Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಈ ಭಾರಿಯ ದೀಪಾವಳಿಗೆ ಕುಂದಾಪುರದ ಪ್ರತಿಷ್ಠಿತ ಮೊಬೈಲ್ ಮಾರಾಟ ಸಂಸ್ಥೆ ಮೊಬೈಲ್ ಎಕ್ಸ್ ತನ್ನ ಗ್ರಾಹಕರಿಗೆ ಮೊಬೈಲ್ ಎಕ್ಸ್ ಉತ್ಸವದ ಮೂಲಕ ವಿಶೇಷ ಕೊಡುಗೆ ನೀಡುತ್ತಿದ್ದು, ಎಲ್ಲಾ ಮೊಬೈಲ್‌ಗಳು ಹಾಗೂ ಮೊಬೈಲ್ ಎಕ್ಸಸರೀಸ್ ಮೇಲೆ ಹೆಚ್ಚಿನ ರಿಯಾಯಿತಿ ಪ್ರಕಟಿಸಿದೆ. ಎಲ್ಲಾ ಮೊಬೈಲ್ ಕಂಪೆನಿಯ ಎಲ್ಲಾ ಮಾಡೆಲ್‌ನ ಮೊಬೈಲ್‌ಗಳನ್ನು ಆನ್‌ಲೈನ್ ಬೆಲೆಗಿಂತ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇಎಂಐ ಮೂಲಕ ಮೊಬೈಲ್ ಕೊಂಡುಕೊಳ್ಳುವವರಿಗೆ 0% ಡೌನ್ ಪೇಮೆಂಟ್, ಆನ್‌ಲೈನ್ ಮೂಲಕವೇ ಇಎಂಐ ಲೋನ್ ಅಪ್ರೋವ್, ತ್ವರಿತ ಸರ್ವಿಸ್, ಲೈಫ್‌ಟೈಮ್ ಸಾಫ್ಟ್‌ವೇರ್ ಅಪ್‌ಡೇಟ್, ಗ್ರಾಹಕರ ಮಾಹಿತಿ ಸೇವೆ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಿಕೊಡಲಿದೆ. ಮೊಬೈಲ್ ಎಕ್ಸ್‌ನಲ್ಲಿ ಮಾಡುವ ಎಲ್ಲಾ ಖರೀದಿಗೂ ಖಚಿತವಾಗಿ ಉಡುಗೊರೆ ಇರಲಿದೆ. ಕುಂದಾಪುರದ ಹಳೆ ಬಸ್ ನಿಲ್ದಾಣದ ಸಮೀಪದ ಪನ್ನೀರ್ ಜ್ಯುವೆಲ್ಲರ‍್ಸ್ ಕಾಂಪೆಕ್ಸ್‌ನಲ್ಲಿರುವ ಮೊಬೈಲ್ ಎಕ್ಸ್ ಶೋರೂಮ್‌ನಲ್ಲಿ ಈ ಎಲ್ಲಾ ಆಫರ್‌ಗಳು ಲಭ್ಯವಿರಲಿದ್ದು, ದೀಪಾವಳಿಗೆ ಮೊಬೈಲ್ ಕೊಂಡುಕೊಳ್ಳಬೇಕೆನ್ನುವವರು ಆಫರ್‌ನ್ನು ಸದಪಯೋಗಪಡಿಸಿಕೊಳ್ಳಬಹುದಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದಿದ್ದ ವಿಶ್ವ ಯೋಗ ಸ್ಪರ್ಧೆಯಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗಳಿಸಿ ಸಾಧನೆ ಮಾಡಿದ ಮರವಂತೆಯ ಬಾಲ ಯೋಗಪಟು ಧನ್ವಿ ಪೂಜಾರಿಗೆ ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಅಭಿನಂದಿಸಲಾಯಿತು. ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಅವರು ಧನ್ವಿ ಪೂಜಾರಿಗೆ ಅಭಿನಂದಿಸಿದರು. ಈ ಸಂದರ್ಭ ಸಂಸ್ಥೆಯ ಉಪಾಧ್ಯಕ್ಷ ಎಂ. ಚಂದ್ರಶೀಲ ಶೆಟ್ಟಿ, ನಿರ್ದೇಶಕರಾದ ಭೋಜ ನಾಯ್ಕ್, ಜಗದೀಶ್ ಪಿ. ಪೂಜಾರಿ, ರಾಮಕೃಷ್ಣ ಖಾರ್ವಿ, ಪ್ರಕಾಶ ದೇವಾಡಿಗ, ನಾಗಮ್ಮ, ಮಂಜು ಪೂಜಾರಿ, ಮುಖಂಡ ಮದನ್‌ಕುಮಾರ್ ಉಪ್ಪುಂದ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜೀವ ಮಡಿವಾಳ ಹಾಗೂ ಸಿಬ್ಬಂಧಿಗಳು ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೈಂದೂರು ಪೊಲೀಸ್ ಠಾಣೆಯ ಪಿಎಸೈ ತಿಮ್ಮೇಶ್ ಬಿ. ಎನ್., ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀಧರ್ ನಾಯ್ಕ್, ಅಮಾಸೆಬೈಲು ಪೊಲೀಸ್ ಠಾಣೆಯ ಪಿಎಸೈ ಸುದರ್ಶನ್ ಅವರನ್ನು ವರ್ಗಾವಣೆ ಮಾಡಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಬೈಂದೂರು ಪೊಲೀಸ್ ಠಾಣೆಯ ಪಿಎಸೈ ತಿಮ್ಮೇಶ್ ಬಿ. ಎನ್ ಅವರನ್ನು ಕಾರ್ಕಳ ನಗರ ಠಾಣೆಗೆ, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸೈ ಶ್ರೀಧರ್ ನಾಯ್ಕ್ ಅವರನ್ನು ಶಂಕರನಾರಾಯಣ ಪೊಲೀಸ್ ಠಾಣೆಗೆ, ಅಮಾಸೆಬೈಲು ಪೊಲೀಸ್ ಠಾಣೆಯ ಎಸೈ ಸುದರ್ಶನ್ ಬಿ. ಎಸ್ ಅವರನ್ನು ಕುಂದಾಪುರ ಸಂಚಾರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಮಲ್ಪೆ ಠಾಣೆಯ ಮಧು ಬಿ. ಇ ಅವರನ್ನು ಬೈಂದೂರು ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಪಶ್ಚಿಮ ವಲಯ ಪೊಲೀಸ್ ಸಿಬ್ಬಂಧಿ ಮಂಡಳಿಯ ನಡಾವಳಿಯ ಸರ್ವಾನುಮತದ ನಿರ್ಣಯದಂತೆ ಚಿಕ್ಕಮಗಳೂರು, ಮಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಒಟ್ಟು ೪೭ ಮಂದಿ ಪಿಎಸ್‌ಐಗಳನ್ನು ವರ್ಗಾವಣೆ ಮಾಡಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಉಡುಪಿ ಜಿಲ್ಲಾ ಪಂಚಾಯತಿನ ಸ್ಥಾಯಿ ಸಮಿತಿಯನ್ನು ೩ನೇ ಅವಧಿಗೆ ಪುನರ್ ರಚಿಸಲಾಗಿದ್ದು, ಸುಮಿತ್ ಶೆಟ್ಟಿ ಕೌಡೂರು ಇವರನ್ನು ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ಪ್ರತಾಪ ಹೆಗ್ಡೆ ಮಾರಾಳಿ ಇವರನ್ನು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಹಾಗೂ ಶೋಭಾ ಜಿ. ಪುತ್ರನ್ ಇವರನ್ನು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉಪ್ಪುಂದದ ಮಡಿಕಲ್ ಕಡಲತೀರದಲ್ಲಿ ಸ್ಥಳೀಯ ಮೀನುಗಾರರು ನಡೆಸಿದ ಒಂದು ದಿನದ ಸ್ವಚ್ಛತಾ ಅಭಿಯಾನದಲ್ಲಿ ಎಫ್‌ಎಸ್‌ಎಲ್ ಇಂಡಿಯ ಸರ್ಕಾರೇತರ ಸಂಘಟನೆಯ ಆಶ್ರಯದಲ್ಲಿ ಭಾರತದಲ್ಲಿ ಅನುಭವಾತ್ಮಕ ಕಲಿಕೆ ನಡೆಸುತ್ತಿರುವ ವಿದೇಶಿ ವಿದ್ಯಾರ್ಥಿಗಳು ಕೈಜೋಡಿಸಿ ಗಮನ ಸೆಳೆದರು. ಉಪ್ಪುಂದ ರಾಣಿಬಲೆ ಒಕ್ಕೂಟ ಮಂಗಳವಾರ ಈ ಅಭಿಯಾನ ಏರ್ಪಡಿಸಿತ್ತು. ಅದರ ಅಂಗವಾಗಿ ಮಡಿಕಲ್ ಕಡಲತೀರದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಸೇರಿದಂತೆ ವಿವಿಧ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಯಿತು. ಕರಾವಳಿ ಕಾವಲು ಪಡೆಯ ಸಿಬ್ಬಂದಿ, ಗ್ರಾಮ ಪಂಚಾಯಿತಿ ಸದಸ್ಯರು, ಸ್ಥಳೀಯ ಮೀನುಗಾರರು ಸೇರಿ ಸಂಗ್ರಹಿಸಿದ ತ್ಯಾಜ್ಯವನ್ನು ವರ್ಗೀಕರಿಸಿ ಗ್ರಾಮ ಪಂಚಾಯಿತಿಯ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಹಸ್ತಾಂತರಿಸಿದರು. ಅಗತ್ಯ ಕೈಗವಸುಗಳನ್ನು ಸ್ಥಳೀಯ ಸುಮುಖ ಸರ್ಜಿಕಲ್ಸ್ ಸಂಸ್ಥೆಯ ಬಿ. ಎಸ್. ಸುರೇಶ ಶೆಟ್ಟಿ ಒದಗಿಸಿದ್ದರು. ರಾಣಿಬಲೆ ಒಕ್ಕೂಟ ಉಪಾಹಾರದ ವ್ಯವಸ್ಥೆ ಮಾಡಿತ್ತು. ರಾಣಿಬಲೆ ಒಕ್ಕೂಟದ ಅಧ್ಯಕ್ಷ ವೆಂಕಟರಮಣ ಖಾರ್ವಿ, ಎಫ್‌ಎಸ್‌ಎಲ್ ಇಂಡಿಯ ಕ್ಷೇತ್ರ ಯೋಜನಾಧಿಕಾರಿ ಮಂಜೇಶ್ ಬಿ. ಎಂ, ಸಂಯೋಜಕ ಮಂಜುನಾಥ ಬಿ, ಕರಾವಳಿ ಕಾವಲು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಯುವಕರೇ ಭಾರತ ದೇಶದ ಭವಿಷ್ಯವಾಗಿದ್ದಾರೆ. ಹಾಗಾಗಿ ದೇಶದ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳಲು ಯುವ ಸಮುದಾಯ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಉಡುಪಿ ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ ಗೇಹ್ಲೋಟ್ ಹೇಳಿದರು. ಅವರು ನೆಹರು ಯುವ ಕೇಂದ್ರ ಸಂಘಟನಾ ಬೆಂಗಳೂರು ಹಾಗೂ ನೆಹರು ಯುವ ಕೇಂದ್ರ ಉಡುಪಿ ಇದರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ೧೫ ದಿನಗಳ ಯುವ ಸ್ವಯಂಸೇವಕರುಕರ ಪ್ರವೇಶ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ದೇಶದಲ್ಲಿನ ಭ್ರಷ್ಟಾಚಾರ, ಸಾಮಾಜಿಕ ಅಸಮತೋಲನ, ನೆರೆ, ಬರ, ವಾತಾವರಣ ಬದಲಾವಣೆ ಮೊದಲಾದವುಗಳ ಬಗ್ಗೆ ನಾವು ಟೀಕೆ ಮಾಡುತ್ತೆವೆ ಆದರೆ ಅವುಗಳಿಗೆ ನಾವೇ ಪರಿಹಾರ ಕಂಡುಕೊಳ್ಳಬೇಕು ಎಂಬುದನ್ನು ಮರೆತಿದ್ದೇವೆ. ಈ ಎಲ್ಲಾ ಸಮಸ್ಯೆಗಳಿಗೆ ಯುವಕರಿಂದ ಮಾತ್ರ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದರು. ನೆಹರು ಯುವ ಕೇಂದ್ರದಿಂದ ಪಡೆದ ತರಬೇತಿಯಿಂದ ಸಾಕಷ್ಟು ಅನುಭವ ದೊರೆತಿದೆ. ಅದನ್ನು ತಮ್ಮ ತಮ್ಮ ಊರುಗಳಲ್ಲಿ ಯುವ ಜನರೊಂದಿಗೆ ಕೆಲಸ ಮಾಡುವಾಗ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಎಸ್.ಎಲ್.ಆರ್.ಎಂನ ಯಶಸ್ವಿ ಅನುಷ್ಠಾನದಿಂದ ವಂಡ್ಸೆ ಗ್ರಾಮ ಪಂಚಾಯತ್ ಗಮನ ಸಳೆದಿದೆ. ಈ ತನಕ ಹಸಿ ಕಸ ಮತ್ತು ಒಣ ಕಸ ಎಂದು ಎರಡು ವಿಭಾಗಗಳಲ್ಲಿ ತ್ಯಾಜ್ಯ ಸಂಗ್ರಹಣೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಅಪಾಯಕಾರಿ ಕಸ ನಿರ್ವಹಣೆಗೆ ಜಿಲ್ಲಾಡಳಿತ ಮುಂದಾಗಿದ್ದು ಉಡುಪಿ ಜಿಲ್ಲೆಯ ಮೂರು ಗ್ರಾಮ ಪಂಚಾಯತ್‌ಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಟಾನ ಮಾಡುತ್ತಿದ್ದು, ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್ ಹೇಳಿದರು. ಅವರು ಅ.೨೨ರಂದು ವಂಡ್ಸೆ ಗ್ರಾಮ ಪಂಚಾಯತ್‌ಗೆ ಭೇಟಿ ನೀಡಿ ಮಾತನಾಡಿದರು. ಅಪಾಯಕಾರಿ ಕಸವಾದ ಸ್ಯಾನಿಟರ್ ತ್ಯಾಜ್ಯ, ವೈದ್ಯಕೀಯ ತ್ಯಾಜ್ಯಗಳನ್ನು ಪ್ರತ್ಯೇಕವಾಗಿಯೇ ಮನೆಗಳಿಂದ ಸಂಗ್ರಹಿಸಬೇಕು. ಅದಕ್ಕೆ ಕೆಂಪು ಬಣ್ಣದ ಬಕೇಟನ್ನು ನೀಡಬೇಕು. ಅಪಾಯಕಾರಿ ಕಸವನ್ನು ಈ ಬಕೆಟಿಗೇ ಹಾಕಬೇಕು. ಜನರಿಗೆ ಈ ಬಗ್ಗೆ ಅರಿವು ಮೂಡಿಸಬೇಕು. ಈ ರೀತಿ ಮಾಡುವುದರಿಂದ ಎಸ್.ಎಲ್.ಆರ್.ಎಂನಲ್ಲಿ ಕಸ ವಿಂಗಡಣೆಯೂ ಸುಲಭವಾಗುತ್ತದೆ ಎಂದರು. ವಂಡ್ಸೆಯ ಎಸ್.ಎಲ್.ಆರ್.ಎಂ ಘಟಕ ಅಧ್ಯಯನಕ್ಕೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಹೆದ್ದಾರಿ ಹೋರಾಟ ಸಮಿತಿ ಶಿರೂರು ಇದರ ಮುಂದಾಳತ್ವದಲ್ಲಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಸ್ಥಳೀಯರ ಬೇಡಿಕೆಗಳನ್ನು ಆಗ್ರಹಿಸಿ ಟೋಲ್ ಚಲೋ ಅಭಿಯಾನ ಅಕ್ಟೋಬರ್ 30ರಂದು ಬೆಳಿಗ್ಗೆ 10ಗಂಟೆಗೆ ನಡೆಯಲಿದೆ. ಈಗಾಗಲೇ ಹೆದ್ದಾರಿ ಹೋರಾಟ ಸಮಿತಿ ಮುಂದಾಳತ್ವದಲ್ಲಿ ಸರ್ವಿಸ್ ರಸ್ತೆ ಬೇಡಿಕೆ ಸಲ್ಲಿಸಿದ್ದು ಬೇಡಿಕೆಗೆ ಸ್ಪಂದಿಸಿದ ಸಂಸದರು ಹೆದ್ದಾರಿ ವಲಯ ಕಛೇರಿ ಅಧಿಕಾರಿಗಳ ಜೊತೆ ಮಾತನಾಡಿ ಮಂಜೂರು ಮಾಡಿಸಿದ್ದರು. ಆದರೆ ಹೆದ್ದಾರಿ ಅಧಿಕಾರಿಗಳಿಂದ ಇದುವರೆಗೆ ಸ್ಪಷ್ಟತೆ ದೊರೆತಿಲ್ಲ. ಮಾತ್ರವಲ್ಲ ಸ್ಥಳೀಯ ಪಂಚಾಯತ್ ಸೇರಿದಂತೆ ಪ್ರಮುಖ ಲಿಂಕ್ ರಸ್ತೆಗಳನ್ನು ಕಡಿತಗೊಳಿಸಿದ್ದು ಇದುವರೆಗೆ ದುರಸ್ತಿಗೊಳಿಸಿಲ್ಲ. ಇದರ ಜೊತೆಗೆ ಕಂಪೆನಿ ಟೋಲ್‌ಗೇಟ್ ಆರಂಭಿಸಲು ಸಿದ್ದತೆ ನಡೆಸುತ್ತಿದೆ. ಸ್ಥಳೀಯ ೧೦ ಕಿ.ಮೀ ವ್ಯಾಪ್ತಿಯ ಒಳಗಿನವರಿಗೆ ರಿಯಾಯಿತಿ ನೀಡಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಟೋಲ್ ಚಲೋ ಅಭಿಯಾನ ಅಕ್ಟೋಬರ್ 20ರಂದು ಬೆಳಿಗ್ಗೆ 10 ಗಂಟೆಗೆ ಶಿರೂರು ಟೋಲ್ ಗೇಟ್ ಬಳಿ ನಡೆಯಲಿದೆ. ಸ್ಥಳೀಯ ಶಾಸಕರಾದ ಬಿ. ಎಮ್. ಸುಕುಮಾರ ಶೆಟ್ಟಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಸಮಿತಿ ಮತ್ತು ಮನೆ,ನಿವೇಶನ ರಹಿತರ ಹೋರಾಟ ಸಮಿತಿಯ ಆಶ್ರಯದಲ್ಲಿ ಉಡುಪಿ ಜಿಲ್ಲೆಯಾದ್ಯಂತ ಸರಕಾರದಿಂದ ಸಮೀಕ್ಷೆಯಲ್ಲಿ ಆಯ್ಕೆಗೊಂಡ ಅರ್ಹ ಬಡ ನಿವೇಶನ ರಹಿತ ಫಲಾನುಭವಿಗಳಿಗೆ ಭೂಮಿ ಮಂಜೂರು ಮಾಡಲು ಸರಕಾರಿ / ಖಾಸಗೀ ಜಾಗ ಗುರುತಿಸಬೇಕೆಂದು ಒತ್ತಾಯಿಸಿ 18, ನವಂಬರ್ 2019 ಸೋಮವಾರದಿಂದ ಅನಿರ್ಧಿಪ್ಟಾವಧಿ ಉಡುಪಿ ಮಣಿಪಾಲ ಜಿಲ್ಲಾಧಿಕಾರಿ ಕಛೇರಿಗೆ ಎದುರು ಜರಗುವ ನಿವೇಶನ ರಹಿತರ ಭೂಮಿ ಹಕ್ಕಿನ ನಿಣಾ೯ಯಕಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಕನಾ೯ಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಕರೆ ನೀಡಿದರು. ಬೈಂದೂರು ಸಿಐಟಿಯು ಕಚೇರಿ ಸಭಾಂಗಣದಲ್ಲಿ ಜರಗಿದ ಬೈಂದೂರು, ತಗ್ಗಸೆ೯ಪಡುವರಿ, ಯಡ್ತರೆ ಗ್ರಾಮಗಳ ನಿವೇಶನ ರಹಿತರ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ನಿವೇಶನ ರಹಿತರ ಕೈಗೆ ಭೂಮಿ ಹಕ್ಕು ಪತ್ರ ಸಿಗುವ ತನಕ ಈ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕವಯಿತ್ರಿ ಸುಮಿತ್ರಾ ಡಿ ಐತಾಳ್ ಅವರ ಕವನ ಸಂಕಲನ ಮೌನರತಿ ಬಿಡುಗಡೆಯ ಅಂಗವಾಗಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕವನ ಸ್ಪರ್ಧೆಯ ಸಾರ್ವಜನಿಕ ವಿಭಾಗದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಯವರು ರಚಿಸಿದ ಕವನ “ರಾಧೆಯ ಸ್ವಗತ” ಪ್ರಥಮ ಬಹುಮಾನ ಪಡೆದಿದ್ದು ಅವರನ್ನು ಕಳೆದ ಭಾನುವಾರ ನಡೆದ ಸಮಾರಂಭದ ವೇದಿಕೆಯಲ್ಲಿ ಅವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಕವಯಿತ್ರಿ ಸುಮಿತ್ರಾ ಡಿ ಐತಾಳ್, ಕುಂದಪ್ರಭ ಪತ್ರಿಕೆಯ ಸಂಪಾದಕ ಯು.ಎಸ್.ಶೆಣೈ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಎ. ಎಸ್.ಎನ್ ಹೆಬ್ಬಾರ್, ಉತ್ತಮ ಹೋಮಿಯೋ ಕ್ಲಿನಿಕ್ ನ ಡಾ.ಉತ್ತಮ ಕುಮಾರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Read More