ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಧ್ಯೇಯೋದ್ದೇಶ ಮರುನವೀಕರಣ ಎಂಬ ವಿಷಯದ ಬಗ್ಗೆ ಒಂದು ದಿನದ ಕಾರ್ಯಾಗಾರ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಜಿ.ಆರ್.ಐ.ಡಿ ಇದರ ಉಪಾಧ್ಯಕ್ಷರು, ವಿವಿಧ ಶೈಕ್ಷಣಿಕ ಸಂಸ್ಥೆಗಳ ಸಲಹೆಗಾರರೂ ಆದ ಜಯಪ್ರಕಾಶ್ ರಾವ್ ಹಾಗೂ ವಸಂತ್ ಕೇದಿಗೆ ಇವರು ಆಗಮಿಸಿದ್ದರು. ಕಾಲೇಜಿನ ಧ್ಯೇಯೋದ್ದೇಶ, ಗುರಿ ಹಾಗೂ ಮೌಲ್ಯಗಳನ್ನು ವೃದ್ಧಿಸುವಲ್ಲಿ ಪ್ರಾಧ್ಯಾಪಕರಾಗಿ ತಮ್ಮನ್ನು ತಾವು ಹೇಗೆ ತೊಡಗಿಸಿಕೊಳ್ಳಬೇಕು ಎಂಬುದನ್ನು ವಿವರಿಸಿದ್ದಲ್ಲದೆ ವಿವಿಧ ಚಟುವಟಿಕೆಗಳನ್ನು ನೀಡುವುದರ ಮೂಲಕ ಮನದಟ್ಟು ಮಾಡಿಕೊಟ್ಟರು.
ಕಾಲೇಜಿನ ಅಧ್ಯಕ್ಷರಾದ ಸಿದ್ಢಾರ್ಥ ಜೆ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ಡಾ. ಚಂದ್ರರಾವ್ ಮದಾನೆ, ಉಪ ಪ್ರಾಂಶುಪಾಲ, ಡೀನ್, ವಿಭಾಗದ ಮುಖ್ಯಸ್ಥರು, ಅಧ್ಯಾಪಕರು ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು. ಕಾಲೇಜಿನ ಅಕಾಡೆಮಿಕ್ ಡೀನ್ ಡಾ|ಪ್ರತಿಭ ಪಟೇಲ್ ಕಾರ್ಯಕ್ರಮ ನಿರ್ವಹಿಸಿದರು.