Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಾಜಿ ಕೆ ಮೊಹಿದ್ದಿನ್ ಬ್ಯಾರಿ ಸ್ಮಾರಕ ಪ್ರೌಢ ಶಾಲೆ ಕೋಡಿ ಇಲ್ಲಿನ ಹಳೇ ವಿದ್ಯಾರ್ಥಿಯಾದ ಗಣೇಶ ಪೂಜಾರಿಯವರು Forbes India Top 100 People Managers List ನಲ್ಲಿ ಒಬ್ಬರಾಗಿ ಆಯ್ಕೆಯಾಗಿದ್ದಕ್ಕಾಗಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನಿತ ಗಣೇಶ ಪೂಜಾರಿ ಮಾತನಾಡಿ ಯಾವುದೇ ವ್ಯಕ್ತಿಯ ಸಾಧನೆಗೆ ಶಾಲೆಯಲ್ಲಿ ಕಲಿತ ಮಾಧ್ಯಮಗಳು ಮುಖ್ಯವಲ್ಲ. ಸತತ ಪರಿಶ್ರಮ ಮತ್ತು ಗುರಿ ಸಾಧಿಸುವ ಛಲ ಮನುಷ್ಯನನ್ನು ಉನ್ನತಿಯೆಡೆಗೆ ಕೊಂಡೊಯ್ಯುತ್ತದೆ ಎಂದು ಹೇಳಿದರು. ಈ ಸಮಾರಂಭದ ಅಧ್ಯಕ್ಷತೆಯನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಎಮ್ ಅಬ್ದುಲ್ ರೆಹಮಾನ ಬ್ಯಾರಿ ವಹಿಸಿ, ಗಣೇಶ್ ಪೂಜಾರಿ ನಮ್ಮ ಇಂದಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಅಧ್ಯಕ್ಷೀಯ ನುಡಿ ನುಡಿದರು. ಪುರಸಭಾ ಸದಸ್ಯೆ ಕಮಲಾ, ಬ್ಯಾರೀಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಸಲಹೆಗಾರ ಅಬುಷೇಕ್, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರುಗಳಾದ ಪ್ರಕಾಶ್ ಅಂಚನ್ ಮತ್ತು ಮುಸ್ತರೀನ್ ಹಾಗೂ ಬ್ಯಾರೀಸ್ ಸಮೂಹ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರತಿಷ್ಠಿತ ಬಸ್ರೂರು ಆಚಾರ್ಯ ಮನೆತನದ ವೈದಿಕ ಪರಂಪರೆ ಸಾಧಕ ನಮ್ಮ ಭೂಮಿ ಸಂಸ್ಥಾಪಕ ಸದಸ್ಯ ವೇ.ಮೂ.ದಾಮೋದರ ಆಚಾರ್ಯ (64) ಬುಧವಾರ ಸ್ವಲ್ಪಕಾಲದ ಅನಾರೋಗ್ಯದಿಂದ ಬೆಂಗಳೂರು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಮತ್ತು ಇಬ್ಬರು ಪುತ್ರರ ಅಗಲಿದ್ದಾರೆ. ದಾಮೋದರ ಆಚಾರ್ಯ ತಂದೆ ಸ್ಥಾಪಿಸಿದ ಶ್ರೀ ರಾಮಚಂದ್ರ ಪುಸ್ತಕ ಭಂಡಾರ ಕಳೆದ 35ವರ್ಷದಿಂದ ನಡೆಸಿಕೊಂಡು ಬಂದಿದ್ದು, ಆಚಾರ್ಯ ಪಬ್ಲಿಕೇಶನ್ ಮೂಲಕ ವೈದಿಕ ಕರ್ಮಾಂಗ ಮತ್ತು ಅಷ್ಟಾವಧಾನ ಮಂಜರಿ, ಸಮಂತ್ರಕ ಅನ್ವದಾನ, ವಿಷ್ಣುಯಾಗ ಪ್ರದೀಪಿಕಾ ಮೂರು ಪುಸ್ತಕ ಪ್ರಕಾಶಿಸಿದ್ದರು. ಆಚಾರ್ಯ ಕುಟುಂಬದವರು 60 ವರ್ಷದಿಂದ ಬಸ್ರೂರು ಮೂರುಕೇರಿಯ ಶ್ರೀ ರಾಮಚಂದ್ರ ದೇವಸ್ಥಾನ ಅರ್ಚಕರಾಗಿ ನಡೆಸಿಕೊಂಡು ಬಂದಿದ್ದರು. ದಾಮೋದರ ಆಚಾರ್ಯ ಬಸ್ರೂರು ಶ್ರೀ ನಾರಾಯಣ ದೇವಸ್ಥಾನ ತಾಂತ್ರಿಕರಾಗಿ ಕಾರ‍್ಯನಿರ್ವಹಿಸಿದ್ದರು. ಬಸ್ರೂರು, ಕಂಡ್ಲೂರು, ಅಂಪಾರು, ಬೈಲೂರು, ಸಿದ್ದಾಪುರ, ಹೊಸಂಗಡಿ, ಗಂಗೊಳ್ಳಿ, ಮಲೆನಾಡು ಪ್ರಾಂತ್ಯದಲ್ಲಿ ಅಪಾರ ಶಿಷ್ಯ ವೃಂದದವರ ಹೊಂದಿದ್ದರು. ದಿ.ಕನ್ಸಲ್ಸ್ಡ್ ಫಾರ್ ವರ್ಕಿಂಗ್ ಚಿಲ್ಟ್ರನ್ ನಮ್ಮ ಭೂಮಿ ಕಾರ್ಯಕಾರಿ ನಿದೇಶಕರಾಗಿ ಬಾಲ್ಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯ ಪಡಿತರ ಅಂಗಡಿಗಳಲ್ಲಿ ವಿತರಿಸಲಾಗುತ್ತಿರುವ ಬಿಳಿ ಕುಚ್ಚಿಗೆ ಅಕ್ಕಿಯ ಗುಣಮಟ್ಟ ಕಡಿಮೆಯಿದ್ದು, ಉತ್ತಮ ಗುಣಮಟ್ಟದ ಕುಚ್ಚಿಗೆ ಅಕ್ಕಿಯನ್ನು ಪೂರೈಸುವ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಆಹಾರ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಸೂಚಿಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಡಿತರ ವ್ಯವಸ್ಥೆಯಲ್ಲಿ ಜಿಲ್ಲೆಗೆ ಕುಚ್ಚಿಗೆ ಅಕ್ಕಿ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಅದರಂತೆ ಜಿಲ್ಲೆಗೆ ಕುಚ್ಚಿಗೆ ಅಕ್ಕಿ ಸರಬರಾಜು ಆಗುತ್ತಿದೆ. ಆದರೆ ಈ ಅಕ್ಕಿಯ ಗುಣಮಟ್ಟ ಸರಿಯಿಲ್ಲವೆಂದು ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿದೆ. ಉತ್ತಮ ಗುಣಮಟ್ಟದ ಕೆಂಪು ಕುಚ್ಚಿಗೆ ಅಕ್ಕಿಯನ್ನು ಪಡಿತರ ಅಂಗಡಿಗಳಲ್ಲಿ ವಿತರಿಸಿ, ಈ ಬಗ್ಗೆ ಪಡಿತರ ಸರಬರಾಜು ಮಾಡುವ ಆಹಾರ ನಿಗಮಕ್ಕೆ ಪತ್ರ ಬರೆಯುವಂತೆ ಅಧ್ಯಕ್ಷರು ಸೂಚಿಸಿದರು. ಜಿಲ್ಲೆಗೆ ಪ್ರಸ್ತುತ ಸರಬರಾಜು ಆಗುತ್ತಿರುವ ಕುಚ್ಚಿಗೆ ಆಂಧ್ರ ಪ್ರದೇಶದಿಂದ ಸರಬರಾಜು ಆಗುತ್ತಿದ್ದು, ಜಿಲ್ಲೆಯಲ್ಲಿ ಬೆಳೆಯುವ ಸ್ಥಳೀಯ ಕುಚ್ಚಿಗೆ ಅಕ್ಕಿ ಅಗತ್ಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಉಪ್ಪುಂದ ರಾಣಿಬಲೆ ಮೀನು ಮಾರಾಟ ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷರಾಗಿ ವೆಂಕಟರಮಣ ಖಾರ್ವಿ, ಉಪಾಧ್ಯಕ್ಷರಾಗಿ ತಿಮ್ಮಪ್ಪ ಖಾರ್ವಿ ಪುನರಾಯ್ಕೆಗೊಂಡಿದ್ದಾರೆ. ಅವಿರೋಧವಾಗಿ ನಡೆದ ಸಂಘದ ಆಯ್ಕೆ ಪ್ರಕ್ರಿಯೆಯಲ್ಲಿ ಎ.ಶ್ರೀನಿವಾಸ ಖಾರ್ವಿ, ನಾಗೇಶ ಖಾರ್ವಿ, ಎಸ್. ಕೃಷ್ಣ ಖಾರ್ವಿ, ರಾಜೇಂದ್ರ ಖಾರ್ವಿ, ನವೀನ ಖಾರ್ವಿ, ಸುರೇಶ ಖಾರ್ವಿ, ಸೋಮಶೇಖರ ಖಾರ್ವಿ, ಶಂಕರ ಖಾರ್ವಿ, ಶರತ್ ಖಾರ್ವಿ ನಿರ್ದೇಶಕರುಗಳಾಗಿ ಆಯ್ಕೆಗೊಂಡಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ನಾವುಂದ: ತಮ್ಮ ಕೃಷಿ ಜಮೀನಿನಲ್ಲಿ ದುಡಿಯುತ್ತಿರುವಾಗ ಮೃತನಾದ ಕೂಲಿಯಾಳು ಕುಟುಂಬಕ್ಕೆ ಮರವಂತೆ ಕ್ಷೇತ್ರದ ತಾಲ್ಲೂಕು ಪಂಚಾಯಿತಿ ಸದಸ್ಯ ಹಕ್ಕಾಡಿ ಜಗದೀಶ ಪೂಜಾರಿ ನಿವೇಶನ ದೊರಕಿಸಿಕೊಟ್ಟು, ಅದರಲ್ಲಿ ಮನೆ ನಿರ್ಮಿಸಿ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ. ಮರವಂತೆಯ ನೀರೋಣಿ ಎಂಬಲ್ಲಿ ಪತ್ನಿ ಗಿರಿಜಾ, ನಿರುದ್ಯೋಗಿ ಪದವೀಧರೆ ಮತ್ತು ಶಾಲಾ ವಿದ್ಯಾರ್ಥಿನಿ ಆಗಿರುವ ಇಬ್ಬರು ಪುತ್ರಿಯರ ಜತೆ ವಾಸಿಸಿದ್ದ ಸುರೇಶ ದೇವಾಡಿಗ ಕೆಲವು ವರ್ಷಗಳಿಂದ ಜಗದೀಶ ಪೂಜಾರಿ ಕೃಷಿಭೂಮಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಕುಟುಂಬಕ್ಕೆ ಸ್ವಂತ ನಿವೇಶನ, ಮನೆ ಇರಲಿಲ್ಲ. ಕಳೆದ ವರ್ಷ ಸುರೇಶ ಮೃತರಾಗುವುದರೊಂದಿಗೆ ಕುಟುಂಬ ಅನಾಥವಾಯಿತು. ಆಗ ಅದರ ಬೆಂಬಲಕ್ಕೆ ನಿಂತ ಜಗದೀಶ ಪೂಜಾರಿ ನಾವುಂದದಲ್ಲಿ ಸರ್ಕಾರಿ ನಿವೇಶನ ದೊರಕಿಸಿಕೊಟ್ಟರು. ಅದರಲ್ಲಿ ರೂ 6 ಲಕ್ಷ ವೆಚ್ಚಮಾಡಿ ಮನೆ ನಿರ್ಮಿಸಿದರು. ಈಚೆಗೆ ಅದರ ಪ್ರವೇಶೋತ್ಸವ ನಡೆಯಿತು. ನೂತನ ಗೃಹಕ್ಕೆ ಭೇಟಿ ನೀಡಿದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ಆಶ್ರಯವಿಲ್ಲದ ಕುಟುಂಬಕ್ಕೆ ಸ್ವಂತ ದುಡಿಮೆಯ ಹಣದಿಂದ ಮನೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉಡುಪಿ ಜಿಲ್ಲಾ ಗೃಹರಕ್ಷಕ ದಳ ಬೈಂದೂರು ಘಟಕದ ವತಿಯಿಂದ ಬುಧವಾರ ಬೈಂದೂರು ಪೇಟೆ ಭಾಗದಲ್ಲಿ ಕೋವಿಡ್-19 ಹರಡುವಿಕೆ ತಡೆಗಟ್ಟಲು ಜನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಉಡುಪಿ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಪ್ರಶಾಂತ್ ಶೆಟ್ಟಿ ಹಾಗೂ ಬೈಂದೂರು ತಹಸಿಲ್ದಾರ್ ಬಸಪ್ಪ ಪಿ. ಪೂಜಾರ್ ಅವರು ಜಾಥಾವನ್ನು ಉದ್ಘಾಟಿಸಿದರು. ಬೈಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆಪ್ತ ಸಹಾಯಕ ನಾಗರಾಜ್ ಕೋವಿಡ್ ಜಾಗೃತಿ ಮಾಹಿತಿ ನೀಡಿದರು. ಈ ಸಂದರ್ಭ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸುರೇಶ್ ನಾಯ್ಕ್, ಗೃಹರಕ್ಷಕ ದಳದ ಡೆಪ್ಯೂಟಿ ಕಮಾಂಡೆಂಟ್ ರಮೇಶ್, ಕುಂದಾಪುರ ಗೃಹರಕ್ಷಕ ದಳದ ಘಟಕಾಧಿಕಾರಿ ಭಾಸ್ಕರ್, ಬ್ರಹ್ಮಾವರ ಗೃಹರಕ್ಷಕ ದಳದ ಘಟಕಾಧಿಕಾರಿ ಸ್ಟೀವನ್ ಪ್ರಕಾಶ್ ಲೂಯಿಸ್, ಬೈಂದೂರು ಗೃಹರಕ್ಷಕ ದಳದ ಸಂಸ್ಥಾಪಕ ಘಟಕಾಧಿಕಾರಿ ಎನ್. ಹನುಮಂತ್, ಅಧೀಕ್ಷಕ ರತ್ನಾಕರ ಎಂ., ಸಮಾಜ ಸೇವಕ ಸುಬ್ರಹ್ಮಣ್ಯ ಬಿಜೂರು ಈ ಸಂದರ್ಭ ಉಪಸ್ಥಿತರಿದ್ದರು. ಬೈಂದೂರು ಗೃಹರಕ್ಷಕ ದಳದ ಘಟಕಾಧಿಕಾರಿ ರಾಘವೇಂದ್ರ ಎನ್. ಕಾರ್ಯಕ್ರಮ ನಿರೂಪಿಸಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಕೋಡಿ ನಿವಾಸಿ, ಲೋಧಾ ಗ್ರೂಪ್‌ನ ಆಡಳಿತ ಹಾಗೂ ಮಾನವ ಸಂಪದ ವಿಭಾಗದ ಉಪಾಧ್ಯಕ್ಷರಾಗಿರುವ ಗಣೇಶ್ ಪೂಜಾರಿ ಅವರು ಫೋರ್ಬ್ಸ್ ಇಂಡಿಯಾ ಸಹಭಾಗಿತ್ವದಲ್ಲಿ ಪ್ರಕಟವಾದ ’ಗ್ರೇಟ್ ಪೀಪಲ್ ಮ್ಯಾನೇಜರ್ಸ್ ಸ್ಟಡಿ’ ಬ್ಯಾನರ್‌ನಡಿ ’ಗ್ರೇಟ್ ಮ್ಯಾನೇಜರ್ ಇನ್‌ಸ್ಟಿಟ್ಯೂಟ್’ ಭಾರತದ100 ಶ್ರೇಷ್ಠ ವ್ಯವಸ್ಥಾಪಕರ ಪಟ್ಟಿಯಲ್ಲಿ ಒಬ್ಬರಾಗಿ ಸ್ಥಾನ ಪಡೆದಿದ್ದಾರೆ. ಕೋಡಿಯ ದಿ. ಬಚ್ಚ ಪೂಜಾರಿ ಮತ್ತು ದಿ. ಕಮಲಾ ಪೂಜಾರ್ತಿ ಅವರ ಪುತ್ರ ಗಣೇಶ್ ಪೂಜಾರಿ, ಆರ್ಥಿಕ ಬಡತನದ ಕಾರಣದಿಂದ ಎಳವೆಯಲ್ಲಿಯೇ ಸಂಪಾದನೆಗೆ ತೆರಳಿ ಶಾಲೆಗೆ ಸರಿಯಾಗಿ ಹಾಜರಾಗಲು ಸಾಧ್ಯವಾಗದೆ ಆ ಕಾರಣದಿಂದ ಕಲಿಕೆಯಲ್ಲಿ ಹಿಂದಿಲ್ಲದಿದ್ದರೂ 7 ವರ್ಷಗಳಲ್ಲಿ ಮುಗಿಸುವ ಪ್ರಾಥಮಿಕ ಶಿಕ್ಷಣಕ್ಕೆ 11 ವರ್ಷ ಬೇಕಾಯಿತು ಕೋಡಿಯ ಸೋನ್ಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪಡೆದು ಬಳಿಕ ಹಾಜಿ ಕೆ. ಮೊಯ್ದೀನ್ ಬ್ಯಾರಿ ಹೈಸ್ಕೂಲ್‌ನಲ್ಲಿ ಶಿಕ್ಷಣ ಮುಂದುವರಿಸಿದರು. ಎಸೆಸೆಲ್ಸಿ ಬಳಿಕ ಮುಂಬಯಿಗೆ ಬಂದು ಹಗಲು ಹೊತ್ತು ಕೆಲಸ ಮಾಡಿಕೊಂಡು ರಾತ್ರಿ ಕಾಲೇಜಿನ ಮೂಲಕ ಪಿಯುಸಿಯನ್ನು ಮುಂಬಯಿಯ ಕನ್ನಡ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ದೇಶ ನಮಗೇನು ಕೊಟ್ಟಿದೆ ಎಂದು ಕೇಳದೇ ದೇಶಕ್ಕಾಗಿ ನಾನೇನು ಮಾಡಬಲ್ಲೆ ಎಂದು ಚಿಂತಿಸುವ ಸಮಯವಿದು. ವಿಶ್ವಪಟಲದಲ್ಲಿ ಭಾರತ ಒಂದು ಶಕ್ತಿಯಾಗಬೇಕಾದರೆ ಮಾನವ ಇತಿಹಾಸದ ಅವಿಭಾಜ್ಯ ಅಂಗವಾಗಿರುವ ಮತ್ತು ಅಸಹಜತೆ ದೂರ ಮಾಡುವ ಸುಧಾರಣೆ ಹಾಗೂ ಬದಲಾವಣೆಗಳು ಆಗಬೇಕು. ಇದಕ್ಕಾಗಿ ಕಲಿಯುಗದ ದೊಡ್ಡ ಶಕ್ತಿಯಾಗಿರುವ ನಮ್ಮ ಸಂಘಟನೆಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎಂದು ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ. ಸಿ. ಮಾಧುಸ್ವಾಮಿ ಹೇಳಿದರು. ಉಪ್ಪುಂದ ಮಡಿಕಲ್ ಕಡಲ ತೀರದಲ್ಲಿ ಮಂಗಳವಾರ ಸಾಯಂಕಾಲ ಬಿಜೆಪಿ ಬೈಂದೂರು ಮಂಡಲ ಆಯೋಜಿಸಿದ ಕುಟುಂಬ ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕೆಲವು ಚುನಾಯಿತ ಪ್ರತಿನಿಧಿಗಳು ಒಮ್ಮೆ ಚುನಾವಣೆಯಲ್ಲಿ ಗೆದ್ದ ನಂತರ ಮುಂದಿನ ಚುನಾವಣೆ ವರೆಗೆ ತಾವು ಯಾರಿಗೂ ಜವಾಬ್ದಾರರಲ್ಲ ಎಂದು ಭಾವಿಸುತ್ತಾರೆ. ಕ್ಷೇತ್ರದ ಮತದಾರರಿಗೆ ಚುನಾಯಿತ ಪ್ರತಿನಿಧಿಗಳಿಂದ ವಯಕ್ತಿಕ ಅಪೇಕ್ಷೆಗಳು ಇರುವುದಿಲ್ಲ. ಜನರ, ಸಮಾಜದ ಅಭಿವೃದ್ಧಿ ಕಾರ್ಯ ಮಾಡಲಿ ಎನ್ನುವ ಅಭಿಲಾಷೆ ಇರುತ್ತದೆ. ಈ ನೆಲೆಯಲ್ಲಿ ಜನಪ್ರತಿನಿಧಿಗಳು ಸಾಮಾನ್ಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಾಜ್ಯಾದ್ಯಂತ ಅಂರ್ತಜಲವನ್ನು ಹೆಚ್ಚಿಸುವ ಉದ್ದೇಶದಿಂದ ಸಣ್ಣ ನೀರಾವರಿ ಇಲಾಖೆವತಿಯಿಂದ ಅನೇಕ ಯೋಜನೆಗಳನ್ನು ರೂಪಿಸಿ, ಕೃಷಿ ಮತ್ತು ಕುಡಿಯುವ ನೀರಿನ ಬಳಕೆಗೆ ಆದ್ಯತೆ ನೀಡಿ, ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯದ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಹೇಳಿದರು. ಅವರು  ಬೈಂದೂರಿನ ಪಡುವರಿಯಲ್ಲಿ 35 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಕಿಂಡಿ ಅಣೆಕಟ್ಟು ಕಾಮಗಾರಿಯ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಕರಾವಳಿ ಜಿಲ್ಲೆಗಳಲ್ಲಿ ಕೃಷಿ ಮತ್ತು ಕುಡಿಯುವ ನೀರು ಉದ್ದೇಶಕ್ಕಾಗಿ 3986 ಕೋಟಿ ರೂ ವೆಚ್ಚದಲ್ಲಿ 1348 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲು ಮಾಸ್ಟರ್ ಪ್ಲಾನ್ ಯೋಜನೆಯನ್ನು ರೂಪಿಸಿದ್ದು, ದಕ್ಷಿಣ ಕನ್ನಡದಲ್ಲಿ 446, ಉಡುಪಿಯಲ್ಲಿ 424 ಉಡುಪಿಯಲ್ಲಿ, 466 ಕಿಂಡಿ ಅಣೆಕಟ್ಟು ಕಾಮಗಾರಿಗಳನ್ನು 5 ವರ್ಷದೊಳಗೆ ಪೂರ್ಣಗೊಳಿಸಲಾಗುವುದು ಎಂದರು. ಕಿಂಡಿ ಅಣೆಕಟ್ಟು ಮೂಲಕ ನೀರನ್ನು ಸಂಗ್ರಹಿಸಿ, ಕುಡಿಯುವ ನೀರಿನ ಬಳಕೆಗೆ ಮತ್ತು ರೈತರಿಗೆ ಕೃಷಿ ಬಳಕೆಗೆ ಬಳಸಲಾಗುವುದು ಎಂದ ಅವರು, ಕಿಂಡಿ ಆಣೆಕಟ್ಟುಗಳ ಹಲಗೆಗಳ ನಿರ್ವಹಣೆಗೆ 4 ಕೋಟಿ ರೂ ಅನುದಾನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಇವರ ಸಹಯೋಗದಲ್ಲಿ ಡಾ. ಶಿವರಾಮ ಕಾರಂತರ ಪುಣ್ಯತಿಥಿ ಅಂಗವಾಗಿ ರಾಜ್ಯದ ಮೊದಲ ಆನ್ ಲೈನ್ ಸಾಹಿತ್ಯಿಕ – ಸಾಂಸ್ಕೃತಿಕ ಸಮ್ಮೇಳನ ಹಾಂಪರಿ – 2020 (ಬದಲಾವಣೆಯ ಕರೆಗಾಳಿ ) ಕೋಟದ ಕಾರಂತ ಥೀಮ್ ಪಾರ್ಕ್‌ನಲ್ಲಿ ಡಿಸೆಂಬರ್ 6 ರ ಭಾನುವಾರ ಬೆಳಿಗ್ಗೆ 10 ರಿಂದ ಸಂಜೆ 5ರ ತನಕ ನಡೆಯಲಿದೆ. ವಿಚಾರಗೋಷ್ಠಿ, ಪ್ರಬಂಧ ಮಂಡನೆ, ಕವಿಗೋಷ್ಠಿ, ನಾಟಕಾಂಶ ಪ್ರದರ್ಶನ, ಜನಪದ ಗುಂಜನ, ಕನ್ನಡ ಗೀತ ಗಾಯನ, ಯಕ್ಷನೃತ್ಯ, ಬಹುವಿಧ ಅಭಿವ್ಯಕ್ತಿ, ಏಕವ್ಯಕ್ತಿ ಸ್ವರಾಂಜಲಿ ಕಾರ್ಯಕ್ರಮಗಳು ನಡೆಯಲಿದೆ ಎಂದು ಡಾ. ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ ಕುಂದರ್, ಕೋಟತಟ್ಟು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಡಾ.ಅರುಣ್ ಕುಮಾರ್ ಶೆಟ್ಟಿ, ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್…

Read More