ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹೆಮ್ಮಾಡಿ ಪಂಚಗಂಗಾ ರೈತರ ಸೇವಾ ಸಹಕಾರಿ ಬ್ಯಾಂಕ್ ಮಾಜಿ ಅಧ್ಯಕ್ಷ ನೂಜಾಡಿ ದಿ. ಅಶೋಕ್ ಕುಮಾರ್ ಶೆಟ್ಟಿ ಸ್ಮರಣಾರ್ಥ ನೂಜಾಡಿಯಲ್ಲಿ ನಿರ್ಮಿಸಿದ ಬಸ್ ನಿಲ್ದಾಣ ಬೈಂದೂರು ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ ಉದ್ಘಾಟಿಸಿದರು. ದಿ. ಅಶೋಕ್ ಕುಮಾರ್ ಶೆಟ್ಟಿ ಪತ್ನಿ, ಪುತ್ರ ಮತ್ತು ನೂಜಾಡಿ ಭವಾನಿ ಸೂರಪ್ಪ ಶೆಟ್ಟಿ ಕುಟುಂಬದವರು ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ವಿನ್ಯಾಸದ ಬಸ್ ನಿಲ್ದಾಣ ನಿರ್ಮಿಸಿದ್ದರು. ಈ ಸಂದರ್ಭ ಹಕ್ಲಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚೇತನ್ ಮೊಗವೀರ, ಮಾಜಿ ಅಧ್ಯಕ್ಷ ಸುಭಾಸ್ ಶೆಟ್ಟಿ ಹೊಳ್ಮಗೆ, ಸದಸ್ಯ ಪ್ರವೀಣ್ ಶೆಟ್ಟಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ವಂಡಬಳ್ಳಿ ಜಯರಾಮ ಶೆಟ್ಟಿ, ಡಾ. ಚಂದ್ರಶೇಖರ ಶೆಟ್ಟಿ, ರೋಶನ್ ಶೆಟ್ಟಿ ನೂಜಾಡಿ, ವೇ.ಮೂ.ಕೃಷ್ಣ ಭಟ್ ನೂಜಾಡಿ, ಅಭಿಮನ್ಯು ಇದ್ದರು. ಹಕ್ಲಾಡಿ ಎಸ್ಸೆಸ್ ಕೊಳ್ಕೆಬೈಲು ಸೂರಪ್ಪ ಶೆಟ್ಟಿ ಪ್ರೌಢಶಾಲಾ ಶಿಕ್ಷಕ ಡಾ.ಕಿಶೋರ್ ಕುಮಾರ್ ಶೆಟ್ಟಿ ನಿರೂಪಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬ್ರಹ್ಮಾವರದ ಉಪ್ಪಿನಕೋಟೆ ಅಪಾರ್ಟ್ಮೆಂಟ್ವೊಂದರಲ್ಲಿ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸೋಮವಾರ ನಡೆದಿದೆ. ಗಂಗೊಳ್ಳಿ ಮೂಲದ ವಿಶಾಲ ಗಾಣಿಗ (35) ಕೊಲೆಯಾದ ಮಹಿಳೆ. ಕುತ್ತಿಗೆಗೆ ವಯರ್ ಬಿಗಿದು ಕೊಲೆ ಮಾಡಿರುವ ದುಷ್ಕರ್ಮಿಗಳು ಚಿನ್ನಾಭರಣ ದೋಚಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಪತಿಯೊಂದಿಗೆ ವಿದೇಶದಿಂದ ಆಗಮಿಸಿದ್ದ ಆಕೆ ಬ್ರಹ್ಮಾವರದ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದರು. ತನ್ನ ತಂದೆ ಹಾಗೂ ಮಗಳ ಜೊತೆಗೆ ಸೋಮವಾರ ಗಂಗೊಳ್ಳಿಯ ಮನೆಗೆ ಹೋಗುವವರಿದ್ದರು. ದಾರಿಮಧ್ಯೆ, ಬ್ಯಾಂಕಿನ ಕೆಲಸ ಇರುವ ಕಾರಣ ಅದನ್ನು ಮುಗಿಸಿ ಗಂಗೊಳ್ಳಿ ಮನೆಗೆ ಬರುವುದಾಗಿ ಹೇಳಿ ಮರಳಿ ಬ್ರಹ್ಮಾವರಕ್ಕೆ ತೆರಳಿದ್ದರು. ಆದರೆ, ಸಂಜೆಯಾದರೂ ಮನೆಗೆ ಬಾರದ ಕಾರಣ ಮಗಳನ್ನು ಹುಡುಕಿ ಬ್ರಹ್ಮಾವರಕ್ಕೆ ತಂದೆ ಬಂದಿದ್ದು, ಆ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ. ಮಧ್ಯಾಹ್ನ ಬ್ಯಾಂಕ್ ಕೆಲಸ ಮುಗಿಸಿ ಹಿಂದಿರುಗುವ ವೇಳೆ ಕೊಲೆಯಾಗಿರಬಹುದೆಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಎಸ್.ಪಿ. ವಿಷ್ಣುವರ್ಧನ್, ಎ.ಎಸ್.ಪಿ. ಕುಮಾರಚಂದ್ರ ಸಹಿತ ಪೊಲೀಸ್ ಅಧಿಕಾರಿಗಳು ತೆರಳಿ, ತನಿಖೆ ನಡೆಸುತ್ತಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕೋರೊನಾ ನಡುವೆಯೇ ಇದೀಗ ಝೀಕಾ ವೈರಸ್ ತಲ್ಲಣ ಸೃಷ್ಟಿಸುತ್ತಿದೆ. ಈಗಾಗಲೇ ಕೇರಳದಲ್ಲಿ ಝೀಕಾ ವೈರಸ್ ಖಚಿತ ಪ್ರಕರಣಗಳು ವರದಿಯಾಗಿದ್ದು, ಈ ಹಿನ್ನಲೆಯಲ್ಲಿ ಗಡಿ ಜಿಲ್ಲೆಯಾದ ಉಡುಪಿ ಜಿಲ್ಲೆಯಲ್ಲೂ ಕೂಡ ಕಟ್ಟೆಚ್ಚರ ವಹಿಸುವಂತೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಸಾರ್ವಜನಿಕರು ಯಾವುದೇ ಜ್ವರವಿರಲಿ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳುವುದರೊಂದಿಗೆ, ಝೀಕಾ ವೈರಸ್ ಹರಡುವ ವಿಧಾನ, ರೋಗಲಕ್ಷಣಗಳ ಬಗ್ಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದ್ದು ಹಾಗೂ ಇದನ್ನು ತಡೆಯುವ ನಿಟ್ಟನಲ್ಲಿ ಈ ಕೆಳಗಿನ ಎಲ್ಲಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ತಿಳಿಸಿದ್ದಾರೆ. ಹರಡುವ ವಿಧಾನ: • ಡೆಂಗ್ಯೂ/ಚಿಕುನ್ಗುನ್ಯಾ,ವೆಸ್ಟ ನೈಲ್ ಹಾಗೂ ಹಳದಿ ಜ್ವರವನ್ನು ಹರಡುವಂತಹ ಸೊಳ್ಳೆಗಳಾದ ಈಡೀಸ್ ಜಾತಿಯ ಹೆಣ್ಣು ಸೊಳ್ಳೆಗಳು ಕಚ್ಚುವುದರಿಂದ ಝೀಕಾ ವೈರಸ್ ಖಾಯಿಲೆಯು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. • ಝೀಕಾ ವೈರಸ್ ಕೇವಲ ಸೊಳ್ಳೆಗಳ ಕಡಿತದಿಂದ ಹರಡುವುದಲ್ಲದೇ ರಕ್ತದ ವರ್ಗಾವಣೆ, ಅಸುರಕ್ಷಿತ ಲೈಂಗಿಕತೆ ಮುಂತಾದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶಿವಮೊಗ್ಗ ಲೋಕಸಭಾ ಸದಸ್ಯರಾದ ಬಿ.ವೈ ರಾಘವೇಂದ್ರ ಹಾಗೂ ಬೈಂದೂರು ಶಾಸಕರ ಸಹಭಾಗಿತ್ವದಲ್ಲಿ ಸೇವಾ ಭಾರತಿ ಕರ್ನಾಟಕ, ಪ್ರೇರಣಾ ಟ್ರಸ್ಟ್ ಶಿವಮೊಗ್ಗ, ಪಿಇಎಸ್ ಶಿವಮೊಗ್ಗ ಹಾಗೂ ಆರೋಗ್ಯ ಇಲಾಖೆ ಉಡುಪಿ ಇವರ ಆಶ್ರಯದಲ್ಲಿ ಎಂಡೋಸಲ್ಪಾನ್ ಸಂತ್ರಸ್ತ ಕುಟುಂಬದವರಿಗೆ ಉಚಿತ ಕೋವಿಡ್ ಲಸಿಕೆ ನೀಡುವ ಅಭಿಯಾನಕ್ಕೆ ಶಿರೂರಿನಲ್ಲಿ ಬೈಂದೂರು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಚಾಲನೆ ನೀಡಿದರು. ಚಾಲನೆ ನೀಡಿ ಮಾತನಾಡಿದ ಅವರು, ಕೊರೋನಾ ಮಹಾಮಾರಿ ಹಿಮ್ಮೆಟ್ಟಿಸಲು ವಾಕ್ಸಿನ್ ಅಗತ್ಯವಾಗಿ ಪಡೆಯಬೇಕಿದೆ. ದೇಶಾದ್ಯಂತ ವಾಕ್ಸಿನ್ ನೀಡುವ ಕಾರ್ಯ ನಡೆಯುತ್ತಿದೆ. ವಾಕ್ಸಿನ್ ಪಡೆದವರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ಉದಾಹರಣೆಗಳು ಕಡಿಮೆ. ಮೂರನೇ ಅಲೆಯೂ ಕೂಡ ಬರಬಹುದೆಂದು ತಜ್ಞರ ಅಭಿಪ್ರಾಯವಿದೆ. ಈ ನಿಟ್ಟಿನಲ್ಲಿ ಎಂಡೋಸಲ್ಫಾನ್ ಪೀಡಿತರು ಹಾಗೂ ಅವರ ಆರೈಕೆದಾರರಿಗೆ ವಾಕ್ಸಿನ್ ನೀಡುವ ಸಲುವಾಗಿ ಲೋಕಸಭಾ ಸದಸ್ಯರ ಮುತುವರ್ಜಿಯಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಗೇರು ಪ್ಲಾಂಟೇಶನ್ ಇದ್ದು ಹೆಲಿಕಾಪ್ಟರ್ ಮೂಲಕ ಎಂಡೋಸಲ್ಪಾನ್ ಸಿಂಪಡಿಸಿದ್ದರಿಂದ ಈ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬಿಜೆಪಿಯ ಸಕ್ರಿಯ ಕಾರ್ಯಕರ್ತ, ಹಲವು ಕುಟುಂಬಗಳ ಆಶಾಕಿರಣ ಅಶೋಕ ಕುಮಾರ್ ಶೆಟ್ಟಿ ಅವರು ಅಧಿಕಾರದ ಸ್ಥಾನದ ಆಸೆಗಾಗಿ ಪಕ್ಷವನ್ನು ಆಶ್ರಯಿಸಿದವರಲ್ಲ. ಸೇವೆಗಾಗಿ ಪಕ್ಷದಲ್ಲಿ ತೊಡಗಿಸಿಕೊಂಡಿದ್ದರು. ಆರೆಸ್ಸೆಸ್ ಹಿನ್ನಲೆಯಿಂದ ಬಂದಿದ್ದ ಇವರು ಪಕ್ಷ ಸಂಘಟನೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಪಕ್ಷದ ಹಿತದ ಜೊತೆಗೆ ಊರಿನ ಅಭಿವೃದ್ಧಿಯ ಕಾಳಜಿಯೇ ಇವರಿಗೆ ಪ್ರಧಾನವಾಗಿತ್ತು. ಆಕಸ್ಮಿಕವಾಗಿ ಮರಣ ಹೊಂದಿದ ಆರೆಸ್ಸೆಸ್ನ ಸಕ್ರಿಯ ಕಾರ್ಯಕರ್ತ ರಾಜೇಶ್ ಉಪ್ಪಿನಕುದ್ರು ಸಂಘದ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಸಂಘದ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಅಶೋಕ ಕುಮಾರ್ ಶೆಟ್ಟಿ ಮತ್ತು ರಾಜೇಶ ಉಪ್ಪಿನಕುದ್ರು ಅವರ ಅಕಾಲಿಕವಾಗಿ ನಿಧನ ಪಕ್ಷಕ್ಕೆ ತುಂಬಲಾರದ ನಷ್ಟ ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಹೇಳಿದರು. ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲದ ವತಿಯಿಂದ ನಾವುಂದ ಮಾಲಸಾ ಮಾಂಗಲ್ಯ ಆರ್ಕೇಡ್ನಲ್ಲಿ ಭಾನುವಾರ ಜರಗಿದ ಅಶೋಕ ಕುಮಾರ್ ಶೆಟ್ಟಿ ಮತ್ತು ರಾಜೇಶ ಉಪ್ಪಿನಕುದ್ರು ಇವರ ಶ್ರದ್ಧಾಂಜಲಿ ಸಭೆಯಲ್ಲಿ ಪುಷ್ಟನಮನ ಸಲ್ಲಿಸಿ ಅವರು ಮಾತನಾಡಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪಂಚಭಾಷಾ ಲೇಖಕಿ ಪಾರ್ವತಿ ಜಿ ಐತಾಳ್ ವಿಶೇಷವಾಗಿ ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿರುವ ಸೇವೆ ಅನುಪಮವಾದದ್ದು. ಅವರ ಸಾಧನೆ ಸದಾ ಕಾಲ ಪ್ರೇರಣೆ ನೀಡುವಂತದ್ದು. ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಮತ್ತಷ್ಟು ಎತ್ತರದ ಮನ್ನಣೆ ಸಿಗಲೇ ಬೇಕಿದೆ ಎಂದು ಖ್ಯಾತ ಕಲಾವಿದೆ ಸಾಹಿತಿ ಪೂರ್ಣಿಮಾ ಸುರೇಶ್ ಹೇಳಿದರು. ಅವರು ಕುಂದಾಪುರದ ಜನಪ್ರತಿನಿಧಿ ಪ್ರಕಾಶನ ಹೊರತಂದಿರುವ ನರೇಂದ್ರ ಎಸ್ ಗಂಗೊಳ್ಳಿ ಸಂಪಾದಕತ್ವದ ಡಾ. ಪಾರ್ವತಿ ಜಿ ಐತಾಳ್ ಅವರ ಸಮಗ್ರ ಕೃತಿಗಳ ಪರಿಚಯವುಳ್ಳ ‘ಸುರಗಂಗೆ’ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಅನುವಾದ ಕ್ಷೇತ್ರದಲ್ಲೂ ಕೂಡ ತಮ್ಮ ಸ್ವಂತಿಕೆಯಿಂದ ಕೃತಿಗಳಿಗೆ ಜೀವ ತುಂಬುವ ಪಾರ್ವತಿ ಐತಾಳ್ ಸಾಹಿತ್ಯ ತಪಸ್ವಿನಿ. ಹೊಸ ಚಿಗುರುಗಳನ್ನು ಬೆಳೆಸುವಲ್ಲಿ ಅವರ ಕಾರ್ಯವೈಖರಿ ಅಭಿನಂದನೀಯ ಎಂದು ಅವರು ಹೇಳಿದರು. ಆರ್ ಎನ್ ಶೆಟ್ಟಿ ಪದವಿಪೂರ್ವ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕಿ ಮತ್ತು ಲೇಖಕಿ ಸುಮತಿ ಶೆಣೈ ಶುಭಾಶಂಸನೆಗೈಯುತ್ತ ಮಾತನಾಡಿ ಇಂಥ ಪುಸ್ತಕಗಳು ಉದಯೋನ್ಮುಖ ಬರಹಗಾರರಿಗೆ ಬಹುದೊಡ್ಡ ಪ್ರೇರಣೆಯನ್ನು ನೀಡುವಂತಹವು. ಇದು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಯುವತಿಯೊರ್ವಳಿಗೆ ಸಹಾಯ ಮಾಡುವುದಾಗಿ ನಂಬಿಸಿ, ಪತ್ರಿಕೆ ಹಾಗೂ ಪೊಲೀಸರ ಹೆಸರು ಬಳಿಸಿಕೊಂಡು ಹಣ ಪಡೆದು ವಂಚಿಸಿರುವ ಶೇಖರ ಬಳೆಗಾರ ಎಂಬುವವನ ವಿರುದ್ಧ ಬಗ್ಗೆ ಯುವತಿಯೊಬ್ಬಳು ಶಂಕರನಾರಾಯಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ದೂರಿನ ಅನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ಆಗಿದ್ದೇನು? ನೆಂಚಾರು ಎಂಬಲ್ಲಿಯ ಯುವತಿ ಹಾಗೂ ಹಾಲಾಡಿಯ ಯುವಕನೋರ್ವ ಪರಸ್ಪರ ಪ್ರೀತಿಸುತ್ತಿದ್ದು ಬಳಿಕ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾದ ಕಾರಣ ಯುವತಿ ಶಂಕರನಾರಾಯಣ ಠಾಣೆಯಲ್ಲಿ ಪಂಚಾಯತಿ ನಡೆದು ಇಬ್ಬರೂ ಪ್ರತ್ಯೇಕವಾಗಿದ್ದರು ಎನ್ನಲಾಗಿದೆ. ಕುಂದಾಪುರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಶುಶ್ರೂಷಕಿಯಾಗಿದ್ದ ಯುವತಿಗೆ ಕಟ್ ಬೆಲ್ತೂರು ನಿವಾಸಿ ಶೇಖರ್ ಬಳೆಗಾರ್ ಆಸ್ಪತ್ರೆಗೆ ಬಂದಿದ್ದ ಈ ಸಂದರ್ಭ ಪರಿಚಯವಾಗಿದ್ದು, ತನ್ನ ಸಮಸ್ಯೆಯನ್ನು ಶೇಖರ್ ಬಳೆಗಾರನ ಬಳಿ ಹೇಳಿಕೊಂಡಿದ್ದಾಳೆ. ಇದನ್ನೇ ಅಸ್ತ್ರವಾಗಿಸಿಕೊಂಡ ಆತ ತನಗೆ ಅಧಿಕಾರಿಗಳು ಹಾಗೂ ಪತ್ರಿಕೆಯವರ ಸಂಪರ್ಕ ಇದೆ ಎಂದು ನಂಬಿಸಿ, ಅವರಿಗೆ ಹಣ ಕೊಡಬೇಕಾಗುತ್ತದೆ ಎಂದು ಹೇಳಿದ್ದು, ಮೂರು ಬಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಹಕಾರಿ ಸಂಸ್ಥೆಗಳ ಮೂಲಕ ಗ್ರಾಮೀಣ ಭಾಗದಲ್ಲಿ ಆರ್ಥಿಕ ಸಬಲೀಕರಣ ಸಾಧ್ಯವಾಗಿದ್ದು, ಜನರ ಆರ್ಥಿಕ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆತಿದೆ ಎಂದು ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು. ಅವರು ಸೋಮವಾರ ಇಲ್ಲಿನ ರಥಬೀದಿಯ ಶಾಂತಿ ಕಾಂಪ್ಲೆಕ್ಸ್ನಲ್ಲಿ ನೂತನವಾಗಿ ಆರಂಭಗೊಂಡ ಬೈಂದೂರು ಅರ್ಬನ್ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉದ್ಘಾಟಿಸಿ ಶುಭಹಾರೈಸಿದರು. ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಕಛೇರಿ ಉದ್ಘಾಟಿಸಿದರು. ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ. ಪ್ರಕಾಶ್ಚಂದ್ರ ಶೆಟ್ಟಿ ಲಾಕರ್ ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಠೇವಣಿ ಪತ್ರ ಬಿಡುಗಡೆಗೊಳಿಸಿದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಂಕರ ಪೂಜಾರಿ ಪಾಸ್ಪುಸ್ತಕ ಬಿಡುಗಡೆಗೊಳಿಸಿದರು. ರಿಯಾಜ್ ಅಹಮ್ಮದ್ ಶೇರು ಪತ್ರ ಬಿಡುಗಡೆಗೊಳಿಸಿದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಗೌರಿ ದೇವಾಡಿಗ ಕಂಪ್ಯೂಟರ್ ಕೌಂಟರ್ ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ. ಬಾಬು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಅಗಾಧ ಪ್ರತಿಭೆ ಇದ್ದು, ಸರಿಯಾದ ಮಾರ್ಗದಲ್ಲಿ ವಿನಿಯೋಗಿಸಿದರೆ ಉತ್ತಮ ಸಾಧನೆ ಮಾಡಬಹುದಾಗಿದೆ. ಪ್ರತಿಭೆ ಇದ್ದವರಿಗೆ ಒಂದಿಲ್ಲೊಂದು ರೂಪದಲ್ಲಿ ಸಹಕಾರ, ಮಾರ್ಗದರ್ಶನ ದೊರೆಯುತ್ತದೆ ಎಂದು ಉಡುಪಿ ಜಿಲ್ಲಾ ಶ್ರೀಮದ್ಭಗವದ್ದೀತಾ ಜಯಂತಿ ಆಚರಣಾ ಸಮಿತಿ ಪ್ರಧಾನ ಸಂಚಾಲಕ ಬಿ. ರಾಮಕೃಷ್ಣ ಶೇರುಗಾರ್ ಹೇಳಿದರು. ಎಳಜಿತ ಶ್ರೀ ರಾಮಕೃಷ್ಣ ಕುಟೀರದಲ್ಲಿ ಭಾನುವಾರ ವಿದ್ಯಾನಿಧಿ ವಿತರಣಾ ಕಾರ್ಯಕ್ರಮದಲ್ಲಿ ವಿವಿಧ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿ ವಿದ್ಯಾವಂತರಾದಾಗಲೇ ಜಗತ್ತಿನೆದುರು ತಲೆಯೆತ್ತೆ ನಡೆಯಲು ಸಾಧ್ಯ. ಕೆಲವು ವರ್ಷಗಳ ಹಿಂದೆ ಶಿಕ್ಷಣ ಪಡೆಯಲು ಹಿಂದೇಟು ಹಾಕುತ್ತಿದ್ದ ಗ್ರಾಮದಲ್ಲಿ ಶ್ರೀ ರಾಮಕೃಷ್ಣ ಕುಟೀರದ ಮೂಲಕ ಹಲವಾರು ವಿದ್ಯಾರ್ಥಿಗಳು ಇಂದು ಉನ್ನತ ವ್ಯಾಸಂಗವನ್ನೂ ಪೂರೈಸಿರುವುದು ಗಮನಾರ್ಹ ಸಾಧನೆ. ಸ್ವಾಮಿ ಸತ್ಯಸ್ವರೂಪಾನಂದರ ಇಚ್ಛಾಶಕ್ತಿಯಿಂದ ಇದು ಸಾಧ್ಯವಾಗಿದೆ. ವಿದ್ಯಾರ್ಥಿ ವೇತನ ಪಡೆದು ಉತ್ತಮ ಶಿಕ್ಷಣ ಉದ್ಯೋಗ ಪಡೆದುಕೊಳ್ಳುವುದರ ಜತೆಗೆ ಇತರರಿಗೂ ಸಹಕಾರ ಮಾಡುವ ಗುಣ ಬೆಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವತಿಯಿಂದ ‘ಆನಿಮೇಷನ್ ವೃತ್ತಿ ಅವಕಾಶಗಳು ಹಾಗೂ ನಿರೀಕ್ಷೆಗಳು’ ಕುರಿತು ವೆಬಿನಾರ್ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಕಾಲೇಜಿನ ಹಳೆಯ ವಿದ್ಯಾರ್ಥಿನಿ ಪ್ರಸ್ತುತ ಟೆಕ್ನಿಕಲರ್ ಪ್ರೈವೇಟ್ ಲಿಮಿಟೆಡ್ನಲ್ಲಿ ಪ್ರೊಡಕ್ಷನ್ ಕೊಆರ್ಡಿನೇಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ನಮ್ರತಾ ಡಿ.ಪಿ. ಭಾಗವಹಿಸಿದ್ದರು. ಆನಿಮೇಷನ್ ಮತ್ತು ವಿಎಫ್ಎಕ್ಸ್ ಕ್ಷೇತ್ರದ ಬಹುಮುಖಿ ಆಯಾಮಗಳ ಬಗ್ಗೆ ತಿಳಿಸಿದ ಅವರು, ‘ಆನಿಮೇಷನ್ ಕ್ಷೇತ್ರವು ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಲಿತವಾದಂತಹ ಕ್ಷೇತ್ರ. ಇದಕ್ಕಿರುವ ವಿಶಾಲ ವ್ಯಾಪ್ತಿ, ಪ್ರಾಯೋಗಿಕ ಅಳವಡಿಕೆ ಹಾಗೂ ಸೃಜನಾತ್ಮಕ ಗುಣಗಳಿಂದಾಗಿ ಸಿನಿಮಾ, ಜಾಹೀರಾತು, ಡಾಕ್ಯುಮೆಂಟರಿಯಂತಹ ವೈವಿಧ್ಯಮಯ ಕ್ಷೇತ್ರಗಳಲ್ಲಿ ಇಂದು ಆನಿಮೇಶನ್ ಬಳಕೆಯಾಗುತ್ತಿದೆ. ಗ್ರಾಫಿಕ್ಸ್ ಹಾಗೂ ವಿಷುವಲ್ ಇಫೆಕ್ಟ್ಸ್ ಬಳಕೆಯಿಂದಾಗಿ ಈ ಕ್ಷೇತ್ರಕ್ಕೆ ಹೆಚ್ಚಿನ ಬೇಡಿಕೆಯಿದೆ’ ಎಂದರು. ಕ್ರಿಯೇಟಿವ್ ಆಲೋಚನೆಗಳಿರುವ ವಿದ್ಯಾರ್ಥಿಗಳು ಆನಿಮೇಷನ್ ಕೋರ್ಸ್ಗಳನ್ನು ಆಯ್ದುಕೊಂಡು, ಹಾಲಿವುಡ್ ಸೇರಿದಂತೆ ಇತರ ಸಿನಿಮಾ ಮತ್ತು ಪ್ರೊಡಕ್ಷನ್ ವಿಭಾಗಗಳಲ್ಲಿ ಉದ್ಯೋಗ ಪಡೆಯಬಹುದು. ಗ್ರಾಫಿಕ್ಸ್ ಹಾಗೂ ವಿಷುವಲ್ ಇಫೆಕ್ಟ್ಸ್ ಕೌಶಲ್ಯ ತಿಳಿದಿರುವ ಅಭ್ಯರ್ಥಿಗಳಿಗೆ…
