Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ತಾಲೂಕಿನ ಹಳಗೇರಿಯ ಶ್ರೀ ಕ್ಷೇತ್ರ ತೆಂಕಬೆಟ್ಟು ಶ್ರೀ ಗೆಂಡದ ಹೈಗುಳಿ ಶ್ರೀ ಗಣಪನಾಯಕ ಸಪರಿವಾರ ದೇವಸ್ಥಾನದ ಪುನರ್‌ ಪ್ರತಿಷ್ಠಾ ತೃತೀಯ ವರ್ಧತ್ಯೋತ್ಸವ, ವಾರ್ಷಿಕ ಗೆಂಡ ಹಾಗೂ ಮಂಡಲೋತ್ಸವ ಜ.31 ರಿಂದ ಫೆ.2ರ ತನಕ ನಡೆಯಲಿದೆ. ಜ.31ರ ಬೆಳಿಗ್ಗೆ 9.00 ರಿಂದ ಶ್ರೀ ಭೂನಾಗ ದೇವರಿಗೆ ನವಕ ಪ್ರಧಾನ ಕಲಾಶಾಭಿಷೇಕ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 6.00ರಿಂದ ಪುನರ್‌ ಪ್ರತಿಷ್ಠಾ ವರ್ಧತ್ಯೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. ಫೆ.1ರ ರಾತ್ರಿ 9.00ರಿಂದ ಗೆಂಡಸೇವೆ, 9.30 ಮಂಗಳಾರತಿ ಸೇವೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಫೆ.2ರ ಬೆಳಿಗ್ಗೆ 5.30ರಿಂದ ಮಂಡಲೋತ್ಸವ, 7.00ರಿಂದ ತುಲಭಾರ ಸೇವೆ ಹಾಗೂ ಅದೇ ದಿನ ರಾತ್ರಿ 7.00ರಿಂದ ಬೈಂದೂರು ಶ್ರೀ ಈಶ್ವರ ಮಾರಿಕಾಂಬ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಕಳವಾಡಿ ಇವರಿಂದ ಪೌರಣಿಕ ಕಥಾಪ್ರದರ್ಶನಗೊಳ್ಳಲಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ದೇಶದ ಅಭಿವೃದ್ಧಿಯಲ್ಲಿ ಯುವ ಜನತೆಯ ಪಾತ್ರ ಮಹತ್ವದ್ದು. ವಿದ್ಯಾರ್ಥಿ ದೆಸೆಯಲ್ಲಿಯೇ ದೇಶಾಭಿಮಾನದ ಮೌಲ್ಯಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಂಡಾಗ ಸದೃಢ ರಾಷ್ಟç ನಿರ್ಮಾಣ ಸಾಧ್ಯ ಎಂದು ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ಬಿ. ಎಮ್. ಸುಕುಮಾರ ಶೆಟ್ಟಿ ಹೇಳಿದರು. ಅವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ 77ನೇ ಗಣರಾಜ್ಯೋತ್ಸವದ ಫಥ ಸಂಚಲನದ ಗೌರವವನ್ನು ಸ್ವೀಕರಿಸಿ, ಧ್ವಜಾರೋಹಣ ಮಾಡಿ ಮಾತನಾಡಿದರು. ಭಾರತೀಯ ಸೇನೆಯ ನಿವೃತ್ತ ಸೈನಿಕ ದಿನೇಶ್ ಆಚಾರ್ಯ ಆಲೂರು ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ, ಉಪ-ಪ್ರಾಂಶುಪಾಲ ಡಾ| ಚೇತನ್ ಶೆಟ್ಟಿ ಕೋವಾಡಿ, ಎನ್.ಸಿ.ಸಿ. ಅಧಿಕಾರಿ ತಿಮ್ಮಪ್ಪ ಡಿ.ಎಸ್., ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಯೋಗೀಶ್ ಶ್ಯಾನುಭೋಗ್ ಸ್ವಾಗತಿಸಿ, ನಿರೂಪಿಸಿ, ಲೆಫ್ಟಿನೆಂಟ್ ಹರೀಶ್ ಬಿ., ಎ.ಎನ್.ಓ., ವಂದಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಕಲ್ಕೂರ ರೆಫ಼್ರಿಜರೇಶನ್ ಮತ್ತು ಕಿಚನ್ ಇಕ್ವಿಪ್ ಮೆಂಟ್ ಪ್ರೈವೇಟ್ ಲಿಮಿಟೆಡ್ ತಂಗದಗಡಿ ಅಂಬಾಗಿಲು ಉಡುಪಿ ಸಂಸ್ಥೆಯ ಆಡಳಿತ ನಿರ್ದೇಶಕರಾದ ಕೆ. ರಂಜನ್ ಕಲ್ಕೂರ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಧ್ವಜಾರೋಹಣ ಮಾಡಿ, ವಿದ್ಯಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಸಂವಿಧಾನದ ಪರಿಚಯವನ್ನು ತಿಳಿಸುತ್ತಾ ಮಾತನಾಡಿದ ಕೆ. ರಂಜನ್ ಕಲ್ಕೂರ ಅವರು ದೇಶದ ಪ್ರಜೆಗಳು ತಮ್ಮ ಹಕ್ಕುಗಳನ್ನು ಅರಿತು ಆನಂದಿಸಬೇಕು. ಕರ್ತವ್ಯಗಳನ್ನು ಎಂದೂ ಮರೆಯಬಾರದು. ಧ್ವಜದ ಬಣ್ಣಗಳು ನಮ್ಮ ತ್ಯಾಗ ಶಾಂತಿ ಮತ್ತು ಸಸ್ಯಶ್ಯಾಮಲತೆ, ಪ್ರಗತಿಗಳ ಸಂಕೇತ. ನಮ್ಮಲ್ಲಿರುವ ಭಿನ್ನತೆಯನ್ನು ಗೌರವಿಸಲು ಅರಿಯಬೇಕು. ಆದರೆ ನಾವೆಲ್ಲ ಒಂದೇ ಎಂಬ ಭಾವನೆಯನ್ನು ಮರೆಯಬಾರದು. ರಜೆಯಲ್ಲಿ ಅಜ್ಜಿಯ ಮನೆಗೆ ಮಕ್ಕಳು ಹೋಗುವಂತೆ ಇಂದು ಕಾಡಿನಿಂದ ಪ್ರಾಣಿಗಳು ನಾಡಿಗೆ ಬರುತ್ತಿವೆ. ಅವುಗಳ ಅಜ್ಜಿಮನೆಯಾದ ಕಾಡನ್ನು ನಾಶ ಮಾಡಿದುದೇ ಈ ಕಾರ್ಯಕ್ಕೆ ಕಾರಣ. ಆದ್ದರಿಂದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಆನ್‌ಲೈನ್‌ ಬೆಟ್ಟಿಂಗ್‌ನಲ್ಲಿ ಗೆದ್ದ 15ಲಕ್ಷ ರೂ. ಹಣ ನೀಡದೆ ಜೀವಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿ ಕೋಟ ಪೊಲೀಸರು ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಶಿರಿಯಾರ ಗ್ರಾಮದ ಎತ್ತಿನಟ್ಟಿಯ ರೂಪೇಶ್(23), ಮನೋಜ್ (25), ಕೊಳ್ಳೆಬೈಲುವಿನ ಸೃಜನ್ ಶೆಟ್ಟಿ (28), ಪಡುಮುಂಡುವಿನ ರಾಘವೇಂದ್ರ (37), ಶಿರಿಯಾರ ಕುಶಲ (38) ಬಂಧಿತ ಆರೋಪಿಗಳು. ಬಿಲ್ಲಾಡಿಯ ಸಂದೇಶ್ ಕುಲಾಲ್ ಎಂಬವರಿಗೆ ಸುಮಾರು ಒಂದು ವರ್ಷದ ಹಿಂದೆ ಆನ್‌ಲೈನ್ ಬೆಟ್ಟಿಂಗ್ ನಡೆಸುತ್ತಿದ್ದ ಶಿರಿಯಾರ ನಿವಾಸಿ ಪ್ರದೀಪ್‌ ಎಂಬಾತನ ಪರಿಚಯವಾಗಿತ್ತು. ಸಂದೇಶ್‌ ಕುಲಾಲ್, ಪ್ರದೀಪ್‌ ಸೂಚನೆಯಂತೆ ರೂಪೇಶ್, ಮನೋಜ್, ಧೀರಜ್‌, ಹರೀಶ, ವಿದೇಶ್‌ ಹಾಗೂ ಇತರೆ ವ್ಯಕ್ತಿಗಳ ಮೊಬೈಲ್ ನಂಬರ್‌ಗಳಿಗೆ ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡಿದ್ದರು. ಸಂದೇಶ್‌ ಕುಲಾಲ್‌ ಬೆಟ್ಟಿಂಗ್‌ನಲ್ಲಿ ಸುಮಾರು 15 ಲಕ್ಷ ರೂ. ಹಣವನ್ನು ಗೆದ್ದಿದ್ದು ಈ ಹಣವನ್ನು ಇವರು ನೀಡದೆ ಮೋಸ ಮಾಡಿರುವುದಾಗಿ ದೂರಲಾಗಿದೆ. ಒಂದು ತಿಂಗಳ ಹಿಂದೆ ಶಿರಿಯಾರದಲ್ಲಿ ಪ್ರದೀಪ್‌ನನ್ನು ಭೇಟಿ ಮಾಡಿ ಗೆದ್ದ 15ಲಕ್ಷ ರೂ.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಭಾರತವು ಒಂದು ಪ್ರಜಾಪ್ರಭುತ್ವ ದೇಶವಾಗಿದ್ದು ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕರ ಹಕ್ಕು ಮತ್ತು ಕರ್ತವ್ಯ. 18 ವರ್ಷ ಮೇಲ್ಪಟ್ಟ ಎಲ್ಲ ಅರ್ಹ ಮತದಾರರು ಮತದಾನ ಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿಕೆಯಿಂದ ಪ್ರಜಾಪ್ರಭುತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿ ಸದೃಢ ಭಾರತ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದ್ದಾರೆ. ಅವರು ರವಿವಾರ ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಂಯುಕ್ತ ಆಶ್ರಯ ದಲ್ಲಿ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ನಡೆದ 16ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದೇಶದ ಚುನಾವಣಾ ಆಯೋಗ ಸ್ಥಾಪನೆಯಾದ ಸಂಸ್ಕರಣಾರ್ಥವಾಗಿ 2011ರಿಂದ ಪ್ರತಿ ವರ್ಷ ಜನವರಿ 25ನ್ನು ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದೆ. ಪಾರದರ್ಶಕ ಮತದಾನ ಪ್ರಕ್ರಿಯೆಗಾಗಿ ಚುನಾವಣಾ ಆಯೋಗವು ನಾಗರಿಕ ಸ್ನೇಹಿ ತಂತ್ರಜ್ಞಾನಗಳನ್ನು ಪರಿಚಯಿಸಿದೆ. ಮತದಾನವು ಐಚ್ಛಿಕವಾಗಿದ್ದು, ಹೆಚ್ಚು ಜನರು ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ನಾಗರಿಕರು ತಮ್ಮ ಆಸೆ ಆಕಾಂಕ್ಷೆಗಳನ್ನು ಪೂರೈಸುವ ಜನಪ್ರತಿನಿಧಿಗಳನ್ನು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ನ್ಯಾಷನಲ್ ಸ್ಕೂಲ್ ಗೇಮ್ಸ್ ಫೆಡರೇಷನ್ ಇಂಡಿಯಾದ 2025-26 ರ ನೆಟ್‌ಬಾಲ್ ಚಾಂಪಿಯನಶಿಪ್‌ನಲ್ಲಿ ಬೆಳ್ಳಿಯ ಪದಕ ಪಡೆದ  ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ದೇವಸ್ಥಾನದ ವತಿಯಿಂದ ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ. ಬಾಬು ಶೆಟ್ಟಿ ತಗ್ಗರ್ಸೆ ಅವರು ಪ್ರತಿಯೊಬ್ಬ ವಿದ್ಯಾರ್ಥಿಗೂ 15,000 ರೂಪಾಯಿ ನಗದು ಬಹುಮಾನ ಕೊಟ್ಟು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ  ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ಕುಮಾರ ಶೆಟ್ಟಿ, ಆಡಳಿತ ಮಂಡಳಿಯ ಸದಸ್ಯರಾದ ಸುರೇಂದ್ರ ಶೆಟ್ಟಿ , ರಘುರಾಮ ದೇವಾಡಿಗ, ಮಹಾಲಿಂಗ ನಾಯ್ಕ, ಸುಧಾ ಕೆ. ಹಾಗೂ ಕಾಲೇಜಿನ ಪ್ರಾಂಶುಪಾಲ ಗೋಪಾಲಕೃಷ್ಣ ಜಿ, ಬಿ. ದೈಹಿಕ ಶಿಕ್ಷಣ ಉಪನ್ಯಾಸಕ ಸುಕೇಶ ಶೆಟ್ಟಿ ಹೊಸಮಠ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಜನಸಂಖ್ಯೆಗೆ ಸರಿಯಾದ ವೈದ್ಯರು ನಮ್ಮ ದೇಶದಲ್ಲಿ ಇಲ್ಲ ಎನ್ನುವುದು ವಾಸ್ತವಾಂಶ. ಜನರು ಶಿಕ್ಷಣ ಮತ್ತು ಆರೋಗ್ಯಕ್ಕೆ ಪ್ರಥಮ ಆದ್ಯತೆ ನೀಡಬೇಕಿದೆ. ಅದೆರಡು ಒಂದೇ ಊರಿನಲ್ಲಿ ಸಿಕ್ಕಿದರೆ ಜನರು ಪಟ್ಟಣ ಪ್ರದೇಶಕ್ಕೆ ವಲಸೆ ಹೋಗುವ ಪ್ರಮೇಯ ಉದ್ಭವಿಸುವುದಿಲ್ಲ ಎಂದು ಮಾಜಿ ಸಚಿವ ಕೆ. ಜಯಪ್ರಕಾಶ ಹೆಗ್ಡೆ ಹೇಳಿದರು. ಅವರು ಗಂಗೊಳ್ಳಿ ಮುಖ್ಯ ರಸ್ತೆಯಲ್ಲಿನ ದುರ್ಗಾ ಕಾಂಪ್ಲೆಕ್ಸ್‌ನಲ್ಲಿ ಶ್ರೀ ದುರ್ಗಾ ಮೆಡಿಕಲ್ಸ್ ಎಂಡ್ ಜನರಲ್ ಸ್ಟೋರ್ಸ್‌ ಮತ್ತು ಶ್ರೀ ದುರ್ಗಾ ಕ್ಲಿನಿಕ್‌ನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಸೌಲಭ್ಯ ಹೆಚ್ಚಾದರೆ ಜನರು ಪಟ್ಟಣ ಪ್ರದೇಶದಿಂದ ಪಟ್ಟಣ ಪ್ರದೇಶಕ್ಕೆ ವಲಸೆ ಹೋಗುವುದು ಕಡಿಮೆಯಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ವೈದ್ಯರು ಹತ್ತಿರದಲ್ಲಿ ಸಿಗಬೇಕೆನ್ನುವುದು ಜನರ ಪ್ರಮುಖ ಬೇಡಿಕೆ. ಜನಸಂಖ್ಯೆ ಹೆಚ್ಚಾದಷ್ಟು ವೈದ್ಯರು ಲಭ್ಯತೆ ಕೂಡ ಹೆಚ್ಚಾಗಬೇಕು. ಪಟ್ಟಣ ಪ್ರದೇಶಕ್ಕೆ ಸರಿಸಮಾನವಾದ ವ್ಯವಸ್ಥೆಯನ್ನು ಗಂಗೊಳ್ಳಿಯಂತಹ ಗ್ರಾಮೀಣ ಪ್ರದೇಶದಲ್ಲಿ ಮಾಡಿರುವುದು ಶ್ಲಾಘನೀಯ ಎಂದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಪಂಚವರ್ಣ ಯುವಕ ಮಂಡಲ ಕೋಟ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಇವರ ನೇತೃತ್ವದಲ್ಲಿ ಸ್ಥಳೀಯ ಸಂಘಸಂಸ್ಥೆಗಳ ಸಹಯೋಗದೊಂದಿಗೆ 288ನೇ ಭಾನುವಾರದ ಪರಿಸರಸ್ನೇಹಿ ಅಭಿಯಾನದ ಅಂಗವಾಗಿ ಕುಂಭಾಶಿ ಆನೆಗುಡ್ಡೆ ವಿನಾಯಕ ದೇಗುಲ ಪರಿಸರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಕಾರ್ಯಕ್ರಮ ಭಾನುವಾರ ಜರಗಿತು. ದೇಗುಲದ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ, ದೇಗುಲದ ಪ್ರಭಂಧಕ ನಟೇಶ್ ಕಾರಂತ್ ಸ್ವಚ್ಛತಾ ಕಾರ್ಯ ಹಮ್ಮಿಕೊಂಡ ಪಂಚವರ್ಣ ಸಂಘಟನೆಯನ್ನು ಗುರುತಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಸಂಘದ ಪೂರ್ವಾಧ್ಯಕ್ಷ ಗಿರೀಶ್ ಆಚಾರ್, ಪಂಚವರ್ಣ ಮಹಿಳಾಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾದ ರಾಷ್ಟ್ರ ನಿರ್ಮಾಣಕ್ಕಾಗಿ ನಾಯಕತ್ವ ಶಿಬಿರವನ್ನು ವಿದ್ಯಾಗಿರಿಯ ಕೃಷಿಸಿರಿ ವೇದಿಕೆಯಲ್ಲಿ ನಡೆಯಿತು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ರಾಷ್ಟ್ರ ನಿರ್ಮಾಣದಲ್ಲಿ ಯುವಶಕ್ತಿಯ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಸಂವಿಧಾನದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಇಂದು ವಿಷಯಗಳನ್ನು ನೋಡುವ ದೃಷ್ಟಿಕೋನದಲ್ಲೇ ದೊಡ್ಡ ಬದಲಾವಣೆ ಕಂಡುಬರುತ್ತಿದೆ. ಆ ಬದಲಾವಣೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಪಾತ್ರ ಅಪಾರವಾಗಿದೆ. ರಾಷ್ಟ್ರ ನಿರ್ಮಾಣದ ದೃಷ್ಟಿಯಿಂದ ಆಯೋಜಿಸಿರುವ ಈ ನಾಯಕತ್ವ ಶಿಬಿರ ಅತ್ಯಂತ ಅರ್ಥಪೂರ್ಣವಾಗಿದೆ ಎಂದರು. ಸುಮಾರು 25 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಒಳಗೊಂಡ ಆಳ್ವಾಸ್ ಶಿಕ್ಷಣ ಸಂಸ್ಥೆ, ದೇಶದ ವಿವಿಧ ಭಾಷೆ, ಸಂಸ್ಕೃತಿ, ಆಚಾರ–ವಿಚಾರಗಳನ್ನು ಪ್ರತಿನಿಧಿಸುವ ಮಕ್ಕಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ರಾಷ್ಟ್ರೀಯತೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುತ್ತಿರುವುದು ಶ್ಲಾಘನೀಯ ಕಾರ್ಯವೆಂದು ಪ್ರಶಂಸಿಸಿದರು. ಈ ನಿಟ್ಟಿನಲ್ಲಿ ಡಾ. ಮೋಹನ್ ಆಳ್ವ ಅವರ ಸೇವೆಗೆ ಅಭಿನಂದನೆ…

Read More

ಕುಂದಾಪ್ರ ಆಟ್‌ ಕಾಂ ಸುದ್ದಿ.ಕೋಟ: ಎಳೆ ವಯಸ್ಸಿನಲ್ಲೆ ಯಕ್ಷ ಅಭಿರುಚಿಯನ್ನು ಬೆಳೆಸಬೇಕು ಆಗ ಮಾತ್ರ ಕರಾವಳಿಯ ಗಂಡು ಕಲೆ ಉಳಿಸಿ ಬೆಳೆಸಲು ಸಾಧ್ಯ. ಈ ನಿಟ್ಟಿನಲ್ಲಿ ಯಕ್ಷಾಮೃತ ಸಹಕಾರಿಯಾಗಲಿದೆ ಎಂದು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್ ಹೇಳಿದರು. ಅವರು ಕೋಟದ ಗಿಳಿಯಾರು ಅಲ್ಸೆಕೆರೆ ಮಹಾಲಿಂಗೇಶ್ವರ ದೇಗುಲದಲ್ಲಿ ಯಕ್ಷಾಮೃತ ಟ್ರಸ್ಟ್ ಗಿಳಿಯಾರು ಚಿಣ್ಣರ ಕಲಾವಿಹಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಯಕ್ಷಗಾನವನ್ನು ಉಳಿಸಿ ಬೆಳೆಸುವಲ್ಲಿ ವಿಶ್ವವಿಖ್ಯಾತ ಮಕ್ಕಳ ಮೇಳ ಸಾಲಿಗ್ರಾಮ ಇವರ ಪಾತ್ರ ಮಹತ್ವವಾದದ್ದು. ಅದೇ ರೀತಿ ಯಕ್ಷಾಮೃತ ಟ್ರಸ್ಟ್ ಮಹತ್ತರ ಮೈಲಿಗಲ್ಲು ಸಾಧಿಸಲಿ ಒಂದಿಷ್ಟು ಆಸಕ್ತ ಮನಸ್ಸುಗಳಿಗೆ ವೇದಿಕೆ ಕಲ್ಪಿಸಲಿ ಎಂದು ಹಾರೈಸಿದರು. ಸಭೆಯಲ್ಲಿ ಯಕ್ಷಾಮೃತ ಲೋಗೊ ಅನ್ನು ಕಲಾ ಸಾಹಿತಿ ಜನಾರ್ದನ ಹಂದೆ ಅನಾವರಣಗೊಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಯಕ್ಷಾಮೃತ ಟ್ರಸ್ಟ್ ಅಧ್ಯಕ್ಷ ಹಂಡಿಕೆರೆ ರಾಘವೇಂದ್ರ ಶೆಟ್ಟಿ ವಹಿಸಿದ್ದರು. ಯಕ್ಷಗುರು ಪ್ರಸಾದ್ ಕುಮಾರ ಮೊಗೆಬೆಟ್ಟು ಶುಭಾಶಂಸನೆಗೈದರು. ಮುಖ್ಯ ಅಭ್ಯಾಗತರಾಗಿ ಕೋಟ ಸಹಕಾರಿ ವ್ಯವಸಾಯಕ ಸಂಘದ ನಿರ್ದೇಶಕ ಜಿ. ತಿಮ್ಮ ಪೂಜಾರಿ,…

Read More