Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಲೆಯಾಳದ ಮಹಾಕವಿ ಚಙ್ಙಪ್ಪುಳ ಕೃಷ್ಣ ಪಿಳ್ಳೆ ಅವರು ಹೇಳಿದಂತೆ ಕಾವ್ಯವು ಒಬ್ಬ ನರ್ತಕಿ ಇದ್ದಂತೆ. ನರ್ತಕಿ ತನಗೆ ಹೇಳಬೇಕಾದ ವಿಚಾರಗಳನ್ನು ಸನ್ನೆ – ಸಂಕೇತಗಳ ಮೂಲಕವೇ ಸೂಚಿಸುತ್ತಾಳೆ. ಚಙ್ಙಪ್ಪುಳ, ವಳ್ಳತ್ತೋಳ್, ಉಳ್ಳೂರ್ ಮೊದಲಾದ ಮಹಾಕವಿಗಳು ಮಲೆಯಾಳ ಕಾವ್ಯದ ತೋರುಗಂಬಗಳಾಗಿ ಉತ್ಕೃಷ್ಟ ಕಾವ್ಯ ರಚನೆ ಮಾಡಿದರು. ವೇದ-ಉಪನಿಷತ್ತುಗಳು, ರಾಮಾಯಣ, ಮಹಾಭಾರತ, ಮೊದಲಾದ ಮಹಾಕಾವ್ಯಗಳು, ಭಗವದ್ಗೀತೆಯಂಥ ಅಮೂಲ್ಯ ಗ್ರಂಥ, ಕಾಳಿದಾಸ-ಭಾಸರಂಥ ಮಹಾಕವಿಗಳು ಸಾಹಿತ್ಯವನ್ನು ಶ್ರೀಮಂತವಾಗಿಸಿದಂತಹ ನಾಡು ನಮ್ಮದು. ಅವರ ಆದರ್ಶದಲ್ಲೇ ಮಲೆಯಾಳ ಕಾವ್ಯವು ರೂಪ ಪಡೆಯಿತು. ಅಂಥ ಸಾಹಿತ್ಯಕ್ಕೆ ಈಗ ಕೆ.ವಿ.ತಿರುಮಲೇಶ್ ಅವರ ಕಾವ್ಯವೂ ಅನುವಾದದ ಮೂಲಕ ಸೇರ್ಪಡೆಗೊಳ್ಳುತ್ತಿರುವುದು ತುಂಬಾ ಸಂತಸ ಪಡಬೇಕಾದ ಸಂಗತಿ ‘ಎಂದು ಮಣಿಪಾಲ ಕೆ.ಎಂ.ಸಿ.ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ಜಯರಾಜ್ ಹೇಳಿದರು. ಅವರು ಎಸ್.ಎಂ.ಎಸ್.ಕಾಲೇಜಿನ ಕಿರು ಸಭಾಂಗಣದಲ್ಲಿ ಡಾ.ಪಾರ್ವತಿ ಜಿ.ಐತಾಳ್ ಮಲೆಯಾಳಕ್ಕೆ ಅನುವಾದಿಸಿದ ‘ಕೆ.ವಿ. ತಿರುಮಲೇಶಿಂದೆ ತೆರಞ್ಣೆಡುತ್ತ ಕವಿತಗಳ್'( ಕೆ.ವಿ.ತಿರುಮಲೇಶರ ಆಯ್ದ ಕವಿತೆಗಳು) ಕೃತಿಯ ಅನಾವರಣಕ್ಕಾಗಿ ಏರ್ಪಡಿಸಿದ ಸಮಾರಂಭದಲ್ಲಿ ಮಾತನಾಡಿದರು. ಕಾಲೇಜಿನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಜಡ್ಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುದೂರು ಗ್ರಾಮದ ಕಟ್ಟಡ ಮತ್ತು ಇತರೆ ನಿಮಾ೯ಣ ಕಾಮಿ೯ಕರ ಸಭೆಯು ಸ್ಥಳೀಯಕಾಮಿ೯ಕ ಮುಖಂಡ ಜೊಸೆಪ್ ಸಾಮ್ಯುಯಲ್ ರವರ ಮನೆ ವಠಾರದಲ್ಲಿ ನಡೆಯಿತು. ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿಮಾ೯ಣ ಕಾಮಿ೯ಕರ ಸಂಘದ ಪ್ರಧಾನ ಕಾಯ೯ದಶಿ೯ಗಣೇಶ ತೊಂಡೆಮಕ್ಕಿ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಾ, ಕಾಮಿ೯ಕ ಇಲಾಖೆಯಿಂದ ಕೊರೊನ ಪರಿಹಾರದ ಅಹಾರ ಕಿಟ್ ವಿತರಣೆಯಲ್ಲಾಗಿರುವ ತಾರತಮ್ಯ ಹಾಗೂ ಎಲ್ಲಾ ಕಟ್ಟಡ ಕಾಮಿ೯ಕರನ್ನು ಗುರುತಿಸದೇ ಏಕಪಕ್ಷೀಯವಾಗಿ ವಿತರಣೆ ಮಾಡಿ. ಅಹಾರ ಕಿಟ್ ಬದಲಿಗೆ ಎಲ್ಲಾ ನೊಂದಾಯಿತ ಕಟ್ಟಡ ಕಾಮಿ೯ಕರಿಗೆ ಕೊರೊನಾ ಪರಿಹಾರ ರುಪಾಯಿ ಹತ್ತು ಸಾವಿರ ನಗದು ಬ್ಯಾಂಕ್ ಖಾತೆಗೆ ವಗಾ೯ವಣೆ ಮಾಡಬೇಕು ಎಂದು ಈಗಾಗಲೆ ಹಲವಾರು ಭಾರಿ ಕಾಮಿ೯ಕ ಕಲ್ಯಾಣ ಮಂಡಳಿಗೆ ಒತ್ತಾಯಿಸಿ ಮನವಿ ಸಲ್ಲಿಸಲಾಗಿದ್ದರೂ ಗಣನೆಗೆ ತೆಗೆದು ಕೊಳ್ಳದ ಇಲಾಖಾ ಕ್ರಮವನ್ನು ತೀವ್ರವಾಗಿ ಖಂಡಿಸಿದರು. ಕಾಮಿ೯ಕ ಮುಖಂಡ ವೆಂಕಟೇಶ್ ಕೋಣಿ ಮಾತನಾಡಿ, ಗ್ರಾಮೀಣ ಪ್ರದೇಶದ ಬಡರೈತ, ಕೃಷಿಕೂಲಿ ಕಾರರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಕೌಟುಂಬಿಕ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಸಮಾಜಕ್ಕೆ ಕಂಟಕ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು. ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ಶ್ರೀಶೈಲ ಪ್ರೊಡಕ್ಷನ್ಸ್ ಅವರ ಮಹಿಳೆಯಾಧಾರಿತ ಕಿರುಚಿತ್ರ ‘ಶಾಂಭವಿ’ ಲೋಕಾರ್ಪಣೆ ಗೈದು ಮಾತನಾಡಿದ ಅವರು, ನಾಗರಿಕತೆಯ ಉಗಮವಾದ ದಿನಗಳಿಂದಲೂ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯವಾಗುತ್ತಿರುವುದು ಶೋಚನೀಯ. ಕುಟುಂಬ ಹಾಗೂ ಉದ್ಯೋಗ ಕ್ಷೇತ್ರದ ವಿವಿಧ ಸನ್ನಿವೇಶಗಳಲ್ಲಿ ಸ್ತ್ರೀಯರು ಅವಕಾಶ ವಂಚಿತರಾಗುವುದರ ಜತೆಗೆ ಶೋಷಣೆಗೂ ಒಳಗಾಗುತ್ತಿದ್ದಾರೆ. ವಿದ್ಯಾವಂತರಿದ್ದರೂ ಕೌಟುಂಬಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದೆ ಇವೆಲ್ಲವನ್ನೂ ವಿರೋಧಿಸುವ ಹಾಗೂ ಹೋರಾಡುವ ಮನೋಸ್ಥಿತಿ ಮಹಿಳೆಯರಲ್ಲಿ ಬೆಳೆಯಬೇಕು ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಿರುಚಿತ್ರದ ನಿರ್ಮಾಪಕ ಡಾ. ರಾಜೇಶ್ ಪೂಜಾರಿ ಮಾತನಾಡಿ, ಪ್ರತಿಯೊಂದು ಕುಟುಂಬದ ಯಶಸ್ಸಿನಲ್ಲಿ ಪುರುಷ ಹಾಗೂ ಮಹಿಳೆ ಸಮಾನ ಜವಾಬ್ದಾರಿ ಹೊಂದಿರುತ್ತಾರೆ. ಪುರುರು ಪ್ರತಿಯೊಂದು ಸ್ತ್ರೀಯನ್ನು ಗೌರವಿಸುವುದರೊಂದಿಗೆ ಅವರ ಮಾನಸಿಕ ಶಕ್ತಿಯಾಗಿರಬೇಕು. ಈ ನಿಟ್ಟಿನಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜಗತ್ತನ್ನು ಕಾಡಿದ ಕೋವಿಡ್ ಮಹಾಮಾರಿ, ವೈದ್ಯಕೀಯ ಸೌಲಭ್ಯ ಎಷ್ಟಿದ್ದರೂ ಸಾಲದು ಎಂಬ ಸತ್ಯವನ್ನು ಸಾರಿದೆ. ಸರ್ಕಾರದಿಂದ ಮಾತ್ರ ಇದರ ಕೊರತೆ ನೀಗಲು ಅಸಾಧ್ಯವಾಗಿರುವುದರಿಂದ ಜನರ ಕೊಡುಗೆ ಅಮೂಲ್ಯವೆನಿಸಿದೆ ಎಂದು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು. ನಾವುಂದ-ಮರವಂತೆಯ ‘ನಮ್ಮ ಊರು-ನಮ್ಮ ಆರೋಗ್ಯ’ ಹೆಸರಿನ ವೃತ್ತಿಪರರ ತಂಡ ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಡುಗೆಯಾಗಿತ್ತ ಆಕ್ಸಿಜನ್ ಕಾನ್ಸಂಟ್ರೇಟರ್ ಮತ್ತು ಆಮ್ಲಜನಕ ಸಿಲಿಂಡರ್ ಅನ್ನು ಅವರು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ‘ನಮ್ಮ ಊರು-ನಮ್ಮ ಆರೋಗ್ಯ’ ತಂಡದ ಉಪಕ್ರಮವನ್ನು ಶ್ಲಾಘಿಸಿದ ಅವರು ಈ ಮಾದರಿ ಎಲ್ಲರಿಗೆ ಅನುಕರಣೀಯ ಎಂದರು. ‘ನಮ್ಮ ಊರು-ನಮ್ಮ ಆರೋಗ್ಯ’ ತಂಡ, ಗ್ರಾಮ ಪಂಚಾಯಿತಿ ಮತ್ತು ಮರವಂತೆಯ ಸೇವಾ ಸಂಘಟನೆಗಳು ಸಂಯುಕ್ತವಾಗಿ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವಂತೆ ಕೋರಿ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಶಾಸಕರು ಕೇಂದ್ರಕ್ಕೆ ನೂತನ ಕಟ್ಟಡ ನಿರ್ಮಿಸುವ ಮತ್ತು ಹಗಲು-ರಾತ್ರಿ ಆರೋಗ್ಯ ಸೇವೆ ದೊರಕಿಸುವ ಭರವಸೆಯಿತ್ತರು. ಸ್ವಾಗತಿಸಿ, ತಂಡವನ್ನು ಪರಿಚಯಿಸಿದ ತಂಡದ ಸದಸ್ಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಳೆದೊಂದು ವಾರಗಳಿಂದ ಸತತ ಮಳೆಯಾಗುತ್ತಿದ್ದು, ಭಾನುವಾರ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಹಲವೆಡೆ ನದಿಗಳು ಉಕ್ಕಿ ಹರಿದಿದ್ದರಿಂದ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದವು. ಮಧ್ಯಾಹ್ನದ ವೇಳೆಗೆ ಮಳೆ ಕಡಿಮೆಯಾದ್ದರಿಂದ ನೆರೆಹಾವಳಿ ತಗ್ಗಿತ್ತು. ಶನಿವಾರ ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿದ್ದುದರಿಂದ ಭಾನುವಾರ ಬೆಳಿಗ್ಗೆ ಕುಂದಾಪುರ ತಾಲೂಕಿನ ಬಿಜಾಡಿ, ಕೋಟೇಶ್ವರ, ಬೈಂದೂರು ತಾಲೂಕಿನ ಉಪ್ಪಿನಕುದ್ರು, ಮರವಂತೆ, ನಾವುಂದ, ಕಿರಿಮಂಜೇಶ್ವರ, ಬಿಜೂರು, ಶಿರೂರು ಗ್ರಾಮಗಳು, ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಹಲವೆಡೆ ನೆರೆ ನೀರು ನುಗ್ಗಿತ್ತು. ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಮನೆ ಹಾನಿ, ಮನೆಗಳಿಗೆ ನೆರೆ ನೀರು ನುಗ್ಗಿರುವುದು, ಅಲ್ಲಲ್ಲಿ ಮರ ಉರಳಿರುವುದು ಸೇರಿದಂತೆ ಚಿಕ್ಕಪುಟ್ಟು ನೆರೆಹಾನಿಯಾಗಿದೆ. ಬೈಂದೂರು ತಹಶಿಲ್ದಾರ್ ಶೋಭಾಲಕ್ಷ್ಮೀ ಎಚ್. ಎಸ್ ಹಾಗೂ ಕುಂದಾಪುರ ತಹಶೀಲ್ದಾರ್ ಬಿ. ಆನಂದಪ್ಪ ನೆರೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಚಿಕ್ಕ ಮಳೆ ಬಂದರೂ ನೀರು ರಸ್ತೆ ಮೇಲೆ: ಅರ್ಧ ಮಳೆಗಾಲವೇ ಬಂದರೂ ಈತನಕವೂ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿಗಳು ಎಚ್ಚೆತ್ತಂತೆ ಕಾಣುತ್ತಿಲ್ಲ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕೋವಿಡ್-19 ಸೋಂಕನ್ನು ನಿಯಂತ್ರಿಸಲು ಸರ್ಕಾರದ ದಿನಾಂಕ 03.07.2021ರ ಆದೇಶದಲ್ಲಿ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಲಾಗಿತ್ತು , ಸದರಿ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಅನುಷ್ಠಾನದಿಂದ ರಾಜ್ಯಾದ್ಯಂತ ಪೊಸಿಟಿವ್ ಪ್ರಕರಣಗಳ ಪ್ರಮಾಣದ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿರುವುದು ಕಂಡುಬಂದಿದ್ದರಿಂದ ಸರ್ಕಾರದ ಆದೇಶವನ್ನು ದಿನಾಂಕ 02.08.2021 ರವರೆಗೆ ಮುಂದುವರಿಸಿ ಹೆಚ್ಚುವರಿ ಚಟುವಟಿಕೆಗಳಿಗೆ ಅನುಮತಿಯನ್ನು ನೀಡಿರುತ್ತದೆ. ಆದ್ದರಿಂದ ಜಿಲ್ಲೆಯ ಪ್ರಸ್ತುತ ವಿದ್ಯಮಾನಗಳನ್ನು ಪರಿಗಣಿಸಿ, ಸಾರ್ವಜನಿಕರ ಆರೋಗ್ಯದ ಹಿತ ದೃಷ್ಟಿಯಿಂದ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ದಿನಾಂಕ 19.07.2021 ರಿಂದ ಮುಂದಿನ ಆದೇಶದವರಗೆ ಈ ಕೆಳಗಿನಂತೆ ಆದೇಶ ಹೊರಡಿಸುತ್ತೇನೆ. A) ಜಿಲ್ಲೆಯಾದ್ಯಂತ ಸಂಜೆ 10.00 ಗಂಟೆಯಿಂದ ಬೆಳಿಗ್ಗೆ 5.00 ಗಂಟೆಯ ವರೆಗೆ ಅನುಬಂಧ- A ರಲ್ಲಿನ ಮಾರ್ಗಸೂಚಿಗಳಂತೆ ಕಟ್ಟುನಿಟ್ಟಿನ ರಾತ್ರಿ ಕರ್ಪ್ಯೂ ಜಾರಿಯಲ್ಲಿರುತ್ತದೆ. B) ಈ ಕೆಳಗಿನ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಚಟುವಟಿಕೆಗಳನ್ನು ಕಂಟೈನ್ಮೆಂಟ್ ವ್ಯಾಪ್ತಿಯ ಹೊರಗಡೆ ಜಿಲ್ಲೆಯಾದ್ಯಂತ ಅನುಮತಿಸಲಾಗಿದೆ.  ಪಬ್ ಗಳಿಗೆ ಅನುಮತಿ ಇರುವುದಿಲ್ಲ.  ಕೋವಿಡ್-19 ಸೂಕ್ತ ನಡವಳಿಕೆಯನ್ನು ಹಾಗೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಯು.ಬಿ. ಶೆಟ್ಟಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಹಾಗೂ ಉಪ್ಪುಂದ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಸ್ಕೂಲ್ ವತಿಯಿಂದ 10 ಬ್ಯಾರಿಕೇಡ್’ಗಳನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಬೈಂದೂರು ಪಿಎಸ್ಐ ಪವನ್ ನಾಯಕ್, ಯುಬಿಎಸ್ ಶಿಕ್ಷಣ ಸಂಸ್ಥೆಗಳ ಸಂಯೋಜಕ ಸುಬ್ರಹ್ಮಣ್ಯ ಜೋಶಿ, ಉಪ್ಪುಂದ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮುಖ್ಯೋಪಧ್ಯಾಯ ಸಂದೇಶ್ ಶೆಟ್ಟಿ, ಸುಬ್ರಹ್ಮಣ್ಯ ಬಾಡ, ಸುಕುಮಾರ್ ಶೆಟ್ಟಿ ಸೂರ್ಕುಂದ, ಹೆನ್ಸಿ ಲೋಬೋ ಮೊದಲಾದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಉಡುಪಿಗೊಂದು ಸರ್ಕಾರಿ ವೈದ್ಯಕೀಯ ಕಾಲೇಜಿನ ಅಗತ್ಯತೆಯನ್ನು ಮನಗೊಂಡ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಳೆದ ಹಲವು ವರ್ಷಗಳಿಂದ ಕಾಲೇಜು ತೆರೆಯಬೇಕೆಂದು ಒತ್ತಾಯಿಸುತ್ತಾ ಬಂದಿದೆ. ಕಳೆದ ಬಾರಿ ಸಂಸದರಿಂದ ಉತ್ತಮ ಪ್ರತಿಕ್ರಿಯೆ ಬಂದಿತ್ತಾದರೂ ಭರವಸೆ ಈಡೇರಲಿಲ್ಲ. ಶೀಘ್ರವೇ ಸರ್ಕಾರಿ ವೈದ್ಯಕೀಯ ಕಾಲೇಜು ತೆರೆಯುವಂತೆ ಶಾಸಕರ ಬಳಿ ಎಬಿವಿಪಿ ಕಾರ್ಯಕರ್ತರು ಮನವಿ ಸಲ್ಲಿಸಿದರು. ಮನವಿಗೆ ಉತ್ತಮವಾಗಿ ಸ್ಪಂದಿಸಿದ ಶಾಸಕರು ಪಿಪಿಪಿ ಮಾಡೆಲ್ ನ ಅಡಿಯಲ್ಲಿ ವೈದ್ಯಕೀಯ ಕಾಲೇಜು ತೆರೆಯಲು ಅವಕಾಶವಿದ್ದು , ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಹಾಗೆಯೆ ಸರ್ಕಾರಿ ನರ್ಸಿಂಗ್ ಕಾಲೇಜನ್ನೂ ಉಡುಪಿಯಲ್ಲಿ ತೆರೆಯುವುದಕ್ಕೆ ತಮ್ಮ ಪ್ರಾಮಾಣಿಕ ಪ್ರಯತ್ನಪಡುವುದಾಗಿ ಶಾಸಕರು ಆಶ್ವಾಸನೆ ನೀಡಿದರು. ಈ ಸಂದರ್ಭದಲ್ಲಿ ಎಬಿವಿಪಿ ಹಿರಿಯ ಕಾರ್ಯಕರ್ತರಾದ ಡಾ. ಶಿವಾನಂದ ನಾಯಕ್ , ನಗರ ಕಾರ್ಯದರ್ಶಿ ಸುಮುಖ ಭಟ್ ಸಹಕಾರ್ಯದರ್ಶಿ ಆಕಾಶ್ ವಿದ್ಯಾರ್ಥಿ ಪ್ರಮುಖರಾದ ವಿಕಾಸ್, ಚಿನ್ಮಯ ಹೆಗ್ಡೆ, ಗಿರೀಶ್ ಉಪಸ್ಥಿತರಿದ್ದರು. ಇದನ್ನೂ ಓದಿ:…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಖಂಬದಕೋಣೆ ಗ್ರಾಮದ ಹಳಗೇರಿಯ ಸರ್ವೆ ನಂಬ್ರ 166/ಪಿ1ರಲ್ಲಿ ಸುಮಾರು 53 ಎಕ್ರೆ ದಟ್ಟಾರಣ್ಯ ಪ್ರದೇಶವನ್ನು ಪೊರಂಬೂಕು ಶೀರ್ಷಿಕೆಯಿಂದ ವಿರಹಿತಗೊಳಿಸಿ ಕೈಗಾರಿಕಾ ಉದ್ದೇಶಕ್ಕೆ ಬಳಸಲು ಈಗ ಇರುವ ಅರಣ್ಯ ನಾಶಕ್ಕೆ ಅವಕಾಶ ಕೊಡಬಾರದಾಗಿ ಹಳಗೇರಿ, ತೆಂಕಬೆಟ್ಟು, ಗುಮ್ಮಿತೋಟ, ಖಂಬದಕೋಣೆ, ನಾಗೂರು ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆ ಸದಸ್ಯರು ಖಂಬದಕೋಣೆ ಗ್ರಾಪಂ ಎದುರು ಶನಿವಾರ ಶಾಂತಿಯುತ ಪ್ರತಿಭಟನೆ ನಡೆಸಿದರು. ಈ ಪ್ರದೇಶವು 75ರಿಂದ 100ಮೀ ವರೆಗೆ ಎತ್ತರವಿರುವ ಕಿರು ಪರ್ವತವಾಗಿದ್ದು, ದಟ್ಟವಾದ ಅರಣ್ಯವಾಗಿದೆ. ಅನೇಕ ವನ್ಯಪ್ರಾಣಿ, ಪಕ್ಷಿಗಳಿಗೆ ಆಶ್ರಯತಾಣವಾಗಿದೆ. ಕೈಗಾರಿಕೆಗಾಗಿ ಈ ಸ್ಥಳದಲ್ಲಿರುವ ಎಲ್ಲಾ ಮರಗಳನ್ನು ಕಟಾವು ಮಾಡಿದರೆ ಇದರಿಂದ ಅವಲಂಬಿತವಾದ ಕೃಷಿ ಕುಟುಂಬಗಳಿಗೆ ತೊಂದರೆಯಾಗಲಿದೆ. ಅಲ್ಲದೇ ಪ್ರಕೃತಿದತ್ತವಾದ ಈ ಗುಡ್ಡವನ್ನು ಸಮತಟ್ಟು ಮಾಡುವುದರಿಂದ ಭೂಕುಸಿತದಂತಹ ನೈಸರ್ಗಿಕ ವಿಕೋಪದ ಸಾಧ್ಯತೆಗಳಿವೆ. ಈ ಭಾಗದ ಜನರ ಜೀವನಾಡಿಯಾಗಿರುವ ಗುಡ್ಡವು ಈ ಭಾಗದ ಜನರ ದೈನಂದಿನ ಜೀವನಕ್ಕೆ ತುಂಬಾ ಉಪಯುಕ್ತವಾಗಿದೆ. ಜೀವರಕ್ಷಕ ಗುಡ್ಡದ ಅರಣ್ಯ ನಾಶಮಾಡಿ ಕೈಗಾರಿಕಾ ಕೇಂದ್ರಗಳನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶಿಕ್ಷಣದ ವಿಷಯದಲ್ಲಿ ರಾಜ್ಯದಲ್ಲೇ ಸುಪ್ರಸಿದ್ಧವಾದ ನಮ್ಮ ಉಡುಪಿ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನಡೆಸಿದ ಹೋರಾಟದ ಪರಿಣಾಮವಾಗಿ ಸರಕಾರದ ಮೇಲೆ ಉಂಟಾದ ಒತ್ತಡದಿಂದಾಗಿ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಈ ವರ್ಷದ ವೇಳೆಗೆ ಪ್ರಾರಂಭವಾಗಲಿದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಡಾ. ಸುಧಾಕರ್ ಅವರು ಪರಿಪೂರ್ಣವಾಗಿ ಸರ್ಕಾರದ ಅಧೀನದಲ್ಲಿ ಕಾಲೇಜು ಸ್ಥಾಪಿಸುವ ಬದಲಾಗಿ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸುವ ಕುರಿತು ಹೇಳಿದ್ದಾರೆ ಆದರೆ ಖಾಸಗಿ ಸಹಭಾಗಿತ್ವದ ವೈದ್ಯಕೀಯ ಕಾಲೇಜು ಸ್ವೀಕೃತವಲ್ಲ ಎಂದು ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾ ಸಮಿತಿ ಆಗ್ರಹಿಸಿದೆ. ಜಿಲ್ಲೆಯ ಜನರ ಬೇಡಿಕೆಯ ಅನುಸಾರವಾಗಿ ಪರಿಪೂರ್ಣವಾದ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ಒತ್ತಾಯಿಸುತ್ತೇವೆ. ನಮ್ಮ ಬೇಡಿಕೆ ಈಡೇರಿಸುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಮತ್ತು ಖಾಸಗಿ ಸಹಭಾಗಿತ್ವದ ವೈದ್ಯಕೀಯ ಕಾಲೇಜನ್ನು ನಾವು ಸ್ವೀಕರಿಸುವುದಿಲ್ಲ. ಜಿಲ್ಲೆಯ ಜನರ…

Read More