Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಸಾಹಿತ್ಯ ಸಮ್ಮೇಳನದ ಮೂಲಕ ಐಕ್ಯತೆಯನ್ನು ಸಾರೋಣ. ಕನ್ನಡ ನಾಡು ನುಡಿಗಾಗಿ ಸದಾ ಶ್ರಮಿಸೋಣ: ನರೇಂದ್ರ ಕುಮಾರ್ ಕೋಟ
    ಊರ್ಮನೆ ಸಮಾಚಾರ

    ಸಾಹಿತ್ಯ ಸಮ್ಮೇಳನದ ಮೂಲಕ ಐಕ್ಯತೆಯನ್ನು ಸಾರೋಣ. ಕನ್ನಡ ನಾಡು ನುಡಿಗಾಗಿ ಸದಾ ಶ್ರಮಿಸೋಣ: ನರೇಂದ್ರ ಕುಮಾರ್ ಕೋಟ

    Updated:05/10/2026No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕೋಟ:
    ಸಾಹಿತ್ಯ ಸಮ್ಮೇಳನದ ಮೂಲಕ ಐಕ್ಯತೆಯನ್ನು ಸಾರೋಣ. ಕನ್ನಡ ನಾಡು ನುಡಿಗಾಗಿ ಸದಾ ಶ್ರಮಿಸೋಣ ಎಂದು ಸಾಹಿತಿ ನರೇಂದ್ರ ಕುಮಾರ್ ಕೋಟ ಹೇಳಿದರು.

    Click Here

    Call us

    Click Here

    ಅವರು ಭಾನುವಾರ ಸಾಸ್ತಾನದ ಶಿವಕೃಪಾ ಕಲ್ಯಾಣಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಘಟಕದ ನೇತೃತ್ವದಲ್ಲಿ ಐದನೇ ಕನ್ನಡ ಸಾಹಿತ್ಯ ಸಮ್ಮೇಳನ ಬತ್ತದ ಹೆಜ್ಜೆ ನಾವೀನ್ಯದ ನಂದಾದೀಪ ಎಂಬ ಶೀರ್ಷಿಕೆಯಡಿ ನಡೆದ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

    ಕನ್ನಡ ಭಾಷಾಭಿಮಾನ ವೃದ್ಧಿಯಾಗಬೇಕು. ಚುಟುಕು ಸಾಹಿತ್ಯದ ಮೂಲಕ ಎಳೆ ವಯಸ್ಸಿನಲ್ಲೇ ಮಕ್ಕಳಲ್ಲಿ ಪುಸ್ತಕ ಓದುವ ಹಾಗೂ ಸಾಹಿತ್ಯಾಸಕ್ತಿ ಮೂಡಿಸುವ ಕಾರ್ಯ ನಡೆಯಬೇಕು, ಈ ಬಗ್ಗೆ ಈಗಾಗಲೇ ಬ್ರಹ್ಮಾವರ ತಾಲೂಕಿನಲ್ಲಿ 70 ಸರಣಿ ಕಾರ್ಯಕ್ರಮ ಆಯೋಜಿಸಲಾಗಿದೆ, ಕುಂದಗನ್ನಡ ಅಧ್ಯಯನಪೀಠ ಸ್ಥಾಪನೆಯಾಗಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.

    ಸಾಹಿತ್ಯ ಸಮ್ಮೇಳನಾಧ್ಯಕ್ಷರ ನೋಟದಲ್ಲಿ ಕೋಟ ಸಾಸ್ತಾನ ವಿವಿಧ ನೋಟ ವಿಶೇಷ:
    ಸಮ್ಮೇಳನಾಧ್ಯಕ್ಷ ನರೇಂದ್ರ ಕುಮಾರ್ ಕೋಟ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ 1895 ರಲ್ಲಿ ಮೂಡಿಬಂದ ಬಹುಪರಂಪರೆಯ ಯಕ್ಷಗಾನ ಮೇಳಗಳಾದ ಗೋಳಿಗರಡಿ, ಮಂದಾರ್ತಿ, ಅಮೃತೇಶ್ವರೀ ಮೇಳಗಳನ್ನು ಉಲ್ಲೇಖಿಸಿದ ಅವರು ಬೂದ, ಬೀರಾ ಭಾಗವತರು, ಐರೋಡಿ ಗೋವಿಂದಪ್ಪ, ಕಾಳಿಂಗ ನಾವಡ, ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರ, ಹಿಂದುಳಿದ ವರ್ಗದವರು ಬೇಳೂರಿನ ಕೂಡ್ಲಿ ಯಕ್ಷಗಾನ ಮೇಳ ಸ್ಥಾಪನೆ ಉಲ್ಲೇಖ, ಸಾಲಿಗ್ರಾಮ ಮಕ್ಕಳ ಮೇಳ, ಸಾಹಿತಿ ಪಿ. ಕಾಳಿಂಗ ರಾವ್, ಪತ್ರಕರ್ತರಾದ ಗಣಪತಿ ಪಾಂಡೇಶ್ವರ, ಬರಹಗಾರರಾದ ವೈದೇಹಿ, ಎಎಸ್ ಎನ್ ಹೆಬ್ಬಾರ್, ಸದಾನಂದ ಹೆಬ್ಬಾರ್,ಐರೋಡಿ ಶಿವರಾಮಯ್ಯ,ಇಬ್ರಾಹಿಂ ಸಾಹೇಬ್, ಹಂಗಾರಕಟ್ಟೆ ಜಟ್ಟಿಯ ಮೂಲಕ ವಿದೇಶ ಸಂಪರ್ಕ ಉಲ್ಲೇಖಿದರು.

    ನಮ್ಮ ನೆಲಕ್ಕೆ ಡಾ. ಕಾರಂತರಿಂದ ಪ್ರಸಿದ್ಧಿ:
    ಬ್ರಹ್ಮಾವರ ತಾಲೂಕಿನಲ್ಲಿ ಹುಟ್ಟಿ ನಡೆದಾಡುವ ವಿಶ್ವಕೋಶರಾದ ಜ್ಞನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಕೋಟ ಶಿವರಾಮ ಕಾರಂತರು ಸಾಹಿತ್ಯಿಕ ಬದುಕಿನಲ್ಲಿ ವಿಶ್ವಪ್ರಸಿದ್ಧರು ಅವರ ಹೆಸರಿನಲ್ಲಿ ಕಾರಂತ ಥೀಂ ಪಾರ್ಕ, ಕಾರಂತ ಟ್ರಸ್ಟ್ ಸ್ಥಾಪನೆ, ರಾಜಕಾರಣದಲ್ಲಿ ಕೋಟ ಶ್ರೀನಿವಾಸ ಪೂಜಾರಿ,ಉದ್ಯಮಕ್ಕೆ ಆನಂದ್ ಸಿ ಕುಂದರ್, ವಡ್ಡರ್ಸೆ ಮಹಾಲಿಂಗೇಶ್ವರ ದೇಗುಲ ಅಲ್ಲಿ ಪ್ರಾಚೀನ ಶಾಸನ,ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿ ಮಾಧ್ಯಮ ಸಾಧಕರಾಗಿ ಗುರುತಿಸಿಕೊಂಡ ಪರಿ, ಸರ್ವ ಧರ್ಮ ಸಮಸ್ವಯ ಸಾರುವ ಈ ಬ್ರಹ್ಮಾವರ, ಅಳುಪರ ಶಾಸನ, ಸೂರಾಲು ಅರಮನೆ, ರಂಗಭೂಮಿ ಕ್ಷೇತ್ರದಲ್ಲಿ ಗೋಪಾಲ್ ಆಚಾರ್ಯ, ಬಾಲಕೃಷ್ಣ ಪೂಜಾರಿ, ಅಲ್ವಿನ್ ಆಂದ್ರಾದೆ, ಸಿನಿಮಾ ಕ್ಷೇತ್ರದಲ್ಲಿ ರಘು ಪಾಂಡೇಶ್ವರ, ಸಾಹಿತ್ಯಿಕ ಯುವ ಸಾಹಿತ್ಯಾಸಕ್ತರು, ರಾಜ್ಯ ಸರಕಾರ ತುಳು ಭಾಷೆಗೆ ಮಾನ್ಯತೆ ನೀಡ ಬಗೆ ಶ್ಲಾಘಿಸಿದ ಅವರು ಸಾಹಿತ್ಯ ಪರಿಷತ್ ನಲ್ಲಿ ಕುಂದಗನ್ನಡದ ಅಧ್ಯಯನ ಪೀಠ ಹೋರಾಟದಲ್ಲಿ ಶ್ರಮಿಸಿದ ಜಯಪ್ರಕಾಶ್ ಹೆಗ್ಡೆ ಸಹಿತ ಹಲವರನ್ನು ನೆನಪಿಸಿ, ಪರಿಸರದ ಕ್ರಾಂತಿ ಪಂಚವರ್ಣ ಸಂಘಟನೆ ಕೋಟ, ಆನಂದ ಸೃಷ್ಠಿ, ಭಾಷಾ ಪಂಡಿತ ವಿಠ್ಠಲ ವಿ ಗಾಂವ್ಕರ್, ಹೀಗೆ ಅನೇಕ ವಿಚಾರಗಳನ್ನು ತಮ್ಮ ಸಮ್ಮೇಳನಾ ನುಡಿಯಲ್ಲಿ ಬಿಚ್ಚಿಟ್ಟರು.

    Click here

    Click here

    Click here

    Call us

    Call us

    ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಹಿತಿ ಪಾ. ಚಂದ್ರಶೇಖರ್ ಚಡಗ ಸಾಹಿತ್ಯ ಕ್ಷೇತ್ರದಲ್ಲಿ ನೇರ ನಡೆನುಡಿದ ಡಾ. ಕೋಟ ಶಿವರಾಮ ಕಾರಂತರನ್ನು ನೆನಪಿಸಿ ಕಾರಂತರ ಸಮಯ ಪ್ರಜ್ಞೆ,ಅವರ ತತ್ವ ಆದರ್ಶಗಳನ್ನು ಉಲ್ಲೇಖಿಸಿ ಪ್ರಸ್ತುತ ದಿನಗಳಲ್ಲಿ ಹದಗೆಟ್ಟ ಮಾನವೀಯ ಸಂಬಂಧಗಳನ್ನು ಉಲ್ಲೇಖಿಸಿದ ಅವರು ಸಮಾಜದ ಋಣ ತಿರಿಸುವ ಕಾರ್ಯ ಆಗಬೇಕಿದೆ ಎಂದು ಒತ್ತಿ ಹೇಳಿದರಲ್ಲದೆ ಪ್ರಮಾಣಿಕತೆಯ ಜೀವನ ನಡೆಸಲು ಕರೆ ನೀಡಿ ಪುಸ್ತಕ ಓದುವ ಹವ್ಯಾಸ ನೈಜ ಸಾಹಿತ್ಯ ಅಭಿರುಚಿಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಕರೆ ನೀಡಿದರು.

    ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಮ್ಮೇಳನದ ಗೌರವಾಧ್ಯಕ್ಷ ಆನಂದ್ ಸಿ. ಕುಂದರ್ ಚಾಗಂಟೆ ಬಾರಿಸಿ ಚಾಲನೆ ನೀಡಿ ಡಾ. ಕೋಟ ಶಿವರಾಮ ಕಾರಂತರ ನಂತರದ ದಿನಗಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಿದವರಲ್ಲಿ ನರೇಂದ್ರ ಕುಮಾರ್ ಕೋಟ ಒರ್ವರು,ಕಾರಂತ ಥೀಂ ಪಾರ್ಕ ಮೂಲಕ  ಹಲವು ಸಾಂಸ್ಕೃತಿಕ ಸಾಹಿತ್ಯಿಕ ಬದುಕು ಅನಾವರಣಗೊಳಿಸಿದ ಕೀರ್ತಿ ನರೇಂದ್ರ ಕುಮಾರ್ ಕೋಟರಿಗೆ ಸಲ್ಲುತ್ತದೆ ಈ ದಿಸೆಯಲ್ಲಿ ಅರ್ಥಪೂರ್ಣ ಸಮ್ಮೇಳನಕ್ಕೆ ಸಾಕ್ಷೀಯಾಗಿದೆ ಎಂದರು.

    ಕಾರ್ಯಕ್ರಮದಲ್ಲಿ  ಕಳೆದ ಬಾರಿ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪಿ.ನರಸಿಂಹ ಐತಾಳರ ಅನುಪಸ್ಥಿತಿಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ನಿಲಾವರ ಸುರೇಂದ್ರ ಅಡಿಗ ಕನ್ನಡ ಧ್ವಜವನ್ನು ಪ್ರಸ್ತುತ ಸಮ್ಮೇಳನಾಧ್ಯಕ್ಷ ನರೇಂದ್ರ ಕುಮಾರ್ ಕೋಟರಿಗೆ ಹಸ್ತಾಂತರಿಸಿದರು.

    ಜಿಲ್ಲಾ ಕಸಾಪ ಗೌರವಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಆಶಯದ ನುಡಿಯನ್ನಾಡಿದರು.

    ಮುಖ್ಯ ಅಭ್ಯಾಗತರಾಗಿ ವಿದ್ವಾನ್ ಡಾ. ವಿಜಯ ಮಂಜರ್, ಸಾಂಸ್ಕೃತಿಕ ಚಿಂತಕರಾದ ಇಬ್ರಾಹಿಂ ಸಾಹೇಬ್, ಬ್ರಹ್ಮಾವರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಗಾಣಿಗ, ಗೌರವ ಕೋಶಾಧ್ಯಕ್ಷ ಮನೋಹರ ಪಿ, ಕೋಟ ವಿದ್ಯಾಸಂಘದ ರಾಮದೇವ ಐತಾಳ್, ಸಾಂಸ್ಕೃತಿಕ ಚಿಂತಕ ರಘು ಮಧ್ಯಸ್ಥ, ಪ್ರತಾಪ್ ಶೆಟ್ಟಿ ಸಾಸ್ತಾನ, ಶೈಕ್ಷಣಿಕ ಚಿಂತಕ ರಿಷಿರಾಜ್ ಸಾಸ್ತಾನ, ವಿವಿಧ ತಾಲೂಕು ಘಟಕಗಳ ಅಧ್ಯಕ್ಷರಾದ ಕೊಂಡಳಿ ಪ್ರಭಾಕರ ಶೆಟ್ಟಿ, ಪುಂಡಲೀಕ ಮರಾಠೆ,ಯು.ಎಸ್ ಶೆಣೈ ಉಪಸ್ಥಿತರಿದ್ದರು.

    ಕಸಾಪ ತಾಲೂಕು ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ್ ಸ್ವಾಗತಿಸಿ, ಕಾರ್ಯಕ್ರಮವನ್ನು ತಾಲೂಕು ಘಟಕದ ಕೋಶಾಧಿಕಾರಿ ಅಲ್ತಾರ್ ನಾಗರಾಜ್ ನಿರೂಪಿಸಿ, ಸದಸ್ಯರಾದ ಪ್ರಶಾಂತ್ ಶೆಟ್ಟಿ ಸಾಸ್ತಾನ ವಂದಿಸಿದರು. ಸದಸ್ಯರಾದ ಗಿರೀಶ್ ಅಡಿಗ ಕಾರ್ಯಕ್ರಮ ನಿರ್ವಹಿಸಿದರು. ಸಮ್ಮೇಳನಾಧ್ಯಕ್ಷರ ಪರಿಚಯವನ್ನು ಶಿಕ್ಷಕಿ ಮಹಾಲಕ್ಷ್ಮೀ ಸೋಮಯಾಜಿ ವಾಚಿಸಿದರು.ಸುರೇಶ್ ಕಾರ್ಕಡ,ಮೀನಾ ಕಾರಂತ್ ನಾಡಗೀತೆ, ರೈತಗೀತೆ ಹಾಡಿದರು.

    ಸತೀಶ್ ವಡ್ಡರ್ಸೆ ಸಹಕರಿಸಿದರು. ಕಾರ್ಯಕ್ರಮಕ್ಕೆ ಗೀತಾನಂದ ಫೌಂಡೇಶನ್ ಮಣೂರು, ಬ್ರಹ್ಮಾವರ ಕಾರ್ಯನಿರತ ಪತ್ರಕರ್ತರ ಸಂಘ ಸಹಕಾರಿ ನೀಡಿತು.

    ಗೋಳಿಗರಡಿಯಿಂದ ಮೆರವಣಿಗೆ:
    ಸಾಸ್ತಾನದ ಗೋಳಿಗರಡಿ ದೈವಸ್ಥಾನದಿಂದ ಹೊರಟ ವೈಭವದ ಮೆರವಣಿಗೆಗೆ ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ,ಗೋಳಿಗರಡಿ ದೈವಸ್ಥಾನದ ಪಾತ್ರಿ ಶಂಕರ್ ಪೂಜಾರಿ ಚಾಲನೆ ನೀಡಿದರು.

    ಮೆರವಣಿಗೆಯಲ್ಲಿ ವಿವಿಧ ರೀತಿಯ ಸ್ಥಬ್ಧಚಿತ್ರ,ಯಕ್ಷಗಾನ ವೇಷಗಳು ಚಂಡೆವಾದನ ವಿಶೇಷವಾಗಿ ಗಮನ ಸೆಳೆದವು ಅಲ್ಲದೆ ಸಾಸ್ತಾನದ ಶಿವಕೃಪಾ ಕಲ್ಯಾಣಮಂಟಪದ ಸನಿಹದ ತುಂಗರ ಮಠದ ಶಿವ ದೇಗುಲಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಸಭಾಂಗಣಕ್ಕೆ ಆಗಮಿಸಲಾಯಿತು.

    ಬೆಳಿಗ್ಗೆ ಧ್ವಜಾರೋಹಣ:
    ಸಾಹಿತ್ಯ ಸಮ್ಮೇಳನದ ಅಂಗವಾಗಿ ಪೂರ್ವಾಹ್ನ ಐರೋಡಿ ಗ್ರಾಮ ಆಡಳಿತಾಧಿಕಾರಿ ಡಾ. ಸೂರಜ್ ಶೆಟ್ಟಿ ರಾಷ್ಟ್ರ ಧ್ವಜಾರೋಹಣ, ಜಿಲ್ಲಾಧ್ಯಕ್ಷ ನಿಲಾವರ ಸುರೇಂದ್ರ ಅಡಿಗ ಪರಿಷತ್ ಧ್ವಜಾರೋಹಣ ನೆರವೆರಿಸಿದರು. ಮುಖ್ಯ ಅತಿಥಿಗಳಾಗಿ ಸಾಸ್ತಾನ ಸಿಎ ಬ್ಯಾಂಕ್ ಅಧ್ಯಕ್ಷ ಸುರೇಶ್ ಅಡಿಗ, ಸಾಲಿಗ್ರಾಮ ದೇಗುಲದ ಟ್ರಸ್ಟಿ ಪ್ರಸನ್ನ ತುಂಗ, ತಾಲೂಕು ಸಾಹಿತ್ಯ ಪರಿಷತ್ತನ ಮಡಿ ವಿಶ್ವನಾಥ ಖಾರ್ವಿ, ಶಿಕ್ಷಕ ಸತೀಶ್ ಶೆಟ್ಟಿ, ಉಮಾನಾಥ, ಸಾಹಿತ್ಯ ಪರಿಷತ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

    Kota
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಚಿತ್ರಕೂಟ ಆಯುರ್ವೇದ ಹಬ್ಬ: ಸಮಾರೋಪ ಸಮಾರಂಭ ಸಂಭ್ರಮದ ತೆರೆ

    05/10/2026

    ಶ್ರೀ ವೆಂಕಟರಮಣ ಪ.ಪೂ ಕಾಲೇಜಿನ ಉಪನ್ಯಾಸಕಿ ಲತಾ ಪೈ ಅವರಿಗೆ ಉಡುಪಿ ಜಿಲ್ಲಾ ಅತ್ಯುತ್ತಮ ಉಪನ್ಯಾಸಕರ ಪ್ರಶಸ್ತಿ

    05/10/2026

    ಆಯುರ್ವೇದ ಎಂದರೆ ಕಷಾಯವಲ್ಲ, ಜೀವನ ವಿಧಾನ: ಚಿತ್ರಕೂಟ ಜೆನ್ ಜೀ ಆಯುರ್ವೇದ ಸಂವಾದದಲ್ಲಿ ತಜ್ಞರ ಅಭಿಮತ

    04/10/2026
    Leave A Reply Cancel Reply

    nine + 13 =

    Call us

    Click Here

    Call us

    Call us

    Call us
    Highest Viewed Recently
    • ಸಾಹಿತ್ಯ ಸಮ್ಮೇಳನದ ಮೂಲಕ ಐಕ್ಯತೆಯನ್ನು ಸಾರೋಣ. ಕನ್ನಡ ನಾಡು ನುಡಿಗಾಗಿ ಸದಾ ಶ್ರಮಿಸೋಣ: ನರೇಂದ್ರ ಕುಮಾರ್ ಕೋಟ
    • ಚಿತ್ರಕೂಟ ಆಯುರ್ವೇದ ಹಬ್ಬ: ಸಮಾರೋಪ ಸಮಾರಂಭ ಸಂಭ್ರಮದ ತೆರೆ
    • ಶ್ರೀ ವೆಂಕಟರಮಣ ಪ.ಪೂ ಕಾಲೇಜಿನ ಉಪನ್ಯಾಸಕಿ ಲತಾ ಪೈ ಅವರಿಗೆ ಉಡುಪಿ ಜಿಲ್ಲಾ ಅತ್ಯುತ್ತಮ ಉಪನ್ಯಾಸಕರ ಪ್ರಶಸ್ತಿ
    • ಯೋಗಾಸನ: ಆಳ್ವಾಸ್‌ನ ಪುರುಷರ ತಂಡವು ಚಾಂಪಿಯನ್‌ ಹಾಗೂ ಮಹಿಳೆಯರು ದ್ವಿತೀಯ ಸ್ಥಾನ
    • ಜನಸಾಮಾನ್ಯರಿಗೆ ಸರಕಾರದ ಸೇವೆ, ಸವಲತ್ತುಗಳನ್ನು ಸಕಾಲದಲ್ಲಿ ತಲುಪಿಸಿ: ಶಾಸಕ ಗಂಟಿಹೊಳೆ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.