ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ಕನ್ನಡದ ‘ನಿನ್ನೆ ರಾತ್ರಿ ನಾ ಎಣ್ಣಿ ಕುಡ್ದಿದೆ’ ಮ್ಯೂಸಿಕಲ್ ವಿಡಿಯೋವನ್ನು ಕನ್ನಡದ ಖ್ಯಾತ ಸಿನೆಮಾ ನಟ ಪ್ರಮೋದ್ ಶೆಟ್ಟಿ ಅವರು ಬುಧವಾರ ಬಿಡುಗಡೆಗೊಳಿಸಿದರು. ಬಳಿಕ ಅವರು ಮಾತನಾಡಿ, ‘ನಿನ್ನೆ ರಾತ್ರಿ ನಾ ಎಣ್ಣಿ ಕುಡ್ದಿದೆ’ ಎನ್ನುವ ಅದ್ಭುತ ಆಲ್ಬಮ್ ಸಾಂಗ್ ಉತ್ತಮವಾಗಿ ಮೂಡಿಬಂದಿದೆ. ಕುಂದಾಪುರ ಭಾಗದ ಪ್ರತಿಭೆಗಳು ತಮ್ಮ ಮೊದಲ ಪ್ರಯತ್ನದಲ್ಲಿಯೇ ಉತ್ತಮ ಸಾಂಗ್ ನೀಡಿದ್ದಾರೆ. ಇದು ಅವರ ಭವಿಷ್ಯದ ಬಗ್ಗೆಯೂ ಭರವಸೆ ಮೂಡಿಸುವಂತಿದೆ. ಕುಂದಾಪ್ರ ಕನ್ನಡದಲ್ಲಿ ಹೆಚ್ಚೆಚು ಸಂಗೀತ, ಸಿನೆಮಾಗಳು ಮೂಡಿ ಬರಲಿ. ಯುವ ತಂಡಗಳ ಈ ಪ್ರಯತ್ನಕ್ಕೆ ನಿಮ್ಮೆಲ್ಲರ ಸಹಕಾರವಿರಲಿ ಎಂದರು. ಈ ಸಂದರ್ಭದಲ್ಲಿ ಕನ್ನಡ ಆಲ್ಬಮ್ ಗೀತೆ ನಿರ್ಮಾಪಕರಾದ ರಮೇಶ್ ಆಚಾರ್ಯ ಅರಾಟೆ, ಗಾಯತ್ರಿ ರಮೇಶ್ ಆಚಾರ್ಯ, ನಿರ್ದೇಶಕದ ಪ್ರಹ್ಲಾದ್ ಆಚಾರ್ಯ, ಸಹ ನಿರ್ದೇಶಕ ಹರೀಶ್ ಎಂ.ಖಾರ್ವಿ, ಸಂಗೀತ ನಿರ್ದೇಶಕ ಗೌತಮ್ ಕೆ., ಕ್ಯಾಮರಾ ವರ್ಕ್ ಮಾಡಿದ್ದ ಪ್ರವೀಣ್ ನಾಡ, ಜಯರಾಮ ಆಲೂರು, ಪೋಸ್ಟರ್ ವಿನ್ಯಾಸಕಾರ ತಕ್ಷಕ್ , ಕಲಾವಿದರಾದ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಜ.5: ಕೋವಿಡ್ ಮಾರ್ಗಸೂಚಿಗಳನ್ನು ಗ್ರಾಹಕರು ಪಾಲಿಸುವಂತೆ ಅಂಗಡಿ ಮುಂಗಟ್ಟುಗಳ ಮುಖ್ಯಸ್ಥರು ಎಚ್ಚರಿಸುವುದರೊಂದಿಗೆ ವ್ಯವಹರಿಸಬೇಕು ತಪ್ಪಿದಲ್ಲಿ ಅಂಗಡಿ ಮಾಲೀಕರಿಗೆ ದಂಡ ವಿಧಿಸಿ, ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಎಚ್ಚರಿಕೆಯನ್ನು ನೀಡಿದರು. ಅವರು ಇಂದು ಮಣಿಪಾಲದ ಟೈಗರ್ ಸರ್ಕಲ್, ಬಸ್ ಸ್ಟ್ಯಾಂಡ್, ರಸ್ತೆ ಬದಿಯ ಅಂಗಡಿ ಮುಂಗಟ್ಟು ಸೇರಿದಂತೆ ಮಾಲ್ ಗಳಿಗೆ ಭೇಟಿ ನೀಡಿ, ಅಲ್ಲಿನ ವ್ಯಾಪಾರಿಗಳಿಗೆ ಕೋವಿಡ್ ಮಾರ್ಗಸೂಚಿಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದು ಎಚ್ಚರಿಕೆ ನೀಡುವುದರ ಜೊತೆಗೆ , ಮಾಸ್ಕ್ ಧರಿಸದೇ ವ್ಯಾಪಾರ ವಹಿವಾಟು ಮಾಡುವವರಿಗೆ ದಂಢ ವಿಧಿಸಲು ನಗರಸಭಾ ಸಿಬ್ಬಂದಿ ವರ್ಗದವರಿಗೆ ಸೂಚನೆ ನೀಡಿದರು. ಅಂಗಡಿ ಮಾಲೀಕರುಗಳು ತಮ್ಮ ಅಂಗಡಿ ಮುಂಭಾಗ ಗ್ರಾಹಕರು ಸಾಮಾಜಿಕ ಅಂತರ ಕಾಯ್ದಕೊಳ್ಳುವಂತೆ ಸೂಕ್ತ ಮಾರ್ಕಿಂಗ್ ಮಾಡುವುದರೊಂದಿಗೆ ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ನಿಗಾ ವಹಿಸಬೇಕು , ಮಾಸ್ಕ್ ಗಳನ್ನು ಕಡ್ಡಾಯವಾಗಿ ಧರಿಸಿಬೇಕು ಎಂಬ ನಾಮಫಲಕಗಳನ್ನು ಅಳವಡಿಸಬೇಕು, ಒಂದೊಮ್ಮೆ ಕೋವಿಡ್ ಮಾರ್ಗಸೂಚಿ ಪಾಲಿಸಿದ್ದಿದ್ದಲ್ಲಿ ಅವರೊಂದಿಗೆ ವ್ಯವಹರಿಸಲು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರಾಷ್ಟ್ರೀಯ ಸೈಬರ್ ಭದ್ರತಾ ದಿನಾಚರಣೆ ಅಂಗವಾಗಿ ಮೂಡ್ಲಕಟ್ಟೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೈಬರ್ ಸೇಫ್ ಕ್ಯಾಂಪಸ್ ಎಂಬ ವಿಷಯದ ಮೇಲೆ ಇತ್ತಿಚಿಗೆ ಕಾರ್ಯಾಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿದ್ದ ಕರ್ನಾಟಕ ನ್ಯಾಯಾಂಗ ಅಕಾಡೆಮಿ ಹಾಗೂ ಕರ್ನಾಟಕ ಪೊಲೀಸ್ ಅಕಾಡೆಮಿಯ ಸೈಬರ್ ಕಾನೂನು ಹಾಗೂ ಸೈಬರ್ ಭದ್ರತೆ ತರಬೇತುದಾರಾದ ಡಾ. ಅನಂತ್ ಪ್ರಭು ಜಿ. ಅವರು ಮಾತನಾಡಿ ವಿವಿಧ ಬಗೆಯ ಸೈಬರ್ ಕ್ರೈಮ್ ವಿವರ ತಿಳಿಸಿ ಅವುಗಳಿಂದ ಹೇಗೆ ಜಾಗರೂಕರಾಗಿರಬೇಕು ಎಂಬುದನ್ನ ವಿವರಿಸಿದರು. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಅದರಲ್ಲೂ ಪ್ರಮುಖವಾಗಿ ಹೆಣ್ಣುಮಕ್ಕಳು ಯಾವ ರೀತಿಯಲ್ಲಿ ಅಂತರ್ಜಾಲಕ್ಕೆ ಸಂಭಂದಿಸಿದಂತೆ ಸೈಬರ್ ಅಪರಾಧಿಗಳ ಕೃತ್ಯದಿಂದ ಮೋಸಕ್ಕೆ ಒಳಗಾಗಿ ತೊಂದರೆ ಅನುಭವಿಸುತ್ತಿದ್ದಾರೆ ಎಂಬುದನ್ನು ವಿವರಿಸಿ, ಜೊತೆಗೆ ವಿವಿಧ ರೀತಿಯ ಹ್ಯಾಕಿಂಗ್ ಗಳಿಂದ ತಮ್ಮ ಮೊಬೈಲ್ ಹಾಗೂ ಕಂಪ್ಯೂಟರನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರರಾವ್ ಮದಾನೆ, ಉಪ ಪ್ರಾಂಶುಪಾಲರಾದ ಪ್ರೊ. ಮೆಲ್ವಿನ್ ಡಿಸೋಜ, ಕಾಲೇಜಿನ ಡೀನ್,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರೋಟರಿ ಕ್ಲಬ್ ಗಂಗೊಳ್ಳಿ ಮತ್ತು ರೋಟರ್ಯಾಕ್ಟ್ ಕ್ಲಬ್ ಗಂಗೊಳ್ಳಿ ವತಿಯಿಂದ ಗಂಗೊಳ್ಳಿಯ ಸ್ಯಾಕ್ಸೋಫೋನ್ ವಾದನದ ಬಾಲಪ್ರತಿಭೆ ಸಂಜಿತ್ ಎಂ. ದೇವಾಡಿಗನನ್ನು ಗಂಗೊಳ್ಳಿಯ ಸೀತಾಳಿ ನವದುರ್ಗೆ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ರಾಜೇಶ್ ಎಂ. ಜಿ, ಸೀತಾಳಿ ನವದುರ್ಗೆ ಅಮ್ಮನವರ ದೇವಸ್ಥಾನದ ಅರ್ಚಕರಾದ ರಘುನಾಥ ಪೂಜಾರಿ ಕಳಿಹಿತ್ಲು, ರೋಟರಾಕ್ಟ್ ಕ್ಲಬ್ ಅಧ್ಯಕ್ಷೆ ಅಮೀಕ್ಷಾ ಡಿ ನಾಯ್ಕ್,ಸದಸ್ಯರಾದ ದೀಕ್ಷಾ, ಶ್ರೇಯಾ, ತ್ರಿಷಾ, ಪೂಜಾ, ಸುಷ್ಮಾ, ಸಾಯಿರಾಜ್, ಅಭಿಷೇಕ್, ಆದಿತ್ಯ, ಹರೀಶ, ಸುಮಂತ, ಪ್ರಥ್ವಿಜಾ, ಸರಸ್ವತಿ ವಿದ್ಯಾಲಯದ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ, ಸಂಜಿತ್ ದೇವಾಡಿಗನ ತಂದೆ ತಾಯಿ ಮಾಧವ ದೇವಾಡಿಗ ಮತ್ತು ಸಾವಿತ್ರಿ ಎಸ್ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪ್ರಧಾನಮಂತ್ರಿಗಳಿಗೆ ಪಂಜಾಬ್ ಕಾಂಗ್ರೆಸ್ ಸರ್ಕಾರದಿಂದ ಕ್ಷಮಿಸಲಾಗದ ದೊಡ್ಡ ಭದ್ರತಾ ಲೋಪವಾಗಿದೆ. ಇಡೀ ದೇಶ ಪ್ರಜೆಗಳು ಇಂತಹ ದುರಂತ ಘಟನೆಯನ್ನು ಖಂಡಿಸುತ್ತಾರೆ. ಪ್ರಧಾನಿಗಳ ಭದ್ರತೆಯ ಬಗ್ಗೆ ನಿರ್ಲಕ್ಷ್ಯ ತೋರಿದರೆ ಹೇಗೆ ಎಂಬುದು ಇಡೀ ದೇಶ ಪ್ರಜೆಗಳಿಗೆ ಪ್ರಶ್ನೆಯಾಗಿದೆ. ಈ ನಾಚಿಕೆಗೇಡಿನ ಘಟನೆಯ ಬಗ್ಗೆ ಸಮಗ್ರವಾಗಿ ತನಿಖೆಯಾಗಬೇಕೆಂದು ನಾನು ಈ ಮೂಲಕ ಒತ್ತಾಯಿಸುತ್ತೇನೆ. ಪಂಜಾಬ್ ಕಾಂಗ್ರೆಸ್ ಸರ್ಕಾರ ಇಡೀ ದೇಶದ ಜನತೆಗೆ, ಪ್ರಧಾನಿಗಳಿಗೆ ಕ್ಷಮೆ ಕೇಳಬೇಕೆಂದು ಆಗ್ರಹಿಸುತ್ತೇನೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ. ವೈ. ರಾಘವೇಂದ್ರ ಹೇಳಿದ್ದಾರೆ. ಪಂಜಾಬಿನಲ್ಲಿ ನಡೆದ ಬೃಹತ್ ಪ್ರತಿಭಟನೆಯಿಂದಾಗಿ 20 ನಿಮಿಷಗಳ ಕಾಲ ಸಮಯ ಕಳೆದು ಪ್ರಧಾನಮಂತ್ರಿಗಳು ಬದುಕಿ ಬಂದಿರುವುದು ಹೆಚ್ಚು. ಇಂತಹ ವಿಚಿತ್ರ ಘಟನೆಯನ್ನು ನೋಡಿಕೊಂಡು ಪಂಜಾಬ್ ಕಾಂಗ್ರೆಸ್ ಸರ್ಕಾರ ದೇಶದ ಪ್ರಧಾನಿಗಳಿಗೆ ರಕ್ಷಣೆ ನೀಡದೇ ಇರುವುದು ದೊಡ್ಡ ದುರಂತವಾಗಿದೆ. ಇದನ್ನು ಯಾರು ಕೂಡ ಕ್ಷಮಿಸುವುದಿಲ್ಲ. ಪ್ರಧಾನಮಂತ್ರಿಗಳ ವಿರುದ್ಧ ಷಡ್ಯಂತ್ರ ನಡೆಸಿದವರ ವಿರುದ್ಧ ಮತ್ತು ತಪ್ಪಿತಸ್ಥರನ್ನು ತಕ್ಷಣವೇ ಹುಡುಕಿ ಕಾನೂನು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಜ.05: ನಾಲ್ಕು ಭಾರಿ ಕುಂದಾಪುರ ಕ್ಷೇತ್ರದಿಂದ ವಿಧಾನಸಭಾ ಸದಸ್ಯರಾಗಿ, ಮೂರು ಭಾರಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿ ಒಟ್ಟು 36 ವರ್ಷಗಳ ಸುಧೀರ್ಘ ಅವಧಿಗೆ ಶಾಸಕರಾಗಿದ್ದ ಕೆ. ಪ್ರತಾಪ್ಚಂದ್ರ ಶೆಟ್ಟಿ ಅವರು ಜ.5ರಂದು ಶಾಸಕತ್ವದಿಂದ ನಿವೃತ್ತಿ ಹೊಂದಲಿದ್ದಾರೆ. ಕೊಳ್ಕೆಬೈಲಿನಲ್ಲಿ 1950 ಸೆ.4ರಂದು ಜನಿಸಿದ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ಬಿ.ಎ ಪದವಿಯ ಬಳಿಕ ಬ್ಯಾಂಕ್ ಉದ್ಯೋಗಿಯಾಗಿದ್ದರು. ತಂದೆಯ ನಿಧನದ ನಂತರ ಉದ್ಯೋಗ ತೊರೆದು ಕೃಷಿಕಾಯಕದಲ್ಲಿ ನಿರತರಾದ ಅವರು ಮುಂದೆ, ಯೂತ್ ಕಾಂಗ್ರೆಸ್ ಮೂಲಕ ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ 1983ರಲ್ಲಿ ರಾಜಕೀಯ ಪ್ರಯಾಣ ಆರಂಭಿಸಿದ್ದರು. ಮುಂದೆ ಕುಂದಾಪುರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ದ.ಕ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾಗಿ, ರಾಜ್ಯ ಯುವ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾಗಿ, ಕೆಪಿಸಿಸಿ ಕಾರ್ಯದರ್ಶಿಯಾಗಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ, ಕೆಪಿಸಿಸಿ ಉಪಾಧ್ಯಕ್ಷರಾಗಿ, ಎಐಸಿಸಿ ಸದಸ್ಯರಾಗಿ ಪಕ್ಷದ ವಿವಿಧ ಹುದ್ದೆಗಳನ್ನು ಅವರು ನಿಭಾಯಿಸಿದ್ದಾರೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ.ಜ04: ನದಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಮೀನುಗಾರರು ರಕ್ಷಿಸಿದ ಘಟನೆ ಮಧ್ಯಾಹ್ನ ಹೇರಿಕುದ್ರು ಸೇತುವೆ ಬಳಿ ನಡೆದಿದೆ. ಮಂಗಳೂರು ಮೂಲದ ಯುವಕನೋರ್ವ ಮಂಗಳವಾರ ಮಧ್ಯಾಹ್ನ 12ರ ಸಮಯದಲ್ಲಿ ಕುಂದಾಪುರದ ಕಡೆಯಿಂದ ನಡೆದುಬಂದ ಹೇರಿಕುದ್ರು ಸೇತುವೆ ಮೇಲೆ ಬಂದು ತುಸು ಸಮಯ ಆಚೀಚೆ ಅಡ್ಡಾಡಿದ್ದಾನೆ. ನಂತರ ಕೆಲವರು ನೋಡ ನೋಡುತ್ತಲೇ ಏಕಾಏಕಿ ಸೇತುವೆಯಿಂದ ಪಂಚಗಂಗಾವಳಿ ನದಿಗೆ ಹಾರಿದ್ದಾನೆ. ಅಷ್ಟರಲ್ಲಿ ಇದನ್ನು ಗಮನಿಸಿದ ದೂರದ ನದಿಯ ದಡದಲ್ಲಿದ್ದ ಖಾರ್ವಿ ಸಮಾಜದ ಮೀನುಗಾರ ಯುವಕರು ಕೂಡಲೇ ದೋಣಿ ಮೂಲಕ ಸಾಗಿ ನೀರಿನಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿ ಕೊಸರಾಡುತ್ತಿದ್ದವನ್ನು ಎತ್ತಿ ದಡಕ್ಕೆ ತಲುಪಿಸಿದ್ದಾರೆ. ಯುವಕನನ್ನು ರಕ್ಷಿಸಿ ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಯುವಕನ ಬಗ್ಗೆ ಹೆಚ್ಚಿನ ವಿವರ, ಆತ್ಮಹತ್ಯೆಯ ಕಾರಣ ತಿಳಿದು ಬಂದಿಲ್ಲ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ಗೃಹಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳ ನೇತ್ರತ್ವದಲ್ಲಿ ಕೋವಿಡ್ ಟಾಸ್ಕ್ ಪೋರ್ಸ್ ಹಾಗೂ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಲಾಗಿದ್ದು, ಮೊದಲ ಹಂತದಲ್ಲಿ ಬೆಂಗಳೂರು ನಗರದಲ್ಲಿ 10 ಮತ್ತು 12ನೇ ತರಗತಿ ಹೊರತುಪಡಿಸಿ ಆಫ್ಲೈನ್ ತರಗತಿ ಬಂದ್ ಮಾಡಿ ಶಾಲಾ ಕಾಲೇಜುಗಳು ಆನ್ಲೈನ್ ವಿಧಾನದಲ್ಲಿ ನಡೆಸಲು ಸೂಚಿಸಲಾಗಿದೆ. 6ನೇ ತಾರೀಖಿನಿಂದ ಜಾರಿಯಾಗುವಂತೆ ವೀಕೆಂಡ್ ಕರ್ಫ್ಯೂ ಇರಲಿದೆ. ಶುಕ್ರವಾರ ರಾತ್ರಿ 10ರಿಂದ ಸೋಮವಾರ ಬೆಳಿಗ್ಗೆ 5ರವರೆಗೆ ವೀಕೆಂಟ್ ಕರ್ಫ್ಯೂ ಇರುತ್ತದೆ. ಆಹಾರ ವಸ್ತು, ಹೊಟೆಲ್ಗಳಲ್ಲಿ ಪಾರ್ಸೆಲ್, ಅತ್ಯಗತ್ಯ ಸೇವೆಗಳು ಮಾತ್ರ ಇರಲಿದೆ. ಶಾಲಾ ಕಾಲೇಜು ನಿಯಮ ಹೊರತುಪಡಿಸಿ ಉಳಿದೆಲ್ಲಾ ನಿಯಮಗಳು ರಾಜ್ಯಕ್ಕೆ ಅನ್ವಯವಾಗಲಿದೆ. ಮುಖ್ಯಮಂತ್ರಿಗಳ ಗೃಹಕಛೇರಿಯಲ್ಲಿ ನಡೆದ ಸಭೆ ಬಳಿಕ ಸಚಿವರಾದ ಆರ್. ಅಶೋಕ್, ಡಾ.ಕೆ. ಸುಧಾಕರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳು ಮಾಲ್ಗಳಿಗೆ ಭಾರತ ಸರ್ಕಾರದ ಮಾರ್ಗಸೂಚಿ ಅನುಸರಿಸಲಾಗುವುದು. ಚಿತ್ರಮಂದಿರ, ಮಾಲ್, ಬಾರ್, ಪಬ್ಗಳ ಒಟ್ಟು ಸಾಮರ್ಥ್ಯದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯ ಆಶ್ರಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿ?ನದ ಸಹಯೋಗದೊಂದಿಗೆ, ಅಸೊಸೀಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿಯ ಸಹಭಾಗಿತ್ವದಲ್ಲಿ ಸ್ವರಾಜ್ ಮೈದಾನದಲ್ಲಿ ಆರಂಭಗೊಂಡಿರುವ 81ನೇ ಅಖಿಲ ಭಾರತ ಅಂತರ್ವಿಶ್ವವಿದ್ಯಾಲಯ ಪುರುಷರ ಅಥ್ಲೆಟಿಕ್ ಚಾಂಪಿಯನ್ಶಿಪ್’ಗೆ ಚಾಲನೆ ನೀಡಲಾಯಿತು. ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸರಕಾರ ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ನಾರಾಯಣ ಗೌಡ, ತಮ್ಮ ಅಧಿಕಾರಾವಧಿಯಲ್ಲಿ ಇಂದು ದೊಡ್ಡ ಪ್ರಮಾಣದ ಕ್ರೀಡಾ ಕಾರ್ಯಕ್ರಮ ಮೊದಲ ಬಾರಿಗೆ ವೀಕ್ಷಿಸುತ್ತಿರುವುದು ಖುಷಿ ತಂದುಕೊಟ್ಟಿದೆ. ಕ್ರೀಡಾ ಕಾರ್ಯಕ್ರಮಗಳಿಗೆ ಬೆಂಬಲ ನೀಡಲು ಸರ್ಕಾರ, ಮುಂಚೂಣಿಯಲ್ಲಿದೆ. ರಾಜ್ಯಾದ್ಯಂತ 75 ಕ್ರೀಡಾರ್ಥಿಗಳನ್ನು ದತ್ತು ಪಡೆದು ತರಬೇತಿ ನೀಡಿ ಒಲಿಂಪಿಕ್ ಕ್ತೀಡಾಕೂಟಕ್ಕೆ ಸಜ್ಜುಗೊಳಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಕ್ರೀಡಾಕೂಟಕ್ಕೆ ರಾಜ್ಯದಿಂದ 5 ಲಕ್ಷ ನೀಡುವುದಾಗಿ ಘೋಷಿಸಿದರು. ಕಾರ್ಯಕ್ರಮದಲ್ಲಿ ಒಲಿಂಪಿಯನ್ ಎಂ. ಆರ್ ಪೂವಮ್ಮ ಅವರನ್ನು ಸನ್ಮಾನಿಸಲಾಯಿತು. ಮೊದಲ ದಿನದ ಕ್ರೀಡಾಕೂಟದ 10,000ಮೀ ಓಟದ ವಿಜೇತರನ್ನು ಅಭಿನಂದಿಸಲಾಯಿತು. ಮಂಗಳೂರು ವಿವಿ ಉಪಕುಲಪತಿ ಡಾ. ಸುಬ್ರಹ್ಮಣ್ಯ ಯಡಪಡಿತ್ತಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೇಂದ್ರ ಮತ್ತು ರಾಜ್ಯ ಸರಕಾರಗಳ ಮಹತ್ತರ ಗುರಿಯಾದ 15-18 ವಯೋಮಾನದವರಿಗೆ ಕನಿಷ್ಠ ಅವಧಿಯಲ್ಲಿ ಗರಿಷ್ಠ ಪ್ರಮಾಣದ ಲಸಿಕೆ ನೀಡುವಿಕೆ, ಆ ಮೂಲಕ ಕೋವಿಡ್ ಮತ್ತು ಓಮಿಕ್ರಾನ್ ಸಾಂಕ್ರಾಮಿಕಗಳ ತಡೆಯಲ್ಲಿ ರಕ್ಷಾಕವಚವಾಗುವ ವ್ಯಾಕ್ಸಿನೇಶನ್ ಅಭಿಯಾನದ ಅಂಗವಾಗಿ ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಕೋವಾಕ್ಸಿನ್ ಲಸಿಕಾ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಲಯನ್ಸ್ ಕ್ಲಬ್, ಕುಂದಾಪುರ, ಇದರ ಅಧ್ಯಕ್ಷರಾದ ಲಯನ್ ರಾಧಾಕೃಷ್ಣ ನಾಯಕ್ ರವರು ಕಾಲೇಜಿನ ಲಸಿಕಾ ಅಭಿಯಾನಕ್ಕೆ ದೀಪ ಬೆಳಗುವುದರ ಮೂಲಕ ವಿಧ್ಯುಕ್ತ ಚಾಲನೆ ನೀಡಿದರು. ತಾಲೂಕು ಸಾರ್ವಜನಿಕ ಉಪವಿಭಾಗೀಯ ಆಸ್ಪತ್ರೆ, ಕುಂದಾಪುರ, ಇಲ್ಲಿಯ ವೈದ್ಯಾಧಿಕಾರಿ ಡಾ. ಕವಿತಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ನವೀನ ಕುಮಾರ ಶೆಟ್ಟಿಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗ ಮುಖ್ಯಸ್ಥರಾದ ಕೃಷ್ಣಮೂರ್ತಿ ಡಿ. ಬಿ ಯವರು ಧನ್ಯವಾದ ಸಲ್ಲಿಸಿದರು. ಹಿಂದಿ ವಿಭಾಗ ಮುಖ್ಯಸ್ಥೆ ಜಯಶೀಲಾ ಪೈಯವರು ಕಾರ್ಯಕ್ರಮ ನಿರೂಪಿಸಿದರು.
