Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ರೋಟರಿ ಕ್ಲಬ್ ಬೈಂದೂರು, ಮಧ್ವರಾಜ್ ಅನಿಮಲ್ ಕೇರ್ ಟ್ರಸ್ಟ್ ರಿ. ಮಲ್ಪೆ, ಫ್ರೋಡೋ ಫೌಂಡೇಶನ್ ಹಾಗೂ ಜೆಸಿಐ ಬೈಂದೂರು ಸಿಟಿ ಇನ್ನರ್ ವೀಲ್ ಬೈಂದೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ “ದೇಶೀ ನಾಯಿಗಳ ಗಂಡು/ಹೆಣ್ಣು ಉಚಿತ ಸಂತಾನಹರಣ ಚಿಕಿತ್ಸಾ ಶಿಬಿರಕ್ಕೆ ಸೋಮವಾರ ಚಾಲನೆ ನೀಡಲಾಯಿತು. ​ಈ ಶಿಬಿರವನ್ನು ಪಶು ವೈದ್ಯರಾದ ಡಾ. ಶಂಕರ್ ಶೆಟ್ಟಿ ಉದ್ಘಾಟಿಸಿ, ಮಾತನಾಡಿ, ಪ್ರಾಣಿಗಳ ನಿಯಂತ್ರಣ ಹಾಗೂ ಆರೋಗ್ಯ ಸಂರಕ್ಷಣೆಯಲ್ಲಿ ಇಂತಹ ಸಾಮಾಜಿಕ ಕಾಳಜಿಯ ಶಿಬಿರಗಳು ಅತ್ಯಂತ ಶ್ಲಾಘನೀಯ ಇದರಿಂದ ಬೀದಿನಾಯಿಗಳ ನಿಯಂತ್ರಣ ಸಾದ್ಯ ಎಂದರು. ​ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಕ್ಲಬ್ ಬೈಂದೂರು ಅಧ್ಯಕ್ಷ ಅರುಣ್ ಕುಮಾರ್, ಕಳೆದ ಬಾರಿಯೂ ಅತ್ಯಂತ ಯಶಸ್ವಿಯಾಗಿ ನೆರವೇರಿದ್ದ ಈ ಶಿಬಿರವು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಈ ಬಾರಿಯೂ ಇಂದಿನಿಂದ (ಅಕ್ಟೋಬರ್ 05 ರಿಂದ ಅಕ್ಟೋಬರ್ 10 ರವರೆಗೆ) ಒಟ್ಟು ಐದು ದಿನಗಳ ಕಾಲ ನುರಿತ ಪಶುವೈದ್ಯರ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಬಾಕ್ಸಿಂಗ್  ಸ್ಪರ್ಧೆಯಲ್ಲಿ ಕಿರಿಮಂಜೇಶ್ವರದ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಶಾಲೆಯ  ವಿದ್ಯಾರ್ಥಿ ಪ್ರತೀಕ್ ಪೂಜಾರಿ ಪ್ರಥಮ ಸ್ಥಾನಗಳಿಸಿ ಚಿನ್ನದ ಪದಕದೊಂದಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡು ದಾಖಲೆಯ ಹೊಸ ಭಾಷ್ಯ ಬರೆದಿದ್ದಾರೆ. 14ರ ವಯೋಮಾನದ ಬಾಲಕರ ವಿಭಾಗದಲ್ಲಿ ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಶಾಲೆಯ ವಿದ್ಯಾರ್ಥಿ ಪ್ರತೀಕ್ ಪೂಜಾರಿ ಅಮೋಘ ಪ್ರದರ್ಶನ ನೀಡಿ, ಪ್ರಥಮ ಸ್ಥಾನ ಗಳಿಸಿಕೊಂಡು, ರಾಷ್ಟ್ರಮಟ್ಟದ ಬಾಕ್ಸಿಂಗ್ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ. ಇದೇ ಸ್ಪರ್ಧೆಯಲ್ಲಿ *17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಶಾಲೆಯ ಕೀರ್ತನಾ ದ್ವಿತೀಯ ಸ್ಥಾನ ಹಾಗೂ ಬಾಲಕರ ವಿಭಾಗದಲ್ಲಿ ಮೊಹಮದ್ ನಿಹಾನ್ ತೃತೀಯ ಸ್ಥಾನ ಪಡೆದರು. ಜನತಾ ಸಮೂಹ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಚಟುವಟಿಕೆಗಳಷ್ಟೇ ಆದ್ಯತೆಯನ್ನು ಕ್ರೀಡಾ ಚಟುವಟಿಕೆಗಳಿಗೂ ನೀಡುತ್ತಿದ್ದು, ಈಗಾಗಲೇ ಸಂಸ್ಥೆಯಿಂದ ಹಲವಾರು ವಿದ್ಯಾರ್ಥಿಗಳು ಕರಾಟೆ,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ರಾಜ್ಯದ ಅರ್ಹ ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಪಾರ್ಸಿ ಹಾಗೂ ಸಿಖ್ ಸಮುದಾಯದ ವಿದ್ಯಾರ್ಥಿಗಳಿಂದ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ( 1 ರಿಂದ 8ನೇ ತರಗತಿ) ಯೋಜನೆಯ ಸೌಲಭ್ಯ ಪಡೆಯಲು ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್ ಎಸ್.ಎಸ್.ಪಿ ತಂತ್ರಾಂಶ https://ssp.postmatric.karnataka.gov.in ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ: 8277799990, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೌಲಾನಾ ಆಜಾದ್ ಭವನ, ಅಲೆವೂರು ರಸ್ತೆ, ಮಣಿಪಾಲ ದೂ.ಸಂಖ್ಯೆ: 0820-2573596, ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ದೂ.ಸಂಖ್ಯೆ: 0820-2574596 ಅಥವಾ ಕಾರ್ಕಳ ದೂ.ಸಂಖ್ಯೆ: 08258-231101 ಹಾಗೂ ಕುಂದಾಪುರ ದೂ.ಸಂಖ್ಯೆ: 08254-230370 ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ  ಆಂಗ್ಲ ಮಾಧ್ಯಮ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ”ಸೈಬರ್ ಅಪರಾಧ” ದ ಬಗ್ಗೆ ಮಾಹಿತಿ ಕಾರ್ಯಗಾರವನ್ನು ಏರ್ಪಡಿಸಲಾಯಿತು. ಕ್ರೈಂ ಡಿಪಾರ್ಟ್ಮೆಂಟ್, ಉಡುಪಿ ಇಲ್ಲಿಯ ಪವನ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಕಾರ್ಯಕ್ರಮವನ್ನು ನೆರವೇರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು ತಮ್ಮಲ್ಲಿರುವ ಸಂದೇಹಗಳನ್ನು ಪ್ರಶ್ನೆ ಕೇಳುವ ಮೂಲಕ ಪರಿಹರಿಸಿಕೊಂಡರು. ಈ ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಗಾಣಿಗ, ಉಪಪ್ರಾಂಶುಪಾಲರಾದ ಸುಜಯ್ ಕೋಟೆಗಾರ್, ಕಿರಿಯ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ರೇಷ್ಮಾ ಡಿಸೋಜ, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಪ್ರಮೀಳಾ ಡಿಸೋಜ ಅವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಕೃಷ್ಣ ಅಡಿಗ ಸರ್ವರನ್ನು ಸ್ವಾಗತಿಸಿ, ಶಿಕ್ಷಕಿ ಶುಭ್ರತಾ ಅವರು ನಿರೂಪಿಸಿ, ಶಿಕ್ಷಕಿ ರಕ್ಷಿತಾ ಧನ್ಯವಾದ ಸಮರ್ಪಣೆಗೈದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ. ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಡಾ. ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ನಗರದ ಬ್ರಹ್ಮಗಿರಿಯ ರೆಡ್ ಕ್ರಾಸ್ ಭವನದಲ್ಲಿ ವಿವಿಧ ಸ್ಪರ್ಧೆಗಳು ನಡೆಯಿತು. ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಂದಾಪುರದ ಎಚ್.ಎಂ.ಎಂ ಮತ್ತು ವಿ.ಕೆ.ಆರ್ ಆಚಾರ್ಯ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ರಮೇಶ್ ಹಾಂಡ, ಇಂದಿನ ಮಕ್ಕಳಲ್ಲಿ ಪ್ರತಿಭೆ ಅಪಾರವಾಗಿದೆ. ಪ್ರತಿಭೆಯನ್ನು ಹೊರತರುವಲ್ಲಿ ಚಿತ್ರಕಲೆ, ಪ್ರಬಂಧ, ಭಾಷಣ ಹಾಗೂ ವಿವಿಧ ಸೃಜನಾತ್ಮಕ ಸ್ಪರ್ಧೆಗಳು ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಇಂತಹ ಸ್ಪರ್ಧೆಗಳು ಕೇವಲ ಬಹುಮಾನಕ್ಕಾಗಿ ಮಾತ್ರವಲ್ಲದೇ ಮಕ್ಕಳ ಕಲ್ಪನಾಶಕ್ತಿ ಆತ್ಮವಿಶ್ವಾಸ ಮತ್ತು ಸೃಜನಶೀಲತೆಯನ್ನು ಬೆಳೆಸುವ ವೇದಿಕೆಯಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು, ಸ್ಪರ್ಧೆಯ ಮೂಲಕ ಕಾರಂತರ ಬದುಕು-ಬರಹಗಳ ಸಂದೇಶವನ್ನು ವಿದ್ಯಾರ್ಥಿಗಳಿಗೆ ಮುಟ್ಟಿಸುವ ಪ್ರಯತ್ನ ಮಾಡಲಾಗುವುದು ಎಂದರು. ಖ್ಯಾತ ರಂಗವಲ್ಲಿ ತಜ್ಞೆ ಡಾ. ಭಾರತಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಆಶ್ರಯದಲ್ಲಿ ಅನ್ನಪೂರ್ಣೇಶ್ವರಿ ಸೇವಾ ಬಂಧು ಟ್ರಸ್ಟ್ ಕುಂದಾಪುರ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ ಇವರ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣಾ ಶಿಬಿರ ಕಾರ್ಯಕ್ರಮವು ಕಾಲೇಜಿನಲ್ಲಿ ಜರುಗಿತು. ಅನ್ನಪೂರ್ಣೇಶ್ವರಿ ಸೇವಾ ಬಂಧು ಟ್ರಸ್ಟ್, ಕುಂದಾಪುರ ಇದರ ಗೌರವಾಧ್ಯಕ್ಷರಾದ ಪ್ರಥಮ ದರ್ಜೆ ವಿದ್ಯುತ್‌ ಗುತ್ತಿಗೆದಾರರಾದ ಕೆ. ಆರ್. ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಇಂದಿನ ಯುವ ಪೀಳಿಗೆಗೆ ಕಣ್ಣಿನ ಆರೋಗ್ಯ ಹಾಗೂ ಅದರ ಅರಿವು ಕಾಲೇಜು ದಿನಗಳಲ್ಲಿ ಅರ್ಥೈಸಿಕೊಳ್ಳಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಸಾದ್ ನೇತ್ರಾಲಯ ಉಡುಪಿ ಇದರ ಸಾರ್ವಜನಿಕ ಸಂಪರ್ಕಾಧಿಕಾರಿಯಾದ ಗಣೇಶ್ ಕಣ್ಣಿನ ಜಾಗೃತಿಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಅವರು ಮಾತನಾಡಿ, ಕಾಲೇಜು ವಿದ್ಯಾರ್ಥಿಗಳಲ್ಲಿ ಮೊಬೈಲ್ ದುರ್ಬಳಕೆ, ವಿದ್ಯಾರ್ಥಿಗಳ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಬ್ರಹ್ಮಾವರ ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್‌ಸೆಟ್) ಸಂಸ್ಥೆ ಬ್ರಹ್ಮಾವರ ವತಿಯಿಂದ ಆಯೋಜಿಸಲಾಗಿದ್ದ  ಮಹಿಳಾ ಟೈಲರಿಂಗ್ ತರಬೇತಿಯ ಸಮಾರೋಪ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಚಾಂತರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಜಯಂತಿ ವಾಸುದೇವ, ಬಾರ್ಕೂರು ಅನ್ನಪೂರ್ಣೇಶ್ವರಿ ದೇವಸ್ಥಾನದ ಮಹಿಳಾ ಸಂಘದ ಅಧ್ಯಕ್ಷರಾದ ಜಯಂತಿ ವಾಸುದೇವ ಅವರು ಶಿಬಿರಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿ ಮಾತನಾಡಿ, ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಬಂದು ಈ ರೀತಿ ತರಬೇತಿ ಪಡೆದುಕೊಂಡು ಮುಂದೆ ಬಂದಿರುವುದು ಹೆಮ್ಮೆಯ ವಿಚಾರ. ಕಲಿಕೆ ಅನ್ನುವುದು ನಿರಂತರವಾಗಿರುವುದು ಹಾಗಾಗಿ ಯಶಸ್ಸಿನ ಕೀಲಿ ಕೈ ನಿರಂತರವಾಗಿರುವ ಪ್ರಯತ್ನ. ಸಂಸ್ಥೆಯು ನಿರಂತರವಾಗಿ ಇಂತಹ ತರಬೇತಿಗಳನ್ನು ನೀಡುತ್ತಾ ಬಂದಿದ್ದು ಸಾವಿರಾರು ಅಭ್ಯರ್ಥಿಗಳು ತರಬೇತಿಯನ್ನು ಪಡೆದು ಸ್ವಂತ ಉದ್ಯಮವನ್ನು ನಡೆಸುತ್ತಿದ್ದಾರೆ. ಯಶಸ್ಸಿನ ಮೆಟ್ಟಿಲನ್ನು ಹತ್ತಬೇಕಾದರೆ ಮುಖ್ಯವಾಗಿ ಶ್ರದ್ಧೆ ಹಾಗೂ ಪ್ರಯತ್ನ ಬೇಕಾಗುತ್ತದೆ. ತರಬೇತಿಯ ಯಶಸ್ಸು ನೀವು ಸ್ವಂತ ಉದ್ಯಮವನ್ನು ಕೈಗೊಂಡಾಗ ಲಭಿಸುತ್ತದೆ. ಹಾಗಾಗಿ ಪ್ರಯತ್ನ ನಿರಂತರವಾಗಿರಲಿ ಎಂದು ಶುಭ ಹಾರೈಸಿದರು.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಐಟಿ ಕ್ಷೇತ್ರದಲ್ಲಿ ಗುರುತಿಸಲ್ಪಟ್ಟ ಕ್ಲೋಕೇಟ್ ಟೆಕ್ನಾಲಜೀಸ್ ಕುಂದಾಪುರ ಇವರ ನೂತನ ಕಚೇರಿಯ ಉದ್ಘಾಟನಾ ಸಮಾರಂಭವು  ಕುಂದಾಪುರದ ಶ್ರೀ ವೆಂಕಟರಮಣ ಆರ್ಕೆರ್ಡ್‌ನ  2ನೇ ಮಾಳಿಗೆಯ ಮಹಡಿಯಲ್ಲಿ ನೆರವೇರಿತು. ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಕುಂದಾಪುರ ಭಂಡಾರಕಾರ್ಸ್‌ ಕಾಲೇಜಿನ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಗಣೇಶ್.ಕೆ ಅವರು ಮಾತನಾಡಿ ” ಕುಂದಾಪುರದಂತ ಚಿಕ್ಕ ನಗರದಲ್ಲಿರುವ ಈ ಕಂಪನಿಯು ಲಂಡನ್ ನಂತಹ ದೊಡ್ಡ ನಗರದಲ್ಲಿ ಗ್ರಾಹಕರಿಗೆ ಸಾಫ್ಟ್ ವೇ‌ರ್ ಸರ್ವಿಸ್ ನೀಡುತ್ತಿರುವುದು ಅತ್ಯಂತ ಶ್ಲಾಘನೀಯ ವಿಷಯ ಎಂದು ತಮ್ಮ ಮಾತುಗಳಿಂದ ನೆರೆದವರ ಮುಂದೆ ಶುಭ ನುಡಿದರು. ಇದೇ ಸಂದರ್ಭದಲ್ಲಿ ಕ್ಲೋಕೇಟ್ ಸಂಸ್ಥೆಯ ಸಿ.ಎಸ್‌. ಆರ್ ನಿಧಿಯಿಂದ ಕೊಡ ಮಾಡಿದ ರೂ. 55,000/- ಚೆಕ್ಕನ್ನು ಕೆ.ಪಿ.ಎಸ್‌ ಶಾಲೆ ಕೋಟೇಶ್ವರ ಇವರ ಗೌರವ ಶಿಕ್ಷಕಿಯರ ವೇತನದ ಸಲುವಾಗಿ ಹಸ್ತಾಂತರಿಸಲಾಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಸ್ಥೆಯ ಪ್ರಾಜೆಕ್ಟ್ ಹೆಡ್  ಶಶಿಧರ ಶೆಟ್ಟಿ ಮೂಡುಗೋಪಾಡಿ ಕಳೆದ 17 ವರ್ಷಗಳಿಂದ ಕುಂದಾಪುರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ ಕೌಶಲ್ಯ ಮತ್ತು ಗುಣಮಟ್ಟಕ್ಕೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಸಾಹಿತ್ಯ ಸಮ್ಮೇಳನದ ಮೂಲಕ ಐಕ್ಯತೆಯನ್ನು ಸಾರೋಣ. ಕನ್ನಡ ನಾಡು ನುಡಿಗಾಗಿ ಸದಾ ಶ್ರಮಿಸೋಣ ಎಂದು ಸಾಹಿತಿ, ಬ್ರಹ್ಮಾವರ 5ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ನರೇಂದ್ರ ಕುಮಾರ್ ಕೋಟ ಹೇಳಿದರು. ಅವರು ಭಾನುವಾರ ಸಾಸ್ತಾನದ ಶಿವಕೃಪಾ ಕಲ್ಯಾಣಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಘಟಕದ ನೇತೃತ್ವದಲ್ಲಿ ಐದನೇ ಕನ್ನಡ ಸಾಹಿತ್ಯ ಸಮ್ಮೇಳನ ಬತ್ತದ ಹೆಜ್ಜೆ ನಾವೀನ್ಯದ ನಂದಾದೀಪ ಎಂಬ ಶೀರ್ಷಿಕೆಯಡಿ ನಡೆದ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಕನ್ನಡ ಭಾಷಾಭಿಮಾನ ವೃದ್ಧಿಯಾಗಬೇಕು. ಚುಟುಕು ಸಾಹಿತ್ಯದ ಮೂಲಕ ಎಳೆ ವಯಸ್ಸಿನಲ್ಲೇ ಮಕ್ಕಳಲ್ಲಿ ಪುಸ್ತಕ ಓದುವ ಹಾಗೂ ಸಾಹಿತ್ಯಾಸಕ್ತಿ ಮೂಡಿಸುವ ಕಾರ್ಯ ನಡೆಯಬೇಕು, ಈ ಬಗ್ಗೆ ಈಗಾಗಲೇ ಬ್ರಹ್ಮಾವರ ತಾಲೂಕಿನಲ್ಲಿ 70 ಸರಣಿ ಕಾರ್ಯಕ್ರಮ ಆಯೋಜಿಸಲಾಗಿದೆ, ಕುಂದಗನ್ನಡ ಅಧ್ಯಯನಪೀಠ ಸ್ಥಾಪನೆಯಾಗಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು. ಸಮ್ಮೇಳನಾಧ್ಯಕ್ಷ ನರೇಂದ್ರ ಕುಮಾರ್ ಕೋಟ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ 1895 ರಲ್ಲಿ ಮೂಡಿಬಂದ ಬಹುಪರಂಪರೆಯ ಯಕ್ಷಗಾನ ಮೇಳಗಳಾದ ಗೋಳಿಗರಡಿ, ಮಂದಾರ್ತಿ, ಅಮೃತೇಶ್ವರೀ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಆಲೂರು ಸಮೀಪದ ಕಳಿಯಲ್ಲಿರುವ ಚಿತ್ರಕೂಟ ಆಯುರ್ವೇದ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅದ್ಧೂರಿ “ಚಿತ್ರಕೂಟ ಆಯುರ್ವೇದ ಹಬ್ಬ”ವು ಅತ್ಯಂತ ಸಂಭ್ರಮ ಹಾಗೂ ಜನಮೆಚ್ಚುಗೆಯೊಂದಿಗೆ ಮುಕ್ತಾಯಗೊಂಡಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಹಿರಿಯ ವೈದ್ಯ ಡಾ. ರಘುರಾಮ್, “ಇದು ಕೇವಲ ಒಂದು ಹಬ್ಬದ ಸಮಾರೋಪ ಸಮಾರಂಭವಲ್ಲ; ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಆಯುರ್ವೇದ ಹಬ್ಬದ ನೈಜ ಉದ್ಘಾಟನೆ. ಯುವ ವೈದ್ಯ ಡಾ. ರಾಜೇಶ್ ಬಾಯರಿ ಅವರು ಕಂಡ ಕನಸು, ತಂದೆ-ತಾಯಿ ಹಾಗೂ ಗುರು-ಹಿರಿಯರ ಆಶೀರ್ವಾದದ ಬಲದಿಂದ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಸಾರ್ವಜನಿಕರ ಅಪಾರ ಸಹಭಾಗಿತ್ವ ಮತ್ತು ಪ್ರೀತಿಯೇ ಈ ಸಂಸ್ಥೆಯ ಮಹಾನ್ ಶಕ್ತಿ” ಎಂದು ಬಣ್ಣಿಸಿದರು. ಕಾರ್ಯಕ್ರಮದ ಇನ್ನೋರ್ವ ಅತಿಥಿ, ಸಮಾಜ ಸೇವಕ ಹಾಗೂ ಖ್ಯಾತ ದಾನಿ ಮಾರ್ಣಕಟ್ಟೆ ಕೃಷ್ಣಮೂರ್ತಿ ಮಂಜ ಅವರು ಮಾತನಾಡಿ, “ಗ್ರಾಮೀಣ ಭಾಗವಾದ ಕಳಿಯಲ್ಲಿ ಇಂತಹ ಅತ್ಯಾಧುನಿಕ ಹಾಗೂ ಗುಣಮಟ್ಟದ ಆಯುರ್ವೇದ ಸಂಸ್ಥೆಯನ್ನು ಕಟ್ಟಿ ಜಾಗತಿಕ ಮಟ್ಟದಲ್ಲಿ…

Read More