ಕಾರಂತರು ಯುವ ಜನಾಂಗದ ಪ್ರೇರಕ ಶಕ್ತಿ: ಕೀರ್ತಿ ಭಟ್

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ : ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಕಾರಂತ ಟ್ರಸ್ಟ್ ಉಡುಪಿ, ಯು – ಚಾನೆಲ್ ಸಹಯೋಗದಲ್ಲಿ ನಡೆಯುತ್ತಿರುವ ಡಾ. ಶಿವರಾಮ ಕಾರಂತ ಜನ್ಮ ದಿನೋತ್ಸವ ಹಾಗೂ ಹುಟ್ಟೂರ ಪ್ರಶಸ್ತಿಗೆ 16ನೇ ವರ್ಷದ ಸಂಭ್ರಮದ ಅಂಗವಾಗಿ ನಡೆಯುತ್ತಿರುವ ಸಾಹಿತ್ಯಿಕ – ಸಾಂಸ್ಕೃತಿಕ ಸುಗ್ಗಿ ಆಲ್ಮೋರ – 2020 ಮರೆಯಲಾಗದ ಶಬ್ಧತೀರ ಏಳನೇ ದಿನದ ಕಾರಂತ ಚಿಂತನ ಮಂತನ ಕಾರ್ಯಕ್ರಮ ನಡೆಯಿತು

Call us

Click Here

ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಚಿಂತಕಿ ಕೀರ್ತಿ ಭಟ್ ಬೈಂದೂರು ಮಾತನಾಡಿ, ಕಾರಂತರು ಬದುಕಿನುದ್ದಕ್ಕೂ ಬದುಕಿದ ರೀತಿ, ಅವರು ಅನುಸರಿಸುತ್ತಿದ್ದ ತತ್ವ ಸಿದ್ದಾಂತಗಳು ನಮ್ಮಂತಹ ಯುವ ಜನಾಂಗಕ್ಕೆ ಪ್ರೇರಕ ಶಕ್ತಿಯಾಗಿದ್ದಾರೆ, ಅಲ್ಲದೇ ಅವರು ತಮ್ಮ ಅನುಭವವನ್ನು ಬರವಣಿಗೆ ಮೂಲಕ ವ್ಯಕ್ತ ಪಡಿಸುತ್ತಿದ್ದರು ಅಂತಹ ಕಾರಂತ ನುಡಿಗಳು ಮುಂದೆ ಪಠ್ಯ ಪುಸ್ತಕದಲ್ಲಿ ಮುದ್ರಣವಾಗುವ ಕೆಲಸವಾಗಿ ವಿದ್ಯಾರ್ಥಿಗಳಲ್ಲಿ ಕಾರಂತರ ಅನುಭವಗಳು ಬದುಕಿನಲ್ಲಿ ಪಾಠವಾಗಲಿ ಎಂದು ಹೇಳಿದರು.

ಕಾರಂತ ಚಿಂತನ ಕಾರ್ಯಕ್ರಮದ ಬಳಿಕ ಸುಶ್ಮಿತಾ ಸಾಲಿಗ್ರಾಮ ಇವರಿಂದ ರಾಧಾನುರಾಗ ಯಕ್ಷ ನಾಟ್ಯ ವೈಭವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ನಿರೂಪಿಸಿ ಕೋಟತಟ್ಟು ಗ್ರಾಮ ಪಂಚಾಯತ್ ಪಿ. ಡಿಓ ಶೈಲಾ ಎಸ್. ಪೂಜಾರಿ ಸ್ವಾಗತಿಸಿ ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಅವರು ವಂದಿಸಿದರು.

Leave a Reply