ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಇಲ್ಲಿನ ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ ಗಂಗೊಳ್ಳಿಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘದ ಪರವಾಗಿ ಅಧ್ಯಕ್ಷ ಚಿಕ್ಕಯ್ಯ ಮೊಗವೀರ ಅವರನ್ನು ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಪುರೋಹಿತರಾದ ವೇದಮೂರ್ತಿ ಜಿ. ರಾಘವೇಂದ್ರ ಆಚಾರ್ಯ, ಸಮಿತಿಯ ಅಧ್ಯಕ್ಷ ಸತೀಶ ಜಿ., ಗೌರವಾಧ್ಯಕ್ಷ ವೇದಮೂರ್ತಿ ಜಿ. ನಾರಾಯಣ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರವೀಂದ್ರ ಪಟೇಲ್, ಕಾರ್ಯದರ್ಶಿ ಗೋಪಾಲ ಖಾರ್ವಿ ದಾವನಮನೆ, ಉಪಾಧ್ಯಕ್ಷ ಗೋಪಾಲ ಚಂದನ್, ಸಮಿತಿಯ ಪದಾಧಿಕಾರಿಗಳು, ಮಹಿಳಾ ಮಂಡಳಿ ಕಾರ್ಯದರ್ಶಿ ಸ್ವಾತಿ ಮಡಿವಾಳ, ಸಮಿತಿ ಪದಾಧಿಕಾರಿಗಳು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘದ ಸದಸ್ಯರು, ಸ್ಥಳೀಯರು, ಮತ್ತಿತರರು ಉಪಸ್ಥಿತರಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಕಾಲ್ತೋಡು ಗ್ರಾಮದ ರಾಘು ಬಿಲ್ಲವ ಅವರನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಸೇವಾದಳದ ಸೋಶಿಯಲ್ ಮೀಡಿಯಾ ಕೋ-ಆರ್ಡಿನೇಟರ್ ಆಗಿ ಸೇವಾದಳದ ನ್ಯಾಶನಲ್ ಸೋಶಿಯಲ್ ಮೀಡಿಯಾ ಕೋ-ಆರ್ಡಿನೇಟರ್ ಸುಭಾಶ್ ಬಾಬು ನೇಮಕ ಮಾಡಿ ಆದೇಶಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ, ವ್ಯವಹಾರ ನಿರ್ವಹಣಾ ವಿಭಾಗ ಹಾಗೂ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಸಹಯೋಗದಲ್ಲಿ ಉದಯೋನ್ಮುಖ ಹಣಕಾಸು ಯೋಜನೆಗಾಗಿ ಹಣಕಾಸು ಮಂತ್ರ ಇದರ ಕುರಿತು ಒಂದು ದಿನದ ರಾಜ್ಯಮಟ್ಟದ ವೆಬಿನಾರ್ ನಡೆಯಿತು. ಸಂಪನ್ಮೂಲ ವ್ಯಕ್ತಿ ಡಾ. ಶರಣ್ ಕುಮಾರ್ ಶೆಟ್ಟಿ, ಸಹಾಯಕ ಪ್ರಾಧ್ಯಾಪಕರು, ಎಮ್. ಎಸ್. ಎನ್. ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಮಂಗಳೂರು, ವರ್ತಮಾನದ ವ್ಯಾವಹಾರಿಕ ತುರ್ತಿನ ಈ ಸಂದರ್ಭ ಅಗತ್ಯವುಳ್ಳ ಯೋಜಿತ ಹಣಕಾಸು ವ್ಯಯಿಸುವಿಕೆ ಹಾಗೂ ನಿರ್ವಹಣೆಯ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ ಕೆ. ಉಮೇಶ್ ಶೆಟ್ಟಿ, ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ, ಐಕ್ಯೂಎಸಿ ಸಂಯೋಜಕಿ ಸ್ಫೂರ್ತಿ ಎಸ್. ಫೆರ್ನಾಂಡಿಸ್ ಉಪಸ್ಥಿತರಿದ್ದರು. ವ್ಯವಹಾರ ನಿರ್ವಹಣಾ ವಿಭಾಗದ ಮುಖ್ಯಸ್ಥೆ ನಂದಾ ರೈ ಸ್ವಾಗತಿಸಿ, ನಿರೂಪಿಸಿದರು. ಉಪನ್ಯಾಸಕಿ ಅವಿತಾ ಕೊರೆಯಾ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬ್ಲಾಕ್ ಮಹಿಳಾ ಕಾಂಗ್ರೆಸ್ ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಅರಶಿನ ಕುಂಕುಮ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ, ನವರಾತ್ರಿಯು ದುಷ್ಟ ದಮನಕಾರಕ ಶಕ್ತಿರೂಪಿಗಳಾದ ನವದುರ್ಗೆಯರನ್ನು ಆರಾಧಿಸುವ ಮಹತ್ವದ ಪರ್ವಕಾಲ. ದೇಶದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ ಮಹಿಳೆಯರು ದುರ್ಗೆಯ ಆರಾಧನೆಯ ಮೂಲಕ ಶಕ್ತಿಸಂಚಯ ಮಾಡಿಕೊಂಡು ಅಂತಹ ದೌರ್ಜನ್ಯದ ವಿರುದ್ಧ ಸೆಟೆದು ನಿಲ್ಲಬೇಕು ಎಂದು ಹೇಳಿದರು. ಶಶಿಕಲಾ ಮತ್ತು ಸಂಗಡಿಗರು ಪ್ರಾರ್ಥನೆ ಹಾಡಿದರು. ಬ್ಲಾಕ್ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಶಾಂತಿ ಪಿರೇರಾ ಸ್ವಾಗತಿಸಿದರು. ಅಧ್ಯಕ್ಷೆ ಗೌರಿ ದೇವಾಡಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಜ್ಯೋತಿ ಕೆ. ಹೆಬ್ಬಾರ್ ಅರಶಿನ ಕುಂಕುಮ ಆಚರಣೆಯ ಮಹತ್ವವನ್ನು ವಿವರಿಸಿದರು. ವಂಡ್ಸೆ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ದೇವಾಡಿಗ ವಂದಿಸಿದರು. ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೇಲಿಯೊ, ಉಡುಪಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಡಾ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕಾಲೇಜಿನ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳಿಗೆ ಕೋವಿಡ್- 19ನ ಆರ್ ಟಿ .ಪಿ. ಸಿ. ಆರ್ ಪರೀಕ್ಷೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕುಂದಾಪುರದ ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ ಮಾತನಾಡಿ, ಪ್ರಜ್ಞಾವಂತ ನಾಗರಿಕ ಸಮುದಾಯ ನಾವೆಲ್ಲರೂ ಕೋವಿಡ್-19 ರೋಗವನ್ನು ಬರದಂತೆ ತಡೆಯುವಲ್ಲಿ ನಮ್ಮೆಲ್ಲರ ಪಾತ್ರ ಬಹಳವಿದೆ. ಕೋವಿಡ್-19 ಬರದಂತೆ ತಡೆಯುವಲ್ಲಿ ಅಳವಡಿಸಿಕೊಂಡಿರುವಂತಹ ಕೆಲವು ನಿಯಮಗಳನ್ನು ತಪ್ಪದೇ ಪಾಲಿಸಿ ಕೋವಿಡ್-19ನ್ನು ಕುರಿತು ಜಾಗೃತರಾಗಿ ಜನರಲ್ಲಿಯೂ ಜಾಗೃತಿ ಮೂಡಿಸೋಣ ಎಂದು ತಿಳಿಸಿದರು. ಕೋವಿಡ್ -19 ಬರದಂತೆ ಕೆಲವು ನೀತಿನಿಯಮಗಳ ಪಾಲನೆಯನ್ನುಕುರಿತು ಪ್ರತಿಜ್ಞಾ ವಿಧಿ ಭೋಧಿಸಿ ನಾವು ಕೋವಿಡ್ – 19 ಹೋಗಲಾಡಿಸುವಲ್ಲಿ ಕಟು ಬದ್ಧರಾಗೋಣ ಎಂದು ಕರೆ ನೀಡಿದರು. ಕಾಲೇಜಿನ ಸುಮಾರು 144 ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳಿಗೆ ಆರ್. ಟಿ.ಪಿ.ಸಿ .ಆರ್ ಪರೀಕ್ಷೆಯನ್ನು ನಡೆಸಲಾಯಿತು. ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಡಾ. ರೇಖಾ ಬನ್ನಾಡಿ ಮಾತನಾಡಿದರು. ಆರೋಗ್ಯ ಸಹಾಯಕರಾದ ನಾರಾಯಣ ಮತ್ತು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗಂಗೊಳ್ಳಿ ಮ್ಯಾಂಗನೀಸ್ ರಸ್ತೆಯಲ್ಲಿರುವ ಶ್ರೀ ಚಕ್ರೇಶ್ವರಿ ಮತ್ತು ಹೈಗುಳಿ ದೇವಸ್ಥಾನದಲ್ಲಿ ಮಹಾ ಶರನ್ನವರಾತ್ರಿ ಮಹೋತ್ಸವ ವಿವಿಧ ಧಾರ್ಮಿಕ ಆಚರಣೆ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು. ಅ.17ರಿಂದ ಶರನ್ನವರಾತ್ರಿಯ ಕಾರ್ಯಕ್ರಮಗಳು ಆರಂಭಗೊಂಡಿದ್ದು ಅ.25 ಪರ್ಯಂತ ನಡೆಯಲಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ‘ಶ್ರೀಮದ್ ಭಗವದ್ಗೀತೆ ನಮ್ಮ ಸಂಸ್ಕೃತಿ ಮತ್ತು ಜ್ಞಾನ ಪರಂಪರೆಯ ಅವಿಭಾಜ್ಯ ಅಂಗ’ ಎಂದು ಲೇಖಕ ಉಪ್ಪುಂದ ರಮೇಶ ವೈದ್ಯ ಹೇಳಿದರು. ಮುಖ್ಯ ಶಿಕ್ಷಕ ಬಿಜೂರು ವಿಶ್ವೇಶ್ವರ ಅಡಿಗ ರಚಿಸಿದ ‘ಶ್ರೀಮದ್ಭಗವದ್ಗೀತೋಪನಿಷತ್ ಸಾರ, ರಂಗಸಂವಾದ’ ಕೃತಿಯನ್ನು ಬೈಂದೂರು ಸೀತಾರಾಮ ಕಲ್ಯಾಣ ಮಂಟಪದಲ್ಲಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ವಿಶ್ವೇಶ್ವರ ಅಡಿಗರು ಸಂಕ್ಷೇಪಿಸಿ ಬರೆದ ಕೃತಿಯು ಗೀತಾ ಸಾರ ಸುಲಭಗ್ರಾಹ್ಯ ಮಾಡವಂತಿದೆ. ರಂಗದ ಮೇಲೆ ಪ್ರದರ್ಶಸಲೂ ಸಾಧ್ಯವಾಗುವಂತೆ ಇದರ ರಚನೆ ಇದೆ’ ಎಂದರು. ‘ಚಂಚಲ ಮನಸ್ಸಿನಿಂದ ತೊಳಲಾಡುವ ವ್ಯಕ್ತಿಗಳಿಗೆ ಗೀತೋಪದೇಶದಲ್ಲಿ ಶ್ರೀಕೃಷ್ಣ ನೀಡಿದ ಅಮೂಲ್ಯ ಸಂದೇಶ ಬದುಕಿಗೆ ದಾರಿದೀಪ ಆಗಬಹುದು’ ಎಂದು ಅವರು ಹೇಳಿದರು. ಜಿಲ್ಲಾ ಶ್ರೀಮದ್ಭಗವದ್ಗೀತಾ ಅಭಿಯಾನ ಸಮಿತಿ ಅಧ್ಯಕ್ಷ ಬಿಜೂರು ರಾಮಕೃಷ್ಣ ಶೇರುಗಾರ್ ಅಧ್ಯಕ್ಷತೆ ವಹಿಸಿದ್ದರು. ಕೋವಿಡ್ನಿಂದ ಸ್ಥಗಿತಗೊಂಡಿರುವ ಭಗವದ್ಗೀತಾ ಪ್ರಸಾರ ಅಭಿಯಾನ ಮುಂದುವರಿಸುವುದು ಹೈಸ್ಕೂಲ್ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಆನ್ಲೈನ್ ಕ್ವಿಜ್, ಪ್ರಬಂಧ, ಶ್ಲೋಕ ಕಂಠಪಾಠ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸುವ ಕುರಿತು ಸಭೆಯಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ತೋಟಗಾರಿಕಾ ಉತ್ಪನ್ನ ಬೆಳೆಗಾರರ ಸಹಕಾರ ಮಾರಾಟ ಮತ್ತು ಸಂಸ್ಕರಣಾ ಸಂಘದ(ಹಾಪ್ಕಾಮ್ಸ್) ನೂತನ ಅಧ್ಯಕ್ಷರಾಗಿ ಜಿಲ್ಲಾ ಭಾರತೀಯ ಕಿಸಾನ್ ಸಂಘ ಬೆಂಬಲಿತ ನಿರ್ದೇಶಕ ಸೀತಾರಾಮ ಗಾಣಿಗ ಹಾಲಾಡಿ ಹಾಗೂ ಉಪಾಧ್ಯಕ್ಷರಾಗಿ ವಿನಯಾ ರಾನಡೆ ಮಾಳ ಆಯ್ಕೆಯಾಗಿದ್ದಾರೆ. ಸೀತಾರಾಮ ಗಾಣಿಗ ಅವರು ಭಾರತೀಯ ಕಿಸಾನ್ ಸಂಘದ ಕುಂದಾಪುರ ತಾಲ್ಲೂಕು ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ರೈತಪರ ಹೋರಾಟಗಳ ಮೂಲಕ ಹಾಪ್ಕಾಘಮ್ಸ್ ನಿರ್ದೇಶಕರಾದರು. ಹಾಪ್ಕಾಮ್ಸ್ ಮೂಲಕ ಜಿಲ್ಲೆಯ ರೈತರು ಬೆಳೆದ ತರಕಾರಿ, ಹಣ್ಣುಗಳು ಹಾಗೂ ತೋಟಗಾರಿಕಾ ಬೆಳೆಗಳಿಗೆ ಉತ್ತಮ ಮೌಲ್ಯ ಕೊಡಿಸುವ ನಿಟ್ಟಿನಲ್ಲಿ ಭಾರತೀಯ ಕಿಸಾನ್ ಸಂಘದ ರೈತ ಪ್ರತಿನಿಧಿಗಳು ಗೆಲುವು ಸಾಧಿಸಿದ್ದಾರೆ ಎಂದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಅ.25ರ ವರೆಗೆ ನವರಾತ್ರಿ ಉತ್ಸವ ಜರುಗಲಿದ್ದು, ಸಾರ್ವಜನಿಕರ ಮತ್ತು ಕರ್ತವ್ಯ ನಿರತ ಸಿಬ್ಬಂದಿಗಳ ಆರೋಗ್ಯದ ಹಿತದೃಷ್ಟಿಯಿಂದ ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಸರ್ಕಾರದ ಮಾರ್ಗಸೂಚಿಗಳನ್ನು ದೇವಾಲಯದಲ್ಲಿ ಅನುಷ್ಟಾನಗೊಳಿಸುವ ಸಲುವಾಗಿ ಅ.24ರ ಮಹಾನವಮಿಯಂದು ನಡೆಯಲಿರುವ ರಥೋತ್ಸವವನ್ನು ದೇವಸ್ಥಾನದ ಆವರಣದ ಒಳಗೆ ದೇವಸ್ಥಾನದ ಅರ್ಚಕರು, ಪುರೋಹಿತರು, ಸಿಬ್ಬಂದಿಗಳು ಮಾತ್ರ ನೆರವೇರಿಸಲಿದ್ದಾರೆ. ಅ.25ರ ವಿಜಯದಶಮಿ ದಿನದಂದು ಬೆಳಗ್ಗೆ 4 ಗಂಟೆಯಿಂದ ವಿದ್ಯಾರಂಭ ಪ್ರಾರಂಭವಾಗಲಿದ್ದು, ವಿದ್ಯಾರಂಭಕ್ಕೆ ದಂಪತಿ ಸಮೇತ ಮಗುವಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಪಿ. ಜಿ. ಕಂಪ್ಯೂಟರ್ ಸೈನ್ಸ್ ಲ್ಯಾಬ್ ನಲ್ಲಿ ವೃತ್ತಿಪರ ವಾಣಿಜ್ಯ ವಿಭಾಗ ಆಯೋಜಿಸಿದ್ದ ಒಂದು ದಿನದ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ ನಡೆಯಿತು ಸಂಪನ್ಮೂಲ ವ್ಯಕ್ತಿಯಾಗಿ ಆಳ್ವಾಸ್ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ಸಂಯೋಜಕ ಡಾ. ಶಶಿಧರ ಭಟ್ ಮಾತನಾಡಿ, ಇಂದಿನ ಶಿಕ್ಷಣ ವ್ಯವಸ್ಥೆ ಹೊಸ ಆಧುನಿಕ ತಂತ್ರಜ್ಞಾನವನ್ನು ಹೆಚ್ಚು ಅವಲಂಬಿಸಿದ್ದು, ಶಿಕ್ಷಕರು ಈ ಕಾಲದ ಅಗತ್ಯಕ್ಕೆ ತಕ್ಕಂತೆ ತಮ್ಮಲ್ಲಿ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ’ಇ – ಕಂಟೆಂಟ್ ಡೆವೆಲೆಪ್ಮೆಂಟ್’ ವಿಷಯದ ಕುರಿತು ಮಾತನಾಡಿದರು. ಪ್ರತಿಭಾವಂತ ವಿದ್ಯಾರ್ಥಿಗಳು ಮಾತ್ರ ವೃತ್ತಿಪರ ವಾಣಿಜ್ಯ ಕೋರ್ಸ್ ಗಳನ್ನು ಆಯ್ಕೆ ಮಾಡುತ್ತಾರೆ. ಸಿ. ಎ, ಸಿ.ಎಸ್, ಅಥವಾ ಅಂತಾರಾಷ್ಟ್ರೀಯ ಕೋರ್ಸ್ಗಳಾದ ಎ. ಸಿ. ಸಿ. ಎ; ಸಿ. ಎಮ್. ಎ. ಕೋರ್ಸ್ಗಳು ಬಹು ಸ್ಪರ್ಧಾತ್ಮಕ ಕೋರ್ಸ್ಗಳಾಗಿದ್ದು, ಇದಕ್ಕೆ ಸಾಮಾನ್ಯ ತರಗತಿಗಳಿಗಿಂತ ಬೇರೆ ರೀತಿಯ ತಯಾರಿ ಬೇಕಾಗುತ್ತದೆ. ಹಳೆಕಾಲದ ನೋಟ್ಸ್ ಮಾದರಿ ಸಾಧ್ಯವೇ ಇಲ್ಲ. ವಿದ್ಯಾರ್ಥಿಗಳ ಅಗತ್ಯತೆಯನ್ನು ಅರಿತು ಕೆಲಸ…
