ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ನೃತ್ಯ, ಸುಗಮ ಸಂಗೀತ, ಕಥಾಕೀರ್ತನ ಮತ್ತು ಗಮಕ ಕಲಾಕ್ಷೇತ್ರಗಳಲ್ಲಿ ಅಭ್ಯಾಸ ಮಾಡುತ್ತಿರುವ 16 ರಿಂದ 24ವರ್ಷದ ಒಳಗಿನ ಅಭ್ಯರ್ಥಿಗಳಿಂದ ಪ್ರಸಕ್ತ ಸಾಲಿನ ಶಿಷ್ಯ ವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಅಕಾಡೆಮಿಯಲ್ಲಿ ಹಾಗೂ ಅಕಾಡೆಮಿಯ ವೆಬ್‌ಸೈಟ್ https://karnatakasangeetanrityaacademy.com ಅಥವಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ನವೆಂಬರ್ 30 ರ ಒಳಗೆ ರಿಜಿಸ್ಟಾರ್ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, ಜೆ.ಸಿ ರಸ್ತೆ, ಬೆಂಗಳೂರು ಇಲ್ಲಿಗೆ ಕಳುಹಿಸುವಂತೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ರಿಜಿಸ್ಟಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಎನ್‌ಪಿಸಿಡಿಸಿಎಸ್/ಎನ್‌ಪಿಹೆಚ್‌ಸಿಇ ಕಾರ್ಯಕ್ರಮದಡಿ ಜಿಲ್ಲಾ ಪ್ರೋಗ್ರಾಮ್ ಕೋ ಆರ್ಡಿನೇಟರ್ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲು ನವೆಂಬರ್ 9 ರಂದು ಬೆಳಗ್ಗೆ 10 ಘಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಛೇರಿಯಲ್ಲಿ ಸಂದರ್ಶನ ನಡೆಯಲಿದೆ. ಎಂ.ಬಿ.ಬಿ.ಎಸ್ ಆಥವಾ ಬಿ.ಎ.ಎಮ್.ಎಸ್ / ಬಿ.ಡಿ.ಎಸ್ ನೊಂದಿಗೆ ಮಾಸ್ಟರ್ ಇನ್ ಪಬ್ಲಿಕ್ ಹೆಲ್ತ್ ಹಾಗೂ ಕಂಪ್ಯೂಟರ್‌ನಲ್ಲಿ ಅನುಭವ ಹೊಂದಿದ ಅಭ್ಯರ್ಥಿಗಳು ಸ್ವ -ವಿವರ, ವಿದ್ಯಾರ್ಹತೆ, ಸೇವಾನುಭವದ ಮೂಲ ಮತ್ತು ನಕಲು ಪ್ರತಿಯೊಂದಿಗೆ ಸಂದರ್ಶನಕ್ಕೆ ಹಾಜರಾಗುವಂತೆ ಎನ್.ಸಿ.ಡಿ ಘಟಕದ ಜಿಲ್ಲಾ ಆಯ್ಕೆ ಸಮಿತಿಯ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಸುರಭಿ ಸಂಸ್ಥೆಯಿಂದ ತೇಜಸ್ವಿಯವರ ಕೃತಿಗಳಲ್ಲಿ ’ಪರಿಸರ ಮತ್ತು ಬದುಕು’ಎಂಬ ವಿಷಯದ ಕುರಿತು ಆನ್‌ಲೈನ್ ಸ್ಷರ್ಧೆಯನ್ನು (ವಿಮರ್ಶಾತ್ಮಕ ಅನಿಸಿಕೆ ಪ್ರಸ್ತುತಿ ) ಎರ್ಪಡಿಸಲಾಗಿದೆ . ಸ್ಪರ್ಧೆಯಲ್ಲಿ ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಸಂಕ್ಷಿಪ್ತ ಸ್ವ-ಪರಿಚಯದೊಂದಿಗೆ 5 ರಿಂದ 6 ನಿಮಿಷಗಳ ವರೆಗಿನ ವೀಡಿಯೋವನ್ನು ಕಳುಹಿಸಬಹುದಾಗಿದೆ. ವಿಚಾರ ಮಂಡನೆಯು ವಿಮರ್ಶಾತ್ಮಕ ಅಥವಾ ಅನಿಸಿಕೆ ರೂಪದಲ್ಲಿಯೂ ಇರಬಹುದು. ವೀಡಿಯೋ ಕಳುಹಿಸಲು ಕೊನೆಯ ದಿನಾಂಕ – 20 ನವೆಂಬರ್ 2020. ಸ್ಪರ್ಧೆಯ ಫಲಿತಾಂಶದ ಘೋಷಣಾ ದಿನಾಂಕ -30 ನವೆಂಬರ್ 2020. ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ಡಿಸೆಂಬರ್ ಮೊದಲ ವಾರದಲ್ಲಿ ನಡೆಯಲಿದೆ. ವಿಜೇತರಿಗೆ ಆಕರ್ಷಕ ಬಹುಮಾನಗಳಿದ್ದು, ಪ್ರಥಮ ರೂ 5000, ದ್ವಿತೀಯ ರೂ 3000, ತೃತೀಯ ರೂ1000 ಬಹುಮಾನವಿದ್ದು ವಿಜೇತರಿಗೆ ಪ್ರಮಾಣಪತ್ರ ಹಾಗೂ ಗಿಫ್ಟ್ ಹ್ಯಾಂಪರ್ ನೀಡಲಾಗುತ್ತದೆ. ರೆಕಾರ್ಡ್ ಮಾಡಲಾದ ವೀಡಿಯೋವನ್ನು ಇ-ಮೇಲ್ (surabhibyndoorcomp@gmail.com) ಅಥವಾ ವಾಟ್ಸಪ್ (9902213959, 9740241490) ಮೂಲಕ ಕಳುಹಿಸುವುದು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಕೇಂದ್ರ ಲೋಕಸೇವಾ ಆಯೋಗ ಮತ್ತು ರಾಜ್ಯ ಲೋಕಸೇವಾ ಆಯೋಗ2021ರಲ್ಲಿ ನಡೆಸಲಿರುವ ಐಎಎಸ್ ಮತ್ತು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 60 ದಿನಗಳ ಆನ್‌ಲೈನ್ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ. ಆಸಕ್ತರು ನ.13ರ ಒಳಗೆ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಕಛೇರಿಯಲ್ಲಿ ಬೆಳಗ್ಗೆ 10 ರಿಂದ ಸಂಜೆ4 ಗಂಟೆಯ ಒಳಗೆ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ: 0821 – 2515944 ಸಂಪರ್ಕಿಸುವಂತೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಲಿಂಗರಾಜ ಗಾಂಧಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಪ್ರಸಕ್ತ ಸಾಲಿನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಖಾಲಿ ಇರುವ ಸೈಕ್ಯಾಟ್ರಿಸ್ಟ್ ಹುದ್ದೆಯನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಲು, ನವೆಂಬರ್ 9 ರಂದು ಬೆಳಗ್ಗೆ 10.30 ರಿಂದ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಯಲ್ಲಿ ನೇರ ಸಂದರ್ಶನ ನಡೆಯಲಿದೆ. ಅಭ್ಯರ್ಥಿಗಳು ಶೈಕ್ಷಣಿಕ ಮೂಲ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗುವಂತೆ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಪುರಸಭೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ವೀಣಾ ಭಾಸ್ಕರ್ ಅಧ್ಯಕ್ಷರಾಗಿ, ಸಂದೀಪ್ ಖಾರ್ವಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನ.3ರಂದು ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಗೆ ಚುನಾವಣೆ ನಡೆದು ಬಿಜೆಪಿಯ ಒಮ್ಮತದ ಅಭ್ಯರ್ಥಿಗಳಾಗಿ ಅಧ್ಯಕ್ಷ ಸ್ಥಾನಕ್ಕೆ ವೀಣಾ ಭಾಸ್ಕರ, ಉಪಾಧ್ಯಕ್ಷ ಸ್ಥಾನಕ್ಕೆ ಸಂದೀಪ್ ಖಾರ್ವಿ ಅವರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಗೊಂಡರು. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ‘ಎ’ ಪ್ರವರ್ಗಕ್ಕೆ ಮೀಸಲಾಗಿತ್ತು. ಒಟ್ಟು 23 ಸದಸ್ಯ ಬಲ ಇರುವ ಪುರಸಭೆಯಲ್ಲಿ 14 ಬಿಜೆಪಿ, 8 ಕಾಂಗ್ರೆಸ್, 1 ಪಕ್ಷೇತರ ಸದಸ್ಯರಿದ್ದಾರೆ. ಅಧ್ಯಕ್ಷೆಯಾಗಿ ಆಯ್ಕೆಯಾದ ವೀಣಾ ಭಾಸ್ಕರ ಟಿ. ಟಿ ರೋಡ್ ವಾರ್ಡ್ ಪ್ರತಿನಿಧಿಸುತ್ತಿದ್ದಾರೆ. ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಂದೀಪ್ ಖಾರ್ವಿ ಬಹದ್ದೂರ್ ಷಾ ರೋಡ್ ವಾರ್ಡ್ ಪ್ರತಿನಿಧಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿಜೆಪಿ ಕುಂದಾಪುರ ಮಂಡಲದ ಅಧ್ಯಕ್ಷ ಶಂಕರ ಅಂಕದಕಟ್ಟೆ, ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಲತಾ ಸುರೇಶ ಶೆಟ್ಟಿ, ಲಕ್ಷ್ಮೀ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆ ವಿದ್ಯಾಗಿರಿ, ಇದರ ಆಶ್ರಯದಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಪ್ರಯುಕ್ತ ಒಂದು ದಿನದ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರವನ್ನು ಮಂಗಳವಾರ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆಯಿತು. ಕಾರ‍್ಯಕ್ರಮದಲ್ಲಿ ಆಳ್ವಾಸ್ ಆಯುರ್ವೇದ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಿರುವ ಪೋಸ್ಟ್ ಕೋವಿಡ್ ಕೇರ್ ಸೆಂಟರ್‌ನ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಿರ್ತಾಡಿಯ ಖ್ಯಾತ ವೈದ್ಯಕೀಯ ತಜ್ಞರಾದ ಡಾ. ಕೃಷ್ಣರಾಜ್ ಭಟ್‌ರವರು ನೆರವೇರಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಳ್ವಾಸ್ ಹೆಲ್ತ್ ಸೆಂಟರ್ ಆಡಳಿತ ನಿರ್ದೇಶಕ ಡಾ.ವಿನಯ್ ಆಳ್ವ ವಹಿಸಿದರು. ಈ ವೈದ್ಯಕೀಯ ಶಿಬಿರದಲ್ಲಿ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಆಳ್ವಾಸ್ ಆಯುರ್ವೇದ ಆಸ್ಪತ್ರೆಯ ತಜ್ಞ ವೈದ್ಯರು ಉಚಿತ ತಪಾಸಣೆ, ಚಿಕಿತ್ಸೆ ಹಾಗೂ ಸೂಕ್ತ ಸಲಹೆಯನ್ನು ಸಾರ್ವಜನಿಕರಿಗೆ ನೀಡಿದರು. ಈ ಶಿಬಿರದಲ್ಲಿ ರಕ್ತದಲ್ಲಿನ ಸಕ್ಕರೆ ಅಂಶ ಹಾಗೂ ರಕ್ತದೋತ್ತಡದ ಪರೀಕ್ಷೆಯನ್ನು ಉಚಿತವಾಗಿ ನಡೆಸಲಾಯಿತು. ಸುಮಾರು200 ಕ್ಕೂ ಅಧಿಕ ಸಾರ್ವಜನಿಕರು ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕೇಂದ್ರ ಸರ್ಕಾರ ನಿಗಧಿಪಡಿಸಿರುವ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯುವ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಕಛೇರಿಯ ಸಭಾಂಗಣದಲ್ಲಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಡುಪಿ, ಕಾರ್ಕಳ ಮತ್ತು ಕುಂದಾಪುರದಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಸಾಮಾನ್ಯ ಭತ್ತವನ್ನು ಕ್ವಿಂಟಾಲ್ ಗೆ 1868 ರೂ ದರದಲ್ಲಿ ಮತ್ತು ಗ್ರೇಡ್ ಎ ಭತ್ತವನ್ನು ಕ್ವಿಂಟಾಲ್ ಗೆ1888ರೂ ದರದಲ್ಲಿ ಖರೀದಿಸುವಂತೆ ತಿಳಿಸಿದರು. ಭತ್ತ ಖರೀದಿ ಕೇಂದ್ರಕ್ಕೆ ಅಗತ್ಯವಿರುವ ಎಲ್ಲಾ ಪೂರ್ವ ತಯಾರಿಗಳನ್ನು ಮಾಡಿಕೊಳ್ಳಬೇಕು ಎಂದ ಅವರು, ಭತ್ತ ಖರೀದಿಗೆ ಅಗತ್ಯವಿರುವ ಮೊತ್ತವನ್ನು ಕೃಷಿ ಮಾರಾಟ ಇಲಾಖೆಯ ಆವರ್ತ ನಿಧಿಯಿಂದ ಭರಿಸಲು ಸೂಚಿಸಲಾಯಿತು. ಕೃಷಿ ಇಲಾಖೆ ವತಿಯಿಂದ ಭತ್ತ ಖರೀದಿ ಕೇಂದ್ರಕ್ಕೆ ಗ್ರೇಡರ್ ಸಿಬ್ಬಂದಿಯನ್ನು ನಿಯೋಜಿಸಲು ಮತ್ತು ಭತ್ತದ ತೇವಾಂಶ ಪರಿಶೀಲಿಸಲು ಮಾಯಿಶ್ಚರ್ ಮೀಟರ್ ಒದಗಿಸಲು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ರಾಜ್ಯ ಸರ್ಕಾರವು ಕ್ರೀಡಾ ಸಾಧಕರಿಗೆ ನೀಡಿದ ಏಕಲವ್ಯ ಹಾಗೂ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಗೆ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಒಟ್ಟು ಎಂಟು ಕ್ರೀಡಾ ವಿದ್ಯಾರ್ಥಿಗಳು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇವರೆಲ್ಲರೂ ಆಳ್ವಾಸ್‌ನ ದತ್ತು ಸ್ವೀಕಾರ ಯೋಜನೆಯಡಿ ತರಬೇತಿ ಪಡೆದು ಸಾಧನೆಗೈದ ಕ್ರೀಡಾಪಟುಗಳಾಗಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಅಭಿನಯ ಶೆಟ್ಟಿ, ಬಾಂಧವ್ಯ, ಅಭಿಷೇಕ್‌ಶೆಟ್ಟಿಯವರು ಏಕಲವ್ಯ ಪ್ರಶಸ್ತಿ ಹಾಗೂ ಜಯಲಕ್ಷ್ಮೀ ಜೆ ,ಲಾವಣ್ಯ ಬಿ. ಡಿ, ರಕ್ಷಿತ್ ಎಸ್, ಪಲ್ಲವಿ ಎಸ್ ಕೆ, ಮತ್ತು ಅನುಶ್ರೀ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಏಕಲವ್ಯ ಪ್ರಶಸ್ತಿ ಪುರಸ್ಕೃತರಾದ ಅಭಿಷೇಕ್ ಶೆಟ್ಟಿ ಅಥ್ಲೆಟಿಕ್‌ನಲ್ಲಿ2009ರ ಸಾಲಿನ ಪ್ರಶಸ್ತಿ ಗಳಿಸಿದ್ದಾರೆ. ಅಂತರಾಷ್ಟ್ರೀಯ ಕ್ರೀಡಾಪಟುವಾಗಿದ್ದು ಪ್ರಸ್ತುತ ಪಶ್ಚಿಮ ರೈಲ್ವೆಯಲ್ಲಿ ಉದ್ಯೋಗಿಯಾಗಿದ್ದಾರೆ. ಬಾಂಧವ್ಯ ಬಾಸ್ಕೆಟ್‌ಬಾಲ್‌ನಲ್ಲಿ 2008ರ ಏಕಲವ್ಯ ಪ್ರಶಸ್ತಿ ಗಳಿಸಿದ್ದು ಅಂತರಾಷ್ರ್ಟೀಯ ಬಾಸ್ಕೆಟ್ ಬಾಲ್ ಆಟಗಾರ್ತಿಯಾಗಿದ್ದಾರೆ. ಪ್ರಸುತ್ತ ದಕ್ಷಿಣ ಪಶ್ಚಿಮ ರೈಲ್ವೆ ಉದ್ಯೋಗಿ. ಅಂತರಾಷ್ಟ್ರೀಯ ಕ್ರೀಡಾಪಟು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಝೀ ಕನ್ನಡ ಕುಟುಂಬದ ಉತ್ತಮ ಛಾಯಾಗ್ರಾಹಕ ಪ್ರಶಸ್ತಿ ಕುಂದಾಪುರದ ಸಂತೋಷ್ ಖಾರ್ವಿ ಅವರಿಗೆ ಲಭಿಸಿದೆ. ಕುಂದಾಪುರದ ಖಾರ್ವಿಕೇರಿಯವರಾದ ಸಂತೋಷ್ ಖಾರ್ವಿ ಅವರು, ಕುಂದಾಪುರದ ಸೈಂಟ್ ಮೇರಿಸ್ ಹೈಸ್ಕೂಲಿನಲ್ಲಿ ಶಿಕ್ಷಣ ಪೂರೈಸಿ ಬದುಕಿನ ಬುತ್ತಿ ಅರಸಿ ಬೆಂಗಳೂರಿಗೆ ತೆರಳಿದರು. ಕಾದಂಬರಿ ಧಾರವಾಹಿ ಮೂಲಕ ಛಾಯಾಗ್ರಾಹಕರಾಗಿ ಕಿರುತೆರೆ ಪ್ರವೇಶಿಸಿ, ಸಪ್ತಪದಿ, ಅಶ್ವಿನಿ ನಕ್ಷತ್ರ, ಅಮ್ಮ, ಇವಳೇ ವೀಣಾ ಪಾಣಿ ಸೇರಿದಂತೆ 12ಕ್ಕೂ ಹೆಚ್ಚು ಧಾರಾವಾಹಿಗಳಿಗೆ ಛಾಯಾಗ್ರಹಣ ಮಾಡಿದ್ದಾರೆ. ಪ್ರಸ್ತುತ ಮಡದಿ ಶ್ರೀಲಕ್ಷ್ಮೀ ಹಾಗೂ ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
