ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ ಜಿಲ್ಲಾ ಪ್ರಾಣಿ ದಯಾ ಸಂಘದಿಂದ ಮುಂದಿನ 2 ವರ್ಷಗಳ ಅವಧಿಗೆ ಪ್ರಾಣಿ ಕಲ್ಯಾಣ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು Animal Welfare Warden ರನ್ನು ನೇಮಕಾತಿ ಮಾಡುವ ಕುರಿತು ಅರ್ಜಿ ಆಹ್ವಾನಿಸಲಾಗಿದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕಾರ್ಯ ನಿರ್ವಹಿಸಲು ಆಸಕ್ತಿಯುಳ್ಳವರು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 15 ಕೊನೆಯ ದಿನ. ಅರ್ಜಿ ನಮೂನೆ ಮತ್ತು ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಪಶು ಪಾಲನಾ ಇಲಾಖೆ ಹಾಗೂ ದೂರವಾಣಿ ಸಂಖ್ಯೆ: 0820-2534024 ನ್ನು ಸಂಪರ್ಕಿಸಬಹುದಾಗಿದೆಂದು ಪ್ರಕಟಣೆ ತಿಳಿಸಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪೌಢಶಾಲಾ ವಿಭಾಗದ ಒಟ್ಟು 17 ಶಿಕ್ಷಕರಿಗೆ ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ದೊರೆತಿದ್ದು, ಸೆ.5ರಂದು ಬೆಳಿಗ್ಗೆ 9.30ಕ್ಕೆ ಸೈಂಟ್ ಸಿಸಿಲಿ ಪೌಢಶಾಲೆಯಲ್ಲಿ ಜಿಲ್ಲಾಡಳಿತದಿಂದ ಶಿಕ್ಷಕರ ದಿನಾಚರಣೆ ಸಂದರ್ಭ ಪ್ರದಾನ ಮಾಡಾಲಾಗುವುದು ಎಂದು ಡಿಡಿಪಿಐ ಎನ್.ಎಚ್. ನಾಗೂರ ತಿಳಿಸಿದ್ದಾರೆ. ಕಿರಿಯ ಪ್ರಾಥಮಿಕ ವಿಭಾಗ:ಶಾಂತ ಪೈ, ಸಹ ಶಿಕ್ಷಕಿ, ಯಡ್ತಾಡಿ ಶಾಲೆ (ಬ್ರಹ್ಮಾವರ ವಲಯ), ಶೇಖರ ಗಾಣಿಗ, ಸಹಶಿಕ್ಷಕ, ಕಿಸ್ಮತಿ ಸರಕಾರಿ ಶಾಲೆ(ಬೈಂದೂರು ವಲಯ), ಮಂಜುನಾಥ ಶೆಟ್ಟಿ, ಸಹಶಿಕ್ಷಕ ಕುಚ್ಚೂರು ಸರಕಾರಿ ಶಾಲೆ (ಕಾರ್ಕಳ ವಲಯ) ಸುರೇಶ್ ಶೆಟ್ಟಿ, ಸಹ ಶಿಕ್ಷಕ, ಕೊಂಜಾಡಿ ಸರಕಾರಿ ಶಾಲೆ (ಕುಂದಾಪುರ ವಲಯ), ರೇಷ್ಮಾ ಎಂ.ಎನ್., ಸಹಶಿಕ್ಷಕಿ, ಕುದಿ ಸರಕಾರಿ ಶಾಲೆ (ಉಡುಪಿ ವಲಯ) ಹಿರಿಯ ಪ್ರಾಥಮಿಕ ವಿಭಾಗ:ದಿನಕರ ಶೆಟ್ಟಿ, ಮುಳ್ಯ ಶಿಕ್ಷಕ, ಬಡಾನಿಡಿಯೂರು ಸರಕಾರಿ ಶಾಲೆ(ಬ್ರಹ್ಮಾವರ ವಲಯ), ಚಂದ್ರ ನಾರಾಯಣ ಬಿಲ್ಲವ, ಸಹ ಶಿಕ್ಷಕ, ಶಿರೂರು ಸರಕಾರಿ ಶಾಲೆ (ಬೈಂದೂರು ವಲಯ), ನರೇಂದ್ರ ಕಾಮತ್ ದೈಹಿಕ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಉಡುಪಿ ಜಿಲ್ಲಾ ವತಿಯಿಂದ, ಕೋವಿಡ್- 19 ಸಂದರ್ಭದಲ್ಲಿ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವಲ್ಲಿ ಕ್ರಿಯಾತ್ಮಕವಾಗಿ ತೊಡಗಿಸಿಕೊಂಡ ರಾಘವೇಂದ್ರ ಡಿ. ಅವರು ಜಿಲ್ಲಾಮಟ್ಟದ ಅತ್ಯುತ್ತಮ ಸಮೂಹ ಸಂಪನ್ಮೂಲ ವ್ಯಕ್ತಿ ( CRP ) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅವರು ಬೈಂದೂರು ಶೈಕ್ಷಣಿಕ ವಲಯದ ಅರೆಶಿರೂರು, ಆಜ್ರಿ ಮಾನಂಜೆ ಕೇಂದ್ರದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಜಿಲ್ಲಾಮಟ್ಟದ ಅತ್ಯುತ್ತಮ ಸಮೂಹ ಸಂಪನ್ಮೂಲ ವ್ಯಕ್ತಿ ( CRP ) ಪ್ರಶಸ್ತಿ ಪತ್ರ ವಿತರಣೆ ಹಾಗೂ ಗುರುವಂದನಾ ಕಾರ್ಯಕ್ರಮವು ಶಿಕ್ಷಕರ ದಿನಾಚರಣೆಯ ಅಂಗವಾಗಿ ಎಸ್ ಡಿ ಎಂ ಸಿ ಸಮನ್ವಯ ವೇದಿಕೆ, ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ, ಮತ್ತು ಕಾನೂನು ಸೇವಾ ಸಮಿತಿ ಕುಂದಾಪುರ ತಾಲೂಕು ಮತ್ತು ರೋಟರಿ ಮಿಡ್ ಟೌನ್ ಕುಂದಾಪುರ ಇವರ ಸಹಭಾಗಿತ್ವದಲ್ಲಿ ನಾಳೆ ಬೆಳಿಗ್ಗೆ 10 .30ಕ್ಕೆ ಕುಂದಾಪುರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ವಿಜ್ಞಾನ ವಿಭಾಗದ ವತಿಯಿಂದ ಜೈವಿಕ ಸಂಶೋಧನಾ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಅಂತಾರಾಷ್ಟ್ರೀಯ ಮಟ್ಟದ ಮೂರು ದಿನದ ವೆಬಿನಾರ್ ನಡೆಯಿತು. ವೆಬಿನಾರ್‌ನ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ, ಕೆ ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯ ಸಹಾಯಕ ಪ್ರಾಧ್ಯಾಪಕಿ ಡಾ. ರೇಷ್ಮಾ ಶೆಟ್ಟಿ, ಭೋಪಾಲ್ ಐಐಎಸ್ ಇಆರ್ ನ ಸಹಾಯಕ ಪ್ರಾಧ್ಯಾಪಕಿ ಡಾ. ವಿನಿತ ಗೌಡ, ಆಳ್ವಾಸ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಬೆಂಗಳೂರಿನ ಸಿಂಜಿನ್ ಇಂಟರ್ನ್ಯಾಷನಲ್ ಲಿಮಿಟೆಡ್, ಬಯೋಕಾನ್ ಪಾರ್ಕ್ನ ರಿಸರ್ಚ್ ಅಸೋಸಿಯೇಟ್ ಮನೀಶ್ ಕೆ. ಎಸ್, ಜಪಾನ್ ನ ಯುನಿವರ್ಸಿಟಿ ಆಫ್ ಎನ್ವಿರೋನ್ಮೆಂಟಲ್ ಹಾಗೂ ಆಕ್ಯುಪೇಶನಲ್ ಹೆಲ್ತ್ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಮಹೇಶ್ ಪ್ರಸಾದ್ ಬೇಕಲ್, ಕುವೈತ್ ನ ದಾಸ್ ಮನ್ ಡಯಾಬಿಟಿಸ್ ಇನ್ಸ್ಟಿಟ್ಯೂಟ್ ನ ರಿಸರ್ಚ್ ಅಸೋಸಿಯೇಟ್ ಪ್ರಶಾಂತ್‌ಹೆಬ್ಬಾರ್ ಕೆ ವಿದ್ಯಾರ್ಥಿಗಳಿಗೆ ಜೈವಿಕ ವಿಜ್ಞಾನ ಸಂಶೋಧನೆಗೆ ಅಗತ್ಯವಿರುವ ಮಾಹಿತಿ ಹಾಗೂ ವಿವಿಧ ಸಂಶೋಧನಾ ವಿಷಯಗಳ ಕುರಿತು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಿಲಾಗ್ರೀಸ್ ಕಾಲೇಜು ಹಂಪನಕಟ್ಟೆ, ಮಂಗಳೂರು ಇದರ ದಶಮಾನೋತ್ಸವದ ಅಂಗವಾಗಿ ಲಲಿತ-ಕಲಾ ಘಟಕದ ವತಿಯಿಂದ ಆಯೋಜಿಸಿದ ಕಾಮಿಕ್ ಸ್ಟ್ರಿಪ್ ಸ್ಪರ್ಧೆಯಲ್ಲಿ ಕೋಡಿ ಬ್ಯಾರೀಸ್ ಕಾಲೇಜಿನ ಪ್ರಥಮ ಬಿಸಿಎ ವಿದ್ಯಾರ್ಥಿನಿ ಶಮಾ ಮುಸ್ಕಾನ್ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಅವರ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ನಿರ್ದೇಶಕರು ಹಾಗೂ ಉಪನ್ಯಾಸಕರು ಅಭಿನಂದನೆ ಸಲ್ಲಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನೈಕಂಬ್ಳಿ ಇಲ್ಲಿನ ವಿದ್ಯಾರ್ಥಿಗಳಿಗೆ ಆರ್ಡಿಯ ಸಿಎ ಸುದೀಪ್ ಶೆಟ್ಟಿ ನಾಯಕತ್ವದ ಜ್ಞಾನ ಫೌಂಡೇಶನ್ ಬೆಂಗಳೂರು ಕೊಡಮಾಡಿದ ಉಚಿತ ಸಮವಸ್ತ್ರವನ್ನು ನೈಕಂಬ್ಳಿಯ ಪ್ರೇರಣಾ ಯುವ ವೇದಿಕೆ ವಿತರಿಸಿದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ ಮಾತಮಾಡಿ, ಗ್ರಾಮೀಣ ಭಾಗದ ನಮ್ಮ ಶಾಲೆಗೆ ಕಟ್ಟಡಗಳ ಕೊರತೆಯಿದೆ. ಅಗತ್ಯ ಸೌಲಭ್ಯಗಳ ಪೂರೈಕೆಗೆ ದಾನಿಗಳ ಸಹಕಾರ ಅಗತ್ಯವಿದೆ. ಆ ನಿಟ್ಟಿನಲ್ಲಿ ಪ್ರೇರಣಾ ಮತ್ತು ಜ್ಞಾನ ಪೌಂಢೇಶನ್ ಈ ರೀತಿಯ ಸಹಕಾರಕ್ಕೆ ಧನ್ಯವಾದ ತಿಳಿಸಿದರು. ಪ್ರೇರಣಾ ವೇದಿಕೆಯ ಪ್ರಮುಖರಾದ ಚಂದ್ರ ಶೆಟ್ಟಿ, ನೈನಾ ಆಚಾರ್ಯ, ಉಮೇಶ್ ಆಚಾರ್ಯ, ಶರಣ್ ಶೆಟ್ಟಿ, ಶ್ರೀಷಾ ಆಚಾರ್ಯ ಮತ್ತು ಊರಿನ ಪ್ರಮುಖರಾದ ಪ್ರೀತಮ್ ಶೆಟ್ಟಿ, ಕರುಣಾಕರ ಶೆಟ್ಟಿ, ಕೊರಗಯ್ಯ ಶೆಟ್ಟಿ ಹಾಗು ಪೋಷಕರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ರಾಧಿಕಾ ನಿರೂಪಿಸಿ, ಶಿಕ್ಷಕಿ ಅರ್ಚನಾ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ರೋಟರಿ ಕ್ಲಬ್ ಗಂಗೊಳ್ಳಿ ವತಿಯಿಂದ ಗುಡ್ಡೆಕೇರಿ ಅಂಗನವಾಡಿ ಕೇಂದ್ರಕ್ಕೆ ಸ್ಟೀಲ್ ಡಬ್ಬಿಯನ್ನು ಗಂಗೊಳ್ಳಿಯ ಸ.ವಿ.ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ರಾಜೇಶ ಎಂ.ಜಿ. ಅವರು ಅಂಗನವಾಡಿ ಕಾರ್ಯಕರ್ತೆ ನಿಖಿತಾ ಅವರಿಗೆ ಹಸ್ತಾಂತರಿಸಿದರು. ವಲಯ ಸೇನಾನಿ ಕೆ. ರಾಮನಾಥ ನಾಯಕ್, ಸಂಸ್ಥೆಯ ಕಾರ್ಯದರ್ಶಿ ನಾರಾಯಣ ಇ.ನಾಯ್ಕ್, ಗಂಗೊಳ್ಳಿ ಗ್ರಾಪಂ ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ, ರೋಟರಿ ಸದಸ್ಯರಾದ ಜನಾರ್ದನ ಪೂಜಾರಿ, ಬಿ.ಲಕ್ಷ್ಮೀಕಾಂತ ಮಡಿವಾಳ, ಎಂ.ನಾಗೇಂದ್ರ ಪೈ, ಫಿಲೋಮಿನಾ ಫೆರ್ನಾಂಡಿಸ್, ಸುಗುಣಾ ಹಾಗೂ ಕೃಷ್ಣ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗ್ರಾಮ ಪಂಚಾಯತ್‌ಗಳ ಸಂಪನ್ಮೂಲ ಕ್ರೋಢಿಕರಣಕ್ಕೆ ಹೆಚ್ಚಿನ ಗಮನ ನೀಡಬೇಕು. ಸರಕಾರದ ಹಾಗೂ ಗ್ರಾಮ ಪಂಚಾಯತ್‌ನ ಅನುದಾನಗಳನ್ನು ಸಮಪರ್ಕವಾಗಿ ಬಳಸಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ನಡೆಸಬೇಕು. ಖರ್ಚು ಮಾಡಿದ ಅನುದಾನಗಳಿಗೆ ಸರಿಯಾಗಿ ಲೆಕ್ಕಪತ್ರಗಳನ್ನು ನಿರ್ವಹಿಸಿ ಯಾವುದೇ ಲೋಪದೋಷವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಕುಂದಾಪುರ ಕೃಷಿ ಇಲಾಖೆಯ ಕೃಷಿ ಅಧಿಕಾರಿ ರಘುರಾಮ ಶೆಟ್ಟಿ ಹೇಳಿದರು. ಗಂಗೊಳ್ಳಿ ಗ್ರಾಮ ಪಂಚಾಯತ್‌ನ ಸಭಾಭವನದಲ್ಲಿ ಜರಗಿದ ಗ್ರಾಮ ಪಂಚಾಯತ್‌ನ 2020-21ನೇ ಸಾಲಿನ ವಾರ್ಷಿಕ ಲೆಕ್ಕಪತ್ರಗಳ ಜಮಾಬಂದಿ ಕಾರ್ಯಕ್ರಮದಲ್ಲಿ ಜಮಾಬಂದಿ ಅಧಿಕಾರಿಯಾಗಿ ಅವರು ಮಾತನಾಡಿದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ರವೀಂದ್ರ ಪಟೇಲ್, ನಾಗರಾಜ ಕಲೈಕಾರ್, ಬಿ.ಗಣೇಶ ಶೆಣೈ, ನಾಗರಾಜ ಖಾರ್ವಿ ಗುಡ್ಡೆಕೇರಿ, ಬಿ.ರಾಘವೇಂದ್ರ ಪೈ, ರಾಜ್‌ಕಿರಣ್, ನಿರ್ಮಲಾ ಪೂಜಾರಿ, ದೇವು ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ, ತ್ರಾಸಿ ಗ್ರಾಮ ಪಂಚಾಯತ್‌ನ ಎಸ್‌ಡಿಎ ಶಿವಾನಂದ, ಗಂಗೊಳ್ಳಿ ಗ್ರಾಪಂ ಪಿಡಿಒ ಉಮಾಶಂಕರ, ಗ್ರಾಮ ಪಂಚಾಯತ್ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕಾವ್ರಾಡಿ ಗ್ರಾಮದಲ್ಲಿ ಶೆ.100ರಷ್ಟು ಜನತೆ ಕೋವಿಡ್ ಲಸಿಕೆ ಪಡೆದುಕೊಂಡಿದ್ದು, ಕೋವಿಡ್ ನಿಯಂತ್ರಣದಲ್ಲಿ ಕಾವ್ರಾಡಿ ಮಾದರಿ ಗ್ರಾಮವಾಗಿ ಗುರುತಿಸಿಕೊಂಡಿದೆ. 18 ವರ್ಷ ಮೇಲ್ಪಟ್ಟ ಎಲ್ಲಾ ಸಾರ್ವಜನಿಕರೂ ಕೋವಿಡ್ ಪ್ರಥಮ ಡೋಸ್ ಲಸಿಕೆ ಪಡೆಯುವಲ್ಲಿ 100% ಯಶಸ್ವಿಯಾಗಿದ್ದು, ಹಲವು ಮಂದಿ ಎರಡನೇ ಹಂತದ ಲಸಿಕೆಯನ್ನೂ ಸಹ ಪಡೆದಿದ್ದಾರೆ. ಕಾವ್ರಾಡಿ ಮತ್ತು ಹಳ್ನಾಡು ಗ್ರಾಮದಲ್ಲಿ 4032 ಮಂದಿ 18 ವರ್ಷ ಮೇಲ್ಪಟ್ಟ ಗ್ರಾಮಸ್ಥರಿದ್ದು ಇವರೆಲ್ಲರೂ ಮೊದಲ ಹಂತದ ಕೋವಿಡ್ ಲಸಿಕೆ ಪಡೆದಿದ್ದಾರೆ. 45 ವರ್ಷ ಮೇಲ್ಪಟ್ಟವರಲ್ಲಿ ಈ ಮೊದಲೇ 100% ಸಾಧನೆ ಮಾಡಿದ್ದ ಇಲ್ಲಿ, 18 ವರ್ಷ ಮೇಲ್ಪಟ್ಟವವರು ತಾವೇ ಉತ್ಸಾಹದಿಂದ ಬಂದು ಲಸಿಕೆ ಪಡಿದಿದ್ದಾರೆ. ಲಸಿಕೆ ಪಡೆಯದೇ ದೂರ ಉಳಿದಿದ್ದವರನ್ನು ಗುರುತಿಸಿ, ವೈದ್ಯರ ತಂಡದೊಂದಿಗೆ ಅವರ ಮನೆಗಳಿಗೆ ತೆರಳಿ, ಕೋವಿಡ್ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿ ಲಸಿಕೆ ನೀಡಲಾಗಿದೆ. ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ. ಲತಾ ನಾಯಕ್…
ಕುಂದಾಪ್ರ ಡಾಟ್ ಕಾಂ ಸುದ್ದಿಉಡುಪಿ,ಸೆ02: ಬೈಂದೂರು ಪಟ್ಟಣ ಪಂಚಾಯತ್ 2021-2022 ನೇ ಸಾಲಿನಲ್ಲಿ ಪ.ಜಾತಿ/ಪ.ಪಂಗಡದವರ ಮತ್ತು ಇತರೆ ಹಿಂದುಳಿದ ಬಡ ವರ್ಗದವರ, ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ವಿವಿಧ ಯೋಜನೆಗಳ ಸವಲತ್ತುಗಳನ್ನು ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವೈದ್ಯಕೀಯ ವೆಚ್ಚ ಮರುಪಾವತಿ, ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಮನೆ ದುರಸ್ಥಿ, ಶೌಚಾಲಯ ನಿರ್ಮಾಣ, ವಿಕಲಚೇತನರಿಗೆ ಪೋಷಣಾ ಭತ್ಯೆ ಸೇರಿದಂತೆ ಮತ್ತಿತರ ಸೌಲಭ್ಯ ನೀಡಲಾಗುತ್ತಿದೆ. ಸಂಬAಧಿತ ಕಾರ್ಯಕ್ರಮದಡಿ ಅಭ್ಯರ್ಥಿಗಳು ಸೂಕ್ತ ದಾಖಲೆಗಳನ್ನು ಕಛೇರಿಗೆ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 24 ಕೊನೆಯ ದಿನವಾಗಿದ್ದು, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08254-251058 ನ್ನು ಸಂಪರ್ಕಿಸುವAತೆ ಬೈಂದೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
