Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಂಸದರ ನಿಧಿಯಡಿ ಸಾರ್ವಜನಿಕರಿಗೆ ಉಪಯುಕ್ತವಾಗುವಂತಹ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದು ಸಂಸದರ ನಿಧಿ ಬಳಕೆಯಲ್ಲಿ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ದೇಶಕ್ಕೆ ಎರಡನೇ ಸ್ಥಾನದಲ್ಲಿದ್ದಾರೆ. 2019-20ರ ಸಾಲಿಗೆ ಸಂಬಂಧಿಸಿದಂತೆ 5 ಕೋಟಿ ರೂ. ಅನುದಾನ ಹಾಗೂ 10ರಿಂದ 15ನೇ ಲೋಕಸಭೆವರೆಗೆ ಬಳಕೆಯಾಗದೆ ಇದ್ದ 4.40 ಕೋಟಿ ರೂ. ಅನುದಾನವೂ ಸೇರಿದಂತೆ 9,40 ಕೋಟಿ ರೂ.ದಲ್ಲಿ ಈಗಾಗಲೇ 9 ಕೋಟಿ ರೂ. ಬಳಕೆ ಮಾಡಿದ್ದಾರೆ. ಸಾರ್ವಜನಿಕ ಬಸ್ ಶೆಲ್ಟರ್, ಹೈಮಾಸ್ಟ್ ಲೈಟ್, ಶಾಲಾ ಕೊಠಡಿ ಮತ್ತು ಸಾರ್ವಜನಿಕ ಸಮುದಾಯ ಭವನಕ್ಕೆ 4.70 ಕೋಟಿ ರೂ., ರಸ್ತೆ ನಿರ್ಮಾಣಕ್ಕೆ 2.93 ಕೋಟಿ ರೂ., ಕರೊನಾ ನಿರ್ವಹಣೆಗೆ ಆರೋಗ್ಯ ಇಲಾಖೆಗೆ ಆಂಬುಲೆನ್ಸ್ ಮತ್ತು ಡಯಾಲಿಸಿಸ್ ಯಂತ್ರ ಅಳವಡಿಕೆಗೆ 82.50 ಲಕ್ಷ ರೂ., ಕುಡಿಯುವ ನೀರಿನ ಘಟಕಕ್ಕೆ 42 ಲಕ್ಷ ರೂ. ಹಾಗೂ ಅಂಗವಿಕಲರಿಗೆ ತ್ರಿಚಕ್ರ ವಾಹನ, ಇತ್ಯಾದಿ ಅನೇಕ ಉಪಯುಕ್ತ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಉಳಿದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಉಳಿದ ಅನುದಾನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದಲ್ಲಿ ಖಾಲಿ ಇರುವ ಕಛೇರಿ ಜವಾನರ ಹುದ್ದೆಯನ್ನು ಮಾಸಿಕ ಗೌರವಧನ ಆಧಾರದಲ್ಲಿ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಎಸ್.ಎಸ್.ಎಲ್.ಸಿಯಲ್ಲಿ ಉತ್ತೀರ್ಣರಾಗಿರುವ, ಕಛೇರಿಯಲ್ಲಿ ಹಾಗೂ ಇತರೆ ಶುಚಿತ್ವ ಕಾಪಾಡುವ ಕೆಲಸ ನಿರ್ವಹಿಸಿದ ಅನುಭವ ಹೊಂದಿರುವ ಮತ್ತು ಗರಿಷ್ಠ 40 ವರ್ಷದೊಳಗಿನ ಅಭ್ಯರ್ಥಿಗಳು, ಅರ್ಜಿಯನ್ನು ಸೂಕ್ತ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಬಾಲಕಾರ್ಮಿಕರ ಯೋಜನಾ ಸಂಘದ ಅಧ್ಯಕ್ಷರ ಹೆಸರಿಗೆ ಅರ್ಜಿ ಬರೆದು, ಸದರಿ ಅರ್ಜಿಯನ್ನು ಕಾರ್ಮಿಕ ಅಧಿಕಾರಿ/ಸದಸ್ಯ ಕಾರ್ಯದರ್ಶಿ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಕಾರ್ಮಿಕ ಅಧಿಕಾರಿಗಳ ಕಛೇರಿ, ರಜತಾದ್ರಿ, ಮಣಿಪಾಲ ಇಲ್ಲಿಗೆ ನವೆಂಬರ್ 25 ರೊಳಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯ ಕುಂದಾಪುರ, ಬ್ರಹ್ಮಾವರ ಮತ್ತು ಉಡುಪಿ ತಾಲೂಕುಗಳ ವ್ಯಾಪ್ತಿಯಲ್ಲಿನ ವಾರಾಹಿ, ಸೌಪರ್ಣಿಕಾ, ಸ್ವರ್ಣಾ ಮತ್ತು ಸೀತಾ ನದಿ ಪಾತ್ರಗಳಲ್ಲಿ ಮರಳು ದಿಬ್ಬ ತೆರವುಗೊಳಿಸುವ ಕಾರ್ಯವು ಪ್ರಗತಿಯಲ್ಲಿದ್ದು, ಸದರಿ ಮರಳನ್ನು ಸಾರ್ವಜನಿಕರಿಗೆ, ಅಭಿವೃದ್ಧಿ ಕಾಮಗಾರಿಗಳಿಗೆ ಉಡುಪಿ ಇ-ಸ್ಯಾಂಡ್ ಆಪ್ ಮೂಲಕ ಮರಳು ವಿತರಿಸಲಾಗುತ್ತಿದೆ. ಮರಳು ಅವಶ್ಯಕತೆ ಇರುವವರು ಅಂತರ್ಜಾಲ https://udupiesand.com/ ಸಂದರ್ಶಿಸಿ, ಹೆಸರು ಹಾಗೂ ವಿಳಾಸ ದಾಖಲಿಸಿ ಬೇಕಾಗಿರುವ ಮರಳಿನ ಪ್ರಮಾಣವನ್ನು ನಮೂದಿಸಿ, ಆನ್ಲೈನ್ ಮೂಲಕ ಹಣ ಪಾವತಿ ಮಾಡಬಹುದಾಗಿದೆ. ಇದೊಂದು ಸರಳ ಹಾಗೂ ಪಾರದರ್ಶಕ ಪ್ರಕ್ರಿಯೆಯಾಗಿದ್ದು, ಜಿಲ್ಲೆಯ ಸಾರ್ವಜನಿಕರು ಇದರ ಉಪಯೋಗ ಪಡೆಯಬಹುದಾಗಿದ್ದು, ಹೊರ ಜಿಲ್ಲೆಗೆ ಮರಳು ಪೂರೈಸಲು ಅವಕಾಶವಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಹಿರಿಯ ಭೂ ವಿಜ್ಞಾನಿಯವರ ಕಚೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಉಡುಪಿ ದೂ.ಸಂಖ್ಯೆ: 0820-2572333 ಅಥವಾ ಸ್ಯಾಂಡ್ ಆಪ್ ಕಾಂಟ್ಯಾಕ್ಟ್ ನಂ: 6366745888, 6364024555, 6366871888 ಅನ್ನು ಸಂಪರ್ಕಿಸುವತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನಿರ್ದೇಶನದಂತೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಕಳೆದ ಮಂಗಳವಾರ ನಡೆಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನ್ಯಾಯವಾದಿ ಶರತ್ ಕುಮಾರ್ ಶೆಟ್ಟಿ ಮಾತನಾಡಿ, ನಮ್ಮ ದೇಶದಲ್ಲಿ ಚಾಲ್ತಿಯಲ್ಲಿರುವ ಕಾನೂನಿನ ಬಗೆಗಿನ ವಿವಿಧ ವಿಚಾರಗಳ ಪ್ರಾಥಮಿಕ ಅರಿವು ಪ್ರತಿಯೊಬ್ಬ ನಾಗರಿಕನಲ್ಲಿಯೂ ಇರಬೇಕು. ಇಂತಹ ಅರಿವಿನ ಜೊತೆಗೆ ಉತ್ತಮ ವ್ಯಕ್ತಿತ್ವವನ್ನು ಕೂಡ ನಮ್ಮದಾಗಿಸಿಕೊಳ್ಳುವ ಮೂಲಕ ಅಪರಾಧ ಮುಕ್ತ ಸಮಾಜದ ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಯು.ವೆಂಕಟೇಶ ಮೂರ್ತಿ, ನರೇಂದ್ರ ಎಸ್ ಗಂಗೊಳ್ಳಿ ಉಪಸ್ಥಿತರಿದ್ದರು. ಇತಿಹಾಸ ಉಪನ್ಯಾಸಕ ಭಾಸ್ಕರ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡಬಿದಿರೆ: ಇಂದಿನ ಸ್ಪರ್ಧಾತ್ಮಕ ಯುಗದ ಉದ್ಯೋಗ ಮಾರುಕಟ್ಟೆಯಲ್ಲಿ ತಮ್ಮ ಅಸ್ಥಿತ್ವವನ್ನು ಛಾಪಿಸಬೇಕಾದರೆ ಪ್ರತಿಯೊಬ್ಬ ಇಂಜಿನಿಯರಿಂಗ್ ವಿದ್ಯಾರ್ಥಿಯೂ ಸೂಪರ್ ಮೆಂಟಾಲಿಟಿಯ (ಉತ್ಕೃಷ್ಟ ಮನೋಭಾವ) ಇಂಜಿನಿಯರ್ ಆಗಬೇಕೆ ಹೊರತು ನಾರ್ಮಲ್ ಮೆಟಾಲಿಟಿಯ ಇಂಜಿನಿಯರ್ನಿಂದ (ಸಾಧಾರಣ ಮನೋಭಾವ) ಸಾಧ್ಯವಿಲ್ಲ ಎಂದು ಬೆಂಗಳೂರಿನ ಡಿಫೆನ್ಸ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ ಆರ್ಗನೈಜೇಷನ್( ಡಿಆರ್ಡಿಒ)ನ ಗ್ಯಾಸ್ ಟರ್ಬೈನ್ ರಿಸರ್ಚ್ ಎಸ್ಟಾಬ್ಲಿಷ್ಮೆಂಟ್ನ ತಾಂತ್ರಿಕ ನಿರ್ದೇಶಕ ಡಾ ಎಸ್ ರಾಮಚಂದ್ರ ತಿಳಿಸಿದರು. ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪ್ರವೇಶಾತಿ ಕಾರ್ಯಕ್ರಮ- ‘ಆಳ್ವಾಸ್ ಆಗಮನ 2021-22’ನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಆರಂಭದಲ್ಲೆ ತನ್ನ ಗುರಿಯನ್ನು ನಿಗದಿಪಡಿಸಿಕೊಂಡು, ಆ ಗುರಿಯನ್ನು ಸಾಧಿಸಲು ತನ್ನ ಬಳಿಯಿರುವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಮುಂದಾಗಬೇಕು. ಮಾಡುವ ಎಲ್ಲಾ ಕೆಲಸವೂ ಉತ್ಕೃಷ್ಟ ಮಟ್ಟದ ಫಲಿತಾಂಶವನ್ನೆ ನೀಡುವಂತಿರಬೇಕು. ೨೦೨೫ರ ಹೊತ್ತಿಗೆ ಇಂಜಿನಿಯರಿಂಗ್ ಪದವೀಧರರಿಗೆ ಉದ್ಯೋಗ ಮಾರುಕಟ್ಟೆಯಲ್ಲಿ ವಿಫುಲ ಅವಕಾಶಗಳು ಲಭಿಸುವ ಸಾಧ್ಯತೆ ಇರುವುದರಿಂದ ಆ ನಿಟ್ಟಿನಲ್ಲಿ ಕರ್ಯಪ್ರವೃತ್ತರಾಗಬೇಕು ಎಂದರು. ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ರಾಷ್ಟ್ರೀಯ ಬ್ಯಾಂಕ್‌ವೊಂದರ ಸಿಬ್ಬಂದಿ ಇಲ್ಲಿನ ಗ್ರಾಹಕರೊಂದಿಗೆ ತೋರುತ್ತಿರುವ ಅಸಹಕಾರ ವರ್ತನೆಯ ವಿರುದ್ದ ಸಾರ್ವಜನಿಕರಿಂದ ಹೆಮ್ಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಯು. ಸತ್ಯನಾರಾಯಣ್ ರಾವ್ ಅವರಿಗೆ ಮನವಿ ಸಲ್ಲಿಸಲಾಯಿತು. ರಾಷ್ಟ್ರೀಕೃತ ಬ್ಯಾಂಕ್ ಹೆಮ್ಮಾಡಿ ಪಂಚಾಯತ್ ವ್ಯಾಪ್ತಿಯಲ್ಲಿರುವ ಕಾರಣದಿಂದಾಗಿ ಸಾರ್ವಜನಿಕ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶ ಗ್ರಾ.ಪಂ.ಗೆ ಇರುವುದರಿಂದ ಈ ಎಲ್ಲ ಸಮಸ್ಯೆಗಳನ್ನು ಶಾಖಾಧಿಕಾರಿಗಳ ಗಮನಕ್ಕೆ ತಂದು ನಾಗರಿಕರಿಗೆ ಸಿಗಬೇಕಾದ ಗೌರವಗಳನ್ನು ನೀಡುವಲ್ಲಿ ಕ್ರಮವಹಿಸಿ ಗ್ರಾಹಕರ ಸಮಸ್ಯೆಯನ್ನು ಬಗೆಹರಿಸಬೇಕಾಗಿ ಮನವಿ ಸಲ್ಲಿಸಲಾಯಿತು. ಮನವಿಗೆ ಸ್ಪಂದಿಸಿದ ಗ್ರಾ.ಪಂ. ಅಧ್ಯಕ್ಷರು ತತ್ಕ್ಷಣವೇ ಗ್ರಾಮಸ್ಥರೊಂದಿಗೆ ಬ್ಯಾಂಕಿಗೆ ತೆರಳಿ ಸಿಬ್ಬಂದಿಯಿಂದ ಗ್ರಾಹಕರಿಗೆ ಆಗುತ್ತಿರುವ ತೊಂದರೆ ಬಗ್ಗೆ ಪರಿಹರಿಸುವಂತೆ ಲಿಖಿತವಾಗಿ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಪ್ರವೀಣ್ ದೇವಾಡಿಗ, ಉಪಾಧ್ಯಕ್ಷ ಸುಕುಮಾರ್ ಪೂಜಾರಿ, ಕಾರ್ಯದರ್ಶಿ ಅರುಣ್ ಮೊಗವೀರ, ಸ್ಥಳೀಯರಾದ ಶ್ರೀಕಾಂತ ಹೆಮ್ಮಾಡಿ, ರವಿ ಕೆ. ಹೆಮ್ಮಾಡಿ, ನಾಗರಾಜ್ ಗಾಣಿಗ ಹರೆಗೋಡು, ಹರ್ಷ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತನ್ನ ವಿರುದ್ಧ ಕೃಷ್ಣಪ್ರಸಾದ ಅಡ್ಯಂತಾಯ ಎಂಬುವವರು ನೀಡಿದ ದೂರು ಹಾಗೂ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಪತ್ರಿಕಾ ಪ್ರಕಟಣೆಯಲ್ಲಿ ಹೇಳಿರುವ ವಿಚಾರದಲ್ಲಿ ಯಾವುದೇ ಹುರುಳಿಲ್ಲ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ನನ್ನ ಹೇಳಿಕೆ ದಾಖಲಿಸಿದ್ದು, ಕಾನೂನು ಹೋರಾಟ ಮುಂದುವರಿಸುವುದಾಗಿ ಆರ್.ಟಿ.ಐ ಕಾರ್ಯಕರ್ತ ಕೆ. ವೆಂಕಟೇಶ ಕಾರಂತ್ ಅವರು ತಿಳಿಸಿದ್ದಾರೆ. ನ.6ರಂದು ಕೃಷ್ಣಪ್ರಸಾದ ಅಡ್ಯಂತಾಯ ಎಂಬುವವರು ನೀಡಿರುವ ದೂರಿಗೆ ಪ್ರತಿಕ್ರಿಯೆ ನೀಡಿರುವ ಅವರು ತಮ್ಮ ವಿರುದ್ಧದ ಆರೋಪಗಳಿಗೆ ಸ್ಪಷ್ಟೀಕರಣ ನೀಡಿದ್ದಾರೆ. ನಾನು ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಸಂವಿಧಾನದತ್ತ ಮಾಹಿತಿ ಕಾನೂನು ಅಧಿನಿಯಮದ, ನಿಯಮವನ್ನು ಸಿವಿಲ್ ಸಮಾಜದ ಒಳಿತಿಗಾಗಿಯೇ ಬಳಸುತ್ತಿದ್ದು, ಸದ್ರಿ ಅಧಿನಿಯಮದ ಕಾನೂನನ್ನು ಇಲ್ಲಿಯವರೆಗೂ ದುರ್ಬಳಕೆ ಮಾಡಿದ್ದಿಲ್ಲ. ಸಂವಿಧಾನದತ್ತ ಪಡೆದ ಮಾಹಿತಿಯಿಂದ ಯಾರನ್ನೂ ಹಣಕ್ಕಾಗಿ ಇಲ್ಲಿಯವರೆಗೂ ನಾನು ಪೀಡಿಸಿದ್ದಿಲ್ಲ. ಅಥವಾ ನನ್ನ ಪರವಾಗಿ ಅಂತಹ ಅಥವಾ ಬೇರೆಯೇ ಆದ ವಾಮ ಮಾರ್ಗದಲ್ಲಿ ಸಿಗುವ ಹಣ ಪಡೆಯುವ ಬಗ್ಗೆ ಇತರ ಯಾರನ್ನೂ ನನ್ನ ಮತ್ತು ನನ್ನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕನ್ನಡ ಜಾನಪದ ಪರಿಷತ್ ಬೆಂಗಳೂರು, ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ ಹಾಗೂ ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ “ಕನ್ನಡ ಜಾನಪದ ರಾಜ್ಯೋತ್ಸವ” ಕಾರ್ಯಕ್ರಮ ನಡೆಯಿತು. ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷರಾದ ಡಾ. ಗಣೇಶ್ ಗಂಗೊಳ್ಳಿ ಮಾತನಾಡಿ, ಜನಪದರು ಕುರಿತು ಓದಿದವರಾಗಿರದೆ ಮೌಖಿಕವಾಗಿ ಬಳಸಿ ಉಳಿಸಿ ಬೆಳೆಸಿದವರು ಜನಪದ ನಿತ್ಯ ನೂತನವಾಗಬೇಕು ಎಂದು ಪ್ರಾಸ್ತಾವಿಕವಾಗಿ ನುಡಿದರು. ಸಮಾರಂಭದ ಮುಖ್ಯ ಅತಿಥಿಗಳಾದ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ದೋಮ ಚಂದ್ರಶೇಖರ್ ಮಾತನಾಡಿ, ಜನಪದರು ಸುಶಿಕ್ಷಿತರು ಎನ್ನುವುದಕ್ಕಿಂತ ಮೌಖಿಕವಾಗಿ ತಮ್ಮ ಅನುಭವವನ್ನು ಬಿತ್ತಿ ಬೆಳೆಸಿದವರು. ಮಾತೃಭಾಷೆ ಹಾಗೂ ಜಾನಪದವನ್ನು ನಾವೆಲ್ಲ ಪೋಷಿಸಿ ಕಿರಿಯ ತಲೆಮಾರಿಗೆ ಕೊಂಡೊಯ್ಯಬೇಕು ಎಂದು ನುಡಿದರು. ಸಮಾರಂಭದಲ್ಲಿ ಆಂಗ್ಲ ಬಳಸದೆ ಕನ್ನಡ ಮಾತನಾಡುವ ಕನ್ನಡಾಭಿಮಾನಿ ಸಂದೀಪ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಶ್ರೀ ಮೂಕಾಂಬಿಕಾ ದೇಗುಲದಲ್ಲಿ 2 ತಿಂಗಳ ಅವಧಿಯಲ್ಲಿ ಭಕ್ತರಿಂದ ಸಂಗ್ರಹವಾದ ಹುಂಡಿ ಕಾಣಿಕೆ ಹಣದ ಲೆಕ್ಕಾಚಾರ ಬುಧವಾರ ನಡೆದಿದ್ದು ದಾಖಲೆಯ 1.36 ಕೋಟಿ ರೂ. ಲಭಿಸಿದೆ. ಇದು ಕ್ಷೇತ್ರದ ದಾಖಲೆ ಮಟ್ಟದ ಹುಂಡಿ ಕಾಣಿಕೆಯಾಗಿದೆ. ಕಳೆದೆರಡು ವರ್ಷಗಳಿಂದ ಕೊರೊನಾ ನಿಯಮಾವಳಿ ಅನುಸಾರವಾಗಿ ಭಕ್ತರ ಪ್ರವೇಶಕ್ಕೆ ದೇಗುಲಗಳಲ್ಲಿ ನಿರ್ಬಂಧ ಇದ್ದ ಹಿನ್ನೆಲೆಯಲ್ಲಿ ಆದಾಯ ಬಹಳಷ್ಟು ಕುಸಿದಿತ್ತು. ಇದೀಗ ನಿರ್ಬಂಧ ಸಡಿಲಿಕೆಯಿಂದ ಕಳೆದ 2 ತಿಂಗಳಿನಿಂದ ಕೊಲ್ಲೂರು ದೇಗುಲಕ್ಕೆ ಪ್ರತಿದಿನ ಕನಿಷ್ಠ 8 ಸಾವಿರದಷ್ಟು ಭಕ್ತರು ಆಗಮಿಸಿ ವಿವಿಧ ಹರಕೆಯೊಡನೆ ಶ್ರೀದೇವಿಗೆ ಕಾಣಿಕೆ ರೂಪದಲ್ಲಿ ಚಿನ್ನಾಭರಣ ಸಹಿತ ನಗದು ಸಮರ್ಪಿಸುತ್ತಿದ್ದಾರೆ. ನ.10ರಂದು ಹುಂಡಿಯಲ್ಲಿ 585 ಗ್ರಾಂ ಚಿನ್ನ ಹಾಗೂ 6,400 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. 2020ನೇ ಸಾಲಿನ ನವರಾತ್ರಿಯಂದು 92,00,000 ರೂ. ಸಂಗ್ರಹವಾಗಿತ್ತು. ಚಿನ್ನ 615 ಗ್ರಾಂ ಹಾಗೂ ಬೆಳ್ಳಿ 3,500 ಗ್ರಾಂ ಸಂಗ್ರಹವಾಗಿತ್ತು. 3 ವರುಷಗಳ ಹಿಂದೆ 3 ತಿಂಗಳ ಅವಧಿಯಲ್ಲಿ 1.11 ಕೋಟಿ ರೂ. ಹುಂಡಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿಯ ಜಿಎಸ್‌ವಿಎಸ್ ಅಸೋಸಿಯೇಶನ್ ಪ್ರಾಯೋಜಿತ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ವಠಾರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅಟಲ್ ಟಿಂಕರಿಂಗ್ ಲ್ಯಾಬ್‌ಗೆ ಬೈಂದೂರು ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ ಭೇಟಿ ನೀಡಿ ಲ್ಯಾಬ್ ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದರು. ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿನ ಕೌಶಲ್ಯತೆ ಹೆಚ್ಚಿಸಲು ಮತ್ತು ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಕೇಂದ್ರ ಸರಕಾರ ಶಾಲೆಗಳಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಪ್ರಾರಂಭಿಸುತ್ತಿದೆ. ಗಂಗೊಳ್ಳಿಯ ಎಸ್.ವಿ.ಶಾಲೆಯಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಅತ್ಯುತ್ತಮವಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಶಿಕ್ಷಕರು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ವಿಶೇಷ ಪ್ರಯತ್ನ ನಡೆಸಬೇಕು ಎಂದರು. ಗಂಗೊಳ್ಳಿಯ ಜಿಎಸ್‌ವಿಎಸ್ ಅಸೋಸಿಯೇಶನ್ ಅಧ್ಯಕ್ಷ ಡಾ. ಕಾಶೀನಾಥ ಪೈ, ಕಾರ್ಯದರ್ಶಿ ಎಚ್.ಗಣೇಶ ಕಾಮತ್, ಶಾಲೆಯ ಸಂಚಾಲಕ ಎನ್.ಸದಾಶಿವ ನಾಯಕ್, ಗಂಗೊಳ್ಳಿ ಗ್ರಾಪಂ ಸದಸ್ಯರಾದ ಬಿ. ರಾಘವೇಂದ್ರ ಪೈ, ಬಿ. ಲಕ್ಷ್ಮೀಕಾಂತ ಮಡಿವಾಳ, ದಾನಿ ಯು. ನಾರಾಯಣ ಪೈ, ಶಾಲಾ ಆಡಳಿತ ಮಂಡಳಿ ಸದಸ್ಯರಾದ ಗೋವಿಂದ್ರಾಯ…

Read More