ಸ್ವಚ್ಛ ಭಾರತಕ್ಕೆ ಕೈಜೋಡಿಸಿದ ವಿದೇಶಿ ವಿದ್ಯಾರ್ಥಿಗಳು

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಉಪ್ಪುಂದದ ಮಡಿಕಲ್ ಕಡಲತೀರದಲ್ಲಿ ಸ್ಥಳೀಯ ಮೀನುಗಾರರು ನಡೆಸಿದ ಒಂದು ದಿನದ ಸ್ವಚ್ಛತಾ ಅಭಿಯಾನದಲ್ಲಿ ಎಫ್‌ಎಸ್‌ಎಲ್ ಇಂಡಿಯ ಸರ್ಕಾರೇತರ ಸಂಘಟನೆಯ ಆಶ್ರಯದಲ್ಲಿ ಭಾರತದಲ್ಲಿ ಅನುಭವಾತ್ಮಕ ಕಲಿಕೆ ನಡೆಸುತ್ತಿರುವ ವಿದೇಶಿ ವಿದ್ಯಾರ್ಥಿಗಳು ಕೈಜೋಡಿಸಿ ಗಮನ ಸೆಳೆದರು.

Call us

Click Here

ಉಪ್ಪುಂದ ರಾಣಿಬಲೆ ಒಕ್ಕೂಟ ಮಂಗಳವಾರ ಈ ಅಭಿಯಾನ ಏರ್ಪಡಿಸಿತ್ತು. ಅದರ ಅಂಗವಾಗಿ ಮಡಿಕಲ್ ಕಡಲತೀರದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಸೇರಿದಂತೆ ವಿವಿಧ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಯಿತು. ಕರಾವಳಿ ಕಾವಲು ಪಡೆಯ ಸಿಬ್ಬಂದಿ, ಗ್ರಾಮ ಪಂಚಾಯಿತಿ ಸದಸ್ಯರು, ಸ್ಥಳೀಯ ಮೀನುಗಾರರು ಸೇರಿ ಸಂಗ್ರಹಿಸಿದ ತ್ಯಾಜ್ಯವನ್ನು ವರ್ಗೀಕರಿಸಿ ಗ್ರಾಮ ಪಂಚಾಯಿತಿಯ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಹಸ್ತಾಂತರಿಸಿದರು. ಅಗತ್ಯ ಕೈಗವಸುಗಳನ್ನು ಸ್ಥಳೀಯ ಸುಮುಖ ಸರ್ಜಿಕಲ್ಸ್ ಸಂಸ್ಥೆಯ ಬಿ. ಎಸ್. ಸುರೇಶ ಶೆಟ್ಟಿ ಒದಗಿಸಿದ್ದರು. ರಾಣಿಬಲೆ ಒಕ್ಕೂಟ ಉಪಾಹಾರದ ವ್ಯವಸ್ಥೆ ಮಾಡಿತ್ತು. ರಾಣಿಬಲೆ ಒಕ್ಕೂಟದ ಅಧ್ಯಕ್ಷ ವೆಂಕಟರಮಣ ಖಾರ್ವಿ, ಎಫ್‌ಎಸ್‌ಎಲ್ ಇಂಡಿಯ ಕ್ಷೇತ್ರ ಯೋಜನಾಧಿಕಾರಿ ಮಂಜೇಶ್ ಬಿ. ಎಂ, ಸಂಯೋಜಕ ಮಂಜುನಾಥ ಬಿ, ಕರಾವಳಿ ಕಾವಲು ಪಡೆಯ ಗಣೇಶ ಬಳೆಗಾರ್, ಗ್ರಾಮ ಪಂಚಾಯಿತಿ ಸದಸ್ಯ ಹರಿಶ್ಚಂದ್ರ ಖಾರ್ವಿ ನೇತೃತ್ವ ವಹಿಸಿದ್ದರು.

 

Leave a Reply