ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಎನ್‌ಸಿಸಿ ಜ್ಯೂನಿಯರ್ ಅಂಡರ್ ಆಫೀಸರ್, ಆಳ್ವಾಸ್ ಕಾಲೇಜಿನ ದ್ವಿತೀಯ ಬಿ.ಎ ವಿದ್ಯಾರ್ಥಿನಿ ವೈಷ್ಣವಿ ಗೋಪಾಲ್ ರಾಜ್ಯಮಟ್ಟದ ಉತ್ತಮ ಎನ್‌ಸಿಸಿ ಕೆಡೆಟ್- ಚಿನ್ನದ ಪದಕವನ್ನು ಪಡೆದಿರುತ್ತಾರೆ. ದೆಹಲಿಯಲ್ಲಿ 2020ರ ಗಣರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಆಯ್ಕೆ ಶಿಬಿರದ ಹಿರಿಯ ವಿಭಾಗದಲ್ಲಿ ಬೆಸ್ಟ್ ಕೆಡೆಟ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದಿರುತ್ತಾರೆ. ಮೂಡುಬಿದಿರೆಯಲ್ಲಿ ನಡೆದ ಮೂರು ಹಂತದ ಶಿಬಿರದಲ್ಲಿ ಪ್ರಥಮ ಸ್ಥಾನ ಪಡೆದು, ಬೆಂಗಳೂರಿನ ಆಯ್ಕೆ ಶಿಬಿರಕ್ಕೆ ಆಯ್ಕೆಯಾಗಿದ್ದರು. ಈಕೆ ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾರೆ. ಈಕೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಎನ್‌ಸಿಸಿ ಅಧಿಕಾರಿ ಕ್ಯಾ.ಡಾ.ರಾಜೇಶ್ ಆಭಿನಂದಿಸಿದ್ದಾರೆ. ಕುಂದಾಪುರ ತಾಲೂಕು ಗಂಗೊಳ್ಳಿಯವರಾದ ವೈಷ್ಣವಿ ಗೋಪಾಲ್ ಅವರು ಕಲಾವಿದ ಗೋಪಾಲ ಚಂದನ್ ಹಾಗೂ ವೈದ್ಯೆ ಡಾ. ವೀಣಾ ಕಾರಂತ್ ಅವರ ಪುತ್ರಿ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಮರಳಿನ ಅಭಾವದಿಂದ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿರುವುದು ಮನಗಂಡು ಜಿಲ್ಲೆಯ ಕರಾವಳಿ ನಿಯಂತ್ರಣ ವಲಯ ಪ್ರದೇಶದ ವ್ಯಾಪ್ತಿಯಲ್ಲಿ ಮರಳು ದಿಬ್ಬಗಳನ್ನು ತೆರವುಗೊಳಿಸಿ ಮರಳನ್ನು ಸಾರ್ವಜನಿಕರಿಗೆ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಸುಲಭವಾಗಿ ಹಾಗೂ ಕಡಿಮೆ ದರದಲ್ಲಿ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ ಎಂದು ತಿಳಿಸಿರುವ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ನೂತನ ಅಧಿಕೃತ ದರಪಟ್ಟಿಯನ್ನೂ ಬಿಡುಗಡೆಗೊಳಿಸಿದ್ದಾರೆ. ಜಿಲ್ಲಾ ಮರಳು ಉಸ್ತುವಾರಿ ಸಮಿತಿಯಿಂದ ನಿಗಧಿಪಡಿಸಿದ ದರಕ್ಕಿಂತ ಹೆಚ್ಚುವರಿ ದರಕ್ಕೆ ಮಾರಾಟ ಮಾಡುವ ಮರಳು ಪರವಾನಿಗೆದಾರರು/ ವಾಹನ ಮಾಲೀಕರ ವಿವರ ಸಾರ್ವಜನಿಕರು ನೀಡಿದ್ದಲ್ಲಿ, ಅಂತಹ ಪರವಾನಿಗೆದಾರರ ಹಾಗೂ ಮರಳು ಸಾಗಾಟ ವಾಹನಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಹಾಗೂ ಮರಳು ಪಡೆಯುವವರು ಮರಳಿನ ಸಾಗಾಟ ಪರವಾನಿಗೆಯನ್ನು (MDP) ಸಾಗಾಣಿಕೆದಾರರಿಂದ ಕಡ್ಡಾಯವಾಗಿ ಪಡೆದು ತಮ್ಮ ಬಳಿ ಇಟ್ಟುಕೊಳ್ಳತಕ್ಕದ್ದು. ಇಲ್ಲದಿದ್ದಲ್ಲಿ ಸದರಿ ಮರಳನ್ನು ಅನಧಿಕೃತ ಮರಳು ಎಂದು ಪರಿಗಣಿಸಿ ನಿಯಮಾನುಸಾರವಾಗಿ ಮುಂದಿನ ಕ್ರಮ ಜರುಗಿಸಲಾಗುವುದು. ಜಿಲ್ಲಾ ಮರಳು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಗ್ರಾಮಾಂತರ ಪ್ರದೇಶದಲ್ಲಿ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಕಲೆಗಳ ಅಭಿರುಚಿ, ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ ನಾಗೂರಿನಲ್ಲಿ ಬ್ಲಾಸಂ ಸಂಗೀತ ಮತ್ತು ನೃತ್ಯ ಶಾಲೆಯನ್ನು ನಡೆಸಲಾಗುತ್ತಿದೆ. ಅದರ ಆಶ್ರಯದಲ್ಲಿ ಪ್ರತಿ ತಿಂಗಳು ’ಗಾನಯಾನ’ ಎಂಬ ಶಾಸ್ತ್ರೀಯ ಸಂಗೀತ ಕಚೇರಿ ನಡೆಯುತ್ತದೆ ಎಂದು ಕುಸುಮ ಫೌಂಡೇಶನ್ ಅಧ್ಯಕ್ಷ ನಳಿನ್‌ಕುಮಾರ ಶೆಟ್ಟಿ ಹೇಳಿದರು. ನಾಗೂರಿನ ಎಕೆಎಸ್ ಆಡಿಟೋರಿಯಮ್‌ನಲ್ಲಿ ಭಾನುವಾರ ನಡೆದ ಎರಡನೆ ತಿಂಗಳ ಗಾನಯಾನ ಕಾರ್ಯಕ್ರಮದ ಆರಂಭದಲ್ಲಿ ಅವರು ಮಾತನಾಡಿದರು. ಕಚೇರಿಯನ್ನು ಪ್ರತಿ ತಿಂಗಳು ನಡೆಸುವುದರಿಂದ ಸಂಗೀತಾಸಕ್ತರು ಅವುಗಳ ಪ್ರಾಯೋಜಕತ್ವ ವಹಿಸುವ ಮೂಲಕ ಕಲೆಗೆ ಪ್ರೋತ್ಸಾಹ ನೀಡಬೇಕು ಎಂದು ಅವರು ವಿನಂತಿಸಿದರು. ಆ ಬಳಿಕ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಸಂಗೀತ ಶಿಕ್ಷಕರಾಗಿರುವ ಬಿಜೂರು ಬವುಳಾಡಿಯ ವಿದ್ವಾನ್ ರಾಘವೇಂದ್ರ ಉಪಾಧ್ಯಾಯರ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು. ಇಡಗುಂಜಿಯ ಮಾರುತಿ ನಾಯ್ಕ್ ಹಾರ್ಮೋನಿಯಂ ನುಡಿಸಿದರು. ಹೊನ್ನಾವರದ ಗಣಪತಿ ಹೆಗಡೆ ಹೆರಿಕೇರಿ ತಬ್ಲಾ ಸಾಥ್ ನೀಡಿದರು. ಕಲಾವಿದರನ್ನು ಹಾಗೂ ಕಚೇರಿಯನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಾಮಾನ್ಯ ಸಭೆಯಲ್ಲಿ ಪಾಲನಾ ವರದಿಗೆ ಉತ್ತರ ದೊರೆತಿಲ್ಲ ಹಾಗೂ ಹಲವು ಅಧಿಕಾರಿಗಳು ಗೈರಾಗಿರುವ ಕಾರಣವನ್ನು ಮುಂದಿಟ್ಟುಕೊಂಡು ಸೋಮವಾರ ಕುಂದಾಪುರ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯನ್ನು ಮೊಟಕುಗೊಳಿಸಿದ ಪ್ರಸಂಗ ನಡೆದಿದೆ. ಸದಸ್ಯ ಕರಣ ಪೂಜಾರಿ ಮಾತನಾಡಿ ನಾವು ಕೇಳಿದ ಪ್ರಶ್ನೆಗಳಿಗೆ ಉತ್ತರ ಪಾಲನ ವರದಿಯಲ್ಲಿ ಉತ್ತರವೇ ನೀಡದಿದ್ದರೇ ಸಾಮಾನ್ಯ ಸಭೆ ನಡೆಸುವುದರ ಅಗತ್ಯವೇನಿದೆ. ಸಭೆಗೆ ಅಧಿಕಾರಿಗಳಿಂದ ಸಮರ್ಪಕ ಉತ್ತರ ದೊರೆಯುವ ತನಕ ಸಭೆಯನ್ನು ಮುಂದೆ ಹಾಕಿ ಎಂದು ಆಗ್ರಹಿಸಿದರು. ಸದಸ್ಯ ಮಹೇಂದ್ರ ಪೂಜಾರಿ ಮಾತನಾಡಿ ಆರ್‌ಆರ್‌ಟಿ ವಿಲೆ ಮಾಡಿ ಮತ್ತು ವಿಲೇವಾರಿ ಮಾಡಿದ ಫೈಲುಗಳ ಬಗ್ಗೆ ಮಾಹಿತಿ ಕೇಳಿದ್ದೆ ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕಳೆದ ಮೂರು ವರ್ಷಗಳಿಂದ ಜನರು ಹಣ ಕಟ್ಟಿ ಕಾಯುತ್ತಿದ್ದಾರೆ. ಆದರೆ ಇಲ್ಲಿ ಉತ್ತರಿಸಬೇಕಾದ ಕುಂದಾಪುರ ತಹಶೀಲ್ದಾರರೇ ಗೈರಾಗಿದ್ದಾರೆ. ನಾವು ಬೇರೆ ಬೇರೆ ಇಲಾಖೆಗೆ ಕೇಳಿದ ಯಾವುದೇ ಪ್ರಶ್ನೆಗೂ ಉತ್ತರವಿಲ್ಲ ಎಂದು ಆರೋಪಿಸಿದರು. ಸದಸ್ಯ ಉಮೇಶ್ ಕಲ್ಗದ್ದೆ ಮಾತನಾಡಿ ಹಿಂದಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕಮಲಶಿಲೆ: ಇಲ್ಲಿನ ಪ್ರಸಿದ್ದ ಶ್ರೀ ಬ್ರಾಹ್ಮೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಪ್ರಸಿದ್ಧ ಅರೆಕಾ ಟೀ ಸಂಸ್ಥೆಯ ಸಂಸ್ಥಾಪಕ ನಿವೇದನ್ ನೆಂಪೆ ಭೇಟಿ ನೀಡಿ ಶ್ರೀ ದೇವಿಗೆ ಪೂಜೆ ಸಲ್ಲಿಸಿದರು. ತಮ್ಮ ತಾಯಿಯೊಂದಿಗೆ ದೇವಳಕ್ಕೆ ಭೇಟಿ ನೀಡಿದ ನಿವೇದನ್ ಅವರನ್ನು ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಅನುವಂಶಿಯ ಮೊಕ್ತೇಸರರಾದ ಸಚ್ಚಿದಾನಂದ ಚಾತ್ರ ಅವರು ಗೌರವಿಸಿದರು. ಈ ಸಂದರ್ಭ ಗುರು ಭಟ್, ಮಂಜುನಾಥ ಪೂಜಾರಿ, ರಾಘವೇಂದ್ರ ಪೂಜಾರಿ ಮೊದಲಾದವರು ಜೊತೆಗಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಾರ್ವಜನಿಕರ ಅಗತ್ಯವನ್ನು ಅರಿತುಕೊಂಡು ಅವರಿಗೆ ಸರಕಾರದ ಪರ್ಯಾಯವಾಗಿ ನೆರವಾಗುವುದೇ ರೆಡ್‌ಕ್ರಾಸ್ ಸಂಸ್ಥೆಯ ಗುರಿಯಾಗಿದ್ದು, ಇಲ್ಲಿ ಯಾವುದೇ ಜಾತಿ, ಮತ, ಧರ್ಮದ ಭೇದವಿಲ್ಲದೇ ಎಲ್ಲರೂ ಸಮಾನವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ಜಿಲ್ಲಾ ಘಟಕದ ಅಧ್ಯಕ್ಷ ಬಸ್ರೂರು ರಾಜೀವ ಶೆಟ್ಟಿ ಹೇಳಿದರು ಅವರು ಯಡ್ತರೆ ಬಂಟರ ಭವನದಲ್ಲಿ ಭಾನುವಾರ ಜರುಗಿದ ಕಾರ್ಯಕ್ರಮದಲ್ಲಿ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಇದರ ಬೈಂದೂರು ತಾಲೂಕು ಘಟಕವನ್ನು ಉದ್ಘಾಟಿಸಿ, ಸಂಸ್ಥಾಪಕರ ಪೋಟೋಗೆ ಮಾಲಾರ್ಪಣೆಗೈದು ಬಳಿಕ ಮಾತನಾಡಿದರು. ಪ್ರಪಂಚದಾದ್ಯಂತ ರೆಡ್‌ಕ್ರಾಸ್‌ನ 700ಕ್ಕೂ ಅಧಿಕ ಶಾಖೆಗಳಿವೆ. ಪ್ರತಿ ವರ್ಷ ಜಿಲ್ಲೆಯಲ್ಲಿ ಶೆ.10ರಷ್ಟು ಜನಸಂಖ್ಯೆಯನ್ನು ಸರಕಾರದ ಕಾರ್ಯಕ್ರಮಗಳ ಮೂಲಕ ತಲುಪುವುದು, ಶೆ.2ರಷ್ಟು ಸದಸ್ಯರನ್ನು ಹೊಂದುವುದು, ಶೆ.1ರಷ್ಟು ತುರ್ತು ಸಂದರ್ಭದಲ್ಲಿ ತ್ವರಿತವಾಗಿ ಸ್ಪಂದಿಸುವ ಪಡೆಯನ್ನು ರಚಿಸಿಕೊಳ್ಳುವ ಗುರಿಯನ್ನು ರೆಡ್‌ಕ್ರಾಸ್ ಹೊಂದಿದೆ ಎಂದರು. ವೇದಿಕೆಯಲ್ಲಿ ಬೈಂದೂರು ತಹಶೀಲ್ದಾರ್ ಬಿ. ಪಿ. ಪೂಜಾರ್, ಬೈಂದೂರು ತಾಲೂಕು ಹೋರಾಟ ಹಾಗೂ ಪುನರ್‌ರಚನಾ ಸಮಿತಿ ಅಧ್ಯಕ್ಷ ಬಿ. ಜಗನ್ನಾಥ ಶೆಟ್ಟಿ, ಕುಂದಾಪುರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕೋಟಿ ಚೆನ್ನಯ್ಯರ ಪರಂಪರೆ ಹಾಗೂ ಕಟ್ಟುಪಾಟುಗಳಿಗೆ ಅನುಗುಣವಾಗಿ ಗರಡಿ ಜೀರ್ಣೋದ್ಧಾರಗೊಳ್ಳುತ್ತಿದೆ. ಕೋಟಿ ಚೆನ್ನಯ್ಯರ ಕೊನೆಯ ಗರಡಿ ಎನ್ನಲಾದ ನಾಕಟ್ಟೆಯ ಗರಡಿಯು ಸುಂದರವಾಗಿ, ಕಲಾತ್ಮಕವಾಗಿ ನಿರ್ಮಾಣವಾಗುತ್ತಿರುವುದು ಸಂತಸದ ಸಂಗತಿ ಎಂದು ರಾಜ್ಯ ಮುಜರಾಯಿ ಬಂದರು ಮೀನುಗಾರಿಕೆ ಹಾಗೂ ಒಳನಾಡು ಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಯಡ್ತರೆ ಗ್ರಾಮದ ನಾಕಟ್ಟೆಯಲ್ಲಿ ಜೀಣೋದ್ಧಾರಗೊಳ್ಳುತ್ತಿರುವ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿಗೆ ಭೇಟಿ ನೀಡಿ, ಕಾಮಗಾರಿಯ ಪ್ರಗತಿ ವೀಕ್ಷಿಸಿದ ಬಳಿಕ ಮಾತನಾಡಿ ಗರಡಿ ಪೂರ್ಣಗೊಳ್ಳುವ ಹಂತದಲ್ಲಿರುವುದರಿಂದ ಸರಕಾರದಿಂದ ಶೀಘ್ರವಾಗಿ ಏನೇನು ಸಹಾಯ ಮಾಡಬಹುದು ಎಂಬುದನ್ನು ಅರಿತು ಮೊದಲ ಹಂತದಲ್ಲಿಯೇ ಪಟ್ಟಿಯಲ್ಲಿ ಸ್ವಲ್ಪ ಅನುದಾನ ಪ್ರಕಟಿಸಿ, ಹೆಚ್ಚಿನ ಬೇಡಿಕೆಯನ್ನು ರಾಜ್ಯ ಸರಕಾರದ ಮುಂದಿರಿಸುವ ಕೆಲಸ ಮಾಡಲಾಗುವುದು ಎಂದರು. ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಬಾಬು ಶೆಟ್ಟಿ ತಗ್ಗರ್ಸೆ, ಸುರೇಶ ಬಟವಾಡಿ, ತಾಲೂಕು ಪಂಚಾಯತ್ ಸದಸ್ಯರುಗಳಾದ ಪುಪ್ಪರಾಜ ಶೆಟ್ಟಿ, ಮಾಲಿನಿ ಕೆ., ಮಹೇಂದ್ರ ಪೂಜಾರಿ, ಬೈಂದೂರು ಗ್ರಾಮ ಪಂಚಾಯತ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಗೋವಿಂದ ಬಾಬೂ ಪೂಜಾರಿ ಅವರ ಕಂಬದಕೋಣೆ ತೆಂಕಬೆಟ್ಟು ಅಂಗನವಾಡಿ ಪುಟಾಣಿ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ ಮಾಡಿದರು. ಅಂಗನವಾಡಿ ಪುಟಾಣಿ ಮಕ್ಕಳಿಗೆ ಉಚಿತ ಬಟ್ಟೆ ವಿತರಣೆ ಕಾರ್ಯಕ್ರಮದಲ್ಲಿ ಕಂಬದಕೋಣ್ ಜಿಲ್ಲಾ ಪಂಚಾಯತ್ ಸದಸ್ಯರಾದ ಗೌರಿ ದೇವಾಡಿಗ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಧರ್ಮಧರ್ಶಿ ನರಸಿಂಹ ಹಳಗೇರಿ ಅಂಗನವಾಡಿ ಸಿಬ್ಬಂದಿ ವರ್ಗದವರು ಹಾಗು ಊರವರು ಮತ್ತು ಪುಟಾಣಿ ಮಕ್ಕಳ ಪೋಷಕ ವೃಂದದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಪರಿಶಿಷ್ಟ ಜಾತಿಯ ಕಾನೂನು ಪದವೀಧರರಿಗೆ 2019-20ನೇ ಸಾಲಿನಲ್ಲಿ ನ್ಯಾಯಾಂಗ ಸೇವಾ ತರಬೇತಿಗೆ ಸಂಬಂಧಿಸಿದಂತೆ, ಸಿವಿಲ್/ ಸೆಷನ್ಸ್/ ಡಿಸ್ಟಿಕ್ಟ್ ಜಡ್ಜ್, ಪಬ್ಲಿಕ್ ಪ್ರಾಸಿಕ್ಯೂಟರ್ ಮೊದಲಾದ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ಸಮಾಜ ಕಲ್ಯಾಣ ಇಲಾಖಾ ವತಿಯಿಂದ ಅನುಷ್ಟಾನ ಮಾಡಲಾಗುತ್ತಿದೆ. 2019-20 ನೇ ಸಾಲಿನಲ್ಲಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ www.sw.kar.nic.in ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಯ ವಯಸ್ಸು 18 ರಿಂದ 40 ವರ್ಷದೊಳಗಿರಬೇಕು. ಎಲ್.ಎಲ್.ಬಿ ಪದವಿಯಲ್ಲಿ ಕನಿಷ್ಟ ೫೦ % ಕ್ಕಿಂತ ಹೆಚ್ಚು ಅಂಕಗಳಿಸಿರಬೇಕು ಹಾಗೂ ಬಾರ್ ಕೌನ್ಸಿಲ್‌ನಲ್ಲಿ ನೋಂದಣಿಯಾಗಿರಬೇಕು. ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿದ್ದು, ಪ.ಜಾತಿ ಮತ್ತು ಪ.ವರ್ಗಕ್ಕೆ ಸೇರಿದವರಾಗಿರಬೇಕು. ಅರ್ಜಿ ಸಲ್ಲಿಸುವ ಕೊನೆಯ ದಿನದೊಳಗೆ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು. ದೈಹಿಕ ಅಂಗವಿಕಲ ಮೀಸಲಾತಿಯಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿ, ನಿಗಧಿತ ಪ್ರಾಧಿಕಾರದಿಂದ ನಿಗಧಿಪಡಿಸಲಾದ ಕೊನೆಯ ದಿನಾಂಕದೊಳಗೆ ಅಂಗವಿಕಲ ಪ್ರಮಾಣ ಪತ್ರ ಪಡೆದಿರಬೇಕು. ಒಬ್ಬ ಅಭ್ಯರ್ಥಿ ಒಂದು ಬಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಹಿರಿಯ ನಾಗರಿಕರ ವೇದಿಕೆ ವತಿಯಿಂದ ಬಂಕೇಶ್ವರದ ಮಹಾಂಕಾಳಿ ದೇವಸ್ಥಾನದ ಸಭಾಭವನದಲ್ಲಿ ಮಾಸಿಕ ಕಾರ್ಯಕ್ರಮ ಜರುಗಿತು. ಕೃಷಿ ಅಧ್ಯಯನ ಪ್ರವಾಸಕ್ಕಾಗಿ ಇಸ್ರೆಲ್‌ಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ವತಿಯಿಂದ ಭಾಗವಹಿಸಿದ ಖಂಬದಕೋಣೆ ರೈತ ಸೇವಾ ಸಹಕಾರಿ ಸಂಸ್ಥೆಯ ಅಧ್ಯಕ್ಷ, ಕೃಷಿಕ ಪ್ರಕಾಶ್ಚಂದ್ರ ಶೆಟ್ಟಿ ಅವರು ವೈಜ್ಞಾನಿಕ ಕೃಷಿಯ ಕುರಿತು ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಯಶಸ್ಸನ್ನು ಕಾಣಬೇಕಾದರೆ ಅದಕ್ಕೆ ಪೂರಕವಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವುದರ ಜೊತೆ ಜೊತೆಗೆ ಮಿಶ್ರ ಬೆಳೆಗಳಿಗೂ ಆದ್ಯತೆಗೆ ಒತ್ತು ಕೊಡಬೇಕು ಆಗ ನಮಗೆ ಸಮತೋಲನವಾದ ಆದಾಯ ಮೂಲ ಸದಾ ಪಡೆಯಲು ಸಾಧ್ಯವಾಗುವುದು ಎಂದು ಅಭಿಪ್ರಾಯ ಪಟ್ಟರು. ವೇದಿಕೆಯ ಅಧ್ಯಕ್ಷ ಎಚ್. ವಸಂತ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕವಿ ಪ್ರಶಸ್ತಿ ಪುರಸ್ಕೃತ ಪುಂಡಲೀಕ ನಾಯಕ್ ರವರನ್ನು ಹಿರಿಯ ನಾಗರಿಕರ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು. ನಾಗರಿಕರ ವೇದಿಕೆಯ ಉಪಾಧ್ಯಕ್ಷ ಶ್ರೀನಿವಾಸ ಮದ್ದೋಡಿ, ಕಾರ್ಯದರ್ಶಿ ಸಂಜೀವ ಆಚಾರ್ಯ ಕಳವಾಡಿ, ನಿವೃತ್ತ ಮುಖ್ಯೋಪಾಧ್ಯಾಯ…
