ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಆ.05ರ ಬುಧವಾರ 173 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 57, ಉಡುಪಿ ತಾಲೂಕಿನ 76 ಹಾಗೂ ಕಾರ್ಕಳ ತಾಲೂಕಿನ 39 ಮಂದಿಗೆ ಪಾಸಿಟಿವ್ ಬಂದಿದೆ. ಓರ್ವ ಬೇರೆ ಜಿಲ್ಲೆಯವರಾಗಿದ್ದಾರೆ. ಒಟ್ಟು ಪ್ರಕರಣಗಳಲ್ಲಿ 99 ಪುರುಷರು, 74 ಮಹಿಳೆಯರು ಸೇರಿದ್ದಾರೆ. ಇಂದು 124 ಮಂದಿ ಬಿಡುಗಡೆಗೊಂಡಿದ್ದಾರೆ. ಉಡುಪಿ ತಾಲೂಕಿನ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ. 1244 ನೆಗೆಟಿವ್: ಈ ತನಕ ಒಟ್ಟು 38053 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 31770 ನೆಗೆಟಿವ್, 5143 ಪಾಸಿಟಿವ್ ಬಂದಿದ್ದು, 1140 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 1244 ನೆಗೆಟಿವ್, 173 ಪಾಸಿಟಿವ್ ಬಂದಿದೆ. ಒಟ್ಟು 1071 ಮಂದಿ ಹೋಮ್ ಕ್ವಾರಂಟೈನ್ ಹಾಗೂ 1140 ಮಂದಿ ಆಸ್ಪತ್ರೆ ಐಸೋಲೇಶನಿನಲ್ಲಿದ್ದಾರೆ. 2,027 ಸಕ್ರಿಯ ಪ್ರಕರಣ: ಜಿಲ್ಲೆಯಲ್ಲಿ ಒಟ್ಟು 5143 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 3072 ಮಂದಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ಕತ್ತಲೆಕೋಣೆ ಕನ್ನಡ ಸಿನಿಮಾದ ಮೇಲೆ ಭೋಜಪುರಿ ನಿರ್ಮಾಪಕರು ಆಸಕ್ತಿ ತೋರಿಸಿ, ಭೋಜಪುರಿ ಭಾಷೆಯಲ್ಲಿ ಸಿನೆಮಾ ಬಿಡುಗಡೆಗೆ ಒಲವು ತೋರಿದ್ದಾರೆ. ಸಿನೆಮಾದಲ್ಲಿ ಪತ್ರಕರ್ತನೊರ್ವ ನೈಜ ಘಟನೆಯನ್ನು ಆಧರಿಸಿ ವರದಿಗೆ ತೆರಳುವ ಕಥೆ ಒಂದೆಡೆಯಾದರೆ, ಒರ್ವ ಬಾಲಕನ ಮುಗ್ದ ಮನಸ್ಸಿನ ಮೇಲೆ ಬೀಳುವ ಪರಿಣಾಮದಿಂದ ಆತ ಮಾನಸಿಕ ಖಿನ್ನತೆಗೆ ಒಳಗಾಗಿ ನರಳಾಡುವ ದೃಶ್ಯದ ನಿರೂಪಣೆ ಕಥೆಯ ಇನ್ನೊಂದು ಭಾಗ. ಇದೀಗ ಈ ಸಿನಿಮಾ ಮರಾಠಿಯಲ್ಲಿ ಮಾಡಲು ನಿರ್ಮಾಪಕರು ಸಿದ್ಧತೆ ನಡೆಸಿಕೊಂಡಿದ್ದು, ಭೋಜಪುರಿ ನಿರ್ಮಾಪಕರೊಬ್ಬರು ಸಿನಿಮಾವನ್ನ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದ್ದಾರೆ. ಸಿನಿಮಾ ನಿರ್ಮಾಪಕ ಪಿಆರ್ ಅಮೀನ್ ಹಾಗೂ ಭೋಜಪುರಿ ಭಾಷೆಯ ಸಿನೆಮಾ ನಿರ್ಮಾಪಕರ ನಡುವಿನ ಮಾತುಕತೆ ಇನ್ನಷ್ಟೇ ಬಾಕಿ ಇದೆ. ಅಂದುಕೊಂಡಂತೆ ನಡೆದರೆ ಕತ್ತಲೆ ಕೋಣೆ ಸಸ್ಪೆನ್ಸ್ ಥ್ರಿಲ್ಲರ್ ಹಾರರ್ ಸಿನಿಮಾ ಭೋಜಪುರಿ ಚಿತ್ರರಂಗದಲ್ಲಿ ಸದ್ದು ಮಾಡಲಿದೆ. ಕತ್ತಲೆಕೋಣೆ ಸಸ್ಪೆನ್ಸ್ ಥ್ರಿಲ್ಲರ್ ಹಾರರ್ ಸಿನಿಮಾವಾಗಿದ್ದು, 1998ರ ಸತ್ಯ ಘಟನೆಯನ್ನು ಒಳಗೊಂಡ ಉಡುಪಿ ಜಿಲ್ಲೆಯಲ್ಲಿ ನಡೆದ ಒಂದು ನೈಜ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಸರ್ಕಾರದ ಮಾರ್ಗಸೂಚಿಯಂತೆ, ಕೋವಿಡ್-19 ನಿಯಂತ್ರಣದ ಸುರಕ್ಷಾ ಕ್ರಮಗಳನ್ನು ಅನುಸರಿಸಿ, ಅಜ್ಜರಕಾಡು ಮಹಾತ್ಮಗಾಂಧೀ ಕ್ರೀಡಾಂಗಣದಲ್ಲಿ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ. ಅವರು ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಸ್ವಾತಂತ್ರ್ಯ ದಿನಾಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಆಗಮಿಸುವವರನ್ನು ಕ್ರೀಡಾಂಗಣದ ಪ್ರವೇಶದ್ವಾರದಲ್ಲಿ ಥರ್ಮಲ್ ಸ್ಕ್ಯಾನರ್ ಮೂಲಕ ಪರಿಶೀಲಿಸಲು ಹಾಗೂ ಸ್ಯಾನಿಟೈಸರ್ ವ್ಯವಸ್ಥೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರದಲ್ಲಿ ಆಸನ ವ್ಯವಸ್ಥೆ ಮತ್ತು ವೇದಿಕೆ ಮೇಲೆ ಸಹ ಸಾಮಾಜಿಕ ಅಂತರದಲ್ಲಿ ಗಣ್ಯರಿಗೆ ಆಸನ ವ್ಯವಸ್ಥೆ ಮಾಡುವಂತೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಡಿಸಿ ತಿಳಿಸಿದರು. ಕಾರ್ಯಕ್ರಮವನ್ನು ವೆಬ್ ಕಾಸ್ಟಿಂಗ್ ಮೂಲಕ ನೇರ ಪ್ರಸಾರ ಮಾಡುವುದು ಸೇರಿದಂತೆ ಫೇಸ್ ಬುಕ್ ಲೈವ್ ಹಾಗೂ ಆನ್ ಲೈನ್ ಮೂಲಕ ಸಾರ್ವಜನಿಕರಿಗೆ ನೇರವಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಆ.04ರ ಮಂಗಳವಾರ 170 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 55, ಉಡುಪಿ ತಾಲೂಕಿನ 74 ಹಾಗೂ ಕಾರ್ಕಳ ತಾಲೂಕಿನ 39 ಮಂದಿಗೆ ಪಾಸಿಟಿವ್ ಬಂದಿದೆ. 2 ಮಂದಿ ಬೇರೆ ಜಿಲ್ಲೆಯವರಾಗಿದ್ದಾರೆ. ಒಟ್ಟು ಪ್ರಕರಣಗಳಲ್ಲಿ 109 ಪುರುಷರು, 61 ಮಹಿಳೆಯರು ಸೇರಿದ್ದಾರೆ. ಇಂದು 136 ಮಂದಿ ಬಿಡುಗಡೆಗೊಂಡಿದ್ದಾರೆ. 1352 ನೆಗೆಟಿವ್: ಈ ತನಕ ಒಟ್ಟು 36,200 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 30,526 ನೆಗೆಟಿವ್, 4,970 ಪಾಸಿಟಿವ್ ಬಂದಿದ್ದು, 704 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 1352 ನೆಗೆಟಿವ್, 170 ಪಾಸಿಟಿವ್ ಬಂದಿದೆ. ಒಟ್ಟು 1,193 ಮಂದಿ ಹೋಮ್ ಕ್ವಾರಂಟೈನಿನಲ್ಲಿದ್ದಾರೆ. 1,980 ಸಕ್ರಿಯ ಪ್ರಕರಣ: ಜಿಲ್ಲೆಯಲ್ಲಿ ಒಟ್ಟು 4,970 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 2,948 ಮಂದಿ ಬಿಡುಗಡೆಯಾಗಿದ್ದು, 1,980 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದ ಗರ್ಭಗುಡಿಯೊಳಕ್ಕೆ ಕುಬ್ಜಾ ನದಿ ನೀರು ನುಗ್ಗಿದ್ದು, ವಾಡಿಕೆಯಂತೆ ದೇವಿಯ ಪಾದ ತೊಳೆದಿದೆ. ಈ ಸಂದರ್ಭ ಸುತ್ತಲೂ ಜಲಾವೃತವಾಗಿ ನೀರಿನ ಮಧ್ಯೆ ಕುಳಿತಿರುವ ದೇವಿಯನ್ನು ಕಂಡು ಭಕ್ತರು ಪುನೀತರಾದರು. ಕಳೆದೆರಡು ದಿನಗಳಿಂದ ತಾಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿರುವ ಪರಿಣಾಮ ಮಂಗಳವಾರ ಸಂಜೆಯ ವೇಳೆಗೆ ನದಿಯ ನೀರು ಉಕ್ಕಿ ಹರಿದಿದೆ. ದೇವಳದ ಗರ್ಭಗುಡಿ ಜಲಾವೃತ ಆಗುತ್ತಿದ್ದಂತೆ ದೇವಿಗೆ ಅರ್ಚಕರು ಆರತಿ ಬೆಳಗಿದರು. ವರ್ಷಕ್ಕೊಮ್ಮೆ ದೇವಿಗೆ ನೈಸರ್ಗಿಕ ಅಭಿಷೇಕವಾಗುತ್ತದೆ. ಕೊರೋನಾ ಕಾರಣದಿಂದ ಭಕ್ತರ ಸಂಖ್ಯೆ ವಿರಳವಾಗಿತ್ತು. ದೇವಳದ ಮೊಕ್ತೇಸರರು, ಅರ್ಚಕರು ಹಾಗೂ ಸಿಬ್ಬಂದಿಗಳು ಈ ಸಂದರ್ಭ ಉಪಸ್ಥಿತರಿದ್ದರು. ಕುಂದಾಪುರ ತಾಲೂಕಿನ ಕಮಲಶಿಲೆ ಹಚ್ಚಹಸಿರಿನ ಕಾಡಿನ ಮಧ್ಯಭಾಗದಲ್ಲಿ ಪವಿತ್ರವಾದ ಕುಬ್ಜೆ ಹರಿಯುತ್ತಿದ್ದು, ನದಿಯ ತಟದಲ್ಲಿ ಪ್ರಾಚೀನ ಬ್ರಾಹ್ಮಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಐಎಫ್‌ಎಸ್ ಬಿ. ಜಗನ್ನಾಥ ಶೆಟ್ಟಿ (96) ಅವರು ಶಿವಮೊಗ್ಗದ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದಿದ್ದ ಅವರು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿವೃತ್ತ ಐಎಫ್‌ಎಸ್ ಅಧಿಕಾರಿಯಾಗಿರುವ ಬಿ. ಜಗನ್ನಾಥ ಶೆಟ್ಟಿ ಅವರು ವೃತ್ತಿಯಲ್ಲಿದ್ದಾಗ ತಮ್ಮ ಸೇವಾ ಕೌಶಲ್ಯದಿಂದ ಉತ್ತಮ ಹೆಸರು ಗಳಿಸಿದ್ದಲ್ಲದೇ ಉನ್ನತ ಪದವಿಗೇರಿದ್ದರು. ಅವರು ಅರಣ್ಯ ಕಾನೂನಿನ ಬಗೆಗೆ ಬರೆದ ಪುಸ್ತಕವು ಕಾಲೇಜಿನ ಅರಣ್ಯಶಾಸ್ತ್ರ ವಿಭಾದಲ್ಲಿ ಪಠ್ಯವಾಗಿತ್ತಲ್ಲದೇ ಎಲ್ಲಾ ಅರಣ್ಯ ಇಲಾಖೆಗಳಲ್ಲಿ ಆಧಾರ ಗ್ರಂಥವಾಗಿ ಲಭ್ಯವಿದೆ. 1992ರ ಭಾರತೀಯ ಅರಣ್ಯ ಕಾನೂನು ತಿದ್ದುಪಡಿ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ಅವರು ಬೈಂದೂರಿನಲ್ಲಿ ನೆಲೆಸಿ ತಮ್ಮನ್ನು ಸಂಪೂರ್ಣ ಸಾಮಾಜಿಕವಾಗಿ ತೊಡಗಿಸಿಕೊಂಡರು. ೧೯೮೪ರಿಂದ ೧೯೮೭ರ ವರೆಗೆ ಬೈಂದೂರು ರೋಟರಿ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಮುಂದೆ ರೋಟರಿ ಜಿಲ್ಲಾ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು. 1992ರಲ್ಲಿ ಇವರ ಮುಂದಾಳತ್ವದಲ್ಲಿ ನಿರ್ಮಾಣಗೊಂಡ ರೋಟರಿ ಸಮುದಾಯ ಭವನ ಇಂದು ಹತ್ತಾರು ಕಾರ್ಯಕ್ರಮಗಳನ್ನು ಆಯೋಜಿಸುವುದಕ್ಕೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಖಾರ್ವಿಕೇರಿಯ ಶ್ರೀಮಹಾಕಾಳಿ ದೇವಸ್ಥಾನದ ವತಿಯಿಂದ ಮತ್ಸ್ಯ ಸಂಪತ್ತು ಹಾಗೂ ಪ್ರಾಕೃತಿಕ ವಿಕೋಪಗಳಿಂದ ಯಾವುದೇ ಅವಘಡಗಳು ಜರಗದಂತೆ ವರ್ಷಂಪ್ರತಿ ಜರಗುವ ಸಮುದ್ರ ಪೂಜೆಯು ಕೋಡಿಯ ಸಮುದ್ರಕಿನಾರೆಯಲ್ಲಿ ವಿದ್ಯುಕ್ತವಾಗಿ ನೆರವೇರಿತು . ದೇವಸ್ಥಾನದ ಅಧ್ಯಕ್ಷರಾದ ಪ್ರಕಾಶ್.ಆರ್.ಖಾರ್ವಿ ಉಪಾಧ್ಯಕ್ಷ ರಾದ ಪೀತಾಂಬರ ಗಣಪತಿ ಖಾರ್ವಿ , ಮೊಕ್ತೇಸರರಾದ ಆನಂದ ನಾಯ್ಕ್, ಸಮುದ್ರ ಪೂಜೆ ಯ ವಿಧಿವಿಧಾನಗಳನ್ನು ಸಾಂಗವಾಗಿ ನೆರವೇರಿಸಿದರು. ಕಾರ್ಯಕ್ರಮದ ಉಸ್ತುವಾರಿಯನ್ನು ದೇವಸ್ಥಾನದ ಸಮಿತಿಯ ಸದಸ್ಯ ಸುನೀಲ್ ಖಾರ್ವಿ ತಲ್ಲೂರು ವಹಿಸಿದ್ದರು. ಸಮಿತಿಯ ಸದಸ್ಯರು. ಮಹಾಕಾಳಿ ಮಹಿಳಾ ಮಂಡಳಿಯ ಅಧ್ಯಕ್ಷೆ ವಸಂತಿ ಸಾರಂಗ ಹಾಗೂ ಸಂಘದ ಸದಸ್ಯೆಯರ ಸಹಿತ ಹಲವಾರು ಸಮಾಜ ಭಾಂದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಆ.03ರ ಸೋಮವಾರ 126 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 34, ಉಡುಪಿ ತಾಲೂಕಿನ 58 ಹಾಗೂ ಕಾರ್ಕಳ ತಾಲೂಕಿನ 28 ಮಂದಿಗೆ ಪಾಸಿಟಿವ್ ಬಂದಿದೆ. 6 ಮಂದಿ ಬೇರೆ ಜಿಲ್ಲೆಯವರಾಗಿದ್ದಾರೆ. ಇಂದು 116 ಮಂದಿ ಬಿಡುಗಡೆಗೊಂಡಿದ್ದಾರೆ, 1086 ನೆಗೆಟಿವ್: ಈ ತನಕ ಒಟ್ಟು 34,500 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 29,174 ನೆಗೆಟಿವ್, 4,800 ಪಾಸಿಟಿವ್ ಬಂದಿದ್ದು, 526 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 1086 ನೆಗೆಟಿವ್, 126 ಪಾಸಿಟಿವ್ ಬಂದಿದೆ. ಒಟ್ಟು 1,301 ಮಂದಿ ಹೋಮ್ ಕ್ವಾರಂಟೈನಿನಲ್ಲಿದ್ದಾರೆ. 1,952 ಸಕ್ರಿಯ ಪ್ರಕರಣ: ಜಿಲ್ಲೆಯಲ್ಲಿ ಒಟ್ಟು 4,800 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 2,812 ಮಂದಿ ಬಿಡುಗಡೆಯಾಗಿದ್ದು, 1,952 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಕೊರೋನಾ ಪಾಸಿಟಿವ್ ಇದ್ದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ,ಆ.3: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಏರಿಕೆ ಯಾಗುತ್ತಿದ್ದು ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ಮಾಲ್‌ಗಳು, ಶಾಪಿಂಗ್ ಕಾಂಪ್ಲೆಕ್ಸ್‌ಗಳು, ಅಂಗಡಿ ಮುಂಗಟ್ಟುಗಳು, ಝೊಮ್ಯಾಟೋ, ಸ್ವಿಗ್ಗಿಯಂತಹ ಆಹಾರ ವಿತರಕ ಸಂಸ್ಥೆಗಳು, ಹೊಟೇಲ್ ಮತ್ತು ರೆಸ್ಟೋರೆಂಟ್‌ಗಳ ಮಾಲಕರು ಹಾಗೂ ಸಂಸ್ಥೆಯ ಸಿಬ್ಬಂದಿಗಳಿಗೆ ಕೊವಿಡ್ ತಪಾಸಣೆ ಮಾಡಿಸುವಂತೆ ಆದೇಶ ನೀಡಲಾಗಿತ್ತು. ಆದರೆ ಕೆಲವು ಸಂಸ್ಥೆಗಳನ್ನು ಹೊರತುಪಡಿಸಿ ಹೆಚ್ಚಿನ ಸಂಸ್ಥೆಯವರು ತಮ್ಮ ಸಿಬ್ಬಂದಿಯವರಿಗೆ ಕೋವಿಡ್ ಪರೀಕ್ಷೆ ಮಾಡಿಸದೇ ಇರುವುದು ಕಂಡುಬಂದಿರುತ್ತದೆ. ಆದ್ದರಿಂದ ಜಿಲ್ಲೆಯಲ್ಲಿರುವ ಎಲ್ಲಾ ಮಾಲ್‌ಗಳು, ಶಾಪಿಂಗ್ ಕಾಂಪ್ಲೆಕ್ಸ್‌ಗಳು, ಅಂಗಡಿ ಮುಂಗಟ್ಟುಗಳು, ಝೊಮ್ಯಾಟೋ, ಸ್ವಿಗ್ಗಿಯಂತಹ ಆಹಾರ ವಿತರಕ ಸಂಸ್ಥೆಗಳು, ಹೊಟೇಲ್ ಮತ್ತು ರೆಸ್ಟೋರೆಂಟ್‌ಗಳವರು ಕಡ್ಡಾಯವಾಗಿ ತಮ್ಮ ವ್ಯಾಪ್ತಿಗೆ ಸೇರಿದ ತಾಲೂಕು ಆರೋಗ್ಯಾಧಿಕಾರಿಯವರನ್ನು ಸಂಪರ್ಕಿಸಿ ದಿನಾಂಕವನ್ನು ನಿಗದಿಪಡಿಸಿಕೊಂಡು ರ‍್ಯಾಪಿಟ್ ಆಂಟಿಜೆನ್ ಟೆಸ್ಟ್ ಮೂಲಕ ತಮ್ಮ ಸಂಸ್ಥೆಯ ಎಲ್ಲಾ ಸಿಬ್ಬಂದಿಯವರಿಗೆ ತಪಾಸಣೆ ಮಾಡಿಸುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶಿಸಿದ್ದಾರೆ. ಈ ಆದೇಶವನ್ನು ಉಲ್ಲಂಘಿಸಿದ್ದಲ್ಲಿ, ಅಂತಹ ಸಂಸ್ಥೆಯವರನ್ನು ಅಪರಾಧಿ ಎಂದು ಪರಿಗಣಿಸಿ, ಕಾಯ್ದೆಯನ್ವಯ ಕಠಿಣ ಶಿಕ್ಷೆಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ,ಆ3: ಮೀನುಗಾರಿಕೆ ಇಲಾಖೆ ವತಿಯಿಂದ ಪಂಜರ ಮೀನುಕೃಷಿ ತರಬೇತಿ ಕಾರ್ಯಾಗಾರವನ್ನು ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆಗಸ್ಟ್ 8 ರಂದು ಹಮ್ಮಿಕೊಂಡಿದ್ದು ಮೀನು ಕೃಷಿ ಕೈಗೊಳ್ಳಲು ಇಚ್ಚಿಸಿರುವ ಆಸಕ್ತರು ಮೀನುಗಾರಿಕೆ ಸಹಾಯಕ ನಿರ್ದೇಶಕರು, ಶ್ರೇಣಿ -2 ಕಛೇರಿ ಕುಂದಾಪುರ ಇಲ್ಲಿ ಆಗಸ್ಟ್ 6 ರಂದು ಅಪರಾಹ್ನ 4 ಘಂಟೆಯೊಳಗೆ ತಮ್ಮ ಹೆಸರನ್ನು ನೊಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಶ್ರೇಣಿ -2 ರವರ ಕಛೇರಿ ಕುಂದಾಪರ ದೂರವಾಣಿ ಸಂಖ್ಯೆ -08254-230534 ಸಂಪರ್ಕಿಸಬಹುದು.
