Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಹಿರಿಯ ನಾಗರಿಕ ವೇದಿಕೆಯ ಮಾಸಿಕ ಸಭೆ ಹಾಗೂ ಸನ್ಮಾನ ಕಾಯ೯ಕ್ರಮ ಇಲ್ಲಿನ ಮಹಾಕಾಳಿ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು. ರಾಜ್ಯ ಪ್ರಶಸ್ತಿ ಪುರಸ್ಕೃತ ಎಸ್. ಜನಾರ್ದನ ಮರವಂತೆ, ಪುಂಡಲೀಕ ನಾಯಕ್ ಅವರನ್ನು ಹಿರಿಯ ನಾಗರಿಕ ವೇದಿಕೆಯಿಂದ ಸನ್ಮಾನಿಸಲಾಯಿತು. ಈ ಸಂದಭ೯ ಹಿರಿಯ ನಾಗರಿಕ ವೇದಿಕೆಯ ಗಣ್ಯರಾದ ಎಂ.ಗೋವಿಂದ, ಎ. ಶ್ರೀನಿವಾಸ್, ಸಂಜೀವ ಆಚಾಯ೯, ವಸಂತ ಹಗ್ಡೆ, ರಾಮ ಮಾಸ್ಟರ್, ಎಂ.ಎನ್ ಶೇರಿಗಾರ್, ರತ್ನ ಹೆಬ್ಬಾರ್, ಗೋವಿಂದ ಬಿಲ್ಲವ, ಕೋಣಿ ವೆಂಕಟೇಶ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತನ್ನ ಸಾತ್ವಿಕ ಹಾಗೂ ಧೀಮಂತ ವ್ಯಕ್ತಿತ್ವದ ಮೂಲಕ ಸಾಮಾಜಿಕ ಅಭಿವೃದ್ಧಿ ಯಲ್ಲಿ ತನ್ನನ್ನು ತೊಡಗಿಸಿಕೊಂಡು ಎಲ್ಲರ ಪ್ರೀತಿ, ವಿಶ್ವಾಸ ಗಳಿಸಿದ ಗೋವಿಂದ ಬಿಜೂರ್ ಅವರು ಬಗ್ಗೆ ಅವರು ಪುತ್ರಿ, ನಿವ್ರತ್ತ ಶಿಕ್ಷಕಿ ಶಶಿಕಲಾ ಬಿಜೂರ್ ಪುಸ್ತಕ ಪ್ರಕಟಿಸಿರುವುದು ಅಭಿನಂದನೀಯವಾಗಿದೆ. ಕುಂದಾಪುರದ ಕೆಲವು ಜನಪ್ರಿಯ ವ್ಯಕ್ತಿಗಳ ಬಗ್ಗೆ ಇಂದಿನ ಪೀಳಿಗೆಯವರಿಗೆ ತಿಳಿದಿಲ್ಲ. ಇಂತಹ ಪುಸ್ತಕಗಳು ಪ್ರಕಟವಾದಾಗ ಅವರ ಬಗ್ಗೆ ಅರಿವು ಮೂಡಿಸಲು ಸಾಧ್ಯವಾಗುತ್ತದೆ ಎಂದು ಜನ್ಮಶತಮಾನಂಗಳದಲ್ಲಿ ಗೋವಿಂದ ಬಿಜೂರ್ ಪುಸ್ತಕ ಬಿಡುಗಡೆ ಮಾಡುತ್ತಾ ಖ್ಯಾತ ವಕೀಲರೂ ಸಾಹಿತಿಗಳೂ ಆದ ಎ ಎಸ್.ಎನ್.ಹೆಬ್ಬಾರ್ ಹೇಳಿದರು. ಅವರು ಕುಂದಾಪುರದ ಬಿ ಆರ್ ರಾಯರ ಹಿಂದೂ ಶಾಲೆಯ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪುಸ್ತಕ ಬಿಡುಗಡೆಗೊಳಿಸಿ,ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಂದಪ್ರಭ ಸಂಪಾದಕ ಯು.ಎಸ್.ಶೆಣೈ ಮಾತನಾಡಿ ಗೋವಿಂದ ಬಿಜೂರ್ ಓರ್ವ ಅಪರೂಪದ ಸಾತ್ವಿಕ ಸ್ವಭಾವದ ಧೀಮಂತ ನಾಯಕ.ತಮ್ಮ ಸರಳತೆ,ಸಜ್ಜನಿಕೆ, ಸಮಾಜಾಭಿವ್ರೃದ್ಧಿಯ ಕಾಳಜಿಯಿಂದ ಜನಮೆಚ್ಚುಗೆ ಗಳಿಸಿದವರು.ಭಾರತೀಯ ಸಂಸ್ಕ್ರತಿ ಉಳಿಸಿ ಬೆಳೆಸುವಲ್ಲಿ ,ಕುಟುಂಬ ಸದಸ್ಯರೊಂದಿಗೆ ಅವರು ನಡೆಸಿದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಗಂಗೊಳ್ಳಿ ಇದರ ವತಿಯಿಂದ ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ನಡೆಯುತ್ತಿರುವ ೪೭ನೇ ವರ್ಷದ ಶ್ರೀ ಶಾರದೋತ್ಸವ ಸಮಾರಂಭ ಶಾರದಾ ಮೂರ್ತಿಯ ವಿಸರ್ಜನೆಯೊಂದಿಗೆ ಸಂಪನ್ನಗೊಂಡಿತು. ಶ್ರೀ ಶಾರದಾ ಮಂಟಪದ ಬಳಿಯಿಂದ ಪ್ರಾರಂಭಗೊಂಡ ಪುರಮೆರವಣಿ ಮೇಲ್‌ಗಂಗೊಳ್ಳಿ ಬಾವಿಕಟ್ಟೆ ತನಕ ಸಾಗಿ ಮುಖ್ಯರಸ್ತೆಯ ಮೂಲಕ ಬಂದರು ಪೋರ್ಟ್ ಆಫೀಸಿನ ಬಳಿ ಕೊನೆಗೊಂಡಿತು. ಬಂದರು ಪೋರ್ಟ್ ಆಫೀಸಿನ ಸಮೀಪ ಪಂಚಗಂಗಾವಳಿ ನದಿಯಲ್ಲಿ ಶ್ರೀ ಶಾರದಾ ಮೂರ್ತಿಯ ವಿಗ್ರಹವನ್ನು ಜಲಸ್ತಂಭನ ಮಾಡಲಾಯಿತು. ಪುರಮೆರವಣಿಗೆಯಲ್ಲಿ ಚಂಡೆ ವಾದನ, ಹುಲಿವೇಷ ಹಾಗೂ ಇನ್ನಿತರ ಕಲಾತಂಡಗಳು ಮೆರಗು ನೀಡಿದ್ದವು. ಪುರೋಹಿತರಾದ ಜಿ.ರಾಘವೇಂದ್ರ ನಾರಾಯಣ ಆಚಾರ್ಯ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಸಮಿತಿಯ ಗೌರವಾಧ್ಯಕ್ಷ ವೇದಮೂರ್ತಿ ಜಿ.ನಾರಾಯಣ ಆಚಾರ್ಯ, ಸಮಿತಿಯ ಅಧ್ಯಕ್ಷ ಸತೀಶ ಜಿ., ಪ್ರಧಾನ ಕಾರ್ಯದರ್ಶಿ ರವೀಂದ್ರ ಪಟೇಲ್, ಕಾರ್ಯದರ್ಶಿ ಗೋಪಾಲ ಖಾರ್ವಿ ದಾವನಮನೆ, ಮಹಿಳಾ ಮಂಡಳಿ ಅಧ್ಯಕ್ಷೆ ಅನಿತಾ ಎನ್.ಶೇಟ್, ಕಾರ್ಯದರ್ಶಿ ಸ್ವಾತಿ ಮಡಿವಾಳ, ಶ್ರೀ ಶಾರದೋತ್ಸವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಭಾರತೀಯ ಅಂಚೆ ಇಲಾಖೆ ನೀಡುವ ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿಯು ಉಡುಪಿ ಅಂಚೆ ವಿಭಾಗದ ಬೈಂದೂರು ಅಂಚೆ ಕಚೇರಿಯಲ್ಲಿ ಅಂಚೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಸುರೇಂದ್ರ ಡಿ. ಅವರಿಗೆ ಸತತ ಎರಡನೇ ಬಾರಿ ಲಭಿಸಿದೆ. ಅಂಚೆ ಇಲಾಖೆಯ ಗ್ರಾಮೀಣ ಅಂಚೆ ಜೀವ ವಿಮಾ ವಿಭಾಗದಲ್ಲಿ 2020-21ನೇ ಸಾಲಿನಲ್ಲಿ ರಾಷ್ಟ್ರ ಮಟ್ಟದಲ್ಲಿ ಅತಿ ಹೆಚ್ಚಿನ ವಹಿವಾಟು ಮಾಡಿದ ಹಿನ್ನೆಲೆಯಲ್ಲಿ ಭಾರತೀಯ ಅಂಚೆ ಇಲಾಖೆ ಇತ್ತೀಚೆಗೆ ಅವರನ್ನು ಬೆಂಗಳೂರಿನ ಕರ್ನಾಟಕ ಪೋಸ್ಟಲ್ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಕಛೇರಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅವರು 13 ವರ್ಷಗಳ ಸೇವಾ ಅವಧಿಯಲ್ಲಿ ಒಂಬತ್ತು ಬಾರಿ ವಿಭಾಗೀಯ ಮಟ್ಟದ, ನಾಲ್ಕು ಬಾರಿ ರಾಜ್ಯ ಮಟ್ಟದ ಮತ್ತು ಇದೇ ವರ್ಷ ಫೆಬ್ರವರಿಯಲ್ಲಿ 2019-20ನೇ ಸಾಲಿನ ರಾಷ್ಟ್ರಪ್ರಶಸ್ತಿಯನ್ನು ಇವರು ಪಡೆದಿದ್ದಾರೆ. ನವದೆಹಲಿಯ ಡಾಕ್ ಭವನದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನಿರೂಪಿಸಲ್ಪಟ್ಟ ಸಮಾರಂಭದಲ್ಲಿ ಕರ್ನಾಟಕ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಶಾರದಾ ಸಂಪತ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜಡ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘದ ಎಮ್ಎಸ್ಸಿ ಘಟಕ ಯೋಜನೆಯಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಗೋದಾಮು ಕಟ್ಟಡದ ಕಾಮಗಾರಿಗೆ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಅರುಣ್ ಕುಮಾರ್ ಎಸ್ ಬೀಸಿನಪಾರೆಯಲ್ಲಿ ಶಿಲನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ರಾಜು ಪೂಜಾರಿ, ಸಹಕಾರಿ ಸಂಘಗಳ ವಲಯ ಮೇಲ್ವಿಚಾರಕರಾದ ಶಿವರಾಮ ಪೂಜಾರಿ, ಜಡ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ, ಸಂಘದ ಉಪಾಧ್ಯಕ್ಷರಾದ ದೇವದಾಸ್ ವಿ.ಜೆ. ಜಡ್ಕಲ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಸತ್ಯನಾರಾಯಣ ಅಡಿಗ, ಮುದುರೂ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರು ಹಾಗೂ ಗುತ್ತಿದಾರರಾದ ನಕ್ಷತ್ರ ಬೋವಿ, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವೆಂಕರಮಣ ಶರ್ಮ. ಸಂಘದ ನಿರ್ದೇಶಕರುಗಳಾದ ಸುರೇಂದ್ರ ನಾಯ್ಕ್, ಮನೋಜ್ ಪಿ.ಜೆ, ಜೋಶಿ ಪಿಪಿ. ಜೋಸೆಫ್ ಕೆ.ಎಮ್ ವಿನೋದ್ ಜೋರ್ಜ್ ನಾರಾಯಣ ಶೆಟ್ಟಿ. ಮಹಾಬಲ ಪೂಜಾರಿ. ಗುರುರಾಜ್ ಪೂಜಾರಿ. ಮುತ್ತ. ರೊಸಮ್ಮ, ಸವಿತಾ ಶೆಟ್ಟಿ ಹಾಗೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸಿಪಿಐ(ಎಂ) ಪಕ್ಷದ ಅಖಿಲ ಭಾರತ ಮಹಾ ಅಧಿವೇಶನ ಕೇರಳ ರಾಜ್ಯದ ಕಣ್ಣೂರು ನಗರದಲ್ಲಿ ಜರಗಲಿರುವುದರ ಪೂವ೯ಭಾವಿಯಾಗಿ ದೇಶದ ಎಲ್ಲಾ ರಾಜ್ಯ, ಜಿಲ್ಲೆ, ತಾಲೂಕು/ವಲಯ ಹಾಗೂ ಪ್ರಾಥಮಿಕ ಶಾಖಾ ಸಮ್ಮೇಳನಗಳು ನಡೆಯುವ ಹಂತವಾಗಿ ಬೈಂದೂರು ವಲಯ ವ್ಯಾಪ್ತಿಯ ಸಿಪಿಐ(ಎಂ) ಪಕ್ಷದ ಅಕ್ಷರ ದಾಸೋಹ ನೌಕರರ ಶಾಖಾ ಸಮ್ಮೇಳನವು ಸಿಪಿಐ(ಎಂ) ಕಚೇರಿಯಲ್ಲಿ ನಡೆಯಿತು. ಸಿಪಿಐ(ಎಂ) ಉಡುಪಿ ಜಿಲ್ಲಾ ಕಾಯ೯ದಶಿ೯ಮಂಡಳಿ ಸದಸ್ಯ ವೆಂಕಟೇಶ್ ಕೋಣಿ ಸಮ್ಮೆಳನ ಉದ್ಘಾಟಿಸಿ ಮಾತನಾಡಿ, ದುಡಿಯುವ ವಗ೯ವಾದ ರೈತ,ಕಾಮಿ೯ಕರ ಪಕ್ಷಪಾತಿ ಸಿಪಿಐ(ಎಂ) ಪಕ್ಷವನ್ನು ತಳಮಟ್ಟ ದಿಂದ ಕಟ್ಟಲು ಶೋಷಿತ ವಗ೯ದ ದುಡಿಯುವ ಜನರ ಬಲಿಷ್ಟ ಹೋರಾಟ, ಚಳುವಳಿಯನ್ನು ಸಂಘಟಿಸಲು ನಾವೆಲ್ಲರೂ ಮುಂದಾಗಬೇಕು ಎಂದು ಹೇಳಿದರು. ಪಕ್ಷದ ಬೈಂದೂರು ವಲಯ ಕಾಯ೯ದಶಿ೯ ಸುರೇಶ್ ಕಲ್ಲಾಗರ್ ಮಾತನಾಡಿ ಗುಲ್ವಾಡಿಯಲ್ಲಿ ಜರಗುವ ಸಿಪಿಐ(ಎಂ) ಪಕ್ಷದ ಬೈಂದೂರು ವಲಯದ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು. ಶಾರದಾ ಶಿರೂರು ಶ್ರದ್ಧಾಂಜಲಿ ಠರಾವು ಮಂಡಿಸಿದರು ಶಾಖಾ ಕಾಯ೯ದಶಿ೯ ಸಿಂಗಾರಿ ನಾವುಂದ ವರದಿ ಮಂಡಿಸಿದರು. ಹಿರಿಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಮೀನುಗಾರರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಗ್ರಾಮಗಳನ್ನು ಗುರುತಿಸಿ, ಆ ಗ್ರಾಮಗಳಲ್ಲಿ ಮೀನುಗಾರರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಅಭಿವೃದ್ದಿಪಡಿಸಲು 7.5 ಕೋಟಿ ರೂ ಅನುದಾನ ನೀಡುವ ನೂತನ ಯೋಜನೆ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಮೀನುಗಾರಿಕೆ, ವಾರ್ತಾ ಮತ್ತು ಪ್ರಚಾರ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಖಾತೆಯ ರಾಜ್ಯ ಸಚಿವ ಡಾ. ಎಲ್. ಮುರುಗನ್ ಹೇಳಿದರು. ಅವರು ಮಲ್ಪೆ ಬಂದರಿಗೆ ಭೇಟಿ ನೀಡಿ, ಮೀನುಗಾರರರೊಂದಿಗೆ ನಡೆದ ಸಂವಾದ ನಡೆಸಿ, ಮಾತನಾಡಿದರು. ಕೇಂದ್ರ ಸರ್ಕಾರದ ಮೂಲಕ ,ಮೀನುಗಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಮಗಳಲ್ಲಿ , ಮೀನುಗಾರರಿಗೆ ಅಗತ್ಯ ಮೂಲಭೂತ ಸೌಕರ್ಯ, ಮೀನುಗಾರಿಕಾ ಚಟುವಟಿಕೆ ಮತ್ತು ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಅಭಿವೃದ್ದಿಗೆ ಅನುಕೂಲವಾಗುವ ಕಾಮಗಾರಿಗಳನ್ನು ಕೈಗೊಳ್ಳಲು 7.5 ಕೋಟಿ ರೂ ಗಳನ್ನು ನೀಡಲಾಗುವುದು, ಮೀನುಗಾರರ ಗ್ರಾಮಗಳನ್ನು ಗುರುತಿಸುವ ಕಾರ್ಯ ಆರಂಭವಾಗಲಿದೆ ಎಂದು ಸಚಿವರು ತಿಳಿಸಿದರು. ಕರ್ನಾಟಕದಲ್ಲಿ ಮೀನುಗಾರಿಕಾ ಚಟುವಟಿಕೆಗಳ ಅಭಿವೃಧ್ದಿಗಾಗಿ ಕೇಂದ್ರ ಸರ್ಕಾರದಿಂದ ಮುಂದಿನ 5 ವರ್ಷದಲ್ಲಿ 725 ಕೋಟಿ ರೂಗಳ ಹೊಡಿಕೆ ಮಾಡಲಾಗುವುದು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ 2020-21ನೇ ಸಾಲಿನಲ್ಲಿ 20.23 ಲಕ್ಷ ರೂ. ಲಾಭಗಳಿಸಿ ಸದಸ್ಯರಿಗೆ ಶೇ.13 ಡಿವಿಡೆಂಟ್ ಘೋಷಿಸಿದೆ. ಗ್ರಾಹಕರ ಸಹಕಾರದಿಂದ ನಿಧಿಗಳ ಸಮರ್ಪಕ ನಿರ್ವಹಣೆ, ಸಾಲಗಳ ವಿತರಣೆ ಹಾಗೂ ಸಮಯೋಜಿತ ಹೂಡಿಕೆಗಳಿಂದಾಗಿ ಸಂಘವು ಉತ್ತಮ ಪ್ರಗತಿ ಸಾಧಿಸಿದೆ ಎಂದು ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು. ಸಂಘದ ಪ್ರಧಾನ ಕಛೇರಿಯಲ್ಲಿ ಭಾನುವಾರ ಜರುಗಿದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಸಹಕಾರಿಯು 2020-21ನೇ ಸಾಲಿನಲ್ಲಿ ರೂ. 24.26 ಕೋಟಿ ಠೇವಣಿ ಹೊಂದಿದ್ದು 21.73 ಕೋಟಿ ಸಾಲ ನೀಡಿದೆ. ಕಳೆದ ಸಾಲಿನ ಕಾರ್ಯಯೋಜನೆಯಲ್ಲಿ ನಿಗದಿಪಡಿಸಿದ ಠೇವಣಿ, ಸಾಲ, ಅನುತ್ಪಾದಕ ಸಾಲ, ಸುಸ್ತಿ ಸಾಲ ಹಾಗೂ ಮುಂಗಡ ಲಾಭಗಳಿಕೆಯಲ್ಲಿ ನಿಗದಿತ ಗುರಿಯನ್ನು ಮೀರಿ ಸಂಸ್ಥೆ ಪ್ರಗತಿ ಸಾಧಿಸಿದೆ. ಜಿಲ್ಲೆಯಲ್ಲಿಯೇ ಮಾದರಿ ಸಂಸ್ಥೆಯಾಗಿ ರೂಪುಗೊಳ್ಳುತ್ತಿರುವ ಹಿಂದೆ ಗ್ರಾಹಕರ ಸಹಕಾರ ಹಾಗೂ ನೌಕರರ ಶ್ರಮವಿದೆ ಎಂದರು. ಸೌಹಾರ್ದ ಸಹಕಾರಿಯ ವ್ಯಾಪ್ತಿಯಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಕೋವಿಡ್…

Read More

ಕುಂದಾಪ್ರ ಡಾಟ್ ಕಾಂ ವರದಿಕುಂದಾಪುರ: ಪಂಜರ ಮೀನು ಕೃಷಿಯಲ್ಲಿನ ನಷ್ಟದಿಂದ ಸಾವರಿಸಿಕೊಳ್ಳುವ ಹೊತ್ತಿಗೆ ಮತ್ತೆ ಪಂಚರ ಮೀನುಗಳು ಸಾಯುತ್ತಿರುವುದು ಕಂಡುಬಂದಿದೆ. ಕಳೆದ ಮೂರು ದಿನದಿಂದ ಅಲ್ಲೊಂದು ಇಲ್ಲೊಂದು ಪಂಜರ ಮೀನು ಸಾಯುತ್ತಿದ್ದು ಭಾನುವಾರ ಸಾವುಗಳ ಸಂಖ್ಯೆ ದಿಢೀರಾಗಿ ಹೆಚ್ಚಿಗಿದ್ದು ಕೃಷಿಕರನ್ನು ಆತಂಕಕ್ಕೆ ನೂಕಿದೆ. ಕಳೆದ ಬಾರಿ ಬೈಂದೂರು ಹಾಗೂ ಕುಂದಾಪುರ ಪರಿಸರದಲ್ಲಿ ಮೀನುಗಳ ಸಾವಾಗಿದ್ದು ಈ ಬಾರಿ ಕುಂದಾಪುರದ ಪಂಚಗಂಗಾವಳಿ ಹೊಳೆಯಲ್ಲಿ ಪಂಜರ ಮೀನುಗಳ ಸಾವು ಹೆಚ್ಚಾಗಿ ಕಂಡುಬಂದಿದೆ. ಪಂಜಗಂಗಾವಳಿ ಸಂಗಮ ಪರಿಸರದಿಂದ ಬೊಬ್ಬುಕುದ್ರು ತನಕ ನೂರಾರು ಪಂಜರದಲ್ಲಿ ಮೀನು ಸಾಕಣೆ ಮಾಡಿದ್ದು ಬರೋಬ್ಬರಿ ಒಂದು ಕೆಜಿ ತನಕ ತೂಕ ಬಂದ ಮೀನು ಸಾಯುತ್ತಿವೆ. ಹತ್ತಾರು ಕುಟುಂಬಗಳು ಪಂಜ ಮೀನು ಸಾಕಣಿಕೆಯಿಂದ ಬದುಕು ಕಟ್ಟಿಕೊಂಡಿದ್ದು, ಅಚಾನಕ್ ಸಾವುನಿಂದ ಕಂಗೆಟ್ಟಿದ್ದಾರೆ. ನಿಗೂಢವಾಗಿ ಸತ್ತ ಮೀನುಗಳ ಹೊಂಡ ತೆಗೆದು ಹೂಳುತ್ತಿದ್ದಾರೆ. ಕಲುಷಿತ ನೀರು ಮೀನು ಸಾವಿಗೆ ಕಾರಣ?ಪಂಜರದ ಮೀನು ಸಾವಿಗೆ ಕುಲಷಿತ ನೀರೇ ಕಾರಣ ಎಂದು ಕೃಷಿಕರು ಆರೋಪಿಸಿದ್ದಾರೆ. ಹೋಟೆಲ್, ಆಸ್ಪತ್ರೆ ಸಮುಚ್ಚಯದ ನೀರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕಾಸರಗೋಡು,ಅ.16: ಎಡನೀರು ಮಠದಲ್ಲಿ ಪತ್ರಕರ್ತ ಲಕ್ಷ್ಮೀ ಮಚ್ಚಿನ ಬರೆದ, ಐದು ದಶಕಗಳ ಯಕ್ಷಗಾನ ತಿರುಗಾಟದ ಅನುಭವ ಇರುವ ಯಕ್ಷಗಾನದ ಹಿರಿಯ ಮದ್ದಳೆಗಾರ ಲಕ್ಷ್ಮೀಶ ಅಮ್ಮಣ್ಣಾಯರ ಕಲಾಪಯಣದ ಪುಸ್ತಕ “ರಂಗಾಂತರಂಗ”ವನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಅನಾವರಣಗೊಳಿಸಿದರು. ತಮ್ಮ ಪೂರ್ವಾಶ್ರಮದಲ್ಲಿ ಲಕ್ಷ್ಮೀಶ ಅಮ್ಮಣ್ಣಾಯರ ಬಳಿ ಕೆಲ ಸಮಯ ಚೆಂಡೆ ಮದ್ದಳೆ ಕಲಿತ ಸಂದರ್ಭವನ್ನು ನೆನಪಿಸಿ, ವಿಜಯದಶಮಿಯ ಈ ಪರ್ವ ಕಾಲದಲ್ಲಿ ಪುಸ್ತಕ ಬಿಡುಗಡೆಗೊಂಡದ್ದು ಸುಯೋಗವೆಂದರು. ಲಕ್ಷ್ಮೀಶ ಅಮ್ಮಣ್ಣಾಯರ ಮಠದ ಜತೆಗಿನ ದೀರ್ಘ ಕಾಲಿಕ ಒಡನಾಟವನ್ನು ನೆನಪಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ವಿದ್ವಾಂಸ ಡಾ.ಎಂ. ಪ್ರಭಾಕರ ಜೋಷಿ, ಲಕ್ಷ್ಮೀಶ ಅಮ್ಮಣ್ಣಾಯರ ಕಲಾಮೌಲ್ಯ ಮತ್ತು ಶಿಸ್ತು ಇವನ್ನು ಉಲ್ಲೇಖಿಸಿ ತಾನು ಹೃದಯತುಂಬಿ ಮುನ್ನುಡಿ ಬರೆದ ಪುಸ್ತಕಗಳಲ್ಲಿ ಇದೂ ಒಂದು ಎಂದರು. ವಿಶ್ವ ರಂಗಭೂಮಿಯ ದೃಷ್ಟಿಯಿಂದ ಯಕ್ಷಗಾನ ಕಲಾವಿದರ ಕುರಿತಾದ ಪುಸ್ತಕಗಳು ಇನ್ನಷ್ಟು ಬರಬೇಕು ಎಂದರು. ಸಮಾರಂಭದಲ್ಲಿ ಮದ್ದಳೆಗಾರ ಲಕ್ಷ್ಮೀಶ ಅಮ್ಮಣ್ಣಾಯ, ಗೀತಾ ಅಮ್ಮಣ್ಣಾಯ, ಭಾಗವತ ದಿನೇಶ ಅಮ್ಮಣ್ಣಾಯ, ಅರ್ಥಧಾರಿ…

Read More