ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಟ್ಕಳ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಟ್ಯಾಂಕರ್ನ ಮುಂಭಾಗದ ಟಯರ್ ಸ್ಪೋಟಗೊಂಡು ಪಕ್ಕದ ರಸ್ತೆಗೆ ಪಲ್ಟಿಯಾದ ಘಟನೆ ಹೆಮ್ಮಾಡಿಯಲ್ಲಿ ನಡೆದಿದೆ. ಘಟನೆಯಲ್ಲಿ ಟ್ಯಾಂಕರ್ ಚಾಲಕ ಹಾಗೂ ಕ್ಲೀನರ್ಗೆ ಸಣ್ಣಪುಟ್ಟ ಗಾಯಗಳಾಗಿದೆ. ವೇಗವಾಗಿ ಬರುತ್ತಿದ್ದ ಟ್ಯಾಂಕರ್ ಮುಂಭಾಗದ ಟಯರ್ ಸ್ಪೋಟಗೊಂಡು ಹೆಮ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಮಧ್ಯದಲ್ಲಿರುವ ಬೀದಿದೀಪಕ್ಕೆ ಡಿಕ್ಕಿಯಾಗಿ ಪಕ್ಕದ ರಸ್ತೆಗೆ ಅಡ್ಡಲಾಗಿ ಮಗುಚಿ ಬಿದ್ದಿದೆ. ಗಾಯಗೊಂಡ ಚಾಲಕನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರ ಟ್ರಾಫಿಕ್ ಪೊಲೀಸರು ಸ್ಥಳಕ್ಕಾಗಮಿಸಿ ಸಂಚಾರಕ್ಕೆ ಅನುವುಮಾಡಿಕೊಟ್ಟರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಸಾಮಾನ್ಯ, ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ನೊಂದಾಯಿತ ಸಾಂಸ್ಕೃತಿಕ ಸಂಘ ಸಂಸ್ಥೆಗಳು ಏರ್ಪಡಿಸುವ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ, ಅಸಂಘಟಿತ ತಂಡಗಳು / ಏಕವ್ಯಕ್ತಿ ಕಲಾವಿದರಿಗೆ ವಾದ್ಯ ಪರಿಕರ / ವೇಷಭೂಷಣ ಖರೀದಿಗೆ ಹಾಗೂ ಚಿತ್ರಕಲೆ ಮತ್ತು ಶಿಲ್ಪಕಲೆಗಳ ಏಕವ್ಯಕ್ತಿ / ತಂಡದ ಕಲಾವಿದರಿಗೆ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಲು ಧನಸಹಾಯ ನೀಡಲು Sevasindhu.karnataka.gov.in ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 27 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-22230282 / 080-22279954 ಸಂಪರ್ಕಿಸುವಂತೆ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರ ಪ್ರಕಟನೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿ ಸ್ವಚ್ಚ ಭಾರತ ಫ್ರೆಂಡ್ಸ್ ಸದಸ್ಯ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಹಳೆ ವಿದ್ಯಾರ್ಥಿ ಮಣಿಪಾಲ ಆರೋಗ್ಯ ಕಾರ್ಡ ಅಧಿಕೃತ ಪ್ರತಿನಿಧಿ ರಕ್ಷಿತ ಕುಮಾರ ವಂಡ್ಸೆಯವರು ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರವರ್ತಿತ ನಾರಾಯಣ ವಿಶೇಷ ಮಕ್ಕಳ ಶಾಲೆಯ ಸುಮಾರು 37 ಮಕ್ಕಳಿಗೆ ಮಣಿಪಾಲ ಆರೋಗ್ಯ ಕಾರ್ಡುಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು. ರಕ್ಷಿತ ಕುಮಾರ ಮಾತನಾಡಿ, ಮಣಿಪಾಲ ಆರೋಗ್ಯ ಕಾರ್ಡುಗಳನ್ನು ಈ ಹಿಂದೆ ಉಡುಪಿ ಸಂತೆಕಟ್ಟೆಯಲ್ಲಿರುವ ಕೃಷ್ಣಾನುಗ್ರಹ ಅರ್ಹಸಂಸ್ಥೆ ಮತ್ತು ದತ್ತು ಸ್ವೀಕಾರ ಕೇಂದ್ರದ ಮಕ್ಕಳಿಗೆ ಉಚಿತವಾಗಿ ನೀಡಲಾಗಿದೆ. ತಮ್ಮ ದುಡಿಮೆಯ ಸ್ವಲ್ಪ ಹಣವನ್ನು ಪ್ರತಿ ವರ್ಷ ಇಂತಹ ವಿಶೇಷ ಮಕ್ಕಳ ಶಾಲೆ ಸಂಸ್ಥೆಗೆ ಕೊಡುವ ಉದ್ದೇಶವಾಗಿರುತ್ತದೆ. ಎಂದು ಹೇಳಿದರು. ಈ ಸಂದರ್ಭದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಸುರೇಶ ತಲ್ಲೂರು ,ಟ್ರಸ್ಟಿ ಮನೋರಮ ತಲ್ಲೂರು, ಶಿಕ್ಷಕರು, ಪ್ರಾಂಶುಪಾಲರು, ಶಿಕ್ಷಕೇತರ ಸಿಬ್ಬಂದಿಗಳು, ಮತ್ತು ಪೋಷಕರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ, ರೈತ ವಿರೋಧಿ, ಜನ ವಿರೋಧಿ ನೀತಿಗಳ ವಿರುದ್ಧ ಕೇಂದ್ರ ಕಾರ್ಮಿಕ ಸಂಘಟನೆಗಳ ಕರೆಯಂತೆ ಬೈಂದೂರಿನ ರಾಷ್ಟ್ರೀಯ ಹೆದ್ದಾರಿ ಅಂಡರ್ ಪಾಸ್ನಲ್ಲಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆಯಿತು. ಐಕ್ಯ ಹೋರಾಟವನ್ನು ತೀವ್ರಗೊಳಿಸುವ ಮೂಲಕ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯನ್ನು ನಿರಾಕರಿಸಿ ಪ್ರತಿರೋಧಿಸಲು ಮತ್ತು ಪರಿಹಾರ ಹಾಗೂ ಪರ್ಯಾಯ ರೂಪಿಸಲು ಮುಂದಾಗಬೇಕೆಂದು ಸಿಐಟಿಯು ಮುಖಂಡ ರಾಜೀವ ಪಡುಕೋಣೆ ಮುಷ್ಕರವನ್ನು ಉದ್ದೇಶಿಸಿ ಮಾತನಾಡಿದರು. ಸಿಐಟಿಯು ಮುಖಂಡ ವೆಂಕಟೇಶ್ ಕೋಣಿ, ಸುಶೀಲ ನಾಡಾ ಸಭೆಯನ್ನುಧ್ಧೇಶಿಸಿ ಮಾತನಾಡಿದರು. ಉದಯ ಗಾಣಿಗ, ಮಂಜು ಪಡುವರಿ, ಜಯಶ್ರೀ ಪಡುವರಿ, ಅಮ್ಮಯ್ಯ ಬಿಜೂರು, ಮಾಧವ, ಶ್ರೀಧರ ಉಪ್ಪುಂದ, ನಾಗರತ್ನ ನಾಡಾ, ಸಿಂಗಾರಿ ನಾವುಂದ, ರಾಮ ಖಂಬದಕೋಣೆ ಮುಷ್ಕರದಲ್ಲಿ ಉಪಸ್ಥಿತರಿದ್ದರು. ಸಿಐಟಿಯು ಮುಖಂಡ ಗಣೇಶ್ ತೊಂಡೆಮಕ್ಕಿ ಸ್ವಾಗತಿಸಿದರು. ರೊನಾಲ್ಡ್ ರಾಜೇಶ್ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿ ಜಿಲ್ಲೆಯ ಎಂಡೋಸಲ್ಫಾನ್ ಪೀಡಿತ ಅಂಗವಿಕಲರ ಪುನವ೯ಸತಿ ಕೇಂದ್ರ ಆರಂಭಿಸಲು ನಾಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೇನಾಪುರದಲ್ಲಿ ಕಾದಿರಿಸಿದ ಐದು ಎಕ್ರೆ ಸರಕಾರಿ ಸ್ಥಳದಲ್ಲಿಎಂಡೋಸಲ್ಫಾನ್ ಅಂಗವಿಕಲರ ಪುನವ೯ಸತಿ ಕೇಂದ್ರ ಆಸ್ಪತ್ರೆ ಕಟ್ಟಡ ಕಾಮಗಾರಿಗೆ ಸರಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಗೆ ಕೂಡಲೆ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿಯವರನ್ನು, ಕನಾ೯ಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ನಿಯೋಗ ಬೇಟಿಮಾಡಿ ಒತ್ತಾಯಿಸಿತು. ಕನಾ೯ಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ(ಎನ.ಪಿ.ಆರ್.ಡಿ) ಜಿಲ್ಲಾಧ್ಯಕ್ಷ ವೆಂಕಟೇಶ್ ಕೋಣಿ, ಜಿಲ್ಲಾ ಮುಖಂಡರಾದ ಬಾಬು.ಕೆ.ದೇವಾಡಿಗ ಉಪ್ಪುಂದ, ವಿಜಯ ನಾಗೂರು ಕಿರಮಂಜೆಶ್ವರ, ಕಿಶನ್ ಪ್ರಭು ಉಪ್ಪುಂದ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕನ್ನಡ ಜಾನಪದ ಪರಿಷತ್ ಬೆಂಗಳೂರು ಮತ್ತು ಉಡುಪಿ ಜಿಲ್ಲಾ ಘಟಕ ಹಾಗೂ ಸಂವೇದನಾ ವಿಜ್ಞಾನ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು ಕಂಬದಕೋಣೆ ಸಂಯುಕ್ತ ಆಶ್ರಯದಲ್ಲಿ ಕನ್ನಡ ಜಾನಪದ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಗಣೇಶ ಗಂಗೊಳ್ಳಿ, ಜನಸಾಮಾನ್ಯರ ಬದುಕಿನ ಸಾರವೇ ಆಗಿರುವ ಜಾನಪದ ಸಾಹಿತ್ಯವನ್ನು ಉಳಿಸಿ, ಮುಂದಿನ ತಲೆಮಾರಿಗೆ ವರ್ಗಾಯಿಸುವ ಗುರುತರ ಜವಬ್ದಾರಿ ನಮ್ಮ ಮೇಲಿದೆ. ಆಯಾಯ ಕಾಲದ ಜನರ ಜೀವನ, ಆಚಾರ ವಿಚಾರ, ಸಾಹಿತ್ಯ, ಸಂಸ್ಕೃತಿಯನ್ನು ಕಟ್ಟಿ ಕೊಡುವ ಜನಪದ ಸಾಹಿತ್ಯ ಅಂದಿನ ಇತಿಹಾಸವನ್ನು ತೆರೆದಿಡುತ್ತದೆ. ತಮ್ಮೊಳಗಿನ ಬೇಗುದಿ, ಅಸಮಾಧಾನ, ಸಂತೋಷ, ಸಂಭ್ರಮವನ್ನು ಹೊರ ಹಾಕಲು ಜನಪದ ಸಾಹಿತ್ಯ ಸಾಮಾನ್ಯರಿಗೆ ಸಹಕಾರಿಯಾಗಿತ್ತು.ಎಂದರು. ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್. ಬಾಲಾಜಿಯವರ ನಿರ್ದೇಶನದಂತೆ ಯಳಜಿತದ ಜಾನಪದ ಕಲಾವಿದ ರಾಮ ಮರಾಠಿ ಹಾಗೂ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಂವೇದನಾ ಕಾಲೇಜಿನ ವಿದ್ಯಾರ್ಥಿನಿ…
ಕುಂದಾಪ್ರಡಾಟ್ ಕಾಂ ಸುದ್ದಿ. ಗಂಗೊಳ್ಳಿ: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಕನ್ನಡದ ನಾಡು ನುಡಿ ಕುರಿತಾದ ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ಉಪನ್ಯಾಸಕ ಮತ್ತು ಬರಹಗಾರ ನರೇಂದ್ರ ಎಸ್ ಗಂಗೊಳ್ಳಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಕರಾವಳಿ ಕಡಲ ಬಣ್ಣ ಬದಲಾಯಿಸುತ್ತಿದೆ. ಗಂಗೊಳ್ಳಿಯಿಂದ ಶಿರೂರೂ ಗಡಿಯ ತನಕ ಸಮುದ್ರದದಲ್ಲಿ ರಾಶಿ ರಾಶಿ ಪಾಚಿಗಳ ಮೊಗೆ, ಮೊಗೆದು ತರುತ್ತಿದೆ. ರಾತ್ರಿ ಪಾಚಿ ಮಂದಬೆಳಕಿನ ಪ್ರತಿಫಲನಕ್ಕೆ ಬೆಳಕು ಚೆಲ್ಲಿದಂತೆ ಕಂಡರೆ ಸೂರ್ಯನ ರಶ್ಮಿ ಪಾಚಿ ಹೀರಿಕೊಳ್ಳುವುದರಿಂದ ಹಸಿರು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಿದೆ. ಕಳೆದ ಮೂರ್ನಾಲ್ಕು ದಿನದಿಂದ ಗಂಗೊಳ್ಳಿ ಕಡಲ ಕಿನಾರೆ ಪಾಚಿಯಿಂದ ಬಣ್ಣ ಬದಲಾಯಿಸಿದೆ. ಈಗಾಗಲೇ ಮಂಗಳೂರು ಉಳ್ಳಾಲದಿಂದ ಕಾರವಾದ ತನಕ ಕಡಲ ತೀರದಲ್ಲಿ ನೀಲಿ ಬೆಳಕು ಅಚ್ಚರಿ ಮೂಡಿಸಿದರೆ, ಗಂಗೊಳ್ಳಿ, ಕೋಡಿ, ಪಡುವರೆ, ಶಿರೂರು ದೊಂಬೆ ಪರಿಸರದಲ್ಲಿ ರಾತ್ರಿ ನೀಲಿ ಬೆಳಕಾದರೆ, ಹಗಲು ಪಾಚಿಯದ್ದೇ ಕಾರುಬಾರು.! ಕಡಲ ವೈಪರೀತ್ಯ ಮಾನವ ನಿರ್ಮಿತವಾದರೂ ರಾತ್ರಿ, ಹಗಲು ಬದಲಾಗುವ ನೀರಿನ ಬಣ್ಣ ವೀಕ್ಷಿಸಿ ಮೂಗಿನಮೇಲೆ ಬೆರಳಿಡುತ್ತಿದ್ದಾನೆ ಮಾನವ! ಗಂಗೊಳ್ಳಿ ಲೈಟ್ ಹೌಸ್ ಮಡಿ ಸಮುದ್ರ ತೀರದಲ್ಲಿ ಸಮುದ್ರ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು, ಇಂತಾದ್ದೊಂದು ಅಚ್ಚರಿ ಗಂಗೊಳ್ಳಿಯಲ್ಲಿ ಮೊದಲ ಬಾರಿ ಗೋಚರಿಸಿದೆ. ದಿನೇ ದಿನೇ ಸಮುದ್ರ ಮಾಲೀನ್ಯದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕುಂದಾಪುರ ತಾಲೂಕು ಸಮಿತಿ ಮತ್ತು ಕುಂದಾಪುರ ಬೈಂದೂರು ಮಹಿಳಾ ಸಮಿತಿ ಆಶ್ರಯದಲ್ಲಿ ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವದಲ್ಲಿ ನಡೆದ ಭಾರತ ಸಂವಿಧಾನ ಅರ್ಪಣಾ ದಿನ ಉದ್ಘಾಟನೆ ನಡೆಯಿತು. ಉದ್ಘಾಟಿಸಿ ಮಾತನಾಡಿದ ಕುಂದಾಪುರ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೀಕರ, ಅಂಬೇಡ್ಕರ್ ಜ್ಞಾನದ ಮೇರು ಪರ್ವತವಾದರೆ, ಸಂವಿಧಾನ ಭಾರತೀಯರ ಹೃದಯ ಗ್ರಂಥವಾಗಿದೆ. ಅಂಬೇಡ್ಕರ್ ಮತ್ತು ಸಂವಿಧಾನ ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಅಂಬೇಡ್ಕರ್ ಜೀವನ ಹೋರಾಟದಿಂದ ಕೂಡಿದ್ದು, ಸಂವಿಧಾನ ಓದಿ ಅರ್ಥೈಸಿಕೊಳ್ಳುವ ಮೂಲಕ ನಮ್ಮ ಹಕ್ಕು ಮತ್ತು ಕರ್ತವ್ಯ ನಿಭಾಯಿಸಲು ಸಾಧ್ಯ ಎಂದು ಹೇಳಿದರು. ದಲಿತ ಸಂಘರ್ಷ ಸಮಿತಿ ಕುಂದಾಪುರ ಸಮಿತಿ ಅಧ್ಯಕ್ಷ ರಾಜು ಬೆಟ್ಟಿನಮನೆ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ವಕೀಲ ಮುರುಡೇಶ್ವರ ರವಿ ಕಿರಣ್ ಶ್ಯಾನುಭೋಗ್ ಪ್ರಧಾನ ಭಾಷಣ ಮಾಡಿದರು. ಸಂವಿಧಾನ ಅರ್ಪಣಾ ದಿನದ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರದಲ್ಲಿ ನಿಷ್ಠೆಯಿಂದು ಕೆಲಸ ಮಾಡಿದ ಏಳು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಟಾಕ್ ಟು ಬ್ಯಾಂಕ್ ಡಾಟ್ ಕಾಂನ ಸಹ ಸಂಸ್ಥಾಪಕಿ ಯೋಗಿತಾ ಬಾಲಿ ಅವರು ಬೆಂಗಳೂರಿನ ಲವ್ ಇಂಡಿಯಾ ರೀಜನಲ್ ಇನ್ಸಿಟ್ಯೂಟ್ ಕೊಡಮಾಡಿದ 2020ನೇ ಸಾಲಿನ ಲೀಡರ್ಶಿಪ್ & ವುಮನ್ ಎಂಪವರ್ಮೆಂಟ್ ಪ್ರಶಸ್ತಿಗೆ ಭಾಜನರಾಗಿದ್ದು, ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿದರು. ಮಿಸ್ ವೆಲ್ನೆಸ್ ಇಂಡಿಯಾ 2020ರ ಚಾಂಪಿಯನ್ ಅಟಿಟ್ಯೂಡ್ ಜಯಿಸಿದ್ದ ಯೋಗಿತಾ ಅವರು, ಉತ್ತಮ ಕ್ರೀಡಾಪಟುವಾಗಿ, ಕಲಾವಿದೆಯಾಗಿ, ಫೈನಾಶಿಯಲ್ ಎಕ್ಸ್ಪರ್ಟ್ ಆಗಿ, ಮಹಿಳಾಮಣಿಯರಿಗೆ ಪ್ರೇರಕಿಯಾಗಿ ಗುರುತಿಸಿಕೊಂಡಿದ್ದಾರೆ. ಅವರು ಬೈಂದೂರು ತಾಲೂಕಿನ ನಾವುಂದದ ಚಂದ್ರಶೇಖರ್ ಹಾಗೂ ಸಿಂಗಾರಿ ಟೀಚರ್ ಅವರ ಪುತ್ರಿಯಾಗಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
