Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಯಡ್ತರೆ ನೇತಾಜಿ ಯುವಕ ಮಂಡಲದಿಂದ ಗೋಳಿಗುಂಡಿ ಅಮೃತಧಾರಾ ಗೋಶಾಲೆಗೆ ಒಂದು ಟೆಂಪೊ ಒಣ ಹುಲ್ಲನ್ನು ದಾನ ನೀಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಹೆರಿಯ ದೇವಾಡಿಗ, ನೇತಾಜಿ ಯುವಕ ಮಂಡಲದ ಅಧ್ಯಕ್ಷ ರಾಘವೆಂದ್ರ ಪೂಜಾರಿ, ಕಾರ್ಯದರ್ಶಿ ವಿಶ್ವನಾಥ ದೇವಾಡಿಗ, ಸದಸ್ಯರಾದ ವಿರೇಂದ್ರ ಬಿಲ್ಲವ, ಮಂಜುನಾಥ ದೇವಾಡಿಗ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಿರಿಯ ಯಕ್ಷಗಾನ ಕಲಾವಿದ, ತಾಳಮದ್ದಳೆ ಅರ್ಥದಾರಿ, ಸಂಘಟಕರಾದ ಮಲ್ಪೆ ವಾಸುದೇವ ಸಾಮಗ ಅವರು ಅಲ್ಪ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಶನಿವಾರ ಬೆಳಿಗ್ಗೆ ಕೋಟೇಶ್ವರದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ತನ್ನ ವಾಕ್ಪಟುತ್ವದಿಂದ ಹೆಸರು ಗಳಿಸಿದ್ದ ವಾಸುದೇವ ಸಾಮಗ (72) ಅವರು ಕುಂದಾಪುರದ ಕೋಟೇಶ್ವರದಲ್ಲಿ ನೆಲೆಸಿದ್ದರು. ತೆಂಕು-ಬಡಗು ತಿಟ್ಟಿನ ಸವ್ಯಸಾಚಿ ಕಲಾವಿದರೆಂದು ಗುರುತಿಸಲ್ಪಟ್ಟ ವಾಸುದೇವ ಸಾಮಗರ ತಂದೆ ಮತ್ತು ದೊಡ್ಡಪ್ಪ ಆಗಿನ ಮಹಾನ್ ಕಲಾವಿದರು ಮತ್ತು ಹರಿದಾಸರಾದ ಕಾರಣ ಇವರು ಸಹಜವಾಗಿಯೇ ಯಕ್ಷಗಾನದ ಒಲವು ಹೊಂದಿದ್ದರು. ಕೋಟ ಶ್ರೀಧರ ಹಂದೆಯವರ ಒತ್ತಾಸೆಯ ಮೇರೆಗೆ ಪ್ರಥಮ ಬಾರಿಗೆ ದೊಡ್ಡ ಕೂಟದಲ್ಲಿ ಅರ್ಥದಾರಿಯಾಗಿ ಗಮನ ಸೆಳೆದು ಅವರದ್ದೇ ಯಜಮಾನಿಕೆಯ ಅಮೃತೇಶ್ವರಿ ಮೇಳದಲ್ಲಿ ವೃತ್ತಿರಂಗಕ್ಕೆ ಕಾಲಿಟ್ಟರು. ನಾರಣಪ್ಪ ಉಪ್ಪೂರರ ಒಡನಾಟದದಲ್ಲಿ ಪರಿಪೂರ್ಣ ಕಲಾವಿದರಾಗಿ ಆ ಮೇಳದಲ್ಲಿ ಗುರುತಿಸಿಕೊಂಡರು. ಅಲ್ಲಿ ದೊಡ್ಡ ಸಾಮಗರು, ಚಿಟ್ಟಾಣಿಯವರು, ಕೋಟ ವೈಕುಂಠ, ಎಂ.ಎ.ನಾಯಕ್, ನಗರ ಜಗನ್ನಾಥ ಶೆಟ್ಟಿ, ಗೋಡೆ ನಾರಾಯಣ ಹೆಗಡೆಯವರಂತ ಘಟಾನುಘಟಿಗಳ ಸಾಂಗತ್ಯ ದೊರೆಯಿತು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘದ (ಟಿಎಪಿಸಿಎಂಎಸ್) ನಿರ್ದೇಶಕ ಮಂಡಳಿಗೆ ಶುಕ್ರವಾರ ಅವಿರೋಧ ಆಯ್ಕೆ ನಡೆಯಿತು. ‘ಎ’ ವರ್ಗದ ಸದಸ್ಯ ಕ್ಷೇತ್ರದಿಂದ ಹೆಚ್. ಹರಿಪ್ರಸಾದ್ ಶೆಟ್ಟಿ ಮೊಳಹಳ್ಳಿ ವ್ಯ.ಸೇ.ಸ.ಸಂಘ ನಿ. ಬಿದ್ಕಲ್‌ಕಟ್ಟೆ, ಎಸ್. ರಾಜು ಪೂಜಾರಿ ಮರವಂತೆ ಬಡಾಕೆರೆ ವ್ಯ.ಸೇ.ಸ.ಸಂಘ ನಿ. ನಾವುಂದ, ಮೋಹನ್ ದಾಸ್ ಶೆಟ್ಟಿ ಎಂ ಕೋಟೇಶ್ವರ ವ್ಯ.ಸೇ.ಸ.ಸಂಘ ನಿ. ಕೋಟೇಶ್ವರ, ಶರತ್ ಕುಮಾರ್ ಶೆಟ್ಟಿ ಪಂಚಗಂಗಾ ವ್ಯ.ಸೇ.ಸ.ಸಂ ನಿ ಹೆಮ್ಮಾಡಿ, ಕೆ. ಭುಜಂಗ ಶೆಟ್ಟಿ ವಂಡ್ಸೆ ಸಿ.ಎ ಸಂಘ ನಿ, ವಂಡ್ಸೆ, ರವಿ ಗಾಣಿಗ ಮಾನಂಜೆ ವ್ಯ.ಸೇ.ಸ.ಸಂಘ ನಿ., ಕಮಲಶಿಲೆ, ಕೆ.ಮೋಹನ್ ಪೂಜಾರಿ ಖಂಬದಕೋಣೆ ರೈ ಸೇ.ಸ.ಸಂಘ ನಿ. ಉಪ್ಪುಂದ, ಆನಂದ ಬಿಲ್ಲವ ಗಂಗೊಳ್ಳಿ ಸೇವಾ ಸಹಕಾರಿ ಸಂಘ ನಿ. ಗಂಗೊಳ್ಳಿ, ಕೆ. ಸುಧಾಕರ ಶೆಟ್ಟಿ ಕರ್ಕುಂಜೆ ಸಹಕಾರಿ ವ್ಯ.ಸಂಘ ನಿ. ಕರ್ಕುಂಜೆ, ಪ್ರಭಾಕರ ಶೆಟ್ಟಿ ಜಡ್ಕಲ್ ವ್ಯ.ಸೇ.ಸ.ಸಂಘ ನಿ. ಜಡ್ಕಲ್, ಎಸ್. ಜಯರಾಮ ಶೆಟ್ಟಿ ಬೆಳ್ವೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗ್ರಾಮ ಪಂಚಾಯಿತಿ ಆಳಿತಾಧಿಕಾರಿಗಳು ತಮ್ಮ ಇಲಾಖಾ ಕರ್ತವ್ಯದ ಒತ್ತಡದ ಕಾರಣ ಪಂಚಾಯಿತಿಯ ಹೊಣೆ ನಿರ್ವಹಿಸದಿದ್ದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಅವರು ವಾರದಲ್ಲಿ ನಿಗದಿ ಪಡಿಸಿಕೊಂಡ ದಿನದಲ್ಲಿ ಕನಿಷ್ಠ ಒಂದು ಹೊತ್ತಾದರೂ ಗ್ರಾಮ ಪಂಚಾಯಿತಿಯಲ್ಲಿ ಹಾಜರಿದ್ದು ಕರ್ತವ್ಯ ನಿರ್ವಹಿಸಬೇಕು ಎಂದು ಬೈಂದೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ ಹೇಳಿದರು. ಕುಂದಾಪುರ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ನಡೆಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಂದಾಯ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಸೂಚನೆ ನೀಡಿದರು. ಗ್ರಾಮ ಪಂಚಾಯಿತಿಗಳ ವಿವಿಧ ಯೋಜನೆಗಳ ಗುರಿ, ಅನುಷ್ಠಾನ, ಪ್ರಗತಿ, ಸಮಸ್ಯೆ ಪರಿಶೀಲಿಸಿ, ಅನುಷ್ಠಾನದ ವೇಗ ಹೆಚ್ಚಿಸಬೇಕು ಎಂದು ನಿರ್ದೇಶಿಸಿದರು. ಆಧಾರ ಕಾರ್ಡ್ ಪಡೆಯಲು ಅಗತ್ಯವಿರುವ ದೃಢೀಕರಣವನ್ನು ಆಡಳಿತಾಧಿಗಳು ನೀಡಬೇಕು. ನ. 20ರೊಳಗೆ ವಾರ್ಡ್‌ಸಭೆ, ಗ್ರಾಮಸಭೆ ನಡೆಸಿ ವರದಿ ನೀಡಬೇಕು. ಕಳೆದ ವರ್ಷ ಶಿರೂರು, ಕೊಲ್ಲೂರು, ಗೋಳಿಹೊಳೆ, ಪಡುವರಿ ಗ್ರಾಮ ಪಂಚಾಯಿತಿಗಳಲ್ಲಿ ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಮಾಡಿರುವುದರ ಬಿಲ್ ಬಾಕಿಯಿದ್ದು,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟ: ವರುಣತೀರ್ಥ ಕೆರೆ ಸಮೀಪ ಕೋಟದ ಪಂಚವರ್ಣ ಯುವಕ ಮಂಡಲದ 23ನೇ ವರ್ಷದ ಕನ್ನಡ ರಾಜ್ಯೋತ್ಸವ ಸದ್ಭಾವನಾ ಪಂಚವರ್ಣ ರಾಜ್ಯೋತ್ಸವ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕನ್ನಡದ ಶಬ್ಧಕೋಶ ಶುದ್ಧವಾಗಿ ಉಳಿಯಲು ಯಕ್ಷಗಾನವೇ ಮೂಲ ಕಾರಣ ಬೆಂಗಳೂರಿನಂತಹ ನಗರದಲ್ಲಿ ಶೇ60ರಷ್ಟು ಹೊರಭಾಷಿಗರು ಇದ್ದರೂ, ಕನ್ನಡವನ್ನು ನಮ್ಮ ಕಲೆ, ಸಂಸ್ಕೃತಿ, ಯಕ್ಷಗಾನದಂತಹ ಕಲೆಗಳು ಉಳಿಸಿವೆ ಎಂದು ಹೇಳಿದರಲ್ಲದೆ ಸ್ಥಳೀಯವಾಗಿ  ಭಾಗದಲ್ಲಿ ಕನ್ನಡಪರ ಕಾರ್ಯಕ್ರಮಗಳೊಂದಿಗೆ ಸಮಾಜಮುಖಿ ಚಿಂತನೆಗಳೊಂದಿಗೆ ಪರಿಸರ ಕಾಳಜಿ,ಸ್ವಚ್ಛತಾ ಕಾರ್ಯ,ರೈತರನ್ನು ಗುರುತಿಸುವ ವಿಭಿನ್ನ ರೀತಿಯ ಕಾರ್ಯಕ್ರಮಗಳಿಂದ ಮನೆಮಾತಾಗಿ ಬೆಳೆದ ಸಂಸ್ಥೆ ಪಂಚವರ್ಣ ಯುವಕರ ಪಡೆಯ ಕಾರ್ಯ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು ಕೆರೆಗಳ ಅಭಿವೃದ್ಧಿಗೆ ಅನುದಾನ: ಸರ್ಕಾರ ಈ ಬಾರಿ ಕೆರೆಗಳ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ಹಾಕಿಕೊಂಡಿದೆ. ರೂ25ಲಕ್ಷವನ್ನು ಕೆರೆಗಳ ಸರ್ವೇ ಮಾಡಲು ಅನುದಾನ ನೀಡಿದೆ. ಸುಮಾರು 200ಕೋಟಿ ಯೋಜನೆಯಲ್ಲಿ ಬಾರ್ಕೂರಿನ ಚೌಳಿಕೆರೆ, ಕೋಟದ ವರುಣತೀರ್ಥ ಸೇರಿದಂತೆ ೨೫ಕೆರೆಗಳನ್ನು ಅಭಿವೃದ್ಧಿ ಪಡಿಸಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವಂಡ್ಸೆ ಮಹಿಳೆಯರ ಮೇಲೆ ನಡೆದ ದೌರ್ಜನ್ಯಕ್ಕೆ ಈ ಸರಣಿ ಹೋರಾಟ ಸೀಮಿತವಾಗುವುದಿಲ್ಲ. ಇವರದೇ ಪಕ್ಷದ ಪ್ರಧಾನಿ ಆತ್ಮನಿರ್ಭರ ಭಾರತ ಎಂದು ಹೇಳುತ್ತಿದ್ದರೆ, ಕ್ಷೇತ್ರದ ಶಾಸಕರು ಮಾತ್ರ ಸ್ವಾವಲಂಭಿಗಳ ಬದುಕನ್ನು ಬರ್ಬರಗೊಳಿಸಲು ಹೊರಟಿದ್ದಾರೆ. ಅಧಿಕಾರಿಗಳನ್ನು ಹೆದರಿಸಿ ಅವರ ಮೂಲಕ ನಡೆಸುತ್ತಿರುವ ಎಲ್ಲ ವಿಧದ ದಬ್ಬಾಳಿಕೆ ಮತ್ತು ದೌರ್ಜನ್ಯದ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದು ಮಾಜಿ ಸಚಿವ ವಿನಯಕುಮಾರ ಸೊರಕೆ ಎಚ್ಚರಿಸಿದರು. ಕುಂದಾಪುರ ತಾಲ್ಲೂಕು ಪಂಚಾಯತ್ ರಾಜ್ ಒಕ್ಕೂಟ ಮತ್ತು ವಿವಿಧ ಸಂಘಟನೆಗಳ ಆಶ್ರಯದಲ್ಲಿ ಬೈಂದೂರಿನಲ್ಲಿ ಶುಕ್ರವಾರ ನಡೆದ ಧರಣಿಯಲ್ಲಿ ಅವರು ಮಾತನಾಡಿದರು. ವಂಡ್ಸೆ ಮಹಿಳಾ ಸ್ವಾವಲಂಬನಾ ಹೊಲಿಗೆ ವೃತ್ತಿ ಮತ್ತು ತರಬೇತಿ ಕೇಂದ್ರವನ್ನು ಕಾನೂನಿನ ಹದ್ದುಮೀರಿ ತೆರವುಗೊಳಿಸಿರುವುದರ ವಿರುದ್ಧದ ಹೋರಾಟದಲ್ಲಿ ನ್ಯಾಯಾಂಗದಿಂದ ಭಾಗಶ: ನ್ಯಾಯ ಸಿಕ್ಕಿದ ಕಾರಣ ಸರಣಿ ಧರಣಿ ಸತ್ಯಾಗ್ರಹ ಅಂತ್ಯಗೊಳ್ಳಲಿದೆ. ಆದರೆ ಸಂಪೂರ್ಣ ನ್ಯಾಯ ಸಿಗುವ ವರೆಗೆ ಹೋರಾಟ ಮುಂದುವರಿಯಲಿದ್ದು ಅಗತ್ಯವೆನಿಸಿದರೆ ಜಿಲ್ಲಾ ಪಂಚಾಯಿತಿಗೆ ಮುತ್ತಿಗೆ ಹಾಕಲಾಗುವುದು ಎಂದು ಅವರು ಹೇಳಿದರು. ಜಿಲ್ಲಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆರೋಗ್ಯ ವಿಜ್ಞಾನಗಳ ವೈದ್ಯ ಲೇಖಕಿಯಾಗಿ ಕನ್ನಡ ಸಾಹಿತ್ಯ ಹಾಗೂ ಆರೋಗ್ಯಕ್ಷೇತ್ರಕ್ಕೆ ಕೊಡುಗೆ ನೀಡಿರುವ ಆಳ್ವಾಸ್ ನ್ಯಾಚುರೋಪಥಿ ಹಾಗೂ ಯೋಗಿಕ್ ಸೈನ್ಸ್ ಕಾಲೇಜಿನ ಪ್ರಾಧ್ಯಾಪಕಿ ಡಾ. ವೃಂದಾ ಬೇಡೆಕರ್ ಅವರನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಗಳ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ. ಎಸ್ ನಾಗಭರಣ ಅವರು ಡಾ. ವೃಂದಾ ಬೇಡೆಕರ್ ಅವರನ್ನು ಸನ್ಮಾನಿಸಿದರು. ವೃಂದಾ ಅವರು ಆಳ್ವಾಸ್ ಪಿಯು ಕಾಲೇಜಿನ ಜೀವಶಾಸ್ತ್ರ ವಿಭಾಗದ ಉಪನ್ಯಾಸ ಯೋಗೀಶ್ ಬೇಡೆಜರ್ ಅವರ ಪತ್ನಿ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಕಂದಾಯ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಭರತ್ ಶೆಟ್ಟಿ ಇವರು ಈಚೆಗೆ ದಾವಣಗೆರೆಯಲ್ಲಿ ನಡೆದ ಗ್ರಾಮ ಲೆಕ್ಕಿಗರ ರಾಜ್ಯ ಸಮಾವೇಶದಲ್ಲಿ ರಾಜ್ಯ ಗ್ರಾಮ ಲೆಕ್ಕಿಗರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಉಡುಪಿ ಜಿಲ್ಲಾ ಗ್ರಾಮ ಲೆಕ್ಕಿಗರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿರುವ ಇವರನ್ನು ಈ ಸಮಾವೇಶದಲ್ಲಿ ಗೌರವಿಸಲಾಯಿತು. ರಾಜ್ಯ ಸಂಘಟನೆಯ ಅಧ್ಯಕ್ಷ ಬಿ. ದೊಡ್ಡಬಸಪ್ಪ ರೆಡ್ಡಿ, ಗೌರವಾಧ್ಯಕ್ಷ ಚಂದ್ರಶೇಖರ ಉಟಕೂರು, ಉಪಾಧ್ಯಕ್ಷರಾದ ಗುರುಮೂರ್ತಿ ಎಸ್. ಸಿ, ಮುರಳಿಧರ್, ರಮೇಶ್, ಶೈಲಜಾ ಕೆ. ಎಸ್, ಪ್ರಧಾನ ಕಾರ್ಯದರ್ಶಿ ನಾಗೇಶ್ ಹಾಗೂ ಖಜಾಂಜಿ ಎ. ಎಂ. ಲೋಹಿತ್ ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀಪತಿ ಹೆಗಡೆ ಹಕ್ಲಾಡಿ ಅವರ ಹಕ್ಲಾಡಿ ಗ್ರಾಮ ಸಂತೆಗದ್ದೆ ಫ್ರೆಂಡ್ಸ್ ಮನೆಗೆ ಭೇಟಿ ನೀಡಿ ಗೌರವಿಸಿದರು. ಫ್ರೆಂಡ್ಸ್ ಗೌರವಾಧ್ಯಕ್ಷ ಲಕ್ಷ್ಮೀನಾರಾಯಣ ಹೆಬ್ಬಾರ್ ಹಾಗೂ ರತ್ತಯ್ಯ ಆಚಾರ್ಯ ಗೌರವಿಸಿದರು. ಪದಾಧಿಕಾರಿಗಳಾದ ತಿಮ್ಮಪ್ಪ ಪೂಜಾರಿ, ಲಕ್ಷ್ಮಣ ನಾಯ್ಕ್, ಪ್ರಕಾಶ್ ಆಚಾರ್ಯ, ಲೋಕೇಶ್ ಮೂಜಾರಿ, ಚಂದ್ರ ಪೂಜಾರಿ, ನಾಗೇಂದ್ರ ಆಚಾರ್ಯ, ರವಿ ಪೂಜಾರಿ, ರಾಜು ಪೂಜಾರಿ, ಸುಭಾಷ್ ಪೂಜಾರಿ ಸಂದೀಪ ಪೂಜಾರಿ ಮುಂತಾದವರು ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಚಿತ್ತೂರು ಗ್ರಾಮ ಪಂಚಾಯತ್ ಸಮೀಪ ರಸ್ತೆ ಅಪಘಾತ ಸಂಭವಿಸಿ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಿತ್ತೂರು ಶಂಕರ ಶೆಟ್ಟಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಸಾರ್ವಜನಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿರುವ ಶಂಕರ ಶೆಟ್ಟಿಯವರು ಚಿತ್ತೂರು ಗಣೇಶೋತ್ಸವ ಸಮಿತಿ, ಚಿತ್ತೂರು ಪ್ರೌಢಶಾಲಾ ಮೇಲುಸ್ತುವಾರಿ ಸಮಿತಿಯಲ್ಲಿ ಈ ಹಿಂದೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಮೃತರು ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿರುತ್ತಾರೆ.

Read More