಿದ್ದಾಳೆಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಪ್ರತಿಭೆ ನಿಮ್ಮದು, ವೇದಿಕೆ ನಮ್ಮದು ಸರಣಿ ಕಾರ್ಯಕ್ರಮದಲ್ಲಿ ಎಪ್ರಿಲ್ ತಿಂಗಳ ಕಾರ್ಯಕ್ರಮ ಗೊಂಬೆ ಮನೆಯಲ್ಲಿ ನೆರವೇರಿತು. ವೇದಿಕೆಯಲ್ಲಿ ಉಪ್ಪಿನಕುದ್ರು ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ಮಾಜಿ ಮೊಕ್ತೇಸರರಾದ ವೆಂಕಟರಮಣ ಹೊಳ್ಳ, ವೇಣುಗೋಪಾಲ್ ಭಟ್, ಶ್ರೀಮತಿ ಸುಪ್ರಸನ್ನ ನಕ್ಕತ್ತಾಯ, ಯೋಗೀಶ್ ಪೂಜಾರಿ ಹಾಗೂ ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ ರವರು ಉಪಸ್ಥಿತರಿದ್ದರು. ಖ್ಯಾತ ಸಂಗೀತಗಾರರಾದ ವೇಣುಗೋಪಾಲ್ ಭಟ್ ಕೋಟೇಶ್ವರ ಮತ್ತು ನೇರಳಕಟ್ಟೆ ಶ್ರೀ ಬ್ರಾಹ್ಮೀ ಕಲಾಶ್ರೀ ಯಕ್ಷ ನಾಟ್ಯ ಬಳಗದ ಯೋಗೀಶ್ ಪೂಜಾರಿ ಅವರನ್ನು ಅಕಾಡೆಮಿಯ ವತಿಯಿಂದ ಸನ್ಮಾನಿಸಲಾಯಿತು. ತಂಡದ ಎಲ್ಲಾ ಕಲಾವಿದರನ್ನೂ ಗೌರವಿಸಲಾಯಿತು. ತದನಂತರ ವೇಣುಗೋಪಾಲ್ ಭಟ್ ಮತ್ತು ತಂಡ, ಕೋಟೇಶ್ವರ ಇವರು ನಡೆಸಿಕೊಟ್ಟ ಸುಗಮ ಸಂಗೀತ ಕಾರ್ಯಕ್ರಮ ನೆರೆದ ಪ್ರೇಕ್ಷಕರನ್ನು ರಂಜಿಸಿತು. ಕೊನೆಯಲ್ಲಿ ಶ್ರೀ ಬ್ರಾಹ್ಮೀ ಕಲಾಶ್ರೀ ಯಕ್ಷ ನಾಟ್ಯ ಬಳಗ, ನೇರಳಕಟ್ಟೆ ಇವರಿಂದ ನಾಟ್ಯ ಹಾಸ್ಯ ವೈಭವ ಜರುಗಿತು. ಕಾರ್ಯಕ್ರಮವನ್ನು ಶಿಕ್ಷಕ ನಾಗೇಶ್ ಶ್ಯಾನುಭಾಗ್ ರವರು ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿಕೋಟ: ಡಾ. ಕಾರಂತ ಪ್ರತಿಷ್ಠಾನ(ರಿ)ಕೋಟ, ಡಾ. ಕಾರಂತ ಟ್ರಸ್ಟ್ (ರಿ) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ಕೊಡಮಾಡುವ ಕರಾವಳಿ ಕಣ್ಮಣಿ ದಿ. ಕೆ.ಸಿ ಕುಂದರ್ ಸ್ಮಾರಕ ದತ್ತಿ ಪುರಸ್ಕಾರವನ್ನು ಯುವ ಉದ್ಯಮಿ, ಸಮಾಜ ಸೇವಕ ಡಾ. ಗೋವಿಂದ ಬಾಬು ಪೂಜಾರಿ ಅವರಿಗೆ ಕೋಟದ ಕಾರಂತ ಥೀಮ್ ಪಾರ್ಕ್‌ನಲ್ಲಿ ಪ್ರದಾನ ಮಾಡಲಾಯಿತು. ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಡಾ. ಗೋವಿಂದ ಬಾಬು ಪೂಜಾರಿ ಅವರು ಸಮಾಜಕ್ಕೆ ನಮ್ಮಿಂದಾದ ನೆರವು ನೀಡುವುದರಲ್ಲಿ ಸಂತೋಷವಿದೆ. ನಾವು ಸಾಗಿದ ದಾರಿ ಮರೆಯದಿದ್ದಾಗ ಪ್ರತಿಯೊಬ್ಬರಿಗೂ ಇನ್ನೊಬ್ಬರ ಕಷ್ಟಕ್ಕೆ ಮಿಡಿಯುವ ಮನೋಭಾವ ತನ್ನಿಂದತಾನೆ ಬೆಳೆಯುತ್ತದೆ. ಗೆದ್ದಾಗ ಜೈಕಾರ ಹಾಕುವ ಬದಲು ಅವರ ಕಷ್ಟದ ಸಮಯದಲ್ಲಿ ನೆರವಾಗುವುದು ಉತ್ತಮ. ಇನ್ನಷ್ಟೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಅಭಿಲಾಷೆಯಿದೆ. ಥೀಮ್ ಪಾರ್ಕ್ ಕಾರ್ಯ ಚಟುವಟಿಕೆಗಳು ಶ್ಲಾಘನೀಯ ಎಂದರು. ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್ ಫಲಾಪೇಕ್ಷೆ ಇಲ್ಲದೇ ಮಾಡುವ ಸಮಾಜಮುಖಿ ಚಟುವಟಿಕೆಗಳು ಶ್ರೇಷ್ಠವೆನಿಸಕೊಳ್ಳುತ್ತವೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬ್ಯಾರೀಸ್ ವಿದ್ಯಾ ಸಂಸ್ಥೆಗಳು ಕೋಡಿ , ಕುಂದಾಪುರ, ಇವರು ಆಯೋಜಿಸಿ ಪ್ರತಿ ತಿಂಗಳ ಕೊನೆಯ ರವಿವಾರ ನಡೆಸುತ್ತಿರುವ “ಸ್ವಚ್ಛ ಕಡಲ ತೀರ -ಹಸಿರು ಕೋಡಿ” ಅಭಿಯಾನದ 4ನೇ ಹಂತ ನೆರೆವೇರಿತು. ವಿಶ್ವ ಭೂ ದಿನಾಚರಣೆಯಂದು ನಡೆಯುತ್ತಿರುವ ಈ ಪರಿಸರ ಸಂರಕ್ಷಣೆಯ ಕಾರ್ಯಕ್ಕೆ ಹೊಸ ಮೆರುಗನ್ನು ಕೊಟ್ಟಿದೆ ಮತ್ತ್ತು ಸಾರ್ಥಕ ಭಾವ ತುಂಬಿದೆ ಎಂದು ಸಯ್ಯದ್ ಮಹಮ್ಮದ್ ಬ್ಯಾರಿ ಯವರು ಸಂತೋಷ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು, ಶಿಕ್ಷಕರು, ಆಡಳಿತ ಮಂಡಳಿಯ ಸದಸ್ಯರು, ರಕ್ಷಕ- ಶಿಕ್ಷಕ ಸಂಘದ ಸದಸ್ಯರು, ಪೋಷಕರು, ಪ್ರಾಕ್ತನ ವಿದ್ಯಾರ್ಥಿಗಳು, ಊರಿನ ಪ್ರಮುಖರು ಹಾಗೂ ಮಹಾಜನರು ಮತ್ತು ನಿಸರ್ಗ ಪ್ರಿಯರು ಈ ಅಭಿಯಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಕೋಡಿಯ ಕಡಲ ತೀರವನ್ನು ಸ್ವಚ್ಛಗೊಳಿಸಿದರು. ಈ ಕಾರ್ಯದಲ್ಲಿ ನಮಗೆ ಸಹಕಾರವನ್ನು ನೀಡುತ್ತಿರುವ ಕುಂದಾಪುರ ಪುರಸಭೆಯ ಚೀಫ್ ಆಫೀಸರ್ ಹಾಗೂ ಪದಾಧಿಕಾರಿಗಳಿಗೆ ಮತ್ತು ಎಲ್ಲಾ ಸಿಬ್ಬಂದಿವರ್ಗದವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಬ್ಯಾರೀಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಅಧ್ಯಕ್ಷರಾದ ಹಾಜಿ ಕೆ ಎಂ ಅಬ್ದುಲ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಓದು ಎನ್ನುವುದು ಸಹಜಕ್ರಿಯೆ, ಪ್ರತಿಯೋರ್ವರ ಜ್ಞಾನದಾಹಕ್ಕಾಗಿ ಓದಿನ ಹಸಿವನ್ನು ಬೆಳೆಸಿಕೊಳ್ಳಬೇಕು. ಓದು ಸ್ವಅನುಭವಕ್ಕಿಂತ ಭಿನ್ನವಾದುದು, ಅತ್ಯುತ್ತಮ ವೈವಿಧ್ಯಮಯ ಪುಸ್ತಕಗಳ ಓದುವಿಕೆಯಿಂದ ಅನ್ಯರ ಜೀವನಾನುಭವವನ್ನು ಗ್ರಹಿಸಬಹುದು. ಈ ತೆರನಾಗಿ ಜ್ಞಾನ , ಸಂಸ್ಕಾರ , ಪ್ರವೃತ್ತಿಗಳ ಮೂಲಕ ಸಮೃದ್ದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿದೆ” ಎಂದು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ದೋಮ ಚಂದ್ರಶೇಖರ್ ಹೇಳಿದರು. ಅವರು ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಲಾದ ವಿಶ್ವ ಪುಸ್ತಕ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯರಾದ ಸಿದ್ದಪ್ಪ ಕೆ. ಎಸ್ ಪ್ರಾಸ್ತಾವಿಕವಾಗಿ ಮಾತನಾಡಿ “ವಿದ್ಯಾರ್ಥಿಗಳಲ್ಲಿ ರಚನಾತ್ಮಕ ಮನೋಭಾವ ಬೆಳೆಯಲು ಓದುವಿಕೆಯ ಹವ್ಯಾಸ ಅಡಿಪಾಯವನ್ನು ಒದಗಿಸಬಲ್ಲದು” ಎಂದರು. ಉಪನ್ಯಾಸಕರಾದ ಪ್ರವೀಣ್ ಕುಮಾರ್ ಕೆ. ಪಿ ಸ್ವಾಗತಿಸಿದರು, ಅನಂತ ಭಟ್ ನಿರೂಪಿಸಿದರು, ಉಪನ್ಯಾಸಕಿ ಡಾ. ಉಷಾರಾಣಿ ವಂದಿಸಿದರು. ಕಾಲೇಜಿನ ಎಲ್ಲಾ ಉಪನ್ಯಾಸಕರು, ಪ್ರಶಿಕ್ಷಣಾರ್ಥಿಗಳು ಮತ್ತು ಓಡಿಎಲ್ ಪ್ರಶಿಕ್ಷಣಾರ್ಥಿಗಳು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಗ್ರಾಮದ ಹೆಗ್ಡೆಹಕ್ಲು ನಿವಾಸಿ ಸುನೀತಾ (22) ಎಂಬ ಯುವತಿಯು ಏಪ್ರಿಲ್ 20 ರಂದು ಬೆಳಗ್ಗೆ 11.30 ರ ಸುಮಾರಿಗೆ ಕೆಲಸಕ್ಕೆಂದು ತೆರಳಿದವರು ವಾಪಾಸು ಮನೆಗೆ ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 4 ಇಂಚು ಎತ್ತರ, ಎಣ್ಣೆ ಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ, ತೆಲುಗು ಹಾಗೂ ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕೊಲ್ಲೂರು ಪೊಲೀಸ್ ಠಾಣೆ ದೂ.ಸಂಖ್ಯೆ: 08254- 258233, ಮೊ.ನಂ. 9480805460, ಬೈಂದೂರು ವೃತ್ತ ನಿರೀಕ್ಷಕರ ಕಚೇರಿ ದೂ.ಸಂಖ್ಯೆ:08254-251031, ಮೊ.ನಂ: 9480805434, ಕಂಟ್ರೋಲ್ ರೂಂ : 100, 0820-2526444 ಅನ್ನು ಸಂಪರ್ಕಿಸುವಂತೆ ಕೊಲ್ಲೂರು ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬೈಂದೂರು ಪರಿಸರದಲ್ಲಿ ಬ್ರಾಹ್ಮಣರು ಜಾತಿ ಪರಿಗಣನೆಯಲ್ಲಿ ಅಲ್ಪ ಸಂಖ್ಯಾತರು. ಆರ್ಥಿಕವಾಗಿಯೂ ದುರ್ಬಲರು. ಅವರ ಆರ್ಥಿಕ ಅಭಿವೃದ್ಧಿಯನ್ನು ಗುರಿಯಾಗಿರಿಸಿಕೊಂಡು ನಾಡ ಕೇಂದ್ರಿತವಾಗಿ ವಿಪ್ರ ಸೇವಾ ಸಹಕಾರಿ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಸಂಘದ ಅಧ್ಯಕ್ಷ ಎಂ. ವಿನಾಯಕ ರಾವ್ ಹೇಳಿದರು. ನಾಡ ಗುಡ್ಡೆಯಂಗಡಿಯ ಬಡಾಕೆರೆ ಮಾರ್ಗದಲ್ಲಿರುವ ಸ್ಪೂರ್ತಿ ಕಾಂಪ್ಲೆಕ್ಸ್‌ನಲ್ಲಿ ಶುಕ್ರವಾರ ನಡೆದ ಸಂಘದ ಕಾರ್ಯಾಲಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾಲೂಕು ವ್ಯಾಪ್ತಿಯ ಈ ಸಂಘಕ್ಕೆ ಎಲ್ಲ ವಿಪ್ರರೂ ಸದಸ್ಯರಾಗಬೇಕು. ಸಾಧ್ಯವಾದವರು ಠೇವಣಿ ನೀಡುವುದರ ಜತೆಗೆ ಅನ್ಯ ಸಮುದಾಯದವರಿಂದಲೂ ಠೇವಣಿ ಸಂಗ್ರಹಿಸುವ ಮೂಲಕ ಸಂಘವನ್ನು ಬಲಪಡಿಸಬೇಕು ಎಂದು ಅವರು ವಿಂತಿಸಿದರು. ನಿವೃತ್ತ ಶಿಕ್ಷಕ ಪಿ. ರಾಮಚಂದ್ರಯ್ಯ ಸಂಘದ ಕಚೇರಿಯನ್ನು ಉದ್ಘಾಟಿಸಿದರು. ನಾಗೇಶ ಹೆಬ್ಬಾರ್ ಪಡುಕೋಣೆ ಷೇರು ಪತ್ರ ವಿತರಿಸಿದರು. ಹೊರ್ಣಿ ಪದ್ಮನಾಭ ಹೆಬ್ಬಾರ್ ಠೇವಳಿ ಪತ್ರ ಬಿಡುಗಡೆಗೊಳಿಸಿದರು. ಮರವಂತೆ ವಲಯ ದ್ರಾವಿಡ ಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷ ಪ್ರಕಾಶ ಹೆಬ್ಬಾರ್ ಗುಳ್ಕೋಣ್, ತಾಲೂಕು ಬ್ರಾಹ್ಮಣ ಪರಿಷತ್ತಿನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಯಾವುದೇ ಕ್ಷೇತ್ರದದಲ್ಲಿ ಸಾಧಕರಾದರೂ ಜೀವನದಲ್ಲಿ ಕೃತಜ್ಞತಾ ಭಾವವಿರಬೇಕು, ನಮ್ಮ ಉದ್ದೇಶ ಸ್ಪಷ್ಟವಾಗಿದ್ದಾಗ ಮಾತ್ರ ಬುದ್ಧಿಮತ್ತೆಯಿಂದ ಗುರಿ ತಲುಪಲು ಸಾಧ್ಯ ಎಂದು ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಸ್. ಅಬ್ದುಲ್ ನಜ್ಹೀರ್ ಹೇಳಿದರು. ಪುತ್ತಿಗೆಯ ಕೆ. ವನಜಾಕ್ಷಿ ಶ್ರೀಪತಿ ಭಟ್ ವೇದಿಕೆಯಲ್ಲಿ ನಡೆದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ವಿವಿಗಳ ಕಳೆದ ಮೂರು ವರ್ಷಗಳ ಶೈಕ್ಷಣಿಕ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಶಿಕ್ಷಣ ಮೆದುಳನ್ನು ಪಳಗಿಸಬೇಕೇ ವಿನಃ ಮಾಹಿತಿಯನ್ನು ತುಂಬುವ ಮೆದುಳನ್ನಾಗಿಸಬಾರದು. ವೇಗವಾಗಿ ಬೆಳೆಯುತ್ತಿರುವ ಆಧುನಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ವೃತ್ತಿಜೀವನ ಹಾಗೂ ವೈಯಕ್ತಿಕ ಜೀವನವನ್ನು ಸಮಬಲದಲ್ಲಿ ನಿಭಾಯಿಸಬೇಕು. ಪ್ರತಿಯೊಬ್ಬರೂ ವಿವಿಧ ಸಮಯದಲ್ಲಿ ಹಲವು ವಿಚಾರಗಳನ್ನು ಕಲಿಯುತ್ತಲೇ ಇರುತ್ತಾರೆ, ಕಲಿಯುವಿಕೆಯು ನಿರಂತರ ಪ್ರಕ್ರಿಯೆ ಆದ್ದರಿಂದ ಪಡೆದ ಜ್ಞಾನದ ಕೆಲವು ಅಂಶಗಳನ್ನಾದರೂ ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕೆಂದರು. ತಮ್ಮ ಜೀವನದ ಆದರ್ಶದ ಕುರಿತು ಮಾತನಾಡಿದ ಅವರು, ದೆಹಲಿಯ ತಮ್ಮ ನಿವಾಸದಿಂದ ಸುಪ್ರೀಂ ಕೋರ್ಟ್ ಗೆ ತೆರಳುವ ಸಂದರ್ಭದಲ್ಲಿ…

Read More

ಕುಂದಾಪ್ರ ಡಾಟ್ ಕಾಂ ವರದಿ.ಕುಂದಾಪುರ: ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಸೇರಿಕೊಂಡು ಒಂದು ಸಂಜೆಯನ್ನು ರಾತ್ರಿಯಾಕಾಶದ ಕೌತುಕಗಳನ್ನು ನೋಡುವ ‘ಚುಕ್ಕಿ ಚಂದ್ರಮ’ ಆಕಾಶ ವೀಕ್ಷಣೆ ಕಾರ್ಯಕ್ರಮ ಹಾಗೂ ಒಂದಿಡೀ ದಿನದ ವಿಜ್ಞಾನ ಕಾರ್ಯಾಗಾರ ಶುಕ್ರವಾರ ಕುಂದಾಪುರದ ಸಂತ ಜೋಸೆಫ್ ಪ್ರೌಢಶಾಲೆಯಲ್ಲಿ ಜರುಗಿತು. ಸಮುದಾಯ ಕುಂದಾಪುರ ಅನೇಕ ವರ್ಷಗಳಿಂದ ಸಮುದಾಯದ ಒಡನಾಡಿಗಳೂ, ಬಹುಪರಿಚಿತ ನಾಟಕಕಾರರೂ, ವಿಚಾರ ಚಳುವಳಿಯಲ್ಲಿ ತಮ್ಮಿಡೀ ಕುಟುಂಬವನ್ನು ತೊಡಗಿಸಿದ ದಿ. ಕಾರ್ಕಡ ರಾಮಚಂದ್ರ ಉಡುಪರ ನೆನಪಿನಲ್ಲಿ “ಚುಕ್ಕಿ ಚಂದ್ರಮ” ಆಕಾಶ ವೀಕ್ಷಣೆ ಕಾರ್ಯಕ್ರಮ ನಡೆಸುತ್ತಾ ಬಂದಿದೆ. ನಿತ್ಯದ ಸೈನ್ಸ್ ಕ್ಲಾಸು ಹೀಗೇ ಇರಬಾರದೆ?ಆರರಿಂದ ಹತ್ತನೇ ತರಗತಿಯವರೆಗಿನ ಐವತ್ತೈದು ಮಕ್ಕಳು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡು ಬಂದಿದ್ದರು. ಅಡುಗೆಮನೆಯ ಪರಿಚಿತ ಸಾಮಗ್ರಿಗಳನ್ನೇ ಬಳಸಿಕೊಂಡು ವಿಜ್ಞಾನ ಶಿಕ್ಷಕ ಉದಯ ಗಾಂವಕಾರ ರಸಾಯನ ಶಾಸ್ತ್ರದ ಪ್ರಯೋಗಗಳನ್ನು ಮಾಡಿಸುತ್ತಾ ಹೋದಂತೆ ಮಕ್ಕಳು ಏಕೆ, ಹೇಗೆ ಮುಂತಾದ ಪ್ರಶ್ನೆಗಳನ್ನು ಬೆರಗುಗಣ್ಣಿನಿಂದ ಕೇಳತೊಡಗಿದರು. ಈ ಪ್ರಶ್ನೆಗಳಿಂದ ಹೇಗೋ ತಪ್ಪಿಸಿಕೊಂಡು, ಕೆಲವನ್ನು ಎದುರಾಡಿಕೊಂಡು ಮತ್ತೆ ಕೆಲವನ್ನು ಬಗ್ಗಿಸಿ, ಭಾಗಿಸಿ ಉತ್ತರವಾಗಿಸಿಕೊಂಡವರೆಲ್ಲ ರವಿ ಕಟ್ಕರೆ ಮತ್ತು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಆರೋಗ್ಯ ಕ್ಷೇತ್ರದಲ್ಲಿ ಕೊರತೆಗಳ ಪಟ್ಟಿ ದೊಡ್ಡದಿದ್ದು, ಪ್ರಸಕ್ತ ಕಾಲಘಟ್ಟದಲ್ಲಿ ಕೊರತೆಗಳಿಗೆ ಮುಕ್ತಿಕೊಡುವ ಕೆಲಸ ಆಗುತ್ತಿದೆ. ವೈದ್ಯಕೀಯ ಕ್ಷೇತ್ರವಷ್ಟೇ ಅಲ್ಲದೆ ನಾಗರಿಕರಿಗೆ ಆರೋಗ್ಯ ಕಾರ್ಡ್ ನೀಡುವ ಮೂಲಕ ಅಸಹಾಯಕರ ನೆರವಿಗೆ ಬರಲಾಗುತ್ತಿದೆ. ಆಸ್ಪತ್ರೆಯಲ್ಲಿಯೆ ಆಕ್ಸಿಜನ್ ಪ್ಲಾಂಟ್ ಸ್ಥಾಪಿಸುವ ಮೂಲಕ ಸ್ವಾವಲಂಬಿಯಾಗುತ್ತಿದೆ. ಕರೋನಾ ನಂತರದ ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಬದಲಾವಣೆ ಆಗಿದೆ ಎಂದು ಕೇಂದ್ರ ಕೃಷಿ ಸಚವೆ ಶೋಭಾ ಕರಂದ್ಲಾಜೆ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಪಂ, ತಾಲೂಕು ಆರೋಗ್ಯಾಧಿಕಾರಿ ಕಚೇರಿ, ತಾಲೂಕು ಸಾರ್ವಜನಿಕ ಆಸ್ಪತ್ರೆ, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ, ವಿವಿಧ ರೋಟರಿ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಸಾರ್ವಜನಿಕ ಆಸ್ಪತ್ರೆ ವಠಾರದಲ್ಲಿ ಶನಿವಾರ ನಡೆದ ತಾಲೂಕು ಮಟ್ಟದ ಆರೋಗ್ಯ ಮೇಳ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ಹಿಂಜರಿಕೆ ಬಿಟ್ಟು ಆರೋಗ್ಯ ಸಮಸ್ಯೆ ಬಗ್ಗೆ ವೈದ್ಯರ ಸಲಹೆ ಪಡೆದು ಎಚ್ಚರಿಕೆ ವಹಿಸಬೇಕು. ಖಾಯಿಲೆ ಬರುವುದಕ್ಕಿಂತ ಮುನ್ನಾ ರೋಗದ ಬಗ್ಗೆ ಕಾಳಿಜಿ ವಹಿಸಬೇಕು. ಆರೋಗ್ಯ ಮೇಳದಲ್ಲಿ ಎಲ್ಲಾ ವಿವಿಧ ಖಾಯಿಲೆ ಪರಿಣತ ವೈದ್ಯರು,…

Read More