ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಪ್ರಸ್ತುತ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಪರಿಶಿಷ್ಟ ವರ್ಗದ ಕಾನೂನು ಪದವೀಧರರು ಹಿರಿಯ ವಕೀಲರ ಬಳಿ ತರಬೇತಿ ಪಡೆಯುವ ಅವಧಿಯಲ್ಲಿ ಶಿಷ್ಯವೇತನ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಏಪ್ರಿಲ್ 30 ಕೊನೆಯ ದಿನವಾಗಿದ್ದು, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್ಸೈಟ್ http://www.sw.kar.nic/in , ಆಯಾ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಅಥವಾ ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ ರಜತಾದ್ರಿ, ಮಣಿಪಾಲ ದೂ. ಸಂಖ್ಯೆ: 0820-2574814 ಅನ್ನು ಸಂಪರ್ಕಿಸುವಂತೆ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕು ಸರ್ಕಾರಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್ 19 ರೋಗಿಗಳಿಗೆ ಮಾತ್ರ ಮೀಸಲಿಟ್ಟು, ಏಕಾಏಕಿಯಾಗಿ ಆಸ್ಪತ್ರೆಯ ಹೊರರೋಗಿ ಹಾಗೂ ಒಳರೋಗಿ ವಿಭಾಗವನ್ನು ಉಡುಪಿ ಜಿಲ್ಲಾಸ್ಪತ್ರಗೆ ಸ್ಥಳಾಂತರಿಸಿರುವುದು ಖಂಡನೀಯ ಹಾಗೂ ಜನವಿರೋಧಿ ಕ್ರಮವಾಗಿದ್ದು ಈ ನಿರ್ಧಾರದ ಹಿಂದೆ ಸ್ಥಳೀಯ ಖಾಸಗಿ ಆಸ್ಪತ್ರೆಯನ್ನು ಅವಲಂಬಿಸುವಂತೆ ಮಾಡುವ ಹುನ್ನಾರ ಅಡಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ಆರೋಪಿಸಿದ್ದಾರೆ. ಈ ಬಗ್ಗೆ ಉಡುಪಿ ಜಿಲ್ಲಾಧಿಕಾರಿಗಳಿಗೆ ಎ.28ರಂದು ಎರಡನೇ ಭಾರಿಗೆ ವಿವರವಾದ ಪತ್ರ ಬರೆದಿರುವ ಅವರು ಈ ಜನವಿರೋಧಿ ಕ್ರಮವು ಹೀಗೆಯೇ ಮುಂದುವರಿದರೆ ಅದರ ವಿರುದ್ದ ಜನಭಿಪ್ರಾಯ ಮೂಡಿಸುವುದರೊಂದಿಗೆ ಸೂಕ್ತ ವೇದಿಕೆಯಲ್ಲಿ ನಿರಂತರವಾಗಿ ಪ್ರತಿಭಟನೆ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ. ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ 30,444 ಜನಸಂಖ್ಯೆಯಿದ್ದು, ಪುರಸಭೆಯನ್ನು ಹೊರತುಪಡಿಸಿ ಕುಂದಾಪುರ ತಾಲೂಕಿನ ಇತರೆ ಪ್ರದೇಶಗಳು 2,23,296 ಜನಸಂಖ್ಯೆಯಿದೆ. ಪುರಸಭೆ ಸೇರಿದಂತೆ ಆಸುಪಾಸಿನ ಗ್ರಾಮಗಳ ಬಡ ಹಿಂದುಳಿದ ಜನರು ತಮ್ಮ ಚಿಕಿತ್ಸೆಗಾಗಿ ಕುಂದಾಪುರ ತಾಲೂಕು ಆಸ್ಪತ್ರೆಯನ್ನು ಆಶ್ರಯಿಸಿರುತ್ತಾರೆ ಹಾಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ರಾಜ್ಯದಲ್ಲಿ ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೆ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಏಪ್ರಿಲ್ 27 ರ ರಾತ್ರಿ 9 ಗಂಟೆಯಿದ ಮೇ 12 ರ ಬೆಳಗ್ಗೆ 6 ಘಂಟೆಯವರೆಗೆ ಲಾಕ್ ಡೌನ್ ಅನ್ನು ಘೋಷಿಸಿರುತ್ತದೆ. ಏ. 26 ರಂದು ಮುಖ್ಯ ಕಾರ್ಯದರ್ಶಿಗಳು ಹೊರಡಿಸಿರುವ ಮಾರ್ಗಸೂಚಿಯಂತೆ ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ಅಗತ್ಯ ವಸ್ತುಗಳಾದ ಹೂ, ಹಣ್ಣು ಮತ್ತು ತರಕಾರಿಗಳ ಕೊಯ್ಲು, ವಿಂಗಡಣೆ, ಮಾರಾಟ ಹಾಗೂ ಸಾಗಾಣಿಕೆಯನ್ನು ಕೈಗೊಳ್ಳಬಹುದಾಗಿರುತ್ತದೆ. ಈ ಕುರಿತು ಜಿಲ್ಲೆಯ ತೋಟಗಾರಿಕೆ ಬೆಳೆಗಾರ ರೈತರಿಗೆ ಯಾವುದೇ ತೊಂದರೆಯಾದಲ್ಲಿ ಜಿಲ್ಲೆಯ ರೈತರು ಸಹಾಯವಾಣಿ ಸಂಖ್ಯೆ: 8431610820 ಅನ್ನು ಸಂಪರ್ಕಿಸುವಂತೆ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮರವಂತೆ ಕರಾವಳಿಯ ಕೆ. ಎಂ. ಜನಾರ್ದನ ಖಾರ್ವಿ ಅವರ ಮನೆಯ ಬಳಿ ಬುಧವಾರ ಸಮುದ್ರದ ಅಬ್ಬರದ ಅಲೆಗಳು ದಂಡೆಗೆ ಅಪ್ಪಳಿಸುತ್ತಿದ್ದು, ಪರಿಣಾಮವಾಗಿ ಸುಮಾರು 350 ಮೀಟರ್ ಉದ್ದ ಪ್ರದೇಶಲ್ಲಿ ಕಡಲ್ಕೊರೆತ ನಡೆದಿದೆ. ಮರವಂತೆಯಲ್ಲಿ ಅರ್ಧದಲ್ಲೇ ಸ್ಥಗಿತವಾಗಿರುವ ಮೀನುಗಾರಿಕಾ ಹೊರಬಂದರಿನ ಉತ್ತರ ತಡೆಗೋಡೆಯ ಉತ್ತರಕ್ಕಿರುವ ಈ ಪ್ರದೇಶದಲ್ಲಿ ಹಿಂದಿನ ಮಳೆಗಾಲದಲ್ಲಿ ಆರಂಭವಾದ ಕೊರೆತ ಮಳೆಗಾಲದ ಬಳಿಕವೂ ಮರುಕಳಿಸುತ್ತಲೇ ಇದೆ. ಸಾಮಾನ್ಯವಾಗಿ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಗಳಲ್ಲಿ ಕೆಲವೆಡೆ ಸಮುದ್ರ ಪ್ರಕ್ಷುಬ್ಧಗೊಂಡು, ಅಲೆಗಳ ರಭಸ ಹೆಚ್ಚಿ, ತೀರದ ಮೇಲೆ ದಾಳಿ ನಡೆಸುತ್ತವೆ. ಮಂಗಳವಾರ ಹುಣ್ಣಿಮೆ ಇದ್ದುದರಿಂದ ಬುಧವಾರ ಅದರ ಪ್ರಭಾವ ಕಂಡುಬಂದಿದೆ. ಇಲ್ಲಿ ಕೆಲವು ತೆಂಗಿನ ಮರಗಳು ಉರುಳಿವೆ. ಹಲವು ಮರಗಳ ಬುಡದ ಮಣ್ಣು ಅಲೆಗಳಿಗೆ ಸಿಲುಕಿ ನಶಿಸುತ್ತಿರುವುದರಿಂದ ಸಮುದ್ರದ ಅಬ್ಬರ ಇನ್ನೂ ಒಂದೆರಡು ದಿನ ಮುಂದುವರಿದರೆ ಹತ್ತಾರು ಮರಗಳು ಉರುಳಲಿವೆ. ಸನಿಹದಲ್ಲೇ ಹಾದು ಹೋಗುವ ಕರಾವಳಿ ಮಾರ್ಗವೂ ಅಪಾಯಕ್ಕೆ ಸಿಲುಕಲಿದೆ. ಮಾರ್ಗದ ಪೂರ್ವ ದಿಕ್ಕಿನಲ್ಲಿ ಸುಮಾರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಮಂಗಳವಾರ 644 ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಉಡುಪಿ, ಬ್ರಹ್ಮಾವರ, ಕಾಪು ತಾಲೂಕಿನ 332, ಕುಂದಾಪುರ, ಬೈಂದೂರು ತಾಲೂಕಿನ 249, ಕಾರ್ಕಳ, ಹೆಬ್ರಿ ತಾಲೂಕಿನ 76 ಮಂದಿಗೆ ಹಾಗೂ ಹೊರ ಜಿಲ್ಲೆಯಿಂದ ಬಂದ 7 ಮಂದಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಒಟ್ಟು 664 ಪ್ರಕರಣಗಳಲ್ಲಿ 378 ಸಿಂಟಮಿಕ್ ಹಾಗೂ 286 ಅಸಿಂಟಮಿಕ್ ಪ್ರಕರಣಗಳಾಗಿವೆ. ಈ ಪೈಕಿ 44 ಮಂದಿ ಕೋವಿಡ್ ಕೇರ್ ಸೆಂಟರ್, ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಹೆಲ್ತ್ ಆಸ್ಪತ್ರೆಗೆ ದಾಖಲಾಗಿದ್ದರೆ 620 ಮಂದಿ ಹೋಮ್ ಐಸೊಲೇಷನ್ ಆಗಿದ್ದಾರೆ. ಜಿಲ್ಲೆಯಲ್ಲಿ ಇಂದು ಒಟ್ಟು 3549 ಮಂದಿಯನ್ನು ಪರೀಕ್ಷಿಸಲಾಗಿದೆ. ಒಟ್ಟು 1892 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 326 ಮಂದಿಯನ್ನು ಇಂದು ಡಿಸ್ಚಾರ್ಜ್ ಮಾಡಲಾಗಿದೆ. ಇದನ್ನೂ ಓದಿ ► ವಾರದಿಂದ ನಾಪತ್ತೆಯಾಗಿದ್ದ ಯಕ್ಷಗಾನ ಕಲಾವಿದ ಉದಯ ಹೆಗಡೆ ಬೆಂಗಳೂರಿನಲ್ಲಿ ಪತ್ತೆ – https://kundapraa.com/?p=47747 .
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಪೆರ್ಡೂರು ಮೇಳದ ಖ್ಯಾತ ಯಕ್ಷಗಾನ ಕಲಾವಿದ, ಮತ್ಯಾಡಿ ಗ್ರಾಮದ ಗುಡ್ಡೆಯಂಗಡಿ ಪ್ರಧಾನನಗರ ನಿವಾಸಿ ಉದಯ ಹೆಗಡೆ ಕಡಬಾಳ (37) ಅವರು ಬೆಂಗಳೂರಿನಲ್ಲಿ ಪತ್ತೆಯಾಗಿರುವುದು ತಿಳಿದುಬಂದಿದೆ. ಅವರು ನಾಪತ್ತೆಯಾಗಿರುವ ಬಗ್ಗೆ ಇಂದು ದೂರು ದಾಖಲಾಗಿತ್ತು. ಯಕ್ಷಗಾನ ಕಲಾವಿದೆಯಾದ ಅಶ್ವಿನಿ ಹೆಗಡೆ ನಾಲ್ಕು ವರ್ಷದ ಹಿಂದೆ ಕಲಾವಿದ ಉದಯ ಹೆಗಡೆ ಅವರನ್ನು ಮದುವೆಯಾಗಿದ್ದರು. ಏ.21ರ ಸಂಜೆ 6 ಗಂಟೆಗೆ ಉದಯ ಹೆಗಡೆ ತಮ್ಮ ಕಾರಿನಲ್ಲಿ ಮನೆಯಿಂದ ಹೋದವರು ಮತ್ತೆ ಹಿಂತಿರುಗಿಲ್ಲ. ಮೊಬೈಲ್’ಗೆ ಕರೆ ಮಾಡಿದಾಗ ಸಂಪರ್ಕ ಸಾಧ್ಯವಾಗಿಲ್ಲ. ಸಂಬಂಧಿಕರು ಹಾಗೂ ಪತಿಯ ಸ್ನೇಹಿತರಲ್ಲಿ ವಿಚಾರಿಸಿದರೂ ಪತ್ತೆಯಾಗಿಲ್ಲ. ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಮನೆಗೆ ಹಿಂತಿರುಗದೆ ನಾಪತ್ತೆಯಾಗಿರುವ ಬಗ್ಗೆ ಪತ್ನಿ ಅಶ್ವಿನಿ ಹೆಗಡೆ ದೂರು ದಾಖಲಿಸಿದ್ದರು. ಒಂದು ವಾರಗಳ ಕಾಲ ಯಾರ ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗಿರುವ ಕಾರಣ ತನಿಕೆಯಿಂದಲಷ್ಟೇ ತಿಳಿದುಬರಬೇಕಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ ಗಂಗೊಳ್ಳಿ ಗ್ರಾಮ ಪಂಚಾಯತ್ ವತಿಯಿಂದ ಉಚಿತ ಮಾಸ್ಕ್ ಮತ್ತು ಸ್ಯಾನಿಟೈಸರ್ ಬುಧವಾರ ವಿತರಿಸಲಾಯಿತು. ಗಂಗೊಳ್ಳಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಪಿಡಿಒ ಉಮಾಶಂಕರ್ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಿದರು. ಗ್ರಾಪಂ ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: 12 ಸಂಖ್ಯಾ ಬಲದ ಕೋಡಿ ಗ್ರಾಮ ಪಂಚಾಯತ್ನಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೂ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬಿ ಗೂ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆ ಆಗದ ಕಾರಣ ಪ್ರಭಾಕರ ಮೆಂಡನ್ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವರು ಸತತ 4ನೇ ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದು ಈ ಹಿಂದೆ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಅನುಭವ ಇದ್ದು, ಇದೀಗ ಅಧ್ಯಕ್ಷರಾಗಿ, ಗ್ರಾಮಾಭಿವೃದ್ಧಿಗೆ ಶ್ರಮಿಸುವ ಇವರ ಮನೋಭಿಲಾಷೆಗೆ ಬೆಂಬಲ ಸಿಕ್ಕಂತಾಗಿದೆ. ಡಾ. ಅರುಣ್ ಕುಮಾರ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. 12 ಮಂದಿ ಸದಸ್ಯ ಬಲ ಹೊಂದಿರುವ ಕೋಡಿ ಪಂಚಾಯತ್ನಲ್ಲಿ ಆಂಥೋನಿ ಒಬ್ಬರೇ ಕಾಂಗ್ರೆಸ್ ಬೆಂಬಲಿತ ರಾಗಿ ಜಯಗಳಿಸಿದ್ದರು. ಉಳಿದೆಲ್ಲರೂ ಬಿಜೆಪಿ ಬೆಂಬಲಿತ ಸದಸ್ಯರೆ ಆಯ್ಕೆಯಾಗಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ವರ್ಗ ಬಿ ಇಂದ ಆಂಥೋನಿ ಡಿ ಸೋಜ ಒಬ್ಬರೇ ಅರ್ಹರಾಗಿದ್ದರೂ ಕಾಂಗ್ರೆಸ್ ಬೆಂಬಲಿತ ಏಕೈಕ ಪ್ರತಿನಿಧಿಯಾದ್ದರಿಂದ ಸೂಚಕರಾಗಿ ಬೆಂಬಲಿಸುವರಿಲ್ಲದೆ ಆಯ್ಕೆ ಪ್ರಕ್ರಿಯೆಗೆ ಹಿನ್ನಡೆಯಾಗಿದೆ. ಹೀಗಾಗಿ ಉಪಾಧ್ಯಕ್ಷ ಸ್ಥಾನಕ್ಕೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಹಿಂಗಾರು ಋತುವಿನಲ್ಲಿ ರೈತರು ಬೆಳೆದಿರುವ ಭತ್ತ ಸಂಗ್ರಹಣೆಗೆ ಈಗಾಗಲೇ ಕೃಷಿ ಇಲಾಖೆಯಿಂದ ಜಾರಿಗೊಳಿಸಿರುವ ಫ್ರೂಟ್ಸ್ ತಂತ್ರಾಂಶದಿಂದ ರೈತರ ಮಾಹಿತಿಯನ್ನು ಪಡೆದು ರೈತರಿಂದ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ ಸರ್ಕಾರವು ನಿಗಧಿಪಡಿಸಿರುವ 0.12 ಲಕ್ಷ ಮೆ.ಟನ್ ಭತ್ತವನ್ನು ಸಾಮಾನ್ಯ ಭತ್ತ ಪ್ರತಿ ಕ್ವಿಂಟಾಲ್ಗೆ ರೂ. 1868 ರ ದರದಲ್ಲಿ ಹಾಗೂ ಗ್ರೇಡ್ ಎ ಭತ್ತವನ್ನು ಪ್ರತಿ ಕ್ವಿಂಟಾಲ್ಗೆ ರೂ. 1888 ರ ದರದಲ್ಲಿ ಹಾಗೂ ಜ್ಯೋತಿ ಭತ್ತವನ್ನು ಪ್ರತಿ ಕ್ವಿಂಟಾಲ್ಗೆ ರೂ. 1868 ರ ದರದಲ್ಲಿ ಖರೀದಿಸಲು ಅನುಮತಿ ನೀಡಲಾಗಿದೆ. ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ರೈತರಿಂದ ಪ್ರತಿ ಎಕರೆಗೆ 16 ಕ್ವಿಂಟಾಲ್ನಂತೆ ಗರಿಷ್ಟ 40 ಕ್ಷಿಂಟಾಲ್ ಭತ್ತವನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ರೈತರಿಂದ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಭತ್ತವನ್ನು ಖರೀದಿಸಲು ಜಿಲ್ಲೆಗೆ ಕರ್ನಾಟಕ ಆಹಾರ, ನಾಗರಿಕ ಸರಬರಾಜು ನಿಗಮ ನಿಯಮಿತ ರವರನ್ನು ಸಂಗ್ರಹಣಾ ಏಜೆನ್ಸಿಯನ್ನಾಗಿ ನೇಮಿಸಿದ್ದು,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಉಪ್ಪುಂದದಲ್ಲಿರುವ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಪ್ರಧಾನ ಕಛೇರಿಯ ಕೆಲಸದ ವೇಳೆಯನ್ನು ಕೋವಿಡ್ ಲಾಕ್ಡೌನ್ ಅವಧಿಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಬದಲಾವಣೆ ಮಾಡಲಾಗಿದೆ. ಮೇ.12ರ ತನಕ ಬೆಳಿಗ್ಗೆ 7 ಗಂಟೆಯಿಂದಲೇ ಪ್ರಧಾನ ಕಛೇರಿ ತೆರೆಯಲಿದ್ದು ಸಂಸ್ಥೆಯ ಸದಸ್ಯರು ಹಾಗೂ ಗ್ರಾಹಕರು ಇದರ ಉಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
