ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಸೆ.5ರ ಶನಿವಾರ 175 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 34, ಉಡುಪಿ ತಾಲೂಕಿನ 106 ಹಾಗೂ ಕಾರ್ಕಳ ತಾಲೂಕಿನ 31 ಮಂದಿಗೆ ಪಾಸಿಟಿವ್ ಬಂದಿದೆ. 4 ಮಂದಿ ಬೇರೆ ಜಿಲ್ಲೆಯವರಾಗಿದ್ದಾರೆ. ಈತನಕ ಜಿಲ್ಲೆಯಲ್ಲಿ ಒಟ್ಟು 112 ಮಂದಿ ಮೃತಪಟಿದ್ದಾರೆ. ಒಟ್ಟು ಪ್ರಕರಣಗಳಲ್ಲಿ 134 ಸಿಂಥಮೇಟಿವ್ ಹಾಗೂ 41 ಅಸಿಂಥಮೆಟಿಕ್ ಪ್ರಕರಣಗಳಲ್ಲಿದ್ದು, ಒಟ್ಟು ಪ್ರಕರಣಗಳಲ್ಲಿ ಪ್ರಾಥಮಿಕ ಸಂಪರ್ಕದಿಂದ 65, ILI 61, ಸಾರಿ 0 ಪ್ರಕರಣವಿದ್ದು, 49 ಪ್ರಕರಣದ ಮೂಲ ಪತ್ತೆಹಚ್ಚಲಾಗುತ್ತಿದೆ. ಇಂದು 68 ಮಂದಿ ಆಸ್ಪತ್ರೆಯಿಂದ ಹಾಗೂ 164 ಮಂದಿ ಹೋಮ್ ಐಸೋಲೇಶನ್’ನಿಂದ ಬಿಡುಗಡೆಗೊಂಡಿದ್ದಾರೆ. ಉಡುಪಿಯ 79, 70 ವರ್ಷದ ವೃದ್ಧೆಯರು 62 ವರ್ಷದ ವೃದ್ಧ, ಕಾರ್ಕಳದ 68 ವರ್ಷದ ವೃದ್ಧ, ಇಂದು ಮೃತಪಟ್ಟಿದ್ದಾರೆ. 1250 ನೆಗೆಟಿವ್: ಈ ತನಕ ಒಟ್ಟು 76891 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 64123 ನೆಗೆಟಿವ್, 12511 ಪಾಸಿಟಿವ್ ಬಂದಿದ್ದು, 257…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಡಾ| ಎಸ್. ರಾಧಾಕೃಷ್ಣನ್, ಅಬ್ದುಲ್ ಕಲಾಂ, ಪ್ರಣವ್ ಮುಖರ್ಜಿಯವರು ಶಿಕ್ಷಕರಾಗಿದ್ದುಕೊಂಡು ಕಾರ್ಯಕ್ಷಮತೆ, ಬದ್ಧತೆಯಿಂದ ದೇಶದ ಅತ್ಯುನ್ನತ ಹುದ್ದೆಗೇರಿರುವುದು ಶಿಕ್ಷಕರಾದ ನಮಗೆ ಹೆಮ್ಮೆ. ಅವರಂತೆಯೇ ಪ್ರತಿಯೊಬ್ಬ ಶಿಕ್ಷಕನೂ ಸಹ ಈ ಕೊರೊನಾದಂತಹ ಸಂಕಷ್ಟ ಸಮಯದಲ್ಲಿಯೂ ಆತ್ಮ ಗೌರವವನ್ನು ಹೆಚ್ಚಿಸಿಕೊಳ್ಳುವುದು ಇಂದಿನ ಅವಶ್ಯಕ ಎಂದು ಕುಂದಾಪುರದ ನಿಕಟಪೂರ್ವ ಕ್ಷೇತ್ರ ಶಿಕ್ಷಣಾಧಿಕಾರಿ, ಪ್ರಸ್ತುತ ಡಯಟ್ ಉಪ ಪ್ರಾಂಶುಪಾಲಾಗಿರುವ ಅಶೋಕ್ ಕಾಮತ್ ಹೇಳಿದರು. ಅವರು ಕುಂದಾಪುರದ ಸರಕಾರಿ ಪ.ಪೂ. ಕಾಲೇಜಿನ (ಬೋರ್ಡ್ ಹೈಸ್ಕೂಲು) ಶ್ರೀ ಲಕ್ಷ್ಮಿ ನರಸಿಂಹ ಸಭಾಭನದಲ್ಲಿ ಉಡುಪಿ ಜಿ.ಪಂ., ಕುಂದಾಪುರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯ ಮುಖ್ಯ ಅತಿಥಿಯಾಗಿ ಮಾತನಾಡಿದರು. ರಾಧಾಕೃಷ್ಣನ್ ಅವರಲ್ಲಿರುವ ಮಾನವೀಯ ಗುಣಗಳಿಂದ ಎಲ್ಲರನ್ನು ಆಕರ್ಷಿಸುತ್ತಿದ್ದರು. ಅಂತಹ ಸದ್ಗುಣಗಳನ್ನು ಪ್ರತಿಯೊಬ್ಬ ಶಿಕ್ಷಕರು ಮೈಗೂಢಿಸಿಕೊಳ್ಳಬೇಕು. ಈ ಸಮಯ ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳುವುದು ಸಹ ಅತ್ಯವಶ್ಯಕ. ಒಬ್ಬ ಶ್ರೇಷ್ಠ ಗುರುವಿನಿಂದ ಶ್ರೇಷ್ಠ ಶಿಷ್ಯಂದಿರ ನಿರ್ಮಾಣ ಸಾಧ್ಯ. ಅದರಿಂದ ಉತ್ತಮ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಬಿದ್ಕಲ್ಕಟ್ಟೆಯಲ್ಲಿ (ಐಟಿಐ) ವಿವಿಧ ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ಆನ್ ಲೈನ್ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು ಸೆಪ್ಟೆಂಬರ್ 10 ರೊಳಗೆ ಇಲಾಖೆ ವೆಬ್ಸೈಟ್ www.emptrg.kar.nic.in ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಹಂಗಳೂರಿನಲ್ಲಿರುವ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಬಿದ್ಕಲ್ಕಟ್ಟೆಯನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ: 08254-235313 ಸಂಪರ್ಕಿಸುವಂತೆ ಪ್ರಾಚಾರ್ಯರು ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಡಾ| ಬಿ. ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಆಶ್ರಯದಲ್ಲಿ ವಾಣಿಜ್ಯ ಮತ್ತು ನಿರ್ವಹಣೆಯಲ್ಲಿ ವೃತ್ತಿ ಅವಕಾಶಗಳು ಕುರಿತಾದ ಒಂದು ದಿನದ ಅಂತರ್ಜಾಲ ವಿಚಾರ ಸಂಕಿರಣ ನಡೆಯಿತು. ಕಾಲೇಜು ಪ್ರಾಂಶುಪಾಲ ಪ್ರೊ. ಕೆ. ಉಮೇಶ ಶೆಟ್ಟಿ ವಿಚಾರ ಸಂಕಿರಣವನ್ನು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿ ಮಂಗಳೂರು ವಿ. ವಿ. ಸಂಧ್ಯಾ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕಿ ಕಾವ್ಯಾ ಪಿ.ಹೆಗ್ಡೆ ಮಾತನಾಡಿ ವಾಣಿಜ್ಯ ಹಾಗೂ ನಿರ್ವಹಣಾ ವಿಭಾಗ ಕೊಡಮಾಡುವ ಕೋರ್ಸುಗಳು ಮತ್ತು ವಿಫುಲ ಉದ್ಯೋಗಾವಕಾಶಗಳ ಜೊತೆ ಜೊತೆಗೆ ವರ್ತಮಾನ ಜಗತ್ತು ಅಪೇಕ್ಷಿಸುವ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು. ಉಪ-ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದರು, ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಶೈಲೇಶ್ ಬಿ.ಸಿ. ತಾಂತ್ರಿಕ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದರು, ವಿಚಾರ ಸಂಕಿರಣದ ಸಂಯೋಜಕಿ ಹಾಗೂ ವಾಣಿಜ್ಯ ಮತ್ತು ನಿರ್ವಹಣ ವಿಭಾಗದ ಮುಖ್ಯಸ್ಥೆ ವೀಣಾ ಭಟ್ ಸ್ವಾಗತಿಸಿ, ನಿರ್ವಹಿಸಿದರು, ಸಹ ಸಂಯೋಜಕ ಸಂತೋಷ ಶೆಟ್ಟಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ‘ಕರಾವಳಿಯ ಪ್ರಮುಖ ತೋಟಗಾರಿಕೆ ಕೃಷಿಯಾದ ತೆಂಗು ಉತ್ತಮ ಆರ್ಥಿಕ ಬೆಳೆ. ಕೂಲಿಯಾಳುಗಳ ಕೊರತೆಯಿಂದ ತೆಂಗು ಕೃಷಿಗೆ ಆತಂಕ ಎದುರಾಗಿದೆ. ಗ್ರಾಮೀಣ ಯುವಕ, ಯುವತಿಯರು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ ನಡೆಸುವ ತೆಂಗಿನ ಮರ ಏರುವ ತರಬೇತಿ ಪಡೆದು ಲಾಭಕರ ಉದ್ಯೋಗ ನಡೆಸಬಹುದು’ ಎಂದು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಶಶಿಧರ್ ಕೆ. ಸಿ. ತಿಳಿಸಿದರು. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ, ಕುಂದಾಪುರ ತಾಲ್ಲೂಕು ಕಲ್ಪವೃಕ್ಷ ತೆಂಗು ಉತ್ಪಾದಕರ ಫೆಡರೇಷನ್ ಮತ್ತು ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ನಾಗೂರು ಒಡೆಯರಮಠ ಗೋಪಾಲಕೃಷ್ಣ ಕಲಾಮಂಟಪದಲ್ಲಿ ‘ವಿಶ್ವ ತೆಂಗು ದಿನಾಚರಣೆ’ ಅಂಗವಾಗಿ ಆಯೋಜಿಸಿದ್ದ ‘ತೆಂಗಿನ ಸಮಗ್ರ ಬೇಸಾಯ ತರಬೇತಿ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಾಪ್ಕಾಮ್ಸ್ ಅಧ್ಯಕ್ಷ ಸೀತಾರಾಮ ಗಾಣಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಡಾ. ಎಸ್ ಯು. ಪಾಟೀಲ್, ತೆಂಗು ಉತ್ಪಾದಕರ ಕಂಪನಿಯ ಮೂಲಕ ತೆಂಗಿನ ಮೌಲ್ಯವರ್ಧಿತ ಉತ್ಪನ್ನಗಳನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಗ್ರಾಮೀಣ ಪ್ರದೇಶದಲ್ಲಿರುವ ಕುಶಲಕರ್ಮಿಗಳಿಗೆ ಜಿಲ್ಲಾ ಔದ್ಯಮಿಕ ಕೇಂದ್ರ/ವೃತ್ತಿಪರ ಯೋಜನೆಯಡಿ ವಿವಿಧ ಕಸುಬುಗಳಾದ ಗಾರೆಕೆಲಸ, ಮರಗೆಲಸ, ದೋಬಿ, ಕ್ಷೌರಿಕ, ಬ್ಯೂಟಿಪಾರ್ಲರ್, ಕಮ್ಮಾರಿಕೆ, ಪ್ಲಂಬರ್, ಇಲೆಕ್ಟ್ರಿಷಿಯನ್ ಹಾಗೂ ಟೈಲರಿಂಗ್ ವೃತ್ತಿಯ ಉಪಕರಣಗಳನ್ನು ಉಚಿತವಾಗಿ ನೀಡಲಾಗುವುದು. ಉಪಕರಣಗಳನ್ನು ಪಡೆಯಲಿಚ್ಛಿಸುವ ಗ್ರಾಮೀಣ ಪ್ರದೇಶದ ಅರ್ಜಿದಾರರು ಅರ್ಜಿ ನಮೂನೆಯನ್ನು ಈ ಕಛೇರಿಯಿಂದ/ ಆಯಾಯ ಗ್ರಾಮ ಪಂಚಾಯತ್ಗಳಿಂದ ಪಡೆದು ಸೆಪ್ಟೆಂಬರ್ 11 ರೊಳಗೆ ಉಪನಿರ್ದೇಶಕರು, ಗ್ರಾಮಾಂತರ ಕೈಗಾರಿಕೆ, ಬಿ ಬ್ಲಾಕ್ ರೂಂ. ನಂ.207 ಮೊದಲನೇ ಮಹಡಿ ರಜತಾದ್ರಿ ಮಣಿಪಾಲ ಕಛೇರಿಗೆ ಸಲ್ಲಿಸುವಂತೆ ಗ್ರಾಮಾಂತರ ಕೈಗಾರಿಕೆ ಇಲಾಖೆಯ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ, ಸೆ. 04: ಮಹಿಳೆಯೋರ್ವರಿಗೆ ಸರಕಾರಿ ಕೆಲಸ ಕೊಡಿಸುವ ಭರವಸೆ ನೀಡಿ, ಮದುವೆಯಾಗುವುದಾಗಿ ನಂಬಿಸಿ ಅವರಿಂದ ಹಣ ಪಡೆದು ವಂಚಿಸಿದ ವಿವಾಹಿತ, ಮಾಜಿ ಪುರಸಭಾ ಸದಸ್ಯ ಸಂದೀಪ್ ಪೂಜಾರಿ ಕೋಡಿ ಎಂಬಾತನನ್ನು ಶುಕ್ರವಾರದಂದು ಬಂಧಿಸಲಾಗಿದೆ. ಪರಿಶಿಷ್ಟ ಪಂಗಡಕ್ಕೆ ಸೇರಿರುವ ಮಹಿಳೆಯೋರ್ವರ ಪತಿ ಅಂಚೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಮೃತಪಟ್ಟಿದ್ದು, ಆ ಉದ್ಯೋಗವನ್ನು ಅವರ ಪತ್ನಿಗೆ ಕೊಡಿಸುವುದಾಗಿ ಹಾಗೂ ಮದುವೆಯಾಗುತ್ತೇನೆಂದು ಭರವಸೆ ಕೊಟ್ಟು ಆ ಮಹಿಳೆಯಿಂದ ಹಣವನ್ನು ಪಡೆದು ವಂಚಿಸಿದ್ದಲ್ಲದೇ, ಆಕೆಗೆ ಬೈದು ಜಾತಿ ನಿಂದನೆ ಮಾಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಬಗ್ಗೆ ಆ ಮಹಿಳೆ ತನ್ನ ಗೆಳತಿಯಲ್ಲಿ ಮೂಲಕ ಆಪಾದಿತನಲ್ಲಿ ವಿಚಾರಿಸಿದಾಗ ಅವರಿಗೂ ಸಹ ಅವಾಚ್ಯವಾಗಿ ಅವಹೇಳನ ಮಾಡಿದ್ದಾನೆ ಎನ್ನಲಾಗಿದೆ. ಸೆ.1ರಂದು ಸಂದೀಪ ಪೂಜಾರಿ ಮೊಬೈಲ್ ನಂಬರ್ನಿಂದ ಆತನ ಪತ್ನಿ ವಂಚನೆಗೊಳಗಾದ ಮಹಿಳೆಗೆ ಕರೆ ಮಾಡಿ ನನ್ನ ಗಂಡನ ಬಗ್ಗೆ ಮಾತನಾಡದೆ ಸುಮ್ಮನಿರಬೇಕು ಎಂದು ಅವಾಚ್ಯವಾಗಿ ಬೈದು ಬೆದರಿಕೆ ಹಾಕಿದ್ದಳು ಎಂದು ದೂರಿದ್ದಾರೆ. ಸಂತ್ರಸ್ಥ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉಪ್ಪುಂದದ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಬೈಂದೂರಿನ ಎಚ್ಎಂಎಂಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಒಡೆತನವನ್ನು ಧಾರವಾಡ ಕೇಂದ್ರಿತ ಯು. ಬಿ. ಶೆಟ್ಟಿ ಟ್ರಸ್ಟ್ ವಹಿಸಿಕೊಂಡಿದ್ದು, ಈ ಶಾಲೆಗಳನ್ನು ಲಾಭದ ದೃಷ್ಟಿಯಿಂದ ನೋಡದೆ, ಹುಟ್ಟೂರಿನ ಜನರಿಗೆ ಕೈಗೆಟಕುವ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ನಡೆಸಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಉದ್ಯಮಿ ಯು. ಬಿ. ಶೆಟ್ಟಿ ಹೇಳಿದರು. ವಿವೇಕಾನಂದ ಶಾಲೆಯಲ್ಲಿ ಬುಧವಾರ ನಡೆದ ಶಾಲಾ ಹಸ್ತಾಂತರ ಸಮಾರಂಭದಲ್ಲಿ ಅವರು ಮಾತನಾಡಿದರು. ಶಾಲಾ ಶಿಕ್ಷಣ ಕೇವಲ ಪಠ್ಯ ಬೋಧನೆಗೆ ಸೀಮಿತವಾಗಿ ಉತ್ತಮ ಫಲಿತಾಂಶ ತರುವ ಗುರಿ ಹೊಂದಿದರೆ ಸಾಲದು. ಅಲ್ಲಿ ಕಲಿಯುವ ಎಲ್ಲವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದ ದೃಷ್ಟಿ ಅದಕ್ಕಿರಬೇಕು. ಎರಡೂ ಶಾಲೆಗಳಲ್ಲಿ ಅದರತ್ತ ಗಮನ ಹರಿಸಿ ಜಿಲ್ಲೆಯ ಮಾದರಿ ಶಾಲೆಗಳಾಗಿ ಅವುಗಳನ್ನು ರೂಪಿಸಲಾಗುವುದು. ಎರಡೂ ಸಂಸ್ಥೆಗಳ ಆಡಳಿತದ ನೇತೃತ್ವವನ್ನು ಪ್ರಧಾನ ಕಾರ್ಯದರ್ಶಿ ಯಶಶ್ರೀ ಬಿ. ಶೆಟ್ಟಿ ನೋಡಿಕೊಳ್ಳುವರು. ವಿವೇಕಾನಂದ ಶಾಲೆ ಅದೇ ಹೆಸರಿನಲ್ಲಿ ಮತ್ತು ಬೈಂದೂರಿನದು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಸಾರ್ವಜನಿಕ ಶಿಕ್ಷಣ ಇಲಾಖೆ, 2020ನೇ ಸಾಲಿನ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟಿಸಿದ್ದು, ವಿವರ ಈ ಕೆಳಗಿನಂತಿದೆ. ಪ್ರೌಢಶಾಲಾ ವಿಭಾಗ: ಬಿ.ಮೋಹನ ದಾಸ್ ಶೆಟ್ಟಿ, ಮುಖ್ಯ ಶಿಕ್ಷಕರು, ಜನತಾ ಪ್ರೌಢಶಾಲೆ ಹೆಮ್ಮಾಡಿ, ಬೈಂದೂರು ವಲಯ. ಉದಯ್ ಕುಮಾರ್ ಶೆಟ್ಟಿ ಬಿ., ಮುಖ್ಯ ಶಿಕ್ಷಕರು, ಸಂಜಯ ಗಾಂಧಿ ಪ್ರೌಢಶಾಲೆ ಅಂಪಾರು, ಕುಂದಾಪುರ ವಲಯ ಪ್ರೇಮಾನಂದ, ಸಹ ಶಿಕ್ಷಕರು, ವಿವೇಕ ಪ.ಪೂ.ಕಾಲೇಜು ಕೋಟ, ಬ್ರಹ್ಮಾವರ ವಲಯ. ವಿನಾಯಕ ನಾಯ್ಕ, ಸಹ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ರೆಂಜಾಳ, ಕಾರ್ಕಳ ವಲಯ. ಸಂಜೀವ ಎಚ್.ನಾಯಕ್, ಸಹ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ರಾಮನಗರ, ಉಡುಪಿ ವಲಯ, ಪ್ರಾಥಮಿಕ ಶಾಲಾ ವಿಭಾಗ: ಶಶಿಧರ ಶೆಟ್ಟಿ ಶೆಟ್ಟಿ, ಸಹಶಿಕ್ಷಕರು, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಯಳೂರು ತೊಪ್ಲುಬೈಂದೂರು ವಲಯ, ಎಚ್. ಪ್ರಭಾಕರ ಶೆಟ್ಟಿ, ಸಹಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡುವಾಲ್ತೂರು, ಕುಂದಾಪುರ ವಲಯ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಸೆ.3ರ ಗುರುವಾರ 226 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 59, ಉಡುಪಿ ತಾಲೂಕಿನ 137 ಹಾಗೂ ಕಾರ್ಕಳ ತಾಲೂಕಿನ 25 ಮಂದಿಗೆ ಪಾಸಿಟಿವ್ ಬಂದಿದೆ. 5 ಮಂದಿ ಬೇರೆ ಜಿಲ್ಲೆಯವರಾಗಿದ್ದಾರೆ. ಈತನಕ ಜಿಲ್ಲೆಯಲ್ಲಿ ಒಟ್ಟು 106 ಮಂದಿ ಮೃತಪಟಿದ್ದಾರೆ. ಒಟ್ಟು ಪ್ರಕರಣಗಳಲ್ಲಿ 118 ಸಿಂಥಮೇಟಿವ್ ಹಾಗೂ 108 ಅಸಿಂಥಮೆಟಿಕ್ ಪ್ರಕರಣಗಳಲ್ಲಿದ್ದು, 128 ಪುರುಷರು, 98 ಮಹಿಳೆಯರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಒಟ್ಟು ಪ್ರಕರಣಗಳಲ್ಲಿ ಪ್ರಾಥಮಿಕ ಸಂಪರ್ಕದಿಂದ 121, ILI 68, ಸಾರಿ 8 ಪ್ರಕರಣವಿದ್ದು, 27 ಪ್ರಕರಣದ ಮೂಲ ಪತ್ತೆಹಚ್ಚಲಾಗುತ್ತಿದೆ. ಓರ್ವ ವ್ಯಕ್ತಿ ಅಂತರ್ಜಿಲ್ಲಾ ಹಾಗೂ ಓರ್ವ ವಿದೇಶ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಇಂದು 134 ಮಂದಿ ಆಸ್ಪತ್ರೆಯಿಂದ ಹಾಗೂ 194 ಮಂದಿ ಹೋಮ್ ಐಸೋಲೇಶನ್’ನಿಂದ ಬಿಡುಗಡೆಗೊಂಡಿದ್ದಾರೆ. ಕುಂದಾಪುರದ 46 ವರ್ಷದ ಪುರುಷ, ಕಾರ್ಕಳದ 84 ವರ್ಷದ ವೃದ್ಧ, ಉಡುಪಿಯ 65 ವರ್ಷದ ವೃದ್ಧ ಹಾಗೂ…
