ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಉಳ್ತೂರು ಜಯಶೀಲ ಪೂಜಾರಿ ಎನ್ನುವ ಯುವಕ ಕಳೆದ ಮೂರು ವಾರದ ಹಿಂದೆ ಅಪಘಾತಕ್ಕೆ ಸಿಲುಕಿ ಗಂಭೀರ ಗಾಯಗೊಂಡು ವಿಶ್ರಾಂತಿಯಲ್ಲಿದ್ದರೂ ಮನೆಯಿಂದ ಅಂಬುಲೆನ್ಸ್‌ನಲ್ಲಿ ಮತಗಟ್ಟೆಗೆ ತೆರಳಿ ಮತದಾನ ಮಾಡಿ, ಇತರರಿಗೂ ಮಾದರಿಯಾಗಿದ್ದಾರೆ. ಕಾಲಿಗೆ ಬಿದ್ದ ಏಟಿನಿಂದ ಮಗ್ಗಲು ಕೂಡಾ ಬದಲಾಯಿಸಲಾಗದ ಸ್ಥಿತಿಯಲ್ಲಿದ್ದರೂ, ಇತ್ತೀಚೆಗೆ ಆಸ್ಪತ್ರೆಯಿಂದ ಮನೆಗೆ ಮರಳುವಾಗ ಮೂರು ತಿಂಗಳು ಹಾಸಿಗೆ ಬಿಟ್ಟೇಳಬಾರದು ಎನ್ನೋದು ವೈದ್ಯರು ಖಡಕ್ ಎಚ್ಚರಿಕೆ ಇದ್ದರೂ ಆದರೆ ಮೋದಿಗೆ ಓಟ್ ಹಾಕಬೇಕು ಎನ್ನುವ ಒಂದೇ ಒಂದು ಉದ್ದೇಶದಿಂದ ಮನೆಯಿಂದ ಅಂಬುಲೆನ್ಸ್‌ನಲ್ಲಿ ಮತಗಟ್ಟೆಗೆ ಬಂದು ಅಲ್ಲಿಂದ ಸ್ಟೆಚ್ಚರ್ ಮೂಲಕ ಮತಕೇಂದ್ರಕ್ಕೆ ತೆರಳಿ, ಮನೆಯವರ ಸಹಕಾರದಲ್ಲಿ ಮತದಾನ ಮಾಡಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಹೊಂಬಾಡಿ ಮಂಡಾಡಿ ಗ್ರಾಮದ ಹುಣ್ಸೆಮಕ್ಕಿ ಮತದಾನ ಕೇಂದ್ರ ಸಂಖ್ಯೆ ೯೮ರಲ್ಲಿ ಮದುಮಗಳು ಶಾಂತಾ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿ ಮತದಾನದ ಮಹತ್ವವನ್ನು ಎತ್ತಿಹಿಡಿದಿದ್ದಾರೆ. ಹುಣ್ಸೆಮಕ್ಕಿ ಮತಗಟ್ಟೆಯಲ್ಲಿ ಸಾಲಿನಲ್ಲಿ ನಿಂತು ಮತದಾನ ಮಾಡಿದ ಶಾಂತಾ ಅವರ ಮದುವೆ ಸಾಯಿಬ್ರಕಟ್ಟೆಯಲ್ಲಿ ವರ ಸಂದೇಶ್ ಜೊತೆ ಅಭಿಜಿನ್ ಲಗ್ನದಲ್ಲಿ ನಡೆಯುವುದಿತ್ತು. ಮದುವೆಗೆ ಸಂಪೂರ್ಣ ಸಿದ್ದಗೊಂಡು ಮತಕೇಂದ್ರಕ್ಕೆ ಬಂದು ಸರತಿಯಲ್ಲಿ ನಿಂತು ತನ್ನ ಸರಿದಿಗಾಗಿ ಕಾದು ಮತದಾನ ಮಾಡಿ ಸೀದಾ ಸಾಯಿಬ್ರಕಟ್ಟೆ ಮದುವೆ ಮಂಟಪಕ್ಕೆ ತೆರಳಿದರು.ತೆರಳುವ ಮುನ್ನಾ ಮತದಾನ ನಮ್ಮೆಲ್ಲರ ಹಕ್ಕು ಹಾಗೂ ಕರ್ತವ್ಯಆಗಿದ್ದು, ಎಲ್ಲರೂ ಮತದಾನ ಮಾಡುವಂತೆ ಸಲಹೆ ಕೂಡಾ ಮಾಡಿದರು. ಕುಂದಾಪ್ರ ಡಾಟ್ ಕಾಂ. ಮದುವೆ ನನ್ನ ಜೀವನದ ವೈಯುಕ್ತಿಕ ವಿಷಯ.ಮತದಾನದೇಶದ ವಿಷಯ. ವೈವಾಹಿಕ ಬದುಕು ಎಷ್ಟು ಮುಖ್ಯವೋ ಮತದಾನಅದಕ್ಕಿಂತ ಮಿಗಿಲು.. ನಮ್ಮ ಒಂದು ಓಟು ಏನಾಗುತ್ತದೆ ಎನ್ನೋ ತಾತ್ಸಾರಕ್ಕಿಂತ ನನ್ನ ಓಟು ಬಲಷ್ಠ ಭಾರತ ಕಟ್ಟುವ ಕನಸಿಗೆ ಸಕಾರವಾಗಿದೆ ಎಂದಿದ್ದಾರೆ ಮದುಮಗಳಾದ ಶಾಂತಾ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಯಡ್ತರೆ ಶ್ರೀ ಪಾಣ್ತಿಗರಡಿ ಹಾಗುಳಿ ಮತ್ತು ಪರಿವಾರ ದೈವಸ್ಥಾನದಲ್ಲಿ ಬುಧವಾರ ಶ್ರೀ ನಾಗ ದೇವರ ಪ್ರತಿಷ್ಠಾ ಕಾರ್ಯಕ್ರಮ ಜರುಗಿತು. ಶ್ರೀ ಪಾಣ್ತಿಗರಡಿ ಹಾಗುಳಿ ಮತ್ತು ಪರಿವಾರ ದೈವಗಳ ಪುನರ್‌ಪ್ರತಿಷ್ಠಾ ಬ್ರಹ್ಮಕಶಾಭಿಷೇಕ ಮಹೋತ್ಸವ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ವೇ. ಮೂ. ಜ್ಯೋತಿಷಿ ಭಟ್ಕಳ ರಮೇಶ ಭಟ್ಟರ ನೇತೃತ್ವದಲ್ಲಿ ಬೆಳಿಗ್ಗೆ ಶ್ರೀ ನಾಗ ದೇವರ ಬಿಂಬ ಪ್ರತಿಷ್ಠೆ, ಜೀವ ಕುಂಬಾಭಿಷೇಕ, ಪ್ರಾಣ ಪ್ರತಿಷ್ಠೆ, ಆಶ್ಲೇಷ ಬಲಿ ಸೇರಿದಂತೆ ವಿವಿಧ ಪೂಜೆ ಹಾಗೂ ಹೋಮಗಳು ನಡೆಯಲಿದೆ. ಕೊನೆಯಲ್ಲಿ ನಾಗದರ್ಶನ ಸೇವೆ ನಡೆಯಿತು. ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಮೋಹನ ಪೂಜಾರಿ ಉಪ್ಪುಂದ, ಸೇವಾರ್ಥಿ ಮುತ್ತಯ್ಯ ಪೂಜಾರಿ, ಸಮಿತಿಯ ಕಾರ್ಯದರ್ಶಿ, ಆಡಳಿತ ಮೊಕ್ತೇಸರರು ಹಾಗೂ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು. ಬಳಿಕ ದೈವಸ್ಥಾನದಲ್ಲಿ ಅನ್ನಸಂತರ್ಪಣೆ ನಡೆಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಅಪಘಾತದಲ್ಲಿ ತೀವೃವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತ ಪಟ್ಟ ಕುಂದಾಪುರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಬಿ.ಚಂದ್ರಶೇಖರ (42) ಅವರ ಪಾರ್ಥಿವ ಶರೀರಕ್ಕೆ ಮಂಗಳವಾರ ಬೆಳಿಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಅಂತಿಮ ನಮನಗಳನ್ನು ಸಲ್ಲಿಸಲಾಯಿತು. ಭಾನುವಾರ ರಾತ್ರಿ ಬ್ರಹ್ಮಾವರದಿಂದ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಮಾಬುಕೊಳ ಸೇತುವೆ ಬಳಿ ಸಂಭವಿಸಿದ ಅಪಘಾತದಿಂದ ಚಂದ್ರಶೇಖರ್ ಮೃತರಾಗಿದ್ದರು. ಉಡುಪಿಯ ಜಿಲ್ಲಾ ಸಶಸ್ತ್ರ ಪಡೆಯ ಕೇಂದ್ರ ಸ್ಥಾನದಲ್ಲಿ ಇಲಾಖಾ ಅಂತಿಮ ಗೌರವ ವಂದನೆಯ ಬಳಿಕ ಪಾರ್ಥಿವ ಶರೀರವನ್ನು ಕುಂದಾಪುರಕ್ಕೆ ತರಲಾಗಿತ್ತು. ಈ ವೇಳೆ ಪೊಲೀಸ್, ಗ್ರಹ ರಕ್ಷಕ ದಳದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಪಾರ್ಥಿವ ಶರೀರದ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು. ಕರ್ತವ್ಯ ನಿಮಿತ್ತ ಬ್ರಹ್ಮಾವರ ಕಡೆಗೆ ತಮ್ಮ ಬೈಕ್‌ನಲ್ಲಿ ತೆರಳಿ ಹಿಂತಿರುಗುತ್ತಿದ್ದ ವೇಳೆ ಮಾಬುಕೊಳದ ಸೇತುವೆ ಬಳಿ ಅವರ ಬೈಕ್‌ಗೆ ವಾಹನವೊಂದು ಡಿಕ್ಕಿ ಹೊಡೆದಿತ್ತು. ಅಪಘಾತದಿಂದಾಗಿ ಕುತ್ತಿಗೆಗೆ ಗಂಭೀರವಾಗಿ ಗಾಯಗೊಂಡಿದ್ದ ಅವರಿಗೆ ತಕ್ಷಣ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ಬಳಿಕವೂ ಹಿಂದಿನ ಸರಕಾರದಂತೆ ಜನರಿಗೆ ನೀಡಿರುವ ಭರವಸೆಯನ್ನು ಪ್ರಾಮಾಣಿಕವಾಗಿ ಈಡೇರಿಸಲಾಗುತ್ತಿದೆ. ಆದರೆ ಬಿಜೆಪಿ ಮಾತ್ರ ಭಾವನಾತ್ಮಕ ವಿಚಾರವನ್ನು ಮುಂದಿಟ್ಟುಕೊಂಡು ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಿತ್ತೂರು ಕಂಚಿನಕೊಡ್ಲುವಿನಲ್ಲಿ ಸೋಮವಾರ ಜರುಗಿದ ಕಾಂಗ್ರೆಸ್ – ಜೆಡಿಎಸ್ ಪಕ್ಷ ಚುನಾವಣಾ ಪ್ರಚಾರದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ಪಕ್ಷ ತತ್ವ ಸಿದ್ಧಾಂತಗಳಿಗೆ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದು, ಅಭಿವೃದ್ಧಿ ಹಾದಿಯಲ್ಲಿಯೇ ಸಾಗಿದೆ. ಕಳೆದ ಅರವತ್ತು ವರ್ಷಗಳಲ್ಲಿ ವಿವಿಧ ರಂಗದಲ್ಲಿ ದೇಶ ಪ್ರಗತಿಯನ್ನು ಸಾಧಿಸಲು ಕಾಂಗ್ರೆಸ್ ಪಕ್ಷದ ಕೊಡುಗೆ ದೊಡ್ಡದಿದೆ. ಬಿಜೆಪಿ ಜನರನ್ನು ಒಂದು ಭಾರಿ ಮರಳು ಮಾಡಬಹುದು ಆದರೆ ಪ್ರತಿ ಭಾರಿಯೂ ಮರಳು ಮಾಡಲು ಸಾಧ್ಯವಿಲ್ಲ. ಈ ಭಾರಿ ಜನರು ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರನ್ನು ಬಹುಮತದಿಂದ ಗೆಲ್ಲಿಸಲಿದ್ದಾರೆ…
ವಿಜಯ ಸಂಕಲ್ಪ ಪಾದಯಾತ್ರೆ ಜೊತೆಯಾಗಿ ಹೆಜ್ಜೆ ಹಾಕಿದ ನಾಯಕರು ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶಾಸ್ತ್ರಿ ವೃತ್ತದಿಂದ ಮುಖ್ಯರಸ್ತೆಯಲ್ಲಿ ಸೋಮವಾರ ಸಂಜೆ ನಡೆದ ಬಿಜೆಪಿ ವಿಜಯ ಸಂಕಲ್ಪ ಪಾದಯಾತ್ರೆಯಲ್ಲಿ ಉಡುಪಿ ಚಿಕ್ಕಮಂಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ಮತಯಾಚನೆಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಜೊತೆಯಾಗಿ ಹೆಜ್ಜೆಹಾಕಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದರು. ಪಾದಯಾತ್ರೆ ಉದ್ಘಾಟಿಸಿದ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸುದ್ದಿಗಾರರ ಜತೆ ಮಾತನಾಡಿ ಶೋಭಾ ಗೋಬ್ಯಾಕ್ ಎನ್ನೋದು ಟಿಕೆಟ್ ಆಕಾಂಕ್ಷಿಗಳ ಹುನ್ನಾರ. ಕಳೆದ ವಿಧಾನ ಸಭೆ ಚುನಾವಣೆ ಸಮಯದಲ್ಲಿ ವಿರೋಧಿಸಿದ ಹತ್ತಾರು ಜನ ಶೋಭಾ ಗೋಬ್ಯಾಕ್ ಎನ್ನುವ ಹುಯಿಲೆಬ್ಬಿಸಿದ್ದಾರೆ. ಇದರಿಂದ ಶೋಭಾ ಕರಂದ್ಲಾಜೆ ಗೆಲವು ತಡೆಯಲು ಆಗೋದಿಲ್ಲ. ಜಾತಿ ಸಂಘಟನೆ ಹೆಸರಲ್ಲಿ ಮತಕೇಳುವುದಕ್ಕೆ ಇದೇನು ಸಂಘಟನೆ ಚುನಾವಣೆಯಲ್ಲ. ರಾಷ್ಟ್ರ ನಿರ್ಮಾಣದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಚುನಾವಣೆ ಜಾತಿ ಆಧಾರಿತ ಮತ ಯಾಚನೆ…
ಕುಂದಾಪ್ರ ಡಾಟ್ ಕಾಂ’ ಸುದ್ದಿ ಬೈಂದೂರು: ಇಲ್ಲಿನ ಪ್ರಥಮ ಶಾಪಿಂಗ್ ಮಾಲ್ ’ರುಪೀ ಮಾಲ್’ ಎ.೬ರ ಯುಗಾದಿಯಂದು ಬೈಂದೂರು ಮುಖ್ಯರಸ್ತೆಯ ಸಿಟಿ ಪಾಯಿಂಟ್‌ನಲ್ಲಿ ಶುಭಾರಂಭಗೊಂಡಿದ್ದು, ಸಂಸ್ಥೆಯ ಅಧಿಕೃತ ರೂಪದರ್ಶಿಯಾಗಿ ಕಾಣಿಸಿಕೊಳ್ಳಲು ಬೈಂದೂರು ಸುತ್ತಲಿನ ಯುವತಿಯರನ್ನು ಆಹ್ವಾನಿಸಿದ್ದು, ಬ್ಯೂಟಿ ಬೈಂದೂರು ಸ್ವರ್ಧೆಯನ್ನು ಆಯೋಜಿಸಿದೆ. 18 ರಿಂದ 25 ವರ್ಷದ ಸುಂದರ ಯುವತಿಯರು ’ಬ್ಯೂಟಿ ಬೈಂದೂರು’ ಸ್ವರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು, ಸ್ವರ್ಧೆಯ ವಿಜೇತರ ಪೋಟೋಗಳು ಸಂಸ್ಥೆಯ ಮುದ್ರಣ ಮತ್ತು ಹೊರಾಂಗಣ ಜಾಹೀರಾತು ಫಲಕಗಳಲ್ಲಿ ಒಂದು ವರ್ಷದ ಅವಧಿಗೆ ಕಾಣಿಸಿಕೊಳ್ಳಲಿದೆ. ಅಲ್ಲದೇ ಸ್ವರ್ಧೆಯಲ್ಲಿ ವಿಜೇತರಾದವರಿಗೆ ರೂ. 10,000ದ ಗಿಫ್ಟ್ ವೋಚರ್ ಹಾಗೂ ರನ್ನರ್ ಅಪ್ ಆಗುವವರಿಗೆ ರೂ.5000ದ ಗಿಫ್ಟ್ ವೋಚರ್ ಬಹುಮಾನವಾಗಿ ನೀಡಲಾಗುತ್ತದೆ. ಆಸಕ್ತ ಯುವತಿಯರು 9611917204 ಸಂಖ್ಯೆಗೆ ವಾಟ್ಸಪ್ ಮೂಲಕ ಒಂದು ಕ್ಲೂಸಪ್ ಪೋಟೋ ಹಾಗೂ ಒಂದು ಪುಲ್ ಸೈಜ್ ಪೋಟೋವನ್ನು ಎಪ್ರಿಲ್ 30ರ ಒಳಗೆ ಕಳುಹಿಸಬಹುದಾಗಿದೆ. ಮೊದಲ ಸುತ್ತಿನಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಎರಡನೇ ಸುತ್ತಿನಲ್ಲಿ ಭಾಗವಹಿಸಲು ಕರೆಮಾಡಿ ತಿಳಿಸಲಾಗುತ್ತದೆ. ಎರಡನೇ ಸುತ್ತಿನಲ್ಲಿ ಆಯ್ಕೆಯಾಗುವ 10…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬ್ರಹ್ಮಾವರದಿಂದ ಬೈಕಿನಲ್ಲಿ ಬರುತ್ತಿದ್ದ ವೇಳೆ ಹಿಂದಿನಿಂದ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದ ಕುಂದಾಪುರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಚಂದ್ರಶೇಖರ್ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ. ಹೆಡ್ ಕಾನ್ಸ್ಟೇಬಲ್ ಚಂದ್ರಶೇಖರ್ (42) ಭಾನುವಾರ ಸಂಜೆ ಕರ್ತವ್ಯ ನಿಮಿತ್ತ ಬ್ರಹ್ಮಾವರದಿಂದ ಬರುತ್ತಿದ್ದ ವೇಳೆ ಮಾಬುಕಳ ಬ್ರಿಡ್ಜ್ ಬಳಿ ಅಪಘಾತ ನಡೆದಿದ್ದು ಟೆಂಪೋ ಚಾಲಕ ವಾಹನ ನಿಲ್ಲಿಸದೇ ಪರಾರಿಯಾಗಿದ್ದ. ಕುಂದಾಪ್ರ ಡಾಟ್ ಕಾಂ ಸುದ್ದಿ. ಅಪಘಾತದಿಂದ ಚಂದ್ರಶೇಖರ್ ರಸ್ತೆಗೆ ಬಿದ್ದು ಕುತ್ತಿಗೆ, ತಲೆಗೆ ಗಂಭೀರ ಗಾಯಗಳಾಗಿದ್ದು ಪ್ರಜ್ಞಾ ಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಯಾರೂ ಕೂಡ ಅವರನ್ನು ಆಸ್ಪತ್ರೆಗೆ ಕೊಂಡೊಯ್ದಿರಲಿಲ್ಲ. ಅದೇ ವೇಳೆ ಉಡುಪಿಯಿಂದ ಚುನಾವಣಾ ವಿಚಾರದಲ್ಲಿ ಸಭೆ ಮುಗಿಸಿ ಆ ಮಾರ್ಗವಾಗಿ ಬರುತ್ತಿದ್ದ ಕುಂದಾಪುರ ಪಿಎಸ್ಐ ಹರೀಶ್ ಆರ್, ಹಾಗೂ ಚಾಲಕ ಲೋಕೇಶ್ ಮತ್ತು ಸಿಬ್ಬಂದಿಗಳು ಕೂಡಲೇ ಚಂದ್ರಶೇಖರ್ ಅವರನ್ನು ಕೂಡಲೇ ಮಣಿಪಾಲ ಆಸ್ಪತ್ರೆಗೆ ಸಾಗಿಸುವ ಕಾರ್ಯ ಮಾಡಿದ್ದರು. ಕಳೆದ ಇಪ್ಪತ್ತು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರಾವಳಿಯಲ್ಲಿ ಹಿಂದೂಳಿದ ವರ್ಗದ ಮತದಾರರನ್ನು ಓಲೈಸುತ್ತಿರುವ ಬಿಜೆಪಿ ಪಕ್ಷ ಹಿಂದೂಳಿದ ವರ್ಗದವರ‍್ಯಾರನ್ನೂ ಅಭ್ಯರ್ಥಿಯನ್ನಾಗಿಸಿಲ್ಲ. ಓಟಿಗಾಗಿ ಮಾತ್ರ ಹಿಂದೂಳಿದ ವರ್ಗದವರನ್ನು ದಾಳವಾಗಿಸಿಕೊಂಡು ಇಡೀ ಸಮುದಾಯಕ್ಕೆ ಅನ್ಯಾಯ ಎಸಗುತ್ತಿದೆ. ಹಿಂದುತ್ವ, ಸೇನೆ ಮುಂತಾದ ಭಾವನಾತ್ಮಕ ವಿಚಾರವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿರುವ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಸ್ವಂತ ವರ್ಚಸ್ಸಿಲ್ಲದೇ ಹೆಣಗಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಆರೋಪಿಸಿದರು. ಅವರು ಸೋಮವಾರ ಕುಂದಾಪುರದಲ್ಲಿ ಜರುಗಿದ ಸುದ್ದಿಗೋಷ್ಠಿಯನ್ನು ಉದ್ದೇಶಸಿ ಮಾತನಾಡಿದರು. ಕಾಂಗ್ರೆಸ್ ಪಕ್ಷ ಕರಾವಳಿಯ ನಾಲ್ಕು ಸಂಸದರ ಪೈಕಿ ಮೂರು ಸೀಟನ್ನು ಹಿಂದೂಳಿದ ವರ್ಗದವರಿಗೆ ನೀಡಿದೆ. ನರೇಂದ್ರ ಮೋದಿ ವಾರಣಾಸಿಯಲ್ಲಿ ಸ್ವರ್ಧೆ ಮಾಡುತ್ತಿದ್ದಾರೆ. ಆದರೆ ಉಡುಪಿ ಚಿಕ್ಕಮಂಗಳೂರು ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಇಲ್ಲಿಯೂ ಮೋದಿಗೆ ಓಟು ನೀಡಿ ಎನ್ನುತ್ತಿದ್ದಾರೆ. ಮೋದಿಗೆ ಓಟು ನೀಡಿ ಎನ್ನುವ ಅಭ್ಯರ್ಥಿಗಳಿಗೆ ಸ್ವಂತ ವರ್ಚಸ್ಸಿಲ್ಲವೇ. ಐದು ವರ್ಷ ಉಡುಪಿ ಚಿಕ್ಕಮಂಗಳೂರಿನಲ್ಲಿ ಅಭ್ಯರ್ಥಿಯಾಗಿದ್ದವರು ತಮ್ಮ ಹಾಗೂ ಸರಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುವುದನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: 2018-19ನೇ ಸಾಲಿನ ದ್ವೀತಿಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. ಶೇ. 92.20 ಅಂಕಗಳನ್ನು ಗಳಿಸಿರುವ ಉಡುಪಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಶೇ.90.91 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ದ್ವಿತೀಯ ಸ್ಥಾನದಲ್ಲಿದೆ. ಕೊಡಗು ಶೇ. 83.31ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಶೇ.51.42 ಫಲಿತಾಂಶ ಪಡೆದಿರುವ ಚಿತ್ರದುರ್ಗ ಕೊನೆಯ ಸ್ಥಾನದಲ್ಲಿದೆ. ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ,ಶಿಖಾ ಮತ್ತು ಎಸ್,ಆರ್ ಉಮಾಶಂಕರ್ ಸುದ್ದಿಗೋಷ್ಠಿ ನಡೆಸಿ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಿದ್ದಾರೆ. ರಾಜ್ಯದ 98 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಹಾಗೂ 80 ಕಾಲೇಜುಗಳಲ್ಲಿ ಶೇ.100 ರಷ್ಟು ಫಲಿತಾಂಶ ಬಂದಿದೆ. 4,17,573 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೇ ಈ ಬಾರಿ ಫಲಿತಾಂಶದಲ್ಲಿ ಏರಿಕೆಯಾಗಿದೆ ಎಂದು ಕಾರ್ಯದರ್ಶಿ ಎಸ್,ಆರ್ ಉಮಾಶಂಕರ್ ತಿಳಿಸಿದ್ದಾರೆ, ಮಧ್ಯಾಹ್ನ 12 ಗಂಟೆ ನಂತರ http://kseeb.kar.nic.in ವೆಬ್ ಸೈಟ್ ನಲ್ಲಿ ಪಡೆಯಬಹುದಾಗಿದೆ. ಈ ವರ್ಷವೂ ನಗರದ ಹುಡುಗರಿಗಿಂತ ಹಳ್ಳಿಯ ಹುಡುಗರೇ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದಾರೆ. ಈ ವರ್ಷ…
