ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 6 ರಿಂದ 14 ವರ್ಷದೊಳಗಿನ ಪ್ರತಿಭಾವಂತ ಮಕ್ಕಳಿಗೆ ಚಿಗುರು ಕಾರ್ಯಕ್ರಮ, 15 ರಿಂದ 30 ವರ್ಷದೊಳಗಿನ ಪ್ರತಿಭಾವಂತ ಯುವ ಕಲಾವಿದರಿಗೆ ಯುವ ಸೌರಭ ಮತ್ತು ಆಕಾಶವಾಣಿ ಬಿ ಹೈಗ್ರೇಡ್ ಹಾಗೂ ಸರಕಾರದಿಂದ ನೀಡುವ ಪ್ರಶಸ್ತಿ ಪುರಸ್ಕೃತ ಕಲಾವಿದರಿಂದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ನವೆಂಬರ್ 27 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಛೇರಿ, ದೂ. ಸಂ: 0820-2986168 ಅನ್ನು ಸಂಪರ್ಕಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯ ಸರ್ಕಾರದ ಪರಿಸರ ನಿರ್ವಹಣೆ ಮತ್ತು ನೀತಿಯ ಸಂಶೋಧನಾ ಸಂಸ್ಥೆಯ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಅನುದಾನದ ಮೂಲಕ ದತ್ತು ಪಡೆದು ಇಲ್ಲಿನ ಸಮೀಪದ ಕೋಡಿ ಕಡಲ ಕಿನಾರೆಯ ಸೀವಾಕ್ ಪರಿಸರವನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಪರಿಸರ ವಿಭಾಗದ ಮಂಗಳೂರು ಹಾಗೂ ಉಡುಪಿ ಜಿಲ್ಲಾ ಪ್ರಾದೇಶಿಕ ನಿರ್ದೇಶಕ, ಅರಣ್ಯ ಇಲಾಖೆ ಡಿಸಿಎಫ್ ಡಾ.ದಿನೇಶ್ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ಸತ್ಯಶ್ರೀ ಗೌತಮ್, ‘ಕಳೆದ ವರ್ಷ ಎರಡು ಜಿಲ್ಲೆಗಳ 6 ಸಮುದ್ರ ಕಿನಾರೆಗಳಲ್ಲಿ ಸ್ವಚ್ಛತಾ ಜಾಗೃತಿ ಮೂಡಿಸಲಾಗಿತ್ತು. ಇದರ ಮುಂದುವರಿದ ಭಾಗವಾಗಿ ಕೋಡಿ ಕಿನಾರೆಯಲ್ಲಿ ಸ್ಚಚ್ಛತಾ ಕಾರ್ಯ ಆರಂಭಿಸಲಾಗಿದೆ. ಮಾರ್ಚ್ 31ರವರಿಗೆ ನಿತ್ಯವೂ ಸ್ವಚ್ಛತೆ ನಡೆಯಲಿದೆ ಎಂದು ತಿಳಿಸಿದರು. ಕೋಡಿ ಸೀವಾಕ್ ಸಮೀಪದ ಅರಣ್ಯ ಇಲಾಖೆ ಜಾಗದಲ್ಲಿ ‘ಬೀಚ್ ಇಕೋ ಪಾರ್ಕ್’ ಹಾಗೂ ’ಟ್ರೀ ಪಾರ್ಕ್’ ನಿರ್ಮಾಣವಾಗಲಿದೆ ಎನ್ನುವ ಮಾಹಿತಿಯನ್ನು ಅಧಿಕಾರಿಗಳು ನೀಡಿದರು. ಅರಣ್ಯ ಇಲಾಖೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಲಯನ್ಸ್ ಕ್ಲಬ್ ಕುಂದಾಪುರ ವಿಶ್ವ ಲಯನ್ಸ್ ಸೇವಾ ಸಪ್ತಾಹದ ಅಂಗವಾಗಿ ನಡೆಸಿರುವಂತಹ ರಿಲೀವ್ ದ ಹಂಗರ್ ಕಾರ್ಯಕ್ರಮದ ಅಂಗವಾಗಿ ಸಿಸಿಲಿ ಕೋಟ್ಯಾನ್ ರವರು ನಡೆಸಿಕೊಂಡು ಬರುತ್ತಿರುವ ಚೈತನ್ಯ ವೃದ್ಧಾಶ್ರಮಕ್ಕೆ ಅವಶ್ಯಕತೆ ಇರುವಂತಹ ಊಟದ ಅಕ್ಕಿಯನ್ನು ಲಯನ್ಸ್ ಕ್ಲಬ್ ಕುಂದಾಪುರ ವತಿಯಿಂದ ನೀಡಿರುತ್ತಾರೆ. ಲಯನ್ಸ್ ಕ್ಲಬ್ ಕುಂದಾಪುರದ ಅಧ್ಯಕ್ಷರಾದ ಲಯನ್ ಚಂದ್ರಶೇಖರ್ ಕಲ್ಪತರು, ಲಯನ್ ರಾಜೀವ್ ಕೋಟ್ಯಾನ್, ಲಯನ್ ನವೀನ್ ಕುಮಾರ್ ಶೆಟ್ಟಿ, ಲಯನ್ ವೇಣುಗೋಪಾಲ ಶೆಟ್ಟಿ ಹಾಗೂ ಸಂಸ್ಥೆಯ ಸಿಸಿಲಿ ಕೋಟ್ಯಾನ್ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಮಿಜಾರ್ನ ಶೋಭಾವನ ಕ್ಯಾಂಪಸ್ನ ‘ಆಳ್ವಾಸ್ ಪುನರ್ಜನ್ಮ’ಸಮಗ್ರ ವೈದ್ಯಕೀಯ ಚಿಕಿತ್ಸೆಯ ದುಶ್ಚಟ ನಿವಾರಣಾ ಕೇಂದ್ರದಲ್ಲಿ ’ಕುಟುಂಬ ಸಮ್ಮಿಲನ ಸಭೆ’ ಹಾಗೂ ದೀಪಾವಳಿ ಆಚರಣೆ ನಡೆಯಿತು. ಸಭೆಯಲ್ಲಿ ಉಪಸ್ಥಿತರಿದ್ದ ಆಯುರ್ವೇದ ಮನೋರೋಗ ತಜ್ಞ ಡಾ. ರವಿ ಪ್ರಸಾದ ಹೆಗ್ಡೆ ಮಾತನಾಡಿ, ಹಲವು ಸಂಧರ್ಭದಲ್ಲಿ ಕುಡಿತ ಮನುಷ್ಯ ತಾನಾಗಿಯೆ ಕಲಿಯುವುದಲ್ಲ. ಇನ್ನೊಬ್ಬರ ಒತ್ತಾಯದಿಂದ ಕುಡಿಯುತ್ತಾನೆ. ನಂತರ ದಿನಗಳಲ್ಲಿ ಕುಡಿತ ಚಟವಾಗಿ ಮಾರ್ಪಟ್ಟು, ದುಡಿತ ಕಡಿಮೆಯಾಗಿ ಕುಡಿತ ಅಧಿಕವಾದಾಗ ಜೀವನ ನಡೆಸುವುದು ಕಷ್ಟವಾಗಿ ಬಿಡುತ್ತದೆ ಎಂದು ಹೇಳಿದರು. ಆಳ್ವಾಸ್ ಪದವಿ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಡಾ ಮಧುಮಾಲ ಮಾತನಾಡಿ, ವ್ಯಸನಗಳಿಗೆ ಒಳಗಾಗಿದ್ದವರು, ವ್ಯಸನ ಮುಕ್ತರಾಗಬೇಕೆಂಬ ದೊಡ್ಡ ನಿರ್ಧಾರ ತೆಗೆದುಕೊಳ್ಳುವುದು ಚಿಕ್ಕ ವಿಷಯವಲ್ಲ. ಕುಡಿತದಿಂದ ಸಮಾಜದಲ್ಲಿ ಗೌರವ ಹಾಳಾಗುವುದರೊಂದಿಗೆ ಜನರು ಕೀಳಾಗಿ ನೋಡುತ್ತಾರೆ. ಕುಡಿತದಿಂದ ಪಡೆದು ಕೊಳ್ಳುವುದು ಎನೂ ಇಲ್ಲಾ, ಎಲ್ಲವೂ ಕಳೆದು ಕೊಳ್ಳುವುದೇ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕೊನೆಯಲ್ಲಿ ದೀಪ ಹಚ್ಚುವುದರ ಮೂಲಕ ಅಜ್ಞಾನ, ದುಷ್ಚಟವೆಲ್ಲ ಕಳೆದು, ಸುಜ್ಞಾನ ಮೂಡಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಲಯನ್ಸ್ ಕ್ಲಬ್ ಕುಂದಾಪುರ, ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜು ಹಾಗೂ ಶ್ರೀ ವಿನಾಯಕ ಕ್ಲಿನಿಕ್ ಇವರ ಸಹಯೋಗದಲ್ಲಿ ಉಚಿತ ಮಧುಮೇಹ ಪರೀಕ್ಷಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಲಯನ್ಸ್ ಕ್ಲಬ್ ಕುಂದಾಪುರ ಅಧ್ಯಕ್ಷ ಲಯನ್ ಚಂದ್ರಶೇಖರ ಕಲ್ಪತರು, ಘಟಕದ ಕಾರ್ಯದರ್ಶಿ ಪ್ರೊ. ರಾಜೇಂದ್ರ, ಲಯನ್ಸ್ ಕ್ಲಬ್ ನ ಡಿಸ್ಟ್ರಿಕ್ಟ್ ಕ್ಯಾಬಿನೇಟ್ ಮೆಂಬರ್ ಲಯನ್ ರಾಜೀವ ಕೋಟ್ಯಾನ್, ರೀಜನಲ್ ಸೆಕ್ರೆಟರಿ ಲಯನ್ ವೇಣುಗೋಪಾಲ್ ಶೆಟ್ಟಿ, ಉದ್ಯಮಿ ರಾಧಾಕೃಷ್ಣ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ನವೀನ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಶ್ರೀ ವಿನಾಯಕ ಕ್ಲಿನಿಕಲ್ ಲ್ಯಾಬ್ ನ ಸಿಬ್ಬಂದಿ ಬೇಬಿ ಮಧುಮೇಹ ಪರೀಕ್ಷೆಯನ್ನು ನಡೆಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಪ್ರಸಕ್ತ ಸಾಲಿನಲ್ಲಿ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ, ಸಿಖ್ ಮತ್ತು ಪಾರ್ಸಿ ಜನಾಂಗದವರಿದ ನಿಗಮದ ವಿವಿಧ ಯೋಜನೆಗಳಿಗೆ ಸಾಲ ಸೌಲಭ್ಯ ಪಡೆಯಲು ಆನ್ಲೈನ್ kmdc.kar.nic.in/loan ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 10 ಕೊನೆಯ ದಿನವಾಗಿದ್ದು, ದಾಖಲಾತಿಗಳೊಂದಿಗೆ ಅರ್ಜಿಯನ್ನು ಜಿಲ್ಲಾ ಕಛೇರಿಗೆ ಸಲ್ಲಿಸಲು ಡಿಸೆಂಬರ್ 21 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಉಡುಪಿ ಜಿಲ್ಲೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ. ಮೈಕ್ರೋ ಸಾಲ ಯೋಜನೆ-ಮಹಿಳೆಯರಿಂದ ಅರ್ಜಿ ಆಹ್ವಾನ ಕೋವಿಡ್-19ರ ಪಿಡುಗಿನಿಂದಾಗಿ ತೊಂದರೆಗೊಳಗಾದ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಯಾವುದೇ ಯೋಜನೆಯಲ್ಲೂ ಇದುವರೆಗೆ ಸಾಲ, ಸಹಾಯಧನ ಪಡೆಯದ ಇರುವ ಅಲ್ಪಸಂಖ್ಯಾತ ಸಮುದಾಯದ ಅಂತ್ಯೋದಯ/ ಬಿಪಿಎಲ್ ಕಾರ್ಡ್ ಹೊಂದಿರುವ 25 ರಿಂದ 50 ವಯೋಮಾನದೊಳಗಿನ ಮಹಿಳೆಯರಿಗೆ ತಳ್ಳುವ ಗಾಡಿಯಲ್ಲಿ ವ್ಯಾಪಾರ, ಬೀದಿ ವ್ಯಾಪಾರ, ಜಾತ್ರೆಗಳಲ್ಲಿ ವ್ಯಾಪಾರ, ಕಿರಾಣಿ ಅಂಗಡಿ, ಅರಿಷಿನ/ಕುಂಕುಮ/ ಅಗರಬತ್ತಿ/ಕರ್ಪೂರ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ಗೆ ಬ್ರಹ್ಮಾವರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಚ್.ವಿ. ಇಬ್ರಾಹಿಮಾಪೂರ ಭೇಟಿ ನೀಡಿ ಕಾರಂತರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಆರ್ಟ್ ಗ್ಯಾಲರಿ, ರಂಗ ಮಂದಿರ, ಅಂಗನವಾಡಿ, ಗ್ರಂಥಾಲಯ ವೀಕ್ಷಿಸಿದರು. ವೀಕ್ಷಿಸಿ ಮಾತನಾಡಿದ ಎಚ್.ವಿ. ಇಬ್ರಾಹಿಮಾಪೂರ, ಕಾರಂತರು ನಮಗಾಗಿ ತುಂಬಾ ನೆನಪುಗಳನ್ನು, ಬದುಕಿನ ಪಾಠಗಳನ್ನು ನೀಡಿದ್ದಾರೆ ಅದನ್ನು ಜನರಿಗೆ ತಲುಪಿಸುವ ಕಾರ್ಯ ಕಾರಂತ ಥೀಮ್ ಪಾರ್ಕ್ನಿಂದ ಆಗುತ್ತಿದ್ದೆ, ಇದು ಇನ್ನಷ್ಟೂ ಪ್ರಸಿದ್ದಿ ಹೊಂದಿ ಇನ್ನಷ್ಟೂ ಪ್ರವಾಸಿಗರು ಆಗಮಿಸಿ ಕಾರಂತ ಬದುಕು – ಬರಹ ಎಲ್ಲಾರಿಗೂ ತಲುಪುವಂತೆ ಆಗಲಿ ಎಂದು ಹೇಳಿದರು. ಅಂಗನವಾಡಿಯ ಸ್ತ್ರೀ – ಶಕ್ತಿ ಸಂಘದ ಸದಸ್ಯರಿಗೆ ಬಚ್ಚಲು ಗುಂಡಿ ನಿರ್ಮಾಣ – ಪೌಷ್ಠಿಕ ತೋಟದ ನಿರ್ಮಾಣಕ್ಕೆ ಸರಕಾರಿಂದ ಸಿಗುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಬ್ರಹ್ಮಾವರ ತಾಲೂಕು ಪಂಚಾಯತ್ ಪ್ರಭಾರ ಸಹಾಯಕ ನಿರ್ದೇಶಕ ಮಹೇಶ್ , ಕೋಟತಟ್ಟು ಗ್ರಾಮ ಪಂಚಾಯತ್ ಪಿ.ಡಿ.ಓ ಶೈಲಾ ಎಸ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ದೀಪಾವಳಿ ಹಬ್ಬದ ಪ್ರಯುಕ್ತ ಜಿಲ್ಲೆಯಲ್ಲಿ ಹಸಿರು ಪಟಾಕಿ ಗಳನ್ನು ಮಾತ್ರ ಮಾರಾಟಬೇಕು ಹಾಗೂ ಸಾರ್ವಜನಿಕರು ಪಟಾಕಿ ಸಿಡಿಸುವ ಸಮಯವನ್ನು ಸರ್ಕಾರದ ಅದೇಶದಂತೆ ರಾತ್ರಿ 8 ರಿಂದ 10 ರ ವರಗೆ ಮಾತ್ರ ಸಿಡಿಸಬೇಕು, ನಿಗಧಿತ ಅವಧಿಗಿಂತ ಮುಂಚೆ ಹಾಗೂ ನಿಗಧಿತ ಅವಧಿಯ ನಂತರ ಪಟಾಕಿ ಸಿಡಿಸುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಸುರಕ್ಷಿತ ರೀತಿಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾರ್ವಜನಿಕರು ನಿಗಧಿತ ಅವಧಿಯಲ್ಲಿ ಮಾತ್ರ ಪಟಾಕಿ ಸಿಡಿಸಬೇಕು, ಈ ಕುರಿತ ಪರಿಶೀಲಿಸಲು ಬೀಟ್ ನಲ್ಲಿರುವ ಪೊಲೀಸ್ ಸಿಬ್ಬಂದಿಯನ್ನು ಬಳಸಿಕೊಳ್ಳುವಂತೆ ಪೊಲೀಸ್ ಇಲಾಖೆಗೆ ಮತ್ತು ಎಲ್ಲಾ ತಹಸೀಲ್ದಾರ್ ಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಪಟಾಕಿ ಮಳಿಗೆಗಳಲ್ಲಿ ಹಸಿರು ಪಟಾಕಿ ಮಾತ್ರ ಮಾರಾಟ ಮಾಡಬೇಕು, ನಿಷೇಧಿತ ಪಟಾಕಿಯನ್ನು ಮಾರಾಟ ಮಾಡಿದ್ದಲ್ಲಿ ಅಂತಹ ಅಂಗಡಿಗಳ ಮಾಲೀಕರ ವಿರುದ್ದ ಪ್ರಕರಣ ದಾಖಲಿಸಲಾಗುವುದು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಉಡುಪಿ ಜಿಲ್ಲೆಯಲ್ಲಿ ನ.17ರಿಂದ ಅಂತಿಮ ವರ್ಷದ ಪದವಿ ತರಗತಿಗಳನ್ನು, ಸರ್ಕಾರದ ಮಾರ್ಗಸೂಚಿಯಂತೆ ಎಲ್ಲಾ ಅಗತ್ಯ ಸುರಕ್ಷಾ ಕ್ರಮಗಳನ್ನು ತೆಗೆದುಕೊಂಡು ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಜಿಲ್ಲೆಯ ಸರ್ಕಾರಿ/ ಖಾಸಗಿ/ ಅನುದಾನಿತ/ಅನುದಾನ ರಹಿತ ಕಾಲೇಜುಗಳ ಶೈಕ್ಷಣಿಕ ಚಟುವಟಿಕೆಗಳನ್ನು, ಪ್ರಮಾಣಿತ ಕಾರ್ಯಾಚರಣ ವಿಧಾನ ಮಾರ್ಗಸೂಚಿಯನ್ವಯ ಪ್ರಾರಂಭಿಸುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗಲು ತಮ್ಮ ಪೋಷಕರಿಂದ ನಿಗಧಿತ ನಮೂನೆಯಲ್ಲಿ ಸಹಿ ಮಾಡಿದ ಒಪ್ಪಿಗೆ ಪತ್ರದೊಂದಿಗೆ ಕಾಲೇಜಿಗೆ ಹಾಜರಾಗಬಹುದು. ತರಗತಿಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳನ್ನು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು. ಕಾಲೇಜು ಆರಂಭದ ಕನಿಷ್ಠ 3 ದಿನಗಳ ಮುಂಚೆ ಎಲ್ಲಾ ಅಧ್ಯಾಪಕರು, ಕಾಲೇಜು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಡ್ಡಾಯವಾಗಿ ಕೋವಿಡ್ 19 ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ವರದಿ ಪಡೆದಿರಬೆಕು, ಕಾಲೇಜಿನ ಎಲ್ಲಾ ಕೊಠಡಿಗಳನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಬೇಕು, ಕಾಲೇಜುಗಳಲ್ಲಿ ಅಧ್ಯಾಪಕರು ಕಡ್ಡಾಯವಾಗಿ ಮಾಸ್ಕ್ ಮತ್ತು ಫೇಸ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜಾಗದ ಕನ್ವರ್ಶನ್ ಮಾಡಿಕೊಡಲು ವ್ಯಕ್ತಿಯೋರ್ವರ ಬಳಿ ಲಂಚಕ್ಕಾಗಿ ಬೇಡಿಕೆಯಿಟ್ಟಿದ್ದ ಕಂದಾಯ ಇಲಾಖೆಯ ಅಧಿಕಾರಿ, ಎಸಿಬಿ ಅಧಿಕಾರಿಗಳಿಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಗುರುವಾರ ನಡೆದಿದೆ. ಕುಂದಾಪುರ ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕ ಭರತ್ ವಿ. ಶೆಟ್ಟಿ ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಸಿಕ್ಕಿಬಿದ್ದ ಅಧಿಕಾರಿ. ಈತ ಖಾಸಗಿ ವ್ಯಕ್ತಿಯೋರ್ವರಿಂದ ಜಾಗದ ಕನ್ವರ್ಶನ್ ಮಾಡಿಕೊಡಲು ರೂ.೧೨೦೦೦ ಬೇಡಿಕೆ ಇಟ್ಟಿದ್ದ. ಈ ಬಗ್ಗೆ ಎಸಿಬಿಗೆ ದೂರು ನೀಡಿದ್ದರು. ಅದರಂತೆಯೇ ಇಂದು ಕಾರ್ಯಾಚರಣೆ ನಡೆಸಿದ್ದು, ರೂ. ೫೦೦೦ ಲಂಚ ಸ್ವೀಕರಿಸುತ್ತಿರುವಾಗಲೇ ಭರತ್ ಶೆಟ್ಟಿ ಸಿಕ್ಕಿಬಿದ್ದಿದ್ದು, ವಿಚಾರಣೆ ನಡೆಸಿ ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಎಸಿಬಿ ಉಡುಪಿ ಡಿವೈಎಸ್ಪಿ ಮಂಜುನಾಥ ಕವರಿ, ಇನ್ಸ್ಪೆಕ್ಟರ್ ಸತೀಶ್ ಬಿ.ಎಸ್., ಚಂದ್ರಕಲಾ, ಎಸಿಬಿ ಸಿಬ್ಬಂದಿಗಳಾದ ಯತೀನ್ ಕುಮಾರ್, ಪ್ರಸನ್ನ, ರವೀಂದ್ರ ಗಾಣಿಗ, ಅಬ್ದುಲ್ ಜಲಲ್, ರಾಘವೇಂದ್ರ ಹೊಸ್ಕೋಟೆ, ಸೂರಜ್, ಅಬ್ದುಲ್ ಲತೀಪ್, ಪ್ರತೀಮಾ ಮೊದಲಾದವರು ಇದ್ದರು.
