ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಎಳಜಿತ ಶ್ರೀ ರಾಮಕೃಷ್ಣ ಕುಟೀರದಲ್ಲಿ ನವರಾತ್ರಿ ಅಂಗವಾಗಿ ಒಂಬತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಆಶ್ರಮದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಪ್ರತಿನಿತ್ಯ ಆಶ್ರಮದ ವಿದ್ಯಾರ್ಥಿಗಳಿಂದ ನಿತ್ಯೋಪಾಸನ ಮಂತ್ರಗಳೊಂದಿಗೆ ಗಣಪತ್ಯಧರ್ಮಶೀರ್ಷ, ದೇವಿಯ ವಿವಿಧ ಸ್ತುತಿಗಳು, ಲಲಿತ ಸಹಸ್ರನಾಮ, ಸಪ್ತಶತಿ ಪರಾಯಣ, ಉಪನಿಷತ್ ಪಠಣ, ದೇವಿ ಪಾರಾಯಣ, ಭಗವದ್ಗೀತೆ, ವಿಷ್ಣು ಸಹಸ್ರನಾಮ, ರಾಮರಕ್ಷಾ ಸ್ತೋತ್ರ, ಹನುಮಾನ್ ಚಾಲಿಸ್ ಇತ್ಯಾದಿ ಸ್ತೋತ್ರಗಳ ಪಠಣ ನಡೆಯಿತು. ದುರ್ಗಾಷ್ಟಮಿಯಂದು ವಿಶೇಷವಾಗಿ ಕುಮಾರಿ ದುರ್ಗಾ ಪೂಜೆ ನಡೆಯಿತು. ಮಾತೆಯರಾದ ಯಶೋಧಾ ಅಡಿಗ ವಂಡ್ಸೆ ಹಾಗೂ ನಾಗಶ್ರೀ ಮಧ್ಯಸ್ಥ ಕೋಟ ಕುಮಾರಿ ದುರ್ಗಾ ಪೂಜೆ ನೆರವೇರಿಸಿದರು. ಮಹಾನವಮಿಯಂದು ವಿದ್ಯಾರ್ಥಿಗಳಿಂದ ಚಂಡಿಕಾ ಪಾರಾಯಣದ ದೇವಿ ಸ್ತುತಿಗಳ ಸಾಮೂಹಿಕ ಪಠಣ, ವಿಜಯದಶಮಿಯಂದು ವಿದ್ಯಾ ಪ್ರಧಾನ, ದೆವಿ ಮಹಾತ್ಮೆಯ ಕಥನ ಪಠಣ ಜರುಗಿದವು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಜಡ್ಕಲ್ ಬೀಸಿನಪಾರೆಯ ಮೂಕಾಂಬಿಕಾ ಪ್ರೌಢಶಾಲೆಯುಲ್ಲಿ ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಅಭಿಯಾನದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ನಮ್ಮ ಬಳಿ ಆಗೋದನ್ನ ನಾವೇ ಪರಿಹರಿಸುತ್ತೇವೆ, ಸಾಧ್ಯವಾಗದಿದ್ದರೆ ಸರಕಾರಕ್ಕೆ ಬರೆಯುತ್ತೇವೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಗ್ರಾಮದಲ್ಲಿ ಅಧಿಕಾರಿಗಳು ಹಾಗೂ ಅಹವಾಲುದಾರರಿಗೆ ಮನವಿ, ಸ್ಪಷ್ಟನೆಯ ಬಳಿಕ ಪ್ರತಿಕ್ರಿಯಿಸಿದ ಅವರು ವಿಕಲಚೇತನರ ಬಸ್ಪಾಸ್ ರಾಜ್ಯ ಹಾಗೂ ಖಾಸಗಿ ಬಸ್ಗಳಿಗೂ ವಿಸ್ತರಣೆ, ಅಂಗನವಾಡಿ ತೆರೆಯಲು ಅವಕಾಶವಿದ್ದರೆ ಸರಕಾರದ ಗಮನಕ್ಕೆ, ಜಡ್ಕಲ್ ಗ್ರಾಮದಲ್ಲಿ ಸ್ಮಶಾನಕ್ಕೆ ಸರಕಾರಿ ಜಾಗ ಗುರುತಿಸಿದ್ದು ಗಡಿ ಗುರುತು ಮಾಡಲು ತಹಶಿಲ್ದಾರರಿಗೆ ಸೂಚನೆ, ನ್ಯಾಯಾಲದಲ್ಲಿರುವ ಜಾಗದ ವ್ಯಾಜ್ಯಗಳಿಗೆ ಅಭಿಯಾನದಲ್ಲಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂದರು. ವಿಕಲಚೇತನ ರಾಜು ಪೂಜಾರಿ ಅವರ ಬಸ್ ಪಾಸ್ ಕಿ.ಮೀ ವ್ಯಾಪ್ತಿ ವಿಸ್ತರಣೆ ಹಾಗೂ ಖಾಸಗಿ ಬಸ್ಸಿನಲ್ಲಿ ಕೂಡ ವಿಕಲಚೇತನರಿಗೆ ಬಸ್ ಪಾಸ್ ನೀಡಬೇಕು ಹಾಗೂ ಎಪಿಎಲ್ ಕಾರ್ಡುದಾರರಿಗೂ ಪಿಂಚಣಿ ದೊರೆಯಬೇಕು ಎಂಬ ಬೇಡಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ, ಕೆಎಸ್ಆರ್ಟಿಸಿ ಪಾಸ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ರಾಮಕ್ಷತ್ರಿಯ ಯುವಕ ಸಮಾಜದಿಂದ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ನಡೆಯುತ್ತಿರುವ 35ನೇ ವರ್ಷದ ಶ್ರೀ ಶಾರದೋತ್ಸವ ಸಮಾರಂಭದಲ್ಲಿ ಶುಕ್ರವಾರ ಶಾರದಾ ಪುರಮೆರವಣಿಗೆ ಶಾರದಾ ಮೂರ್ತಿಯ ವಿಸರ್ಜನೆ ಕಾರ್ಯಕ್ರಮ ನಡೆಯಿತು. ಪುರಮೆರವಣಿಗೆಯಲ್ಲಿ ಚಂಡೆ ವಾದನ ಹಾಗೂ ಇನ್ನಿತರ ಕಲಾತಂಡಗಳು ಪುರಮೆರವಣಿಗೆಗೆ ಮೆರಗು ನೀಡಿದ್ದವು. ಈ ವೇಳೆ ಶಾರದೋತ್ಸವ ಸಮಿತಿಯ ಅಧ್ಯಕ್ಷರಾದ ದಿನಕರ ಪಟ್ವಾಲ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ದಡ್ಡು, ಗೌರವ ಅಧ್ಯಕ್ಷ ಗುರುರಾಜ ಹೋಬಳಿದಾರ್, ಕಾರ್ಯದರ್ಶಿ ರಾಘವೇಂದ್ರ ಎನ್. ತಗ್ಗರ್ಸೆ ಭಾಗವಹಿಸಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಗ್ರಾಮೀಣ ಭಾಗದ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಸ್ಪಂದಿಸುವ ಜೊತೆಗೆ ಸರಕಾರದ ಯೋಜನೆಗಳ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಎಂ. ಹೇಳಿದರು. ಅವರು ಶನಿವಾರ ಜಡ್ಕಲ್ ಗ್ರಾಮದ ಬಿಸಿನಪಾರೆಯ ಶ್ರೀ ಮೂಕಾಂಬಿಕಾ ಪ್ರೌಢಶಾಲೆಯಲ್ಲಿ ಆಯೋಜಿಸಲಾದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಅಭಿಯಾನ ಉದ್ಘಾಟಿಸಿ ಮಾತನಾಡಿ ಸಮಾಜದಲ್ಲಿ ಸರಕಾರದ ಸೌಲಭ್ಯಗಳಿಂದ ವಂಚಿತರಾದ ವಿಕಲಚೇತನರು, ಹಿರಿಯ ನಾಗರಿಕರು, ಮಹಿಳೆಯರು ಮತ್ತು ಮಕ್ಕಳ ಸಮಸ್ಯೆ ಪರಿಹಾರಕ್ಕೆ ಈ ಅಭಿಯಾನದಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ ಎಂದರು. ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸರಕಾರ ಕೈಗೊಂಡ ಈ ಅಭಿಯಾನ ಕೋವಿಡ್ ಎರಡನೇ ಅಲೆಯ ಬಳಿಕ ಮತ್ತೆ ಜಡ್ಕಲ್ ಗ್ರಾಮದಿಂದ ಆರಂಭಗೊಳ್ಳುತ್ತಿದ್ದು, ಕಂದಾಯ ಇಲಾಖೆಯ ಸಮಸ್ಯೆಗಳು, ಕೃಷಿ ಸಂಬಂಧಿತ ಯೋಜನೆಗಳ ಮಾಹಿತಿ ಸೇರಿದಂತೆ ಸರಕಾರದ ಉತ್ತಮ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲಾಗುತ್ತದೆ ಎಂದರು. ಜಡ್ಕಲ್ ಗ್ರಾಮ ಜಿಲ್ಲಾ ಕೇಂದ್ರದಿಂದ ದೂರವಿರುವುದರಿಂದ ಈ ಗ್ರಾಮ ಆಯ್ದುಕೊಳ್ಳಲಾಗಿದೆ ಜೊತೆಗೆ ಜಡ್ಕಲ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಳೆದ ಒಂದು ದಶಕದಿಂದ ಜನಮನ ರಂಜಿಸಿದ ಇನಿದನಿ ಕಾರ್ಯಕ್ರಮ ಜನವರಿ 9ಕ್ಕೆ ನಿಗದಿಯಾಗಿದೆ. ಕಲಾಕ್ಷೇತ್ರ-ಕುಂದಾಪುರ ಕಛೇರಿಯಲ್ಲಿ ಇನಿದನಿ ದಿನಾಂಕ ನಿಗದಿ ಪಡಿಸಿದ ಗಣ್ಯರು ಕಾರ್ಯಕ್ರಮದ ತಯಾರಿಗೆ ಚಾಲನೆ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಹಿತಿ ಎ.ಎಸ್.ಎನ್. ಹೆಬ್ಬಾರ್ ಅವರು ಕುಂದಾಪುರ ಹಲವು ಪ್ರಥಮಗಳಿಗೆ ಕಾರಣವಾದ ಇತಿಹಾಸವಿದೆ. ಅದಕ್ಕೆ ಇನಿದನಿಯೂ ಸೇರ್ಪಡೆಯಾಗಿದೆ. ಅಷ್ಟೊಂದು ಸಂಖ್ಯೆಯಲ್ಲಿ ಸಂಗೀತ ಕಲಾಸಕ್ತರು 4-5 ಗಂಟೆ ಕುಳಿತು ಕಾರ್ಯಕ್ರಮವನ್ನು ವೀಕ್ಷಿಸುತ್ತಾರೆ ಅಂತಾದರೆ ಅದರ ಸೆಳೆತಕ್ಕೆ ಇನಿದನಿಯ ಗುಣಮಟ್ಟವೇ ಕಾರಣವಾಗಿದೆ. ಹಾಗಾಗಿ ಇನಿದನಿ ಪ್ರಸ್ತುತಿ ಮಾಡುವ ಕಲಾಕ್ಷೇತ್ರ-ಕುಂದಾಪುರ, ಕುಂದಾಪುರಕ್ಕೊಂದು ಹೆಮ್ಮೆಯ ಸಂಸ್ಥೆ ಎನ್ನುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು. ಡಾ. ಆದರ್ಶ ಹೆಬ್ಬಾರ್ ಮಾತನಾಡುತ್ತಾ ನಾನು ವೃತ್ತಿಯಲ್ಲಿ ವೈದ್ಯ, ಬಿಡುವಿಲ್ಲದೆ ಕರ್ತವ್ಯ ನಿರ್ವಹಿಸಬೇಕಾದ ಸನ್ನಿವೇಶಗಳು ಬಹಳಷ್ಟು ಇರುತ್ತದೆ. ಆಗ ನಮ್ಮ ಮನಸ್ಸಿಗೆ ಮುದ ನೀಡುವ, ಒತ್ತಡವನ್ನು ನಿವಾರಿಸುವ ಎಕೈಕ ಔಷಧಿ ಎಂದರೆ ಅದು ಸಂಗೀತ. ಅದೆಷ್ಟೋ ಬಾರಿ ಇನಿದನಿ ನೋಡಬೇಕೆಂದು ಆಗಮಿಸಿದಾಗಲೆಲ್ಲ ಕೂರಲು ಸ್ಥಳಾವಕಾಶವಿಲ್ಲದೆ ನಿಂತುಕೊಂಡು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹಿಂದೂ ಧರ್ಮೀಯರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಿದ್ದಾರೆ ಎಂಬ ಆರೋಪದಡಿ ನ್ಯಾಯಾಂಗ ಬಂಧಿತರಾಗಿದ್ದ ಕುಂದಾಪುರ ಹಳ್ಳಾಡಿ- ಹರ್ಕಾಡಿ ನಿವಾಸಿಗಳಾದ ಜ್ಯೋತಿ ಪ್ರಕಾಶ್, ರವಿ ಮನೋಹರ್, ಪ್ರಕಾಶ್ ಕುಂದರ್ ಅವರಿಗೆ ಪ್ರಥಮ ದರ್ಜೆ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಜಾಮೀನು ನೀಡಿ ಬಿಡುಗಡೆಗೊಳಿಸಿದೆ. ಬ್ರಹ್ಮಾವರ ಸ್ಯಾಬರಕಟ್ಟೆ ನಿವಾಸಿ ಆನಂದ (36) ಅವರು ಆರೋಪಿಗಳು ಎರಡು ಧರ್ಮಗಳ ನಡುವೆ ದ್ವೇಷವನ್ನುಂಟು ಮಾಡುವ ಉದ್ದೇಶದಿಂದ ಮತಾಂತರ ಮಾಡಲು ಪ್ರಯತ್ನಪಟ್ಟಿದ್ದರು ಎಂದು ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ನಾಲ್ವರು ಆರೋಪಿಗಳನ್ನು ಕೋಟ ಪೊಲೀಸರು ಬಂಧಿಸಿ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪಿಗಳ ಪರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ವಕೀಲರು ರಾಜಕೀಯ ದುರುದ್ದೇಶದಿಂದ ಆರೋಪಿಗಳ ಮೇಲೆ ಸುಳ್ಳು ದೂರು ದಾಖಲಾಗಿದೆ ಎಂದು ವಾದ ಮಂಡಿಸಿದ್ದರು. ಆರೋಪಿಗಳ ಪರ ಉಡುಪಿ ಯುವ ನ್ಯಾಯವಾದಿಗಳಾದ ಅಸದುಲ್ಲಾ ಕಟಪಾಡಿ, ಪ್ರದೀಪ್ ಪಿ.ಜೆ ಮತ್ತು ಆದಿತ್ಯ ಬೈಲೂರು ವಾದಿಸಿದ್ದರು.
ಕುಂದಾಪ್ರ ಡಾಟ್ ಕಾಂ ವರದಿ.ಕುಂದಾಪುರ: ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಗುಡುಗು ಸಹಿತ ಮಳೆ ಭತ್ತ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ವಾರದ ಮೊದಲು ಅಚಾನಕ್ ಉಂಟಾಗಿದ್ದ ಬಿರುಗಾಳಿ ಅಬ್ಬರಕ್ಕೆ ತಲ್ಲಣಗೊಂಡಿದ್ದ ರೈತರು ಇದೀಗ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಫಸಲು ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ. ಉತ್ತಮ ಮುಂಗಾರು ಹಿನ್ನಲೆಯಲ್ಲಿ ಈ ಭಾರಿ ಉತ್ತಮ ಫಸಲಿದೆ. ಕರಾವಳಿಯಲ್ಲಿ ಕಟಾವಿಗೆ ರೈತರು ಅಣಿಯಾಗುತ್ತಿರುವಾಗಲೇ ಮಳೆ ಆರಂಭಗೊಡಿದೆ. ಮಲೆನಾಡು ಪ್ರಾಂತ್ಯದಲ್ಲಿಯೂ ರೈತರು ಮನೆಯಂಗಳ ಸಜ್ಚುಗೊಳಿಸುವ ತಯಾರಿಯಲ್ಲಿದ್ದಾರೆ. 14 ಸಾವಿರ ಹೆಕ್ಟೇರ್ ಭತ್ತ ಕೃಷಿ:ಕುಂದಾಪುರ ತಾಲೂಕಿನಲ್ಲಿ 202-21ನೇ ಸಾಲಿನಲ್ಲಿ 14 ಸಾವಿರ ಹೆಕ್ಟೇರ್ ಭತ್ತ ಕೃಷಿಯಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ 500 ಹೆಕ್ಟೇರ್ ಹೆಚ್ಚುವರಿ ಮುಂಘಾರು ಕೃಷಿ ಆಗಿದೆ. ವರಾಹಿ ನೀರಿನ ಲಭ್ಯತೆ ಹಿನ್ನಲೆಯಲ್ಲಿ ಮಲೆನಡು, ನಡುಬಯಲು ಭಾಗದಲ್ಲಿಯೂ ಹಡಿಲು ಬಿದ್ದ ಭೂಮಿಯಲ್ಲೂ ಭತ್ತ ಚಿಗುರಿದೆ. ಹದವಾದ ಮಳೇಯ ದೆಸೆಯಿಂದ ಸಸಿಗಳು ದಷ್ಟಪುಷ್ಟವಾಗಿ ಬೆಳೆದು ನಿಂತಿದ್ದು ತೆನೆಯ ಗೊಂಚಲು ಸಮೃದ್ದತೆಯಿಂದ ಕೂಡಿದೆ. ಬೆಳೆದು ನಿಂತ ಪೈರು ಮಳೆ ನೀರಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಇಲ್ಲಿನ ತರುಣ ಕಲಾವೃಂದ ರಿ. ಇದರ ನೂತನ ಅಧ್ಯಕ್ಷರಾಗಿ ರವೀಂದ್ರ ಜಿ. (ರಾಮಕೃಪಾ) ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಕೊ.ಶಿವಾನಂದ ಕಾರಂತ ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳಿಗೆ ಕಲಾವೃಂದದ ಸದಸ್ಯರು ಶುಭಾಶಯ ಕೋರಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತುಮಕೂರಿನ ಅಡಿಕೆ ವ್ಯಾಪಾರಿ ವಿವೇಕ್ ಮತ್ತು ಅವರ ತಾಯಿ ಭಾಗ್ಯ ನಿಗೂಢ ನಾಪತ್ತೆಯಾಗಿದ್ದಾರೆ. ಕಾರು ಚಾಲಕ ಜಾಫರ್ ಖಾನ್ ಎಂಬವರೊಂದಿಗೆ ತುಮಕೂರು ಚಿಕ್ಕನಾಯಕನ ಹಳ್ಳಿಯಿಂದ ಮಂಗಳೂರಿಗೆ ಹೊರಟಿದ್ದ ಇವರು ತ್ರಾಸಿಯಲ್ಲಿ ಕಾಣೆಯಾಗಿದ್ದಾರೆ. ವಿವೇಕ್ ಅವರ ತಂದೆ ವರ್ಷದ ಹಿಂದೆ ತಾಯಿ ಜೊತೆ ಬೊಲೆರೊ ಜೀಪ್ನಲ್ಲಿ ಹೊರಟು ಆದಿಚುಂಚನಗಿರಿ ದೇವಳದಲ್ಲಿ ಪೂಜೆ ಸಲ್ಲಿಸಿ ನಂತರ ಮಂಗಳೂರಿಗೆ ಹೋಗಲಿದೆ ಎಂದು ತಿಳಿಸಿ ಕಾರು ಚಾಲಕ ಜಾಫರ್ಗೆ ತಿಳಿಸಿ ಹೊರಟಿದ್ದು, ತ್ರಾಸಿಯಿಂದ ಸುಮಾರು 15 ಕಿಮೀ ಹಿಂದೆ ನಿದ್ರೆ ಬರುತ್ತಿದ್ದ ಕಾರಣ ಕಾರು ನಿಲ್ಲಿಸಿ ನಿದ್ರೆಗೆ ಜಾರಿದ್ದರು ಬೆಳಿಗ್ಗೆ 6 ಗಂಟೆಗೆ ಚಾಲಕ ಎದ್ದು ನೋಡುವಾಗ ವಿವೇಕ್ ಮತ್ತು ಅವರ ತಾಯಿ ಕಾಣದಾಗಿದ್ದು, ಮೊಬೈಲ್ ಸ್ವೀಚ್ ಆಪ್ ಆಗಿದೆ. ಅಡಿಕೆ ವ್ಯಾಪಾರಸ್ಥರಾಗಿದ್ದು, ವ್ಯವಹಾರದಲ್ಲಿ ನಷ್ಟ ಉಂಟಾಗಿ ಹಣದ ಅಡಚಣೆಯಿಂದ ಎಲ್ಲಿಗೋ ಹೋಗಿರಬಹುದೆಂದು ಜಾಫರ್ ಖಾನ್ ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಬೈಂದೂರು ಪೇಟೆಯ ಲಾಡ್ಜ್ವೊಂದರಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಶಿರೂರು ಗ್ರಾಮದ ಲಾಡ್ಜ್ವೊಂದರಲ್ಲಿ ವ್ಯಕ್ತಿಯೋರ್ವ ಕಾಲುಜಾರಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಬೈಂದೂರು ಲಾಡ್ಜ್ವೊಂದರಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿದ್ದು ಮಂಗಳೂರು ಬಿಜೈ ನ್ಯೂರೋಡ್ ನಿವಾಸಿ ಮನೋಜ್ ಆರ್ ಸಾಲಿಯಾನ್ ( 45) ಎಂದು ಗುರುತಿಸಲಾಗಿದೆ. ಅವರು ಭಟ್ಕಳದ ಶಿರಾಲಿ ಎಂಬಲ್ಲಿರುವ ನೆಟ್ಕಾನ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಶಿರೂರು ಸಮೀಪದ ಲಾಡ್ಜ್ವೊಂದರಲ್ಲಿ ಉಳಿದುಕೊಂಡಿದ್ದ ಎಂ.ಆರ್ ಬಾಬು ಎಂಬವರು ಲಾಡ್ಜ್ಗೆ ಹೋಗಲು ಮೆಟ್ಟಿಲು ಏರುವಾಗ ಆಕಸ್ಮಿಕವಾಗಿ ಬಿದ್ದು ಗಾಯಗೊಂಡಿದ್ದ ಪರಿಣಾಮ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಎರಡು ಪ್ರಕರಣ ಬೈಂದೂರು ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.
