ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಅಕ್ಟೋಬರ್ 13 ಹಾಗೂ 14 ರಂದು ನಡೆಯಲಿರುವ ಡಿಪ್ಲೋಮಾ ಮತ್ತು ಪಿ. ಜಿ. ಸಿ. ಇ. ಟಿ ಪರೀಕ್ಷೆಯಲ್ಲಿ ಕೋವಿಡ್ ಸೋಂಕು ತಡೆಗೆ ಸರ್ಕಾರ ಹೊರಡಿಸಿರುವ ಎಲ್ಲಾ ಅಗತ್ಯ ಮುಂಜಾಗೃತ ಕ್ರಮಗಳನ್ನು ಪರೀಕ್ಷಾ ಕೇಂದ್ರದಲ್ಲಿ ಕೈಗೊಳ್ಳಬೇಕು ಎಂದು ಅಪರಜಿಲ್ಲಾಧಿಕಾರಿ ಸದಾಶಿವ ಪ್ರಭು ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡಿಪ್ಲೋಮಾ ಮತ್ತು ಪಿ. ಜಿ. ಸಿ.ಇ. ಟಿ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋವಿಡ್ ಸೋಂಕು ಹೆಚ್ಚು ಹರಡುತ್ತಿರುವ ಈ ಸಮಯದಲ್ಲಿ ನಡೆಯುತ್ತಿರುವ ಡಿಪ್ಲೋಮಾ ಮತ್ತು ಪಿಜಿಸಿಇಟಿ ಪರೀಕ್ಷೆಯಲ್ಲಿ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿರುವ ಮಾರ್ಗ ಸೂಚಿಗಳನ್ನು ತಪ್ಪದೇ ಪಾಲಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಈಗಾಗಲೇ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲಾಗಿರುವ ಅನುಭವವಿದ್ದು ಅದೇ ರೀತಿಯಲ್ಲಿ ಪರೀಕ್ಷೆಯನ್ನು ನಡೆಸಬೇಕು. ಪರೀಕ್ಷಾ ಕೇಂದ್ರದ ಹೊರ ಭಾಗದಲ್ಲಿ ಹಾಗೂ ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಶಿಕ್ಷಕರು ಎಚ್ಚರ ವಹಿಸಬೇಕೆಂದು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ. ಪಿ. ಎಸ್ ಹರ್ಷ ಉಡುಪಿಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಕರ ಕಚೇರಿಗೆ ಭೇಟಿ ನೀಡಿ, ಕಡತಗಳ ಪರಿಶೀಲನೆ ನಡೆಸಿದರು. ವಾರ್ತಾ ಇಲಾಖೆಯು ಹಿಂದೆ ಸರ್ಕಾರದ ಕಾರ್ಯಕ್ರಮಗಳು ಮತ್ತು ಯೋಜನೆಗಳ ಬಗ್ಗೆ ಪ್ರಚಾರ ಪಡಿಸುತ್ತಿದ್ದು, ಆದರೆ ಪ್ರಸ್ತುತ ದಿನಗಳಲ್ಲಿ ಸರ್ಕಾರ ಮತ್ತು ಸಾರ್ವಜನಿಕರ ಕೊಂಡಿಯಾಗಿಯೂ ಕಾರ್ಯ ನಿರ್ವಹಿಸಬೇಕಾಗಿದ್ದು, ಅತ್ಯಂತ ಜವಾಬ್ದಾರಿಯುತವಾಗಿ ಇತರೆ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ, ಕಚೇರಿ ಸಮಯದ ಹೊರತಾಗಿಯೂ ಕಾರ್ಯ ನಿರ್ವಹಿಸಬೇಕೆಂದು, ಕಚೇರಿಯ ಎಲ್ಲಾ ಸಿಬ್ಬಂದಿಗಳು ತಮ್ಮ ದೈನಂದಿನ ಕರ್ತವ್ಯದ ಜೊತೆಗೆ ಕಚೇರಿಯ ಇನ್ನಿತರ ಕಾರ್ಯಗಳನ್ನೂ ಸಹ ತಮ್ಮ ಕರ್ತವ್ಯ ಎಂದು ಭಾವಿಸಿ ತಪ್ಪದೇ ಮಾಡಬೇಕು. ಪ್ರಸ್ತುತ ದಿನಗಳಲ್ಲಿ ಜನಸಾಮಾನ್ಯರು ಆಧುನಿಕ ಡಿಜಿಟಲ್ ಮಾಧ್ಯಮಗಳಿಗೆ ಮಾರು ಹೋಗುತ್ತಿರುವ ಹಿನ್ನಲೆಯಲ್ಲಿ , ನಮ್ಮ ಇಲಾಖೆಯ ಸಾಂಪ್ರದಾಯಿಕ ಸುದ್ದಿ ಹಾಗೂ ಸರ್ಕಾರದ ಕಾರ್ಯಕ್ರಮಗಳ ಪ್ರಚಾರದ ಜೊತೆಗೆ ಸಾಮಾಜಿಕ ಮಾಧ್ಯಮಗಳ ಮೂಲಕವೂ ಪ್ರಚಾರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ಪದವಿ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆಯ ಕೋಶ ಡಿಪಾರ್ಟ್ಮೆಂಟಲ್ ಫೆಲಿಸಿಟೇಶನ್ 2019 – 20’ ಕಾರ್ಯಕ್ರಮವನ್ನು ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾಗಿತು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಕುರಿಯನ್ ’ಮಾನ್ಯತೆ ನಂತರದ ಹಂತದಲ್ಲಿ ಕಾಲೇಜಿನ ಐಕ್ಯೂಎಸಿ ತಂಡ ಗುಣಮಟ್ಟದ ವರ್ಧನೆಗೆ ಉತ್ತಮ ಉಪಕ್ರಮವನ್ನು ತೆಗೆದುಕೊಂಡಿದ್ದನ್ನು ಶ್ಲಾಘಿಸಿದರು. ಪ್ರತಿ ವಿಭಾಗಗಳಿಂದ ಮುಂಬರುವ ದಿನಗಳಲ್ಲಿ ಸಮರ್ಪಿತ ಕಾರ್ಯದ ಮೂಲಕ ನ್ಯಾಕ್ನ ಮುಂದಿನ ಚಕ್ರದಲ್ಲಿ ಇನ್ನೂ ಹೆಚ್ಚಿನ ಪ್ರಗತಿಯನ್ನು ಸಾಧಿಸುವಂತಾಗಬೇಕು ಎಂದರು. ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿದರು ಶೈಕ್ಷಣಿಕ, ಶೈಕ್ಷಣಿಕೇತರ ಹಾಗೂ ಸಂಶೋಧನಾ ಚಟುವಟಿಕೆಗಳಲ್ಲಿನ ಶ್ರೇಷ್ಠತೆಗಾಗಿ ಅತ್ಯುತ್ತಮ ವಿಭಾಗವನ್ನ ಗುರುತಿಸಿ ಕಾಲೇಜಿನ 34 ಪದವಿ ಹಾಗೂ 17 ಸ್ನಾತಕೋತ್ತರ ಪದವಿಗಳಲ್ಲಿ 8 ಅತ್ಯುತ್ತಮ ವಿಭಾಗಗಳನ್ನು2019 – 20ರ ಶೈಕ್ಷಣಿಕ ವರ್ಷದ ಅತ್ಯುತ್ತಮ ವಿಭಾಗಗಳಾಗಿ ಸನ್ಮಾನಿಸಲಾಯಿತು. ಪದವಿ ವಿಭಾಗದಲ್ಲಿ ಬ್ಯಾಚುಲರ್ ಆಫ್ ಕಂಪ್ಯೂಟರ್ ಆಪ್ಲೀಕೇಶನ್ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡರೆ, ಸ್ನಾತಕೋತ್ತರ ವಿಭಾಗದಲ್ಲಿ ಡಿಪಾರ್ಟ್ಮೆಂಟ್ ಆಫ್ ಬಯೋಟೆಕ್ನಾಲಜಿ, ಪದವಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯದಾದ್ಯಂತ ವಿಧ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣ ವಿರೋಧಿಸಿ ಕ. ವಿ. ಪ್ರ. ನಿ. ನೌಕರರ ಸಂಘ ಮತ್ತು ಸಂಘ ಸಂಸ್ಥೆಗಳ ಓಕ್ಕೂಟ ಬೆಂಗಳೂರು ಇದರ ಕರೆಯ ಮೇರೆಗೆ ಕುಂದಾಪುರ ಸ್ಥಳೀಯ ಸಮಿತಿ ಹಾಗೂ ಇತರ ಒಕ್ಕೂಟಗಳ ನೇತೃತ್ವದಲ್ಲಿ ಸಾಂಕೇತಿಕವಾಗಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನೆಡೆಸಿದರು. ಉಡುಪಿ ವೃತ್ತದ ನೌಕರ ಸಂಘದ ಸಂಘಟನಾ ಕಾರ್ಯದರ್ಶಿ ಬಾಬಣ್ಣ ಪೂಜಾರಿಯವರು ಮಾತನಾಡಿ, ಕಂಪನಿಗಳ ಖಾಸಗೀಕರಣದಿಂದ ನೌಕರರಿಗೆ ನೌಕರರಿಗೆ ಹಾಗೂ ಜನಸಾಮಾನ್ಯರಿಗೆ ಮುಖ್ಯವಾಗಿ ಕೃಷಿಕರಿಗೆ ಯಾವುದೇ ಲಾಭವಿಲ್ಲ ಬದಲಾಗಿ ಹೆಚ್ಚಿನ ಹೊರೆ ಅನುಭವಿಸಬೇಕಾಗುತ್ತದೆ ಎಂದರು. ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಕೇಶ್ ಅವರು ಮಾತನಾಡಿ ಕಂಪನಿಯನ್ನು ಉಳಿಸಿಕೊಳ್ಳಬೇಕಾದರೆ ನೌಕರರ ಶ್ರಮ ಹಾಗೂ ಒಗ್ಗಟ್ಟು ಅತ್ಯಗತ್ಯ ಎಂದು ನುಡಿದರು . ಸ್ಥಳೀಯ ಸಮಿತಿಯ ಅಧ್ಯಕ್ಷರಾದ ರಾಘವೇಂದ್ರ ಎಂ. ರವರು ಮಾತನಾಡಿ ಖಾಸಗೀಕರಣದಿಂದ ಈವರೆಗೂ ಗ್ರಾಹಕರಿಗೆ ದೊರೆಯುತ್ತಿದ್ದ ಸಬ್ಸಿಡಿಗಳು ದೊರೆಯುವುದಿಲ್ಲ ಹಾಗೂ ಒನ್ ನೇಷನ್ ಒನ್ ಟ್ಯಾರಿಫ್ ನಡಿಯಲ್ಲಿ ಎಲ್ಲ ಗ್ರಾಹಕರಿಗೂ ವಿದ್ಯುತ್…
ಕುಂದಾಪುರ: ಸುಮಾರು 33 ವರ್ಷಗಳ ತನ್ನ ಇತಿಹಾಸದಲ್ಲಿ ಪ್ರತೀ ವರ್ಷವು ನೂತನ ಯೋಜನೆಗಳ ಮೂಲಕ ಶೈಕ್ಷಣಿಕ ಪ್ರಗತಿಯನ್ನು ಸಾಧಿಸುತ್ತಾ, ಮೈಲುಗಲ್ಲುಗಳನ್ನು ದಾಟುತ್ತಾ ಬರುತ್ತಿರುವ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು, ಕಳೆದ ಶೈಕ್ಷಣಿಕ ವರ್ಷದಲ್ಲಿ” ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ” ನಡೆಸಿದ ದ್ವಿತೀಯ ಪಿ ಯು ಪರೀಕ್ಷೆಯಲ್ಲಿ ದಾಖಲೆಯ 4 ರ್ಯಾಂಕ್ ಗಳನ್ನು ತನ್ನ ಬತ್ತಳಿಕೆಗೆ ಹಾಕಿಕೊಳ್ಳುವ ಮುಖೇನ, ಉಡುಪಿ ಜಿಲ್ಲೆಯಲ್ಲಿಯೇ ದಾಖಲೆಯ ಫಲಿತಾಂಶವನ್ನು ದಾಖಲಿಸಿದ ಕುಂದಾಪುರ ತಾಲೂಕಿನ ಪ್ರಪ್ರಥಮ ವಿದ್ಯಾಸಂಸ್ಥೆ ಎಂಬ ಖ್ಯಾತಿಗೆ ಭಾಜನವಾಗಿದೆ. ವೃತ್ತಿಪರ ಕೋರ್ಸ್ ಗಳಿಗೆ ನಡೆಸುವ CET, NEET, JEE ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿ ಉತ್ತಮವಾದ ಫಲಿತಾಂಶವನ್ನು ಪಡೆದುಕೊಂಡಿರುತ್ತದೆ. ಈಗಾಗಲೇ ಸಂಸ್ಥೆಯಲ್ಲಿ ವೈದ್ಯಕೀಯ ಕ್ಷೇತ್ರದ ಆಕಾಂಕ್ಷಿಗಳಿಗೆ ” NEET “, ಇಂಜಿನಿಯರಿಂಗ್ ಕ್ಷೇತ್ರದ ಆಕಾಂಕ್ಷಿಗಳಿಗೆ ” JEE, CET” ಹಾಗೆಯೇ ವಾಣಿಜ್ಯ ವಿಭಾಗವನ್ನು ಆರಿಸಿಕೊಂಡಿರುವ ” CA, CS ಮತ್ತು ಬ್ಯಾಂಕಿಂಗ್ ಕ್ಷೇತ್ರದಆಕಾಂಕ್ಷಿಗಳಿಗೆ, ವಿಷಯ ತಜ್ಞರುಗಳಿಂದ ಗುಣಮಟ್ಟದ ತರಬೇತಿಗಳನ್ನು ನೀಡಲಾಗುತ್ತಿದ್ದು,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ,ಅ.09: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಜುಗಾರಿಯಲ್ಲಿ ತೊಡಗಿಕೊಂಡಿದ್ದ 7 ಮಂದಿಯನ್ನು ತಾಲೂಕಿನ ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ. ಸಿದ್ಧಾಪುರ ಸಮೀಪದ ಸುಬ್ರಹ್ಮಣ್ಯ ಕೊಠಾರಿ (36), ಸಂತೋಷ ಶೆಟ್ಟಿ (26), ಕಿರಣ್ ಪೂಜಾರಿ( 19), ವಿವೇಕ ಶೆಟ್ಟಿ (29), ಅಕ್ಷಯ ಪೂಜಾರಿ (23), ಜಯ ಶೆಟ್ಟಿ (36), ಅಪ್ಸರ್ (27) ಬಂಧಿತ ಆರೋಪಿಗಳು. ಸಿದ್ದಾಪುರ ಮಾಕೇಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಈ ಬೆಟ್ಟಿಂಗ್ ನಡೆಸಲಾಗುತ್ತಿತ್ತು. ಅಕ್ರಮವಾಗಿ ಗುಂಪುಗೂಡಿಕೊಂಡು ನಿನ್ನೆ ನಡೆಯುತ್ತಿದ್ದ ಐಪಿಎಲ್ ಮ್ಯಾಚ್ ಟೀಮ್ಗಳಾದ ಹೈದ್ರಾಬಾದ್ ಸನ್ ರೈಸರ್ ಹಾಗೂ ಕಿಂಗ್ಸ್ ಇಲೇವನ್ ಪಂಜಾಬ್ ಕ್ರಿಕೆಟ್ ಸ್ಕೋರ್ನ ಮೇಲೆ 0 ಯಿಂದ 9 ಸಂಖ್ಯೆ ಒಳಗೆ ಯಾವುದಾದರು ಸಂಖ್ಯೆಗೆ 200 ರೂ ಕಟ್ಟಿದರೆ, ಅದರ ವಿನ್ನಿಂಗ್ ನಂಬ್ರಕ್ಕೆ 1500 ರೂ ಕೊಡುವುದಾಗಿ ಹೇಳುತ್ತಾ ಹಣವನ್ನು ಪಣವಾಗಿರಿಸಿ ಕ್ರಿಕೆಟ್ ಬೆಟ್ಟಿಂಗ್ ಜುಗಾರಿ ಆಟ ಆಡುತ್ತಿದ್ದ ವೇಳೆ ಈ ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು ಕ್ರಿಕೆಟ್ ಬೆಟ್ಟಿಂಗ್’ಗೆ ಬಳಸಿದ ಮೊಬೈಲ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಉಡುಪಿ ಯುವ ಘಟಕದ ಜಿಲ್ಲಾಧ್ಯಕ್ಷರಾಗಿ ಕೋಟ ರಾಮಕೃಷ್ಣ ಆಚಾರ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಮಹಾಸಭಾದ ಕರಾವಳಿ ಜಿಲ್ಲೆಗಳ ಉಸ್ತುವಾರಿಯಾಗಿರುವ ಮಾಧ್ಯಮ ವಕ್ತಾರ ಮಾರುತಿ ಬಡಿಗೇರ್ ರಾಯಚೂರು ಮತ್ತು ರಾಜ್ಯ ಯುವ ಘಟಕದ ಅಧ್ಯಕ್ಷರಾದ ಮಳವಳ್ಳಿ ಶ್ರೀನಿವಾಸ್ಅವರ ಶಿಫಾರಸ್ಸಿನಂತೆ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಧ್ಯಕ್ಷರಾದ ವಿಧಾನ ಪರಿಷತ್ಸದಸ್ಯ ಕೆ. ಪಿ. ನಂಜುಂಡಿ ವಿಶ್ವಕರ್ಮ ಅವರು ನೇಮಕ ಮಾಡಿದ್ದಾರೆ. ಸ್ಪೋಟ್ಸ್ಕನ್ನಡ ವೈಬ್ಸೈಟ್ ಸಂಸ್ಥಾಪಕರಾಗಿರುವ ಕ್ರೀಡಾಪಟು ರಾಮಕೃಷ್ಣ ಆಚಾರ್ಯ ಸಮಾಜಸೇವಕರಾಗಿ ಸಕ್ರೀಯರಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಸಂವಿಪ್ರ ಸಂಭ್ರಮ 2020ರ ಸಲುವಾಗಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ. ಕಥೆ ಕೇಳಿ, ಅನಿಸಿಕೆ ಹೇಳಿ ಬಹುಮಾನ ಗೆಲ್ಲಿ ಸ್ಪರ್ಧೆಯಲ್ಲಿ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಕಾವ್ಯಾ ಹಂದೆ ಪ್ರಥಮ, ಇದೇ ಕಾಲೇಜಿನ ಕೀರ್ತಿ ಎಸ್. ದ್ವಿತೀಯ ಸ್ಥಾನಿಯಾಗಿದ್ದಾರೆ. ಕುಮಟಾ ಕಮಲಾ ಬಾಳಿಗಾ ಕಾಲೇಜಿನ ಸಂಗೀತಾ ಎನ್. ಶೆಟ್ಟಿ ಹಾಗೂ ಮಂಡ್ಯ ಕೆಎಂಪಿಇಎಸ್ ಪದವಿ ಕಾಲೇಜಿನ ದೀಕ್ಷಿತ್ ಕುಮಾರ್ ತೃತೀಯ ಸ್ಥಾನದ ವಿಜೇತರಾಗಿದ್ದಾರೆ. ಇವರೊಂದಿಗೆ ಚಿನ್ಮಯಿ ಅಡಿಗ ಉಡುಪಿ, ಗಾನವಿ ಜಿ. ಉಡುಪಿ, ನಿಶ್ಚಿತ ಪೂಜಾರಿ ಶಿರ್ವ, ಕವಿತಾ ಎಂ. ಅಂಗಡಿ ಹಾವೇರಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಕಥಾ ವಾಚನ ಸಪ್ತಾಹದಲ್ಲಿ ಕನ್ನಡದ ಪ್ರಸಿದ್ಧ ಕಥೆಗಾರರ ಕಥೆಗಳನ್ನು ರಂಗಭೂಮಿ ಕಲಾವಿದರು ವಾಚಿಸಿರುತ್ತಾರೆ. ಡಾ. ರಶ್ಮಿ ಕುಂದಾಪುರ, ಡಾ. ಪ್ರಜ್ಞಾ ಮಾರ್ಪಳ್ಳಿ ಕಥೆ ಕೇಳಿ, ಅನಿಸಿಕೆ ಹೇಳಿ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ವರದಿ: ವಿಧಾತ್ರಿ ಭಟ್ ಉಪ್ಪುಂದ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಉಡುಪಿ ಜಿಲ್ಲಾಧ್ಯಕ್ಷರಾಗಿ ಕುಂದಾಪುರದ ನೇರಂಬಳ್ಳಿ ರಮೇಶ್ ಆಚಾರ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಮಹಾಸಭಾದ ಕರಾವಳಿ ಜಿಲ್ಲೆಗಳ ಉಸ್ತುವಾರಿಯಾಗಿರುವ ಮಾಧ್ಯಮ ವಕ್ತಾರ ಮಾರುತಿ ಬಡಿಗೇರ್ರಾಯಚೂರು ಅವರ ಶಿಫಾರಸ್ಸಿನಂತೆ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಧ್ಯಕ್ಷರಾದ ವಿಧಾನ ಪರಿಷತ್ಸದಸ್ಯ ಕೆ. ಪಿ. ನಂಜುಂಡಿ ವಿಶ್ವಕರ್ಮ ಅವರು ನೇಮಕ ಮಾಡಿದ್ದಾರೆ. ಉದ್ಯಮಿಯಾಗಿರುವ ರಮೇಶ ಆಚಾರ್ಯ ಸಮಾಜಸೇವಕರಾಗಿ ಸಕ್ರೀಯರಾಗಿ ಬೀಜಾಡಿ ಗೋಪಾಡಿ ಮಿತ್ರ ಸಂಘಮದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ಬೈಂದೂರು ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಜಿಲ್ಲಾ ಜನಜಾಗೃತಿ ವೇದಿಕೆ ಉಡುಪಿ ಜಿಲ್ಲೆ, ಜನಜಾಗೃತಿ ವೇದಿಕೆ ಬೈಂದೂರು ತಾಲೂಕು, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಸಹಯೋಗದೊಂದಿಗೆ 151ನೇ ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ’ಜನಜಾಗೃತಿ ಸಮಾವೇಶ ಹಾಗೂ ಗಾಂಧಿ ಸ್ಮೃತಿ ಕಾರ್ಯಕ್ರಮ’ ನಾಗೂರು ಒಡೆಯರ ಮಠ ಶ್ರೀ ಗೋಪಾಲಕೃಷ್ಣ ಕಲಾ ಮಂದಿರದಲ್ಲಿ ಬೈಂದೂರು ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಬೈಂದೂರು ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ರಾಜು ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜನಜಾಗೃತಿ ವೇದಿಕೆ ಕುಂದಾಪುರ ತಾಲ್ಲೂಕು ಮಾಜಿ ಅಧ್ಯಕ್ಷರು ಬಿ. ಅಪ್ಪಣ್ಣ ಹೆಗ್ಡೆ. ಉಡುಪಿ ಕರಾವಳಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ನಾಗೇಶ್ ಎನ್. ಪಿ. ದಿಕ್ಸೂಚಿ ಭಾಷಣ ಮಾಡಿದರು. ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ನವೀನ್ ಅಮೀನ್…
