ಸಮುದ್ರದಲ್ಲಿ ಮುಳುಗಿ ಯುವಕ ಸಾವು

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಎಂ ಕೋಡಿ ಸಮೀಪ ಸಮುದ್ರಕ್ಕೆ ಸ್ನಾನಕ್ಕೆಂದು ತೆರಳಿದ್ದ ಇಬ್ಬರಲ್ಲಿ, ಓರ್ವ ಸಾವ್ನಪ್ಪಿದ್ದು, ಮತ್ತೋರ್ವ ಪಾರಾದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

Call us

Click Here

ಮೃತ ಯುವಕನನ್ನು ಬೆಳಗಾವಿ ಜಿಲ್ಲೆಯ ರಾಮದುರ್ಗ ಮೂಲದ ಮಂಜುನಾಥ (33) ಎಂದು ಗುರುತಿಸಲಾಗಿದೆ. ಕುಂದಾಪುರ ಪರಿಸರದಲ್ಲಿ ಕೂಲಿ ಕಾರ್ಮಿಕರಾಗಿ ದುಡಿದುಕೊಂಡಿದ್ದ ಮೃತ ಮಂಜುನಾಥ ‌ಹಾಗೂ ಆತನ ಸ್ನೇಹಿತ ಮಂಜುನಾಥ ಎನ್ನುವವರು ಕೆಲಸ ಇಲ್ಲದ ಕಾರಣ ಕುಂದಾಪುರ ಸಮೀಪದ ಎಂ ಕೋಡಿಗೆ ಸ್ನಾನಕ್ಕೆಂದು ತೆರಳಿದ್ದರು.

ಇಬ್ಬರು ಅರಬ್ಬಿ ಸಮುದ್ರಕ್ಕೆ ಇಳಿದ್ದಿದ್ದು ಅಲೆಯ ರಭಸಕ್ಕೆ ಮಂಜುನಾಥ ಎನ್ನುವರು ‌ಸಮುದ್ರದಲ್ಲಿ ಮುಳುಗಿದ್ದು, ಇನ್ನೊರ್ವ ಸಾವಿನ ಅಂಚಿನಿಂದ ಪಾರಾಗಿದ್ದಾನೆ.

ಸ್ಥಳೀಯರ ಸಹಕಾರದಿಂದ ಮೃತ ಯುವಕನ ಶವವನ್ನು ಮೇಲಕ್ಕೆ ಎತ್ತಿದ್ದು, ಕುಂದಾಪುರದ ಶವಗಾರದಲ್ಲಿ ಇರಿಸಲಾಗಿದೆ. ಕುಂದಾಪುರ ಪೋಲಿಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ

Leave a Reply