ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಚೆನ್ನೈನಲ್ಲಿ ನಡೆದ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ರೆಕಾರ್ಡ್ ಕ್ರಿಯೇಟ್‌ಗೈದ ಉಡುಪಿ ಜಿಲ್ಲೆಯ ಕೋಟದ ಗಿಳಿಯಾರಿನ ಕರಾಟೆ ತರಬೇತುದಾರ ಮಂಜುನಾಥ ಮೊಗವೀರ ಅವರನ್ನು ಬೆಂಗಳೂರಿನಲ್ಲಿ ಆದಿತ್ಯವಾರ ಜೆ.ಪಿ.ಮಾರ್ಷಲ್ ಆರ್ಟ್ಸ್ ಅಕಾಡೆಮಿ ವತಿಯಿಂದ ಪ್ರಶಸ್ತಿ ಪ್ರದಾನಗೈದು ಪುರಸ್ಕರಿಸಲಾಯಿತು ಬೆಂಗಳೊರಿನ ನೈಋತ್ಯ ವಿಭಾಗದ ಡೆಪ್ಯೂಟಿ ಕಮಿಷನರ್ ಅನಿತಾ ಬಿ. ಹದ್ದನ್ನವರ್ (ಐ.ಪಿ.ಎಸ್) ಹಾಗೂ ಬಿಬಿಎಂಪಿ ಬೆಂಗಳೂರು ಇದರ ಮಾಜಿ ಮಹಾಪೌರರಾದ ಎನ್. ಶಾಂತಕುಮಾರಿ ಉಪಸ್ಥಿತರಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ವರದಿ.ಕುಂದಾಪುರ: ಹೈದರಾಬಾದ್‌ನಲ್ಲಿ ಡಿ.13ರಿಂದ 21ರವರೆಗೆ ನಡೆಯುವ ಬಿಸಿಸಿಐ 19 ವರ್ಷದೊಳಗಿನ ಮಹಿಳಾ ಏಕದಿನ ಭಾಗವಹಿಸುವ ಕ್ರಿಕೆಟ್‌ನಲ್ಲಿ ಕರ್ನಾಟಕ ರಾಜ್ಯ ತಂಡಕ್ಕೆ ಕುಂದಾಪುರದ ರಚಿತಾ ಹತ್ವಾರ್ ನಾಯಕಿಯಾಗಿ, ವಿಕೆಟ್ ಕೀಪಿಂಗ್ ಕಂ ಬ್ಯಾಟರ್ ಆಗಿರುವ 16 ವರ್ಷದ ರಾಜ್ಯ ತಂಡವನ್ನು ಇದೇ ಮೊದಲ ಭಾರಿಗೆ ಮುನ್ನಡೆಸುತ್ತಿದ್ದಾರೆ. ಪ್ರಸಕ್ತ ಅಹಮದಾಬಾದ್‌ನಲ್ಲಿ ನಡೆಯುತ್ತಿರುವ 23 ವರ್ಷದೊಳಗಿನ ಮಹಿಳಾ ಟಿ-20 ಕ್ರಿಕೆಟ್‌ನಲ್ಲಿ ಕರ್ನಾಟಕ ರಾಜ್ಯದ ಪರ ಆಡುತ್ತಿದ್ದು, ಆರಂಭಿಕ ಆಟಗಾರ್ತಿಯಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ತಂಡ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದೆ. ರಚಿತಾ ಕರ್ನಾಟಕ ರಾಜ್ಯ ಹಿರಿಯರ ತಂಡದ ಸಂಭಾವ್ಯ ಆಟಗಾರ್ತಿಯರ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದು, ರಾಷ್ಟ್ರೀಯ ತಂಡಕ್ಕೂ ಆಯ್ಕೆಯಾಗುವ ನಿರೀಕ್ಷೆ ಮೂಡಿಸಿದ್ದಾರೆ. ರಚಿತಾ ಅವರಿಗೆ ಪ್ರಸ್ತುತ ಕರ್ನಾಟಕ ಇನ್ ಸ್ಟಿಟ್ಯೂಟ್ ಆಫ್ ಕ್ರಿಕೆಟ್ ಅಕಾಡೆಮಿ(ಕೆಐಒಸಿ)ಯ ಮುಖ್ಯ ಕೋಚ್ ಇರ್ಫಾನ್ ಸೇಶ್ ತರಬೇತಿ ನೀಡುತ್ತಿದ್ದಾರೆ. ರಚಿತಾ ವಾರದಲ್ಲಿ ಐದು ದಿನ ನಿರಂತರ ತರಬೇತಿ ಪಡೆಯುತ್ತಾರೆ. ಕುಂದಾಪುರದ ವಕೀಲ ದಂಪತಿಯಾಗಿರುವ ರಮೇಶ್ ಹತ್ವಾರ್ ಹಾಗೂ ಸರಿತಾ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಆತ್ಮ ಯೋಜನೆಯಡಿ ಯುವ ರೈತ ಮತ್ತು ಯುವ ರೈತ ಮಹಿಳೆಯರಿಗೆ ಡಿಸೆಂಬರ್ 15 ರಿಂದ 19ರ ವರೆಗೆ ಐದು ದಿನಗಳ ಕಾಲ ಅಣಬೆ ಹಾಗೂ ಜೇನು ಕೃಷಿ ಕುರಿತು ತರಬೇತಿ ಕಾರ್ಯಕ್ರಮವನ್ನು ಕುಂದಾಪುರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಡಿ. 12 ರ ಒಳಗಾಗಿ ಮೇಲ್ಕಂಡ ಕಚೇರಿಗೆ ಆಧಾರ್, ಪಹಣೀ ಪತ್ರ, ಬ್ಯಾಂಕ್ ಖಾತೆ ಪ್ರತಿ ಮತ್ತು ಭಾವಚಿತ್ರ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಕುಂದಾಪುರ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಆಟ್ ಕಾಂ ಸುದ್ದಿ.ಕುಂದಾಪುರ: ಡಾ. ಬಿ.ಆರ್. ಅಂಬೇಡ್ಕರ್ ಯುವಕ ಮಂಡಲ ಮೇಲ್‌ಗಂಗೊಳ್ಳಿ ಇವರ ಆಶ್ರಯದಲ್ಲಿ ಮೇಲ್‌ಗಂಗೊಳ್ಳಿಯ ಸರಕಾರಿ ಕಿರಿಯ ಪ್ರಾಥಮಿಕ (ಹವೇ) ಶಾಲೆಯ ಸಹಕಾರದೊಂದಿಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ 69ನೇ ವರ್ಷದ ಪರಿನಿರ್ವಾಣ ದಿನವನ್ನು ಆಚರಿಸಲಾಯಿತು. ಯುವಕ ಮಂಡಲದ ಅಧ್ಯಕ್ಷ ನಾಗೇಶ ಅವರು ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು. ಮನಿಷಾ ಸಂವಿಧಾನ ವಿಧಿಯನ್ನು ಬೋಧಿಸಿದರು. ಶಾಲೆಯ ಮುಖ್ಯೋಪಾಧ್ಯಾಯ ಗುರುರಾಜ್ ಆಚಾರ್ಯ ಅವರು ಡಾ. ಅಂಬೇಡ್ಕರ್ ವಿಚಾರಧಾರೆಗಳ ಬಗ್ಗೆ ಮಾತನಾಡಿದರು. ಯುವಕ ಮಂಡಲದ ಸದಸ್ಯರು, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಯುವಕ ಮಂಡಲದ ಗೌರವಾಧ್ಯಕ್ಷ ಭಾಸ್ಕರ ಎಚ್.ಜಿ. ಕಾರ್ಯಕ್ರಮ ನಿರ್ವಹಿಸಿದರು. ಮಹಿಳಾ ಮಂಡಲದ ಅಧ್ಯಕ್ಷೆ ಜ್ಯೋತಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಸ್ವಚ್ಛತಾ ಅಭಿಯಾನಗಳು ಸಂಘಟನೆಗಳಿಗೆ ಸೀಮಿತವಾಗದೆ ಪ್ರತಿ ಮನೆ ಮನಗಳನ್ನು ತಲುಪಲಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಭಾನುವಾರ ಶ್ರೀರಾಮ ಗೆಳೆಯರ ಬಳಗ ಕೋಡಿ ಕನ್ಯಾಣ ಇವರ ಆಶ್ರಯದಲ್ಲಿ ನಮ್ಮ ಕಡಲು ನಮ್ಮ ಜವಾಬ್ದಾರಿ ಎಂ. ಶೀರ್ಷಿಕೆಯಡಿ ಕೋಡಿ ಕನ್ಯಾಣ ಬೀಚ್ ಕ್ಲಿನಿಂಗ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾತನಾಡಿದರು. ಯುವ ಸಮುದಾಯ ಪ್ರತಿ ಹೆಜ್ಜೆಗೂ ಜಾಗೃತಿ ಮೊಳಗಿಸಿ ತ್ಯಾಜ್ಯ ಮುಕ್ತ, ವ್ಯಾಜ್ಯ,ವ್ಯಸನ ಮುಕ್ತ ಸ್ವಸ್ಥ ಸಮಾಜಕ್ಕೆ ಮುನ್ನುಡಿ ಬರೆಯಲಿ ಎಂದು ಹಾರೈಸಿದರು. ಈ ಸಂದರ್ಭಗಳಲ್ಲಿ ಕೋಡಿ ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಪುನೀತ್ ಪೂಜಾರಿ, ಉಪಾಧ್ಯಕ್ಷ ಯಾದವ್ ಕರ್ಕೇರ, ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಕುಂದರ್, ಜೊತೆಗೆ ಕಾರ್ಯದರ್ಶಿ ದರ್ಶನ್ ಕಾಂಚನ್, ನಿಖಿಲ್ ಖಾರ್ವಿ ಹಾಗೂ ಸಂಘದ ಎಲ್ಲಾ ಸದಸ್ಯರು, ಕೋಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಖಾರ್ವಿ, ಸದಸ್ಯರಾದ ಕೃಷ್ಣ ಪೂಜಾರಿ, ಕೋಡಿ ಪರಿಸರದ ಅಂಗನವಾಡಿ ಹಾಗೂ ಶಿಶುಮಂದಿರದ ಮಾತೆಯರು, ವಾಮನ್ ಡಿ ಸಾಲಿಯಾನ್, ಭೋಜ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಖಾಸಗಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ಶನಿವಾರ ರಾತ್ರಿ ಇಲ್ಲಿನ ಉಪ್ಪುಂದದಲ್ಲಿ ನಡೆದಿದೆ. ರಾತ್ರಿ 10.15ರ ಸುಮಾರಿಗೆ ಉಪ್ಪುಂದಲ್ಲಿನ ಖಂಬದಕೋಣೆ ರೈತರ ಸಂಘದ ಎದುರು ಕುಂದಾಪುರದಿಂದ ಬೈಂದೂರಿನ ಕಡೆಗೆ ಸಾಗುತ್ತಿದ್ದ ಖಾಸಗಿ ಬಸ್ ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಸವಾರ ನಾಗರಾಜ ಖಾರ್ವಿ ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಯ ಬಗ್ಗೆ ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೋಟೇಶ್ವರದ ಶಿಕ್ಷಕಿಯೊಬ್ಬರ ಮನೆಯ ಕಾಪಾಟಿನಲ್ಲಿಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳು ಕಳವಾಗಿರುವ ಬಗ್ಗೆ ವರದಿಯಾಗಿದೆ. ಕೋಟೇಶ್ವರ ಆಟಕೆರೆ ಬಟ್ಟೆ ಅಂಗಡಿ ಎದುರಿನ ನಿವಾಸಿ, ಬಿದಲ್ ಕಟ್ಟೆಯ ಕೆಪಿಎಸ್ ಪ್ರೌಢಶಾಲಾ ವಿಭಾಗದ ಶಿಕ್ಷಕಿ ಪೂಜಾ ಕಿಣಿ (43) ಎಂಬವರು ಮನೆಯ ಗೊದ್ರೇಜ್ ನಲ್ಲಿ ಚಿನ್ನದ ಬ್ರಾಸ್ ಲೈಟ್, ಪಾವನ್ ಸರ, ಕೆಂಪು ಕಲ್ಲು ಮುತ್ತಿನ ಸೂರ್ಯಪೆಂಡೆಂಟ್, ಸಿಂಗಲ್ ಸ್ಕ್ರೂ ಬಳೆ, ಜುಮ್ಕಿ ಬಳೆ, ಕರಿಮಣಿ ನೆಕ್ಲೆಸ್ ಗೋಲ್ಡನ್ ಸಟೋನ್ ಪೆಂಡೆಂಟ್, ವೆಂಕಟರಮಣ ಪೆಂಡೆಂಟ್, ಡಿ ಸಿ ಚೈನ್, ನೆಕ್ಲೆಸ್, ಹಸಿರು ಗುಲಾಬಿ ಕಲ್ಲಿನ ಪೆಂಡೆಂಟ್, ಸಣ್ಣ ಹವಳದ ಸರ, ವಜ್ರದ ಮೂಗುಬೊಟ್ಟು,-2 ಇವುಗಳನ್ನು ಮನೆಯ ಗೊದ್ರೇಜ್ ನಲ್ಲಿ ಇರಿಸಿ ಬೀಗ ಹಾಕಿ ಬೀಗವನ್ನು ಅಲ್ಲಿಯೇ ಇಟ್ಟು ಹೋಗಿದ್ದು ಅವರು ಗೃಹಪ್ರವೇಶ ಕಾರ್ಯಕ್ರಮಕ್ಕೆ ಹೋಗಲು ಗೊದ್ರೇಜ್ ನಲ್ಲಿಟ್ಟಿದ್ದ ಚಿನ್ನಾಭರಣಗಳನ್ನು ನೋಡುವಾಗ ಕೆಲವು ಚಿನ್ನಾಭರಣಗಳು ಇಲ್ಲದಿರುವುದು ಗಮನಕ್ಕೆ ಬಂತು. ಅವುಗಳನ್ನು ಲಾಕರ್‌ನಲ್ಲಿ ಇಟ್ಟಿರಬಹುದೆಂದು ಭಾವಿಸಿದ ಅವರು, ಜೂ.26ರಂದು ಕಾರ್ಯಕ್ರಮಕ್ಕೆ ಹೋಗಲು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಲ್ಲಿ ಕೌಶಲ್ಯವೃದ್ಧಿಗೆ ಒತ್ತು ಕೊಡಬೇಕಾಗುತ್ತದೆ. ಯುವ ಸಮುದಾಯಕ್ಕೆ ಉದ್ಯೋಗದ ಕೊರತೆ ಕಾಡುತ್ತಿರುವ ಕಾಲಘಟ್ಟದಲ್ಲಿ ಕಾಲೇಜುಗಳಲ್ಲಿ ವ್ಯವಹಾರದ ಅರಿವು ನೀಡುವುದರಿಂದ ಕೆಲಸ ಕೊಡುವ ಕೈಗಳು ರೂಪುಗೊಳ್ಳಬಹುದು. ಇಂಥಹ ಕಾರ್ಯಕ್ರಮ ಪ್ರಸ್ತುತದ ಅವಶ್ಯಕತೆ ಹಾಗೂ ಅಗತ್ಯ ಎಂದು ಕೈಗಾರಿಕೋದ್ಯಮಿ ಹಾಗೂ ಸಾಮಾಜಿಕ ಮುಖಂಡರಾದ ಮುನಿಯಾಲ್ ಉದಯ ಕುಮಾರ್ ಶೆಟ್ಟಿ ಕಾರ್ಕಳ ಹೇಳಿದರು. ಅವರು ಇಲ್ಲಿನ ಶ್ರೀ ವೆಂಕಟರಮಣ ಪ.ಪೂ ಕಾಲೇಜಿನಲ್ಲಿ ನಡೆದ ವಿ-ವಿಸ್ತಾರ 2k25 ವ್ಯವಹಾರ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸೋಲು ಕಲಿಸುವ ಪಾಠ ದೊಡ್ಡ ಯಶಸ್ಸಿಗೆ ಕಾರಣವಾಗುತ್ತದೆ. ಉದ್ಯಮ ರಂಗದಲ್ಲಿ ಸೋಲನ್ನು ಸ್ವೀಕರಿಸಲು ಸಿದ್ಧರಿರಬೇಕು. ಪ್ರಾರಂಭದಲ್ಲಿ ನಷ್ಟ, ಸೋಲು ಆದಾಗ ಕಂಗೆಡದೆ ತಾಳ್ಮೆಯಿ೦ದ ಮು೦ದುವರಿದಾಗ ಯಶಸ್ಸು ಲಭಿಸುತ್ತದೆ. ಏಕಾಗ್ರತೆ ಎಲ್ಲದ್ದಕ್ಕೂ ಅತೀ ಅಗತ್ಯ ಎ೦ದರು. ಉಡುಪಿ ಮಂಗಳೂರು ಜಿಲ್ಲೆಗಳಲ್ಲಿ ವಿದ್ಯಾವಂತ ಯುವ ಸಮುದಾಯಕ್ಕೆ ಸೂಕ್ತ ಉದ್ಯೋಗ ನೀಡುವ ನೀಡುವ ಐಟಿ ಪಾರ್ಕ್, ಸಾಪ್ಟ್ ವೇರ್‌ಗಳು ಬರಬೇಕು. ಈಗ ಜಿಲ್ಲೆಯಲ್ಲಿ ಉದ್ಯೋಗವಕಾಶದ ಕೊರತೆಯಿಂದ ಬೆಂಗಳೂರು, ಮುಂಬೈ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಕೇರಳದ ತ್ರಿಶೂರ್‌ನಲ್ಲಿ ಜರುಗಿದ ದಕ್ಸಿಣ ಭಾರತದ ಅಂತರ್ ರಾಜ್ಯ ಅಶ್ಮಿತಾ ಖೇಲೋ ಇಂಡಿಯಾ ಮಹಿಳಾ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜಿನ ತಂಡವು ಸಮಗ್ರ ಚಾಂಪಿಯನ್ಸ್ ಪಟ್ಟವನ್ನು ಪಡೆದುಕೊಂಡಿತು. ಆ ಮೂಲಕ ಕರ್ನಾಟಕ ರಾಜ್ಯ ತಂಡವನ್ನು ರಾಷ್ಟ್ರ ಮಟ್ಟದ ಪಂದ್ಯದಲ್ಲಿ ಪ್ರತಿನಿಧಿಸಲಿದೆ. ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು 2 ಚಿನ್ನ, 2 ಬೆಳ್ಳಿ, 3 ಕಂಚಿನ ಪದಕ ಸೇರಿದಂತೆ ಒಟ್ಟು 7 ಪದಕಗಳನ್ನು ಪಡೆಯುದರೊಂದಿಗೆ ದಕ್ಷಿಣ ಭಾರತ ಮಟ್ಟದ ಪಂದ್ಯದಲ್ಲಿ ಮೇಲುಗೈ ಸಾಧಿಸಿದರು. ಚಿನ್ನದ ಪದಕಗಳಿಸಿದವರು: ಶ್ರಾವ್ಯ-(48 ಕೆಜಿ), ಪಾವನಿ-(77 ಕೆಜಿ ಪ್ಲಸ್)ಬೆಳ್ಳಿಯ ಪದಕ ಗಳಿಸಿದವರು: ದೀಪಿಕಾ-(53 ಕೆಜಿ), ಕಾಂಚನ-(58 ಕೆಜಿ)ಕಂಚಿನ ಪದಕ ಗಳಿಸಿದವರು: ಪಲ್ಲವಿ-(44 ಕೆಜಿ), ಹಂಸವೇಣಿ-(63 ಕೆಜಿ), ಮಾನಸ-(77 ಕೆಜಿ) ಕ್ರೀಡಾಪಟುಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂಸುದ್ದಿ.ಕುಂದಾಪುರ: ಇಲ್ಲಿನ ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ವಾರ್ಷಿಕೋತ್ಸವ ಆವಿರ್ಭವವು “ಸಿಂದೂರ ಸಂಭ್ರಮ” ಪರಿಕಲ್ಪನೆಯಲ್ಲಿ ಡಿ. 4, 5, 6ರಂದು ಅದ್ದೂರಿಯಾಗಿ ಜರುಗಿತು. ಡಿ.4ರಂದು ಕ್ರಿಯೇಟಿವ್ ಯಕ್ಷಾರಾಧನಮ್ ಹವ್ಯಾಸಿ ಕಲಾವಿದರಿಂದ ‘ಶ್ರೀರಾಮಾನುಗ್ರಹ ಸಿಂದೂರ ವಿಜಯ’ ಯಕ್ಷಗಾನ ಪ್ರದರ್ಶನ ನಡೆಯಿತು. ಡಿ.5ರಂದು ದಿ. ಎಚ್.ಎಸ್ ವೆಂಕಟೇಶಮೂರ್ತಿಯವರ ಸವಿ ನೆನಪಿನ ಕುರಿತ ‘ಭಾವ ನಮನ’ ಭಾವಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು. ಖ್ಯಾತ ನಿರೂಪಕ ಅವಿನಾಶ್ ಕಾಮತ್ ಅವರು ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ವಿವಿಧ ಸ್ಪರ್ಧಾವಳಿಗಳ ಬಹುಮಾನ ವಿತರಣಾ ಕಾರ್ಯಕ್ರಮ ಜರುಗಿತು. ಸಹ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್ ಅವರು ಪ್ರಾಸ್ತಾವಿಕ ನುಡಿಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು. ಉದ್ಘಾಟಕರಾಗಿ ಆಗಮಿಸಿದ ಡಾ. ಜಿ. ರಾಮಕೃಷ್ಣ ಆಚಾರ್, ಎಸ್. ಕೆ.ಎಫ್ ಎಲಿಕ್ಸರ್ ಇಂಡಿಯಾ ಸ್ಥಾಪಕರು ಮತ್ತು ಸಂಜೀವಿನಿ ಗೋಧಾಮ ಮುನಿಯಾಲು ಅವರು ಮಾತನಾಡಿ, ‘ಕಾಲೇಜುಗಳು ಬರಿಯ ಪಠ್ಯದ ಅಭ್ಯಾಸ ನೀಡುವ ಸ್ಥಳವಲ್ಲ. ವಿದ್ಯಾರ್ಥಿಗಳ ಸಾಮರ್ಥ್ಯವನ್ನೆತ್ತಿ ಹಿಡಿಯುವ ವೇದಿಕೆಗಳಾಗಬೇಕು. ಅಂತಹ ವೇದಿಕೆಗಳನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಿ ಕೊಡುತ್ತಿರುವ ಕ್ರಿಯೇಟಿವ್ ಕಾಲೇಜಿನ ಬಗ್ಗೆ ಶ್ಲಾಘನೆಯನ್ನು…
