ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದರೆ: ಕರ್ನಾಟಕ ರಾಜ್ಯ ವೇಟ್ಲಿಫ್ಟಿಂಗ್ ಅಸೋಸಿಯೇ?ನ್ ಮತ್ತು ದಾವಣಗೆರೆ ಜಿಲ್ಲಾ ವೇಟ್ ಲಿಫ್ಟಿಂಗ್ ಅಸೋಸಿಯೇ?ನ್ ಆಶ್ರಯದಲ್ಲಿ ದಾವಣಗೆರೆಯಲ್ಲಿ ನಡೆದ ರಾಜ್ಯಮಟ್ಟದ ಭಾರ ಎತ್ತುವ ಸ್ಪರ್ಧೆಯಲ್ಲಿ ಆಳ್ವಾಸ್ ಕಾಲೇಜು ಮೂಡುಬಿದ್ರೆ ಸಮಗ್ರ ತಂಡ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಬಾಲಕ ಮತ್ತು ಬಾಲಕಿಯರ ತಂಡ ಪ್ರಶಸ್ತಿಯಲ್ಲಿ ಪ್ರಥಮ, ಜೂನಿಯರ್ ಬಾಲಕರ ವಿಭಾಗದಲ್ಲಿ ಪ್ರಥಮ, ಬಾಲಕಿಯರ ವಿಭಾಗದಲ್ಲಿ ದ್ವಿತೀಯ, ಮಹಿಳಾ ವಿಭಾಗದಲ್ಲಿ ಪ್ರಥಮ ಹಾಗೂ ಪುರು?ರ ವಿಭಾಗದಲ್ಲಿ ದ್ವಿತೀಯ ತಂಡ ಪ್ರಶಸ್ತಿ ಪಡೆಯುವ ಮೂಲಕ ಸಮಗ್ರ ತಂಡ ಪ್ರಶಸ್ತಿ ಪಡೆದಿಕೊಂಡಿದೆ. ವಿದ್ಯಾರ್ಥಿಗಳ ಸಾಧನೆಯನ್ನು ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ ಶ್ಲಾಘಿಸಿದ್ದಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ದೀಪಾವಳಿಗೆ ಕುಂದಾಪುರದ ಪ್ರತಿಷ್ಠಿತ ಮೊಬೈಲ್ ಮಾರಾಟ ಸಂಸ್ಥೆ ಮೊಬೈಲ್ ಎಕ್ಸ್ ತನ್ನ ಗ್ರಾಹಕರಿಗೆ ಮೊಬೈಲ್ ಎಕ್ಸ್ ಉತ್ಸವದ ಮೂಲಕ ವಿಶೇಷ ಕೊಡುಗೆ ನೀಡುತ್ತಿದ್ದು, ಎಲ್ಲಾ ಮೊಬೈಲ್ಗಳು ಹಾಗೂ ಮೊಬೈಲ್ ಎಕ್ಸಸರೀಸ್ ಮೇಲೆ ಹೆಚ್ಚಿನ ರಿಯಾಯಿತಿ, ಕೊಡುಗೆಗಳನ್ನು ಪ್ರಕಟಿಸಿದೆ. ಅ.31ರಿಂದ ಆರಂಭಗೊಂಡು ನ.15ರ ತನಕ ಈ ಆಫರ್ ಲಭ್ಯವಿರಲಿದೆ. ಎಲ್ಲಾ ಮೊಬೈಲ್ ಖರೀದಿಯ ಮೇಲೆ ಡಿಸ್ಕೌಂಟ್ಪ್ರತಿ ಸ್ಮಾರ್ಟ್ ಪೋನ್ ಖರೀದಿ ಮೇಲೆಯೂ ರೂ.1000ಕ್ಕೂ ಹೆಚ್ಚಿನ ಉಚಿತ ಉಡುಗೊರೆ0% ಸುಲಭ ಇಎಂಐ ಸೌಲಭ್ಯಲೈಫ್ ಟೈಮ್ ಸಾಫ್ಟ್ವೇರ್ ಅಪ್ಡೇಟ್ ಉಚಿತ1 ವರ್ಷದ ತನಕ ಸ್ಕೀನ್ ಪ್ರೊಟೆಕ್ಟರ್ ಉಚಿತ ಕುಂದಾಪುರದ ಹಳೆ ಬಸ್ ನಿಲ್ದಾಣದ ಸಮೀಪದ ಪನ್ನೀರ್ ಜ್ಯುವೆಲ್ಲರ್ಸ್ ಕಾಂಪೆಕ್ಸ್ನಲ್ಲಿರುವ ಮೊಬೈಲ್ ಎಕ್ಸ್ ಶೋರೂಮ್ನಲ್ಲಿ ಈ ಎಲ್ಲಾ ಆಫರ್ಗಳು ಲಭ್ಯವಿರಲಿದ್ದು, ದೀಪಾವಳಿಗೆ ಮೊಬೈಲ್ ಕೊಂಡುಕೊಳ್ಳಬೇಕೆನ್ನುವವರು ಆಫರ್ನ್ನು ಸದಪಯೋಗಪಡಿಸಿಕೊಳ್ಳಬಹುದಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: 2020-21ನೇ ಸಾಲಿನಲ್ಲಿ ನಡೆದ ವೈದ್ಯಕೀಯ ವಿಭಾಗದ ರಾಷ್ಟ್ರೀಯ ಪ್ರವೇಶ ಪರೀಕ್ಷೆಯಲ್ಲಿ(ನೀಟ್) ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳಾದ ಗೌರವ್ 604 (98.9 ಪರ್ಸಂಟೈಲ್) ಪಡೆಯುದರ ಮೂಲಕ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾನೆ. ಉಳಿದಂತೆ ಸಿಂಚನಾ ಎಸ್. 497(94.32 ಪರ್ಸಂಟೈಲ್), ಅವನಿ ಆಚಾರ್ಯ 469 (92.6 ಪರ್ಸಂಟೈಲ್ ), ಅಫ್ರಿಧಿ ಎಸ್.440 (90.6 ಪರ್ಸಂಟೈಲ್), ಸಾತ್ವಿಕ್ ಶೆಟ್ಟಿ 417 (88.88 ಪರ್ಸಂಟೈಲ್) ಫಲಿತಾಂಶವನ್ನು ಪಡೆದಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ಬೋಧಕೇತರ ವ್ರಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪೌರ ಕಾರ್ಮಿಕರ ಅಂಬೇಡ್ಕರ್ ಕಾಲನಿಯಲ್ಲಿನ ಅಪೂರ್ಣ ಮನೆ ಸಂಪೂರ್ಣವಾಗಿ ನಿರ್ಮಿಸಲು ಮಾಡಲು ಎಲ್ಲಾ ರೀತಿಯ ಸಹಕಾರ ನೀಡುವುದಲ್ಲದೆ 6 ತಿಂಗಳಲ್ಲಿ ಮನೆಗಳ ಬಾಕಿ ಅನುದಾನ ಖಾತೆಗೆ ಜಮಾ ಮಾಡಲು ಕ್ರಮ ವಹಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಕುಂದಾಪುರ ಅಂಬೇಡ್ಕರ್ ಕಾಲನಿಯಲ್ಲಿರುವ ಪೌರ ಕಾರ್ಮಿಕರ ಮನೆಗಳು ಅರ್ಧಂಬರ್ಧ ಆಗಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ, 13 ಮನೆಗಳು ಅಪೂರ್ಣವಾಗಿದೆ. ಮೂರು ಮನೆ ಪೂರ್ಣಗೊಂಡಿದ್ದು, ಕೊನೆಯ ಕಂತು ಬಾಕಿ ಇದೆ. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಜೊತೆ ಮಾತನಾಡಿದ್ದು, ಇನ್ನು 15 ದಿನದಲ್ಲಿ ಪೂರ್ಣಮನೆ ಕೊನೆಯ ಕಂತು ಖಾತೆಗೆ ಹಾಕಲಾಗುತ್ತದೆ ಎಂದು ತಿಳಿಸಿದರು. ಕಾಲನಿಯ ಮೂರು ಮನೆ ಮುಗಿದ್ದರೂ ಹತ್ತು ಮನೆ ಅರ್ಧಂಬರ್ಧ ಆಗಿದೆ. ಯಾವುದಾದರೂ ಮೂಲದಿಂದ ಪ್ರಥಮ ಹಂತದಲ್ಲಿ ೩ ಮನೆ ತೆಗೆದುಕೊಂಡು ಸಂಪೂರ್ಣ ಮಾಡುವಂತೆ ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಿದ್ದು,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ದೇವಸ್ಥಾನಗಳು ನೆಮ್ಮದಿಯ ಕೇಂದ್ರಗಳು. ಅಲ್ಲಿಗೆ ಬರುವ ಭಕ್ತಾದಿಗಳನ್ನು ಸರಿಯಾಗಿ ನೋಡಿಕೊಳ್ಳಬೇಕು. ಆಡಳಿತ ಮಂಡಳಿ, ಅರ್ಚಕರು, ಸಿಬ್ಬಂದಿಗಳ ಶ್ರಮದಿಂದ ದೇಗುಲ ಅಭಿವೃದ್ದಿ ಸಾಧ್ಯ. ಎಲ್ಲಾ ಭಕ್ತರನ್ನು ಒಂದೇ ರೀತಿ ನೋಡಿಕೊಳ್ಳಬೇಕು. ಬಡವರಿಗೊಂದು ರೀತಿ ಶ್ರೀಮಂತರಿಗೊಂದು ರೀತಿ ಮಾಡಬಾರದು. ಸರಿಯಾದ ಪೂಜೆ ಪುನಸ್ಕಾರಗಳಿಂದ ದೇಗುಲದ ಘನತೆ ಹೆಚ್ಚುತ್ತದೆ. ಇದರಲ್ಲಿ ಅರ್ಚಕರ ಪಾತ್ರ ಬಹಳಷ್ಟಿದೆ. ಸೌಕೂರು ಸಾನಿಧ್ಯ ವಿಶೇಷತೆ ಯಿಂದ ಕೂಡಿದೆ. ಇದರ ಶಕ್ತಿ ಇನ್ನಷ್ಟು ಹೆಚ್ಚಲಿ ಆಡಳಿತ ಮಂಡಳಿ ಒಳ್ಳೆಯ ಕೆಲಸ ಮಾಡಲಿ ಎಂದು ಕೊಲ್ಲೂರು ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾದ ಬಸ್ರೂರು ಅಪ್ಪಣ್ಣ ಹೆಗ್ಡೆ ಹೇಳಿದರು. ಅವರು ಇಂದು ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಎನ್. ಮಂಜಯ್ಯ ಶೆಟ್ಟಿ ಅವರ ಅಭಿನಂದನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಎನ್. ಮಂಜಯ್ಯ ಶೆಟ್ಟಿ ಸಬ್ಲಾಡಿ ಮಾತನಾಡಿ, ದೇಗುಲವನ್ನು ಅಭಿವೃದ್ದಿ ಪಡಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಕಲಾಮಂದಿರದಲ್ಲಿ ಮಂಗಳವಾರ 6ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಹಾಗೂ ಧನ್ವಂತರಿ ಜಯಂತಿ ಪ್ರಯುಕ್ತ ಆಯುರ್ವೇದದಿಂದ ಪೋಷಣ್ ಕಾರ್ಯಕ್ರಮ ಜರುಗಿತು ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರಾಬರ್ಟ್ ರೆಬೆಲ್ಲೋ ಮಾತನಾಡಿ ಅಲೋಪತಿ ವೈದ್ಯ ಪದ್ಧತಿಯನ್ನು ತಕ್ಷಣದ ರೋಗ ಪರಿಹಾರಕ್ಕಾಗಿ ಅನುಸರಿಸಲಾಗುತ್ತದೆ. ಆದರೆ ಧೀರ್ಘಕಾಲದ ರೋಗಗಳಿಗೆ ಆಯುರ್ವೇದ ವೈದ್ಯ ಪದ್ಧತಿಯೇ ಉತ್ತಮವೆಂದ ಜಗತ್ತು ಒಪ್ಪಿದೆ. ಆಯುರ್ವೇದದಲ್ಲಿ ಪಥ್ಯಗಳನ್ನು ಸರಿಯಾಗಿ ಅನುಸರಿಸಿದರೆ ಉತ್ತಮ ಪರಿಣಾಮ ಬೀರುತ್ತದೆ. ಕುಂದಾಪುರ ಪುರಸಭಾ ಸದಸ್ಯೆ ದೇವಕಿ ಸಣ್ಣಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ದತ್ತಾತ್ರೆಯ ಎಸ್. ನಾಯ್ಕ್, ಕುಂದಾಪುರ ಸರಕಾರಿ ಆಸ್ಪತ್ರೆ ತಜ್ಞ ವೈದ್ಯ ಡಾ. ನಾಗೇಶ್, ಪುರಸಭಾ ಸದಸ್ಯೆ ದೇವಕಿ ಸಣ್ಣಯ್ಯ, ಸ.ಪ.ಪೂ ಕಾಲೇಜು ಪ್ರಾಂಶುಪಾಲರಾದ ರಾಮಕೃಷ್ಣ ಬಿ.ಜಿ, ಉಪಪ್ರಾಂಶುಪಾಲರಾದ ವಿನುತಾ ಗಾಂವ್ಕರ್, ಆಯುಷ್ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ. ಶ್ಯಾಮ ರಾವ್ ಮೊದಲಾದವರು ಉಪಸ್ಥಿತರಿದ್ದರು. ಡಾ. ವಿನಯಾ ಪ್ರಾರ್ಥಿಸಿದರು. ಡಾ. ಪ್ರದೀಪ ಎಸ್.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಯಾವುದೇ ವ್ಯಕ್ತಿ ಸಾಕ್ಷರನಾದರೆ ತನ್ನ ಹಕ್ಕುಗಳ ಬಗ್ಗೆ ಅರಿವು ಹೊಂದಲು ಸಾದ್ಯವಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಅಕ್ಷರ ಜ್ಞಾನ ಹೊಂದುವುದು ಅತ್ಯಂತ ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಹೇಳಿದರು. ಅವರು ಕಾಜಾರಗುತ್ತುನ ಜಿಲ್ಲಾ ಕಾರಾಗೃಹದಲ್ಲಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಉಡುಪಿ , ಕಾರಾಗೃಹ ಮತ್ತು ಸುಧಾರಣಾ ಸೇವೆ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಉಡುಪಿ, ಜಿಲ್ಲಾ ಕಾರಾಗೃಹ ಉಡುಪಿ ಇವರ ಸಹಯೋಗದಲ್ಲಿ ‘ಶಿಕ್ಷಣದಿಂದ ಬದಲಾವಣೆ’ ಕಾರಾಗೃಹದ ಅನಕ್ಷರಸ್ಥ ಹಾಗೂ ಅರೆ ಅನಕ್ಷರಸ್ಥ ಬಂಧಿಗಳಿಗೆ ಆಯೋಜಿಸಿದ್ದ ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಕ್ಷರತೆ ಪಡೆಯುವುದು ವ್ಯಕ್ತಿಯ ಘನತೆ ಹಾಗೂ ಹಕ್ಕು ಆಗಿದೆ. ವ್ಯಕ್ತಿ ಸಾಕ್ಷರತೆಯ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳಸಿಕೊಳ್ಳಬೇಕು, ಅನಕ್ಷರತೆಯಿಂದ ಬಡತನ, ಜನಸಂಖ್ಯೆ ನಿಯಂತ್ರಣ ಸಮಸ್ಯೆ,ಲಿಂಗ ಅಸಮಾನತೆ ಉಂಟಾಗಲಿದ್ದು,ಇದನ್ನು ತೊಡೆದು ಹಾಕಿ ದೇಶವನ್ನು ಸಮಗ್ರವಾಗಿ ಅಭಿವೃದ್ದಿಪಡಿಸಲು ಸಾಕ್ಷರತೆಯಿಂದ ಮಾತ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ದ ಕ – ಉಡುಪಿ ಜಿಲ್ಲೆ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ರಿ . ಕುಂದಾಪುರ – ಬೈಂದೂರು ವಲಯ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಾಹಿತಿಗಳಾದ ಜನಾರ್ದನ ಅಡಿಗ ಮೊಗೇರಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕುಂದಾಪುರ -ಬೈಂದೂರ ವಲಯದ ಅಧ್ಯಕ್ಷ ಬಿ. ದೊಟ್ಟಯ್ಯ ಪೂಜಾರಿ, ಪ್ರಧಾನ ಕಾರ್ಯದರ್ಶಿ ಶ್ರೀಕರ್ ಎಸ್, ಉಪಾಧ್ಯಕ್ಷರುಗಳಾದ ಚಂದ್ರಕಾಂತ್, ರಾಘವೇಂದ್ರ ಭಟ್ ವಂಡ್ಸೆ, ಶ್ರೀನಿವಾಸ್ ದೇವಾಡಿಗ, ಕೋಶಾಧಿಕಾರಿ ವಿಠಲ್ ನಾಗೂರ್, ಸಲಹಾ ಸಮಿತಿ ಸದಸ್ಯರು, ಪದಾಧಿಕಾರಿಗಳು, ಕಾರ್ಯಕಾರಿ ಮಂಡಳಿ ಸದಸ್ಯರು ಹಾಗೂ ಎಲ್ಲ ಛಾಯಾಗ್ರಾಹಕ ಸದಸ್ಯರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ದಕ್ಷಿಣ ಕನ್ನಡ ಚೆಸ್ ಅಸೋಸಿಯೇಷನ್ ರಿ. ಮಂಗಳೂರು ಆಯೋಜಿಸಿದ ಎರಡನೇ ಅಂತರ್ ಜಿಲ್ಲಾ ಮುಕ್ತ ರ್ಯಾಪಿಡ್ ಚೆಸ್ ಪಂದ್ಯಾಟ ನಡೆಯಿತು. ಇಲ್ಲಿನ ಕಶ್ವಿ ಚೆಸ್ ಸ್ಕೂಲ್ ವಿದ್ಯಾರ್ಥಿಗಳಾದ 15ರ ವಯೋಮಾನದ ಬಾಲಕರ ವಿಭಾಗದಲ್ಲಿ ಹಂಗಳೂರಿನ ನಿಶಾಂತ್ ಡಿಸೋಜ್ ಪ್ರಥಮ ಸ್ಥಾನ, 13ರ ವಯೋಮಾನದ ಬಾಲಕರ ವಿಭಾಗದಲ್ಲಿ ತೀರ್ಥಹಳ್ಳಿಯ ತೇಜಸ್ ಎಂ. ಶೆಣೈ ದ್ವಿತೀಯ ಸ್ಥಾನ, 11ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಸಳ್ವಾಡಿಯ ಆರಾಧ್ಯ ಎಸ್. ಶೆಟ್ಟಿ ದ್ವಿತೀಯ ಸ್ಥಾನ, 9ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಕೋಟೇಶ್ವರದ ಸನಾ ಶೆಟ್ಟಿ ಪ್ರಥಮ ಸ್ಥಾನ, ಮತ್ತು 7ರ ವಯೋಮಾನದ ಬಾಲಕರ ವಿಭಾಗದಲ್ಲಿ ಕುಂದಾಪುರದ ಸಿದ್ಧಾಂತ ವಿ. ಪುಜಾರಿ ಪ್ರಥಮ ಸ್ಥಾನ ಹಾಗೂ ಉಪ್ಪುಂದದ ತೇಜಸ್ ದ್ವೀತಿಯ ಸ್ಥಾನ ಪಡೆದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪ್ರತಿಯೊಬ್ಬ ಕನ್ನಡಿಗನು ಕನ್ನಡದ ಉಸಿರು ಉಳಿಸುವ ಕಾರ್ಯ ಮಾಡಬೇಕು. ಕಲಾಕ್ಷೇತ್ರ ಕುಂದಾಪುರ ಈ ಕಾರ್ಯವನ್ನು ಉತ್ತಮ ರೀತಿಯಲ್ಲಿ ಮಾಡುತ್ತಿದೆ, ಕನ್ನಡದ ಹಬ್ಬವನ್ನು ಸಂಭ್ರಮಿಸುತ್ತಿದೆ ಸಾಹಿತಿ ಹಾಗೂ ಹಿರಿಯ ನ್ಯಾಯವಾದಿ ಎ.ಎಸ್.ಎನ್. ಹೆಬ್ಬಾರ್ ಹೇಳಿದರು. ಅವರು ಸೋಮವಾರ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಲಾಕ್ಷೇತ್ರ- ಕುಂದಾಪುರ ಇಲ್ಲಿನ ಬೋರ್ಡ್ ಹೈಸ್ಕೂಲಿನ ಕಲಾ ಮಂದಿರದಲ್ಲಿ ನ. ೧ರಿಂದ ನ. ೫ರ ವರೆಗೆ ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳ ರಾಜ್ಯೋತ್ಸವ ಸಂಭ್ರಮದ ಉದ್ಘಾಟಿಸಿ ಮಾತನಾಡಿ ಕಾಸರಗೋಡಿನ ವಿಚಾರದಲ್ಲಿ ನಮ್ಮ ಸರಕಾರದ ಧೋರಣೆ ಮಾತ್ರ ನಿಜಕ್ಕೂ ಖೇದನೀಯ ಎಂದು ಬೇಸರ ವ್ಯಕ್ತಪಡಿಸಿದರು. ಕಲಾಕ್ಷೇತ್ರ ಕುಂದಾಪುರದ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ಪ್ರಸ್ತಾವಿಕ ಮಾತನಾಡಿ, ಕಲಾಕ್ಷೇತ್ರವು ಕುಂದಾಪುರ, ಕುಂದಗನ್ನಡ ಭಾಷೆ, ಆಚಾರ, ವಿಚಾರ, ಸಂಸ್ಕೃತಿಯ ಪ್ರತೀಕವಾಗಿದೆ. ಈ ರಾಜ್ಯೋತ್ಸವ ಸಂಭ್ರಮದಲ್ಲಿ ಚಲನಚಿತ್ರ ಪ್ರದರ್ಶನ ಸಹಿತ ವಿವಿಧ ಕಾಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಈ ಸಂದರ್ಭ ಸಾಹಿತಿ ಮತ್ತು ಲೇಖಕಿ ಪೂರ್ಣಿಮಾ ಎನ್. ಭಟ್ ಕಮಲಶಿಲೆ, ಸರಕಾರಿ…
