ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಾಜ್ಯಾದ್ಯಂತ ಅಂರ್ತಜಲವನ್ನು ಹೆಚ್ಚಿಸುವ ಉದ್ದೇಶದಿಂದ ಸಣ್ಣ ನೀರಾವರಿ ಇಲಾಖೆವತಿಯಿಂದ ಅನೇಕ ಯೋಜನೆಗಳನ್ನು ರೂಪಿಸಿ, ಕೃಷಿ ಮತ್ತು ಕುಡಿಯುವ ನೀರಿನ ಬಳಕೆಗೆ ಆದ್ಯತೆ ನೀಡಿ, ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯದ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಹೇಳಿದರು. ಅವರು ಬೈಂದೂರಿನ ಪಡುವರಿಯಲ್ಲಿ 35 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಕಿಂಡಿ ಅಣೆಕಟ್ಟು ಕಾಮಗಾರಿಯ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಕರಾವಳಿ ಜಿಲ್ಲೆಗಳಲ್ಲಿ ಕೃಷಿ ಮತ್ತು ಕುಡಿಯುವ ನೀರು ಉದ್ದೇಶಕ್ಕಾಗಿ 3986 ಕೋಟಿ ರೂ ವೆಚ್ಚದಲ್ಲಿ 1348 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲು ಮಾಸ್ಟರ್ ಪ್ಲಾನ್ ಯೋಜನೆಯನ್ನು ರೂಪಿಸಿದ್ದು, ದಕ್ಷಿಣ ಕನ್ನಡದಲ್ಲಿ 446, ಉಡುಪಿಯಲ್ಲಿ 424 ಉಡುಪಿಯಲ್ಲಿ, 466 ಕಿಂಡಿ ಅಣೆಕಟ್ಟು ಕಾಮಗಾರಿಗಳನ್ನು 5 ವರ್ಷದೊಳಗೆ ಪೂರ್ಣಗೊಳಿಸಲಾಗುವುದು ಎಂದರು. ಕಿಂಡಿ ಅಣೆಕಟ್ಟು ಮೂಲಕ ನೀರನ್ನು ಸಂಗ್ರಹಿಸಿ, ಕುಡಿಯುವ ನೀರಿನ ಬಳಕೆಗೆ ಮತ್ತು ರೈತರಿಗೆ ಕೃಷಿ ಬಳಕೆಗೆ ಬಳಸಲಾಗುವುದು ಎಂದ ಅವರು, ಕಿಂಡಿ ಆಣೆಕಟ್ಟುಗಳ ಹಲಗೆಗಳ ನಿರ್ವಹಣೆಗೆ 4 ಕೋಟಿ ರೂ ಅನುದಾನ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಇವರ ಸಹಯೋಗದಲ್ಲಿ ಡಾ. ಶಿವರಾಮ ಕಾರಂತರ ಪುಣ್ಯತಿಥಿ ಅಂಗವಾಗಿ ರಾಜ್ಯದ ಮೊದಲ ಆನ್ ಲೈನ್ ಸಾಹಿತ್ಯಿಕ – ಸಾಂಸ್ಕೃತಿಕ ಸಮ್ಮೇಳನ ಹಾಂಪರಿ – 2020 (ಬದಲಾವಣೆಯ ಕರೆಗಾಳಿ ) ಕೋಟದ ಕಾರಂತ ಥೀಮ್ ಪಾರ್ಕ್‌ನಲ್ಲಿ ಡಿಸೆಂಬರ್ 6 ರ ಭಾನುವಾರ ಬೆಳಿಗ್ಗೆ 10 ರಿಂದ ಸಂಜೆ 5ರ ತನಕ ನಡೆಯಲಿದೆ. ವಿಚಾರಗೋಷ್ಠಿ, ಪ್ರಬಂಧ ಮಂಡನೆ, ಕವಿಗೋಷ್ಠಿ, ನಾಟಕಾಂಶ ಪ್ರದರ್ಶನ, ಜನಪದ ಗುಂಜನ, ಕನ್ನಡ ಗೀತ ಗಾಯನ, ಯಕ್ಷನೃತ್ಯ, ಬಹುವಿಧ ಅಭಿವ್ಯಕ್ತಿ, ಏಕವ್ಯಕ್ತಿ ಸ್ವರಾಂಜಲಿ ಕಾರ್ಯಕ್ರಮಗಳು ನಡೆಯಲಿದೆ ಎಂದು ಡಾ. ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ ಕುಂದರ್, ಕೋಟತಟ್ಟು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಡಾ.ಅರುಣ್ ಕುಮಾರ್ ಶೆಟ್ಟಿ, ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮರವಂತೆ : ಮರವಂತೆಯಲ್ಲಿ ಕೇರಳ ಮಾದರಿ ಹೊರಬಂದರು ನಿರ್ಮಾಣ ಕಾರ್ಯ ನಡೆದಿದ್ದು, ಈ ಬಂದರನ್ನು ತಾಂತ್ರಿಕವಾಗಿ ಇನ್ನಷ್ಟು ಅಭಿವೃದ್ಧಿಪಡಿಸಬೇಕೆಂಬ ಉದ್ದೇಶದಿಂದ ರಾಜ್ಯ ಸರಕಾರದ ಬಜೆಟ್‍ನಲ್ಲಿ 85 ಕೋಟರಿ ರೂ.ಗಳನ್ನು ಮೀಸಲಿರಿಸಿದ್ದು, ಆದಷ್ಟು ಶೀಘ್ರ ಟೆಂಡರ್ ನಡೆಸಿ ಕಾಮಗಾರಿ ಪ್ರಾರಂಭಿಸಲಾಗುವುದು. ಕೇಂದ್ರ ಮತ್ತು ರಾಜ್ಯ ಸರಕಾರದ ಮೀನುಗಾರಿಕಾ ಸಚಿವರನ್ನು ಕರೆಸಿ ಕಾಮಗಾರಿಗೆ ಶಂಕುಸ್ಥಾಪನೆ ನಡೆಸಲಾಗುವುದು ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಮರವಂತೆ ಹೊರಬಂದರು ಪ್ರದೇಶಕ್ಕೆ ಮಂಗಳವಾರ ಭೇಟಿ ನೀಡಿದ ಅವರು ಬಂದರು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕಾಮಗಾರಿಯ ನೀಲನಕಾಶೆಯನ್ನು ವೀಕ್ಷಿಸಿ ಅವರು ಮಾತನಾಡಿದರು. ಕೋವಿಡ್-19 ಹಿನ್ನಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದರೂ, ದೇಶದ ರಕ್ಷಣೆ ಜೊತೆಗೆ ಗ್ರಾಮದ ಅಭಿವೃದ್ಧಿಗೆ ಕೇಂದ್ರ ಸರಕಾರ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡುತ್ತಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲೂ ಕೂಡ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಕೇಂದ್ರ ಸರಕಾರ ಜಲಜೀವನ ಮಿಷನ್ ಅಡಿಯಲ್ಲಿ ಅನುದಾನ ದೊಡ್ಡ ಅನುದಾನ ನೀಡಿದ್ದು,…
ಕುಂದಾಪ್ರ ಡಾಟ್ ಕಾಂ’ ಸುದ್ದಿ ಕುಂದಾಪುರ: ತ್ರಾಸಿ-ಮರವಂತೆ ಬೀಚ್ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಯಿಂದ 5 ಕೋಟಿ ರೂ. ಮಂಜೂರಾಗಿದ್ದು, ಈ ಅನುದಾನವನ್ನು ಬಳಸಿಕೊಂಡು ತ್ರಾಸಿ-ಮರವಂತೆ ಬೀಚ್‍ನಲ್ಲಿ ಅಗತ್ಯವಿರುವ ಮೂಲಭೂತ ಸೌಲಭ್ಯ ಕಲ್ಪಿಸಲಾಗುವುದು ಮತ್ತು ಬೀಚ್ ಅಭಿವೃದ್ಧಿಪಡಿಸಲಾಗುವುದು. ಬೀಚ್‍ನಲ್ಲಿ ಕೈಗೊಳ್ಳಬಹುದಾದ ಕಾಮಗಾರಿಗಳ ನೀಲನಕಾಶೆ ಸಿದ್ಧಪಡಿಸಿಕೊಂಡು ಪ್ರವಾಸಿಗರ ಅನುಕೂಲಕ್ಕೆ ಬೇಕಾಗುವ ಸೌಲಭ್ಯಗಳನ್ನು ಈ ತೀರದಲ್ಲಿ ಒದಗಿಸಲು ಪ್ರಯತ್ನಿಸಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ತ್ರಾಸಿ-ಮರವಂತೆ ಕಡಲ ತೀರಕ್ಕೆ ಮಂಗಳವಾರ ಭೇಟಿ ನೀಡಿದ ಅವರು ಪ್ರವಾಸೋದ್ಯಮ ಇಲಾಖೆ ಮೂಲಕ ಕೈಗೆತ್ತಿಕೊಳ್ಳಲಾಗುವ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ ಮಾತನಾಡಿದರು. ಕಡಲ್ಕೊರೆತ ತಡೆಯುವ ಉದ್ದೇಶದಿಂದ ಎಡಿಬಿ ಮೂಲಕ ವಿನೂತನ ಮಾದರಿಯ ತಡೆಗೋಡೆ ರಚಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯ ಅನುದಾನವನ್ನು ಬಳಸಿಕೊಂಡು ಸುಂದರ ಕಡಲ ತೀರ ನಿರ್ಮಿಸುವಲ್ಲಿ ಯೋಜನೆ ಸಿದ್ಧಪಡಿಸಬೇಕು. ಪ್ರವಾಸಿಗರನ್ನು ಆಕರ್ಷಿಸಲು ಬೇಕಾಗುವ ಎಲ್ಲಾ ಸೌಕರ್ಯಗಳನ್ನು ಅಳವಡಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು. ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಸಲಹೆ ಸೂಚನೆ ನೀಡಿದರು. ಉಡುಪಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ ಬಿ.ಕೆ.,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮದ ವತಿಯಿಂದ ಜಿಲ್ಲೆಯಲ್ಲಿ ಪ್ರಾಂಚೈಸಿ ಮೂಲಕ ಲಿಡ್‌ಕರ್ ಲೆದರ್ ಎಂಪೋರಿಯಂ ತೆರೆಯಲು ಉದ್ದೇಶಿಸಲಾಗಿದ್ದು, ಚರ್ಮ ಕುಶಲಕರ್ಮಿ ಕುಟುಂಬಗಳಿಗೆ ಸೇರಿದ ಅರ್ಹ ಮತ್ತು ಆಸಕ್ತಿವುಳ್ಳ ಯುವಕ/ಯುವತಿಯರು ಲಿಡ್‌ಕರ್ ವೆಬ್‌ಸೈಟ್ http://www.lidkar.com ನಲ್ಲಿ ಪ್ರಾಂಚೈಸಿ ಅರ್ಜಿಗಳನ್ನು ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಡಿಸೆಂಬರ್ 5 ರ ಒಳಗೆ ಜಿಲ್ಲಾ ಸಂಯೋಜಕರು, ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತ, ಉಡುಪಿ ಜಿಲ್ಲೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಂಬದಕೋಣೆಯ ಸಂವೇದನಾ ವಿಜ್ಞಾನ ಮತ್ತು ವಾಣಿಜ್ಯ ಪ್ರಥಮದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮ ನಡೆಯಿತು. ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟಿ, ಮಾತನಾಡಿ, ಯಾರು ಎಷ್ಟೇ ದೊಡ್ಡ ಹುದ್ದೆಗೇರಿದರೂ ತನಗೆ ಅಕ್ಷರ ಕಲಿಸಿದ ಗುರುಗಳನ್ನು ಮರೆಯುವುದಿಲ್ಲ. ತಂದೆತಾಯಿ ನಮಗೆ ಜನ್ಮ ನೀಡಿದರೆ ಗುರು ನಮ್ಮಲ್ಲಿ ಅರಿವಿನ ದೀಪವನ್ನು ಹಚ್ಚುತ್ತಾರೆ. ವಿದ್ಯೆಯಿಲ್ಲದ ಮನುಷ್ಯನ ಜೀವನ ಪಶುವಿಗೆ ಸಮಾನ ಎಂಬಂತೆ ವ್ಯಕ್ತಿಯ ವ್ಯಕ್ತಿತ್ವ ವಿಕಸನವಾಗಲು ಶಿಕ್ಷಣದ ಅಗತ್ಯವಿದೆ. ನಮಗೆ ದಾರಿತೋರಿದ ಗುರುಗಳನ್ನು ಸ್ಮರಿಸಿ, ಗೌರವಿಸುವುದು ಶಿಷ್ಯರಾದವರ ಆದ್ಯ ಕರ್ತವ್ಯವಾಗಿದೆ . ಜ್ಞಾನಿಗಳ ಸರಿಯಾದ ಮಾರ್ಗದರ್ಶನವಿದ್ದರೆ ಎಂತಹ ವ್ಯಕ್ತಿಯಾದರೂ ಸಾಧನೆ ಮಾಡಬಲ್ಲ. ಶೃದ್ದೆ, ನಿಷ್ಠೆ, ಗುರುಭಕ್ತಿಯಿಂದ ವಿದ್ಯಾರ್ಥಿ ಕಲಿತಾಗ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಬಲ್ಲ. ಇಂದು ಇಲ್ಲಿ ತಮ್ಮ ಗುರುಗಳನ್ನು ಗುರುತಿಸಿ, ಗುರುವಂದನೆ ಮಾಡುತ್ತಿರುವುದು ಸ್ತುತ್ಯಾರ್ಹ ಎಂದರು ಹೇಳಿದರು. ವಿಶ್ರಾಂತ ಉಪನ್ಯಾಸಕ ಪಿ.ಶೇಷಪ್ಪಯ್ಯ ಹೆಬ್ಬಾರ್, ನಿವೃತ್ತ ಶಿಕ್ಷಕಿಯರಾದ ಸೀತಾಲಕ್ಷ್ಮೀ ಟೀಚರ್, ರೋಮನ್ ಲೋಬೋ, ಸುಶೀಲ ಗಾಣಿಗರವರನ್ನು ಕಾರ್ಯಕ್ರಮದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ವತಿಯಿಂದ ನವೆಂಬರ್ 29 ರಂದು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ಬೆಳಿಗ್ಗೆ 10 ಗಂಟೆಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಅಧ್ಯಕ್ಯತೆಯನ್ನು ಕ.ಸಾ.ಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ವಹಿಸಲಿದ್ದು, ಹಿರಿಯ ವಕೀಲ ಎ.ಎಸ್.ಎನ್ ಹೆಬ್ಬಾರ್ ಸಾಹಿತ್ಯ ಸುಧೆ ಪ್ರಕಾಶನ ಪ್ರಕಟಿಸಿದ ಮುಷ್ತಾಕ್ ಹೆನ್ನಾಬೈಲ್ ಅವರ ಪ್ರಥಮ ಕೃತಿ ಪರಿಭ್ರಮಣ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ, ಮಂಗಳೂರು ವಿ.ವಿ ನಿರ್ದೇಶಕ ಮುದ್ದು ಮೂಡುಬೆಳ್ಳೆ, ಮಲೆನಾಡು ಪ್ರಕಾಶನ ಪ್ರಕಟಿಸಿದ ನಾರಾಯಣ ಶೇವಿರೆ ಅವರ ದೇಶೀ ದಿಶೆ , ಪ್ರಸಾದ್ ನಾರ್ಣಕಜೆ , ಇತಿಹಾಸ ಅಧ್ಯಾಪಕರು ಮಲೆನಾಡು ಪ್ರಕಾಶನ ಪ್ರಕಟಿಸಿದ ನಾರಾಯಣ ಶೇವಿರೆ ಅವರ ಉಪಾಸನೆ ಕ್ಯಾಥರೀನ್ ರೋಡ್ರಿಗಸ್, ಶಿಕ್ಷಣ ಚಿಂತಕರು ಅವರು ಸಾಹಿತ್ಯ ಸುಧೆ ಪ್ರಕಾಶನ ಪ್ರಕಟಿಸಿದ ಪ್ರೊ.ನರಹರಿ ಎ.ಎಮ್. ಅವರ ಪ್ರಥಮ ಕೃತಿ ಶಿಕ್ಷಣ ಮನ್ವಂತರ-ರಾಷ್ಟ್ರೀಯ ಶಿಕ್ಷಣ ನೀತಿ -2020 ಅನಾವರಣಗೊಳಿಸಿ ಮಾತಾನಾಡಲಿದ್ದಾರೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಎಂ ಕೋಡಿ ಸಮೀಪ ಸಮುದ್ರಕ್ಕೆ ಸ್ನಾನಕ್ಕೆಂದು ತೆರಳಿದ್ದ ಇಬ್ಬರಲ್ಲಿ, ಓರ್ವ ಸಾವ್ನಪ್ಪಿದ್ದು, ಮತ್ತೋರ್ವ ಪಾರಾದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಮೃತ ಯುವಕನನ್ನು ಬೆಳಗಾವಿ ಜಿಲ್ಲೆಯ ರಾಮದುರ್ಗ ಮೂಲದ ಮಂಜುನಾಥ (33) ಎಂದು ಗುರುತಿಸಲಾಗಿದೆ. ಕುಂದಾಪುರ ಪರಿಸರದಲ್ಲಿ ಕೂಲಿ ಕಾರ್ಮಿಕರಾಗಿ ದುಡಿದುಕೊಂಡಿದ್ದ ಮೃತ ಮಂಜುನಾಥ ಹಾಗೂ ಆತನ ಸ್ನೇಹಿತ ಮಂಜುನಾಥ ಎನ್ನುವವರು ಕೆಲಸ ಇಲ್ಲದ ಕಾರಣ ಕುಂದಾಪುರ ಸಮೀಪದ ಎಂ ಕೋಡಿಗೆ ಸ್ನಾನಕ್ಕೆಂದು ತೆರಳಿದ್ದರು. ಇಬ್ಬರು ಅರಬ್ಬಿ ಸಮುದ್ರಕ್ಕೆ ಇಳಿದ್ದಿದ್ದು ಅಲೆಯ ರಭಸಕ್ಕೆ ಮಂಜುನಾಥ ಎನ್ನುವರು ಸಮುದ್ರದಲ್ಲಿ ಮುಳುಗಿದ್ದು, ಇನ್ನೊರ್ವ ಸಾವಿನ ಅಂಚಿನಿಂದ ಪಾರಾಗಿದ್ದಾನೆ. ಸ್ಥಳೀಯರ ಸಹಕಾರದಿಂದ ಮೃತ ಯುವಕನ ಶವವನ್ನು ಮೇಲಕ್ಕೆ ಎತ್ತಿದ್ದು, ಕುಂದಾಪುರದ ಶವಗಾರದಲ್ಲಿ ಇರಿಸಲಾಗಿದೆ. ಕುಂದಾಪುರ ಪೋಲಿಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ
ಕುಂದಾಪ್ರ ಡಾಟ್ ಕಾಂ ಸುದ್ದಿ ಶಂಕರನಾರಾಯಣ: ಇಲ್ಲಿಗೆ ಸಮೀಪದ ಕುಳ್ಳುಂಜೆ ಗ್ರಾಮದ ಕೋವಿನಗುಡ್ಡೆ ಎಂಬಲ್ಲಿ ಚಿಕ್ಕ ಗುಡಿಸಿಲಿನಲ್ಲಿ ದಯಾನೀಯ ಬದುಕು ಸಾಗಿಸುತ್ತಿದ್ದ ಸಾಂತು ಅಜ್ಜಿ ಎಂಬುವವರಿಗೆ ನೆಟ್ಟಿಗರು, ದಾನಿಗಳು, ಸರ್ಕಾರದ ನೆರವಿನಿಂದ ತಾ.ಪಂ ಸದಸ್ಯ ಕಲ್ಗದ್ದೆ ಉಮೇಶ್ ಶೆಟ್ಟಿ ಅವರ ಮುಂದಾಳತ್ವದಲ್ಲಿ ಸುಂದರ ಹಾಗೂ ಸುಸಜ್ಜಿತವಾದ ಮನೆ ಸಿದ್ಧಗೊಂಡು ಸೋಮವಾರ ಗೃಹ ಪ್ರವೇಶ ನೆರವೇರಿದೆ. ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ನೂತನ ಮನೆಯೊಳಕ್ಕೆ ದೀಪ ಬೆಳಗಿ, ವಯೋವೃದ್ದೆ ಸಾಂತಜ್ಜಿಯನ್ನು ಗೌರವಿಸಿದರು. ಬಳಿಕ ಅವರು ಮಾತನಾಡಿ, ಇದು ಪರಮಾತ್ಮನ ಪೂರ್ಣಾನುಗ್ರಹಕ್ಕೆ ಪಾತ್ರವಾಗುವ ಮಾನವೀಯ ಕಾರ್ಯ. ಉಮೇಶ ಶೆಟ್ಟರು ಅವರ ಸ್ನೇಹಿತರ ಪರಿಶ್ರಮವನ್ನು ಈ ಕುಟುಂಬ ಶಾಶ್ವತವಾಗಿ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ ಎಂದರು. ಮನೆ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದ ತಾ.ಪಂ. ಸದಸ್ಯ ಕಲ್ಗದ್ದೆ ಉಮೇಶ್ ಶೆಟ್ಟಿ ಮಾತನಾಡಿ, ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಬಂದಾಗ ಸಾಂತಜ್ಜಿ ಟಾರ್ಪಲ್ ಸೂರಿನ ಮನೆ ನೋಡಿದೇವು. ಸಾಂತಜ್ಜಿ ಅವರ ಮಗಳು, ಮೊಮ್ಮಗಳು ಬಿಟ್ಟು ಮತ್ಯಾರೂ ಇಲ್ಲ. ಮನೆ ನಿರ್ಮಿಸಿಕೊಳ್ಳುವ ಸ್ಥಿತಿಯಲ್ಲಿಯೂ ಇರಲಿಲ್ಲ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪ್ರ ಕನ್ನಡದ ಮೊದಲ ಹಾಗೂ ಪ್ರಸಿದ್ಧ ಆಲ್ಬಂ ಸಾಂಗ್ ‘ಪಣ್ಕ್ ಮಕ್ಕಳ್’ಗೆ ಸಾಹಿತ್ಯ ಬರೆದಿದ್ದ ಅಶೋಕ್ ನೀಲಾವರ (45) ಸೋಮವಾರ ನಿಧನರಾಗಿದ್ದಾರೆ. ಉಡುಪಿ ಜಿಲ್ಲೆಯ ನೀಲಾವರದವರಾದ ಅಶೋಕ್ ಅವರು ಬೆಳಗಾವಿ ಜಿಲ್ಲೆ ಗೋಕಾಕ್‌ಗೆ ಬೇಕರಿಯ ಇಂಟೀರಿಯರ್ ಡಿಸೈನ್ ಕೆಲಸಕ್ಕಾಗಿ ತೆರಳಿದ್ದ ಸಂದರ್ಭ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಚಿತ್ರಸಾಹಿತಿಯಾಗಿ ಗುರುತಿಸಿಕೊಂಡಿದ್ದ ಅಶೋಕ್ ಅವರು, ಪಣ್ಕ್ ಮಕ್ಕಳ್ ಭಾಗ -1 ಹಾಗೂ ಪಣ್ಕ ಮಕ್ಕಳ್ ಭಾಗ-2ರ ಎಲ್ಲಾ ಹಾಡುಗಳಿಗೂ ಸಾಹಿತ್ಯ ಬರೆದಿದ್ದರು. ಮೃಗಶಿರ, ಕತ್ತಲೆಕೋಣೆ, ಬೀಟ್ ಚಿತ್ರದ ಒಂದೊಂದು ಹಾಡಿಗೂ ಸಾಹಿತ್ಯ ಬರೆದಿದ್ದರು. ಮೃತರು ಮಗಳು, ಮಡದಿ ಹಾಗೂ ಕುಟುಂಬಿಕರನ್ನು ಅಗಲಿದ್ದಾರೆ. ಮೃತರ ಅಗಲಿಕೆಗೆ ಸಂಗೀತ ನಿರ್ದೇಶಕ ರವಿ ಬಸ್ರೂರು, ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
