ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಪುಸ್ತಕ ಓದುವ ಹವ್ಯಾಸ ಇರುವವರಲ್ಲಿ ಜ್ಞಾನ ವೃದ್ಧಿಯಾಗುತ್ತದೆ, ಅಲ್ಲದೇ ಸಾಧಕರ ಬದುಕಿನ ಹೆಜ್ಜೆಗಳು ಪುಸ್ತಕಗಳಿಂದ ತಿಳಿದು ನಮ್ಮ ಬದುಕನ್ನು ರೂಪಿಸಿಕೊಳ್ಳಲು ಒಂದು ದಾರಿದೀಪವಾಗುತ್ತದೆ, ಆದಷ್ಟು ಪುಸ್ತಕವನ್ನು ಓದುವ ಹವ್ಯಾಸ ನಾವು ಇಟ್ಟುಕೊಳ್ಳೋಣ ಎಂದು ಕೋಟತಟ್ಟು ಪಂಚಾಯತ್ ನ ಅಧ್ಯಕ್ಷೆ ಅಶ್ವಿನಿ ದಿನೇಶ್ ಹೇಳಿದರು ಅವರು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ವತಿಯಿಂದ ನಡೆದ ಪದ್ಮಶ್ರೀ ಡಾ.ಎಸ್.ಆರ್ ರಂಗನಾಥನ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ಗ್ರಂಥಪಾಲಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಕೋಟತಟ್ಟು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಸಾಕಷ್ಟು ಪುಸ್ತಕ ಸಂಗ್ರಹವಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕಾಗಿ ಈ ಸಂದರ್ಭದಲ್ಲಿ ವಿನಂತಿಸಿದರು. ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಾಸು ಪೂಜಾರಿ, ಪಿ.ಡಿಓ ಶೈಲಾ ಎಸ್ ಪೂಜಾರಿ, ಕಾರಂತ ಥೀಮ್ ಪಾರ್ಕ್ ಮೇಲ್ವಿಚಾರಕ ಪ್ರಶಾಂತ್ , ಪಂಚಾಯತ್ ಸಿಬ್ಬಂದಿ ಮಮತಾ, ಸುಜಾತ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಭಾರತೀಯ ರೆಡ್ಕ್ರಾಸ್ ಬೈಂದೂರು ಘಟಕದ ಆಶ್ರಯದಲ್ಲಿ ಉಪ್ಪುಂದ ಗ್ರಾಮದ ಹಾಡಿಮನೆ ಗೋವಿಂದು ದೇವಾಡಿಗ ಮನೆಯವರಿಗೆ ಗೃಹ ಉಪಯೋಗಿ ವಸ್ತುಗಳಾದ ಟಾರ್ಪಲ್ ಹಾಗೂ ಇತರ ವಸ್ತುಗಳನ್ನು ವಿತರಿಸಲಾಯಿತು. ಹಾಗೆಯೇ ಗ್ರಾಮ ಪಂಚಾಯತಿಗೆ ಆಕ್ಸಿಮೀಟರ್, ಮಾಸ್ಕ್ ವಿತರಿಸಲಾಯಿತು, ಗ್ರಾಮ ಪಂಚಾಯತ್ ಅಧ್ಯಕ್ಷೆ ಲಕ್ಷ್ಮೀ ಕೊಡುಗೆಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಬೈಂದೂರು ರೆಡ್ಕ್ರಾಸ್ನ ಸಭಾಪತಿ ನಿತಿನ್ ಬಿ. ಶೆಟ್ಟಿ, ಕಾರ್ಯದರ್ಶಿ ಮನೋಹರ ಶೆಟ್ಟಿ, ಖಜಾಂಚಿ ಸಂತೋಷ ಶೆಟ್ಟಿ , ಗ್ರಾಮ ಪಂಚಾಯತ್ ಉಪಾಧ್ಯಕ್ಷ ದಿವಾಕರ ಶೆಟ್ಟಿ ಸದಸ್ಯರಾದ ಮಂಜುನಾಥ ದೇವಾಡಿಗ, ನಾಗರಾಜ ಶೇಟ್ ರೆಡ್ಕ್ರಾಸ್ ಸದಸ್ಯರಾದ ಯೂ. ಸಂದೇಶ ಭಟ್ , ಅನಿಲ್.ಡಿ. ಉಪ್ಪುಂದ, ರಮೇಶ ಜೋಗಿ ಹಳಗೇರಿ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ, ಅ12: ಜಿಲ್ಲೆಯಲ್ಲಿ ಗುರುವಾರ ದಾಖಲೆ ಪ್ರಮಾಣದಲ್ಲಿ ಕೋವಿಡ್ ಪ್ರಕರಣಗಳು ಏರಿಕೆ ಕಂಡಿದೆ. ಇಂದು 191 ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಪಾಸಿಟಿವ್ ಪ್ರಕರಣಗಳಲ್ಲಿ ಉಡುಪಿ, ಬ್ರಹ್ಮಾವರ, ಕಾಪು ತಾಲೂಕಿನ 96, ಕುಂದಾಪುರ, ಬೈಂದೂರು ತಾಲೂಕಿನ 49, ಕಾರ್ಕಳ, ಹೆಬ್ರಿ ತಾಲೂಕಿನ 45 ಮಂದಿಗೆ ಹಾಗೂ ಹೊರ ಜಿಲ್ಲೆಯ ಓರ್ವ ವ್ಯಕ್ತಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಒಟ್ಟು 191 ಪ್ರಕರಣಗಳಲ್ಲಿ 95 ಮಂದಿ ಕೋವಿಡ್ ಕೇರ್ ಸೆಂಟರ್, ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಹೆಲ್ತ್ ಆಸ್ಪತ್ರೆಗೆ ದಾಖಲಾಗಿದ್ದರೆ, 156 ಮಂದಿಯನ್ನು ಹೋಮ್ ಐಸೊಲೇಷನ್ ಮಾಡಲಾಗಿದೆ. ಇಂದು ಕುಂದಾಪುರ ತಾಲೂಕಿನ 79 ವರ್ಷದ ವೃದ್ಧೆ ಕೋವಿಡ್ನಿಂದ ಮೃತಪಟ್ಟಿದ್ದಾರೆ. ಇಂದು 136 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದ್ದು, 1259 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಇಂದು ಒಟ್ಟು 5756 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಇಂದು 2,416 ಮಂದಿಗೆ ಮೊದಲನೇ ಡೋಸ್, 2,185 ಮಂದಿಗೆ ಎರಡನೇ ಡೋಸ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಂಗಳೂರು, ಅ.12: ಗಣೇಶ ಚತುರ್ಥಿ, ಮೊಹರಂ ಮತ್ತಿತರ ಹಬ್ಬಗಳ ಆಚರಣೆ ಸಂದರ್ಭದಲ್ಲಿ ಕೋವಿಡ್-19 ಸೋಂಕು ನಿಯಂತ್ರಣ ತಡೆಯಲು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಗಣೇಶ ಚತುರ್ಥಿ, ಮೊಹರಂ, ಶ್ರೀ ಕೃಷ್ಣ ಜನ್ಮಾಷ್ಟಮಿ, ದುರ್ಗಾ ಪೂಜೆ ಮೊದಲಾದ ಹಬ್ಬ ಆಚರಣೆ ಸಂದರ್ಭದಲ್ಲಿ ಜನದಟ್ಟಣೆ ಮತ್ತು ಒಗ್ಗೂಡುವಿಕೆಗಳನ್ನು ತಡೆಗಟ್ಟಲು ಸ್ಥಳೀಯ ನಿರ್ಬಂಧಗಳನ್ನು ವಿಧಿಸುವಂತೆ ಸಲಹೆ ನೀಡಲಾಗಿದೆ. ಮೊಹರಂ ಪ್ರಾರ್ಥನಾ ಸಭೆ, ಮೆರವಣಿಗೆಗಳಿಗೆ ಅವಕಾಶವಿಲ್ಲ. ಕಬರಸ್ಥಾನದಲ್ಲಿಯೂ ಸಭೆ ಮಾಡುವಂತಿಲ್ಲ. ಸಾಮಾಜಿಕ, ರಾಜಕೀಯ, ಕ್ರೀಡಾ, ಮನೋರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬೃಹತ್ ಸಭೆ, ಸಮಾರಂಭಗಳನ್ನು ನಿಷೇಧಿಸಲಾಗಿದೆ. ಪೂಜಾ ಸ್ಥಳಗಳು ಮತ್ತಿತರ ಧಾರ್ಮಿಕ ಸ್ಥಳಗಳನ್ನು ತೆರೆಯಲು ಮತ್ತು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿನೊಂದಿಗೆ ಪೂಜಾ ಕಾರ್ಯ ಕೈಗೊಳ್ಳಲು ಅನುಮತಿಸಿದೆ. ಕೋವಿಡ್ ನಿಯಮದೊಂದಿಗೆ ಮಸಿದಿಗಳಲ್ಲಿ ಪ್ರಾರ್ಥನೆಗೆ ಅವಕಾಶ ನೀಡಲಾಗಿದೆ. ಮಸೀದಿ ಪ್ರವೇಶಿಸುವಾಗ ಸ್ಯಾನಿಟೈಸರ್, ದೇಹದ ತಾಪಮಾನ ಪರೀಕ್ಷಿಸುವುದು ಕಡ್ಡಾಯ.ಆದರೆ ಜಾತ್ರೆಗಳು, ದೇವಾಲಯದ ಹಬ್ಬಗಳು, ಮೆರವಣಿಗೆ, ಸಭೆ, ಸಮಾರಂಭಗಳಿಗೆ ಅನುಮತಿ ಇರುವುದಿಲ್ಲ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಸಾವಿರಾರು ಜನರಿಗೆ ಉದ್ಯೋಗವನ್ನು ದೊರಕಿಸಿದ್ದ ಕರಾವಳಿಯ ಮೂಲದ ಐಟಿ ಕಂಪೆನಿ ರೋಬೋಸಾಫ್ಟ್ ಟೆಕ್ನಾಲಜಿಸ್ 805 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಜಪಾನ್ ಮೂಲದ ಟೆಕ್ನೋಪ್ರೋ ಹೋಲ್ಡಿಂಗ್ ಕಂಪೆನಿ ಡಿಜಿಟಲ್ ಟ್ರಾನ್ಸ್ಫಾರ್ಮೇಶನ್ ಸೆಲ್ಯೂಷನ್ಸ್ ಸಂಸ್ಥೆಯು ರೋಬೋಸಾಫ್ಟ್ನ್ನು ತನ್ನ ತೆಗೆದುಕೊಂಡಿದೆ. 1996ರಲ್ಲಿ ಉಡುಪಿ ಜಿಲ್ಲೆಯ ಆರಂಭಗೊಂಡ ರೋಬೋಸಾಫ್ಟ್ ಟೆಕ್ನಾಲಜಿಸ್, ಸಂತೆಕಟ್ಟೆಯಲ್ಲಿ ಅತ್ಯಾಧುನಿಕ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿತ್ತು. ಉಡುಪಿಯ ರೋಹಿತ್ ಭಟ್ ಅವರು ಸಂಸ್ಥೆಯನ್ನು ಸ್ಥಾಪಿಸಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಚಿಕ್ಕ ಮಟ್ಟದಲ್ಲಿ ಆರಂಭಗೊಂಡ ಕಂಪೆನಿಯಲ್ಲಿ ಪ್ರಸ್ತುತ ಸಾವಿರಾರು ಉದ್ಯೋಗಿಗಳು ದುಡಿಯುತ್ತಿದ್ದು, ಭಾರತ ಪ್ರಮುಖ ಮಾಧ್ಯಮ ಲೋಕದಲ್ಲಿ ಮೊಬೈಲ್ ಆಪ್ಗಳನ್ನು ಅಭಿವೃದ್ದಿ ಪಡಿಸಿದ ಹೆಗ್ಗಳಿಕೆ ಹೊಂದಿದೆ. ಆ್ಯಪಲ್ ಸಂಸ್ಥೆಯೊಂದಿಗೂ ವ್ಯಾವಹಾರಿಕ ಸಂಬಂಧ ಹೊಂದಿದ್ದ ರೋಬೋಸಾಫ್ಟ್, ಅಮೇರಿಕಾ, ಜಪಾನ್ ಸೇರಿದಂತೆ ವಿಶ್ವದ ಹಲವು ಕಡೆಗಳಲ್ಲಿಯೂ ತನ್ನ ವ್ಯವಹಾರವನ್ನು ವಿಸ್ತರಣೆ ಮಾಡಿದೆ. ಜಪಾನ್ ಮೂಲದ ಟೆಕ್ನೋಪ್ರೋ ಸಂಸ್ಥೆಗೆ ರೋಬೋಸಾಫ್ಟ್ನ ಶೇಕಡಾ 100 ರಷ್ಟು ಶೇರುಗಳನ್ನು ಮಾರಾಟ ಮಾಡುವ ಕುರಿತು ಖುದ್ದು ರೋಬೋಸಾಫ್ಟ್ ಸಂಸ್ಥಾಪಕ ಹಾಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಕೈಲ್ಕೆರೆ, ಗುಡ್ಡೆಟ್ಟು, ಹಾರ್ಯಾಡಿ ಮತ್ತು ಕೊಳನ್ಕಲ್ಲು ಪ್ರದೇಶದಲ್ಲಿ ಒಟ್ಟು 5 ಶಾಸನೋಕ್ತ ಉಭಯಮುಖಿ ದಾನ ಶಿಲೆಗಳನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಹಾಗೂ ರಾಜೇಶ್ವರ ಉಪಾಧ್ಯಾಯ ಕಂಚಾರ್ತಿ ಅವರು ಪತ್ತೆ ಮಾಡಿದ್ದಾರೆ. ಕರ್ನಾಟಕದಲ್ಲಿಯೇ ಇಂತಹ ಉಭಯಮುಖಿ ದಾನ ಶಿಲೆಗಳು ಪತ್ತೆಯಾಗಿರುವುದು ಅಪರೂಪವಾಗಿದೆ. ಪತ್ತೆ ಮಾಡಿದಂತಹ ಎಲ್ಲಾ ದಾನ ಶಿಲೆಗಳಲ್ಲೂ ಶಾಸನಗಳಿದ್ದು ತೃಟಿತಗೊಂಡಿದೆ. ಗೋಚರಿಸುವ ಕೆಲವು ಲಿಪಿಯ ಆಧಾರದ ಮೇಲೆ ಇವುಗಳು 14ನೇ ಶತಮಾನಕ್ಕೆ ಸೇರಿದೆ ಎಂದು ಹೇಳಬಹುದು. ಗೋದಾನಗಳಲ್ಲಿಯೇ ಶ್ರೇಷ್ಠ ದಾನವಾಗಿರುವ ಉಭಯಮುಖಿ ದಾನ (ಗರ್ಭಧಾರಣೆಯಾಗಿರುವ ಹಸುವನ್ನು ಅಥವಾ ಹಸುವಿನ ಹಾಲುಣ್ಣುತ್ತಿರುವ ಕರುವನ್ನು ದಾನ ಮಾಡುವುದು)ವನ್ನು ದೇವಾಲಯ ಅಥವಾ ಬ್ರಾಹ್ಮಣರಿಗೆ ನೀಡಲಾಗುತ್ತಿತ್ತು. ಗುಡ್ಡೆಟ್ಟು ಶ್ರೀ ವಿಷ್ಣುಮೂರ್ತಿ ದೇವಾಲಯದಲ್ಲಿ ಪತ್ತೆಮಾಡಿದ ಉಭಯಮುಖಿ ದಾನ ಶಿಲೆಯ ಮೇಲ್ಭಾಗದಲ್ಲಿ ಪೀಠದ ಮೇಲೆ ಪದ್ಮಾಸನದಲ್ಲಿ ಕುಳಿತಿರುವ ಚತುರ್ಭುಜಧಾರಿ ವಿಷ್ಣು ಹಾಗೂ ಇಕ್ಕೆಲದಲ್ಲಿ ಕಾಲುದೀಪ ಹಾಗೂ ಕುಳಿತಿರುವ ಗರುಡನ ಕೆತ್ತನೆಯಿದೆ. ಕೆಳಗಿನ ಪಟ್ಟಿಕೆಯಲ್ಲಿ ದನ, ಹಾಲುಣ್ಣುತ್ತಿರುವ ಕರು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಕಂಡ್ಲೂರು ಶ್ರೀ ಕನ್ನಿಕಾ ಪರಮೇಶ್ವರೀ ದೇವಸ್ಥಾನದ ವತಿಯಿಂದ ನಡೆಯುವ ಮಾರಿಜಾತ್ರೆಯು ಸರಕಾರದ ಕೋವಿಡ್ ಮಾರ್ಗಸೂಚಿಯಂತೆ ಸರಳವಾಗಿ ನಡೆಯಿತು. ಈ ಸಂದರ್ಭ ಶ್ರೀ ದೇಗುಲದ ಆಡಳಿತ ಮೊಕ್ತೇಸರ, ಪದಾರಿಕಾರಿಗಳು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಶುಭದಾ ಆಂಗ್ಲ ಮಾಧ್ಯಮ ಶಾಲೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನಿರಂತರವಾಗಿ ಶೇಕಡಾ 100 ಫಲಿತಾಂಶವನ್ನು ದಾಖಲಿಸುತ್ತ ಬಂದಿದ್ದು 2020-21ನೇ ಸಾಲಿನ ಶಾಲಾವಾರು ಫಲಿತಾಂಶ ಗುಣಮಟ್ಟದಲ್ಲಿ ‘ಎ’ಗ್ರೇಡ್ ಪಡೆದಿದೆ. ವಿದ್ಯಾರ್ಥಿಗಳಾದ ಸ್ವೀಕೃತಿ ಶೆಟ್ಟಿ 99.04% , ಪ್ರಣಮ್ಯ ಚಾತ್ರ 96.16% ಮತ್ತು ಸಂಜಿತಾ 93.44% ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು, ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು ಮತ್ತು ಬೋಧಕ – ಬೋಧಕೇತರ ಸಿಬ್ಬಂದಿ ಅಭಿನಂದಿನೆ ಸಲ್ಲಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಟೊಯೋಟಾ ಇನ್ನೊವಾದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ವಾಹನ ಬೈಂದೂರು ಪೊಲೀಸರು ವಶಕ್ಕೆ ಪಡೆದು ಅದರಲ್ಲಿದ್ದ ಗೋವುಗಳನ್ನು ರಕ್ಷಿಸಿದ ಘಟನೆ ನಾಗೂರಿನಲ್ಲಿ ನಡೆದಿದೆ. ಭಟ್ಕಳ ಕಡೆ ಹೋಗುತ್ತಿದ್ದ ಇನ್ನೊವಾ ಟೊಯೋಟಾ ವಾಹನ ನಾಗೂರಿನಲ್ಲಿ ಕೆಟ್ಟು ಮಧ್ಯ ದಾರಿಯಲ್ಲಿ ನಿಂತಿದ್ದ ಸಂದರ್ಭ ಸಾರ್ವಜನಿಕರು ವಾಹನವನ್ನು ಪರಿಶೀಲಿಸಿದಾಗ ಅದರಲ್ಲಿ ಗೋವುಗಳು ಇರುವುದು ಗಮನಕ್ಕೆ ಬರುತ್ತಿದ್ದಂತೆ ತಕ್ಷಣವೇ ಬೈಂದೂರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ನಾಲ್ಕು ದನದ ರಕ್ಷಣೆ ಮಾಡಿದ್ದಾರೆ. ಆರೋಪಿ ಪರಾರಿಯಾಗಿದ್ದು ಪೋಲಿಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಅಂಕಗಳನ್ನು ಪಡೆದು ಅತ್ಯುನ್ನತ ಸಾಧನೆ ಮಾಡಿದ ಶ್ರೇಯಾ ಮೇಸ್ತ ಅವರನ್ನು ಗಂಗೊಳ್ಳಿಯ ಸ್ಟೆಲ್ಲಾ ಮಾರೀಸ್ ಪ್ರೌಢಶಾಲೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಗಂಗೊಳ್ಳಿಯ ಖಾರ್ವಿಕೇರಿಯಲ್ಲಿರುವ ಶ್ರೇಯಾ ಅವರ ಮನೆಗೆ ತೆರಳಿದ ಶಾಲೆಯ ಆಡಳಿತ ಮಂಡಳಿಯ ಜಂಟಿ ಕಾರ್ಯದರ್ಶಿ ಜ್ಯೋತಿ ಎ.ಸಿ. ಅವರು ಶಾಲೆಯ ವತಿಯಿಂದ ಶ್ರೇಯಾ ಮೇಸ್ತ ಹಾಗೂ ಸಂಜಯ್ ಮೇಸ್ತ ಅವರನ್ನು ಸನ್ಮಾನಿಸಿ ಗೌರವಿಸಿದರು. ಗಂಗೊಳ್ಳಿ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿ ಸೌಪರ್ಣಿಕ, ಶಾಲೆಯ ಮುಖ್ಯ ಶಿಕ್ಷಕಿ ಕ್ರೆಸೆನ್ಸ್, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು, ಪುರುಷೋತ್ತಮ ಮೇಸ್ತ, ಪವಿತ್ರಾ ಮೇಸ್ತ ಮತ್ತಿತರರು ಉಪಸ್ಥಿತರಿದ್ದರು.
