Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ ಕರೋನಾ ಸೋಂಕಿನ ಸರಪಳಿಯನ್ನು ತುಂಡರಿಸಿ, ಕೋವಿಡ್ 19 ವೈರಾಣುವಿನ ಹರಡುವಿಕೆಯನ್ನು ತಗ್ಗಿಸಿ , ಜಿಲ್ಲೆಯು ಜನರು ಕೋವಿಡ್ -19 ರ ಭಾದೆಗೆ ಒಳಗಾಗದಂತೆ ತಪ್ಪಿಸಲು, ಆಗಸ್ಟ್ 5 ರ ಗುರುವಾರದಿಂದ, ಕೋವಿಡ್-19 ಪಾಸಿಟಿವ್ ವ್ಯಕ್ತಿಗಳನ್ನು ಕಡ್ಡಾಯವಾಗಿ ಸಾಂಸ್ಥಿಕ ಕ್ಯಾರಂಟೈನ್ (Covid Care Centre)ಗೆ ಸ್ಥಳಾಂತರಗೊಳಿಸುವ0ತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶಿಸಿದ್ದಾರೆ. ಅಂತಹ ರೋಗಿಗಳ ಸ್ಥಳಾಂತರವನ್ನು ತಡೆಯುವ, ವಿರೋಧಿಸುವ, ಪ್ರತಿರೋಧಿಸುವ ಯಾವುದೇ ವ್ಯಕ್ತಿಯ ಅಥವಾ ರೋಗಿಯ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005, ಸಾಂಕ್ರಾಮಿಕ ನಿಯಂತ್ರಣ ಕಾಯ್ದೆ 2020 ಮತ್ತು ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ. ಗರ್ಭಿಣಿಯರು, ಅಶಕ್ತರು, ಹಾಗೂ ಇತರ ವಿಶೇಷ ಪ್ರಕರಣಗಳಿದ್ದಲ್ಲಿ, ಅಂತಹವರಿಗೆ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ ನಿಂದ ವಿನಾಯಿತಿ ನೀಡುವ ಬಗ್ಗೆ ಸಂಬಂಧಿಸಿದ ತಹಶೀಲ್ದಾರರು ಹಾಗೂ ತಾಲೂಕು ಆರೋಗ್ಯ ವೈದ್ಯಾಧಿಕಾರಿಗಳು ಜಂಟಿಯಾಗಿ ಪರಿಶೀಲಿಸಿ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡದಿರುವುದಕ್ಕೆ ಬೇಸರವಿಲ್ಲ. ಶಾಸಕನಾದವನು ಮಂತ್ರಿಯಾಗಲೇಬೇಕು ಎಂದೇನೂ ಇಲ್ಲ. ಶಾಸಕನಾಗಿಯೇ ಕ್ಷೇತ್ರದ ಜನರ ಋಣ ತೀರಿಸುವುದಾಗಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಹೇಳಿದ್ದಾರೆ. ನನಗೆ ಸಚಿವ ಸ್ಥಾನ ನೀಡದಿರುವ ಬಗ್ಗೆ ದುಃಖವೂ ಇಲ್ಲ ಸಂತೋಷವೂ ಇಲ್ಲ. ಎಲ್ಲಾ ಜಾತಿ ಧರ್ಮದ ಮತ ಪಡೆದು ಜನಪ್ರತಿನಿಧಿಯಾದವನು ಒಂದು ಜಾತಿ ಧರ್ಮದ ಆಧಾರದಲ್ಲಿ ಸ್ಥಾನಮಾನ ಕೇಳುವುದು ಸರಿಯಲ್ಲ. ಜಾತಿಪ್ರೇಮ ಉಳ್ಳವರು, ಜಾತಿ ರಾಜಕಾರಣ ನಡೆಸುವವರು ಜಾತಿ ಸಂಘಟನೆಯ ಚುನಾವಣೆಗೆ ನಿಲ್ಲಬೇಕು ಎಂದಿದ್ದಾರೆ. ಅಲ್ಲದೇ ಸರಳ ರಾಜಕಾರಣಿಯಂತೆ ಬಿಂಬಿಸಿಕೊಂಡು ಬದುಕುವ ರಾಜಕಾರಣಿಗಳಿದ್ದಾರೆ. ಅಂತಹ ರಾಜಕಾರಣದ ಅಗತ್ಯ ನನಗಿಲ್ಲ ಎಂದು ತಮ್ಮ ಅಸಮಾಧಾನವನ್ನು ಪರೋಕ್ಷವಾಗಿ ಹೊರಹಾಕಿದ್ದಾರೆ. ತನಗೆ ಸಚಿವ ಸ್ಥಾನ ಸಿಗಲಿಲ್ಲ ಎಂದು ಪ್ರತಿಭಟನೆ ನಡೆಸುವುದು ಸರಿಯಲ್ಲ. ಅಂಥ ಪ್ರತಿಭಟನೆಗೆ ನನ್ನ ಬೆಂಬಲ ಇಲ್ಲ ಎಂಬುದಾಗಿಯೂ ಅವರು ಈ ಸಂದರ್ಭ ತಿಳಿಸಿದ್ದಾರೆ. ಇದನ್ನೂ ಓದಿ:► ಶಾಸಕ ಹಾಲಾಡಿಗೆ ದೊರೆಯದ ಸಚಿವ ಸ್ಥಾನ. ಅಭಿಮಾನಿಗಳ ಪ್ರತಿಭಟನೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಈ ಭಾರಿಯೂ ಮಂತ್ರಿಗಿರಿ ಕೈತಪ್ಪಿದ್ದನ್ನು ಖಂಡಿಸಿ ಅವರ ಬೆಂಬಲಿಗರು ಬುಧವಾರ ಬೆಂಗಳೂರಿನ ಕಾವೇರಿ ನಿವಾಸದ ಎದುರು ಪ್ರತಿಭಟನೆ ನಡೆಸಿದರು. ಹಾಲಾಡಿ ಅವರಿಗೆ ಮಂತ್ರಿಸ್ಥಾನ ನೀಡಿ ಎನ್ನುವ ಬೋರ್ಡ್ ಹಿಡಿದು ಕೆಲಕಾಲ ಪ್ರತಿಭಟಿಸಿದ್ದು ಬಳಿಕ ಪೊಲೀಸರು ಪ್ರತಿಭಟನೆಯನ್ನು ಮೊಟಕುಗೊಳಿಸಿದರು. ಈ ವೇಳೆ ಜೈ ಭಾರ್ಗವ ಬಳಗದ ಅಜಿತ್ ಶೆಟ್ಟಿ ಕಿರಾಡಿ, ವಸಂತ್ ಗಿಳಿಯಾರ್, ಹರೀಶ್ ಶೆಟ್ಟಿ ಅರೆಶಿರೂರು, ಅಜಿತ್ ಉಳ್ತೂರು ಸೇರಿದಂತೆ ಇನ್ನಿತರರು ಇದ್ದರು. ಕುಂದಾಪುರ ಕ್ಷೇತ್ರಕ್ಕಿಲ್ಲ ಮಂತ್ರಿಸ್ಥಾನ:ನಾಲ್ಕು ಭಾರಿ ಬಿಜೆಪಿ ಪಕ್ಷದಿಂದ ಹಾಗೂ ಒಂದು ಭಾರಿ ಪಕ್ಷೇತರವಾಗಿ ಗೆದ್ದು ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಈ ಭಾರಿ ಮಂತ್ರಿ ಪದವಿಗೆ ಪರಿಗಣಿಸಬೇಕು ಎಂದು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನ ಆರಂಭಿಸಿದ್ದರು. ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ತಾನು ಮಂತ್ರಿ ಪದವಿಗಾಗಿ ಯಾರ ಕಾಲಿಗೂ ಬಿಳುವುದಿಲ್ಲ. ಉತ್ತಮ ಪದವಿ ಸಿಕ್ಕರೆ ಮಂತ್ರಿ ಕಾರು, ಗನ್’ಮ್ಯಾನ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕಾರಂತರಿಗೆ ಕಾರಂತರೇ ಸಾಟಿ. ಅವರ ನೇರ ನುಡಿ, ವ್ಯಕ್ತಿತ್ವ, ಸಾಹಿತ್ಯ ಕೃಷಿ, ಪ್ರೇರಣದಾಯಕ, ಕಾರಂತರ ನುಡಿಮುತ್ತುಗಳು ಪ್ರಸ್ತುತ ಸಮಾಜಕ್ಕೆ ಕಿವಿಮಾತಾಗಿದ್ದು, ಅವರು ಕಾದಂಬರಿಗಳಲ್ಲಿ ತೋರಿಸುತ್ತಿದ್ದ ಪರಿಸರ ಪ್ರೇಮ ಅಮೋಘವಾದ್ದು, ಪರಿಸರ ಉಳಿಸಿ ಬೆಳೆಸೋದು ಪ್ರತಿಯೊಬ್ಬರ ಕರ್ತವ್ಯ ಎಂದು ಉಡುಪಿ ಜಿಲ್ಲಾ ಕೃಷಿ ಇಲಾಖೆ ಉಪ ನಿರ್ದೇಶಕ ಸೂರ್ಯಕಾಂತ್ ಬಿರಾದಾರ್ ಹೇಳಿದರು. ಅವರು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ಗೆ ಭೇಟಿ ನೀಡಿ ಕಾರಂತರ ಕಂಚಿನ ಪುತ್ಥಳಿಗೆ ಮಾಲಾರ್ಪಣೆ ಮಾಡಿ ರಂಗಮಂದಿರ, ಆರ್ಟ್ ಗ್ಯಾಲರಿ, ಮಿನಿ ಸಂಭಾಗಣ, ಅಂಗನವಾಡಿ, ಗ್ರಂಥಾಲಯ, ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಾರಂತ ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ಕೋಟ ಕೃಷಿ ಅಧಿಕಾರಿ ಕುಮಾರಿ ಸುಪ್ರಭ, ಬ್ರಹ್ಮಾವರ ಕೃಷಿ ಇಲಾಖೆಯ ಸಿಬ್ಬಂದಿ ಕುಮಾರಿ ದೀಪಾಂಜಲಿ, ಥೀಮ್ ಪಾರ್ಕ್ ಮೇಲ್ವಿಚಾರಕ ಪ್ರಶಾಂತ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಿಎಂ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಉಡುಪಿ ಜಿಲ್ಲೆಯ ಈರ್ವರು ಶಾಸಕರಿಗೆ ಸಚಿವ ಸ್ಥಾನ ಖಚಿತವಾಗಿದೆ. ರಾಜ್ಯ ಸಂಪುಟದಲ್ಲಿ ಸಚಿವರಾಗಿ ಕೋಟ ಶ್ರೀನಿವಾಸ ಪೂಜಾರಿ, ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಚಿವ ಸಂಪುಟದಲ್ಲಿ 8 ಲಿಂಗಾಯತ, 7 ಒಕ್ಕಲಿಗ, 7 ಒಬಿಸಿ, 3 ದಲಿತ, 3 ಎಸ್.ಸಿ., 1 ಎಸ್.ಟಿ ಮತ್ತು ಮಹಿಳೆ ಶಾಸಕಿಗೂ ಸ್ಥಾನ ನೀಡಲಾಗಿದ್ದು, ರಾಜ ಭವನದಲ್ಲಿ ಇಂದು ಮಧ್ಯಾಹ್ನ 2.15ಕ್ಕೆ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಬೊಮ್ಮಾಯಿ ಸಂಪುಟದ ಫೈನಲ್ ಪಟ್ಟಿ:ಸುನೀಲ್ ಕುಮಾರ್ – ಕಾರ್ಕಳ,ಕೋಟ ಶ್ರೀನಿವಾಸ ಪೂಜಾರಿ – ಎಂಎಲ್ಸಿಎಸ್ ಅಂಗಾರ-ಸುಳ್ಯ,ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ,ಆರ್.ಅಶೋಕ್- ಪದ್ಮನಾಭ ನಗರ,ಡಾ.ಸಿ.ಎನ್.ಅಶ್ವತ್ಥ ನಾರಾಯಣ – ಮಲ್ಲೇಶ್ವರ,ಉಮೇಶ್ ಕತ್ತಿ- ಹುಕ್ಕೇರಿ,ಎಸ್.ಟಿ.ಸೋಮಶೇಖರ್- ಯಶವಂತಪುರ,ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ,ಬೈರತಿ ಬಸವರಾಜ – ಕೆ ಆರ್ ಪುರಂ,ಮುರುಗೇಶ್ ನಿರಾಣಿ – ಬೀಳಗಿ,ಶಿವರಾಂ ಹೆಬ್ಬಾರ್- ಯಲ್ಲಾಪುರ,ಶಶಿಕಲಾ ಜೊಲ್ಲೆ- ನಿಪ್ಪಾಣಿ,ಕೆಸಿ ನಾರಾಯಣಗೌಡ – ಕೆಆರ್ ಪೇಟೆ,ಅರಗ ಜ್ಞಾನೇಂದ್ರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಪ್ರಸಕ್ತ ಸಾಲಿನಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಲಭ್ಯವಿರುವ ಕಾಳ ಮೆಣಸು ಪುನಃಶ್ಚೇತನ, ಅಣಬೆ ಉತ್ಪಾದನಾ ಘಟಕಗಳು ಸ್ಫಾಪನೆ, ಕೃಷಿ ಹೊಂಡಗಳ ನಿರ್ಮಾಣ, ಸಮಗ್ರ ಪೀಡೆ/ ಪೋಷಕಾಂಶಗಳ ನಿರ್ವಹಣೆ 20 ಅಶ್ವಶಕ್ತಿಗಿಂತ ಕಡಿಮೆ ಸಾಮರ್ಥ್ಯದ ಟ್ರಾಕ್ಟರ್ ಖರೀದಿಗೆ, ಪ್ಯಾಕ್ ಹೌಸ್ ಘಟಕ ನಿರ್ಮಾಣಕ್ಕೆ, ಪ್ರಾಥಮಿಕ/ ಬಹುಪಯೋಗಿ ಸಂಸ್ಕರಣಾ ಘಟಕಗಳ ಸ್ಥಾಪನೆ ಹಾಗೂ ತೋಟಗಾರಿಕೆ ಬೆಳೆಗಳನ್ನು ಒಣಗಿಸಲು ನಿರ್ಮಾಣ ಮಾಡುವ ಸೋಲರ್ ಡ್ರೆಯರ್ ಗಳಲ್ಲಿ ಉಪಯೋಗಿಸುವ ಸಿಲ್ ಪಾಲಿನ ಹಾಳೆಗಳಿಗೆ ಸಹಾಯ ಧನ ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ಉಡುಪಿ ಜಿಲ್ಲೆಯ ತೋಟಗಾರಿಕೆ ನಿರ್ದೇಶಕರ ಕಚೇರಿ 0820-2531950, ಹಿರಿಯ ಸಹಾಯಕ ತೋಟಗಾರಿಕ ನಿರ್ದೇಶಕರು ಉಡುಪಿ ತಾಲೂಕು 0820-2522837, ಕುಂದಾಪುರ ತಾಲೂಕು 08254-230813 ಹಾಗೂ ಕಾರ್ಕಳ ತಾಲೂಕು 08258-230288 ನ್ನು ಸಂಪರ್ಕಿಸುವಂತೆ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: 2020ನೇ ಸಾಲಿನಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಕರ್ನಾಟಕವನ್ನು ಅಧಿಕೃತವಾಗಿ ಪ್ರತಿನಿಧಿಸಿ ಪದಕ ಪಡೆದ ಹಾಗೂ ಅಂತರರಾಷ್ರೀಯ ಮಟ್ಟದ ವಿವಿಧ ಕ್ರೀಡಾಪಟುಗಳಿಗೆ ನಗದು ಬಹುಮಾನ ನೀಡಲಾಗುತ್ತಿದೆ. ಅರ್ಹ ಕ್ರೀಡಾಪಟುಗಳು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣ ಅಜ್ಜರಕಾಡು ಉಡುಪಿ ಇವರಿಂದ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ದೃಢೀಕೃತ ದಾಖಲೆಗಳೊಂದಿಗೆ ಇದೇ ಆಗಸ್ಟ್ 25 ರೊಳಗೆ ಹಿಂತಿರುಗಿಸಲು ಕೋರಿದೆ. ನಂತರ ಬರುವ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0820-2521324, 9480886467 ನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೋಡಿಯ ಬ್ಯಾರಿಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ ( ಸಿ ಬಿ ಎಸ್ ಇ ) ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸತತವಾಗಿ 4ನೇ ವರ್ಷ ಶೇಕಡಾ 100 ಫಲಿತಾಂಶ ದಾಖಲಿಸಿದೆ . ಉತ್ತೀರ್ಣಗೊಂಡವರಲ್ಲಿ , 5 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯನ್ನು , 6 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯನ್ನು ಪಡೆದಿದ್ದಾರೆ . ವಿದ್ಯಾರ್ಥಿಗಳಾದ ಸುಹಾ ಅನಮೋಲ್ ಶೇ.88, ಶೈನಾ ಫೆರ್ನಾಂಡಿಸ್ ಶೇ.83, ಭಾಗ್ಯವಂತಿ ಪಾಟೀಲ್ ಶೇ. 79.3, ಸಾನಿಯಾ ಶೇ. 79, ಎಂ. ಕೆ. ಅಮನ್ ಶೇ .75 ಅಂಕ ಗಳಿಸಿದ್ದಾರೆ. ಬ್ಯಾರಿಸ್ ಗ್ರೂಪಿನ ಸಂಚಾಲಕರಾದ ಸೈಯದ್ ಮಹಮ್ಮದ್ ಬ್ಯಾರಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಅಬ್ದುಲ್ ರೆಹಮಾನ್, ನಿರ್ದೇಶಕರಾದ ದೋಮ ಚಂದ್ರಶೇಖರ್, ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲರು, ಶಿಕ್ಷಕರು ಹಾಗೂ ರಕ್ಷಕ-ಶಿಕ್ಷಕ ಸಂಘದ ಸದಸ್ಯರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿನ ಕೋವಿಡ್ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗೆ ವರ್ಗಾಯಿಸಿ ಅಗತ್ಯ ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ನವೀನ್ ಭಟ್ ಸೂಚನೆ ನೀಡಿದರು. ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್-19 ನಿಯಂತ್ರಣ ಕೈಗೊಳ್ಳುವ ಕ್ರಮಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸೋಂಕಿತ ವ್ಯಕ್ತಿಗಳನ್ನು ಗುರುವಾರದಿಂದ ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗೆ ವರ್ಗಾಯಿಸಿ ಅವರುಗಳಿಗೆ ಉತ್ತಮ ಚಿಕಿತ್ಸೆ ನೀಡುವುದರಿಂದ ಕೊರೋನಾ ಸೋಂಕು ಹರಡುವಿಕೆಯ ಸರಪಳಿಯನ್ನು ಕಡಿತಗೊಳಿಸಲು ಸಾಧ್ಯ, ಈ ನಿಟ್ಟಿನಲ್ಲಿ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು. ಜಿಲ್ಲೆಯ ಪ್ರತಿ ತಾಲೂಕುಗಳಲ್ಲಿಯೂ ಕೋವಿಡ್ ಕೇರ್ ಸೆಂಟರ್ಗಳನ್ನು ತೆರೆದು, ಅಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರೊಂದಿಗೆ ಕೊರೋನಾ ಪೀಡಿತರಿಗೆ ಆರೈಕೆ ಮಾಡಲು ಮುಂದಾಗಬೇಕು ಎಂದ ಅವರು ಕೋವಿಡ್ಕೇರ್ ಸೆಂಟರ್ಗಳಿಗೆ ಅಗತ್ಯ ಇರುವ ವೈದ್ಯರು ಶುಶ್ರೂಷಕರು ಮತ್ತಿತರ ಸಿಬ್ಬಂದಿಗಳನ್ನು ಅಗತ್ಯಕ್ಕನುಣವಾಗಿ ನಿಯೋಜಿಸಬೇಕು ಎಂದು ಸೂಚಿಸಿದರು. ಜಿಲ್ಲೆಯಲ್ಲಿ ಪ್ರತಿದಿನ 5000 ಕ್ಕೂ ಹೆಚ್ಚು ಕೋವಿಡ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಪಡುವರಿ ಗ್ರಾಮದ ಹೇನಬೇರು ರಾಮಕೃಷ್ಣ ದೇವಾಡಿಗ ಅವರ ಪುತ್ರ ಅಜಿತ್ ದೇವಾಡಿಗ(15) ತೀವೃ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು, ಅವರ ಹೆಚ್ಚಿನ ಚಿಕಿತ್ಸೆಗೆ ಮಾನವೀಯ ನೆರವಿನ ಅಗತ್ಯವಿದೆ. ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರ ಸಲಹೆಯಂತೆ ಲಿವರ್ ಕಸಿ ಮಾಡಬೇಕಾದ ಪರಿಸ್ಥಿತಿ ಇರುವುದರಿಂದ ಚಿಕಿತ್ಸೆಗೆ 30ರಿಂದ 35 ಲಕ್ಷ ರೂ. ಖರ್ಚಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ನೆರವಿಗೆ ಮನವಿ: ಇವರದ್ದು ಸಾಮಾನ್ಯ ರೈತಾಪಿ ಕುಟುಂಬ ಆಗಿರುದರಿಂದ ಹೆಚ್ಚಿನ ಚಿಕಿತ್ಸೆಗೆ ಹಣ ಭರಿಸಲು ಸಾಧ್ಯವಾಗುತ್ತಿಲ್ಲ. ಅಜಿತ್ ಅವರಿಗೆ ಸಹಾಯ ಮಾಡಲಿಚ್ಚಿಸುವವರು ರಾಮಕೃಷ್ಣ ದೇವಾಡಿಗ, ಬ್ಯಾಂಕ್ ಆಫ್ ಬರೋಡ ಉಳಿತಾಯ ಖಾತೆ ಸಂಖ್ಯೆ: 82000100004112 (ಐಎಫ್ಎಸ್‌ಸಿ ಕೋಡ್ BARB0VJBYND)Phone pay or google pay: 8073201943 ಮಹಬಲ ದೇವಾಡಿಗ, ಕೆನರಾ ಬ್ಯಾಂಕ್ ಉಳಿತಾಯ ಖಾತೆ ಸಂಖ್ಯೆ: 01222200062946 ( ಐಎಫ್ಎಸ್‌ಸಿ ಕೋಡ್ CNRB0010122)ಗೆ ಸಲ್ಲಿಸಬಹುದಾಗಿದೆ

Read More