Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ, ಬೈಂದೂರು: ಮರವಂತೆಯ ಡಾ. ಶಿವರಾಮ ಕಾರಂತ ಮಾರ್ಗದ ಪಕ್ಕದ ಒಂದು ಮನೆಯವರು ರಸ್ತೆಯ ಅಂಚಿನಲ್ಲಿ ಗೊಬ್ಬರ ಗುಂಡಿ ನಿರ್ಮಿಸಿಕೊಂಡು ಅದರಲ್ಲಿ ರಾಶಿ ಹಾಕುತ್ತಿರುವ ಸೆಗಣಿಯಿಂದ ಅಸಹ್ಯಕರವೂ, ಸಾರ್ವಜನಿಕರ ಆರೋಗ್ಯಕ್ಕೆ ಹಾನಿಕಾರಕವೂ ಆದ ವಾತಾವರಣ ನಿರ್ಮಾಣವಾಗಿದ್ದು ಅದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಳಕಳಿ ಹೊಂದಿದ ಹಿರಿಯ ನಾಗರಿಕರೊಬ್ಬರು ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದಾರೆ. ಈ ಗುಂಡಿಯಲ್ಲಿ ದೊಡ್ಡ ಗಾತ್ರದಲ್ಲಿ ಸಂಗ್ರಹವಾದ ಸೆಗಣಿ ಮತ್ತು ಅದರ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಜನರು ಅದನ್ನು ಮೆಟ್ಟಿಕೊಂಡು ಓಡಾಡಬೇಕಾಗಿದೆ. ಈ ಗುಂಡಿಯಲ್ಲಿ ದೀರ್ಘಕಾಲದಿಂದ ಸಂಗ್ರಹವಾಗಿ ಕೊಳೆಯುತ್ತಿರುವ ಸೆಗಣಿ ಸೊಳ್ಳೆ, ರೋಗಾಣು ಉತ್ಪತ್ತಿಯ ಕೇಂದ್ರವಾಗಿ ಮಾರ್ಪಟ್ಟಿದೆ. ಆ ಮನೆಯವರಿಗೆ ಮನೆ ಮತ್ತು ಕೊಟ್ಟಿಗೆಯ ಸಮೀಪ ಗೊಬ್ಬರ ಸಂಗ್ರಹಿಸಲು ಅಗತ್ಯ ಜಮೀನು ಇದ್ದರೂ ಅವುಗಳಿಂದ ದೂರದಲ್ಲಿ ಅನ್ಯ ಮನೆಗಳ ಹತ್ತಿರ, ಸಾರ್ವಜನಿಕ ರಸ್ತೆ ಹಾಗೂ ಸುತ್ತಲಿನ ಖಾಸಗಿ ಸ್ಥಳಗಳಿಂದ ಒಂದಂಗುಲವೂ ಅಂತರ ಬಿಡದೆ ಸೆಗಣಿ, ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಗುಂಡಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಇಲ್ಲಿನ ಕಾರಂತ ಥೀಮ್ ಪಾರ್ಕ್‌ನಲ್ಲಿ ಜಗದೋದ್ದಾರ – ನಾ ಆಡಳಿತ ಕಛೇರಿಯನ್ನು ಧಾರ್ಮಿಕ ದತ್ತಿ ದ. ಕ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇತ್ತಿಚೆಗೆ ಉದ್ಘಾಟಿಸಿದರು. ಉದ್ಘಾಟಿಸಿ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಕ್ಕಳೆಂದರೆ ಕಾರಂತರಿಗೆ ಅಚ್ಚು ಮೆಚ್ಚು ಮಕ್ಕಳಿಗೋಸ್ಕರ ಬಾಲ ಪ್ರಪಂಚದಂತಹ ಪುಸ್ತಕಗಳನ್ನು ಬರೆದಿರುವುದು ಮಾತ್ರವಲ್ಲದೇ ಮಕ್ಕಳ ಭೌತಿಕ ವಿಕಸನಕ್ಕೆ ಸಂಬಂಧಿಸಿದಂತೆ ಅನೇಕ ಪ್ರಯೋಗಗಳನ್ನು ಕಾರಂತರು ಮಾಡಿದ್ದಾರೆ, ಅದೇ ಪ್ರಕಾರ ಥೀಮ್ ಪಾರ್ಕ್‌ನಲ್ಲಿ ಮಕ್ಕಳಿಗೆ ಸಂಬಂಧಿಸಿದ ಚಟುವಟಿಕೆ, ತರಬೇತಿ ಭೌತಿಕ ವಿಕಸನಕ್ಕೆ ಸಂಬಂಧಿಸಿದ ಶಿಬಿರಗಳನ್ನು ಆಯೋಜಿಸಿಕೊಂಡು ಬರುತ್ತಿರುವುದರಿಂದ ಆಸಕ್ತ ಮಕ್ಕಳ ಕಲಿಯುವಿಕೆಯ ಹಸಿವಿನ ದಾಹ ನೀಗಿಸಿದಂತಾಗುತ್ತದೆ ಕಾರಂತ ಥೀಮ್ ಪಾರ್ಕ್ ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಲಿದ್ದು ಸಂಗೀತ ಕಾರಂಜಿ , ಯುದ್ಧ ವಿಮಾನದಂತಹ ಆಕರ್ಷಣೆ ಮುಂದಿನ ದಿನಗಳಲ್ಲಿ ಅಳವಡಿಸಿ ಕಾರಂತ ಥೀಮ್ ಪಾರ್ಕ್‌ನ ಸೊಬಗು ಇನ್ನಷ್ಟು ಹೆಚ್ಚಾಗಲಿದೆ ಎಂದರು. ಈ ಸಂದರ್ಭದಲ್ಲಿ ಕಾರಂತ ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಪ್ಟೆಂಬರ್ 2020 ರಾಷ್ಟ್ರಮಟ್ಟದಲ್ಲಿ ಜರುಗಿದ ನೀಟ್ ಪರೀಕ್ಷೆಯಲ್ಲಿ ಕುಂದಾಪುರ ವೆಂಕಟರಮಣ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಲಭ್ಯವಿರುವ ನೀಟ್ ಕೋಚಿಂಗ್‌ನ ಸದುಪಯೋಗವನ್ನು ಪಡೆದುಕೊಂಡು ಉತ್ತೀರ್ಣರಾಗಿದ್ದಾರೆ. ಸಾಧನೆ ಮೆರೆದ ವಿದ್ಯಾರ್ಥಿಗಳನ್ನು ಶ್ರೀ ವೆಂಕಟರಮಣ ದೇವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನ ಆಡಳಿತ ಮಂಡಳಿ, ಕಾಲೇಜು ಪ್ರಾಂಶುಪಾಲರು ಹಾಗೂ ಉಪನ್ಯಾಸಕವೃಂದ ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಉಡುಪಿ ಪ್ರಾದೇಶಿಕ ಕೇಂದ್ರ ಕಚೇರಿಯ ಸ್ನಾತಕ ಪದವಿಗಳಾದ ಬಿ.ಎ/ಬಿ.ಕಾಂ ಮತ್ತು ಬಿ. ಲಿಬ್. ಐ. ಎಸ್ಸಿ, ಸ್ನಾತಕೋತ್ತರ ಪದವಿಗಳಾದ ಎಂ.ಎ/ಎ.ಕಾ ಎಂ.ಬಿ.ಎ. ಎಂ.ಸ್ಸಿ /ಎಂ.ಲಿಬ್. ಐಸ್ಸಿ, ಎಂ.ಬಿ.ಎ, ಡಿಪ್ಲೋಮಾ., ಪಿ. ಜಿ ಡಿಪ್ಲೋಮಾ., ಸರ್ಟಿಫಿಕೇಟ್ ಮುಂತಾದ ಕೋರ್ಸುಗಳ ಆನ್‌ಲೈನ್ ಪ್ರವೇಶಾತಿಗೆ ದಂಡ ಶುಲ್ಕವಿಲ್ಲದೇ ಅಕ್ಟೋಬರ್ 29 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಕರಾಮುವಿ ವೆಬ್‌ಸೈಟ್ http://www.ksoumysuru.ac.in ನ್ನು ಸಂಪರ್ಕಿಸುವಂತೆ ಉಡುಪಿ ಪ್ರಾದೇಶಿಕ ನಿರ್ದೇಶಕ ಡಾ. ಕೆ. ಪಿ ಮಹಾಲಿಂಗಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ವತ್ತಿನಕಟ್ಟೆ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಶರವನ್ನವರಾತ್ರಿ ಉತ್ಸವಕ್ಕೆ ಚಾಲನೆ ದೊರೆಯಿತು. ದೇವಸ್ಥಾನದ ಸೇವಾಸಮಿತಿ ವ್ಯವಸ್ಥಾಪನಾ ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ ಉತ್ಸವಕ್ಕೆ ಚಾಲನೆ ನಿಡಿದರು. ಪ್ರದಾನ ಅರ್ಚಕರಾದ ಬಿ. ಕೃಷ್ಣಮೂರ್ತಿ ನಾವುಡ ಅವರ  ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು ಈ ಸಂದರ್ಭದಲ್ಲಿ ಸೇವಾಸಮಿತಿ ವ್ಯವಸ್ಥಾಪನಾ ಕಾರ್ಯದರ್ಶಿ ಎಸ್. ಶಿವರಾಮ ಪೂಜಾರಿ, ಸದಸ್ಯರಾದ ಶಂಕರ ಮೊಗವೀರ, ಶ್ರೀನಿವಾಸ ಕುಮಾರ್, ಸತ್ಯ ಪ್ರಸನ್ನ, ಪಾತ್ರಿಗಳಾದ ಅಣ್ಣಪ್ಪ ಪೂಜಾರಿ ಹಾಗೂ ಭಕ್ತಾದಿಗಳು ಹಾಜರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಹೆಬ್ರಿ : ಅಖಿಲ ಭಾರತ ತುಳುನಾಡ ದೈವರಾಧಕರ ಒಕ್ಕೂಟ ಉಡುಪಿ ಜಿಲ್ಲೆ ಹೆಬ್ರಿ ಘಟಕದ ವತಿಯಿಂದ ಕೆರೆಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಮಹಾಸಭೆಯಲ್ಲಿ ಹೆಬ್ರಿ ಘಟಕದ ಮಾಧ್ಯಮ ಸಂಚಾಲಕರಾಗಿ ನೇಮಕಗೊಂಡ ಪತ್ರಕರ್ತ ಸುಕುಮಾರ್‌ ಮುನಿಯಾಲ್‌ ಅವರನ್ನು ಗೌರವಿಸಲಾಯಿತು. ಅಧ್ಯಕ್ಷತೆ ವಹಿಸಿದ ಅಖಿಲ ಭಾರತ ತುಳುನಾಡ ದೈವರಾಧಕರ ಒಕ್ಕೂಟ ಹೆಬ್ರಿ ಘಟಕದ ಅಧ್ಯಕ್ಷ ಮುದ್ರಾಡಿ ಸುಕುಮಾರ್‌ ಪೂಜಾರಿ ಮಾತನಾಡಿ, ದೈವರಾಧಕರ ಸಂಘಟನೆ ಇನ್ನಷ್ಟು ಬಲಗೊಳ್ಳಬೇಕಿದೆ, ಅತೀ ಹೆಚ್ಚು ಸದಸ್ಯರಾಗುವ ಮೂಲಕ ಸಂಘಟನೆಯ ಬಲವರ್ಧನೆಗೆ ಎಲ್ಲರೂ ಕೈಜೋಡಿಸಿ, ದೈವದ ಚಾಕ್ರಿಯವರ ಜೊತೆ ತಾನು ನಿರಂತರ ಇರುವುದಾಗಿ ಹೇಳಿದರು. ಗೌರವ ಸಲಹೆಗಾರ ಮಂಡಾಡಿಜಡ್ಡು ಅಣ್ಣಪ್ಪ ಕುಲಾಲ್‌ ಮಾತನಾಡಿ ದೈವರಾಧಕರು ಮತ್ತು ಚಾಕರಿಯವರ ಸಮಸ್ಯೆಗಳು ಸಂಘಟನೆಯ ಬಲವರ್ಧನೆಯ ಮೂಲಕ ಸರಿಯಾಗಬೇಕಿದೆ, ದೈವರಾಧಕರ ಸಹಕಾರಿ ಒಕ್ಕೂಟ ಎಲ್ಲರಿಗೂ ಮಾದರಿಯಾಗಲಿ ಎಂದು ಹೇಳಿದರು. ಅಖಿಲ ಭಾರತ ತುಳುನಾಡ ದೈವರಾಧಕರ ಒಕ್ಕೂಟ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್‌ ಶೆಟ್ಟಿ ಮಾರ್ಗದರ್ಶನ ನೀಡಿದರು. ಅಖಿಲ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ : ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಕಾರಂತ ಟ್ರಸ್ಟ್ ಉಡುಪಿ, ಯು – ಚಾನೆಲ್ ಸಹಯೋಗದಲ್ಲಿ ನಡೆಯುತ್ತಿರುವ ಡಾ. ಶಿವರಾಮ ಕಾರಂತ ಜನ್ಮ ದಿನೋತ್ಸವ ಹಾಗೂ ಹುಟ್ಟೂರ ಪ್ರಶಸ್ತಿಗೆ 16ನೇ ವರ್ಷದ ಸಂಭ್ರಮದ ಅಂಗವಾಗಿ ನಡೆಯುತ್ತಿರುವ ಸಾಹಿತ್ಯಿಕ – ಸಾಂಸ್ಕೃತಿಕ ಸುಗ್ಗಿ ಆಲ್ಮೋರ – 2020 ಮರೆಯಲಾಗದ ಶಬ್ಧತೀರ ಏಳನೇ ದಿನದ ಕಾರಂತ ಚಿಂತನ ಮಂತನ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಚಿಂತಕಿ ಕೀರ್ತಿ ಭಟ್ ಬೈಂದೂರು ಮಾತನಾಡಿ, ಕಾರಂತರು ಬದುಕಿನುದ್ದಕ್ಕೂ ಬದುಕಿದ ರೀತಿ, ಅವರು ಅನುಸರಿಸುತ್ತಿದ್ದ ತತ್ವ ಸಿದ್ದಾಂತಗಳು ನಮ್ಮಂತಹ ಯುವ ಜನಾಂಗಕ್ಕೆ ಪ್ರೇರಕ ಶಕ್ತಿಯಾಗಿದ್ದಾರೆ, ಅಲ್ಲದೇ ಅವರು ತಮ್ಮ ಅನುಭವವನ್ನು ಬರವಣಿಗೆ ಮೂಲಕ ವ್ಯಕ್ತ ಪಡಿಸುತ್ತಿದ್ದರು ಅಂತಹ ಕಾರಂತ ನುಡಿಗಳು ಮುಂದೆ ಪಠ್ಯ ಪುಸ್ತಕದಲ್ಲಿ ಮುದ್ರಣವಾಗುವ ಕೆಲಸವಾಗಿ ವಿದ್ಯಾರ್ಥಿಗಳಲ್ಲಿ ಕಾರಂತರ ಅನುಭವಗಳು ಬದುಕಿನಲ್ಲಿ ಪಾಠವಾಗಲಿ ಎಂದು ಹೇಳಿದರು. ಕಾರಂತ ಚಿಂತನ ಕಾರ್ಯಕ್ರಮದ ಬಳಿಕ ಸುಶ್ಮಿತಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ:  ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಅಕ್ಟೋಬರ್ 18 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲೆಯ ಪರೀಕ್ಷಾ ಕೇಂದ್ರಗಳಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ಉಡುಪಿ, ಮಿಲಾಗ್ರೀಸ್ ಯುನಿವರ್ಸಿಟಿ ಕಾಲೇಜು ಮತ್ತು ಪ್ರೀ – ಯುನಿವರ್ಸಿಟಿ ಕಾಲೇಜು ಕಲ್ಯಾಣಪುರ ಉಡುಪಿ, ಡಾ.ಜಿ.ಶಂಕರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡು ಉಡುಪಿ, ಮಹಿಳಾ ಸರ್ಕಾರಿ ಪ್ರೀ – ಯುನಿವರ್ಸಿಟಿ ಮತ್ತುಸರ್ಕಾರಿ ಪ್ರೌಢ ಶಾಲೆ ಕಾಲೇಜು ಉಡುಪಿ, ಪೂರ್ಣಪ್ರಜ್ಞ ಯುನಿವರ್ಸಿಟಿ  ಕಾಲೇಜು ಉಡುಪಿ, ಪೂರ್ಣಪ್ರಜ್ಞ ಪ್ರೀ – ಯುನಿವರ್ಸಿಟಿ ಕಾಲೇಜು ಉಡುಪಿ, ಮಹಾತ್ಮ ಗಾಂಧೀ ಮೆಮೋರಿಯಲ್ ಪ್ರೀ – ಯುನಿವರ್ಸಿಟಿ ಕಾಲೇಜು ಕುಂಜಿಬೆಟ್ಟು ಉಡುಪಿ, ಮಹಾತ್ಮ ಗಾಂಧೀ ಮೆಮೋರಿಯಲ್ ಯುನಿವರ್ಸಿಟಿ ಕಾಲೇಜು ಕುಂಜಿಬೆಟ್ಟು ಉಡುಪಿ, ವಿದ್ಯೋದಯ ಪ್ರೀ – ಯುನಿವರ್ಸಿಟಿ ಕಾಲೇಜು ವಾದಿರಾಜ ರೋಡ್ ಉಡುಪಿ, ಮೌಂಟ್ ರೋಸರಿ ಇಂಗ್ಲೀಷ್ ಮೀಡಿಯಮ್ ಸ್ಕೂಲ್ ಕಲ್ಯಾಣಪುರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರೀ ಬಗಳಾಂಬ ತಾಯಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ ಅ. 17 ರಿಂದ 26ರವರೆಗೆ ಗುರುಪರಾಶಕ್ತಿ ಮಠ, ಮರಕಡದ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮಿಗಳವರ ಅನುಗ್ರಹದೊಂದಿಗೆ ವೇದಮೂರ್ತಿ ಕೆ. ಚಂದ್ರಶೇಖರ ಸೋಮಯಾಜಿಯವರ ನೇತೃತ್ವದಲ್ಲಿ ಜರುಗಲಿದೆ. ಅ. 17 ರಂದು ಕಲಶ ಸ್ಥಾಪನೆ, ಅ. 24 ರಂದು ಗಣಪತಿ ಪೂಜೆ, ಚಂಡಿಕಾಯಾಗ, ಮಹಾಪೂಜೆ, ಅನ್ನಸಂತರ್ಪಣೆ ಅ.25 ರಂದು ರಾತ್ರಿ ರಂಗ ಪೂಜೆ ಅ. 26 ರಂದು ಕಲಶ ವಿಸರ್ಜನೆ ನಡೆಯಲಿದೆ. ಪ್ರತಿದಿನ ಸಂಜೆ 7 ರಿಂದ ವಿವಿಧ ತಂಡಗಳಿಂದ ಭಜನೆ ನಡೆಯಲಿದೆ. ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀದೇವಿಯ ಸಿರಿಮುಡಿ ಗಂಧಪ್ರಸಾದವನ್ನು ಸ್ವೀಕರಿಸಿ, ತಾಯಿಯ ಕೃಪೆಗೆ ಪಾತ್ರರಾಗುವಂತೆ ಆಡಳಿತ ಮಂಡಳಿ ಹಾಗೂ ಉತ್ಸವ ಸಮಿತಿ ವಿನಂತಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಒತ್ತಿನಣೆ ಬಳಿ ರಾತ್ರಿ ರೌಂಡ್ಸ್‌ನಲ್ಲಿದ್ದ ಬೈಂದೂರು ಸರ್ಕಲ್ ಇನ್ಸಪೆಕ್ಟರ್ ಜೀಪು ಪಲ್ಟಿಯಾಗಿ ಬೀಟ್‌ನಲ್ಲಿದ್ದ ಇನ್ಸ್‌ಪೆಕ್ಟರ್ ಸುರೇಶ್ ನಾಯ್ಕ್ ಹಾಗೂ ಜೀಪು ಚಾಲಕ ಹೇಮರಾಜ್ ಅವರು ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಶಿರೂರಿನಿಂದ ಬೈಂದೂರು ಕಡೆ ಬರುತ್ತಿದ್ದ ಸಂದರ್ಭ ರಾಘವೇಂದ್ರ ಸ್ವಾಮಿ ಮಠದ ಬಳಿ ಜೀಪು ನಿಯಂತ್ರಣ ತಪ್ಪಿ ಇನ್ನೊಂದು ರಸ್ತೆಯ ಬದಿಯ ಚರಂಡಿಗೆ ಅಡಿಮೇಲಾಗಿ ಬಿದ್ದಿತ್ತು. ಜೀಪ್‌ನಲ್ಲಿದ್ದ ವೃತ್ತ ನಿರೀಕ್ಷಕರಾದ ಸುರೇಶ್ ನಾಯ್ಕ್ ರವರ ಕಾಲಿಗೆ ಹಾಗೂ ಜೀಪ್ ಚಾಲಕ ಹೇಮರಾಜ್ ರವರ ತಲೆ, ಕೈ, ಕಾಲಿಗೆ ಪೆಟ್ಟಾಗಿದೆ. ಅಪಘಾತದ ರಭಸಕ್ಕೆ ಜೀಪು ಸಂಪೂರ್ಣ ನಜ್ಜುಗುಜ್ಜಾಗಿದ್ದು ಜೀಪ್‌ನಲ್ಲಿ ಸಿಕ್ಕಿಬಿದ್ದ ಇಬ್ಬರನ್ನು ಹೊರತೆಗೆಯಲು ಸುಮಾರು ಒಂದು ತಾಸು ಕಾರ್ಯಾಚರಣೆ ಮಾಡಿ ಬಳಿಕ ಕ್ರೇನ್ ಮೂಲಕ ಜೀಪ್ ಎತ್ತಿ ಗಾಯಾಳುಗಳನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಗೆ ಉಡುಪಿ ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್ ಗೋಪಿಕೃಷ್ಣ, ಟ್ರಾಫಿಕ್ ಪಿಎಸ್ಐ ಸುದರ್ಶನ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ…

Read More