Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಾವುಂದ ಅರೆಹೊಳೆಯಲ್ಲಿ ಇಲ್ಲಿನ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಆಡಳಿತ ಮಂಡಳಿ ಮತ್ತು ಊರ ನಾಗರಿಕರು ಶುಕ್ರವಾರ ಆಯೋಜಿಸಿದ್ದ ಆರ್. ಎನ್. ಶೆಟ್ಟಿ ಶ್ರದ್ಧಾಂಜಲಿ ಸಭೆ ಜರುಗಿತು. ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ ಚಂದ್ರ ಶೆಟ್ಟಿ, ಮಾತನಾಡಿ, ಉದ್ಯಮಿ, ಸಮಾಜ ಸೇವಕ ಹಾಗೂ ಕೊಡುಗೈ ದಾನಿ ಆರ್. ಎನ್. ಶೆಟ್ಟಿ ಅವರು ಬೆಳೆದು ಬಂದ ಹಾದಿ ಅನನ್ಯವಾದುದು. ಅವರು ಯುವ ಪೀಳಿಗೆಗೆ ಅನುಕರಣೀಯ ಮಾದರಿ ಆಗಿರುವುದರಿಂದ ಅವರ ಬದುಕನ್ನು ದಾಖಲಿಸಿ, ಯುವ ಸಮುದಾಯ ಅರಿತುಕೊಳ್ಳುವಂತೆ ಮಾಡಬೇಕು ಎಂದು ಹೇಳಿದರು. ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ, ಬಿ. ಅಪ್ಪಣ್ಣ ಹೆಗ್ಡೆ ಮಾತನಾಡಿ ಆರ್ ಎನ್ ಶೆಟ್ಟಿ ಉದ್ಯಮದಲ್ಲಿ ಯಶಸ್ಸು ಸಾಧಿಸುವುದರ ಜತೆಗೆ ದುಡಿಮೆಯ ಗಣನೀಯ ಭಾಗವನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸಿದರು. ದೇವಾಲಯ, ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿದರು. ಅನೇಕ ಸಾರ್ವಜನಿಕ ಸಂಸ್ಥೆಗಳಿಗೆ ಉದಾರ ನೆರವು ನೀಡಿದರು. ರಾಜ್ಯದಾದ್ಯಂತ ಅವರು ನಿರ್ಮಿಸಿರುವ ಮಹತ್ವದ ಸಾರ್ವಜನಿಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಾಣಿ ಬಲೆ ಮೀನುಗಾರರ ಒಕ್ಕೂಟ ಉಪ್ಪುಂದ ಇದರ 2019-20 ನೇ ಸಾಲಿನ ವಾರ್ಷಿಕ ಮಹಾಸಭೆಯು ರಾಣಿಬಲೆ ಮೀ. ಮಾ. ಪ್ರಾ. ಸ.ಸಂಘ ಉಪ್ಪುಂದ ಇದರ ಆಡಳಿತ ಕಛೇರಿಯಲ್ಲಿ ನಡೆಯಿತು. ಸಂಘದ ಅಧ್ಯಕ್ಷ ವೆಂಕಟರಮಣ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸುರೇಶ್ ಖಾರ್ವಿ 2019-20 ನೇ ಸಾಲಿನ ಆಯ- ವ್ಯಯ ವನ್ನು ಮಂಡಿಸಿದರು, ಜೊತೆ ಕಾರ್ಯದರ್ಶಿ ಸೋಮಶೇಖರ್ ಖಾರ್ವಿ ಸಂಘದ ವಾರ್ಷಿಕ ವರದಿಯನ್ನು ವಾಚಿಸಿದರು. ಇದೇ ಸಂದರ್ಭದಲ್ಲಿ ಭಾರತೀಯ ಭೂ ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಗಣಪತಿ ಖಾರ್ವಿ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ತಿಮ್ಮಪ್ಪ ಖಾರ್ವಿ, ಕೋಶಾಧಿಕಾರಿ ಆದ ಬಿ.ನಾಗೇಶ ಖಾರ್ವಿ, ಮತ್ತು ಸದಸ್ಯರಾದ ಎ.ಶ್ರೀನಿವಾಸ ಖಾರ್ವಿ, ಎಸ್.ಕೃಷ್ಣ ಖಾರ್ವಿ, ರಾಜೇಂದ್ರ ಖಾರ್ವಿ, ಶಂಕರ ಖಾರ್ವಿ, ನವೀನ ಖಾರ್ವಿ, ಶರತ್ ಖಾರ್ವಿ, ಉಪಸ್ಥಿತರಿದ್ದರು. ಹಾಗೂ ಸುಬ್ರಹ್ಮಣ್ಯ.ಎಂ. ನಿರೂಪಿಸಿ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವ್ಯವಸಾಯ ಸೇವಾ ಸಹಕಾರಿ ಸಂಘವು ಯಡ್ತರೆ ಪ್ರಧಾನ ಕಚೇರಿ ಮತ್ತು 8 ಶಾಖೆಗಳ ಮೂಲಕ 7 ಗ್ರಾಮಗಳ ಜನರಿಗೆ ಸೇವೆ ಸಲ್ಲಿಸುತ್ತಿದೆ. ಹಿಂದಿನ ವರ್ಷ ₹ 427 ಕೋಟಿ ವ್ಯವಹಾರ ಮಾಡಿ, ₹34.06 ಲಕ್ಷ ನಿವ್ವಳ ಲಾಭಗಳಿಸಿದ್ದು, ಸದಸ್ಯರಿಗೆ ಶೇ 9 ಲಾಭಾಂಶ ನೀಡಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಟಿ. ನಾರಾಯಣ ಹೆಗ್ಡೆ ಹೇಳಿದರು. ಸಂಘದ ಪ್ರಧಾನ ಕಚೇರಿಯಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಹಕಾರಿಯು ₹1.69 ಕೋಟಿ ಪಾಲು ಬಂಡವಾಳ ಹೊಂದಿದೆ. 2019-20ನೇ ಸಾಲಿನಲ್ಲಿ ₹48.95 ಕೋಟಿ ಠೇವಣಿ ಸಂಗ್ರಹಿಸಿ, ಸದಸ್ಯರಿಗೆ ₹33.49 ಕೋಟಿ ಸಾಲ ನೀಡಿದೆ. ಮುಂದಿನ ವರ್ಷ ₹50ಕೋಟಿ ಠೇವಣಿ ಸಂಗ್ರಹಿಸುವ ಗುರಿ ಹೊಂದಲಾಗಿದೆ.ಸಂಘದ ಶಾಖೆಗಳಿಗೆ ಹಂತಹಂತವಾಗಿ ನಿವೇಶನ ಖರೀದಿಸಿ, ಸ್ವಂತ ಕಟ್ಟಡ ನಿರ್ಮಿಸುವ ಯೋಜನೆ ರೂಪಿಸಲಾಗುವುದು ಎಂದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರ ಮೊಗೇರ , ಸಿಬ್ಬಂದಿ ಚಂದ್ರಶೇಖರ ಮೇಸ್ತ ವಂದಿಸಿದರು ನಿರ್ದೇಶಕರಾದ ಸಸಿಹಿತ್ಲು ವೆಂಕಟ ಪೂಜಾರಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕು ಹಿರಿಯ ನಾಗರಿಕರ ವೇದಿಕೆಯ ಆಶ್ರಯದಲ್ಲಿ ಮಹಾಂಕಾಳಿ ದೇವಸ್ಥಾನದ ಸಭಾಂಗಣದಲ್ಲಿ ಮಾಸಿಕ ಸವ೯ ಸದಸ್ಯರ ಸಭೆ ನಡೆಯಿತು. ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಗೋವಿಂದ. ಎಂ ಮಾತನಾಡಿ, ತಾಲೂಕು ಹಿರಿಯ ನಾಗರಿಕರ ವೇದಿಕೆಯ ಕಚೇರಿ ನಿವ೯ಹಣೆ ಹಾಗೂ ಹಿರಿಯ ನಾಗರಿಕರ ಪರ ಚಟುವಟಿಕೆ ವಿಸ್ತರಣೆ ಮಾಡುವುದಕ್ಕೆ ಸೂಕ್ತ ಸರಕಾರಿ ನಿವೇಶನ ಸ್ಥಳ ಮಂಜೂರು ಮಾಡಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿದರು. ನಿವೃತ್ತ ಅದ್ಯಾಪಕ ಹಿರಿಯ ನಾಗರಿಕ ಜಿ. ತಿಮ್ಮಪ್ಪಯ್ಯ ಬೈಂದೂರು ಮನೋರಂಜನಾ ಕಾಯ೯ಕ್ರಮ ನೀಡಿದರು.ನೂತನ ಸದಸ್ಯ ರಿಸವ್೯ ಬ್ಯಾಂಕ್ ನಿವೃತ್ತ ಎಜಿಎಂ ಪ್ರೆಮಾನಂದ ತಗ್ಗಸೆ೯ ಇವರನ್ನುಗೌರವಿಸಲಾಯಿತು. ವೇದಿಕೆ ಕಾಯ೯ದಶಿ೯ ಸಂಜೀವ ಆಚಾಯ೯ ಕಳವಾಡಿ ಚಟುವಟಿಕೆ ವರದಿಯನ್ನು ಮಂಡಿಸಿದರು.ಇತ್ತೀಚೆಗೆ ನಿಧನರಾದ ಸದಸ್ಯ ಹಿರಿಯ ನಾಗರಿಕ ಚಾಂಡಿ ಕಲ್ಮಕ್ಕಿಯವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ವೇದಿಕೆ ಉಪಾಧ್ಯಕ್ಷ ಶ್ರೀನಿವಾಸ ಪಡುವರಿ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಅಕ್ರಮವಾಗಿ ಗೋಸಾಗಾಟ ಮಾಡಲಾಗುತ್ತಿದ್ದ ಇನ್ಸುಲೆಟರ್ ಬೆನ್ನತ್ತಿದ ಬೈಂದೂರು ಪೊಲೀಸರು ೧೪ ಜಾನುವಾರು ಹಾಗೂ ವಾಹನವನ್ನು ವಶಕ್ಕೆ ಪಡೆದ ಘಟನೆ ಶುಕ್ರವಾರ ನಡೆದಿದೆ. ನಾವುಂದದಿಂದ ಭಟ್ಕಳ ಕಡೆಗೆ ಇನ್ಸುಲೆಟರ್ ವಾಹನದಲ್ಲಿ ಜಾನುವಾರುಗಳ ಸಾಗಾಟ ಮಾಡುತ್ತಿದ್ದಾರೆ ಎಂಬ ಹಿಂದೂಪರ ಸಂಘಟನೆಯ ಮಾಹಿತಿ ಆಧರಿಸಿ ಶಿರೂರು ಟೋಲ್ ಗೇಟಿನಲ್ಲಿ ವಾಹನದ ಮಾಹಿತಿ ಕಲೆಹಾಕಿದ ಬೈಂದೂರು ಪೊಲೀಸರು ಇನ್ಸುಲೆಟರ್ ಬೆನ್ನತ್ತಿ ಭಟ್ಕಳದಲ್ಲಿ ೧೪ ಜಾನುವಾರು ಸಹಿತ ವಾಹನ ವಶಕ್ಕೆ ಪಡೆದಿದ್ದಾರೆ. ಜಲೀಲ್ ಎಂಬಾತ ಈ ಅಕ್ರಮ ಗೋ ಸಾಗಾಟಕ್ಕೆ ಬೈಕ್ ಮೂಲಕ ಎಸ್ಕಾರ್ಟ್ ಮಾಡುತ್ತಿದ್ದ ಎನ್ನಲಾಗಿದೆ. ಬೈಂದೂರು ವೃತ್ತನಿರೀಕ್ಷಕ ಸಂತೋಷ್ ಕಾಯ್ಕಿಣಿ ಮಾರ್ಗದರ್ಶನದಲ್ಲಿ ಬೈಂದೂರು ಪಿಎಸ್‌ಐ ಸಂಗೀತಾ, ಮತ್ತು ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ. ಇನ್ನು ಕೊಲ್ಲೂರಿನಲ್ಲಿಯೂ ಗೋಮಾಂಸ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ವಶಕ್ಕೆ ಪಡೆಯಲಾಗಿದೆ. ಶಾಜು ಎಂಬಾತ ಬೈಕಿನಲ್ಲಿ ಗೋ ಮಾಂಸ ಕೊಂಡೊಯ್ಯುವಾಗ ಬೈಕ್ ಸ್ಕಿಡ್ ಆಗಿ ಬಿದ್ದಿದ್ದು ಮಾಂಸ ಕಂಡ ಸ್ಥಳಿಯರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ 44ನೇ ವಾರ್ಷಿಕ ಮಹಾಸಭೆಯು ಇಲ್ಲಿನ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಶುಕ್ರವಾರ ಜರುಗಿತು ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘವು 43 ವರ್ಷಗಳುದ್ದಕ್ಕೆ ಏರುಗತಿಯ ಪ್ರಗತಿಯನ್ನು ದಾಖಲಿಸುತ್ತ ಬಂದಿದೆ. ವರದಿ ವರ್ಷದಲ್ಲಿ ರೂ 635.32 ಕೋಟಿ ವ್ಯವಹಾರ ನಡೆಸಿ, ರೂ 3.45 ಕೋಟಿ ಲಾಭ ಗಳಿಸಿದೆ. ಸದಸ್ಯರಿಗೆ ಶೇ. 15 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಗ್ರಾಹಕರ ಸಹಕಾರ, ನಿಧಿಗಳ ಸಮರ್ಪಕ ನಿರ್ವಹಣೆ, ಸಮಯೋಜಿತ ಹೂಡಿಕೆಗಳಿಂದಾಗಿ ಸಂಘವು ಉತ್ತಮ ಪ್ರಗತಿ ಸಾಧಿಸಿದೆ ಎಂದು ಹೇಳಿದರು. ಸಂಘವು ವರ್ಷದಲ್ಲಿ ರೂ. 141 ಕೋಟಿ ಠೇವಣಿ ಸಂಗ್ರಹಿಸಿ, ರೂ. 126 ಕೋಟಿ ಸಾಲ ನೀಡಿದೆ. ವಿವಿಧ ಸಂಸ್ಥೆಗಳಲ್ಲಿ ರೂ. 62.19 ಕೋಟಿ ಹೂಡಿಕೆ ಮಾಡಿದೆ. ಸಂಘದ ಬಳಿ ರೂ. 24 ಕೋಟಿ ನಿಧಿ ಇದೆ. ಮುಂದಿನ ವರ್ಷ ವ್ಯವಹಾರವನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪೇಟೆ ವೆಂಕಟರಮಣ ದೇವಸ್ಥಾನದ ಭಜನಾ ಸಪ್ತಾಹ ಕಾರ್ಯಕ್ರಮ ನಡೆಯಿತು. ಗುರುಕೃಪಾ ಮಹಿಳಾ ಮಂಡಳಿ ಅಧ್ಯಕ್ಷೆ ಹಾಲಾಡಿ ಲಕ್ಷ್ಮೀದೇವಿ ವಾಸುದೇವ್ ಕಾಮತ್‌ರವರ ನೇತೃತ್ವದಲ್ಲಿ ಭಜನಾ ಕಾರ್ಯಕ್ರಮ ಹಾಗೂ ದೀಪದ ಸುತ್ತಾ ಕುಣಿತ ಭಜನೆ ನಡೆಯಿತು

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಮತ್ತು ಉನ್ನತ ವ್ಯಾಸಂಗ ಮಾಡುತ್ತಿರುವ ಶೇ.40 ಮತ್ತು ಅದಕ್ಕಿಂತ ಹೆಚ್ಚಿನ ದೃಷ್ಟಿದೋಷವುಳ್ಳ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಡಿಸೆಂಬರ್ 31ರ ಒಳಗೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾಧಿಕಾರಿ ಕಛೇರಿ ಸಂಕೀರ್ಣ, ರಜತಾದ್ರಿ, ಮಣಿಪಾಲ ಇವರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ದೂರವಾಣಿ ಸಂಖ್ಯೆ: 0820-2574810/811 ನ್ನು ಸಂಪರ್ಕಿಸುವಂತೆ ಜಿಲ್ಲಾ ವಿಕಲಚೇತನರ ಸಬಲೀಕರಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದಿಂದ ಸಕಾಲ ಸಂಬಂಧಿತ ಸೇವೆಯಾದ ವಿಕಲಚೇತನರ ರಿಯಾಯಿತಿ ಬಸ್ಸುಪಾಸುನ್ನು ಸೇವಾಸಿಂಧು ಪೋರ್ಟಲ್ ಮುಖಾಂತರ ನಿರ್ವಹಿಸಲಾಗುತ್ತದೆ. ವಿಕಲಚೇತನರ ಪ್ರಯಾಣಿಕರಿಗೆ ತಮ್ಮ ವಾಸಸ್ಥಳದಿಂದ 100 ಕಿ.ಮೀ ವ್ಯಾಪ್ತಿಯಲ್ಲಿ ಪ್ರಯಾಣಿಸಲು ರಿಯಾಯಿತಿ ದರದಲ್ಲಿ ಬಸ್ಸು ಪಾಸುಗಳನ್ನು ವಿತರಿಸಿದ್ದು, 2020 ನೇ ಸಾಲಿನಲ್ಲಿ ವಿತರಿಸಿರುವ ಸದ್ರಿ ರಿಯಾಯಿತಿ ಬಸ್ಸು ಪಾಸುಗಳ ಅವಧಿಯು ಡಿಸೆಂಬರ್ 31 ಕ್ಕೆ ಮುಕ್ತಾಯಗೊಳ್ಳಲಿದ್ದು, 2021 ನೇ ಸಾಲಿಗಾಗಿ ಬಸ್ಸು ಪಾಸುಗಳನ್ನು ಜನವರಿ 15 ರಿಂದ ನವೀಕರಿಸಲು ಕ್ರಮಕೈಗೊಂಡು ಹೊಸ ಪಾಸುಗಳನ್ನು ನೀಡಲಾಗುತ್ತದೆ. ವಿಕಲಚೇತನರ ರಿಯಾಯಿತಿ ಬಸ್ಸು ಪಾಸುಗಳನ್ನು ಫಲಾನುಭವಿಗಳು ನವೀಕರಿಸಿಕೊಳ್ಳಲು ಅನುಕೂಲವಾಗುವಂತೆ ಸಾಕಷ್ಟು ಕಾಲಮಿತಿ ನೀಡುವ ಉದ್ದೇಶದಿಂದ 2020 ನೇ ಸಾಲಿನಲ್ಲಿ ವಿತರಿಸಿದ ಪಾಸುಗಳನ್ನು ಫೆಬ್ರವರಿ 28 ರವರೆಗೆ ಮಾನ್ಯ ಮಾಡಲಾಗುವುದು. ವಿಕಲಚೇತನರ ರಿಯಾಯಿತಿ ಪಾಸುಗಳನ್ನು ಪಡೆಯಲು ಸೇವಾಸಿಂಧು ಪೋರ್ಟಲ್https://serviceonline.gov.in/karnataka/ ನಲ್ಲಿ ಅರ್ಜಿ ಸಲ್ಲಿಸುವಂತೆ ಮಂಗಳೂರು ಕ.ರಾ.ರ.ಸಾ.ಸಂ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಪ್ರಸ್ತುತ ಸಾಲಿನ ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಆದರೆ ಈವರೆಗೆ ಬೆಳೆ ಸಮೀಕ್ಷೆ ಕಾರ್ಯದಲ್ಲಿ ರೈತರ ಪಾಲ್ಗೊಳ್ಳುವಿಕೆ ತೀರಾ ಕಡಿಮೆಯಾಗಿರುತ್ತದೆ. ಆದುದರಿಂದ ರೈತರು ಸ್ವತಃ ಬೆಳೆ ಸಮೀಕ್ಷೆಯನ್ನು ಕೈಗೊಳ್ಳುವ ಅವಧಿಯನ್ನು ಡಿಸೆಂಬರ್ 31 ರವರೆಗೆ ವಿಸ್ತರಿಸಲಾಗಿದ್ದು, ರೈತರು ಗೂಗಲ್ ಪ್ಲೇಸ್ಟೋರ್‌ನಿಂದ ಅಥವಾ https://play.google.com/store/apps/details?%20id=com.csk.RabiTPKfarmer.cropsurvey ಲಿಂಕ್ ಬಳಸಿ, ಹಿಂಗಾರು ರೈತರ ಬೆಳೆ ಸಮೀಕ್ಷೆ 2020-21 ಆ್ಯಪ್‌ನ್ನು ಡೌನ್‌ಲೋಡ್ ಮಾಡಿ, ಆರ್ಥಿಕ ವರ್ಷ ಹಾಗೂ ಋತುವನ್ನು ದಾಖಲಿಸಬೇಕು. ನಂತರ ಆಧಾರ್ ಕ್ಯೂಆರ್ ಕೋಡ್‌ನ್ನು ಸ್ಕಾನ್‍ ಮಾಡಿ ಮೊಬೈಲ್ ಸಂಖ್ಯೆ ನಮೂದಿಸಿ ಸಕ್ರಿಯಗೊಳಿಸುವುದರಿಂದ ಮೊಬೈಲ್ ಸಂಖ್ಯೆಗೆ ಓ.ಟಿ.ಪಿ ಬರಲಿದ್ದು, ಓ.ಟಿ.ಪಿ ಯನ್ನು ದಾಖಲಿಸಿ ಸಲ್ಲಿಸಬೇಕು. ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್, ಹಿಸ್ಸಾ, ಮಾಲೀಕನ ಹೆಸರು ಆಯ್ಕೆ ಮಾಡಿ ಕ್ಷೇತ್ರವನ್ನು ನಮೂದಿಸಿ, ಸರ್ವೆ ನಂಬರ್‌ಗಳಡಿ ರೇಖೆಯೊಳಗೆ ನಿಂತು ವಿವರವನ್ನು ದಾಖಲಿಸಿ ಫೋಟೋ ತೆಗೆದು ಮಾಹಿತಿಯನ್ನು ಅಪ್‌ಲೋಡ್ ಮಾಡಬೇಕು. ಬೆಳೆ ಸಮೀಕ್ಷೆ ಮಾಹಿತಿಯನ್ನು ಪೃಕೃತಿ ವಿಕೋಪಗಳ…

Read More