ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಹೊಂಬಾಡಿ ಮಂಡಾಡಿ ಗ್ರಾಮದ ಹುಣ್ಸೆಮಕ್ಕಿ ಮತದಾನ ಕೇಂದ್ರ ಸಂಖ್ಯೆ ೯೮ರಲ್ಲಿ ಮದುಮಗಳು ಶಾಂತಾ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿ ಮತದಾನದ ಮಹತ್ವವನ್ನು ಎತ್ತಿಹಿಡಿದಿದ್ದಾರೆ.
ಹುಣ್ಸೆಮಕ್ಕಿ ಮತಗಟ್ಟೆಯಲ್ಲಿ ಸಾಲಿನಲ್ಲಿ ನಿಂತು ಮತದಾನ ಮಾಡಿದ ಶಾಂತಾ ಅವರ ಮದುವೆ ಸಾಯಿಬ್ರಕಟ್ಟೆಯಲ್ಲಿ ವರ ಸಂದೇಶ್ ಜೊತೆ ಅಭಿಜಿನ್ ಲಗ್ನದಲ್ಲಿ ನಡೆಯುವುದಿತ್ತು. ಮದುವೆಗೆ ಸಂಪೂರ್ಣ ಸಿದ್ದಗೊಂಡು ಮತಕೇಂದ್ರಕ್ಕೆ ಬಂದು ಸರತಿಯಲ್ಲಿ ನಿಂತು ತನ್ನ ಸರಿದಿಗಾಗಿ ಕಾದು ಮತದಾನ ಮಾಡಿ ಸೀದಾ ಸಾಯಿಬ್ರಕಟ್ಟೆ ಮದುವೆ ಮಂಟಪಕ್ಕೆ ತೆರಳಿದರು.ತೆರಳುವ ಮುನ್ನಾ ಮತದಾನ ನಮ್ಮೆಲ್ಲರ ಹಕ್ಕು ಹಾಗೂ ಕರ್ತವ್ಯಆಗಿದ್ದು, ಎಲ್ಲರೂ ಮತದಾನ ಮಾಡುವಂತೆ ಸಲಹೆ ಕೂಡಾ ಮಾಡಿದರು. ಕುಂದಾಪ್ರ ಡಾಟ್ ಕಾಂ.
ಮದುವೆ ನನ್ನ ಜೀವನದ ವೈಯುಕ್ತಿಕ ವಿಷಯ.ಮತದಾನದೇಶದ ವಿಷಯ. ವೈವಾಹಿಕ ಬದುಕು ಎಷ್ಟು ಮುಖ್ಯವೋ ಮತದಾನಅದಕ್ಕಿಂತ ಮಿಗಿಲು.. ನಮ್ಮ ಒಂದು ಓಟು ಏನಾಗುತ್ತದೆ ಎನ್ನೋ ತಾತ್ಸಾರಕ್ಕಿಂತ ನನ್ನ ಓಟು ಬಲಷ್ಠ ಭಾರತ ಕಟ್ಟುವ ಕನಸಿಗೆ ಸಕಾರವಾಗಿದೆ ಎಂದಿದ್ದಾರೆ ಮದುಮಗಳಾದ ಶಾಂತಾ.