ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನಲ್ಲಿ “ಅಂತರರಾಷ್ಟ್ರೀಯ ಓಝೋನ್ ದಿನಾಚರಣೆ” ಮತ್ತು ರಸಪ್ರಶ್ನೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಂಡಾರ್ಕಾರ್ಸ್ ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ಸತ್ಯನಾರಾಯಣ ಆಗಮಿಸಿ ಬಹುಮಾನ ವಿತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಸರೋಜ ಎಮ್. ವಹಿಸಿದ್ದರು. ಈ ಸಂದರ್ಭದಲ್ಲಿ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮರವಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವಕರ್ಮ ಸಮಾಜ ಸೇವಾ ಸಂಘ ರಿ. ಮರವಂತೆ ವತಿಯಿಂದ ವಿಶ್ವಕರ್ಮ ಮಹೋತ್ಸವದ ಅಂಗವಾಗಿ “ವಿಶ್ವಕರ್ಮ” ಕುರಿತಾಗಿ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷೆ ಕೋಮಲ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿಶ್ವಕರ್ಮ ಸಮಾಜ ಸೇವಾ ಸಂಘ ರಿ. ಮರವಂತೆ ಗೌರವ ಸಲಹೆಗಾರ ಹಾಗೂ ಉಪ್ರಳ್ಳಿ ಕಾಳಿಕಾಂಬಾ ದೇವಸ್ಥಾನದ ಮಾಗಣಿ ಮೊಕ್ತೇಸರ ಕೃಷ್ಣಯ್ಯ ಆಚಾರ್ಯ ಮರವಂತೆ ಮಾತನಾಡಿ, ಪ್ರಬಂಧ ಸ್ಪರ್ಧೆ ಎಂದರೆ ಕೇವಲ ಬಹುಮಾನ ಗೆಲ್ಲುವ ಸ್ಪರ್ಧೆಯಲ್ಲ. ಅದು ನಮ್ಮ ಚಿಂತನೆ, ಜ್ಞಾನ, ಸೃಜನಶೀಲತೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವನ್ನು ಬೆಳೆಸುವ ಒಂದು ಉತ್ತಮ ವೇದಿಕೆ. ವಿಶ್ವಕರ್ಮ ಸಮುದಾಯದ ಇತಿಹಾಸ, ಪರಂಪರೆ, ಕಲೆ, ಕೌಶಲ್ಯ ಮತ್ತು ಸಾಧನೆಗಳ ಕುರಿತು ವಿದ್ಯಾರ್ಥಿಗಳು ತಿಳಿದುಕೊಂಡು ತಮ್ಮ ವಿಚಾರಗಳನ್ನು ಬರಹದ ಮೂಲಕ ವ್ಯಕ್ತಪಡಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದರು. ಉಪ್ರಳ್ಳಿ ಕಾಳಿಕಾಂಬಾ ದೇವಸ್ಥಾನದ ಮೂರನೇ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗೋಕರ್ಣ: ಪೂರ್ಣಾರೋಗ್ಯ ಹಾಗೂ ಆತ್ಮಜ್ಞಾನ ಎರಡೂ ಬೇರೆಬೇರೆಯಲ್ಲ. ಭಾರತೀಯ ಪರಂಪರೆಯಲ್ಲಿ ಆರೋಗ್ಯಕ್ಕೆ ಬೇರೆ ಹಾಗೂ ಆತ್ಮಜ್ಞಾನಕ್ಕೆ ಬೇರೆ ಎಂದು ಬೇರೆಬೇರೆಯಾಗಿ ಹೇಳಿಲ್ಲ. ಯಾವುದು ಆರೋಗ್ಯಕ್ಕೆ ಹಿತವೋ ಅದು ಆತ್ಮಜ್ಞಾನಕ್ಕೆ ಪೂರಕವೂ ಹೌದು. ತುಪ್ಪ ಆರೋಗ್ಯ ಕಾರಕವೂ ಹೌದು ಆತ್ಮಜ್ಞಾನಕ್ಕೆ ಪೂರಕವೂ ಹೌದು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. ಅವರು ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಹಠಯೋಗಪ್ರದೀಪಿಕೆಯಲ್ಲಿ ಆತ್ಮಸಾಧನೆಯನ್ನು ಆರಂಭಿಸುವಾಗ ಹಾಲು ಮತ್ತು ತುಪ್ಪವನ್ನು ಸೇವಿಸಲು ಸೂಚಿಸಿದ್ದು, ಇದು ಯೋಗಸಾಧನೆಯ ಅಭ್ಯಾಸದ ಸಮಯದಲ್ಲಿ ಬೇಕಾದ ವಾತಾವರಣವನ್ನು ಕಲ್ಪಿಸಿಕೊಡುತ್ತದೆ. ಸತ್ವ, ರಜಸ್ಸು ಹಾಗೂ ತಮೋಗುಣಗಳು ಪೂರ್ತಿಯಾಗಿ ಒಂದಾದಾಗ ಮಾತ್ರ ಸಮಾಧಿ ಸ್ಥಿತಿಯನ್ನು ಹೊಂದಲು ಸಾಧ್ಯ. ತ್ರಿಗುಣಗಳು ಸಮಗೊಳ್ಳುವುದೇ ಆರೋಗ್ಯವಾಗಿದ್ದು, ಅದೇ ಆತ್ಮಜ್ಞಾನವೂ ಆಗಿದೆ. ತುಪ್ಪದ ಸೇವನೆಯಿಂದ ಸತ್ವ ವೃದ್ಧಿಯಾಗುತ್ತದೆ. ಸತ್ವಗುಣದ ವೃದ್ಧಿಯಿಂದ ಏಕಾಗ್ರತೆ, ಏಕಾಗ್ರತೆಯಿಂದ ಧ್ಯಾನ,ಧ್ಯಾನದಿಂದ ಮೋಕ್ಷ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಂದಿನ ಬದಲಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೇವೆ. ಧಾವಂತದ ಬದುಕಿನಲ್ಲಿ ಆಹಾರ ಆರೋಗ್ಯದ ಕಡೆ ಗಮನ ಕಡಿಮೆಯಾಗಿದೆ. ಆಯುರ್ವೇದದಲ್ಲಿ ತಿಳಿಸಿದ ದಿನಚರ್ಯೆ, ಋತುಚರ್ಯೆ, ಆಹಾರ ವಿಹಾರಗಳನ್ನ ಅನುಸರಿಸುವುದರಿಂದ ನಾವು ಆರೋಗ್ಯವಂತರಾಗಿರಬಹುದು ಅಸಾಂಕ್ರಾಮಿಕ ರೋಗಗಳಿಂದ ದೂರವಿರಬಹುದು ಎಂದು ಕಾಲ್ತೋಡು ಗ್ರಾಮ ಪಂಚಾಯತ್ ಕಾರ್ಯದರ್ಶಿ ಆನಂದ ಬಿಲ್ಲವ ನುಡಿದರು. ಅವರು ಆಯುಷ್ ಇಲಾಖೆ ಉಡುಪಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಆಯುಷ್ಮಾನ್ ಆರೋಗ್ಯ ಮಂದಿರ ಕಾಲ್ತೋಡು ಇವರು ಆಯೋಜಿಸಿರುವ 11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಉಪನ್ಯಾಸ ಹಾಗೂ ಚಿಕಿತ್ಸಾ ಶಿಬಿರದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಆಯೋಜಕರು ಆಯುಷ್ಮಾನ್ ಆರೋಗ್ಯ ಮಂದಿರ ಕಾಲ್ತೋಡು ಇದರ ವೈದ್ಯಾಧಿಕಾರಿಗಳಾದ ಡಾಕ್ಟರ್ ವೀಣಾ ಕಾರಂತರವರು 11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಘೋಷ ವಾಕ್ಯ “ಆರೋಗ್ಯಕರ ನಾಳೆಗಾಗಿ ಆಯುರ್ವೇದ” ಬಗ್ಗೆ ತಿಳಿಸುತ್ತಾ ನಾವು ನಾಳೆ ಆರೋಗ್ಯವಂತರಾಗಿರಬೇಕು ಅಂತಂದ್ರೆ ಆಯುರ್ವೇದದ ಮೂಲ ಸಿದ್ಧಾಂತಗಳನ್ನ ನಮ್ಮ ಜೀವನದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಮಹಿಳಾ ವೇದಿಕೆಯ ಆಶ್ರಯದಲ್ಲಿ “ಪಿ.ಸಿ.ಓ.ಡಿ ಸಮಸ್ಯೆ -ಪರಿಹಾರ” ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವು ಶುಕ್ರವಾರ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಂದಾಪುರ ಗ್ರಾಮೀಣ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕೋಟೇಶ್ವರ ಇಲ್ಲಿನ ವೈದ್ಯರಾದ ಡಾ. ಮಯೂರ ಎಮ್.ಡಿ. ಮಾತನಾಡಿ, ಪಿಸಿಓಡಿ ಸಮಸ್ಯೆಯು ಪ್ರತಿ ಐದು ಜನ ಮಹಿಳೆಯರಲ್ಲಿ ಒಬ್ಬರಿಗೆ ಇರುತ್ತದೆ ಎಂದು ಸಂಶೋಧನೆ ಹೇಳುತ್ತದೆ. ಈಗ 12ಮೇ 2026ರಿಂದ ಇದನ್ನು ಪಿ.ಎಮ್.ಓ.ಎಸ್. ಎಂದು ಕರೆಯಲಾಗುತ್ತದೆ. ಈ ಸಮಸ್ಯೆ ಉಂಟಾಗಲು ಕಾರಣ ಮುಖ್ಯವಾಗಿ ಅತಿಯಾದ ಬೇಕರಿ ಪದಾರ್ಥಗಳು ಸೇವನೆ. ಅಹಿತಕರ ಜೀವನಶೈಲಿ, ಅತಿಯಾದ ಒತ್ತಡ, ದಡೂತಿತನ ಮೈದಾ ಹಿಟ್ಟಿನ ಆಹಾರ ಪದಾರ್ಥ ಸಕ್ಕರೆ, ಫಾರ್ಮ್ ಗಳಲ್ಲಿ ಸಾಕಿದ ಕೋಳಿ ಮೀನು ಮಾಂಸಗಳನ್ನು ಅತಿಯಾಗಿ ತಿನ್ನುವುದು ಹೀಗೆ ಹಲವು ಕಾರಣಗಳಿವೆ. ಪರಿಣಾಮವಾಗಿ ಹಾರ್ಮೋನ್ ಏರಿಳಿತ, ದಡೂತಿತನ, ಸುಸ್ತು, ಚರ್ಮದಲ್ಲಿ ಸಮಸ್ಯೆ ಕೂದಲು ಉದುರುವಿಕೆ, ಬಂಜೆತನ, ಋತುಚಕ್ರದಲ್ಲಿ ಏರಿಳಿತ ಹೀಗೆ ಹಲವು ಸಮಸ್ಯೆಗಳು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಜೆಸಿಐ ಬೈಂದೂರು ಸಿಟಿ ಹಾಗೂ ಜೆಸಿಐ ಶಿರೂರು ರೂರಲ್ ಇವರ ಜಂಟಿ ಆಶ್ರಯದಲ್ಲಿ, ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗತ್ವದಲ್ಲಿ ಕಾಲೇಜಿನ ವಿವಿಧ ವಿಭಾಗಗಳ ವಿದ್ಯಾರ್ಥಿ ಮುಖಂಡರಿಗೆ (ಲೀಡರ್ಸ್) ವಿಶೇಷ ತರಬೇತಿ ಶಿಬಿರವನ್ನು ಕಾಲೇಜಿನ ಎ.ವಿ. ಸಭಾಂಗಣದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. ಮುಖ್ಯ ತರಬೇತುದಾರರಾಗಿ ಭಾಗವಹಿಸಿದ್ದ ಜೆಸಿಐ ರಾಷ್ಟ್ರೀಯ ತರಬೇತುದಾರರು ಹಾಗೂ ಜೆಸಿಐ ವಲಯ 15ರ ಮಾಜಿ ವಲಯಾಧ್ಯಕ್ಷರಾದ ಜೆಸಿ ಬಿ.ಎ. ಅಭಿಲಾಷ್ ಅವರು, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳು, ಸಂವಹನ ಕಲೆ, ಹೊಣೆಗಾರಿಕೆ ಮತ್ತು ಗುರಿ ನಿರ್ವಹಣೆ ಕುರಿತು ಆಕರ್ಷಕ ಚಟುವಟಿಕೆಗಳ ಮೂಲಕ ಅತ್ಯುತ್ತಮ ತರಬೇತಿಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಉಮೇಶ್ ಮಯ್ಯ ವಹಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲೇ ನಾಯಕತ್ವ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳುವುದು ಭವಿಷ್ಯದ ಉತ್ತಮ ಪ್ರಜೆಗಳಾಗಲು ಅತ್ಯಗತ್ಯ ಎಂದರು. ಈ ಸಂದರ್ಭದಲ್ಲಿ ಜೆಸಿಐ ಬೈಂದೂರು ಸಿಟಿಯ ಮಾಜಿ ಅಧ್ಯಕ್ಷರಾದ ರಾಜು ಮೊಗವೀರ ಹಾಗೂ ಪ್ರಿಯದರ್ಶಿನಿ ಬೆಸ್ಕೂರು, ಜೆಸಿಐ ಶಿರೂರು ರೂರಲ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ಕನ್ನಡ ಹಾಗೂ ಗಿಳಿವಿಂಡು ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು ವಿಶ್ವವಿದ್ಯಾನಿಲಯ ಸಹಯೋಗದಲ್ಲಿ ಗಿಳಿವಿಂಡು ಯಾನ ಮರಳಿ ಮನೆಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಅಗಮಿಸಿದ ಪೂರ್ಣಪ್ರಜ್ಞಾ ಕಾಲೇಜು ಉಡುಪಿ ಇಲ್ಲಿನ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಡಾ. ಶ್ರೀಕಾಂತ್ ರಾವ್ ಕಾರ್ಯಕ್ರಮವನುದ್ದೇಶಿಸಿ ಮಾತನಾಡಿ, ಕುಂದಾಪುರ ಭಾಷೆಯ ಕುಂದಾಪುರ ಭಾಗದ ಜನರ ಪ್ರಾದೇಶಿಕ ಸಂಸ್ಕೃತಿ ಮತ್ತು ಸಾಮಾಜಿಕ ಗುರುತಿನ ಪ್ರಮುಖ ಭಾಗವಾಗಿದ್ದು ಅದರ ವಿಶಿಷ್ಟ ಉಚ್ಛಾರಣೆ ಪದ ಪ್ರಯೋಗ ಮತ್ತು ಕರಾವಳಿ ಸಂಸ್ಕೃತಿಯೊಂದಿಗೆ ಹೊಂದಿರುವ ನಿಕಟ ಸಂಬಂಧದಿಂದ ವಿಶಿಷ್ಟ ಸ್ಥಾನವನ್ನು ಪಡೆದಿದೆ. ಆದ್ದರಿಂದ ಸ್ಥಳೀಯ ಪದಗಳು ಗಾದೆಗಳು ಜನಪದ ಹಾಡು ಮತ್ತು ಹಿರಿಯರ ಮಾತಿನ ಶೈಲಿಯನ್ನು ದಾಖಲಿಸಿ ಸಂರಕ್ಷಿಸುವುದು ನಮ್ಮೆಲ್ಲರ ಪ್ರಮುಖ ಜವಬ್ದಾರಿಯಾಗಿದೆ ಎಂದರು. ಗಿಳಿವಿಂಡು ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು ವಿಶ್ವ ವಿದ್ಯಾನಿಲಯ ಅಧ್ಯಕ್ಷರಾದ ಬಿ. ಶಿವರಾಮ್ ಶೆಟ್ಟಿ ಪ್ರಾಸ್ತಾವಿಕ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಜ್ಞಾನ ಸುಧಾ ಕಾಲೇಜು ಮಣಿಪಾಲ ಇವರ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಫುಟ್‌ಬಾಲ್ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಹರ್ಷಿತ್ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ವಿದ್ಯಾರ್ಥಿಯ ಯಶಸ್ಸಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ – ಬೋಧಕೇತರ ಸಿಬ್ಬಂದಿ ಶುಭ ಹಾರೈಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಆರ್ಥಿಕ ಸಾಕ್ಷರತೆಯನ್ನು ಹೊಂದುವ ಮೂಲಕ ಸ್ವಾವಲಂಬಿಗಳಾಗಬೇಕು. ಉದ್ಯೋಗ ಮತ್ತು ಉದ್ದಿಮೆಗಳಿಂದ ಗಳಿಸಿದ ಹಣವನ್ನು ಸದುಪಯೋಗ ಪಡಿಸಿಕೊಳ್ಳುವ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವಿರಬೇಕು. ಆ ಮೂಲಕ ಹಣ ಬಳಸುವಲ್ಲಿ ಜಾಗೃತಿ ವಹಿಸುವುದರೊಂದಿಗೆ ಆರ್ಥಿಕ ಸುಧಾರಣೆ ಸಾಧ್ಯ ಎಂದು ಕೆನರಾ ಬ್ಯಾಂಕಿನ ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ್ ಹರೀಶ್ ಹೇಳಿದರು. ಅವರು ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಆಶ್ರಯದಲ್ಲಿ ಬ್ರಹ್ಮಾವರದ ರುಡ್‌ಸೆಟ್ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಿದ ಬ್ಯಾಂಕು ಮತ್ತು ಹಣಕಾಸಿನ ಕುರಿತಾದ ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಜೊತೆಗೆ ಬ್ರಹ್ಮಾವರದ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಡಾ. ಬೊಮ್ಮಯ್ಯ ಎಮ್. ಹಾಗೂ ಕುಂದಾಪುರದ ಫೈನಾನ್ಸ್ ಕೌನ್ಸಿಲರ್ ಆಶಾಲತಾ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ರಕ್ಷಿತ್ ರಾವ್ ಗುಜ್ಜಾಡಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಮಂಗಳಾ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಮೂಡುಬಿದಿರೆ ತಾಲೂಕನ್ನು ಪ್ರತಿನಿಧಿಸಿದ ಆಳ್ವಾಸ್ ಹನ್ನೆರಡು ವಿಭಾಗಗಳಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.ಆಳ್ವಾಸ್ ತಂಡವು ಪುರುಷರ ಮತ್ತು ಮಹಿಳೆಯರ ವಿಭಾಗದ ಕಬಡ್ಡಿ, ಖೋ-ಖೋ, ಬಾಲ್ ಬ್ಯಾಡ್ಮಿಂಟನ್, ಕುಸ್ತಿ, ಅಥ್ಲೆಟಿಕ್ಸ್ ಹಾಗೂ ಯೋಗದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ವೈಯಕ್ತಿಕ ವಿಭಾಗದ ಅಥ್ಲೆಟಿಕ್ಸ್ನಲ್ಲಿ ಒಟ್ಟು 16 ಚಿನ್ನ, 17 ಬೆಳ್ಳಿ, 01 ಕಂಚು, ಕುಸ್ತಿಯಲ್ಲಿ ಒಟ್ಟು 10 ಚಿನ್ನ, 10 ಬೆಳ್ಳಿ, 05 ಕಂಚು, ಯೋಗಾಸನ ಸ್ಪರ್ಧೆಯಲ್ಲಿ ಒಟ್ಟು 05 ಚಿನ್ನ, 08 ಬೆಳ್ಳಿ 03 ಕಂಚು ಪದಕವನ್ನು ಪಡೆದುಕೊಂಡಿದ್ದಾರೆ.ಮೈಸೂರು ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ಈ 12 ವಿಭಾಗಗಳಿಂದಲೂ ಆಳ್ವಾಸ್‌ನ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ವಿಜೇತ ಕ್ರೀಡಾಪಟುಗಳನ್ನು ಅಧ್ಯಕ್ಷ ಡಾ. ಎಂ. ಮೋಹನ ಆಳ್ವರು ಅಭಿನಂದನೆ ಸಲ್ಲಿಸಿದ್ದಾರೆ.
