Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಕೋಟದ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲದಲ್ಲಿ ವಾರ್ಷಿಕ ವರ್ಧತ್ಯೋತ್ಸವದ ಪ್ರಯುಕ್ತ ವೇ.ಮೂ ಮಧುಸೂದನ್ ಬಾಯರಿ ನೇತೃತ್ವದಲ್ಲಿ ಶುಕ್ರವಾರ ಪ್ರಾರ್ಥನಾ ಫಲನ್ಯಾಸ ಪೂರ್ವಕ ಸಾಮೂಹಿಕ ಪ್ರಾರ್ಥನೆ, ಶ್ರೀ ಅಮೃತೇಶ್ವರೀ ಹಲವು ಮಕ್ಕಳ ತಾಯಿಗೆ ಪಂಚ ವಿಂಶತಿ ದ್ರವ್ಯಕಲಶ ಪೂರ್ವಕ ಕಲಾತತ್ವ ಹೋಮ ಹಾಗೂ ಪರಿವಾರ ದೇವರುಗಳಿಗೆ ನವಕ ಪ್ರಧಾನ ಕಾಲಾಧಿವಾಸ ಹೋಮ ಇತ್ಯಾದಿ ಪೂಜಾ ಕಾರ್ಯಕ್ರಮಗಳು ಜರಗಿದವು. ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ. ಕುಂದರ್ ಧಾರ್ಮಿಕ ವಿಧಿ ವಿಧಾನಗಳಲ್ಲಿ ಪ್ರಮುಖರಾಗಿ ಭಾಗವಹಿಸಿದರು. ದೇಗುಲದ ಟ್ರಸ್ಟಿಗಳಾದ ಸುಭಾಷ್ ಶೆಟ್ಟಿ, ಗಣೇಶ್ ನೆಲ್ಲಿಬೆಟ್ಟು, ರತನ್ ಐತಾಳ್, ಸುಬ್ರಾಯ ಜೋಗಿ, ಸುಧಾ ಎ. ಪೂಜಾರಿ, ಜ್ಯೋತಿ ಡಿ. ಕಾಂಚನ್, ಶಿವ ಪೂಜಾರಿ, ಚಂದ್ರಶೇಖರ ಆಚಾರ್, ದೇಗಯಲದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಇದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇತ್ತೀಚೆಗೆ ಬಳ್ಳಾರಿಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳು ಹಾಗೂ ಇದರಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಅವಲೋಕನ ನಡೆಸಿ ವರದಿ ನೀಡಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ನೇಮಕವಾದ ಕಾಂಗ್ರೆಸ್ ನಿಯೋಗ ಶನಿವಾರ ಕೆಪಿಸಿಸಿ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ಭೇಟಿ ಮಾಡಿ ವರದಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ನಿಯೋಗದ ಸದಸ್ಯರುಗಳಾದ ರಾಜ್ಯ ಗ್ಯಾರಂಟಿ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವರಾದ ಹೆಚ್. ಎಂ.ರೇವಣ್ಣ, ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ, ಸಂಸದ ಕುಮಾರ್ ನಾಯಕ್, ಚಳ್ಳಿಕೆರೆ ಶಾಸಕ ಟಿ. ರಘುಮೂರ್ತಿ, ವಿಧಾನ ಪರಿಷತ್ ಸದಸ್ಯರುಗಳಾದ ಜಕ್ಕಪ್ಪ ಅವರು ಹಾಗೂ ಬಸವನಗೌಡ ಬಾದರ್ಲಿ ಇದ್ದರು. ಕೆಪಿಸಿಸಿ ಅಧ್ಯಕ್ಷರ ಸೂಚನೆಯಂತೆ ಜ.3 ರಂದು ಬಳ್ಳಾರಿಗೆ ತೆರಳಿದ್ದ ನಿಯೋಗದ ಸದಸ್ಯರು, ಪರಿಸ್ಥಿತಿ ಅವಲೋಕನ ನಡೆಸಿ, ಪಕ್ಷದ ಮುಖಂಡರು, ಕಾರ್ಯಕರ್ತರು, ಅಧಿಕಾರಿಗಳು, ಇಲಾಖಾ ಮುಖ್ಯಸ್ಥರು ಹಾಗೂ ಇತರ ಮೂಲಗಳಿಂದ ಮಾಹಿತಿ ಸಂಗ್ರಹಿಸಿ, ವಿಸ್ತ್ರತವಾದ ವರದಿ ನೀಡಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಕನ್ನಡ ಶಾಲೆ ಉಳಿಸಿ ಬೆಳಸುವಲ್ಲಿ ನಾವೆಲ್ಲ ಶ್ರಮಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಕರ ಹಾಗೂ ಪೋಷಕರ ಸಹಕಾರದಿಂದ ಈ ಶಾಲೆ  ಕನ್ನಡ ಶಾಲೆಯಾಗಿ , ಸುಮಾರು 160ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿರುವುದು ತುಂಬಾ ಶ್ಲಾಘನೀಯ ಕಾರ್ಯ ಎಂದು ಸಾಮಾಜಿಕ ಚಿಂತಕ ಗೆಳೆಯರ ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ ಹೇಳಿದರು. ಅವರು ಇಲ್ಲಿನ ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆ ಇದರ ಮಕ್ಕಳ ಹಬ್ಬ ಚಿತ್ತಾರ 2026 ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಸರಕಾರಿ ಶಾಲೆಗಳ ಉಳಿವಿಗೆ ಸರಕಾರ ಹೊಸ ಯೋಜನೆಗಳನ್ನು ರೂಪಿಸಬೇಕು ಎಂದರು. ಧ್ವಜಾರೋಹಣವನ್ನು ಸಾಲಿಗ್ರಾಮ ಪಟ್ಟಣಪಂಚಾಯತ್ ಮುಖ್ಯಾಧಿಕಾರಿ ಅಜೇಯ್ ಭಂಡಾರ್ಕರ್ ನಿರ್ವಹಿಸಿದರು. ಶಾಲಾ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜಯಶಾಲಿಗಳಾದ ವಿದ್ಯಾರ್ಥಿಗಳಿಗೆ ಬ್ರಹ್ಮಾವರ ಕ್ಷೇತ್ರ ದೈಹಿಕ ಶಿಕ್ಷಣಪರಿವೀಕ್ಷಣಾಧಿಕಾರಿ  ನಿತ್ಯಾನಂದ ಶೆಟ್ಟಿ ನೆರವೆರಿಸಿದರು. ಮುಖ್ಯ ಅಭ್ಯಾಗತರಾಗಿ ಪಟ್ಟಣಪಂಚಾಯತ್ ಹಿರಿಯ ಲೆಕ್ಕಾಧಿಕಾರಿ ಚಂದ್ರಶೇಖರ ಸೋಮಯಾಜಿ, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕೆ. ವಿಶ್ವೇಶ್ವರ ಹೊಳ್ಳ, ಸಂಚಾಲಕ ಎನ್.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಭಂಡಾರ್‌ಕಾರ್ಸ್‌ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರೊಫೆಸರ್ ಕಟೀಲು ಮನೋಹರ ಪೈ (81) ಶುಕ್ರವಾರದಂದು ನಿಧನರಾದರು. ಸಸ್ಯಶಾಸ್ತ್ರದಲ್ಲಿ ಅಪಾರ ಪಾಂಡಿತ್ಯವುಳ್ಳ ಅವರು ಉತ್ತಮ ಕ್ರೀಡಾಪಟುವಾಗಿ, ಕನ್ನಡ, ಇಂಗ್ಲೀಷ್ ಸಾಹಿತ್ಯ ಅಧ್ಯಯನದ ಮೂಲಕ ಕಾಲೇಜಿನ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶಕರಾಗಿದ್ದರು. ಪರಿಸರ ರಕ್ಷಣೆ ಬಗ್ಗೆ ಬಹಳ ಕಾಳಜಿವುಳ್ಳವರಾಗಿ ಸಮಾನ ಮನಸ್ಕರೊಂದಿಗೆ ಅಭಿಯಾನ ನಡೆಸಿದವರು. ರೋಟರಿ ಕುಂದಾಪುರ ದಕ್ಷಿಣದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದವರು. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆಗೈದ ಕುಂದಾಪುರದ ಪ್ರಸಿದ್ಧ ಕಟೀಲು ಮನೆತನದ ಸದಸ್ಯರಾಗಿದ್ದ ಅವರು ಸ್ನೇಹಪರ ನಡವಳಿಕೆಯಿಂದ ಸಮಾಜದಲ್ಲಿ ಜನಪ್ರಿಯರಾಗಿದ್ದರು. ಅವರು ಪತ್ನಿ ಹಾಗೂ ಓರ್ವ ಪುತ್ರರನ್ನು ಅಗಲಿದ್ದಾರೆ. ಹಲವು ಗಣ್ಯರು ಇವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಹಳಿ ಬದಿ ನಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ಕೇರಳದಿಂದ ಗೋವಾ ಕಡೆಗೆ ಹೋಗುವ ದುರಂತ್ ಎಕ್ಸ್ ಪ್ರೆಸ್ ರೈಲು ಆಕಸ್ಮಿಕವಾಗಿ ಡಿಕ್ಕಿಯಾಗಿ ಸಾವನಪ್ಪಿದ ಘಟನೆ ತಾಲೂಕಿನ ಹಟ್ಟಿಯಂಗಡಿ ಗ್ರಾಮದ ಸಬ್ಲಾಡಿಯ ಸ್ಟೀಲ್‌ ಬ್ರಿಡ್ಜ್‌ ಸಮೀಪ ಗುರುವಾರದಂದು ಬೆಳಿಗ್ಗೆ ನಡೆದಿದೆ. ಮೃತಪಟ್ಟವರು ಹಟ್ಟಿಯಂಗಡಿ ಗ್ರಾಮದ ನಿವಾಸಿ ಜನಾರ್ದನ (39) ಎಂದು ಗುರುತಿಸಲಾಗಿದೆ. ಜನಾರ್ದನ ಅವರು ಬೆಂಗಳೂರಿನಲ್ಲಿ ಕಂಪೆನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, 10 ದಿನಗಳ ಹಿಂದೆ ಊರಿಗೆ ಬಂದಿದ್ದರು. ಅವರ ದೊಡ್ಡಮ್ಮನ ಪುತ್ರ ಗಣೇಶ ಅವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಕಲಿಕೆಯಲ್ಲಿ ಹಿಂದುಳಿದ ಮಕ್ಕಳಲ್ಲಿ ಧೈರ್ಯ ತುಂಬಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಪ್ರಯತ್ನ ಶಿಕ್ಷಕರಿಂದ ಆಗಬೇಕಿದೆ. ಎಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಹೆಚ್ಚಿಸಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು. ಪರೀಕ್ಷೆಯಲ್ಲಿ ಬರಬಹುದಾದ ಪ್ರಶ್ನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಫಲಿತಾಂಶ ವೃದ್ಧಿಗೆ ಪೂರಕವಾಗುವ ಕ್ರಮಗಳನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಶಿಕ್ಷಕರಿಗೆ ಕಾರ್ಯಾಗಾರ ಏರ್ಪಡಿಸಿ ಅವರಿಗೆ ಮಾಹಿತಿ ನೀಡಲಾಗುತ್ತಿದ್ದು, ಈ ಕಾರ್ಯಾಗಾರದ ಪ್ರಯೋಜನ ವಿದ್ಯಾರ್ಥಿಗಳಿಗೆ ದೊರೆಯುವಂತಾಗಬೇಕು ಎಂದು ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಎಸ್. ಶೆಟ್ಟಿ ಹೇಳಿದರು. ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ ವಲಯ ಮತ್ತು ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಗಂಗೊಳ್ಳಿ ಇವರ ಸಹಯೋಗದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಪ್ರೌಢಶಾಲಾ ವಿಷಯ ಶಿಕ್ಷಕರ ಕಾರ್ಯಾಗಾರವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಎಸ್.ವಿ. ವಿದ್ಯಾ ಸಂಸ್ಥೆಗಳ ಸಂಚಾಲ ಎನ್. ಸದಾಶಿವ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್.ವಿ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇಂಡಿಕಾ ಕಲಾಬಳಗ ಗ್ರಾಮೀಣ ಕರಾವಳಿ ಭಾಗದ ಸಂತೋಷದ ಸಂಭ್ರಮವನ್ನು ನಿರಂತರಗೊಳಿಸಲಿ ಎಂದು ಕೋಟದ ಧರ್ಮರತ್ನಾಕರ ಆನಂದ್ ಸಿ. ಕುಂದರ್ ಹೇಳಿದರು. ಕೋಟದ ಅಮೃತೇಶ್ವರೀ ದೇಗುಲದಲ್ಲಿ ಇಂಡಿಕಾ ಕಲಾ ಬಳಗ ಮಣೂರು ಪಡುಕರೆ ಇದರ ಇಂಡಿಕಾ ಸಂಭ್ರಮ 2026 ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು. ಸದಾ ಸಾಮಾಜಿಕ ಸಾಂಸ್ಕೃತಿಕ ಚಿಂತಕ ಸಂತೋಷ್ ಕುಮಾರ್ ಹುಟ್ಟುಹಾಕಿ ಎಲ್ಲರನ್ನು ಅಗಲಿದ್ದಾರೆ. ಅವರ ಹೆಸರನ್ನು ಈ ಬಳಗದ ನಿರಂತರ ಸಾಮಾಜಿಕ ಕಾರ್ಯದ ಮೂಲಕ ಜೀವಂತವಾಗಿಸೋಣ ಎಂದು ಶುಭಹಾರೈಸಿದರು. ಕೋಟ ಅಮೃತೇಶ್ವರೀ ದೇಗುಲದ ಟ್ರಸ್ಟಿಗಳಾದ ಸುಭಾಷ್ ಶೆಟ್ಟಿ, ಶಿವ ಪೂಜಾರಿ ಮಣೂರು, ಕೋಟ ಪಂಚಾಯತ್ ಸದಸ್ಯ ಭುಜಂಗ ಗುರಿಕಾರ, ಸಾಮಾಜಿಕ ಚಿಂತಕ ಸೋಮಶೇಖರ್ ಕದ್ರಿಕಟ್ಟು, ಇಂಡಿಕಾ ಕಲಾ ಬಳಗದ ಅಧ್ಯಕ್ಷ ಜಯರಾಮ ಶೆಟ್ಟಿ, ಮಾಜಿ ಅಧ್ಯಕ್ಷ ಸಂತೋಷ್ ತಿಂಗಳಾಯ, ಪಂಚವರ್ಣ ಯುವಕಮಂಡಲದ ಅಧ್ಯಕ್ಷ ಕೆ. ಮನೋಹರ್ ಪೂಜಾರಿ, ಬಳಗದ ಪ್ರಮುಖರಾದ ನಾಗರಾಜ್ ಪಡುಕರೆ, ನಾಗೇಶ್ ಪಡುಕರೆ, ಪ್ರಶಾಂತ್ ಪಡುಕರೆ ಉಪಸ್ಥಿತರಿದ್ದರು. ಬಳಗದ ಪ್ರಮುಖರಾದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ತೋಟಗಾರಿಕಾ ಇಲಾಖೆ ವತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ಜನವರಿ 25ರಿಂದ 27 ರವರೆಗೆ ರೈತ ಸೇವಾ ಕೇಂದ್ರ ಶಿವಳ್ಳಿ ತೋಟಗಾರಿಕಾ ಕ್ಷೇತ್ರ, ದೊಡ್ಡಣ್ಣ ಗುಡ್ಡೆಯಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಸದರಿ ಫಲಪುಷ್ಪ ಪ್ರದರ್ಶನದಲ್ಲಿ ತೋಟಗಾರಿಕೆ ಚಟುವಟಿಕೆ ಹೊಂದಿರುವವರಿಗೆ ಹಾಗೂ ಸಾವಯವ ಉತ್ಪನ್ನಗಳ ಮಳಿಗೆದಾರರಿಗೆ ಆದ್ಯತೆ ನೀಡಲಾಗುತ್ತಿದ್ದು, ವಿವಿಧ ನರ್ಸರಿದಾರರು, ಬೀಜ ಮಾರಾಟಗಾರರು, ವಿವಿಧ ಗೊಬ್ಬರಗಳ ಮಾರಾಟಗಾರರು, ತೋಟಗಾರಿಕೆಗೆ ಸಂಬಂಧಪಟ್ಟ ಉದ್ದಿಮೆದಾರರು, ಯಂತ್ರೋಪಕರಣಗಳ ಮಾರಾಟಗಾರರು, ಬ್ಯಾಂಕ್ ಹಾಗೂ ಆಹಾರ ಮಳಿಗೆದಾರರಿಗೆ 100 ಚದರ ಅಡಿ ಗಾತ್ರದ ಮಳಿಗೆಗೆ 3500 ರೂ.ದರ ನಿಗದಿ ಪಡಿಸಲಾಗಿದೆ. ಮಳಿಗೆ ತೆರೆಯಲು ಬಯಸುವ ಆಸಕ್ತರು ಮಳಿಗೆಗಳ ಮೊತ್ತವನ್ನು ಆನ್ ಲೈನ್ ಕ್ಯೂ.ಆರ್ ಕೋಡ್ ಮೂಲಕವೇ ರೈತ ಸೇವಾ ಕೇಂದ್ರದ ಖಾತೆಗೆ ಜನವರಿ 20 ರ ಒಳಗಾಗಿ ಪಾವತಿಸಬಹುದಾಗಿದೆ. ಹೆಸರು ನೋಂದಾಯಿಸಲು ಇಚ್ಛಿಸುವವರು ಸಹಾಯಕ ತೋಟಗಾರಿಕಾ ನಿರ್ದೇಶಕರ ದೂರವಾಣಿ ಸಂಖ್ಯೆ 9741255168 ಅನ್ನು ಸಂಪರ್ಕಿಸುವಂತೆ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಯುವ ನಾಯಕತ್ವ ಅಭಿವೃದ್ಧಿ, ಸಮುದಾಯ ಸೇವೆ ಸಾಮಾಜಿಕ ಬದಲಾವಣೆ ಮತ್ತು ಅಂತರಾಷ್ಟ್ರೀಯ ಯೋಜನೆಗಳ ಮೂಲಕ ವ್ಯಕ್ತಿತ್ವ ಅಭಿವೃದ್ಧಿ ಮೊದಲಾದ ಸಾಮಾಜಿಕ ಕಾರ್ಯಗಳ ಮೂಲಕ ಅಂತರಾಷ್ಟ್ರೀಯ ಮಟ್ಟದ ಸೇವಾ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಜೆ.ಸಿ.ಐ ಸಂಸ್ಥೆಯ ಶಂಕರನಾರಾಯಣ ಘಟಕ ಪ್ರವರ್ತಿತ, ನೂತನ ಘಟಕ  ಹಾಲಾಡಿ –  ವಾರಾಹಿ ಗುರುವಾರದಂದು ಹಾಲಾಡಿಯ ದುರ್ಗಾನುಗ್ರಹ ಸಭಾಂಗಣದಲ್ಲಿ ಶುಭಾರಂಭಗೊಂಡಿತು. ನಿವೃತ್ತ ಬ್ಯಾಂಕ್ ಉದ್ಯೋಗಿ ಬಿ. ಮಂಜುನಾಥ ಕಾಮತ್ ಹಾಲಾಡಿ ಅವರು ದೀಪ ಪ್ರಜ್ವಲಿಸುವ ಮೂಲಕ ಘಟಕವನ್ನು ಉದ್ಘಾಟಿಸಿ ಶುಭಕೋರಿದರು.. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಜೆಸಿಐ ವಲಯಾಧ್ಯಕ್ಷರಾದ ಜೆ.ಎಫ್.ಎಫ್  ಸಂತೋಷ ಶೆಟ್ಟಿ, ಪೂರ್ವ ವಲಯದ ಉಪಾಧ್ಯಕ್ಷರಾದ ಜೆ.ಎಫ್.ಎಂ ಪ್ರದೀಪ ಶೆಟ್ಟಿ, ದುರ್ಗಾನುಗ್ರಹ ಸಭಾಂಗಣದ ಮಾಲಕರಾದ ನಾಗರಾಜ ಅಡಿಗ, ಶಂಕರನಾರಾಯಣ ಜೆ.ಸಿ.ಐ ಘಟಕದ ಅಧ್ಯಕ್ಷರಾದ ಜೇಸಿ ಪ್ರವೀಣ ಬಾಳೆಕೊಡ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಾಲಾಡಿ –  ವಾರಾಹಿ ಜೆಸಿಐ ಘಟಕದ ನೂತನ ಅಧ್ಯಕ್ಷರಾಗಿ ಪ್ರದೀಪ ಹಾಲಾಡಿ, ಕಾರ್ಯದರ್ಶಿಯಾಗಿ ಅಶೋಕ ಆಚಾರ್ಯ, ಖಜಾಂಚಿಯಾಗಿ ಮಹೇಶ ಕುದ್ರುಬೆಟ್ಟು, ಮಹಿಳಾ ಘಟಕದ ಅಧ್ಯಕ್ಷೆಯಾಗಿ ಅವಶ್ಯ ಶೆಟ್ಟಿ, ಜೂನಿಯರ್ ಜೆಸಿಐ ಅಧ್ಯಕ್ಷರಾಗಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಉಡುಪಿ ನಗರಸಭೆಯ 2025-26ನೇ ಸಾಲಿನ ಎಸ್.ಎಫ್.ಸಿ ಮುಕ್ತ ನಿಧಿಯ ಶೇ.7.25ರ ಇತರೆ ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮದಡಿ ಸಣ್ಣ ಉದ್ದಿಮೆಗೆ ಸಹಾಯಧನ ನೀಡಲು ಆಸಕ್ತ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ನಿಗದಿತ ಅರ್ಜಿಯೊಂದಿಗೆ ಪೂರಕ ದಾಖಲಾತಿಗಳನ್ನು ಜನವರಿ 16ರ ಒಳಗಾಗಿ ನಗರಸಭೆ ಕಚೇರಿಗೆ ಸಲ್ಲಿಸುವಂತೆ ಉಡುಪಿ ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.

Read More