ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಪಡುವರಿ ಗ್ರಾಮದ ದೊಂಬೆ ಕೂಲಿಮನೆ ನಿವಾಸಿ ನರಸಿಂಹ ಪೂಜಾರಿ (62) ಅವರು ಬುಧವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡಿ.7ರಂದು ಶಿರಸಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಸ್ ಬಂದಿರಲಿಲ್ಲ. ಹುಡುಕಾಡುವಾಗ ಮನೆ ಸಮೀಪದ ಹಾಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಮೃತರ ಪುತ್ರ ಹರೀಶ್ ಪೂಜಾರಿ ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಅಮಾಸೆಬೈಲು: ವಿಷಪೂರಿತ ಹಾವು ಕಚ್ಚಿ ಮಹಿಳೆ ಮೃತಪಟ್ಟ ಘಟನೆ ಮಡಾಮಕ್ಕಿ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಮಾಂಡಿ ಮೂರುಕೈ ನಿವಾಸಿ ಜಲಜಾಕ್ಷಿ ಶೆಡ್ತಿ (76) ಮೃತರು. ಮಂಗಳವಾರ ಮಧ್ಯಾಹ್ನ ಮನೆಯಲ್ಲಿ ತಲೆಕೂದಲಿಗೆ ಹಾಕುವ ಚೌರಿ ತೆಗೆಯಲು ಚೀಲಕ್ಕೆ ಕೈ ಹಾಕಿದಾಗ ಅದರಲ್ಲಿದ್ದ ಹಾವು ಕಡಿದಿತ್ತು. ಅಸ್ವಸ್ಥಗೊಂಡಿದ್ದ ಅವರನ್ನು ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದರು. ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು. ಸಹೋದರ ಭಾಸ್ಕರ ಶೆಟ್ಟಿ ನೀಡಿದ ದೂರಿನಂತೆ ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಪಂಚಶಕ್ತಿ ಸಂಘ ಕೋಡಿತಲೆ – ಹೊಸಬೆಂಗ್ರೆ ಸಂಘವು 24ನೇ ವರ್ಷಕ್ಕೆ ಪಾದಾರ್ಪಣೆ ಗೈಯುತ್ತಿದ್ದು ಇದರ 2025-26ರ ಸಾಲಿನ ಆಡಳಿತ ಮಂಡಳಿಯ ನೂತನ ಅಧ್ಯಕ್ಷ ಪ್ರವೀಣ್ ಖಾರ್ವಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಅನಿಲ ಖಾರ್ವಿ, ಕಾರ್ಯದರ್ಶಿಯಾಗಿ ಎಸ್. ಸಂದೀಪ ಖಾರ್ವಿ, ಜೊತೆ ಕಾರ್ಯದರ್ಶಿಯಾಗಿ ಸಂದೀಪ ಬಿ. ಖಾರ್ವಿ, ಕೋಶಾಧಿಕಾರಿಯಾಗಿ ಲಕ್ಷ್ಮಣ ಖಾರ್ವಿ ಮತ್ತು ಪದಾಧಿಕಾರಿಗಳಾಗಿ ವಿಕೇಶ್ ಬಂಗೇರ, ಅನಿಶ ಖಾರ್ವಿ ಹಾಗೂ ಸಂದೇಶ ಖಾರ್ವಿ ಆಯ್ಕೆಯಾಗಿದ್ದಾರೆ ಎಂದು ಸಂಘದ ಗೌರವಾಧ್ಯಕ್ಷ ಮಡಿ ವಿಶ್ವನಾಥ ಖಾರ್ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿಯ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಜಾತಿಗೆ ಸೇರಿದ ಪತ್ರಿಕೋದ್ಯಮ ಪದವೀಧರರಿಗೆ ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 12 ತಿಂಗಳ ಅಪ್ರೆಂಟಿಸ್ ತರಬೇತಿಗೆ ಅರ್ಹ ಪತ್ರಿಕೋಧ್ಯಮ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ. ಉಡುಪಿ ಜಿಲ್ಲಾ ಕಚೇರಿಗೆ 2025-26 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯ ಇಬ್ಬರು ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಆಯ್ಕೆಯಾದ ಪ್ರತಿ ಅಪ್ರೆಂಟಿಸ್‌ಗೆ ತರಬೇತಿ ಅವಧಿಯಲ್ಲಿ ತಿಂಗಳಿಗೆ 15 ಸಾವಿರ ರೂ.ಗಳ ಸ್ಟೈಪಂಡ್ ನೀಡಲಾಗುವುದು. ತರಬೇತಿಯು 2026 ರ ಜನವರಿ ಮಾಹೆಯಿಂದ ಪ್ರಾರಂಭಗೊಂಡು 2026 ರ ಡಿಸೆಂಬರ್ ಗೆ ಕೊನೆಗೊಳ್ಳಲಿದೆ. ಅಭ್ಯರ್ಥಿಯು ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು. ಕಂಪ್ಯೂಟರ್ ಜ್ಞಾನ ಹೊಂದಿರುವುದು ಕಡ್ಡಾಯ. ಕನ್ನಡ ಭಾಷೆ ಬಳಕೆಯಲ್ಲಿ ಪ್ರಬುದ್ಧತೆ ಇರಬೇಕು. ಅಭ್ಯರ್ಥಿಗಳ ವಯಸ್ಸು ಅರ್ಜಿ ಸಲ್ಲಿಸಲು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಳಗಾವಿ: ಕಾರ್ಮಿಕ ರಾಜ್ಯ ವಿಮಾ ಚಿಕಿತ್ಸೆ ಒದಗಿಸುವ (ಕಾರ್ಮಿಕ ರಾಜ್ಯ ವಿಮಾ ಯೋಜನೆ) ಸೇವೆಗಳ ಇಲಾಖೆ ಹಾಗೂ ಆಯ್ದ ಖಾಸಗಿ ಆಸ್ಪತ್ರೆಗಳ ಹೊಂದಾಣಿಕೆ (ಟೈ ಅಪ್) ಮಾಡಿಕೊಂಡ ಒಡಂಬಡಿಕೆಯ ಅವಧಿಯು ಈಗಾಗಲೇ ಡಿ.7ರಂದು ಮುಕ್ತಾಯಗೊಂಡಿದ್ದು ರೋಗಿಗಳಿಗೆ ತುಂಬಾ ತೊಂದರೆಯಾಗುತ್ತಿದ್ದು ಖಾಸಗಿ ಆಸ್ಪತ್ರೆಯ ಒಡಂಬಡಿಕೆ ನವೀಕರಣ ಆಗದ ಕಾರಣ ಚಿಕಿತ್ಸೆಯನ್ನು ನೀಡಲು ನಿರಾಕರಿಸುತ್ತಿದ್ದು ವಿಮಾ ಅರ್ಹ ರೋಗಿಗಳು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಹೇಳಿದರು. ಅವರು ಬೆಳಗಾವಿಯ ಅಧಿವೇಶನದ ಸಂದರ್ಭದಲ್ಲಿ ರಾಜ್ಯ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರನ್ನು ಭೇಟಿ ಮಾಡಿ ಮಾತನಾಡಿದರು. ಅತಿ ಜರೂರುರಾಗಿ ಕಾರ್ಮಿಕ ರಾಜ್ಯ ವಿಮಾ ಯೋಜನೆ ಸೇವೆಗಳ ಇಲಾಖೆ ಮತ್ತು ಆಯ್ದ ಖಾಸಗಿ ಆಸ್ಪತ್ರೆಗಳ ಹೊಂದಾಣಿಕೆ (ಟೈ ಅಪ್) ಒಡಂಬಡಿಕೆಯನ್ನು ನವೀಕರಿಸಿ ವಿಮಾ ರೋಗಿಗಳಿಗೆ ಅಗತ್ಯ ಚಿಕಿತ್ಸೆಯನ್ನು ಕ್ಲಪ್ತ ಸಮಯದಲ್ಲಿ ನೀಡುವ ಬಗ್ಗೆ ಶಾಸಕರು ಸಚಿವರೊಂದಿಗೆ ಚರ್ಚೆ ನಡೆಸಿ ಕ್ರಮಕೈಗೊಳ್ಳುವಂತೆ ವಿನಂತಿಸಿದ್ದರು. ಸಚಿವರು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾಹೇಬರ ಕಟ್ಟೆ ವೃತ್ತಕ್ಕೆ ನೂತನ ದಾರಿದೀಪ ಊರ ದಾನಿಗಳು ಯುವ ಮನಸ್ಸಿನ ಯುವಕರು ಹಾಗೂ ಜನನಿ ಯುವ ಕನ್ನಡ ಸಂಘ ಇವರ ಸಹಕಾರದೊಂದಿಗೆ ಸ್ಥಳೀಯ ಗ್ರಾಮ ಪಂಚಾಯತ್‌ಗಳಾದ ಶಿರಿಯಾರ ಮತ್ತು ಯಡ್ತಾಡಿ ಇವರ ಸಹಭಾಗಿತ್ವದಲ್ಲಿ ಸಾಹೇಬರ ಕಟ್ಟೆ ವೃತ್ತಕ್ಕೆ ನೂತನ ದಾರಿದೀಪ ಅಳವಡಿಕೆ ಮಾಡಿಲಾಗಿದೆ. ಇದರ ಉದ್ಘಾಟನೆಯನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಅವರು ಸ್ವಿಚ್ ಆನ್ ಮಾಡುವುದರ ಮುಖಿನ ಚಾಲನೆ ನೀಡಿ, ಇದಕ್ಕೆ ಸ್ಪಂದಿಸಿದ ದಾನಿಗಳಿಗೂ ಹಾಗೂ ಸಂಘ ಸಂಸ್ಥೆಯ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಈ ವೇಳೆ ಶಿರಿಯಾರ ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಸುಧೀಂದ್ರ ಶೆಟ್ಟಿ, ಯಡ್ತಾಡಿ ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಪ್ರಕಾಶ್ ಸಿ. ಶೆಟ್ಟಿ. ಬಿಜೆಪಿ ಕ್ಷೇತ್ರ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಗೋಪಾಡಿ, ಜನನಿ ಯುವ ಕನ್ನಡ ಸಂಘ ಸಾಹೇಬರ ಕಟ್ಟೆ ಸದಸ್ಯರು, ಊರಿನ ದಾನಿಗಳು, ಎರಡು ಗ್ರಾಮ ಪಂಚಾಯಿತಿನ ಸದಸ್ಯರು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಉಪ್ಪುಂದದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ರಥಬೀದಿ ವಠಾರದಲ್ಲಿ ರಾತ್ರಿ ನಡೆದ ‘ಉಪ್ಪುಂದ ಶ್ರೀ ಕ್ಷೇತ್ರ ಮಹಾತ್ಮೆʼ ಪ್ರಸಂಗ ಬಿಡುಗಡೆ ಸಮಾರಂಭವು ವೈಭವದಿಂದ ಇತ್ತೀಚಿಗೆ ನೆರವೇರಿತು. ಕಾರ್ಯಕ್ರಮವನ್ನು ಮಾನ್ಯ ಶಾಸಕರಾದ ಗುರುರಾಜ್ ಗಂಟೆಹೊಳೆ ಅವರು ಉದ್ಘಾಟಿಸಿದರು. ಆಡಳಿತ ಮೊಕ್ತೇಶರಾದ ಸೀತಾರಾಮ್ ಶೆಟ್ಟಿ ಮತ್ತು ನಿವೃತ್ತ ಮುಖ್ಯೋಪಾಧ್ಯಾಯರಾದ ವಿಶ್ವೇಶ್ವರ ಅಡಿಗ ಅವರು ಕ್ಷೇತ್ರದ ನಂಬಿಕೆ–ಪರಂಪರೆಯ ಸಾರವನ್ನು ಒಳಗೊಂಡಿರುವ “ಉಪ್ಪುಂದ ಕ್ಷೇತ್ರ ಮಹಾತ್ಮೆ” ಪ್ರಸಂಗವನ್ನು ಲೋಕಾರ್ಪಣೆಗೊಳಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಯು. ಸತೀಶ್ ಶೆಟ್ಟಿ ಅವರು ಅಧ್ಯಕ್ಷೀಯ ಭಾಷಣದಲ್ಲಿ ಪ್ರಸಂಗದ ಮಹತ್ವ, ಕ್ಷೇತ್ರದ ಐತಿಹಾಸಿಕತೆ ಮತ್ತು ಭಕ್ತರ ಒಗ್ಗಟ್ಟಿನ ಪ್ರಾಮುಖ್ಯತೆಯನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಉಪ್ಪುಂದ ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನಚಂದ್ರ, ಪ್ರಧಾನ ಅರ್ಚಕರಾದ ಪ್ರಕಾಶ್ ಉಡುಪ, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮದನ ಕುಮಾರ್, ಓಕುಳಿ ಸಮಿತಿ ಮಂಜುನಾಥ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ…
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಾಹೆ ಸಂಸ್ಕೃತಿ ಸಮನ್ವಯ ಸಮಿತಿ ಮತ್ತು ಸ್ಪಿಕ್ ಮೆಕೆ ಸಹಯೋಗದೊಂದಿಗೆ ಬಿಸ್ಮಿಲ್ಲಾ ಪ್ರಶಸ್ತಿ ಪಡೆದ ಪ್ರಸಿದ್ಧ ಒಡಿಸ್ಸಿ ನೃತ್ಯಗಾರ ರಾಹುಲ್ ಆಚಾರ್ಯ ಅವರು ಒಡಿಸ್ಸಿ ನೃತ್ಯವನ್ನು ಬುಧವಾರ ಪ್ರದರ್ಶಿಸಿದರು. ಅವರ ತಂಡದ ಮೃದಂಗ ವಾದಕ ದಿವಸ್ಕರ್ ಪರಿದ್, ಗಾಯಕ ಸುಕಾಂತ್ ಕುಂದ, ವಾಯಲಿನ್ ವಾದಕ ಪ್ರದೀಪ್ ಕುಮಾರ್ ಮಹಾರಾಣ, ಮಂಜ್ರಾ ವಾದಕ ಸುಮುಖ ತಮನ್ಕರ್ ಅವರ ಹಿಮ್ಮೇಳದ ಸಹಕಾರದೊಂದಿಗೆ ಓಡಿಸ್ಸಿ ನೃತ್ಯ ಪ್ರದರ್ಶನ ನೀಡಲಾಯಿತು. ನೃತ್ಯವನ್ನು ನಾಲ್ಕು ವಿಭಾಗಗಳಲ್ಲಿ ಪ್ರದರ್ಶಿಸಿ, ನಂತರ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ ನಡೆಸಲಾಯಿತು. ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷರಾದ ಕೆ. ಶಾಂತಾರಾಮ್ ಪ್ರಭು ಅವರು ರಾಹುಲ್ ಆಚಾರ್ಯ ಮತ್ತು ಅವರ ತಂಡವನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಉಪಸ್ಥಿತರಿದ್ದರು. ಉಪನ್ಯಾಸಕರಾದ ಶಶಾಂಕ್ ಪಟೇಲ್ ಸ್ವಾಗತಿಸಿ, ಡಾ. ಗಣೇಶ್ ಶೆಣೈ ಪರಿಚಯ ಭಾಷಣ ಮಾಡಿದರು ಮತ್ತು ದುರ್ಗಾ ಪ್ರಸಾದ್ ಮಯ್ಯ ಧನ್ಯವಾದಗಳನ್ನು ಅರ್ಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಡಾ. ಕೋಟ ಶಿವರಾಮ ಕಾರಂತರ 28ನೇ ಸ್ಮೃತಿ ದಿನಾಚರಣೆಯನ್ನು ಡಾ. ಕೋಟ ಶಿವರಾಮ ಕಾರಂತ ರಿಸರ್ಚ್ ಮತ್ತು ಸ್ಟಡಿ ಸೆಂಟರ್ ಟ್ರಸ್ಟ್ ಸಾಲಿಗ್ರಾಮ ಹಾಗೂ ಗೆಳೆಯರ ಬಳಗ ಕಾರ್ಕಡ ಸಾಲಿಗ್ರಾಮ ಇವರ ಸಂಯುಕ್ತ ಆಶ್ರಯದಲ್ಲಿ ಕಾರಂತ ಸ್ಮೃತಿ ಚಿತ್ರಶಾಲೆಯಲ್ಲಿ ಮಂಗಳವಾರ ಆಚರಿಸಲಾಯಿತು. ಸಂಸ್ಥೆಯ ಕಾರ್ಯನಿರ್ವಹಕ ವಿಶ್ವಸ್ಥ ಗುಜ್ಜಾಡಿ ಪ್ರಭಾಕರ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿ ಶಿವರಾಮ ಕಾರಂತರ ನೆನಪುಗಳು ಮುಂದಿನ ತಲೆಮಾರಿಗೆ ತೆಗೆದುಕೊಂಡು ಹೋಗುವ ಬಗ್ಗೆ ಎಲ್ಲರೂ ಶ್ರಮ ವಹಿಸಬೇಕು ಎಂದು ಕರೆ ನೀಡಿದರು. ಮುಖ್ಯ ಅತಿಥಿಯಾಗಿ ಬ್ರಹ್ಮಾವರ ಕನ್ನಡ ಸಾಹಿತ್ಯ ಪರಿಷತ್ತ್ ಅಧ್ಯಕ್ಷ ಜಿ. ರಾಮಚಂದ್ರ ಐತಾಳ ಮಾತನಾಡಿ, ಕಾರಂತರ ಸಂಸ್ಮರಣೆ ಮಾಡಿ ಜೀವನ ಎನ್ನುವದು ಕರ್ತವ್ಯ. ಸಮಾಜಕ್ಕೆ ಏನಾದರೂ ಕೊಡಬೇಕು ಎನ್ನುವುದು ಕಾರಂತರ ಆಶಯವಾಗಿತ್ತು ಕಾರಂತ ಜೀವನ ಯಶೋಗಾಧೆ ಮರೆಯಲಾಗದ ವಿಶ್ವ ಪುಟಗಳಲ್ಲಿ ಸೇರಿಕೊಂಡಿದೆ ಇಂಥಹ ಮಹಾನ್ ಚೇತನ ಹೆಸರನ್ನು ಇಂದಿನ ಯುವ ಜನಾಂಗಕ್ಕೆ ಈ ಅಧ್ಯಯನ ಕೇಂದ್ರ ದಾರಿದೀಪವಾಗಲಿ ಎಂದು ತಿಳಿಸಿದರು. ಗಣ್ಯರಾದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವು ಇತ್ತೀಚಿಗೆ ನಡೆಯಿತು. ಅಜೆಕಾರ್ ಪದ್ಮಗೋಪಾಲ್ ಎಜುಕೇಶನಲ್ ಟ್ರಸ್ಟ್ ಹಾಗೂ ಜ್ಞಾನಸುಧಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ವಿಶೇಷವಾದ ಶಿಕ್ಷಣದ ಕಾಲಘಟ್ಟದಲ್ಲಿ ವಿದ್ಯಾರ್ಜನೆಗೈಯುತ್ತಿರುವ ವಿದ್ಯಾರ್ಥಿಗಳು ವಯೋಸಹಜವಾದ ಆಸೆ ಆಕಾಂಕ್ಷೆಗಳಿಗೆ ಕಡಿವಾಣ ಹಾಕಿ ತಂದೆ ತಾಯಿಯ ಶ್ರಮವನ್ನು ನೆನಪಿಸಿಕೊಂಡು ಅವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಿಮ್ಮ ಪ್ರಯತ್ನವಿರಲಿ ಎಂದರು. ಶ್ರೀ ವೆಂಕಟರಮಣ ದೇವ್ ಎಜುಕೇಶನಲ್ & ಕಲ್ಬರಲ್ ಟ್ರಸ್ಟ್ ನ ಅಧ್ಯಕ್ಷರಾದ ಕೆ. ರಾಮಕೃಷ್ಣ ಕಾಮತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿ ಯಶಸ್ವಿ ಬದುಕನ್ನು ರೂಪಿಸಿಕೊಳ್ಳಿ ಎಂದು ಶುಭ ಹಾರೈಸಿದರು. ಸಂಸ್ಥೆಯ ಕಾರ್ಯದರ್ಶಿ ಕೆ. ರಾಧಾಕೃಷ್ಣ ಶೆಣೈ ಅವರು ಶ್ರೀ ವೆಂಕಟರಮಣ ಸಂಸ್ಥೆಯ ಅಭಿವೃದ್ಧಿ ಪಥದ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಖಜಾಂಚಿ ಕೆ. ಲಕ್ಷ್ಮೀನಾರಾಯಣ ಶೆಣೈ, ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಗಾಣಿಗ, ಉಪ ಪ್ರಾಂಶುಪಾಲರಾದ ಸುಜೇಯ್ ಕೋಟೆಗಾರ್, ಶ್ರೀ ವೆಂಕಟರಮಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ…
