ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪ್ರ ಕನ್ನಡ ಮಾತನಾಡುವ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಸಂಬಂಧಿತ ಸಂಸ್ಕೃತಿ ಬಹಳ ವಿಶಿಷ್ಟವಾದುದು. ಕೃಷಿಯ ಪ್ರತಿ ಹಂತದಲ್ಲಿ ಅಂದರೆ ಹೂಡುವಾಗ, ನಟ್ಟಿ ಮಾಡುವಾಗ, ಕೊಯ್ಲು ಮಾಡುವಾಗ, ಭತ್ತದ ಹುಲ್ಲು ಜಪ್ಪುವಾಗ… ಹೀಗೆ ಪ್ರತಿ ಹೆಜ್ಜೆಯಲ್ಲಿ ನಾನಾ ರೀತಿಯ ಹಾಡುಗಳನ್ನು ಹಾಡುತ್ತಾರೆ. ವಿಶೇಷ ಉದ್ಗಾರಗಳನ್ನು ಮಾಡುತ್ತಾರೆ.
ಈ ವಿಷಯದಲ್ಲಿ ಸಾಹಿತ್ಯಾಸಕ್ತ ಪದವಿ ಕಾಲೇಜು, ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ತಾವು ಕೇಳಿದ ಜನಪದ ಹಾಡುಗಳನ್ನು ಸೇರಿಸಿ ನಾಲ್ಕು ಪುಟಗಳನ್ನು ಮೀರದಂತೆ ಲೇಖನ ಬರೆದು ಕಳುಹಿಸಬೇಕು. ಸಾರ್ವಜನಿಕರೂ ಭಾಗವಹಿಸಬಹುದು. ಭಾಗವಹಿಸಿದವರಿಗೆ ಶಿಫಾರಸು ಪತ್ರ ನೀಡಲಾಗುತ್ತದೆ. ಉತ್ತಮ ಲೇಖನಗಳಿಗೆ ಉಪಯುಕ್ತ ಬಹುಮಾನ ನೀಡಲಾಗುತ್ತದೆ. ಪತ್ರಿಕೆಯಲ್ಲೂ ಪ್ರಕಟಿಸಲಾಗುತ್ತದೆ. ಕುಂದ ಕನ್ನಡದಲ್ಲಿಯೇ ಬರೆದ ಲೇಖನಗಳಿಗೆ ವಿಶೇಷ ಪ್ರಾಶಸ್ತ್ಯವಿದೆ. ಲೇಖನ ಸ್ವೀಕರಿಸುವ ಕೊನೆಯ ದಿನಾಂಕ ಅಗಸ್ಟ್ 8.
ಲೇಖನವನ್ನು ಯು. ಎಸ್. ಶೆಣೈ, ಸಂಚಾಲಕರು, ಕುಂದ ಕನ್ನಡ ಭಾಷಾಭಿವೃದ್ಧಿ ವೇದಿಕೆ, ಕುಂದಪ್ರಭ, ಶ್ರೀ ನಾರಾಯಣಗುರು ಕಾಂಪ್ಲೆಕ್ಸ್, ಕುಂದಾಪುರ-576201. ಈ ವಿಳಾಸಕ್ಕೆ ಕಳುಹಿಸಬೇಕೆಂದು ತಿಳಿಸಲಾಗಿದೆ.











